< Return to Video

How Blockchain Works: Why Blockchain?

  • 0:14 - 0:15
    ನನ್ನ ಹೆಸರು ಟೆಗನ್ ಕ್ಲೈನ್.
  • 0:15 - 0:18
    ಎಡ್ಜ್‌ & ನೋಡ್‌ನ ಸಹಸಂಸ್ಥಾಪಕಿ.
    ದಿ ಗ್ರಾಫ್‌ನ ಹಿಂದಿರುವ ಆರಂಭಿಕ ತಂಡ.
  • 0:18 - 0:20
    ವೆಬ್‌ಗೆ ಗೂಗಲ್‌ ಏನು
    ಮಾಡುತ್ತದೆಯೋ ಅದನ್ನು
  • 0:20 - 0:23
    ಬ್ಲಾಕ್‌ಚೈನ್‌ಗೆ ದಿ ಗ್ರಾಫ್‌ ಮಾಡುತ್ತದೆ
    ಡೇಟಾ ಆಯೋಜನೆ
  • 0:23 - 0:26
    ನನ್ನ ಹೆಸರು ಸಿಂಥಿಯಾ ಹಾಸ್,
    ವರ್ಲ್ಡ್‌ ಆಫ್ ವಿಮೆನ್ ಫೌಂಡೇಶನ್ ನಿರ್ದೇಶಕಿ
  • 0:26 - 0:29
    ವರ್ಲ್ಡ್‌ ಆಫ್‌ ವಿಮೆನ್
    10,000 ಮಹಿಳೆಯರ ಸಂಗ್ರಹ
  • 0:29 - 0:33
    ಇವರೆಲ್ಲರೂ ವಿಭಿನ್ನ ಹಿನ್ನೆಲೆ,
    ವಿಭಿನ್ನ ಬಣ್ಣ, ಜನಾಂಗದವರು.
  • 0:33 - 0:37
    ವೆಬ್‌3 ಸ್ಪೇಸ್‌ನಲ್ಲಿ ಸಮಗ್ರತೆ, ವೈವಿಧ್ಯತೆಯ
    ಚಾಂಪಿಯನ್‌ಗಳ ಸಮುದಾಯವಾಗಿದ್ದೇವೆ.
  • 0:37 - 0:38
    ನನ್ನ ಹೆಸರು ಚಾರ್ಲಿ ಲೀ.
  • 0:38 - 0:40
    ನಾನು ಲೈಟ್‌ಕಾಯಿನ್‌ ಕ್ರಿಯೇಟರ್.
  • 0:40 - 0:43
    ಬಿಟ್‌ಕಾಯ್ನ್‌ಗೆ ಪರ್ಯಾಯ ಕರೆನ್ಸಿ ಇದು.
  • 0:43 - 0:45
    ಬಿಟ್‌ಕಾಯ್ನ್‌ ಕೋಡ್‌ಬೇಸ್‌
    ನೋಡುತ್ತಿದ್ದೆ
  • 0:45 - 0:48
    ನನ್ನದೇ ಕ್ರಿಪ್ಟೋಕರೆನ್ಸಿ ಆರಂಭಿಸು
    ಯೋಜನೆ ಮಾಡಿದೆ
  • 0:49 - 0:52
    ಇದು ಖುಷಿಯ ಪ್ರಾಜೆಕ್ಟ್
    ಜಾರಿಗೆ ಬಂತು.
  • 0:53 - 0:57
    ಕ್ರೆಡಿಟ್ ಕಾರ್ಡ್ ಬಳಸಿ ಏನನ್ನಾದರೂ ಖರೀದಿಸಿದರೆ
    ನಿಮ್ಮ ದಿನಸಿಯನ್ನು ಆರ್ಗ್ಯಾನಿಕ್ ಎನ್ನಲಾಗುತ್ತೆ
  • 0:57 - 1:00
    ಸೋಷಿಯಲ್ ಮೀಡಿಯಾದಲ್ಲಿ ವೆರಿಫೈ ಮಾಡಲಾಗುತ್ತದೆ
    ನೀವು ಮತ ಹಾಕಿದಾಗ
  • 1:01 - 1:03
    ಇವೆಲ್ಲವೂ ವಿಶ್ವಾಸದ ಮೇಲೆ ನಡೆಯುತ್ತದೆ.
  • 1:04 - 1:06
    ಹಣ ವರ್ಗಾವಣೆ ಬಗ್ಗೆ ನಿಮಗೆ
    ಹೇಗೆ ತಿಳಿಯುತ್ತದೆ
  • 1:06 - 1:10
    ಆ ಆಹಾರ ನಿಜವಾಗಿ ಸಾವಯವವೇ,
    ಆ ವ್ಯಕ್ತಿ ನಿಜವೇ
  • 1:10 - 1:12
    ನಿಮ್ಮ ಮತ ಲೆಕ್ ಮಾಡಲಾಗಿದೆಯೇ?
  • 1:12 - 1:17
    ಅಂತಿಮವಾಗಿ, ಬ್ಯಾಂಕ್‌, ಕಂಪನಿ, ಸರ್ಕಾರ ಹೊಂದಿದ
    ದಾಖಲೆಯ ಮೇಲೆ ನಿಮಗೆ ವಿಶ್ವಾಸವಿದೆ.
  • 1:18 - 1:23
    ಆದರೆ, ಈಚಿನ ದಿನಗಳಲ್ಲಿ ಸರ್ಕಾರ,
    ಕಂಪನಿಗಳು, ಕೇಂದ್ರಿತ ಶಕ್ತಿಯ
  • 1:23 - 1:28
    ಮೇಲೆ ವಿಶ್ವಾಸ ಇಡಬಹುದೇ ಎಂದು ಗೊಂದಲವಿದೆ.
    ತಪ್ಪು ಮಾಹಿತಿ ಹೆಚ್ಚುತ್ತಿರುವುದರಿಂದ
  • 1:29 - 1:33
    ಕೇಂದ್ರೀಯ ಸಂಸ್ಥೆಯನ್ನು ಅವಲಂಬಿಸದ ವಿಶ್ವಾಸದ
    ಸಿಸ್ಟಮ್ ಅನ್ನು ನಿರ್ಮಿಸಿದರೆ ಹೇಗೆ?
  • 1:33 - 1:36
    ಹಣ, ಆಸ್ತಿಯಂಥದ್ದರ ಟ್ರ್ಯಾಕ್ ಮಾಡುವುದನ್ನು
    ಕಂಪನಿ, ಸರ್ಕಾರದ ಉಸ್ತುವಾರಿ ಇಲ್ಲದೇ
  • 1:36 - 1:42
    ಯಾರು ಬೇಕಾದರೂ ಆಡಿಟ್
    ಮಾಡುವ ರೀತಿ ಮಾಡಿದರೆ?
  • 1:42 - 1:45
    ಅದು ಇಂದು ಸಾಧ್ಯವಿದೆ,
    ಬ್ಲಾಕ್‌ಚೈನ್ ಎಂಬ ತಂತ್ರಜ್ಞಾನದಲ್ಲಿ.
  • 1:46 - 1:49
    ಇಂಟರ್ನೆಟ್‌ನಲ್ಲಿ ಮಾಹಿತಿ ಸಂಗ್ರಹದ
    ಹೊಸ ವಿಧಾನವು ಬ್ಲಾಕ್‌ಚೈನ್ ಆಗಿದೆ
  • 1:50 - 1:53
    ಇದರಲ್ಲಿ ಎಲ್ಲರೂ ಭಾಗವಹಿಸಬಹುದು.
    ಬ್ಲಾಕ್‌ಚೈನ್‌ನಲ್ಲಿ,
  • 1:53 - 1:55
    ಡೇಟಾ ವಿಕೇಂದ್ರೀಕರಣ, ವಿತರಣೆ ಮಾಡಬಹುದು.
  • 1:56 - 1:58
    ಯಾರಿಗೂ ಬ್ಲಾಕ್‌ಚೈನ್ ಮಾಲೀಕತ್ವ ಇಲ್ಲ,
  • 1:58 - 2:01
    ಎಲ್ಲರೂ ಬಳಸಬಹುದು, ಅದರಲ್ಲಿನ
    ಮಾಹಿತಿ ಪರಿಶೀಲಿಸಬಹುದು.
  • 2:01 - 2:06
    ಈ ತಂತ್ರಜ್ಞಾನವೇ ಬಿಟ್‌ಕಾಯ್ನ್‌ ರೀತಿ
    ಕ್ರಿಪ್ಟೋಕರೆನ್ಸಿ ಹಿಂದಿನ ಅನ್ವೇಷಣೆ.
  • 2:06 - 2:11
    ಇದನ್ನು ಇತರ ವಿಧಾನಕ್ಕೂ ಬಳಸಬಹುದು
    ನಂತರದ ವೀಡಿಯೋದಲ್ಲಿ ಅದನ್ನು ವಿವರಿಸಲಾಗುತ್ತದೆ.
  • 2:11 - 2:14
    ಆದರೆ, ಮೊದಲು, ವಿಶ್ವಾಸವನ್ನು ಹೇಗೆ
    ನಿರ್ವಹಿಸಲಾಗುತ್ತಿತ್ತು ಎಂದು ನೋಡೋಣ.
  • 2:16 - 2:19
    ಮಾನವ ಜೀವಿಸಿದಾಗಿನಿಂದಲೂ,
    ವಿಶ್ವಾಸದ ಹಲವು ವಿಧಗಳನ್ನು ಹುಡುಕಿದ್ದೇವೆ
  • 2:19 - 2:23
    ವಹಿವಾಟು ಮತ್ತು ಮಾಹಿತಿ ಟ್ರ್ಯಾಕ್ ಮಾಡುವ ಮೂಲಕ
  • 2:24 - 2:26
    ಉದಾ., ಈ ಫಾರ್ಮ್ ಮಾಲೀಕರು ಯಾರು?
  • 2:27 - 2:29
    ಹಾಲಿಗೆ ನಾನು ನಿಮಗೆ ಎಷ್ಟು ಕೊಡಬೇಕು?
  • 2:29 - 2:32
    ಈ ಭಾಗದ ಕಾನೂನು ಯಾವುದು?
  • 2:32 - 2:36
    ಶೆಲ್‌ಗಳು ಅಥವಾ ಹವಳಗಳನ್ನು ಬಳಸಿ ವಹಿವಾಟಿನ
    ದಾಖಲೆ ಇಟ್ಟುಕೊಂಡರು
  • 2:36 - 2:39
    ಇದು ಕರೆನ್ಸಿಯ ಆರಂಭಿಕ
    ದಿನಗಳಾಗಿದ್ದವು.
  • 2:39 - 2:42
    ಬುಡಕಟ್ಟಿನಿಂದ, ಗ್ರಾಮ, ನಗರಗಳಿಗೆ
    ನಾವು ತೆರಳಿದಂತೆಯೇ
  • 2:43 - 2:46
    ಆಸ್ತಿ ಮತ್ತು ಕಾನೂನು ಟ್ರ್ಯಾಕ್
    ಮಾಡುವ ಅಗತ್ಯ ಉಂಟಾಯಿತು.
  • 2:47 - 2:50
    ಇದರಿಂದ ಸಂಖ್ಯೆ, ಬರೆಯುವ ಅನ್ವೇಷಣೆ
    ನಡೆಯಿತು
  • 2:51 - 2:53
    ಇದು ಅದ್ಭುತವಲ್ಲವೇ?
  • 2:53 - 2:55
    ಗಣಿತ ತರಗತಿಗೆ ನಾವು
    ಸಂಖ್ಯೆಗಳನ್ನು ಅನ್ವೇಷಿಸಿಲ್ಲ
  • 2:56 - 2:59
    ಪುಸ್ತಕ ಬರೆಯಲು ಅಕ್ಷರಗಳನ್ನು
    ಸಂಶೋಧಿಸಿಲ್ಲ.
  • 2:59 - 3:02
    ಭೂಮಿ, ಜಾನುವಾರು, ಸಾಲ ತೆರಿಗೆ
    ಲೆಕ್ಕ ಇಡುವುದಕ್ಕೆ
  • 3:02 - 3:04
    ಇದರ ಅನ್ವೇಷಣೆ ಮಾಡಿದೆವು.
  • 3:04 - 3:07
    ಖಂಡಿತ, ಅಂದಿನಿಂದ ನಾವು ತುಂಬ ದೂರ
    ಸಾಗಿದ್ದೇವೆ.
  • 3:07 - 3:12
    ಶೆಲ್‌ಗಳಿಂದ ನಾಣ್ಯಗಳು, ನೋಟುಗಳಿಂದ
    ಡಿಜಿಟಲ್ ಡೇಟಾ ವರೆಗೆ ಕರೆನ್ಸಿ ಬಂದಿದೆ.
  • 3:12 - 3:15
    ಮಣ್ಣಿನ ಪಟ್ಟಿಯಿಂದ ಕಾಗದದ ವರೆಗೆ,
    ಡಿಜಿಟಲ್‌ ರೂಪದ ವರೆಗೆ
  • 3:15 - 3:19
    ಬರವಣಿಗೆ ಸುಧಾರಿಸಿದೆ.
    ಸಂಖ್ಯೆ ಮತ್ತು ಅಕ್ಷರಗಳ ಅನ್ವೇಷಣೆಯ ಜೊತೆಗೆ.
  • 3:19 - 3:22
    ವಿಶ್ವಾಸದ ಹೊಸ ವಿಧಾನವನ್ನೂ ನಾವು
    ಅನ್ವೇಷಿಸಿದ್ದೇವೆ
  • 3:23 - 3:28
    ಇವೆಲ್ಲವೂ ದಾಖಲೆಗಳ ರಕ್ಷಣೆಯ ವಿಧಾನವಾಗಿದ್ದು,
    ವಿಶ್ವಾಸದ ಮೇಲೆಯೇ ಅವಲಂಬಿಸಿವೆ.
  • 3:28 - 3:32
    ಹೀಗಾಗಿಯೇ, ಕಾನೂನುಗಳನ್ನು ಕಲ್ಲಿನಲ್ಲಿ
    ಕೆತ್ತಲಾಗಿತ್ತು
  • 3:32 - 3:35
    ಯಾರೂ ಅದನ್ನು ಬದಲಿಸಲಾಗದು ಎಂಬುದಕ್ಕೆ.
  • 3:37 - 3:39
    ಆದರೆ, ಕಲ್ಲಿನಲ್ಲಿ ಬರೆದಿದ್ದನ್ನೂ ನೀವು
    ನಂಬುವುದು ಹೇಗೆ?
  • 3:40 - 3:45
    ಉದಾಹರಣೆಗೆ, 100 ಆಕಳು ಇದೆ ಎಂದು ಮಣ್ಣಿನ
    ಪಟ್ಟಿಯಲ್ಲಿ ಬರೆದಿಟ್ಟಿರಬಹದುಉ.
  • 3:45 - 3:49
    ಆ ಸಂಖ್ಯೆ ನಿಮ್ಮ ಬಳಿ ಇದೆ ಎಂದು ನನಗೆ
    ಹೇಗೆ ತಿಳಿಯಬೇಕು?
  • 3:49 - 3:52
    ಹೀಗಾಗಿ, ನಂಬಿಕೆಯ ಸೀಲ್‌, ಸ್ಟಾಂಪ್
    ಸಹಿಗಳನ್ನೆಲ್ಲ ನಾವು
  • 3:53 - 3:55
    ಹುಡುಕಿದೆವು.
  • 3:55 - 3:58
    ಈ ಎಲ್ಲ ಅನ್ವೇಷಣೆಗಳಿಂದ,
    ದೃಢೀಕರಿಸಿದೆವು, ವಿಶ್ವಾಸವನ್ನು
  • 3:58 - 4:00
    ಸೀಮಿತ ಜನರು, ಸಂಸ್ಥೆ, ಸರ್ಕಾರದ
  • 4:00 - 4:04
    ಮಧ್ಯೆ ಇರಿಸಿದೆವು. ಈ ದಾಖಲೆಯನ್ನು ಅವು
    ದೃಢೀಕರಿಸಬಹುದಾಗಿತ್ತು.
  • 4:04 - 4:08
    ಸಾವಿರಾರು ವರ್ಷಗಳಿಂದಲೂ ಇದರಲ್ಲಿ
    ಯಾವ ಬದಲಾವಣೆಯೂ ಆಗಲಿಲ್ಲ
  • 4:08 - 4:09
    ಹೊಸ ತಂತ್ರಜ್ಞಾನಗಳು ಬಂದರೂ ಕೂಡ.
  • 4:09 - 4:12
    ದಾಖಲೆಗಳನ್ನು ಪರಿಶೀಲಿಸುವ ಸಂಸ್ಥೆ, ಅಧಿಕಾರಗಳ
    ಮೇಲೆ ನಂಬಿಕೆ ಇರಿಸಿದರೆ ಮಾತ್ರ
  • 4:12 - 4:14
    ಈ ಸಿಸ್ಟಮ್ ಕೆಲಸ ಮಾಡುತ್ತದೆ.
  • 4:15 - 4:18
    ಇದು ನಮ್ಮನ್ನು ಬ್ಲಾಕ್‌ಚೈನ್‌ಗೆ ಕರೆತರುತ್ತದೆ.
  • 4:18 - 4:21
    ಕೇಂದ್ರೀಯ ಪ್ರಾಧಿಕಾರದ ಮೇಲೆ ವಿಶ್ವಾಸ ಇರಿಸದೇ
    ಮಾಹಿತಿ ದಾಖಲಿಸಲು ನಮಗೆ ಅನುವು
  • 4:21 - 4:23
    ಮಾಡುವ ಮೊದಲ
    ತಂತ್ರಜ್ಞಾನ ಬ್ಲಾಕ್‌ಚೈನ್.
  • 4:24 - 4:28
    ಕಲ್ಲು, ಸೀಲ್, ಬ್ಯಾಂಕ್‌, ಸರ್ಕಾರದ
    ಅಗತ್ಯವಿಲ್ಲದೇ ಮಾಹಿತಿಯನ್ನು
  • 4:28 - 4:32
    ಸಂಗ್ರಹಿಸಲು ಮತ್ತು ಪರಿಶೀಲಿಸಲು
    ಇದೊಂದು ಡಿಜಿಟಲ್‌
  • 4:32 - 4:35
    ವಿಧಾನವಾಗಿದೆ.
  • 4:35 - 4:40
    ಬ್ಲಾಕ್‌ಚೈನ್‌ನಲ್ಲಿನ ಮಾಹಿತಿಯನ್ನು ಕಂಪ್ಯೂಟರುಗಳ
    ವಿತರಿಸಿದ ನೆಟ್‌ವರ್ಕ್‌ನಲ್ಲಿ ಉಳಿಸಲಾಗುತ್ತದೆ.
  • 4:41 - 4:45
    ಈ ಕಂಪ್ಯೂಟರ್‌ಗಳನ್ನು ಸ್ವತಂತ್ರವಾಗಿ
    ನಿರ್ವಹಣೆ ಮಾಡುವರೆಗೂ.
  • 4:45 - 4:51
    ಸೈದ್ಧಾಂತಿಕವಾಗಿ, ಯಾವುದೇ ವ್ಯಕ್ತಿ ಅಥವಾ ಸಂಸ್ಥೆ
    ನೆಟ್‌ವರ್ಕ್ ಸ್ಥಗಿತ ಮಾಡಲಾಗದು, ಹಾಳು ಮಾಡಲಾಗದು
  • 4:53 - 4:57
    ಅಂದರೆ, ಒಂದು ಬರೆಯುವ ವಿಧಾನದಂತೆ
    ನಕಲಿಸಲು, ಹಾಳು ಮಾಡಲಾಗದು.
  • 4:57 - 4:59
    ಇದು ಹೊಸ ವಿಶ್ವಾಸದ ರೂಪವನ್ನು
    ಅನುವು ಮಾಡುತ್ತದೆ.
  • 4:59 - 5:02
    ಮೊದಲ ಬಳಕೆಯೇ ಬಿಟ್‌ಕಾಯ್ನ್.
  • 5:02 - 5:05
    ಬಿಟ್‌ಕಾಯ್ನ್‌ ಡಿಜಿಟಲ್ ಕರೆನ್ಸಿಯಾಗಿದ್ದು
    ಇದು ವಹಿವಾಟು ಟ್ರಾಕ್ ಮಾಡುತ್ತದೆ
  • 5:06 - 5:10
    ಇದಕ್ಕೆ ಬ್ಯಾಂಕ್‌, ಸರ್ಕಾರದ ಮೇಲೆ
    ವಿಶ್ವಾಸ ಇರಿಸಬೇಕಿಲ್ಲ.
  • 5:11 - 5:12
    ಅದೊಂದೇ ಉದಾಹರಣೆ.
  • 5:12 - 5:15
    ಜಮೀನಿನ ಮಾಲೀಕತ್ವ, ಒಪ್ಪಂದಗಳನ್ನು
    ಮಾಡಲು, ದಾಖಲೆ ದೃಢೀಕರಿಸಲು
  • 5:15 - 5:20
    ನಿರ್ದಿಷ್ಟ ದಿನಾಂಕದಂದು ರಚಿಸಿದ ದಾಖಲೆ
    ಪರಿಶೀಲನೆ ಮಾಡಲು
  • 5:21 - 5:24
    ಬ್ಲಾಕ್‌ಚೈನ್ ಅನ್ನು ಬಳಕೆ
    ಮಾಡಬಹುದಾಗಿದೆ.
  • 5:24 - 5:29
    ಇವೆಲ್ಲವನ್ನೂ, ಇನ್ನಷ್ಟನ್ನು ಮಾಡಲು
    ಸೈದ್ಧಾಂತಿಕವಾಗಿ ಸಾಧ್ಯವಿದೆ
  • 5:29 - 5:32
    ಸಾಂಪ್ರದಾಯಿಕ ವಿಶ್ವಾಸ ವ್ಯವಸ್ಥೆಯ ಮೇಲೆ
    ಅವಲಂಬಿಸದೇ.
  • 5:32 - 5:37
    ಬ್ಲಾಕ್‌ಚೈನ್ ಸಂಪೂರ್ಣ ಸಾಮರ್ಥ್ಯ
    ಬಳಕೆ ಮಾಡಲು ಇನ್ನೂ ದೂರ ಸಾಗಬೇಕಿದೆ
  • 5:37 - 5:40
    ಇದರ ಭವಿಷ್ಯದ ಬಗ್ಗೆ ಯಾವಾಗಲೂ
    ಚರ್ಚೆ ನಡೆಯುತ್ತಿರುತ್ತದೆ.
  • 5:40 - 5:43
    ಸಮಾಜದಲ್ಲಿನ ಅಧಿಕಾರವನ್ನು ವಿಕೇಂದ್ರೀಕರಿಸಲು
  • 5:43 - 5:47
    ಇದು ಭವಿಷ್ಯದ ಸಂಗತಿ ಎಂದು
    ಕೆಲವರು ನಂಬಿದ್ದಾರೆ.
  • 5:47 - 5:50
    ಇನ್ನೂ ಕೆಲವರು, ಯಾವುದೇ ಉದ್ದೇಶವಿಲ್ಲದ
    ಒಂದು ಸ್ಕ್ಯಾಮ್ ಎಂದು ಹೇಳುತ್ತಾರೆ.
  • 5:51 - 5:55
    ಈ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ ಎಂದು
    ನಾವು ಈ ಮುಂದಿನ ವೀಡಿಯೋದಲ್ಲಿ ನೋಡೋಣ.
  • 5:55 - 5:58
    ನಂತರ, ವಿಭಿನ್ನ ದೃಷ್ಟಿಕೋನಗಳನ್ನು
    ಕೂಡಾ ನಾವು ನೋಡೋಣ.
Title:
How Blockchain Works: Why Blockchain?
Description:

more » « less
Video Language:
English
Team:
Code.org
Project:
How Blockchain works
Duration:
06:06

Kannada subtitles

Revisions Compare revisions