1 00:00:13,638 --> 00:00:14,806 ನನ್ನ ಹೆಸರು ಟೆಗನ್ ಕ್ಲೈನ್. 2 00:00:14,806 --> 00:00:17,976 ಎಡ್ಜ್‌ & ನೋಡ್‌ನ ಸಹಸಂಸ್ಥಾಪಕಿ. ದಿ ಗ್ರಾಫ್‌ನ ಹಿಂದಿರುವ ಆರಂಭಿಕ ತಂಡ. 3 00:00:18,268 --> 00:00:20,145 ವೆಬ್‌ಗೆ ಗೂಗಲ್‌ ಏನು ಮಾಡುತ್ತದೆಯೋ ಅದನ್ನು 4 00:00:20,145 --> 00:00:22,522 ಬ್ಲಾಕ್‌ಚೈನ್‌ಗೆ ದಿ ಗ್ರಾಫ್‌ ಮಾಡುತ್ತದೆ ಡೇಟಾ ಆಯೋಜನೆ 5 00:00:22,605 --> 00:00:25,692 ನನ್ನ ಹೆಸರು ಸಿಂಥಿಯಾ ಹಾಸ್, ವರ್ಲ್ಡ್‌ ಆಫ್ ವಿಮೆನ್ ಫೌಂಡೇಶನ್ ನಿರ್ದೇಶಕಿ 6 00:00:25,900 --> 00:00:28,987 ವರ್ಲ್ಡ್‌ ಆಫ್‌ ವಿಮೆನ್ 10,000 ಮಹಿಳೆಯರ ಸಂಗ್ರಹ 7 00:00:28,987 --> 00:00:32,741 ಇವರೆಲ್ಲರೂ ವಿಭಿನ್ನ ಹಿನ್ನೆಲೆ, ವಿಭಿನ್ನ ಬಣ್ಣ, ಜನಾಂಗದವರು. 8 00:00:32,991 --> 00:00:36,745 ವೆಬ್‌3 ಸ್ಪೇಸ್‌ನಲ್ಲಿ ಸಮಗ್ರತೆ, ವೈವಿಧ್ಯತೆಯ ಚಾಂಪಿಯನ್‌ಗಳ ಸಮುದಾಯವಾಗಿದ್ದೇವೆ. 9 00:00:36,745 --> 00:00:38,288 ನನ್ನ ಹೆಸರು ಚಾರ್ಲಿ ಲೀ. 10 00:00:38,288 --> 00:00:39,914 ನಾನು ಲೈಟ್‌ಕಾಯಿನ್‌ ಕ್ರಿಯೇಟರ್. 11 00:00:39,914 --> 00:00:42,542 ಬಿಟ್‌ಕಾಯ್ನ್‌ಗೆ ಪರ್ಯಾಯ ಕರೆನ್ಸಿ ಇದು. 12 00:00:42,542 --> 00:00:45,211 ಬಿಟ್‌ಕಾಯ್ನ್‌ ಕೋಡ್‌ಬೇಸ್‌ ನೋಡುತ್ತಿದ್ದೆ 13 00:00:45,253 --> 00:00:48,381 ನನ್ನದೇ ಕ್ರಿಪ್ಟೋಕರೆನ್ಸಿ ಆರಂಭಿಸು ಯೋಜನೆ ಮಾಡಿದೆ 14 00:00:48,548 --> 00:00:51,718 ಇದು ಖುಷಿಯ ಪ್ರಾಜೆಕ್ಟ್ ಜಾರಿಗೆ ಬಂತು. 15 00:00:52,761 --> 00:00:56,848 ಕ್ರೆಡಿಟ್ ಕಾರ್ಡ್ ಬಳಸಿ ಏನನ್ನಾದರೂ ಖರೀದಿಸಿದರೆ ನಿಮ್ಮ ದಿನಸಿಯನ್ನು ಆರ್ಗ್ಯಾನಿಕ್ ಎನ್ನಲಾಗುತ್ತೆ 16 00:00:56,848 --> 00:01:00,310 ಸೋಷಿಯಲ್ ಮೀಡಿಯಾದಲ್ಲಿ ವೆರಿಫೈ ಮಾಡಲಾಗುತ್ತದೆ ನೀವು ಮತ ಹಾಕಿದಾಗ 17 00:01:00,727 --> 00:01:03,229 ಇವೆಲ್ಲವೂ ವಿಶ್ವಾಸದ ಮೇಲೆ ನಡೆಯುತ್ತದೆ. 18 00:01:03,646 --> 00:01:05,982 ಹಣ ವರ್ಗಾವಣೆ ಬಗ್ಗೆ ನಿಮಗೆ ಹೇಗೆ ತಿಳಿಯುತ್ತದೆ 19 00:01:05,982 --> 00:01:09,694 ಆ ಆಹಾರ ನಿಜವಾಗಿ ಸಾವಯವವೇ, ಆ ವ್ಯಕ್ತಿ ನಿಜವೇ 20 00:01:09,944 --> 00:01:12,113 ನಿಮ್ಮ ಮತ ಲೆಕ್ ಮಾಡಲಾಗಿದೆಯೇ? 21 00:01:12,113 --> 00:01:17,327 ಅಂತಿಮವಾಗಿ, ಬ್ಯಾಂಕ್‌, ಕಂಪನಿ, ಸರ್ಕಾರ ಹೊಂದಿದ ದಾಖಲೆಯ ಮೇಲೆ ನಿಮಗೆ ವಿಶ್ವಾಸವಿದೆ. 22 00:01:18,036 --> 00:01:22,832 ಆದರೆ, ಈಚಿನ ದಿನಗಳಲ್ಲಿ ಸರ್ಕಾರ, ಕಂಪನಿಗಳು, ಕೇಂದ್ರಿತ ಶಕ್ತಿಯ 23 00:01:23,333 --> 00:01:28,296 ಮೇಲೆ ವಿಶ್ವಾಸ ಇಡಬಹುದೇ ಎಂದು ಗೊಂದಲವಿದೆ. ತಪ್ಪು ಮಾಹಿತಿ ಹೆಚ್ಚುತ್ತಿರುವುದರಿಂದ 24 00:01:28,671 --> 00:01:32,634 ಕೇಂದ್ರೀಯ ಸಂಸ್ಥೆಯನ್ನು ಅವಲಂಬಿಸದ ವಿಶ್ವಾಸದ ಸಿಸ್ಟಮ್ ಅನ್ನು ನಿರ್ಮಿಸಿದರೆ ಹೇಗೆ? 25 00:01:33,009 --> 00:01:36,429 ಹಣ, ಆಸ್ತಿಯಂಥದ್ದರ ಟ್ರ್ಯಾಕ್ ಮಾಡುವುದನ್ನು ಕಂಪನಿ, ಸರ್ಕಾರದ ಉಸ್ತುವಾರಿ ಇಲ್ಲದೇ 26 00:01:36,429 --> 00:01:41,976 ಯಾರು ಬೇಕಾದರೂ ಆಡಿಟ್ ಮಾಡುವ ರೀತಿ ಮಾಡಿದರೆ? 27 00:01:41,976 --> 00:01:45,146 ಅದು ಇಂದು ಸಾಧ್ಯವಿದೆ, ಬ್ಲಾಕ್‌ಚೈನ್ ಎಂಬ ತಂತ್ರಜ್ಞಾನದಲ್ಲಿ. 28 00:01:46,064 --> 00:01:49,275 ಇಂಟರ್ನೆಟ್‌ನಲ್ಲಿ ಮಾಹಿತಿ ಸಂಗ್ರಹದ ಹೊಸ ವಿಧಾನವು ಬ್ಲಾಕ್‌ಚೈನ್ ಆಗಿದೆ 29 00:01:49,776 --> 00:01:52,570 ಇದರಲ್ಲಿ ಎಲ್ಲರೂ ಭಾಗವಹಿಸಬಹುದು. ಬ್ಲಾಕ್‌ಚೈನ್‌ನಲ್ಲಿ, 30 00:01:53,071 --> 00:01:55,323 ಡೇಟಾ ವಿಕೇಂದ್ರೀಕರಣ, ವಿತರಣೆ ಮಾಡಬಹುದು. 31 00:01:55,990 --> 00:01:57,700 ಯಾರಿಗೂ ಬ್ಲಾಕ್‌ಚೈನ್ ಮಾಲೀಕತ್ವ ಇಲ್ಲ, 32 00:01:57,700 --> 00:02:01,079 ಎಲ್ಲರೂ ಬಳಸಬಹುದು, ಅದರಲ್ಲಿನ ಮಾಹಿತಿ ಪರಿಶೀಲಿಸಬಹುದು. 33 00:02:01,079 --> 00:02:05,750 ಈ ತಂತ್ರಜ್ಞಾನವೇ ಬಿಟ್‌ಕಾಯ್ನ್‌ ರೀತಿ ಕ್ರಿಪ್ಟೋಕರೆನ್ಸಿ ಹಿಂದಿನ ಅನ್ವೇಷಣೆ. 34 00:02:06,376 --> 00:02:10,964 ಇದನ್ನು ಇತರ ವಿಧಾನಕ್ಕೂ ಬಳಸಬಹುದು ನಂತರದ ವೀಡಿಯೋದಲ್ಲಿ ಅದನ್ನು ವಿವರಿಸಲಾಗುತ್ತದೆ. 35 00:02:10,964 --> 00:02:14,259 ಆದರೆ, ಮೊದಲು, ವಿಶ್ವಾಸವನ್ನು ಹೇಗೆ ನಿರ್ವಹಿಸಲಾಗುತ್ತಿತ್ತು ಎಂದು ನೋಡೋಣ. 36 00:02:15,969 --> 00:02:19,055 ಮಾನವ ಜೀವಿಸಿದಾಗಿನಿಂದಲೂ, ವಿಶ್ವಾಸದ ಹಲವು ವಿಧಗಳನ್ನು ಹುಡುಕಿದ್ದೇವೆ 37 00:02:19,055 --> 00:02:22,517 ವಹಿವಾಟು ಮತ್ತು ಮಾಹಿತಿ ಟ್ರ್ಯಾಕ್ ಮಾಡುವ ಮೂಲಕ 38 00:02:23,601 --> 00:02:26,020 ಉದಾ., ಈ ಫಾರ್ಮ್ ಮಾಲೀಕರು ಯಾರು? 39 00:02:26,855 --> 00:02:29,107 ಹಾಲಿಗೆ ನಾನು ನಿಮಗೆ ಎಷ್ಟು ಕೊಡಬೇಕು? 40 00:02:29,107 --> 00:02:31,693 ಈ ಭಾಗದ ಕಾನೂನು ಯಾವುದು? 41 00:02:31,693 --> 00:02:35,780 ಶೆಲ್‌ಗಳು ಅಥವಾ ಹವಳಗಳನ್ನು ಬಳಸಿ ವಹಿವಾಟಿನ ದಾಖಲೆ ಇಟ್ಟುಕೊಂಡರು 42 00:02:35,947 --> 00:02:38,700 ಇದು ಕರೆನ್ಸಿಯ ಆರಂಭಿಕ ದಿನಗಳಾಗಿದ್ದವು. 43 00:02:38,992 --> 00:02:42,495 ಬುಡಕಟ್ಟಿನಿಂದ, ಗ್ರಾಮ, ನಗರಗಳಿಗೆ ನಾವು ತೆರಳಿದಂತೆಯೇ 44 00:02:42,871 --> 00:02:46,332 ಆಸ್ತಿ ಮತ್ತು ಕಾನೂನು ಟ್ರ್ಯಾಕ್ ಮಾಡುವ ಅಗತ್ಯ ಉಂಟಾಯಿತು. 45 00:02:46,875 --> 00:02:50,295 ಇದರಿಂದ ಸಂಖ್ಯೆ, ಬರೆಯುವ ಅನ್ವೇಷಣೆ ನಡೆಯಿತು 46 00:02:51,254 --> 00:02:53,173 ಇದು ಅದ್ಭುತವಲ್ಲವೇ? 47 00:02:53,173 --> 00:02:55,216 ಗಣಿತ ತರಗತಿಗೆ ನಾವು ಸಂಖ್ಯೆಗಳನ್ನು ಅನ್ವೇಷಿಸಿಲ್ಲ 48 00:02:55,800 --> 00:02:58,720 ಪುಸ್ತಕ ಬರೆಯಲು ಅಕ್ಷರಗಳನ್ನು ಸಂಶೋಧಿಸಿಲ್ಲ. 49 00:02:58,720 --> 00:03:01,848 ಭೂಮಿ, ಜಾನುವಾರು, ಸಾಲ ತೆರಿಗೆ ಲೆಕ್ಕ ಇಡುವುದಕ್ಕೆ 50 00:03:02,098 --> 00:03:04,392 ಇದರ ಅನ್ವೇಷಣೆ ಮಾಡಿದೆವು. 51 00:03:04,392 --> 00:03:06,728 ಖಂಡಿತ, ಅಂದಿನಿಂದ ನಾವು ತುಂಬ ದೂರ ಸಾಗಿದ್ದೇವೆ. 52 00:03:06,978 --> 00:03:11,691 ಶೆಲ್‌ಗಳಿಂದ ನಾಣ್ಯಗಳು, ನೋಟುಗಳಿಂದ ಡಿಜಿಟಲ್ ಡೇಟಾ ವರೆಗೆ ಕರೆನ್ಸಿ ಬಂದಿದೆ. 53 00:03:12,192 --> 00:03:14,819 ಮಣ್ಣಿನ ಪಟ್ಟಿಯಿಂದ ಕಾಗದದ ವರೆಗೆ, ಡಿಜಿಟಲ್‌ ರೂಪದ ವರೆಗೆ 54 00:03:14,819 --> 00:03:18,698 ಬರವಣಿಗೆ ಸುಧಾರಿಸಿದೆ. ಸಂಖ್ಯೆ ಮತ್ತು ಅಕ್ಷರಗಳ ಅನ್ವೇಷಣೆಯ ಜೊತೆಗೆ. 55 00:03:18,698 --> 00:03:22,493 ವಿಶ್ವಾಸದ ಹೊಸ ವಿಧಾನವನ್ನೂ ನಾವು ಅನ್ವೇಷಿಸಿದ್ದೇವೆ 56 00:03:22,744 --> 00:03:27,999 ಇವೆಲ್ಲವೂ ದಾಖಲೆಗಳ ರಕ್ಷಣೆಯ ವಿಧಾನವಾಗಿದ್ದು, ವಿಶ್ವಾಸದ ಮೇಲೆಯೇ ಅವಲಂಬಿಸಿವೆ. 57 00:03:28,374 --> 00:03:31,628 ಹೀಗಾಗಿಯೇ, ಕಾನೂನುಗಳನ್ನು ಕಲ್ಲಿನಲ್ಲಿ ಕೆತ್ತಲಾಗಿತ್ತು 58 00:03:31,836 --> 00:03:34,881 ಯಾರೂ ಅದನ್ನು ಬದಲಿಸಲಾಗದು ಎಂಬುದಕ್ಕೆ. 59 00:03:36,549 --> 00:03:39,469 ಆದರೆ, ಕಲ್ಲಿನಲ್ಲಿ ಬರೆದಿದ್ದನ್ನೂ ನೀವು ನಂಬುವುದು ಹೇಗೆ? 60 00:03:40,303 --> 00:03:44,807 ಉದಾಹರಣೆಗೆ, 100 ಆಕಳು ಇದೆ ಎಂದು ಮಣ್ಣಿನ ಪಟ್ಟಿಯಲ್ಲಿ ಬರೆದಿಟ್ಟಿರಬಹದುಉ. 61 00:03:45,183 --> 00:03:48,811 ಆ ಸಂಖ್ಯೆ ನಿಮ್ಮ ಬಳಿ ಇದೆ ಎಂದು ನನಗೆ ಹೇಗೆ ತಿಳಿಯಬೇಕು? 62 00:03:48,811 --> 00:03:52,148 ಹೀಗಾಗಿ, ನಂಬಿಕೆಯ ಸೀಲ್‌, ಸ್ಟಾಂಪ್ ಸಹಿಗಳನ್ನೆಲ್ಲ ನಾವು 63 00:03:52,565 --> 00:03:55,026 ಹುಡುಕಿದೆವು. 64 00:03:55,151 --> 00:03:58,238 ಈ ಎಲ್ಲ ಅನ್ವೇಷಣೆಗಳಿಂದ, ದೃಢೀಕರಿಸಿದೆವು, ವಿಶ್ವಾಸವನ್ನು 65 00:03:58,238 --> 00:03:59,864 ಸೀಮಿತ ಜನರು, ಸಂಸ್ಥೆ, ಸರ್ಕಾರದ 66 00:03:59,864 --> 00:04:04,077 ಮಧ್ಯೆ ಇರಿಸಿದೆವು. ಈ ದಾಖಲೆಯನ್ನು ಅವು ದೃಢೀಕರಿಸಬಹುದಾಗಿತ್ತು. 67 00:04:04,244 --> 00:04:07,664 ಸಾವಿರಾರು ವರ್ಷಗಳಿಂದಲೂ ಇದರಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ 68 00:04:07,664 --> 00:04:09,207 ಹೊಸ ತಂತ್ರಜ್ಞಾನಗಳು ಬಂದರೂ ಕೂಡ. 69 00:04:09,207 --> 00:04:12,418 ದಾಖಲೆಗಳನ್ನು ಪರಿಶೀಲಿಸುವ ಸಂಸ್ಥೆ, ಅಧಿಕಾರಗಳ ಮೇಲೆ ನಂಬಿಕೆ ಇರಿಸಿದರೆ ಮಾತ್ರ 70 00:04:12,418 --> 00:04:14,462 ಈ ಸಿಸ್ಟಮ್ ಕೆಲಸ ಮಾಡುತ್ತದೆ. 71 00:04:15,463 --> 00:04:18,007 ಇದು ನಮ್ಮನ್ನು ಬ್ಲಾಕ್‌ಚೈನ್‌ಗೆ ಕರೆತರುತ್ತದೆ. 72 00:04:18,007 --> 00:04:21,261 ಕೇಂದ್ರೀಯ ಪ್ರಾಧಿಕಾರದ ಮೇಲೆ ವಿಶ್ವಾಸ ಇರಿಸದೇ ಮಾಹಿತಿ ದಾಖಲಿಸಲು ನಮಗೆ ಅನುವು 73 00:04:21,261 --> 00:04:23,346 ಮಾಡುವ ಮೊದಲ ತಂತ್ರಜ್ಞಾನ ಬ್ಲಾಕ್‌ಚೈನ್. 74 00:04:23,888 --> 00:04:27,517 ಕಲ್ಲು, ಸೀಲ್, ಬ್ಯಾಂಕ್‌, ಸರ್ಕಾರದ ಅಗತ್ಯವಿಲ್ಲದೇ ಮಾಹಿತಿಯನ್ನು 75 00:04:27,850 --> 00:04:31,604 ಸಂಗ್ರಹಿಸಲು ಮತ್ತು ಪರಿಶೀಲಿಸಲು ಇದೊಂದು ಡಿಜಿಟಲ್‌ 76 00:04:31,896 --> 00:04:34,691 ವಿಧಾನವಾಗಿದೆ. 77 00:04:35,233 --> 00:04:40,446 ಬ್ಲಾಕ್‌ಚೈನ್‌ನಲ್ಲಿನ ಮಾಹಿತಿಯನ್ನು ಕಂಪ್ಯೂಟರುಗಳ ವಿತರಿಸಿದ ನೆಟ್‌ವರ್ಕ್‌ನಲ್ಲಿ ಉಳಿಸಲಾಗುತ್ತದೆ. 78 00:04:40,905 --> 00:04:45,076 ಈ ಕಂಪ್ಯೂಟರ್‌ಗಳನ್ನು ಸ್ವತಂತ್ರವಾಗಿ ನಿರ್ವಹಣೆ ಮಾಡುವರೆಗೂ. 79 00:04:45,451 --> 00:04:51,291 ಸೈದ್ಧಾಂತಿಕವಾಗಿ, ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ನೆಟ್‌ವರ್ಕ್ ಸ್ಥಗಿತ ಮಾಡಲಾಗದು, ಹಾಳು ಮಾಡಲಾಗದು 80 00:04:52,875 --> 00:04:56,754 ಅಂದರೆ, ಒಂದು ಬರೆಯುವ ವಿಧಾನದಂತೆ ನಕಲಿಸಲು, ಹಾಳು ಮಾಡಲಾಗದು. 81 00:04:56,754 --> 00:04:58,756 ಇದು ಹೊಸ ವಿಶ್ವಾಸದ ರೂಪವನ್ನು ಅನುವು ಮಾಡುತ್ತದೆ. 82 00:04:59,007 --> 00:05:01,926 ಮೊದಲ ಬಳಕೆಯೇ ಬಿಟ್‌ಕಾಯ್ನ್. 83 00:05:01,926 --> 00:05:05,471 ಬಿಟ್‌ಕಾಯ್ನ್‌ ಡಿಜಿಟಲ್ ಕರೆನ್ಸಿಯಾಗಿದ್ದು ಇದು ವಹಿವಾಟು ಟ್ರಾಕ್ ಮಾಡುತ್ತದೆ 84 00:05:05,805 --> 00:05:09,976 ಇದಕ್ಕೆ ಬ್ಯಾಂಕ್‌, ಸರ್ಕಾರದ ಮೇಲೆ ವಿಶ್ವಾಸ ಇರಿಸಬೇಕಿಲ್ಲ. 85 00:05:10,601 --> 00:05:12,395 ಅದೊಂದೇ ಉದಾಹರಣೆ. 86 00:05:12,395 --> 00:05:15,064 ಜಮೀನಿನ ಮಾಲೀಕತ್ವ, ಒಪ್ಪಂದಗಳನ್ನು ಮಾಡಲು, ದಾಖಲೆ ದೃಢೀಕರಿಸಲು 87 00:05:15,064 --> 00:05:19,902 ನಿರ್ದಿಷ್ಟ ದಿನಾಂಕದಂದು ರಚಿಸಿದ ದಾಖಲೆ ಪರಿಶೀಲನೆ ಮಾಡಲು 88 00:05:20,570 --> 00:05:23,614 ಬ್ಲಾಕ್‌ಚೈನ್ ಅನ್ನು ಬಳಕೆ ಮಾಡಬಹುದಾಗಿದೆ. 89 00:05:23,740 --> 00:05:28,578 ಇವೆಲ್ಲವನ್ನೂ, ಇನ್ನಷ್ಟನ್ನು ಮಾಡಲು ಸೈದ್ಧಾಂತಿಕವಾಗಿ ಸಾಧ್ಯವಿದೆ 90 00:05:28,953 --> 00:05:31,914 ಸಾಂಪ್ರದಾಯಿಕ ವಿಶ್ವಾಸ ವ್ಯವಸ್ಥೆಯ ಮೇಲೆ ಅವಲಂಬಿಸದೇ. 91 00:05:32,498 --> 00:05:36,586 ಬ್ಲಾಕ್‌ಚೈನ್ ಸಂಪೂರ್ಣ ಸಾಮರ್ಥ್ಯ ಬಳಕೆ ಮಾಡಲು ಇನ್ನೂ ದೂರ ಸಾಗಬೇಕಿದೆ 92 00:05:36,919 --> 00:05:39,839 ಇದರ ಭವಿಷ್ಯದ ಬಗ್ಗೆ ಯಾವಾಗಲೂ ಚರ್ಚೆ ನಡೆಯುತ್ತಿರುತ್ತದೆ. 93 00:05:40,214 --> 00:05:42,967 ಸಮಾಜದಲ್ಲಿನ ಅಧಿಕಾರವನ್ನು ವಿಕೇಂದ್ರೀಕರಿಸಲು 94 00:05:42,967 --> 00:05:46,512 ಇದು ಭವಿಷ್ಯದ ಸಂಗತಿ ಎಂದು ಕೆಲವರು ನಂಬಿದ್ದಾರೆ. 95 00:05:46,846 --> 00:05:50,475 ಇನ್ನೂ ಕೆಲವರು, ಯಾವುದೇ ಉದ್ದೇಶವಿಲ್ಲದ ಒಂದು ಸ್ಕ್ಯಾಮ್ ಎಂದು ಹೇಳುತ್ತಾರೆ. 96 00:05:50,558 --> 00:05:54,604 ಈ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ ಎಂದು ನಾವು ಈ ಮುಂದಿನ ವೀಡಿಯೋದಲ್ಲಿ ನೋಡೋಣ. 97 00:05:54,604 --> 00:05:57,982 ನಂತರ, ವಿಭಿನ್ನ ದೃಷ್ಟಿಕೋನಗಳನ್ನು ಕೂಡಾ ನಾವು ನೋಡೋಣ.