-
ಹಾಯ, ನನ್ನ ಹೆಸರು ಮ್ಯಾಡಿಸನ್ ಮ್ಯಾಕ್ಸೆ.
-
ನನ್ನದು ಲೂಮಿಯಾ ಎಂಬ ಕಂಪನಿ ಇದೆ.
-
ಸ್ಮಾರ್ಟ್ ಬಟ್ಟೆ, ಸ್ಮಾರ್ಟ್ ಸರಕುಗಳಿಗೆ
ಸ್ಮಾರ್ಟ್ ಫ್ಯಾಬ್ರಿಕ್ ಸಂಶೋಧನೆ ಮಾಡುತ್ತೇವೆ
-
ಜವಳಿ ಕ್ಷೇತ್ರದಲ್ಲಿ ಆಕಾಶವೇ ಮಿತಿ.
-
ನಾನು ಡೇನಿಯಲ್ ಆಪಲ್‌ಸ್ಟೋನ್,
ಅದರ್‌ಮಶಿನ್ ಕಂಪನಿಯ ಸಿಇಒ ನಾನು.
-
ಡೆಸ್ಕ್‌ಟಾಪ್ ಮಿಲ್ಲಿಂಗ್
ಮಶಿನ್ ನಿರ್ಮಿಸುತ್ತೇವೆ.
-
ತಿರುಗುವ ಕಟಿಂಗ್ ಟೂಲ್‌ನಿಂದ 3D ವಸ್ತುವನ್ನು
ಮಿಲ್ಲಿಂಗ್ ಮಶಿನ್ ತಯಾರಿಸುತ್ತದೆ.
-
ಎಲ್ಲ ಕಂಪ್ಯೂಟರ್‌ಗಳೂ ಅದೇ ನಾಲ್ಕು ಮೂಲ
ಕೆಲಸಗಳನ್ನೇ ಮಾಡುತ್ತಿರುತ್ತವೆ.
-
ಮಾಹಿತಿ ಇನ್‌ಪುಟ್ ಮಾಡುತ್ತವೆ
-
ಮಾಹಿತಿಯನ್ನು ಸಂಗ್ರಹಿಸಿ, ಪ್ರೋಸೆಸ್ ಮಾಡುತ್ತವೆ
-
ನಂತರ, ಮಾಹಿತಿ ಔಟ್‌ಪುಟ್ ಮಾಡುತ್ತವೆ.
-
ಈ ಎಲ್ಲವನ್ನೂ ಕಂಪ್ಯೂಟರ್‌ನ
ವಿವಿಧ ಭಾಗಗಳು ಮಾಡುತ್ತವೆ.
-
ಹೊರಜಗತ್ತಿನಿಂದ ಇನ್‌ಪುಟ್ ತೆಗೆದುಕೊಂಡು
ಬೈನರಿಯಾಗಿ ಬದಲಿಸುವ ಇನ್‌ಪುಟ್ ಸಾಧನಗಳಿರುತ್ತವೆ.
-
ಈ ಮಾಹಿತಿ ಸಂಗ್ರಹಿಸಲು ಮೆಮೊರಿ ಇರುತ್ತದೆ.
-
ಸೆಂಟ್ರಲ್ ಪ್ರೊಸೆಸಿಂಗ್ ಯುನಿಟ್
ಸಿಪಿಯು ಇರುತ್ತದೆ.
-
ಇದರಲ್ಲಿ ಎಲ್ಲ ಲೆಕ್ಕ ನಡೆಯುತ್ತಿರುತ್ತದೆ.
-
ಕೊನೆಗೆ ಮಾಹಿತಿಯನ್ನು ಭೌತಿಕ ಔಟ್‌ಪುಟ್
ತೆಗೆಯುವ ಔಟ್‌ಪುಟ್ ಸಾಧನಗಲೂ ಇವೆ.
-
ಮೊದಲು ಇನ್‌ಪುಟ್ ಬಗ್ಗೆ ಮಾತನಾಡೋಣ.
-
ಇವು ಹಲವು ವಿಧದ ಇನ್‌ಪುಟ್ ತೆಗೆದುಕೊಳ್ಳಬಲ್ಲವು.
ಕಂಪ್ಯೂಟರ್ ಕೀಬೋರ್ಡ್, ಫೋನ್ ಟಚ್‌ಪ್ಯಾಡ್.
-
ಕ್ಯಾಮೆರಾ, ಮೈಕ್ರೋಫೋನ್, ಜಿಪಿಎಸ್ ಇತ್ಯಾದಿ
-
ಕಾರ್‌ನ ಸೆನ್ಸರ್, ಥರ್ಮೋಸ್ಟಾಟ್ ಅಥವಾ ಡ್ರೋನ್
ವಿಭಿನ್ನ ಇನ್‌ಪುಟ್ ಸಾಧನಗಳು.
-
ಈಗ, ಇನ್‌ಪುಟ್ ಹೇಗೆ ಔಟ್‌ಪುಟ್ ಆಗುತ್ತದೆ
ಎಂದು ಸರಳ ಉದಾಹರಣೆಯನ್ನು ನೋಡೋಣ.
-
ಕೀಬೋರ್ಡ್‌ನಲ್ಲಿ "ಬಿ" ಕೀ ಒತ್ತಿದಾಗ, ಅಕ್ಷವನ್ನು
ಸಂಖ್ಯೆಯನ್ನಾಗಿ ಕೀಬೋರ್ಡ್ ಪರಿವರ್ತಿಸುತ್ತದೆ.
-
ಆ ಸಂಖ್ಯೆ ಬೈನರಿಯಾಗಿ, ಒಂದು, ಸೊನ್ನೆಯಾಗಿ
ಕಂಪ್ಯೂಟರಿಗೆ ಹೋಗುತ್ತದೆ.
-
ಇದರಿಂದ ಬಿ ಅಕ್ಷರವನ್ನು ಹೇಗೆ ಪ್ರದರ್ಶಿಸಬೇಕು
ಎಂದು ಸಿಪಿಯು ಲೆಕ್ಕಾಚಾರ ಮಾಡುತ್ತದೆ.
-
ಮೆಮೊರಿಯಿಂದ ಹಂತ ಹಂತದ ಸೂಚನೆಗಳನ್ನು ಸಿಪಿಯು
ವಿನಂತಿಸಿ, ಬಿ ಬರೆಯೋದು ಹೇಗೆಂದು ಹೇಳುತ್ತದೆ
-
ಈ ಸೂಚನೆಗಳನ್ನು ಸಿಪಿಯು ರನ್ ಮಾಡಿ, ರಿಸಲ್ಟ್
ಮೆಮೊರಿಯಲ್ಲಿ ಪಿಕ್ಸೆಲ್ ಆಗಿ ಸ್ಟೋರ್ ಮಾಡುತ್ತದೆ.
-
ಅಂತಿಮವಾಗಿ, ಈ ಪಿಕ್ಸೆಲ್ ಮಾಹಿತಿಯನ್ನು
ಸ್ಕ್ರೀನ್‌ಗೆ ಬೈನರಿಯಾಗಿ ಕಳುಹಿಸಲಾಗುತ್ತದೆ.
-
ಸ್ಕ್ರೀನ್ ಔಟ್‌ಪುಟ್ ಸಾಧನ. ಬೈನರಿ ಸಿಗ್ನಲ್
ಬೆಳಕು, ಬಣ್ಣಗಳನ್ನಾಗಿ ಪರಿವರ್ತಿಸುತ್ತದೆ
-
ಇದು ತುಂಬಾ ಬೇಗ ನಡೆದುಹೋಗುತ್ತದೆ
-
ಆದರೆ ಪ್ರತಿ ಅಕ್ಷರ ತೋರಿಸಲು ಕಂಪ್ಯೂಟರ್
ಸಾವಿರಾರು ಸೂಚನೆ ರನ್ ಮಾಡಿರುತ್ತದೆ
-
ಮೆಮೊರಿಯಿಂದ ಕೀ ಪಾಯಿಂಟ್ ಅನ್ನು ನಿಮ್ಮ ಬೆರಳು
ಒತ್ತುವವರೆಗೆ.
-
ಆ ಉದಾಹರಣೆಯಲ್ಲಿ, ಔಟ್ಪುಟ್ ಸಾಧನ ಸ್ಕ್ರೀನ್.
ಹಾಗೆಯೇ ಹಲವು ಔಟ್‌ಪುಟ್ ಸಾಧನಗಳಿವೆ.
-
ಇವು ಕಂಪ್ಯೂಟರ್‌ನಿಂದ ಬೈನರಿ ಸಿಗ್ನಲ್ ಪಡೆದು
ಭೌತಿಕ ಜಗತ್ತಿನಲ್ಲಿ ಏನಾದರೂ ಮಾಡುತ್ತವೆ.
-
ಉದಾ., ಸ್ಪೀಕರ್ ಧ್ವನಿ ಪ್ಲೇ ಮಾಡುತ್ತದೆ
3D ಪ್ರಿಂಟರ್ ವಸ್ತುವನ್ನು ಪ್ರಿಂಟ್ ಮಾಡುತ್ತದೆ.
-
ರೋಬೋಟಿಕ್ ಆರ್ಮ್, ಕಾರ್ ಮೋಟಾರ್ ರನ್ ಮಾಡುವ
ಕೆಲವಸನ್ನೂ ಔಟ್‌ಪುಟ್ ಸಾಧನಗಳು ಮಾಡಬಹುದು.
-
ನನ್ನ ಕಂಪನಿ ತಯಾರಿಸುವ ಮಿಲ್ಲಿಂಗ್ ಮಶಿನ್‌ನ
ಕಟಿಂಗ್ ಟೂಲ್ ನಿಯಂತ್ರಣ.
-
ಹೊಸ ಇನ್‌ಪುಟ್, ಔಟ್‌ಪುಟ್‌ಗಳು ಹೊಸ ಹೊಸ ರೀತಿ
ಹೊರಜಗತ್ತಿನೊಂದಿಗೆ ಸಂವಹನ ನಡೆಸಲು ನೆರವಾಗುತ್ತವೆ
-
ಮೆಮೊರಿ ಮತ್ತು ಸಿಪಿಯು ವೇಗ ಮತ್ತು ಗಾತ್ರದ
ಸುಧಾರಣೆಯಿಂದ ಇದು ಸಾಧ್ಯವಾಗಿದೆ.
-
ಕೆಲಸ ಹೆಚ್ಚು ಕಷ್ಟದ್ದಾಗಿದ್ದಷ್ಟೂ, ಇನ್‌ಪುಟ್
ಔಟ್‌ಪುಟ್ ಮಾಹಿತಿ ಹೆಚ್ಚಿರುತ್ತದೆ
-
ಹೆಚ್ಚು ಪ್ರೊಸೆಸಿಂಗ್ ಪವರ್ ಮತ್ತು ಕಂಪ್ಯೂಟರ್
ಅಗತ್ಯವಿರುವ ಮೆಮೊರಿಯೂ ಹೆಚ್ಚಿರುತ್ತದೆ
-
ಸ್ಕ್ರೀನ್ ಮೇಲೆ ಟೈಪ್ ಮಾಡುವುದು ಸುಲಭ. ಆದರೆ,
3ಡಿ ಗ್ರಾಫಿಕ್ಸ್, ಎಚ್‌ಡಿ ಸಿನಿಮಾ ರೆಕಾರ್ಡ್‌ಗೆ
-
ಆಧುನಿಕ ಕಂಪ್ಯೂಟರ್‌ನಲ್ಲಿ ಎಲ್ಲ ಮಾಹಿತಿಯನ್ನು
ಹಲವು ಸಿಪಿಯು ಪ್ರೋಸೆಸ್ ಮಾಡಬೇಕು
-
ಹಲವು ಗಿಗಾಬೈಟ್ ಮೆಮೊರಿ ಸಂಗ್ರಹವಾಗಬೇಕು.
-
ಕಂಪ್ಯೂಟರ್‌ನಿಂದ ನೀವು ಏನನ್ನಾದರೂ ಮಾಡಬಹುದು
ಪ್ರತಿ ಆಕ್ಷನ್ ಕೂಡಾ:
-
ಭೌತಿಕ ಜಗತ್ತಿನಿಂದ ಮಾಹಿತಿ ಇನ್‌ಪುಟ್ ಮಾಡುವುದು
-
ಆ ಮಾಹಿತಿ ಸಂಗ್ರಹ ಮತ್ತು ಪ್ರೋಸೆಸ್ ಮಾಡುವುದು
-
ಪುನಃ ಭೌತಿಕ ಜಗತ್ತಿಗೆ ಔಟ್‌ಪುಟ್ ಅನ್ನು
ಪಡೆಯುವುದೇ ಆಗಿರುತ್ತದೆ.