< Return to Video

Joel & Ethan Coen - Shot | Reverse Shot

  • 0:04 - 0:07
    ಹಾಯ್ ನನ್ನ ಹೆಸರು ಟೋನಿ, ನೀವು ನೋಡ್ತಿರೋದು “ಒಂದೊಂದು ಫ್ರೇಂ ಕೂಡ ಪೇಂಟಿಂಗ್”
  • 0:08 - 0:11
    ಬಹುಶಃ ಸಿನಿಮಾ ವ್ಯಾಕರಣದಲ್ಲಿರೋ ಅತೀ ಬೇಸಿಕ್ ವಿಷಯ ಅಂದ್ರೆ ಇದೇ ಇರಬೇಕು:
  • 0:12 - 0:13
    ಶಾಟ್
  • 0:14 - 0:15
    ರಿವರ್ಸ್ ಶಾಟ್
  • 0:16 - 0:17
    ನೀವು ನೋಡೋ ಹೆಚ್ಚಿನದರಲ್ಲಿ
  • 0:22 - 0:24
    ನೀವು ನೋಡೋ ಹೆಚ್ಚಿನದರಲ್ಲಿ ಅದೇ ತುಂಬಿರುತ್ತೆ
  • 0:24 - 0:28
    ಬಹಳ ಮಂದಿ ಅದನ್ನ ಬರೇ ಡೈಲಾಗ್ ರೆಕಾರ್ಡ್ ಮಾಡೋದಕ್ಕೆ ಬಳಸೋ ತರ ಕಾಣುತ್ತೆ
  • 0:28 - 0:31
    ನಟರನ್ನ ಅಲ್ಲಾಡದಂಗೆ ಇರೋಕೆ ಹೇಳೋದು, ಎರಡ್ಮೂರು ಕ್ಯಾಮರ ಬಳಸೋದು
  • 0:31 - 0:33
    ಹತ್ತು ಶಾಟ್ ತಗೋಳೋದು,
    ಆಮೇಲೆ ಎಡಿಟಿಂಗಲ್ಲಿ ಡಿಸೈಡ್ ಮಾಡೋದು.
  • 0:34 - 0:37
    ಆದ್ರೆ ಶಾಟ್-ರಿವರ್ಸ್ ಶಾಟನ್ನ ಸರಿಯಾಗಿ ತೆಗೆದಾಗ ಇನ್ನೂ ಶಕ್ತಿಶಾಲಿಯಾಗಿರುತ್ತೆ ಅನ್ಸುತ್ತೆ ನನಿಗೆ.
  • 0:38 - 0:41
    ಅದಕ್ಕೆ ಅತ್ಯುತ್ತಮ ಉದಾಹರಣೆ ಅಂದ್ರೆ ಜೋವಲ್ & ಈತನ್ ಕೋವನ್ ಸಿನಿಮಾಗಳು.
  • 0:42 - 0:44
    -"ನಾವು ನೀನು..."
  • 0:45 - 0:47
    -"...ಕಪ್ಪೆಯಾಗಿದ್ದೆ ಅನ್ಕೊಂಡಿದ್ವಿ."
  • 0:48 - 0:54
    ಯಾಕಂದ್ರೆ ಕೋವನ್ ಅಣ್ತಮ್ಮಂದಿರು ಡೈಲಾಗ್ ಸೀನ್ ತೆಗೆಯೋದ್ರಲ್ಲಿ ಮಾಸ್ಟರ್ಗಳು
  • 0:54 - 0:56
    -"ನಾನು ನಿಂಗೊಂದು ವಿಷಯ ಹೇಳಬಹುದ?"
  • 0:57 - 0:59
    ಹಂಗಾಗಿ ಇವತ್ತು ಶಾಟ್-ರಿವರ್ಸ್ ಶಾಟ್ನ ಮತ್ತೊಂದ್ ಸಲ ಪರಿಶೀಲಿಸೋಣ
  • 1:00 - 1:02
    ಕೋವನ್ ಅಣ್ಣತಮ್ಮಂದ್ರಿಂದ ಅದರ ಬಗ್ಗೆ ಏನು ಕಲಿಯಬಹುದು?
  • 1:02 - 1:04
    -"ನಾನು ನಿಂಗೊಂದ್ ಪ್ರಶ್ನೆ ಕೇಳ್ತೀನಿ ತಡಿ..."
  • 1:04 - 1:07
    -"ಇದೆಲ್ಲ ತೆಪರ ನನ್ಮಕ್ಕಳಿಗೆ ಹೊಳಿಯುತ್ತ?"
  • 1:10 - 1:13
    ಕೋವನ್ ಅಣ್ಣತಮ್ಮಂದಿರಲ್ಲಿ ನೀವು ಗಮನಿಸೋ ಮೊದಲ ಅಂಶ ಅಂದ್ರೆ
  • 1:13 - 1:16
    ಅವರು ಮಾತಾಡೋರ ನಡುವೆ ಜಾಗ ಇರುತ್ತಲ್ಲ ಅಲ್ಲಿಂದ ಶೂಟ್ ಮಾಡಕೆ ಬಯಸ್ತಾರೆ
  • 1:17 - 1:20
    ಹಂಗಂದ್ರೆ ಕ್ಯಾಮರ ಸಾಮಾನ್ಯವಾಗಿ ಎರಡು ಪಾತ್ರಗಳ ನಡುವೆ ಇರುತ್ತೆ
  • 1:20 - 1:21
    ಎರಡೂ ಪಾತ್ರಗಳಿಗೂ ಸಪರೇಟ್ ಶಾಟ್ ಸಿಗಲಿ ಅಂತ
  • 1:22 - 1:24
    -"ಹೇಳಿದ್ದು ಅರ್ಥ ಆಯ್ತ?"
  • 1:25 - 1:27
    ಸಿಂಪಲ್ಲಾಗಿ ಹೇಳ್ಬೇಕಂದ್ರೆ ಪಾತ್ರಗಳ ಸಿಂಗಲ್ ಶಾಟ್ಸ್ ಬಹಳ ತೆಗಿತಾರೆ ಅವರು
  • 1:28 - 1:29
    -"ಏನಂದೆ ನಾನ್ ಕೇಳುಸ್ಕೊಳ್ಲಿಲ್ಲ"
  • 1:32 - 1:36
    ಇನ್ನ ಕೆಲವು ಮಂದಿ, ಪಾಲ್ ಗ್ರೀನ್ಗ್ರ್ಯಾಸ್ ತರದವರು
    ಕ್ಯಾಮರಾನ ಪಾತ್ರಗಳ ಹಿಂದೇನೆ ಜಾಸ್ತಿ ಇಡ್ತಾರೆ
  • 1:36 - 1:39
    ಸಾಮಾನ್ಯವಾಗಿ ಲಾಂಗ್ ಲೆನ್ಸ್ ಹಾಕಿರ್ತಾರಲ್ಲ ಹಂಗಾಗಿ ನಮಗೆ ಒಂತರ ಕದ್ದು ಕೇಳುಸ್ಕೋತಿದೀವಿ ಅನ್ನೋ ಫೀಲಿಂಗ್ ಬರುತ್ತೆ
  • 1:39 - 1:41
    -"ಏನಾಯ್ತು ಬೊಗಳು"
    -"ಏನಾಯ್ತು?"
  • 1:41 - 1:43
    -"ಜೇಸನ್ ಬೋರ್ನ್ ಆದಂಗಾಯ್ತು.
    ನಿನ್ನ ಫೈಲ್ಸ್ ಇದಾವೆ."
  • 1:45 - 1:46
    -"ಹಂಗಾದ್ರೆ ಸಾಕು ನಿಲ್ಸು ಪುರಾಣ."
  • 1:46 - 1:48
    ಕೋವನ್ ಅಣ್ಣತಮ್ಮ ಮತ್ತೆ ರೋಜರ್ ಡೀಕಿನ್ಸ್ ಹಿಂಗೆ ಮಾಡಲ್ಲ
  • 1:49 - 1:52
    ಹೇಳ್ಬೇಕಂದ್ರೆ ಅವರು ಹೆಚ್ಚುಕಮ್ಮಿ ಎಲ್ಲಾನು ತೆಗಿಯೋದು ವೈಡ್ ಲೆನ್ಸಲ್ಲೇ
  • 1:52 - 1:55
    -"ಪರ್ಸನಲ್ಲಾಗಿ ನನಿಗೆ ಲೆನ್ಸ್ ಬಗ್ಗೆ ತುಂಬ ಗಟ್ಟಿ ಫೀಲಿಂಗ್ ಇದೆ..."
  • 1:56 - 1:59
    -"...ನಾನಿಲ್ಲಿ ಕುತ್ಕೊಂಡಿದೀನಿ, ನೀವು ಅಲ್ಲಿಂದ ವಿಡಿಯೋ ತೆಗಿತಿದೀರ..."
  • 1:59 - 2:02
    -"...ಬಹುಶಃ ಸಿಂಗಲ್ ಶಾಟೇ ಇರಬೇಕು.
    ನಾನಾದ್ರೆ ಹಂಗ್ ಮಾಡೋದು ಕಡಿಮೆ."
  • 2:02 - 2:05
    -"ಯಾಕಂದ್ರೆ, ನನಿಗನ್ಸೋದು ಏನಂದ್ರೆ, ಕ್ಯಾಮರ ಎಲ್ಲಿರಬೇಕಂದ್ರೆ..."
  • 2:05 - 2:07
    -"ನಾನು ಇಲ್ಲಿ ಇದರ ಒಳಗಡೆಯಿಂದ ಶೂಟ್ ಮಾಡ್ತೀನಿ."
  • 2:08 - 2:11
    ವೈಡ್ ಲೆನ್ಸ್ ಹಾಕಿ ಕ್ಯಾಮರಾನ ಹತ್ತಿರ ತಂದ್ರೆ
  • 2:11 - 2:12
    ಹೆಂಗನಿಸುತ್ತೆ ಅಂದ್ರೆ
  • 2:13 - 2:15
    -"ಇದು ಬೇರೆ ತರ ಇದೆ ತಾನೆ? ಒಂತರ ನಾವೇ ಅಲ್ಲಿದ್ದಂಗೆ..."
  • 2:15 - 2:17
    -"ಒಬ್ಬರ ಜೊತೆ ಅಲ್ಲಿದೀವಿ ಅನ್ನೋ ತರ…"
  • 2:18 - 2:21
    -"...ಸೈಕಲಾಜಿಕಲ್ಲಾಗಿ ಅದರ ಪರಿಣಾಮನೇ ಬೇರೆ ಇರುತ್ತೆ…"
  • 2:22 - 2:23
    ಆದ್ರೆ ಯಾವ ಸೈಕಲಾಜಿಕಲ್ ಪರಿಣಾಮ ಅದು?
  • 2:24 - 2:27
    ಲಾಂಗ್ ಲೆನ್ಸಲ್ಲಿ ಕದ್ದು ಕೇಳುಸ್ಕೊಳೋ ಫೀಲ್ ಬಂದ್ರೆ, ಈ ವೈಡ್ ಲೆನ್ಸಲ್ಲಿ ಯಾವ ತರ ಫೀಲ್ ಬರುತ್ತೆ?
  • 2:28 - 2:30
    -"ನೋಡು ಇಲ್ನೋಡು ಏನೋ ಒಂದು ಭಾರೀ ತಪ್ಪಾಗಿದೆ!"
  • 2:30 - 2:32
    -"ನನಿಗೆ ಸ್ಯಾಂಟಾನ ಅಬ್ರಾಕ್ಸಸ್ ಬೇಡ.'"
  • 2:32 - 2:35
    -"ಈಗಷ್ಟೇ ಗಾಡೀಲಿ ಭಯಂಕರ ಆಕ್ಸಿಡೆಂಟ್ ಮಾಡ್ಕೊಂಡು ಬಂದಿದೀನಿ!"
  • 2:37 - 2:38
    ನಾನು ಹೇಳೋದಾದ್ರೆ ಎರಡು ತರ ಫೀಲ್ ಬರುತ್ತೆ:
  • 2:39 - 2:40
    ಒಂತರ ಅನ್ಕಂಫರ್ಟೆಬಲ್…
  • 2:43 - 2:45
    ಒಂತರ ತಮಾಷೆ
  • 2:45 - 2:46
    ಇವರಿಗದು ಸರಿಯಾಗಿ ಹೊಂದಿಕೆಯಾಗುತ್ತೆ
  • 2:47 - 2:49
    ಯಾಕಂದ್ರೆ ಕೋವನ್ ಅಣ್ಣತಮ್ಮ ಪಾತ್ರಗಳನ್ನ ಬೇರ್ಪಡಿಸೋಕೆ ಇಷ್ಟಪಡ್ತಾರೆ
  • 2:49 - 2:52
    ಪಾತ್ರಗಳಿಗೆ ಸಂಧರ್ಭದ ಮೇಲೆ ಹಿಡಿತ ಇರಲ್ಲ. ಅಂತ ಸಂಧರ್ಭಗಳನ್ನೇ ಜಾಸ್ತಿ ಸೃಷ್ಟಿ ಮಾಡ್ತಾರೆ.
  • 2:54 - 2:55
    ಈಗ ಲೆನ್ಸ್ ಇಲ್ಲಿರೋದ್ರಿಂದ
  • 2:55 - 2:58
    -"ಮೊದ್ಲೇ ಮಾತಾಡಿದ್ವಿ ತಾನೆ. ಮಾತು ಮಾತಾಗಿರಬೇಕು."
  • 2:58 - 3:01
    -”ಯಾರಿದು ಜೆರ್ರಿನ? ಅಲ್ಲಿ ಬ್ರೇನರ್ಡಲ್ಲಿ ಸತ್ರಲ್ಲ ಮೂವರು ಪಾಪದೋರು ಅವರಿಗೆ ಕೇಳು ಹೋಗು ಮಾತು ಮಾತಾಗಿರಬೇಕ ಅಲ್ವ ಅಂತ”
  • 3:02 - 3:04
    ಪಾತ್ರಗಳ ಜೊತೆ ನೀವೂ ಸಿಕ್ಕಾಕ್ಕೊಂಡಿದೀರಿ.
  • 3:04 - 3:05
    ಇನ್ನೊಂದು ಎಫೆಕ್ಟ್ ಅಂದ್ರೆ ನೋಟದ್ದು
  • 3:06 - 3:09
    ಕೋವನ್ ಅಣ್ಣತಮ್ಮ ಹೆಚ್ಚಿಗೆ 27mm ಅಥವಾ 32mm ಲೆನ್ಸಲ್ಲೇ ತೆಗಿಯೋದು
  • 3:09 - 3:12
    ಕೆಲವೊಂದ್ಸಲ ನಟರ ಮುಖಾನ ಅತೀ ಮಾಡಿ ತೋರ್ಸೋದಕ್ಕೆ ಕ್ಯಾಮರಾನ ಮುಂದೆ ತಳ್ತಾ ಹೋಗ್ತಾರೆ.
  • 3:13 - 3:16
    -”ಫ್ರ್ಯಾಂಕ್ ರಾಫೋ, ನನ್ನ ಭಾವಾನೇ ಅವನು. ಮೇನ್ ಹಜಾಮ ಆಗಿದ್ದ”
  • 3:16 - 3:17
    -"ಯಪ್ಪ ಏನ್ ಮಾತಾಡ್ತಿದ್ದ ಅಂದ್ರೆ ಅಷ್ಟಿಷ್ಟಲ್ಲ"
  • 3:18 - 3:20
    ವೈಡ್ ಲೆನ್ಸು ಹಾಕೋದ್ರಿಂದ ಬರೇ ಮುಖ ಅಷ್ಟೇ ಅತೀ ಆಗಲ್ಲ...
  • 3:21 - 3:25
    ...ಕ್ಯಾಮರ ಮುಂದೆ ಚಲಿಸೋದು ಕೂಡ ಅತೀ ಆಗಿ ಕಾಣ್ಸುತ್ತೆ. ಉದಾ: ಡಾಲಿಯಿಂದ ಕ್ಲೋಸ್ ಅಪ್ಗೆ ಹೋಗೋದು.
  • 3:26 - 3:27
    -”ಒಂತರ Actionನ ಭಾವ ಕೂಡ ಬರುತ್ತೆ”
  • 3:27 - 3:30
    -”ಉದಾಹರಣೆಗೆ ನಾನು ಹಿಂಗೆ ಕೈನ ಕ್ಯಾಮರಾದಿಂದ ಹತ್ತಿರ ಅಥವಾ ದೂರ ತಗೊಂಡು ಹೋದ್ರೆ…”
  • 3:30 - 3:32
    -”...ಅದು ವೈಡ್ ಲೆನ್ಸಲ್ಲಿ ಜಾಸ್ತಿ ಎಫೆಕ್ಟಿವ್ವಾಗಿ ಬರುತ್ತೆ.”
  • 3:33 - 3:35
    -”ಬರೇ ಹಿಂಗೆ ಅಲುಗಾಡಿದ್ರೂ ಕೂಡ.”
  • 3:36 - 3:39
    -”ಆಗಿರಬಹುದು ಅಂದ್ರೆ ಏನ್ ನಿಜ ಆಗಲ್ಲ”
  • 3:40 - 3:41
    -”ಹಂಗ್ ಮಾಡ್ದಾಗ ಹೆಚ್ಚು ಜೀವಂತಿಕೆ ಬರುತ್ತೆ. ಹೆಚ್ಚು ಬಿಗಿಯಾಗಿರುತ್ತೆ.
  • 3:43 - 3:46
    -"ಇದೇನು ಕನಸು ಅಲ್ಲ ತಾನೆ?
    ನಮ್ಮ ಸಂಸಾರ ಆನಂದ ಸಾಗರ ಆಯ್ತಲ್ಲ!"
  • 3:47 - 3:48
    ಈ ತರ ಶೂಟ್ ಮಾಡೋದ್ರ ಮೂರನೇ ಎಫೆಕ್ಟ್ ಏನಂದ್ರೆ...
  • 3:50 - 3:51
    ...ಸುತ್ತಮುತ್ತಲನ್ನೆಲ್ಲ ತೋರಿಸೋಕೆ ಅನುಕೂಲ
  • 3:52 - 3:54
    ...ಈ ತರ ಶಾಟ್ಗಳು ಪಾತ್ರಗಳು ಮತ್ತೆ ಅವರ ಸುತ್ತಮುತ್ತಲ ವಾತಾವರಣದ ನಡುವೆ ಒಂದು ಹದವಾದ ಬ್ಯಾಲೆನ್ಸ್ ತರುತ್ತೆ...
  • 3:54 - 3:56
    ...ಆ ಪಾತ್ರದ ಮತ್ತೆ ಆಕೆ ಸುತ್ತಮುತ್ತಲ ಪರಿಸರದ ನಡುವೆ.
  • 3:57 - 4:00
    -"ಕೊಲೆಗಾರ ನಮ್ಮ ಬ್ರೇನರ್ಡ್ನವನು ಆಗಿರಲಿಕ್ಕಿಲ್ಲ."
  • 4:00 - 4:01
    -"ಹೂಂ."
  • 4:02 - 4:04
    ಸಣ್ಣಸಣ್ಣ ಪಾತ್ರಗಳ ಬಗ್ಗೆ ಚಕಾಚಕ್ ಅಂತ ತಿಳ್ಕೊಳೋಕೂ ಸಹಾಯ ಆಗುತ್ತೆ.
  • 4:05 - 4:09
    ಬರೇ ಆಯಮ್ಮ ಕೆಲ್ಸ ಮಾಡೋ ಜಾಗ ಮತ್ತೆ ಆಕೆಯ ಬಟ್ಟೆಬರೆಯಿಂದಾನೆ ಆಕೆಯ ಬಗ್ಗೆ ಎಷ್ಟೊಂದು ವಿಷಯ ಗೊತ್ತಾಗುತ್ತೆ ಯೋಚ್ನೆ ಮಾಡಿ.
  • 4:10 - 4:12
    -"ನಾವೇನೂ ಮಾಹಿತಿ ಕೊಡಕಾಗಲ್ಲ ಇವ್ರೇ."
  • 4:15 - 4:17
    ಆದ್ರೆ ಕೋವನ್ ಅಣ್ಣತಮ್ಮ ಬೇರೆಯವರಿಗಿಂತ ಬೇರೆ ಅನ್ನುಸ್ಕೊಳ್ಳೋದು...
  • 4:17 - 4:19
    ...ಅವರ ಎಡಿಟಿಂಗಿನ ರಿದಮ್ನಿಂದ.
  • 4:19 - 4:20
    -"ಶೇರ್ ಬೆಲೆ ಕಮ್ಮಿ ಮಾಡನ."
  • 4:21 - 4:23
    -" 50% ನಾವೇ ತಗೊಳೋ ಮಟ್ಟಕ್ಕೆ"
  • 4:23 - 4:24
    -"ಮಾಳಿಗೆ ಬಿಟ್ಟು."
  • 4:24 - 4:26
    -"ವರ್ಕ್ ಆಗಬಹುದು ಅನ್ಸುತ್ತೆ!"
    -"ವರ್ಕ್ ಆಗಬೇಕು!"
  • 4:26 - 4:28
    -"ವರ್ಕ್ ಆಗುತ್ತೆ!"
    -"ಆಗ್ಲೇ ವರ್ಕ್ ಆಗ್ತೈತಲ್ಲ!"
  • 4:29 - 4:32
    ಬಹಳ ಜನ ರಿದಮ್ಮು ಡೈಲಾಗಿಂದ ಬರುತ್ತೆ ಅನ್ಕೊಂಡಿರ್ತಾರೆ.
  • 4:32 - 4:34
    ಆದ್ರೆ ರಿದಮ್ ಅನ್ನೋದು ಮಾತಲ್ಲ
  • 4:43 - 4:46
    ಒಳ್ಳೇ ರಿದಮ್ ಯಾವುದು ಅಂತ ಗೊತ್ತಾಗಬೇಕಂದ್ರೆ ಕೆಟ್ಟದಾಗಿ ಮಾಡಿರ್ತಾರಲ್ಲ ಅದನ್ನ ನೋಡ್ಬೇಕು
  • 4:46 - 4:48
    ಇದು ಅಣ್ತಮ್ಮ ಬರೆದು ಬೇರೆ ಯಾರೋ ಡೈರೆಕ್ಟ್ ಮಾಡಿದ ಫಿಲ್ಮು.
  • 4:48 - 4:52
    ಎರಡು ಡೈಲಾಗ್ ಮಧ್ಯ ಇರೋ ಇರುಸುಮುರಿಸು ಅನ್ನೋ ಅಂತ ಸೈಲೆನ್ಸ್ ಗಮನಿಸಿ
  • 4:52 - 4:53
    -"ನಾನೇನು ಜಡ್ಜ್ ಮಾಡ್ತಿಲ್ಲ."
  • 4:54 - 4:55
    -"ಎಷ್ಟ್ ಇಂಟ್ರೆಸ್ಟಿಂಗ್ ಐತಲ್ಲೋ."
  • 4:56 - 4:59
    -”ಡಿಸ್ಕ್ರಿಪ್ಶನ್ ಟೂರ್ನಮೆಂಟ್ ಏನಾದ್ರು ಐತ?”
  • 5:00 - 5:01
    ಇದು ಅಷ್ಟು ಪಕ್ಕಾ ಅನಿಸೋದೇ ಇಲ್ಲ
  • 5:02 - 5:04
    ಈಗ ಇದನ್ನ ನೋಡಿ, ಅವರೇ ಡೈರೆಕ್ಟ್ ಮಾಡಿದ್ದು.
  • 5:06 - 5:07
    -"ಸಿಗರೆಟ್ ಬೇಕ?"
  • 5:11 - 5:12
    -"ಓ ಸರಿ."
  • 5:12 - 5:15
    ಈ ರಿದಮ್ಮೇ ಅವರ ಬಹಳಷ್ಟು ಸೀನ್ಗಳ ಜೀವಾಳ
  • 5:15 - 5:18
    ಬೇರೆ ನಿರ್ದೇಶಕರು ಉದಾಸೀನ ಮಾಡೋ ಇಂತ ಮಾತಿಲ್ಲದ ಕ್ಷಣಗಳನ್ನ ಇವರು ಹಿಡಿಯೋದು ಹಿಂಗೆ.
  • 5:24 - 5:27
    ಆದ್ರೆ ಇಷ್ಟೆಲ್ಲ ಮಾಡೋದ್ರಿಂದ ಏನು ಮಾಡ್ದಂಗಾಗುತ್ತೆ?
  • 5:27 - 5:28
    ನನಿಗನ್ಸೋದು ಇದು ಒಂದು ನಿರ್ದಿಷ್ಟವಾದ ಟೋನ್ ಕ್ರಿಯೇಟ್ ಮಾಡುತ್ತೆ.
  • 5:29 - 5:31
    ಯಾಕಂದ್ರೆ ಅಣ್ತಮ್ಮ ಒಂದು ಕಡೆ ಆ ಪಾತ್ರಗಳನ್ನ ನೋಡಿ ನಾವು ನಗಬೇಕಂತ ಮಾಡ್ತಾರೆ
  • 5:36 - 5:38
    ಅವರು ವೈಡ್ ಲೆನ್ಸ್ ಹಾಕಿ ಮುಖ ಅತೀ ಮಾಡೋದೂ ಇದೇ ಕಾರಣಕ್ಕೆ
  • 5:39 - 5:41
    ಮತ್ತೆ ಸೀನ್ನ ಕಾಮಿಡಿ ಟೈಮಿಂಗ್ ನೋಡ್ಕೊಂಡು ಕಟ್ತಾರೆ.
  • 5:48 - 5:51
    ಇನ್ನೊಂದು ಕಡೆ ಪಾತ್ರಗಳ ಮನಸ್ಸನ್ನ ನಾವು ತಿಳಿದುಕೊಳ್ಳಲಿ ಅನ್ನೋದೂ ಅವರ ಉದ್ದೇಶ
  • 5:51 - 5:54
    ಪಾತ್ರಗಳ ಸುತ್ತಲಿನ ಪರಿಸರ ಕಾಣಲಿ ಅಂತ ವೈಡ್ ಫ್ರೇಮ್ ಇಡ್ತಾರೆ
  • 5:54 - 5:56
    ...ಪಾತ್ರಗಳ ಕೆಳಗಿನ ಪಾಯಿಂಟಲ್ಲೇ ಲೆನ್ಸ್ ಇಟ್ಟಿರ್ತಾರೆ
  • 5:58 - 5:59
    -"ನಾನು ಸಾಯ್ತಿದೀನಿ."
  • 6:01 - 6:03
    -"ಏನಾದ್ರು ಮಾಡು. ಸಹಾಯ ಮಾಡು!"
  • 6:04 - 6:07
    ಒಂದು ನಾಣ್ಣುಡಿ ಇದೆ:
    ಟ್ರ್ಯಾಜಿಡಿ ಅಂದ್ರೆ ಕ್ಲೋಸಪ್ಪು.
  • 6:07 - 6:10
    ಕಾಮಿಡಿ ಅಂದ್ರೆ ಲಾಂಗ್ ಶಾಟು ಅಂತ
  • 6:11 - 6:14
    ಆದ್ರೆ ಅಣ್ತಮ್ಮಂದ್ರ ವಿಷಯದಲ್ಲಿ ಅದು ಕಲಸಂಬಳಸ.
  • 6:14 - 6:17
    ಟ್ರ್ಯಾಜಿಡಿ & ಕಾಮಿಡಿ ಎರಡನ್ನೂ ಅವರು ಹತ್ತಿರದಿಂದ ಸಿಂಗಲ್ಸಲ್ಲೇ ಮಾಡ್ತಾರೆ.
  • 6:18 - 6:20
    -"ನಂಗೆ ಮೈಕ್ ನೆನಪಾಗ್ತಾನೆ."
  • 6:21 - 6:22
    ಅದು ಮೋಡಿಗೊಳಿಸೋ ಅಂತ ಅಂಶ ಅಂದ್ರೆ
  • 6:23 - 6:25
    ಯಾಕಂದ್ರೆ ಡೈಲಾಗ್ ಸೀನಂದ್ರೆ ಬರೇ ಡೈಲಾಗ್ ರೆಕಾರ್ಡ್ ಮಾಡೋದಲ್ಲ.
  • 6:26 - 6:28
    ಮಾತಿಲ್ಲದ ನಡವಳಿಕೆಗಳೂ ಅಷ್ಟೇ ಮುಖ್ಯ.
  • 6:29 - 6:31
    -”ಇದೇನು ನಿನಿಗೆ ಅಂತ ದೊಡ್ಡ ವಿಷಯ ಅಲ್ಲ ಅಲ್ಲಬಿಡು"
  • 6:31 - 6:33
    -"ಹೂ ಮತ್ತೆ,
    ಕತೆ ಕತೆ ಇದಾವೆ. ಬೇಕಾದ್ರೆ ಹೇಳ್ತೀನಿ…"
  • 6:33 - 6:36
    -"ಅದೇ ಹೇಳ್ತಿರೋದು!
    ನಮ್ಮೆಲ್ಲರ ಹತ್ರಾನೂ ಕತೆಗಳಿದಾವೆ..."
  • 6:37 - 6:38
    ಕ್ಯಾಮರಾನ ಇಲ್ಲಿ ಇಟ್ಟು
  • 6:39 - 6:41
    ವೈಡ್ ಲೆನ್ಸ್ ಹಾಕಿ,
    ಅವರ ಮಾಮೂಲಿ ರಿದಮ್ ಮಾಡ್ಕೊಂಡು
  • 6:42 - 6:44
    ಈ ಅಣ್ತಮ್ಮಂದ್ರು ಸಿಂಪಲ್ ಟೂಲ್ ಇಟ್ಕೊಂಡು ಒಂದೊಳ್ಳೆ ವಿಧಾನ ಕಂಡುಕೊಂಡಿದಾರೆ
  • 6:45 - 6:46
    ಶಾಟು
  • 6:48 - 6:49
    ರಿವರ್ಸ್ ಶಾಟು
Title:
Joel & Ethan Coen - Shot | Reverse Shot
Description:

How do you film a conversation? Most likely, you’re going to block the actors, set up the camera, and do shot/reverse shot. But where do you put the camera? What lens do you use? And how do you cut back and forth? Today, I consider the Coen brothers — Joel & Ethan — and see how these choices lend a particular feel to their version of shot/reverse shot.

For educational purposes only. You can donate to support the channel at
Patreon: http://www.patreon.com/everyframeapainting

This video was co-written with Taylor Ramos. Follow her on:
Instagram: https://instagram.com/taylor.ramos/
Twitter: https://twitter.com/glassesattached

And follow me here:
Twitter: https://twitter.com/tonyszhou
Facebook: https://www.facebook.com/everyframeapainting

Music:
Carter Burwell - Way Out There (Raising Arizona)
Carter Burwell - A Serious Man
Carter Burwell - Little Blackie (True Grit)
Carter Burwell - End Titles (Miller’s Crossing)
Creedence Clearwater Revival - Run Through the Jungle

Interview Clips:
Cinematographer Style: https://vid.me/L5aW/cinematographer-style-2006

Recommended Reading & Viewing:
ASC Magazine on Bruno Delbonnel & Inside Llewyn Davis: http://bit.ly/1OxkCoP
ASC Magazine’s profile of Roger Deakins: http://bit.ly/1TGUNKV
Roger Deakins forum post on the lenses he uses: http://bit.ly/1KNKToa

more » « less
Video Language:
English
Duration:
07:05
ರಾಘವೇಂದ್ರ ಮಾಯಕೊಂಡ edited Kannada subtitles for Joel & Ethan Coen - Shot | Reverse Shot
ರಾಘವೇಂದ್ರ ಮಾಯಕೊಂಡ edited Kannada subtitles for Joel & Ethan Coen - Shot | Reverse Shot
ರಾಘವೇಂದ್ರ ಮಾಯಕೊಂಡ edited Kannada subtitles for Joel & Ethan Coen - Shot | Reverse Shot
ರಾಘವೇಂದ್ರ ಮಾಯಕೊಂಡ edited Kannada subtitles for Joel & Ethan Coen - Shot | Reverse Shot
ರಾಘವೇಂದ್ರ ಮಾಯಕೊಂಡ edited Kannada subtitles for Joel & Ethan Coen - Shot | Reverse Shot
ರಾಘವೇಂದ್ರ ಮಾಯಕೊಂಡ edited Kannada subtitles for Joel & Ethan Coen - Shot | Reverse Shot

Kannada subtitles

Revisions

  • Revision 6 Edited
    ರಾಘವೇಂದ್ರ ಮಾಯಕೊಂಡ