ಹಾಯ್ ನನ್ನ ಹೆಸರು ಟೋನಿ, ನೀವು ನೋಡ್ತಿರೋದು “ಒಂದೊಂದು ಫ್ರೇಂ ಕೂಡ ಪೇಂಟಿಂಗ್” ಬಹುಶಃ ಸಿನಿಮಾ ವ್ಯಾಕರಣದಲ್ಲಿರೋ ಅತೀ ಬೇಸಿಕ್ ವಿಷಯ ಅಂದ್ರೆ ಇದೇ ಇರಬೇಕು: ಶಾಟ್ ರಿವರ್ಸ್ ಶಾಟ್ ನೀವು ನೋಡೋ ಹೆಚ್ಚಿನದರಲ್ಲಿ ನೀವು ನೋಡೋ ಹೆಚ್ಚಿನದರಲ್ಲಿ ಅದೇ ತುಂಬಿರುತ್ತೆ ಬಹಳ ಮಂದಿ ಅದನ್ನ ಬರೇ ಡೈಲಾಗ್ ರೆಕಾರ್ಡ್ ಮಾಡೋದಕ್ಕೆ ಬಳಸೋ ತರ ಕಾಣುತ್ತೆ ನಟರನ್ನ ಅಲ್ಲಾಡದಂಗೆ ಇರೋಕೆ ಹೇಳೋದು, ಎರಡ್ಮೂರು ಕ್ಯಾಮರ ಬಳಸೋದು ಹತ್ತು ಶಾಟ್ ತಗೋಳೋದು, ಆಮೇಲೆ ಎಡಿಟಿಂಗಲ್ಲಿ ಡಿಸೈಡ್ ಮಾಡೋದು. ಆದ್ರೆ ಶಾಟ್-ರಿವರ್ಸ್ ಶಾಟನ್ನ ಸರಿಯಾಗಿ ತೆಗೆದಾಗ ಇನ್ನೂ ಶಕ್ತಿಶಾಲಿಯಾಗಿರುತ್ತೆ ಅನ್ಸುತ್ತೆ ನನಿಗೆ. ಅದಕ್ಕೆ ಅತ್ಯುತ್ತಮ ಉದಾಹರಣೆ ಅಂದ್ರೆ ಜೋವಲ್ & ಈತನ್ ಕೋವನ್ ಸಿನಿಮಾಗಳು. -"ನಾವು ನೀನು..." -"...ಕಪ್ಪೆಯಾಗಿದ್ದೆ ಅನ್ಕೊಂಡಿದ್ವಿ." ಯಾಕಂದ್ರೆ ಕೋವನ್ ಅಣ್ತಮ್ಮಂದಿರು ಡೈಲಾಗ್ ಸೀನ್ ತೆಗೆಯೋದ್ರಲ್ಲಿ ಮಾಸ್ಟರ್ಗಳು -"ನಾನು ನಿಂಗೊಂದು ವಿಷಯ ಹೇಳಬಹುದ?" ಹಂಗಾಗಿ ಇವತ್ತು ಶಾಟ್-ರಿವರ್ಸ್ ಶಾಟ್ನ ಮತ್ತೊಂದ್ ಸಲ ಪರಿಶೀಲಿಸೋಣ ಕೋವನ್ ಅಣ್ಣತಮ್ಮಂದ್ರಿಂದ ಅದರ ಬಗ್ಗೆ ಏನು ಕಲಿಯಬಹುದು? -"ನಾನು ನಿಂಗೊಂದ್ ಪ್ರಶ್ನೆ ಕೇಳ್ತೀನಿ ತಡಿ..." -"ಇದೆಲ್ಲ ತೆಪರ ನನ್ಮಕ್ಕಳಿಗೆ ಹೊಳಿಯುತ್ತ?" ಕೋವನ್ ಅಣ್ಣತಮ್ಮಂದಿರಲ್ಲಿ ನೀವು ಗಮನಿಸೋ ಮೊದಲ ಅಂಶ ಅಂದ್ರೆ ಅವರು ಮಾತಾಡೋರ ನಡುವೆ ಜಾಗ ಇರುತ್ತಲ್ಲ ಅಲ್ಲಿಂದ ಶೂಟ್ ಮಾಡಕೆ ಬಯಸ್ತಾರೆ ಹಂಗಂದ್ರೆ ಕ್ಯಾಮರ ಸಾಮಾನ್ಯವಾಗಿ ಎರಡು ಪಾತ್ರಗಳ ನಡುವೆ ಇರುತ್ತೆ ಎರಡೂ ಪಾತ್ರಗಳಿಗೂ ಸಪರೇಟ್ ಶಾಟ್ ಸಿಗಲಿ ಅಂತ -"ಹೇಳಿದ್ದು ಅರ್ಥ ಆಯ್ತ?" ಸಿಂಪಲ್ಲಾಗಿ ಹೇಳ್ಬೇಕಂದ್ರೆ ಪಾತ್ರಗಳ ಸಿಂಗಲ್ ಶಾಟ್ಸ್ ಬಹಳ ತೆಗಿತಾರೆ ಅವರು -"ಏನಂದೆ ನಾನ್ ಕೇಳುಸ್ಕೊಳ್ಲಿಲ್ಲ" ಇನ್ನ ಕೆಲವು ಮಂದಿ, ಪಾಲ್ ಗ್ರೀನ್ಗ್ರ್ಯಾಸ್ ತರದವರು ಕ್ಯಾಮರಾನ ಪಾತ್ರಗಳ ಹಿಂದೇನೆ ಜಾಸ್ತಿ ಇಡ್ತಾರೆ ಸಾಮಾನ್ಯವಾಗಿ ಲಾಂಗ್ ಲೆನ್ಸ್ ಹಾಕಿರ್ತಾರಲ್ಲ ಹಂಗಾಗಿ ನಮಗೆ ಒಂತರ ಕದ್ದು ಕೇಳುಸ್ಕೋತಿದೀವಿ ಅನ್ನೋ ಫೀಲಿಂಗ್ ಬರುತ್ತೆ -"ಏನಾಯ್ತು ಬೊಗಳು" -"ಏನಾಯ್ತು?" -"ಜೇಸನ್ ಬೋರ್ನ್ ಆದಂಗಾಯ್ತು. ನಿನ್ನ ಫೈಲ್ಸ್ ಇದಾವೆ." -"ಹಂಗಾದ್ರೆ ಸಾಕು ನಿಲ್ಸು ಪುರಾಣ." ಕೋವನ್ ಅಣ್ಣತಮ್ಮ ಮತ್ತೆ ರೋಜರ್ ಡೀಕಿನ್ಸ್ ಹಿಂಗೆ ಮಾಡಲ್ಲ ಹೇಳ್ಬೇಕಂದ್ರೆ ಅವರು ಹೆಚ್ಚುಕಮ್ಮಿ ಎಲ್ಲಾನು ತೆಗಿಯೋದು ವೈಡ್ ಲೆನ್ಸಲ್ಲೇ -"ಪರ್ಸನಲ್ಲಾಗಿ ನನಿಗೆ ಲೆನ್ಸ್ ಬಗ್ಗೆ ತುಂಬ ಗಟ್ಟಿ ಫೀಲಿಂಗ್ ಇದೆ..." -"...ನಾನಿಲ್ಲಿ ಕುತ್ಕೊಂಡಿದೀನಿ, ನೀವು ಅಲ್ಲಿಂದ ವಿಡಿಯೋ ತೆಗಿತಿದೀರ..." -"...ಬಹುಶಃ ಸಿಂಗಲ್ ಶಾಟೇ ಇರಬೇಕು. ನಾನಾದ್ರೆ ಹಂಗ್ ಮಾಡೋದು ಕಡಿಮೆ." -"ಯಾಕಂದ್ರೆ, ನನಿಗನ್ಸೋದು ಏನಂದ್ರೆ, ಕ್ಯಾಮರ ಎಲ್ಲಿರಬೇಕಂದ್ರೆ..." -"ನಾನು ಇಲ್ಲಿ ಇದರ ಒಳಗಡೆಯಿಂದ ಶೂಟ್ ಮಾಡ್ತೀನಿ." ವೈಡ್ ಲೆನ್ಸ್ ಹಾಕಿ ಕ್ಯಾಮರಾನ ಹತ್ತಿರ ತಂದ್ರೆ ಹೆಂಗನಿಸುತ್ತೆ ಅಂದ್ರೆ -"ಇದು ಬೇರೆ ತರ ಇದೆ ತಾನೆ? ಒಂತರ ನಾವೇ ಅಲ್ಲಿದ್ದಂಗೆ..." -"ಒಬ್ಬರ ಜೊತೆ ಅಲ್ಲಿದೀವಿ ಅನ್ನೋ ತರ…" -"...ಸೈಕಲಾಜಿಕಲ್ಲಾಗಿ ಅದರ ಪರಿಣಾಮನೇ ಬೇರೆ ಇರುತ್ತೆ…" ಆದ್ರೆ ಯಾವ ಸೈಕಲಾಜಿಕಲ್ ಪರಿಣಾಮ ಅದು? ಲಾಂಗ್ ಲೆನ್ಸಲ್ಲಿ ಕದ್ದು ಕೇಳುಸ್ಕೊಳೋ ಫೀಲ್ ಬಂದ್ರೆ, ಈ ವೈಡ್ ಲೆನ್ಸಲ್ಲಿ ಯಾವ ತರ ಫೀಲ್ ಬರುತ್ತೆ? -"ನೋಡು ಇಲ್ನೋಡು ಏನೋ ಒಂದು ಭಾರೀ ತಪ್ಪಾಗಿದೆ!" -"ನನಿಗೆ ಸ್ಯಾಂಟಾನ ಅಬ್ರಾಕ್ಸಸ್ ಬೇಡ.'" -"ಈಗಷ್ಟೇ ಗಾಡೀಲಿ ಭಯಂಕರ ಆಕ್ಸಿಡೆಂಟ್ ಮಾಡ್ಕೊಂಡು ಬಂದಿದೀನಿ!" ನಾನು ಹೇಳೋದಾದ್ರೆ ಎರಡು ತರ ಫೀಲ್ ಬರುತ್ತೆ: ಒಂತರ ಅನ್ಕಂಫರ್ಟೆಬಲ್… ಒಂತರ ತಮಾಷೆ ಇವರಿಗದು ಸರಿಯಾಗಿ ಹೊಂದಿಕೆಯಾಗುತ್ತೆ ಯಾಕಂದ್ರೆ ಕೋವನ್ ಅಣ್ಣತಮ್ಮ ಪಾತ್ರಗಳನ್ನ ಬೇರ್ಪಡಿಸೋಕೆ ಇಷ್ಟಪಡ್ತಾರೆ ಪಾತ್ರಗಳಿಗೆ ಸಂಧರ್ಭದ ಮೇಲೆ ಹಿಡಿತ ಇರಲ್ಲ. ಅಂತ ಸಂಧರ್ಭಗಳನ್ನೇ ಜಾಸ್ತಿ ಸೃಷ್ಟಿ ಮಾಡ್ತಾರೆ. ಈಗ ಲೆನ್ಸ್ ಇಲ್ಲಿರೋದ್ರಿಂದ -"ಮೊದ್ಲೇ ಮಾತಾಡಿದ್ವಿ ತಾನೆ. ಮಾತು ಮಾತಾಗಿರಬೇಕು." -”ಯಾರಿದು ಜೆರ್ರಿನ? ಅಲ್ಲಿ ಬ್ರೇನರ್ಡಲ್ಲಿ ಸತ್ರಲ್ಲ ಮೂವರು ಪಾಪದೋರು ಅವರಿಗೆ ಕೇಳು ಹೋಗು ಮಾತು ಮಾತಾಗಿರಬೇಕ ಅಲ್ವ ಅಂತ” ಪಾತ್ರಗಳ ಜೊತೆ ನೀವೂ ಸಿಕ್ಕಾಕ್ಕೊಂಡಿದೀರಿ. ಇನ್ನೊಂದು ಎಫೆಕ್ಟ್ ಅಂದ್ರೆ ನೋಟದ್ದು ಕೋವನ್ ಅಣ್ಣತಮ್ಮ ಹೆಚ್ಚಿಗೆ 27mm ಅಥವಾ 32mm ಲೆನ್ಸಲ್ಲೇ ತೆಗಿಯೋದು ಕೆಲವೊಂದ್ಸಲ ನಟರ ಮುಖಾನ ಅತೀ ಮಾಡಿ ತೋರ್ಸೋದಕ್ಕೆ ಕ್ಯಾಮರಾನ ಮುಂದೆ ತಳ್ತಾ ಹೋಗ್ತಾರೆ. -”ಫ್ರ್ಯಾಂಕ್ ರಾಫೋ, ನನ್ನ ಭಾವಾನೇ ಅವನು. ಮೇನ್ ಹಜಾಮ ಆಗಿದ್ದ” -"ಯಪ್ಪ ಏನ್ ಮಾತಾಡ್ತಿದ್ದ ಅಂದ್ರೆ ಅಷ್ಟಿಷ್ಟಲ್ಲ" ವೈಡ್ ಲೆನ್ಸು ಹಾಕೋದ್ರಿಂದ ಬರೇ ಮುಖ ಅಷ್ಟೇ ಅತೀ ಆಗಲ್ಲ... ...ಕ್ಯಾಮರ ಮುಂದೆ ಚಲಿಸೋದು ಕೂಡ ಅತೀ ಆಗಿ ಕಾಣ್ಸುತ್ತೆ. ಉದಾ: ಡಾಲಿಯಿಂದ ಕ್ಲೋಸ್ ಅಪ್ಗೆ ಹೋಗೋದು. -”ಒಂತರ Actionನ ಭಾವ ಕೂಡ ಬರುತ್ತೆ” -”ಉದಾಹರಣೆಗೆ ನಾನು ಹಿಂಗೆ ಕೈನ ಕ್ಯಾಮರಾದಿಂದ ಹತ್ತಿರ ಅಥವಾ ದೂರ ತಗೊಂಡು ಹೋದ್ರೆ…” -”...ಅದು ವೈಡ್ ಲೆನ್ಸಲ್ಲಿ ಜಾಸ್ತಿ ಎಫೆಕ್ಟಿವ್ವಾಗಿ ಬರುತ್ತೆ.” -”ಬರೇ ಹಿಂಗೆ ಅಲುಗಾಡಿದ್ರೂ ಕೂಡ.” -”ಆಗಿರಬಹುದು ಅಂದ್ರೆ ಏನ್ ನಿಜ ಆಗಲ್ಲ” -”ಹಂಗ್ ಮಾಡ್ದಾಗ ಹೆಚ್ಚು ಜೀವಂತಿಕೆ ಬರುತ್ತೆ. ಹೆಚ್ಚು ಬಿಗಿಯಾಗಿರುತ್ತೆ. -"ಇದೇನು ಕನಸು ಅಲ್ಲ ತಾನೆ? ನಮ್ಮ ಸಂಸಾರ ಆನಂದ ಸಾಗರ ಆಯ್ತಲ್ಲ!" ಈ ತರ ಶೂಟ್ ಮಾಡೋದ್ರ ಮೂರನೇ ಎಫೆಕ್ಟ್ ಏನಂದ್ರೆ... ...ಸುತ್ತಮುತ್ತಲನ್ನೆಲ್ಲ ತೋರಿಸೋಕೆ ಅನುಕೂಲ ...ಈ ತರ ಶಾಟ್ಗಳು ಪಾತ್ರಗಳು ಮತ್ತೆ ಅವರ ಸುತ್ತಮುತ್ತಲ ವಾತಾವರಣದ ನಡುವೆ ಒಂದು ಹದವಾದ ಬ್ಯಾಲೆನ್ಸ್ ತರುತ್ತೆ... ...ಆ ಪಾತ್ರದ ಮತ್ತೆ ಆಕೆ ಸುತ್ತಮುತ್ತಲ ಪರಿಸರದ ನಡುವೆ. -"ಕೊಲೆಗಾರ ನಮ್ಮ ಬ್ರೇನರ್ಡ್ನವನು ಆಗಿರಲಿಕ್ಕಿಲ್ಲ." -"ಹೂಂ." ಸಣ್ಣಸಣ್ಣ ಪಾತ್ರಗಳ ಬಗ್ಗೆ ಚಕಾಚಕ್ ಅಂತ ತಿಳ್ಕೊಳೋಕೂ ಸಹಾಯ ಆಗುತ್ತೆ. ಬರೇ ಆಯಮ್ಮ ಕೆಲ್ಸ ಮಾಡೋ ಜಾಗ ಮತ್ತೆ ಆಕೆಯ ಬಟ್ಟೆಬರೆಯಿಂದಾನೆ ಆಕೆಯ ಬಗ್ಗೆ ಎಷ್ಟೊಂದು ವಿಷಯ ಗೊತ್ತಾಗುತ್ತೆ ಯೋಚ್ನೆ ಮಾಡಿ. -"ನಾವೇನೂ ಮಾಹಿತಿ ಕೊಡಕಾಗಲ್ಲ ಇವ್ರೇ." ಆದ್ರೆ ಕೋವನ್ ಅಣ್ಣತಮ್ಮ ಬೇರೆಯವರಿಗಿಂತ ಬೇರೆ ಅನ್ನುಸ್ಕೊಳ್ಳೋದು... ...ಅವರ ಎಡಿಟಿಂಗಿನ ರಿದಮ್ನಿಂದ. -"ಶೇರ್ ಬೆಲೆ ಕಮ್ಮಿ ಮಾಡನ." -" 50% ನಾವೇ ತಗೊಳೋ ಮಟ್ಟಕ್ಕೆ" -"ಮಾಳಿಗೆ ಬಿಟ್ಟು." -"ವರ್ಕ್ ಆಗಬಹುದು ಅನ್ಸುತ್ತೆ!" -"ವರ್ಕ್ ಆಗಬೇಕು!" -"ವರ್ಕ್ ಆಗುತ್ತೆ!" -"ಆಗ್ಲೇ ವರ್ಕ್ ಆಗ್ತೈತಲ್ಲ!" ಬಹಳ ಜನ ರಿದಮ್ಮು ಡೈಲಾಗಿಂದ ಬರುತ್ತೆ ಅನ್ಕೊಂಡಿರ್ತಾರೆ. ಆದ್ರೆ ರಿದಮ್ ಅನ್ನೋದು ಮಾತಲ್ಲ ಒಳ್ಳೇ ರಿದಮ್ ಯಾವುದು ಅಂತ ಗೊತ್ತಾಗಬೇಕಂದ್ರೆ ಕೆಟ್ಟದಾಗಿ ಮಾಡಿರ್ತಾರಲ್ಲ ಅದನ್ನ ನೋಡ್ಬೇಕು ಇದು ಅಣ್ತಮ್ಮ ಬರೆದು ಬೇರೆ ಯಾರೋ ಡೈರೆಕ್ಟ್ ಮಾಡಿದ ಫಿಲ್ಮು. ಎರಡು ಡೈಲಾಗ್ ಮಧ್ಯ ಇರೋ ಇರುಸುಮುರಿಸು ಅನ್ನೋ ಅಂತ ಸೈಲೆನ್ಸ್ ಗಮನಿಸಿ -"ನಾನೇನು ಜಡ್ಜ್ ಮಾಡ್ತಿಲ್ಲ." -"ಎಷ್ಟ್ ಇಂಟ್ರೆಸ್ಟಿಂಗ್ ಐತಲ್ಲೋ." -”ಡಿಸ್ಕ್ರಿಪ್ಶನ್ ಟೂರ್ನಮೆಂಟ್ ಏನಾದ್ರು ಐತ?” ಇದು ಅಷ್ಟು ಪಕ್ಕಾ ಅನಿಸೋದೇ ಇಲ್ಲ ಈಗ ಇದನ್ನ ನೋಡಿ, ಅವರೇ ಡೈರೆಕ್ಟ್ ಮಾಡಿದ್ದು. -"ಸಿಗರೆಟ್ ಬೇಕ?" -"ಓ ಸರಿ." ಈ ರಿದಮ್ಮೇ ಅವರ ಬಹಳಷ್ಟು ಸೀನ್ಗಳ ಜೀವಾಳ ಬೇರೆ ನಿರ್ದೇಶಕರು ಉದಾಸೀನ ಮಾಡೋ ಇಂತ ಮಾತಿಲ್ಲದ ಕ್ಷಣಗಳನ್ನ ಇವರು ಹಿಡಿಯೋದು ಹಿಂಗೆ. ಆದ್ರೆ ಇಷ್ಟೆಲ್ಲ ಮಾಡೋದ್ರಿಂದ ಏನು ಮಾಡ್ದಂಗಾಗುತ್ತೆ? ನನಿಗನ್ಸೋದು ಇದು ಒಂದು ನಿರ್ದಿಷ್ಟವಾದ ಟೋನ್ ಕ್ರಿಯೇಟ್ ಮಾಡುತ್ತೆ. ಯಾಕಂದ್ರೆ ಅಣ್ತಮ್ಮ ಒಂದು ಕಡೆ ಆ ಪಾತ್ರಗಳನ್ನ ನೋಡಿ ನಾವು ನಗಬೇಕಂತ ಮಾಡ್ತಾರೆ ಅವರು ವೈಡ್ ಲೆನ್ಸ್ ಹಾಕಿ ಮುಖ ಅತೀ ಮಾಡೋದೂ ಇದೇ ಕಾರಣಕ್ಕೆ ಮತ್ತೆ ಸೀನ್ನ ಕಾಮಿಡಿ ಟೈಮಿಂಗ್ ನೋಡ್ಕೊಂಡು ಕಟ್ತಾರೆ. ಇನ್ನೊಂದು ಕಡೆ ಪಾತ್ರಗಳ ಮನಸ್ಸನ್ನ ನಾವು ತಿಳಿದುಕೊಳ್ಳಲಿ ಅನ್ನೋದೂ ಅವರ ಉದ್ದೇಶ ಪಾತ್ರಗಳ ಸುತ್ತಲಿನ ಪರಿಸರ ಕಾಣಲಿ ಅಂತ ವೈಡ್ ಫ್ರೇಮ್ ಇಡ್ತಾರೆ ...ಪಾತ್ರಗಳ ಕೆಳಗಿನ ಪಾಯಿಂಟಲ್ಲೇ ಲೆನ್ಸ್ ಇಟ್ಟಿರ್ತಾರೆ -"ನಾನು ಸಾಯ್ತಿದೀನಿ." -"ಏನಾದ್ರು ಮಾಡು. ಸಹಾಯ ಮಾಡು!" ಒಂದು ನಾಣ್ಣುಡಿ ಇದೆ: ಟ್ರ್ಯಾಜಿಡಿ ಅಂದ್ರೆ ಕ್ಲೋಸಪ್ಪು. ಕಾಮಿಡಿ ಅಂದ್ರೆ ಲಾಂಗ್ ಶಾಟು ಅಂತ ಆದ್ರೆ ಅಣ್ತಮ್ಮಂದ್ರ ವಿಷಯದಲ್ಲಿ ಅದು ಕಲಸಂಬಳಸ. ಟ್ರ್ಯಾಜಿಡಿ & ಕಾಮಿಡಿ ಎರಡನ್ನೂ ಅವರು ಹತ್ತಿರದಿಂದ ಸಿಂಗಲ್ಸಲ್ಲೇ ಮಾಡ್ತಾರೆ. -"ನಂಗೆ ಮೈಕ್ ನೆನಪಾಗ್ತಾನೆ." ಅದು ಮೋಡಿಗೊಳಿಸೋ ಅಂತ ಅಂಶ ಅಂದ್ರೆ ಯಾಕಂದ್ರೆ ಡೈಲಾಗ್ ಸೀನಂದ್ರೆ ಬರೇ ಡೈಲಾಗ್ ರೆಕಾರ್ಡ್ ಮಾಡೋದಲ್ಲ. ಮಾತಿಲ್ಲದ ನಡವಳಿಕೆಗಳೂ ಅಷ್ಟೇ ಮುಖ್ಯ. -”ಇದೇನು ನಿನಿಗೆ ಅಂತ ದೊಡ್ಡ ವಿಷಯ ಅಲ್ಲ ಅಲ್ಲಬಿಡು" -"ಹೂ ಮತ್ತೆ, ಕತೆ ಕತೆ ಇದಾವೆ. ಬೇಕಾದ್ರೆ ಹೇಳ್ತೀನಿ…" -"ಅದೇ ಹೇಳ್ತಿರೋದು! ನಮ್ಮೆಲ್ಲರ ಹತ್ರಾನೂ ಕತೆಗಳಿದಾವೆ..." ಕ್ಯಾಮರಾನ ಇಲ್ಲಿ ಇಟ್ಟು ವೈಡ್ ಲೆನ್ಸ್ ಹಾಕಿ, ಅವರ ಮಾಮೂಲಿ ರಿದಮ್ ಮಾಡ್ಕೊಂಡು ಈ ಅಣ್ತಮ್ಮಂದ್ರು ಸಿಂಪಲ್ ಟೂಲ್ ಇಟ್ಕೊಂಡು ಒಂದೊಳ್ಳೆ ವಿಧಾನ ಕಂಡುಕೊಂಡಿದಾರೆ ಶಾಟು ರಿವರ್ಸ್ ಶಾಟು