ನನ್ನ ಹೆಸರು ಟೆಗನ್ ಕ್ಲೈನ್.
ಎಡ್ಜ್ & ನೋಡ್ನ ಸಹಸಂಸ್ಥಾಪಕಿ.
ದಿ ಗ್ರಾಫ್ನ ಹಿಂದಿರುವ ಆರಂಭಿಕ ತಂಡ.
ವೆಬ್ಗೆ ಗೂಗಲ್ ಏನು
ಮಾಡುತ್ತದೆಯೋ ಅದನ್ನು
ಬ್ಲಾಕ್ಚೈನ್ಗೆ ದಿ ಗ್ರಾಫ್ ಮಾಡುತ್ತದೆ
ಡೇಟಾ ಆಯೋಜನೆ
ನನ್ನ ಹೆಸರು ಸಿಂಥಿಯಾ ಹಾಸ್,
ವರ್ಲ್ಡ್ ಆಫ್ ವಿಮೆನ್ ಫೌಂಡೇಶನ್ ನಿರ್ದೇಶಕಿ
ವರ್ಲ್ಡ್ ಆಫ್ ವಿಮೆನ್
10,000 ಮಹಿಳೆಯರ ಸಂಗ್ರಹ
ಇವರೆಲ್ಲರೂ ವಿಭಿನ್ನ ಹಿನ್ನೆಲೆ,
ವಿಭಿನ್ನ ಬಣ್ಣ, ಜನಾಂಗದವರು.
ವೆಬ್3 ಸ್ಪೇಸ್ನಲ್ಲಿ ಸಮಗ್ರತೆ, ವೈವಿಧ್ಯತೆಯ
ಚಾಂಪಿಯನ್ಗಳ ಸಮುದಾಯವಾಗಿದ್ದೇವೆ.
ನನ್ನ ಹೆಸರು ಚಾರ್ಲಿ ಲೀ.
ನಾನು ಲೈಟ್ಕಾಯಿನ್ ಕ್ರಿಯೇಟರ್.
ಬಿಟ್ಕಾಯ್ನ್ಗೆ ಪರ್ಯಾಯ ಕರೆನ್ಸಿ ಇದು.
ಬಿಟ್ಕಾಯ್ನ್ ಕೋಡ್ಬೇಸ್
ನೋಡುತ್ತಿದ್ದೆ
ನನ್ನದೇ ಕ್ರಿಪ್ಟೋಕರೆನ್ಸಿ ಆರಂಭಿಸು
ಯೋಜನೆ ಮಾಡಿದೆ
ಇದು ಖುಷಿಯ ಪ್ರಾಜೆಕ್ಟ್
ಜಾರಿಗೆ ಬಂತು.
ಕ್ರೆಡಿಟ್ ಕಾರ್ಡ್ ಬಳಸಿ ಏನನ್ನಾದರೂ ಖರೀದಿಸಿದರೆ
ನಿಮ್ಮ ದಿನಸಿಯನ್ನು ಆರ್ಗ್ಯಾನಿಕ್ ಎನ್ನಲಾಗುತ್ತೆ
ಸೋಷಿಯಲ್ ಮೀಡಿಯಾದಲ್ಲಿ ವೆರಿಫೈ ಮಾಡಲಾಗುತ್ತದೆ
ನೀವು ಮತ ಹಾಕಿದಾಗ
ಇವೆಲ್ಲವೂ ವಿಶ್ವಾಸದ ಮೇಲೆ ನಡೆಯುತ್ತದೆ.
ಹಣ ವರ್ಗಾವಣೆ ಬಗ್ಗೆ ನಿಮಗೆ
ಹೇಗೆ ತಿಳಿಯುತ್ತದೆ
ಆ ಆಹಾರ ನಿಜವಾಗಿ ಸಾವಯವವೇ,
ಆ ವ್ಯಕ್ತಿ ನಿಜವೇ
ನಿಮ್ಮ ಮತ ಲೆಕ್ ಮಾಡಲಾಗಿದೆಯೇ?
ಅಂತಿಮವಾಗಿ, ಬ್ಯಾಂಕ್, ಕಂಪನಿ, ಸರ್ಕಾರ ಹೊಂದಿದ
ದಾಖಲೆಯ ಮೇಲೆ ನಿಮಗೆ ವಿಶ್ವಾಸವಿದೆ.
ಆದರೆ, ಈಚಿನ ದಿನಗಳಲ್ಲಿ ಸರ್ಕಾರ,
ಕಂಪನಿಗಳು, ಕೇಂದ್ರಿತ ಶಕ್ತಿಯ
ಮೇಲೆ ವಿಶ್ವಾಸ ಇಡಬಹುದೇ ಎಂದು ಗೊಂದಲವಿದೆ.
ತಪ್ಪು ಮಾಹಿತಿ ಹೆಚ್ಚುತ್ತಿರುವುದರಿಂದ
ಕೇಂದ್ರೀಯ ಸಂಸ್ಥೆಯನ್ನು ಅವಲಂಬಿಸದ ವಿಶ್ವಾಸದ
ಸಿಸ್ಟಮ್ ಅನ್ನು ನಿರ್ಮಿಸಿದರೆ ಹೇಗೆ?
ಹಣ, ಆಸ್ತಿಯಂಥದ್ದರ ಟ್ರ್ಯಾಕ್ ಮಾಡುವುದನ್ನು
ಕಂಪನಿ, ಸರ್ಕಾರದ ಉಸ್ತುವಾರಿ ಇಲ್ಲದೇ
ಯಾರು ಬೇಕಾದರೂ ಆಡಿಟ್
ಮಾಡುವ ರೀತಿ ಮಾಡಿದರೆ?
ಅದು ಇಂದು ಸಾಧ್ಯವಿದೆ,
ಬ್ಲಾಕ್ಚೈನ್ ಎಂಬ ತಂತ್ರಜ್ಞಾನದಲ್ಲಿ.
ಇಂಟರ್ನೆಟ್ನಲ್ಲಿ ಮಾಹಿತಿ ಸಂಗ್ರಹದ
ಹೊಸ ವಿಧಾನವು ಬ್ಲಾಕ್ಚೈನ್ ಆಗಿದೆ
ಇದರಲ್ಲಿ ಎಲ್ಲರೂ ಭಾಗವಹಿಸಬಹುದು.
ಬ್ಲಾಕ್ಚೈನ್ನಲ್ಲಿ,
ಡೇಟಾ ವಿಕೇಂದ್ರೀಕರಣ, ವಿತರಣೆ ಮಾಡಬಹುದು.
ಯಾರಿಗೂ ಬ್ಲಾಕ್ಚೈನ್ ಮಾಲೀಕತ್ವ ಇಲ್ಲ,
ಎಲ್ಲರೂ ಬಳಸಬಹುದು, ಅದರಲ್ಲಿನ
ಮಾಹಿತಿ ಪರಿಶೀಲಿಸಬಹುದು.
ಈ ತಂತ್ರಜ್ಞಾನವೇ ಬಿಟ್ಕಾಯ್ನ್ ರೀತಿ
ಕ್ರಿಪ್ಟೋಕರೆನ್ಸಿ ಹಿಂದಿನ ಅನ್ವೇಷಣೆ.
ಇದನ್ನು ಇತರ ವಿಧಾನಕ್ಕೂ ಬಳಸಬಹುದು
ನಂತರದ ವೀಡಿಯೋದಲ್ಲಿ ಅದನ್ನು ವಿವರಿಸಲಾಗುತ್ತದೆ.
ಆದರೆ, ಮೊದಲು, ವಿಶ್ವಾಸವನ್ನು ಹೇಗೆ
ನಿರ್ವಹಿಸಲಾಗುತ್ತಿತ್ತು ಎಂದು ನೋಡೋಣ.
ಮಾನವ ಜೀವಿಸಿದಾಗಿನಿಂದಲೂ,
ವಿಶ್ವಾಸದ ಹಲವು ವಿಧಗಳನ್ನು ಹುಡುಕಿದ್ದೇವೆ
ವಹಿವಾಟು ಮತ್ತು ಮಾಹಿತಿ ಟ್ರ್ಯಾಕ್ ಮಾಡುವ ಮೂಲಕ
ಉದಾ., ಈ ಫಾರ್ಮ್ ಮಾಲೀಕರು ಯಾರು?
ಹಾಲಿಗೆ ನಾನು ನಿಮಗೆ ಎಷ್ಟು ಕೊಡಬೇಕು?
ಈ ಭಾಗದ ಕಾನೂನು ಯಾವುದು?
ಶೆಲ್ಗಳು ಅಥವಾ ಹವಳಗಳನ್ನು ಬಳಸಿ ವಹಿವಾಟಿನ
ದಾಖಲೆ ಇಟ್ಟುಕೊಂಡರು
ಇದು ಕರೆನ್ಸಿಯ ಆರಂಭಿಕ
ದಿನಗಳಾಗಿದ್ದವು.
ಬುಡಕಟ್ಟಿನಿಂದ, ಗ್ರಾಮ, ನಗರಗಳಿಗೆ
ನಾವು ತೆರಳಿದಂತೆಯೇ
ಆಸ್ತಿ ಮತ್ತು ಕಾನೂನು ಟ್ರ್ಯಾಕ್
ಮಾಡುವ ಅಗತ್ಯ ಉಂಟಾಯಿತು.
ಇದರಿಂದ ಸಂಖ್ಯೆ, ಬರೆಯುವ ಅನ್ವೇಷಣೆ
ನಡೆಯಿತು
ಇದು ಅದ್ಭುತವಲ್ಲವೇ?
ಗಣಿತ ತರಗತಿಗೆ ನಾವು
ಸಂಖ್ಯೆಗಳನ್ನು ಅನ್ವೇಷಿಸಿಲ್ಲ
ಪುಸ್ತಕ ಬರೆಯಲು ಅಕ್ಷರಗಳನ್ನು
ಸಂಶೋಧಿಸಿಲ್ಲ.
ಭೂಮಿ, ಜಾನುವಾರು, ಸಾಲ ತೆರಿಗೆ
ಲೆಕ್ಕ ಇಡುವುದಕ್ಕೆ
ಇದರ ಅನ್ವೇಷಣೆ ಮಾಡಿದೆವು.
ಖಂಡಿತ, ಅಂದಿನಿಂದ ನಾವು ತುಂಬ ದೂರ
ಸಾಗಿದ್ದೇವೆ.
ಶೆಲ್ಗಳಿಂದ ನಾಣ್ಯಗಳು, ನೋಟುಗಳಿಂದ
ಡಿಜಿಟಲ್ ಡೇಟಾ ವರೆಗೆ ಕರೆನ್ಸಿ ಬಂದಿದೆ.
ಮಣ್ಣಿನ ಪಟ್ಟಿಯಿಂದ ಕಾಗದದ ವರೆಗೆ,
ಡಿಜಿಟಲ್ ರೂಪದ ವರೆಗೆ
ಬರವಣಿಗೆ ಸುಧಾರಿಸಿದೆ.
ಸಂಖ್ಯೆ ಮತ್ತು ಅಕ್ಷರಗಳ ಅನ್ವೇಷಣೆಯ ಜೊತೆಗೆ.
ವಿಶ್ವಾಸದ ಹೊಸ ವಿಧಾನವನ್ನೂ ನಾವು
ಅನ್ವೇಷಿಸಿದ್ದೇವೆ
ಇವೆಲ್ಲವೂ ದಾಖಲೆಗಳ ರಕ್ಷಣೆಯ ವಿಧಾನವಾಗಿದ್ದು,
ವಿಶ್ವಾಸದ ಮೇಲೆಯೇ ಅವಲಂಬಿಸಿವೆ.
ಹೀಗಾಗಿಯೇ, ಕಾನೂನುಗಳನ್ನು ಕಲ್ಲಿನಲ್ಲಿ
ಕೆತ್ತಲಾಗಿತ್ತು
ಯಾರೂ ಅದನ್ನು ಬದಲಿಸಲಾಗದು ಎಂಬುದಕ್ಕೆ.
ಆದರೆ, ಕಲ್ಲಿನಲ್ಲಿ ಬರೆದಿದ್ದನ್ನೂ ನೀವು
ನಂಬುವುದು ಹೇಗೆ?
ಉದಾಹರಣೆಗೆ, 100 ಆಕಳು ಇದೆ ಎಂದು ಮಣ್ಣಿನ
ಪಟ್ಟಿಯಲ್ಲಿ ಬರೆದಿಟ್ಟಿರಬಹದುಉ.
ಆ ಸಂಖ್ಯೆ ನಿಮ್ಮ ಬಳಿ ಇದೆ ಎಂದು ನನಗೆ
ಹೇಗೆ ತಿಳಿಯಬೇಕು?
ಹೀಗಾಗಿ, ನಂಬಿಕೆಯ ಸೀಲ್, ಸ್ಟಾಂಪ್
ಸಹಿಗಳನ್ನೆಲ್ಲ ನಾವು
ಹುಡುಕಿದೆವು.
ಈ ಎಲ್ಲ ಅನ್ವೇಷಣೆಗಳಿಂದ,
ದೃಢೀಕರಿಸಿದೆವು, ವಿಶ್ವಾಸವನ್ನು
ಸೀಮಿತ ಜನರು, ಸಂಸ್ಥೆ, ಸರ್ಕಾರದ
ಮಧ್ಯೆ ಇರಿಸಿದೆವು. ಈ ದಾಖಲೆಯನ್ನು ಅವು
ದೃಢೀಕರಿಸಬಹುದಾಗಿತ್ತು.
ಸಾವಿರಾರು ವರ್ಷಗಳಿಂದಲೂ ಇದರಲ್ಲಿ
ಯಾವ ಬದಲಾವಣೆಯೂ ಆಗಲಿಲ್ಲ
ಹೊಸ ತಂತ್ರಜ್ಞಾನಗಳು ಬಂದರೂ ಕೂಡ.
ದಾಖಲೆಗಳನ್ನು ಪರಿಶೀಲಿಸುವ ಸಂಸ್ಥೆ, ಅಧಿಕಾರಗಳ
ಮೇಲೆ ನಂಬಿಕೆ ಇರಿಸಿದರೆ ಮಾತ್ರ
ಈ ಸಿಸ್ಟಮ್ ಕೆಲಸ ಮಾಡುತ್ತದೆ.
ಇದು ನಮ್ಮನ್ನು ಬ್ಲಾಕ್ಚೈನ್ಗೆ ಕರೆತರುತ್ತದೆ.
ಕೇಂದ್ರೀಯ ಪ್ರಾಧಿಕಾರದ ಮೇಲೆ ವಿಶ್ವಾಸ ಇರಿಸದೇ
ಮಾಹಿತಿ ದಾಖಲಿಸಲು ನಮಗೆ ಅನುವು
ಮಾಡುವ ಮೊದಲ
ತಂತ್ರಜ್ಞಾನ ಬ್ಲಾಕ್ಚೈನ್.
ಕಲ್ಲು, ಸೀಲ್, ಬ್ಯಾಂಕ್, ಸರ್ಕಾರದ
ಅಗತ್ಯವಿಲ್ಲದೇ ಮಾಹಿತಿಯನ್ನು
ಸಂಗ್ರಹಿಸಲು ಮತ್ತು ಪರಿಶೀಲಿಸಲು
ಇದೊಂದು ಡಿಜಿಟಲ್
ವಿಧಾನವಾಗಿದೆ.
ಬ್ಲಾಕ್ಚೈನ್ನಲ್ಲಿನ ಮಾಹಿತಿಯನ್ನು ಕಂಪ್ಯೂಟರುಗಳ
ವಿತರಿಸಿದ ನೆಟ್ವರ್ಕ್ನಲ್ಲಿ ಉಳಿಸಲಾಗುತ್ತದೆ.
ಈ ಕಂಪ್ಯೂಟರ್ಗಳನ್ನು ಸ್ವತಂತ್ರವಾಗಿ
ನಿರ್ವಹಣೆ ಮಾಡುವರೆಗೂ.
ಸೈದ್ಧಾಂತಿಕವಾಗಿ, ಯಾವುದೇ ವ್ಯಕ್ತಿ ಅಥವಾ ಸಂಸ್ಥೆ
ನೆಟ್ವರ್ಕ್ ಸ್ಥಗಿತ ಮಾಡಲಾಗದು, ಹಾಳು ಮಾಡಲಾಗದು
ಅಂದರೆ, ಒಂದು ಬರೆಯುವ ವಿಧಾನದಂತೆ
ನಕಲಿಸಲು, ಹಾಳು ಮಾಡಲಾಗದು.
ಇದು ಹೊಸ ವಿಶ್ವಾಸದ ರೂಪವನ್ನು
ಅನುವು ಮಾಡುತ್ತದೆ.
ಮೊದಲ ಬಳಕೆಯೇ ಬಿಟ್ಕಾಯ್ನ್.
ಬಿಟ್ಕಾಯ್ನ್ ಡಿಜಿಟಲ್ ಕರೆನ್ಸಿಯಾಗಿದ್ದು
ಇದು ವಹಿವಾಟು ಟ್ರಾಕ್ ಮಾಡುತ್ತದೆ
ಇದಕ್ಕೆ ಬ್ಯಾಂಕ್, ಸರ್ಕಾರದ ಮೇಲೆ
ವಿಶ್ವಾಸ ಇರಿಸಬೇಕಿಲ್ಲ.
ಅದೊಂದೇ ಉದಾಹರಣೆ.
ಜಮೀನಿನ ಮಾಲೀಕತ್ವ, ಒಪ್ಪಂದಗಳನ್ನು
ಮಾಡಲು, ದಾಖಲೆ ದೃಢೀಕರಿಸಲು
ನಿರ್ದಿಷ್ಟ ದಿನಾಂಕದಂದು ರಚಿಸಿದ ದಾಖಲೆ
ಪರಿಶೀಲನೆ ಮಾಡಲು
ಬ್ಲಾಕ್ಚೈನ್ ಅನ್ನು ಬಳಕೆ
ಮಾಡಬಹುದಾಗಿದೆ.
ಇವೆಲ್ಲವನ್ನೂ, ಇನ್ನಷ್ಟನ್ನು ಮಾಡಲು
ಸೈದ್ಧಾಂತಿಕವಾಗಿ ಸಾಧ್ಯವಿದೆ
ಸಾಂಪ್ರದಾಯಿಕ ವಿಶ್ವಾಸ ವ್ಯವಸ್ಥೆಯ ಮೇಲೆ
ಅವಲಂಬಿಸದೇ.
ಬ್ಲಾಕ್ಚೈನ್ ಸಂಪೂರ್ಣ ಸಾಮರ್ಥ್ಯ
ಬಳಕೆ ಮಾಡಲು ಇನ್ನೂ ದೂರ ಸಾಗಬೇಕಿದೆ
ಇದರ ಭವಿಷ್ಯದ ಬಗ್ಗೆ ಯಾವಾಗಲೂ
ಚರ್ಚೆ ನಡೆಯುತ್ತಿರುತ್ತದೆ.
ಸಮಾಜದಲ್ಲಿನ ಅಧಿಕಾರವನ್ನು ವಿಕೇಂದ್ರೀಕರಿಸಲು
ಇದು ಭವಿಷ್ಯದ ಸಂಗತಿ ಎಂದು
ಕೆಲವರು ನಂಬಿದ್ದಾರೆ.
ಇನ್ನೂ ಕೆಲವರು, ಯಾವುದೇ ಉದ್ದೇಶವಿಲ್ಲದ
ಒಂದು ಸ್ಕ್ಯಾಮ್ ಎಂದು ಹೇಳುತ್ತಾರೆ.
ಈ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ ಎಂದು
ನಾವು ಈ ಮುಂದಿನ ವೀಡಿಯೋದಲ್ಲಿ ನೋಡೋಣ.
ನಂತರ, ವಿಭಿನ್ನ ದೃಷ್ಟಿಕೋನಗಳನ್ನು
ಕೂಡಾ ನಾವು ನೋಡೋಣ.