-
ಕಂಪ್ಯೂಟರ್ ನಲ್ಲಿರುವ ಒಂದು ವಿಶೇಷತೆ ಏನೆಂದರೆ
ಅವು ಆದೇಶಗಳನ್ನು ಪುನರಾವರ್ತಿಸುವ ಸಾಮರ್ಥ್ಯ.
-
ಮನುಷ್ಯರಾದ ನಮಗೆ ಒಂದೇ ವಿಷಯವನ್ನು ಪದೇ
ಪದೇ ಬಿಡದೇ ಮಾಡಬೇಕೆಂದರೆ ಬೋರ್ ಆಗುತ್ತೆ.
-
ಆದರೆ ಕಂಪ್ಯೂಟರ್ ಒಂದೇ ವಿಷಯವನ್ನು ಕೋಟಿಗಟ್ಟಲೆ
ಅಥವಾ ಶತಕೋಟಿಗಟ್ಟಲೆ ಪುನಃ ಪುನಃ ಮಾಡುತ್ತದೆ.
-
ಯಾವತ್ತೂ ಬೋರ್ ಆಗಲ್ಲ
ಮತ್ತು ಅಚ್ಚುಕಟ್ಟಾಗಿ ಮಾಡುತ್ತದೆ.
-
ಉದಾಹರಣೆಗೆ, ನಾನು ಫೇಸ್
ಬುಕ್ ನಲ್ಲಿರುವ ಪ್ರತಿಯೊಬ್ಬರಿಗೂ
-
ಹುಟ್ಟು ಹಬ್ಬದ ಶುಭಾಷಯಗಳನ್ನು ಇಮೇಲ್
ಮೂಲಕ ಕಳುಹಿಸಲು ಬಯಸುವುದಾದರೆ
-
ಪ್ರತಿಯೊಬ್ಬರೀಗೂ ಆ ಇಮೇಲೇ ಗಳನ್ನು
ಬರೆಯಲು ನನಗೆ ದಶಕಗಳು ಹಿಡಿಯಬಹುದು.
-
ಆದರೆ, ಕೆಲವೇ ಸಾಲುಗಳ ಕೋಡ್
ಅನ್ನು ಬಳಸಿ ನನ್ನ ಕಂಪ್ಯೂಟರ್
-
ಫೇಸ್ ಬುಕ್ ನಲ್ಲಿರುವ ಪ್ರತಿಯೊಬ್ಬರಿಗೂ ಹುಟ್ಟು
ಹಬ್ಬದ ಶುಭಾಷಯಗಳು ಇಮೇಲೆ ಕಳುಹಿಸುವಂತೆ ಮಾಡಬಹುದು.
-
ಇದನ್ನೇ ಲೂಪ್ಸ್ ಅಂತ ಕರೆಯುತ್ತೇವೆ.
-
ಅದಕ್ಕೆ ಅವು ತುಂಬಾ ಅಮೂಲ್ಯ ಮತ್ತು ಕಂಪ್ಯೂಟರ್
ಅದನ್ನು ತುಂಬಾ ಚೆನ್ನಾಗಿ ನಿರ್ವಹಿಸುತ್ತದೆ.
-
ಈ ಉದಾಹರಣೆಯಲ್ಲಿ ನಿಮ್ಮ ಗುರಿ,
ಪಕ್ಷಿಯನ್ನು ಹಂದಿಯಾಗಿ ಮಾರ್ಪಿಡಿಸುವುದು.
-
ಇದನ್ನು ಸುಲಭವಾಗಿ ಮಾಡಲು ನಾವೀಗ
ರಿಪೀಟ್ ಬ್ಲಾಕ್ ಅನ್ನು ಉಪಯೋಗಿಸುತ್ತೇವೆ.
-
ನೀವು ಕಂಪ್ಯೂಟರ್ ಗೆ ಮೂವ್
ಫಾರ್ವರ್ಡ್ ಆದೇಶವನ್ನು ಐದು ಸಲ ಕೊಟ್ಟು
-
ಪ್ರತಿ ಸಲ ಒಂದೊಂದೇ ಹೆಜ್ಜು ಪಕ್ಷಿಯಿಂದ
ಹಂದಿಯಾಗಿ ಮಾರ್ಪಡಿಸುವಂತೆ ಮಾಡಬಹುದು.
-
ಅಥವಾ ನಿಮ್ಮ ಕಂಪ್ಯೂಟರ್ ಗೆ ಒಂದು
ಸಲ ಮಾತ್ರ ಮೂವ್ ಫಾರ್ವರ್ಡ್ ಹೇಳಿ ನಂತರ
-
ಅದನ್ನು ಐದು ಸಲ ಪುನರಾವರ್ತಿಸುವಂತೆ
ಹೇಳಬಹುದು. ಆಗ ಅದು ಅದನ್ನೇ ಪುನರಾವರ್ತಿಸುತ್ತದೆ.
-
ಇದನ್ನು ಮಾಡಲು ನೀವು ಮೂವ್ ಫಾರ್ವರ್ಡ್ ಆದೇಶವನ್ನು
ಎಳೆದು ರಿಪೀಟ್ ಬ್ಲಾಕ್ ಒಳಗೆ ಹಾಕಬಹುದು.
-
ಮತ್ತು ಅದರ ಮೇಲೆ ಕ್ಲಿಕ್ಕಿಸಿ ಆ ಬ್ಲಾಕ್ ಎಷ್ಟು ಸಲ
ಪುನರಾವರ್ತಿಸಬೇಕು ಅನ್ನೋದನ್ನು ಬರೆಯಬಹುದು.
-
ಅದ ಎಷ್ಟು ಹೆಜ್ಜೆ ಮುಂದಕ್ಕೆ
ಹೋಗಬೇಕು ಅಂತ ತಿಳಿಸುತ್ತೀರಿ.
-
ಮತ್ತೊಂದು ವಿಷಯ ಏನೆಂದರೆ ರಿಪೀಟ್ ಬ್ಲಾಕ್ ಒಳಗೆ
ನೀವು ಎಷ್ಟು ಆದೇಶಗಳನ್ನು ಬೇಕಾದರೂ ಹಾಕಬಹುದು.
-
ಈ ಉದಾಹರಣೆಯಲ್ಲಿ, ನೀವು ಅದಕ್ಕೆ
ಮುಂದಕ್ಕೆ ಹೋಗಿ, ಎಡಕ್ಕೆ ತಿರುಗಲು ಹೇಳುತ್ತೀರಿ
-
ಅದನ್ನು ಅದು ಐದು ಸಲ ಮಾಡುತ್ತದೆ.
-
ತುಂಬಾ ಚೆನ್ನಾಗಿ ಮಾಡಿದ್ದೀರಿ, ಮಜಾ ಮಾಡಿ!