-
ನಾನು ಜೆನ್ಸ್ ಬರ್ಗೆನ್‌ಸ್ಟನ್. ಎಲ್ಲರೂ ಜೆಬ್
ಎಂದೇ ಕರೆಯುfತಾರೆ. ಮೈನ್‌ಕ್ರಾಫ್ಟ್‌ನಲ್ಲಿ
-
ನಾನು mojang.com ನಲ್ಲಿ ಡೆವಲಪರ್. ನಾನು ಪ್ರೋಗ್ರಾಮಿಂಗ್
ಶುರು ಮಾಡುವಾಗ 11 ಅಥವಾ 12 ಆಗಿತ್ತು.
-
ನನಗೆ ಗೇಮ್ಸ್ ಮಾಡಬೇಕಿತ್ತು. ಗೇಮ್ ಮಾಡಬೇಕು
ಎಂದರೆ ನೀವು ಪ್ರೋಗ್ರಾಮ್ ಕಲಿಯಬೇಕು ಎಂದು
-
ನನ್ನ ತಂದೆಯ ಸ್ನೇಹಿತ ಹೇಳಿದ್ದಾರೆ. ಹೀಗಾಗಿ ನಾನು
ಆರಂಭಿಸಿದೆ. ಆರ್ಕಿಟೆಕ್ಚರ್ ವಿನ್ಯಾಸವನ್ನು ನಾನು
-
ಇಷ್ಟಪಡುತ್ತೇನೆ. ಮೈನ್‌ಕ್ರಾಫ್ಟ್ ವಿಷಯದಲ್ಲೂ
ನನಗೆ ಇದು ಇಷ್ಟ. ಮುಂದಿನ ಒಂದು ಗಂಟೆಯಲ್ಲಿ
-
ಕಂಪ್ಯೂಟರ್ ಸೈನ್ಸ್‌ನ ಮೂಲಾಂಶವನ್ನು ನೀವು
ಕಲಿಯಲಿದ್ದೀರಿ. ಅಲೆಕ್ಸ್ ಅಥವಾ ಸ್ಟೀವ್
-
ಮೈನ್‌ಕ್ರಾಫ್ಟ್ ವರ್ಲ್ಡ್‌ನ ಸಿಮ್ಯುಲೇಟೆಡ್ ತುಣುಕನ್ನು ಸಾಗಿಸುತ್ತಾರೆ.
ಸಾಂಪ್ರದಾಯಿಕ ಪ್ರೋಗ್ರಾಮಿಂಗ್ ಪಠ್ಯದ ಮೂಲಕ ನಡೆಯುತ್ತದೆ.
-
ಆದರೆ, ಇಂದು ನಾವು ಬ್ಲಾಕ್‌ಲೀ ಬಳಸುತ್ತೇವೆ. ಇದು
ಬ್ಲಾಕ್‌ಗಳನ್ನು ಬಳಸಿ, ಪ್ರೋಗ್ರಾಮ್‌ಗಳನ್ನು
-
ಎಳೆದು ಬಿಡುತ್ತದೆ. ಇದರ ಅಡಿಯಲ್ಲಿ ನೀವು
ಜಾವಾಸ್ಕ್ರಿಪ್ಟ್ ಕೋಡ್ ರಚಿಸುತ್ತೀರಿ. ನೀವು
-
ಕಲಿಯುವುದು ಪ್ರತಿ ದಿನ ಕಂಪ್ಯೂಟರ್ ಪ್ರೋಗ್ರಾಮರ್
ಬಳಸುವುದೇ ಆಗಿದೆ. ಇದು ಕಂಪ್ಯೂಟರ್ ಸೈನ್ಸ್‌ನ
-
ಅಡಿಪಾಯ. ಮೈನ್‌ಕ್ರಾಫ್ಟ್ ಕೆಲಸಕ್ಕೆ ಇದನ್ನೇ
ಮೊಜಾಂಗ್‌ನಲ್ಲಿ ನಾವು ಬಳಸುತ್ತೇವೆ. ಆರಂಭಕ್ಕೂ
-
ಮುನ್ನ, ನಿಮ್ಮ ಪಾತ್ರ ಆರಿಸುತ್ತೀರಿ. ನಾನು
ಅಲೆಕ್ಸ್ ಆರಿಸುತ್ತೇನೆ. ಸ್ಕ್ರೀನ್‌ನಲ್ಲಿ ಓಡಾಡಲು
-
ಸಹಾಯ ಮಾಡುವ ಪ್ರೋಗ್ರಾಮ್ ಕೋಡ್ ಮಾಡೋಣ.
ಮೂರು ಭಾಗಗಳನ್ನಾಗಿ ನಿಮ್ಮ ಸ್ಕ್ರೀನ್ ವಿಭಜಿಸಲಾಗಿದೆ
-
ಎಡಕ್ಕೆ ಮೈನ್‌ಕ್ರಾಫ್ ಪ್ಲೇ ಸ್ಪೇಸ್ ಇದೆ.
ಇಲ್ಲಿ ಪ್ರೋಗ್ರಾಮ್ ರನ್ ಅಗುತ್ತದೆ. ಸೂಚನೆಗಳು
-
ಈ ಕೆಳಗೆ ಬರೆಯಲ್ಪಟ್ಟಿವೆ. ಈ ಮಧ್ಯದ ಪ್ರದೇಶ
ಟೂಲ್‌ಬಾಕ್ಸ್. ಈ ಪ್ರತಿ ಬ್ಲಾಕ್‌ಗಳೂ
-
ಕಮಾಂಡ್ ಆಗಿದ್ದು, ಅಲೆಕ್ಸ್ ಆಕ್ಷನ್ ನಿರ್ದೇಶಿಸುತ್ತವೆ.
ಬಲದ ಬಿಳಿ ಭಾಗವನ್ನು ವರ್ಕ್ ಸ್ಪೇಸ್ ಎನ್ನುತ್ತೇವೆ
-
ಇಲ್ಲಿ ನಮ್ಮ ಪ್ರೋಗ್ರಾಮ್ ನಿರ್ಮಿಸುತ್ತೇವೆ.
ಮೂವ್ ಫಾರ್ವರ್ಡ್ ಬ್ಲಾಕ್ ನಮ್ಮ
-
ವರ್ಕ್‌ಸ್ಪೇಸ್‌ಗೆ ಎಳೆದರೆ, ರನ್ ಕ್ಲಿಕ್ ಮಾಡಿ.
ಏನಾಗುತ್ತದೆ? ಅಲೆಕ್ಸ್ ಗ್ರಿಡ್‌ನಲ್ಲಿ ಒಂದು ಸ್ಪೇಸ್
-
ಮುಂದೆ ಹೋಗುತ್ತಾಳೆ. ನಂತರ ಏನು ಮಾಡಬೇಕು?
ನಾವು ಇನ್ನೊಂದು ಬ್ಲಾಕ್ ಅನ್ನು
-
ಪ್ರೋಗ್ರಾಮ್‌ಗೆ ಸೇರಿಸಬಹುದು. ಟರ್ನ್ ರೈಟ್ ಬ್ಲಾಕ್
ಅನ್ನು ಆಯ್ಕೆ ಮಾಡಲಿದ್ದೇನೆ. ಮೂವ್ ಫಾರ್ವರ್ಡ್
-
ಬ್ಲಾಕ್ ಕೆಳಗೆ ಎಳೆಯುತ್ತೇನೆ. ಕಿತ್ತಳೆ ಸಾಲು
ಕಾಣುವವರೆಗೆ. ನಂತರ, ಡ್ರಾಪ್ ಮಾಡುವೆ.
-
ಎರಡು ಬ್ಲಾಕ್‌ಗಳು ಒಟ್ಟಿಗೆ ಸೇರುತ್ತವೆ. ಪುನಃ
ರನ್ ಒತ್ತಿದರೆ, ನಮ್ಮ ವರ್ಕ್‌ಸ್ಪೇಸ್‌ನಲ್ಲಿರುವ
-
ಎಲ್ಲ ಕಮಾಂಡ್‌ಗಳನ್ನು ಅಲೆಕ್ಸ್ ಮಾಡುತ್ತಾಳೆ.
ಒಂದು ಬ್ಲಾಕ್ ಅನ್ನು ಅಳಿಸಲು ನೀವು ಬಯಸಿದರೆ
-
ಟೂಲ್‌ಬಾಕ್ಸ್ ಸ್ಟಾಕ್ ಎಳೆದುಹಾಕಿ.
ಬದಲಾವಣೆ ರದ್ದು ಮಾಡಲು
-
ಆರಂಭದ ಲೆವೆಲ್‌ಗೆ ವಾಪಸಾಗಲು, ವರ್ಕ್‌ಸ್ಪೇಸ್‌ನ
ಬಲ ಮೂಲೆಯಲ್ಲಿನ ಹೊಸದಾಗಿ ಆರಂಭಿಸಿ ಬಟನ್
-
ಬಳಸಿ. ಇನ್ನೊಂದು ವಿಷಯ, ಟರ್ನ್ ಬ್ಲಾಕ್‌ಗಳಲ್ಲಿ
ಸಣ್ಣ ತ್ರಿಕೋನ ಕಾಣಿಸುತ್ತಿದೆಯೇ?
-
ಈ ತ್ರಿಕೋನ ಕಾಣಿಸಿದಾಗೆಲ್ಲ, ಬೇರೆ ಆಯ್ಕೆ
ಆರಿಸಬಹುದು ಎಂದು ಅರ್ಥ. ಕೋಡಿಂಗ್
-
ಶುರು ಮಾಡೋಣ!