ಕಂಪ್ಯೂಟರ್ ನಲ್ಲಿರುವ ಒಂದು ವಿಶೇಷತೆ ಏನೆಂದರೆ ಅವು ಆದೇಶಗಳನ್ನು ಪುನರಾವರ್ತಿಸುವ ಸಾಮರ್ಥ್ಯ. ಮನುಷ್ಯರಾದ ನಮಗೆ ಒಂದೇ ವಿಷಯವನ್ನು ಪದೇ ಪದೇ ಬಿಡದೇ ಮಾಡಬೇಕೆಂದರೆ ಬೋರ್ ಆಗುತ್ತೆ. ಆದರೆ ಕಂಪ್ಯೂಟರ್ ಒಂದೇ ವಿಷಯವನ್ನು ಕೋಟಿಗಟ್ಟಲೆ ಅಥವಾ ಶತಕೋಟಿಗಟ್ಟಲೆ ಪುನಃ ಪುನಃ ಮಾಡುತ್ತದೆ. ಯಾವತ್ತೂ ಬೋರ್ ಆಗಲ್ಲ ಮತ್ತು ಅಚ್ಚುಕಟ್ಟಾಗಿ ಮಾಡುತ್ತದೆ. ಉದಾಹರಣೆಗೆ, ನಾನು ಫೇಸ್ ಬುಕ್ ನಲ್ಲಿರುವ ಪ್ರತಿಯೊಬ್ಬರಿಗೂ ಹುಟ್ಟು ಹಬ್ಬದ ಶುಭಾಷಯಗಳನ್ನು ಇಮೇಲ್ ಮೂಲಕ ಕಳುಹಿಸಲು ಬಯಸುವುದಾದರೆ ಪ್ರತಿಯೊಬ್ಬರೀಗೂ ಆ ಇಮೇಲೇ ಗಳನ್ನು ಬರೆಯಲು ನನಗೆ ದಶಕಗಳು ಹಿಡಿಯಬಹುದು. ಆದರೆ, ಕೆಲವೇ ಸಾಲುಗಳ ಕೋಡ್ ಅನ್ನು ಬಳಸಿ ನನ್ನ ಕಂಪ್ಯೂಟರ್ ಫೇಸ್ ಬುಕ್ ನಲ್ಲಿರುವ ಪ್ರತಿಯೊಬ್ಬರಿಗೂ ಹುಟ್ಟು ಹಬ್ಬದ ಶುಭಾಷಯಗಳು ಇಮೇಲೆ ಕಳುಹಿಸುವಂತೆ ಮಾಡಬಹುದು. ಇದನ್ನೇ ಲೂಪ್ಸ್ ಅಂತ ಕರೆಯುತ್ತೇವೆ. ಅದಕ್ಕೆ ಅವು ತುಂಬಾ ಅಮೂಲ್ಯ ಮತ್ತು ಕಂಪ್ಯೂಟರ್ ಅದನ್ನು ತುಂಬಾ ಚೆನ್ನಾಗಿ ನಿರ್ವಹಿಸುತ್ತದೆ. ಈ ಉದಾಹರಣೆಯಲ್ಲಿ ನಿಮ್ಮ ಗುರಿ, ಪಕ್ಷಿಯನ್ನು ಹಂದಿಯಾಗಿ ಮಾರ್ಪಿಡಿಸುವುದು. ಇದನ್ನು ಸುಲಭವಾಗಿ ಮಾಡಲು ನಾವೀಗ ರಿಪೀಟ್ ಬ್ಲಾಕ್ ಅನ್ನು ಉಪಯೋಗಿಸುತ್ತೇವೆ. ನೀವು ಕಂಪ್ಯೂಟರ್ ಗೆ ಮೂವ್ ಫಾರ್ವರ್ಡ್ ಆದೇಶವನ್ನು ಐದು ಸಲ ಕೊಟ್ಟು ಪ್ರತಿ ಸಲ ಒಂದೊಂದೇ ಹೆಜ್ಜು ಪಕ್ಷಿಯಿಂದ ಹಂದಿಯಾಗಿ ಮಾರ್ಪಡಿಸುವಂತೆ ಮಾಡಬಹುದು. ಅಥವಾ ನಿಮ್ಮ ಕಂಪ್ಯೂಟರ್ ಗೆ ಒಂದು ಸಲ ಮಾತ್ರ ಮೂವ್ ಫಾರ್ವರ್ಡ್ ಹೇಳಿ ನಂತರ ಅದನ್ನು ಐದು ಸಲ ಪುನರಾವರ್ತಿಸುವಂತೆ ಹೇಳಬಹುದು. ಆಗ ಅದು ಅದನ್ನೇ ಪುನರಾವರ್ತಿಸುತ್ತದೆ. ಇದನ್ನು ಮಾಡಲು ನೀವು ಮೂವ್ ಫಾರ್ವರ್ಡ್ ಆದೇಶವನ್ನು ಎಳೆದು ರಿಪೀಟ್ ಬ್ಲಾಕ್ ಒಳಗೆ ಹಾಕಬಹುದು. ಮತ್ತು ಅದರ ಮೇಲೆ ಕ್ಲಿಕ್ಕಿಸಿ ಆ ಬ್ಲಾಕ್ ಎಷ್ಟು ಸಲ ಪುನರಾವರ್ತಿಸಬೇಕು ಅನ್ನೋದನ್ನು ಬರೆಯಬಹುದು. ಅದ ಎಷ್ಟು ಹೆಜ್ಜೆ ಮುಂದಕ್ಕೆ ಹೋಗಬೇಕು ಅಂತ ತಿಳಿಸುತ್ತೀರಿ. ಮತ್ತೊಂದು ವಿಷಯ ಏನೆಂದರೆ ರಿಪೀಟ್ ಬ್ಲಾಕ್ ಒಳಗೆ ನೀವು ಎಷ್ಟು ಆದೇಶಗಳನ್ನು ಬೇಕಾದರೂ ಹಾಕಬಹುದು. ಈ ಉದಾಹರಣೆಯಲ್ಲಿ, ನೀವು ಅದಕ್ಕೆ ಮುಂದಕ್ಕೆ ಹೋಗಿ, ಎಡಕ್ಕೆ ತಿರುಗಲು ಹೇಳುತ್ತೀರಿ ಅದನ್ನು ಅದು ಐದು ಸಲ ಮಾಡುತ್ತದೆ. ತುಂಬಾ ಚೆನ್ನಾಗಿ ಮಾಡಿದ್ದೀರಿ, ಮಜಾ ಮಾಡಿ!