1 00:00:04,480 --> 00:00:07,400 ಹಾಯ್ ನನ್ನ ಹೆಸರು ಟೋನಿ, ನೀವು ನೋಡ್ತಿರೋದು “ಒಂದೊಂದು ಫ್ರೇಂ ಕೂಡ ಪೇಂಟಿಂಗ್” 2 00:00:08,290 --> 00:00:11,100 ಬಹುಶಃ ಸಿನಿಮಾ ವ್ಯಾಕರಣದಲ್ಲಿರೋ ಅತೀ ಬೇಸಿಕ್ ವಿಷಯ ಅಂದ್ರೆ ಇದೇ ಇರಬೇಕು: 3 00:00:12,100 --> 00:00:12,799 ಶಾಟ್ 4 00:00:13,750 --> 00:00:14,520 ರಿವರ್ಸ್ ಶಾಟ್ 5 00:00:15,560 --> 00:00:17,300 ನೀವು ನೋಡೋ ಹೆಚ್ಚಿನದರಲ್ಲಿ 6 00:00:21,730 --> 00:00:24,450 ನೀವು ನೋಡೋ ಹೆಚ್ಚಿನದರಲ್ಲಿ ಅದೇ ತುಂಬಿರುತ್ತೆ 7 00:00:24,450 --> 00:00:27,740 ಬಹಳ ಮಂದಿ ಅದನ್ನ ಬರೇ ಡೈಲಾಗ್ ರೆಕಾರ್ಡ್ ಮಾಡೋದಕ್ಕೆ ಬಳಸೋ ತರ ಕಾಣುತ್ತೆ 8 00:00:28,100 --> 00:00:30,570 ನಟರನ್ನ ಅಲ್ಲಾಡದಂಗೆ ಇರೋಕೆ ಹೇಳೋದು, ಎರಡ್ಮೂರು ಕ್ಯಾಮರ ಬಳಸೋದು 9 00:00:30,570 --> 00:00:33,251 ಹತ್ತು ಶಾಟ್ ತಗೋಳೋದು, ಆಮೇಲೆ ಎಡಿಟಿಂಗಲ್ಲಿ ಡಿಸೈಡ್ ಮಾಡೋದು. 10 00:00:33,960 --> 00:00:37,400 ಆದ್ರೆ ಶಾಟ್-ರಿವರ್ಸ್ ಶಾಟನ್ನ ಸರಿಯಾಗಿ ತೆಗೆದಾಗ ಇನ್ನೂ ಶಕ್ತಿಶಾಲಿಯಾಗಿರುತ್ತೆ ಅನ್ಸುತ್ತೆ ನನಿಗೆ. 11 00:00:37,800 --> 00:00:40,800 ಅದಕ್ಕೆ ಅತ್ಯುತ್ತಮ ಉದಾಹರಣೆ ಅಂದ್ರೆ ಜೋವಲ್ & ಈತನ್ ಕೋವನ್ ಸಿನಿಮಾಗಳು. 12 00:00:41,500 --> 00:00:44,200 -"ನಾವು ನೀನು..." 13 00:00:45,379 --> 00:00:47,000 -"...ಕಪ್ಪೆಯಾಗಿದ್ದೆ ಅನ್ಕೊಂಡಿದ್ವಿ." 14 00:00:47,839 --> 00:00:53,580 ಯಾಕಂದ್ರೆ ಕೋವನ್ ಅಣ್ತಮ್ಮಂದಿರು ಡೈಲಾಗ್ ಸೀನ್ ತೆಗೆಯೋದ್ರಲ್ಲಿ ಮಾಸ್ಟರ್ಗಳು 15 00:00:54,180 --> 00:00:55,990 -"ನಾನು ನಿಂಗೊಂದು ವಿಷಯ ಹೇಳಬಹುದ?" 16 00:00:56,690 --> 00:00:59,230 ಹಂಗಾಗಿ ಇವತ್ತು ಶಾಟ್-ರಿವರ್ಸ್ ಶಾಟ್ನ ಮತ್ತೊಂದ್ ಸಲ ಪರಿಶೀಲಿಸೋಣ 17 00:00:59,600 --> 00:01:02,290 ಕೋವನ್ ಅಣ್ಣತಮ್ಮಂದ್ರಿಂದ ಅದರ ಬಗ್ಗೆ ಏನು ಕಲಿಯಬಹುದು? 18 00:01:02,290 --> 00:01:04,240 -"ನಾನು ನಿಂಗೊಂದ್ ಪ್ರಶ್ನೆ ಕೇಳ್ತೀನಿ ತಡಿ..." 19 00:01:04,240 --> 00:01:06,598 -"ಇದೆಲ್ಲ ತೆಪರ ನನ್ಮಕ್ಕಳಿಗೆ ಹೊಳಿಯುತ್ತ?" 20 00:01:10,430 --> 00:01:12,660 ಕೋವನ್ ಅಣ್ಣತಮ್ಮಂದಿರಲ್ಲಿ ನೀವು ಗಮನಿಸೋ ಮೊದಲ ಅಂಶ ಅಂದ್ರೆ 21 00:01:12,660 --> 00:01:16,310 ಅವರು ಮಾತಾಡೋರ ನಡುವೆ ಜಾಗ ಇರುತ್ತಲ್ಲ ಅಲ್ಲಿಂದ ಶೂಟ್ ಮಾಡಕೆ ಬಯಸ್ತಾರೆ 22 00:01:16,600 --> 00:01:19,759 ಹಂಗಂದ್ರೆ ಕ್ಯಾಮರ ಸಾಮಾನ್ಯವಾಗಿ ಎರಡು ಪಾತ್ರಗಳ ನಡುವೆ ಇರುತ್ತೆ 23 00:01:19,800 --> 00:01:21,460 ಎರಡೂ ಪಾತ್ರಗಳಿಗೂ ಸಪರೇಟ್ ಶಾಟ್ ಸಿಗಲಿ ಅಂತ 24 00:01:22,400 --> 00:01:24,100 -"ಹೇಳಿದ್ದು ಅರ್ಥ ಆಯ್ತ?" 25 00:01:24,650 --> 00:01:27,100 ಸಿಂಪಲ್ಲಾಗಿ ಹೇಳ್ಬೇಕಂದ್ರೆ ಪಾತ್ರಗಳ ಸಿಂಗಲ್ ಶಾಟ್ಸ್ ಬಹಳ ತೆಗಿತಾರೆ ಅವರು 26 00:01:27,750 --> 00:01:29,220 -"ಏನಂದೆ ನಾನ್ ಕೇಳುಸ್ಕೊಳ್ಲಿಲ್ಲ" 27 00:01:32,300 --> 00:01:35,500 ಇನ್ನ ಕೆಲವು ಮಂದಿ, ಪಾಲ್ ಗ್ರೀನ್ಗ್ರ್ಯಾಸ್ ತರದವರು ಕ್ಯಾಮರಾನ ಪಾತ್ರಗಳ ಹಿಂದೇನೆ ಜಾಸ್ತಿ ಇಡ್ತಾರೆ 28 00:01:35,800 --> 00:01:39,200 ಸಾಮಾನ್ಯವಾಗಿ ಲಾಂಗ್ ಲೆನ್ಸ್ ಹಾಕಿರ್ತಾರಲ್ಲ ಹಂಗಾಗಿ ನಮಗೆ ಒಂತರ ಕದ್ದು ಕೇಳುಸ್ಕೋತಿದೀವಿ ಅನ್ನೋ ಫೀಲಿಂಗ್ ಬರುತ್ತೆ 29 00:01:39,320 --> 00:01:41,000 -"ಏನಾಯ್ತು ಬೊಗಳು" -"ಏನಾಯ್ತು?" 30 00:01:41,310 --> 00:01:43,400 -"ಜೇಸನ್ ಬೋರ್ನ್ ಆದಂಗಾಯ್ತು. ನಿನ್ನ ಫೈಲ್ಸ್ ಇದಾವೆ." 31 00:01:44,510 --> 00:01:46,000 -"ಹಂಗಾದ್ರೆ ಸಾಕು ನಿಲ್ಸು ಪುರಾಣ." 32 00:01:46,200 --> 00:01:48,500 ಕೋವನ್ ಅಣ್ಣತಮ್ಮ ಮತ್ತೆ ರೋಜರ್ ಡೀಕಿನ್ಸ್ ಹಿಂಗೆ ಮಾಡಲ್ಲ 33 00:01:48,900 --> 00:01:51,500 ಹೇಳ್ಬೇಕಂದ್ರೆ ಅವರು ಹೆಚ್ಚುಕಮ್ಮಿ ಎಲ್ಲಾನು ತೆಗಿಯೋದು ವೈಡ್ ಲೆನ್ಸಲ್ಲೇ 34 00:01:51,650 --> 00:01:55,000 -"ಪರ್ಸನಲ್ಲಾಗಿ ನನಿಗೆ ಲೆನ್ಸ್ ಬಗ್ಗೆ ತುಂಬ ಗಟ್ಟಿ ಫೀಲಿಂಗ್ ಇದೆ..." 35 00:01:55,500 --> 00:01:58,899 -"...ನಾನಿಲ್ಲಿ ಕುತ್ಕೊಂಡಿದೀನಿ, ನೀವು ಅಲ್ಲಿಂದ ವಿಡಿಯೋ ತೆಗಿತಿದೀರ..." 36 00:01:58,950 --> 00:02:02,220 -"...ಬಹುಶಃ ಸಿಂಗಲ್ ಶಾಟೇ ಇರಬೇಕು. ನಾನಾದ್ರೆ ಹಂಗ್ ಮಾಡೋದು ಕಡಿಮೆ." 37 00:02:02,420 --> 00:02:04,590 -"ಯಾಕಂದ್ರೆ, ನನಿಗನ್ಸೋದು ಏನಂದ್ರೆ, ಕ್ಯಾಮರ ಎಲ್ಲಿರಬೇಕಂದ್ರೆ..." 38 00:02:04,700 --> 00:02:07,300 -"ನಾನು ಇಲ್ಲಿ ಇದರ ಒಳಗಡೆಯಿಂದ ಶೂಟ್ ಮಾಡ್ತೀನಿ." 39 00:02:07,500 --> 00:02:11,260 ವೈಡ್ ಲೆನ್ಸ್ ಹಾಕಿ ಕ್ಯಾಮರಾನ ಹತ್ತಿರ ತಂದ್ರೆ 40 00:02:11,360 --> 00:02:12,330 ಹೆಂಗನಿಸುತ್ತೆ ಅಂದ್ರೆ 41 00:02:12,530 --> 00:02:15,200 -"ಇದು ಬೇರೆ ತರ ಇದೆ ತಾನೆ? ಒಂತರ ನಾವೇ ಅಲ್ಲಿದ್ದಂಗೆ..." 42 00:02:15,400 --> 00:02:17,400 -"ಒಬ್ಬರ ಜೊತೆ ಅಲ್ಲಿದೀವಿ ಅನ್ನೋ ತರ…" 43 00:02:17,500 --> 00:02:21,400 -"...ಸೈಕಲಾಜಿಕಲ್ಲಾಗಿ ಅದರ ಪರಿಣಾಮನೇ ಬೇರೆ ಇರುತ್ತೆ…" 44 00:02:21,800 --> 00:02:23,300 ಆದ್ರೆ ಯಾವ ಸೈಕಲಾಜಿಕಲ್ ಪರಿಣಾಮ ಅದು? 45 00:02:23,850 --> 00:02:27,200 ಲಾಂಗ್ ಲೆನ್ಸಲ್ಲಿ ಕದ್ದು ಕೇಳುಸ್ಕೊಳೋ ಫೀಲ್ ಬಂದ್ರೆ, ಈ ವೈಡ್ ಲೆನ್ಸಲ್ಲಿ ಯಾವ ತರ ಫೀಲ್ ಬರುತ್ತೆ? 46 00:02:27,800 --> 00:02:29,690 -"ನೋಡು ಇಲ್ನೋಡು ಏನೋ ಒಂದು ಭಾರೀ ತಪ್ಪಾಗಿದೆ!" 47 00:02:30,200 --> 00:02:32,200 -"ನನಿಗೆ ಸ್ಯಾಂಟಾನ ಅಬ್ರಾಕ್ಸಸ್ ಬೇಡ.'" 48 00:02:32,300 --> 00:02:34,800 -"ಈಗಷ್ಟೇ ಗಾಡೀಲಿ ಭಯಂಕರ ಆಕ್ಸಿಡೆಂಟ್ ಮಾಡ್ಕೊಂಡು ಬಂದಿದೀನಿ!" 49 00:02:37,390 --> 00:02:38,450 ನಾನು ಹೇಳೋದಾದ್ರೆ ಎರಡು ತರ ಫೀಲ್ ಬರುತ್ತೆ: 50 00:02:38,550 --> 00:02:40,200 ಒಂತರ ಅನ್ಕಂಫರ್ಟೆಬಲ್… 51 00:02:43,450 --> 00:02:44,660 ಒಂತರ ತಮಾಷೆ 52 00:02:45,200 --> 00:02:45,950 ಇವರಿಗದು ಸರಿಯಾಗಿ ಹೊಂದಿಕೆಯಾಗುತ್ತೆ 53 00:02:46,660 --> 00:02:49,250 ಯಾಕಂದ್ರೆ ಕೋವನ್ ಅಣ್ಣತಮ್ಮ ಪಾತ್ರಗಳನ್ನ ಬೇರ್ಪಡಿಸೋಕೆ ಇಷ್ಟಪಡ್ತಾರೆ 54 00:02:49,460 --> 00:02:52,450 ಪಾತ್ರಗಳಿಗೆ ಸಂಧರ್ಭದ ಮೇಲೆ ಹಿಡಿತ ಇರಲ್ಲ. ಅಂತ ಸಂಧರ್ಭಗಳನ್ನೇ ಜಾಸ್ತಿ ಸೃಷ್ಟಿ ಮಾಡ್ತಾರೆ. 55 00:02:53,750 --> 00:02:55,200 ಈಗ ಲೆನ್ಸ್ ಇಲ್ಲಿರೋದ್ರಿಂದ 56 00:02:55,300 --> 00:02:57,500 -"ಮೊದ್ಲೇ ಮಾತಾಡಿದ್ವಿ ತಾನೆ. ಮಾತು ಮಾತಾಗಿರಬೇಕು." 57 00:02:57,700 --> 00:03:01,339 -”ಯಾರಿದು ಜೆರ್ರಿನ? ಅಲ್ಲಿ ಬ್ರೇನರ್ಡಲ್ಲಿ ಸತ್ರಲ್ಲ ಮೂವರು ಪಾಪದೋರು ಅವರಿಗೆ ಕೇಳು ಹೋಗು ಮಾತು ಮಾತಾಗಿರಬೇಕ ಅಲ್ವ ಅಂತ” 58 00:03:01,940 --> 00:03:03,609 ಪಾತ್ರಗಳ ಜೊತೆ ನೀವೂ ಸಿಕ್ಕಾಕ್ಕೊಂಡಿದೀರಿ. 59 00:03:03,800 --> 00:03:05,250 ಇನ್ನೊಂದು ಎಫೆಕ್ಟ್ ಅಂದ್ರೆ ನೋಟದ್ದು 60 00:03:05,610 --> 00:03:08,790 ಕೋವನ್ ಅಣ್ಣತಮ್ಮ ಹೆಚ್ಚಿಗೆ 27mm ಅಥವಾ 32mm ಲೆನ್ಸಲ್ಲೇ ತೆಗಿಯೋದು 61 00:03:08,910 --> 00:03:11,890 ಕೆಲವೊಂದ್ಸಲ ನಟರ ಮುಖಾನ ಅತೀ ಮಾಡಿ ತೋರ್ಸೋದಕ್ಕೆ ಕ್ಯಾಮರಾನ ಮುಂದೆ ತಳ್ತಾ ಹೋಗ್ತಾರೆ. 62 00:03:12,890 --> 00:03:15,589 -”ಫ್ರ್ಯಾಂಕ್ ರಾಫೋ, ನನ್ನ ಭಾವಾನೇ ಅವನು. ಮೇನ್ ಹಜಾಮ ಆಗಿದ್ದ” 63 00:03:15,700 --> 00:03:17,390 -"ಯಪ್ಪ ಏನ್ ಮಾತಾಡ್ತಿದ್ದ ಅಂದ್ರೆ ಅಷ್ಟಿಷ್ಟಲ್ಲ" 64 00:03:18,290 --> 00:03:20,429 ವೈಡ್ ಲೆನ್ಸು ಹಾಕೋದ್ರಿಂದ ಬರೇ ಮುಖ ಅಷ್ಟೇ ಅತೀ ಆಗಲ್ಲ... 65 00:03:20,700 --> 00:03:25,290 ...ಕ್ಯಾಮರ ಮುಂದೆ ಚಲಿಸೋದು ಕೂಡ ಅತೀ ಆಗಿ ಕಾಣ್ಸುತ್ತೆ. ಉದಾ: ಡಾಲಿಯಿಂದ ಕ್ಲೋಸ್ ಅಪ್ಗೆ ಹೋಗೋದು. 66 00:03:25,800 --> 00:03:26,890 -”ಒಂತರ Actionನ ಭಾವ ಕೂಡ ಬರುತ್ತೆ” 67 00:03:27,000 --> 00:03:30,240 -”ಉದಾಹರಣೆಗೆ ನಾನು ಹಿಂಗೆ ಕೈನ ಕ್ಯಾಮರಾದಿಂದ ಹತ್ತಿರ ಅಥವಾ ದೂರ ತಗೊಂಡು ಹೋದ್ರೆ…” 68 00:03:30,400 --> 00:03:32,340 -”...ಅದು ವೈಡ್ ಲೆನ್ಸಲ್ಲಿ ಜಾಸ್ತಿ ಎಫೆಕ್ಟಿವ್ವಾಗಿ ಬರುತ್ತೆ.” 69 00:03:32,890 --> 00:03:34,940 -”ಬರೇ ಹಿಂಗೆ ಅಲುಗಾಡಿದ್ರೂ ಕೂಡ.” 70 00:03:36,300 --> 00:03:38,950 -”ಆಗಿರಬಹುದು ಅಂದ್ರೆ ಏನ್ ನಿಜ ಆಗಲ್ಲ” 71 00:03:39,500 --> 00:03:41,300 -”ಹಂಗ್ ಮಾಡ್ದಾಗ ಹೆಚ್ಚು ಜೀವಂತಿಕೆ ಬರುತ್ತೆ. ಹೆಚ್ಚು ಬಿಗಿಯಾಗಿರುತ್ತೆ. 72 00:03:43,300 --> 00:03:46,330 -"ಇದೇನು ಕನಸು ಅಲ್ಲ ತಾನೆ? ನಮ್ಮ ಸಂಸಾರ ಆನಂದ ಸಾಗರ ಆಯ್ತಲ್ಲ!" 73 00:03:46,700 --> 00:03:48,200 ಈ ತರ ಶೂಟ್ ಮಾಡೋದ್ರ ಮೂರನೇ ಎಫೆಕ್ಟ್ ಏನಂದ್ರೆ... 74 00:03:50,200 --> 00:03:51,399 ...ಸುತ್ತಮುತ್ತಲನ್ನೆಲ್ಲ ತೋರಿಸೋಕೆ ಅನುಕೂಲ 75 00:03:52,100 --> 00:03:53,690 ...ಈ ತರ ಶಾಟ್ಗಳು ಪಾತ್ರಗಳು ಮತ್ತೆ ಅವರ ಸುತ್ತಮುತ್ತಲ ವಾತಾವರಣದ ನಡುವೆ ಒಂದು ಹದವಾದ ಬ್ಯಾಲೆನ್ಸ್ ತರುತ್ತೆ... 76 00:03:53,830 --> 00:03:56,390 ...ಆ ಪಾತ್ರದ ಮತ್ತೆ ಆಕೆ ಸುತ್ತಮುತ್ತಲ ಪರಿಸರದ ನಡುವೆ. 77 00:03:57,290 --> 00:04:00,350 -"ಕೊಲೆಗಾರ ನಮ್ಮ ಬ್ರೇನರ್ಡ್ನವನು ಆಗಿರಲಿಕ್ಕಿಲ್ಲ." 78 00:04:00,450 --> 00:04:01,450 -"ಹೂಂ." 79 00:04:01,700 --> 00:04:04,250 ಸಣ್ಣಸಣ್ಣ ಪಾತ್ರಗಳ ಬಗ್ಗೆ ಚಕಾಚಕ್ ಅಂತ ತಿಳ್ಕೊಳೋಕೂ ಸಹಾಯ ಆಗುತ್ತೆ. 80 00:04:04,800 --> 00:04:08,600 ಬರೇ ಆಯಮ್ಮ ಕೆಲ್ಸ ಮಾಡೋ ಜಾಗ ಮತ್ತೆ ಆಕೆಯ ಬಟ್ಟೆಬರೆಯಿಂದಾನೆ ಆಕೆಯ ಬಗ್ಗೆ ಎಷ್ಟೊಂದು ವಿಷಯ ಗೊತ್ತಾಗುತ್ತೆ ಯೋಚ್ನೆ ಮಾಡಿ. 81 00:04:09,790 --> 00:04:12,480 -"ನಾವೇನೂ ಮಾಹಿತಿ ಕೊಡಕಾಗಲ್ಲ ಇವ್ರೇ." 82 00:04:15,290 --> 00:04:17,279 ಆದ್ರೆ ಕೋವನ್ ಅಣ್ಣತಮ್ಮ ಬೇರೆಯವರಿಗಿಂತ ಬೇರೆ ಅನ್ನುಸ್ಕೊಳ್ಳೋದು... 83 00:04:17,490 --> 00:04:19,279 ...ಅವರ ಎಡಿಟಿಂಗಿನ ರಿದಮ್ನಿಂದ. 84 00:04:19,350 --> 00:04:20,500 -"ಶೇರ್ ಬೆಲೆ ಕಮ್ಮಿ ಮಾಡನ." 85 00:04:20,790 --> 00:04:23,000 -" 50% ನಾವೇ ತಗೊಳೋ ಮಟ್ಟಕ್ಕೆ" 86 00:04:23,200 --> 00:04:24,400 -"ಮಾಳಿಗೆ ಬಿಟ್ಟು." 87 00:04:24,450 --> 00:04:26,000 -"ವರ್ಕ್ ಆಗಬಹುದು ಅನ್ಸುತ್ತೆ!" -"ವರ್ಕ್ ಆಗಬೇಕು!" 88 00:04:26,200 --> 00:04:28,400 -"ವರ್ಕ್ ಆಗುತ್ತೆ!" -"ಆಗ್ಲೇ ವರ್ಕ್ ಆಗ್ತೈತಲ್ಲ!" 89 00:04:29,180 --> 00:04:31,639 ಬಹಳ ಜನ ರಿದಮ್ಮು ಡೈಲಾಗಿಂದ ಬರುತ್ತೆ ಅನ್ಕೊಂಡಿರ್ತಾರೆ. 90 00:04:31,980 --> 00:04:33,600 ಆದ್ರೆ ರಿದಮ್ ಅನ್ನೋದು ಮಾತಲ್ಲ 91 00:04:43,139 --> 00:04:45,770 ಒಳ್ಳೇ ರಿದಮ್ ಯಾವುದು ಅಂತ ಗೊತ್ತಾಗಬೇಕಂದ್ರೆ ಕೆಟ್ಟದಾಗಿ ಮಾಡಿರ್ತಾರಲ್ಲ ಅದನ್ನ ನೋಡ್ಬೇಕು 92 00:04:45,970 --> 00:04:48,200 ಇದು ಅಣ್ತಮ್ಮ ಬರೆದು ಬೇರೆ ಯಾರೋ ಡೈರೆಕ್ಟ್ ಮಾಡಿದ ಫಿಲ್ಮು. 93 00:04:48,200 --> 00:04:51,579 ಎರಡು ಡೈಲಾಗ್ ಮಧ್ಯ ಇರೋ ಇರುಸುಮುರಿಸು ಅನ್ನೋ ಅಂತ ಸೈಲೆನ್ಸ್ ಗಮನಿಸಿ 94 00:04:52,000 --> 00:04:53,479 -"ನಾನೇನು ಜಡ್ಜ್ ಮಾಡ್ತಿಲ್ಲ." 95 00:04:53,960 --> 00:04:55,279 -"ಎಷ್ಟ್ ಇಂಟ್ರೆಸ್ಟಿಂಗ್ ಐತಲ್ಲೋ." 96 00:04:56,279 --> 00:04:59,300 -”ಡಿಸ್ಕ್ರಿಪ್ಶನ್ ಟೂರ್ನಮೆಂಟ್ ಏನಾದ್ರು ಐತ?” 97 00:04:59,809 --> 00:05:01,330 ಇದು ಅಷ್ಟು ಪಕ್ಕಾ ಅನಿಸೋದೇ ಇಲ್ಲ 98 00:05:02,430 --> 00:05:04,100 ಈಗ ಇದನ್ನ ನೋಡಿ, ಅವರೇ ಡೈರೆಕ್ಟ್ ಮಾಡಿದ್ದು. 99 00:05:06,100 --> 00:05:07,200 -"ಸಿಗರೆಟ್ ಬೇಕ?" 100 00:05:10,610 --> 00:05:11,520 -"ಓ ಸರಿ." 101 00:05:12,000 --> 00:05:14,720 ಈ ರಿದಮ್ಮೇ ಅವರ ಬಹಳಷ್ಟು ಸೀನ್ಗಳ ಜೀವಾಳ 102 00:05:15,200 --> 00:05:18,380 ಬೇರೆ ನಿರ್ದೇಶಕರು ಉದಾಸೀನ ಮಾಡೋ ಇಂತ ಮಾತಿಲ್ಲದ ಕ್ಷಣಗಳನ್ನ ಇವರು ಹಿಡಿಯೋದು ಹಿಂಗೆ. 103 00:05:24,380 --> 00:05:26,580 ಆದ್ರೆ ಇಷ್ಟೆಲ್ಲ ಮಾಡೋದ್ರಿಂದ ಏನು ಮಾಡ್ದಂಗಾಗುತ್ತೆ? 104 00:05:26,840 --> 00:05:28,400 ನನಿಗನ್ಸೋದು ಇದು ಒಂದು ನಿರ್ದಿಷ್ಟವಾದ ಟೋನ್ ಕ್ರಿಯೇಟ್ ಮಾಡುತ್ತೆ. 105 00:05:28,650 --> 00:05:31,299 ಯಾಕಂದ್ರೆ ಅಣ್ತಮ್ಮ ಒಂದು ಕಡೆ ಆ ಪಾತ್ರಗಳನ್ನ ನೋಡಿ ನಾವು ನಗಬೇಕಂತ ಮಾಡ್ತಾರೆ 106 00:05:36,200 --> 00:05:38,349 ಅವರು ವೈಡ್ ಲೆನ್ಸ್ ಹಾಕಿ ಮುಖ ಅತೀ ಮಾಡೋದೂ ಇದೇ ಕಾರಣಕ್ಕೆ 107 00:05:38,600 --> 00:05:41,200 ಮತ್ತೆ ಸೀನ್ನ ಕಾಮಿಡಿ ಟೈಮಿಂಗ್ ನೋಡ್ಕೊಂಡು ಕಟ್ತಾರೆ. 108 00:05:47,539 --> 00:05:50,770 ಇನ್ನೊಂದು ಕಡೆ ಪಾತ್ರಗಳ ಮನಸ್ಸನ್ನ ನಾವು ತಿಳಿದುಕೊಳ್ಳಲಿ ಅನ್ನೋದೂ ಅವರ ಉದ್ದೇಶ 109 00:05:51,270 --> 00:05:53,520 ಪಾತ್ರಗಳ ಸುತ್ತಲಿನ ಪರಿಸರ ಕಾಣಲಿ ಅಂತ ವೈಡ್ ಫ್ರೇಮ್ ಇಡ್ತಾರೆ 110 00:05:54,000 --> 00:05:56,400 ...ಪಾತ್ರಗಳ ಕೆಳಗಿನ ಪಾಯಿಂಟಲ್ಲೇ ಲೆನ್ಸ್ ಇಟ್ಟಿರ್ತಾರೆ 111 00:05:58,000 --> 00:05:59,100 -"ನಾನು ಸಾಯ್ತಿದೀನಿ." 112 00:06:01,200 --> 00:06:03,239 -"ಏನಾದ್ರು ಮಾಡು. ಸಹಾಯ ಮಾಡು!" 113 00:06:04,200 --> 00:06:06,800 ಒಂದು ನಾಣ್ಣುಡಿ ಇದೆ: ಟ್ರ್ಯಾಜಿಡಿ ಅಂದ್ರೆ ಕ್ಲೋಸಪ್ಪು. 114 00:06:07,339 --> 00:06:09,900 ಕಾಮಿಡಿ ಅಂದ್ರೆ ಲಾಂಗ್ ಶಾಟು ಅಂತ 115 00:06:11,239 --> 00:06:14,190 ಆದ್ರೆ ಅಣ್ತಮ್ಮಂದ್ರ ವಿಷಯದಲ್ಲಿ ಅದು ಕಲಸಂಬಳಸ. 116 00:06:14,390 --> 00:06:17,269 ಟ್ರ್ಯಾಜಿಡಿ & ಕಾಮಿಡಿ ಎರಡನ್ನೂ ಅವರು ಹತ್ತಿರದಿಂದ ಸಿಂಗಲ್ಸಲ್ಲೇ ಮಾಡ್ತಾರೆ. 117 00:06:18,300 --> 00:06:19,900 -"ನಂಗೆ ಮೈಕ್ ನೆನಪಾಗ್ತಾನೆ." 118 00:06:20,600 --> 00:06:22,440 ಅದು ಮೋಡಿಗೊಳಿಸೋ ಅಂತ ಅಂಶ ಅಂದ್ರೆ 119 00:06:22,770 --> 00:06:25,409 ಯಾಕಂದ್ರೆ ಡೈಲಾಗ್ ಸೀನಂದ್ರೆ ಬರೇ ಡೈಲಾಗ್ ರೆಕಾರ್ಡ್ ಮಾಡೋದಲ್ಲ. 120 00:06:25,909 --> 00:06:28,400 ಮಾತಿಲ್ಲದ ನಡವಳಿಕೆಗಳೂ ಅಷ್ಟೇ ಮುಖ್ಯ. 121 00:06:28,800 --> 00:06:30,789 -”ಇದೇನು ನಿನಿಗೆ ಅಂತ ದೊಡ್ಡ ವಿಷಯ ಅಲ್ಲ ಅಲ್ಲಬಿಡು" 122 00:06:31,000 --> 00:06:32,689 -"ಹೂ ಮತ್ತೆ, ಕತೆ ಕತೆ ಇದಾವೆ. ಬೇಕಾದ್ರೆ ಹೇಳ್ತೀನಿ…" 123 00:06:32,700 --> 00:06:36,489 -"ಅದೇ ಹೇಳ್ತಿರೋದು! ನಮ್ಮೆಲ್ಲರ ಹತ್ರಾನೂ ಕತೆಗಳಿದಾವೆ..." 124 00:06:36,689 --> 00:06:38,489 ಕ್ಯಾಮರಾನ ಇಲ್ಲಿ ಇಟ್ಟು 125 00:06:38,589 --> 00:06:41,209 ವೈಡ್ ಲೆನ್ಸ್ ಹಾಕಿ, ಅವರ ಮಾಮೂಲಿ ರಿದಮ್ ಮಾಡ್ಕೊಂಡು 126 00:06:41,689 --> 00:06:44,389 ಈ ಅಣ್ತಮ್ಮಂದ್ರು ಸಿಂಪಲ್ ಟೂಲ್ ಇಟ್ಕೊಂಡು ಒಂದೊಳ್ಳೆ ವಿಧಾನ ಕಂಡುಕೊಂಡಿದಾರೆ 127 00:06:45,289 --> 00:06:46,438 ಶಾಟು 128 00:06:47,650 --> 00:06:49,349 ರಿವರ್ಸ್ ಶಾಟು