< Return to Video

೮ ಹೆಜ್ಜೆಗಳು - ಧ್ವನಿ ಆರೋಗ್ಯದೆಡೆಗೆ

  • 0:00 - 0:03
    ನಾದಬ್ರಹ್ಮ ಎಂದರೆ ಶಬ್ದವನ್ನು
  • 0:03 - 0:06
    ಬ್ರಹ್ಮನಿಗೆ ಹೋಲಿಸಿದ್ದಾರೆ ಹಿಂದೂಗಳು.
  • 0:06 - 0:09
    ಅದು ಸತ್ಯವೇ, ಏಕೆಂದರೆ ಎಲ್ಲವೂ ಕಂಪಿಸುತ್ತವೆ.
  • 0:09 - 0:12
    ನೀವು ಕೂತಿರುವಾಗಲೂ ಕಂಪಿಸುತ್ತಿದ್ದೀರಿ. ದೇಹದ
  • 0:12 - 0:15
    ಅಂಗಗಳು ತಮ್ಮದೇ ತರಂಗಾಂತರದಲ್ಲಿ ಕಂಪಿಸುತ್ತಿವೆ
  • 0:15 - 0:17
    ಕಂಪನವಿದ್ದಮೇಲೆ ಸ್ವರವಿದೆ.
  • 0:17 - 0:19
    ನೀವೊಂದು ಸ್ವರಮೇಳ ಇದ್ದಂತೆ
  • 0:19 - 0:21
    ಆರೋಗ್ಯದ ಒಂದು ವ್ಯಾಖ್ಯಾನವೆಂದರೆ ಆ
  • 0:21 - 0:23
    ಸ್ವರಮೇಳವು ಸಂಪೂರ್ಣ ಸಾಮರಸ್ಯದಲ್ಲಿದೆ.
  • 0:23 - 0:25
    ನಿಮ್ಮ ಕಿವಿಗಳಿಗೆ ಆ ಸ್ವರಮೇಳ ಕೇಳುತ್ತಿಲ್ಲ
  • 0:25 - 0:28
    ಕಿವಿಗಳು ಅದ್ಭುತವಾದ ೧೦
  • 0:28 - 0:31
    ಸಂಗತಿಗಳನ್ನು ಕೇಳಬಲ್ಲದು. ಇದೂ ಅದರಲ್ಲೊಂದು
  • 0:31 - 0:33
    ಕಿವಿಗೆ ರೆಪ್ಪೆ ಮುಚ್ಚಳಗಳಿಲ್ಲ, ಯಾವಾಗಲೂ ಜಾಗೃತ
  • 0:33 - 0:35
    ನಿದ್ರಿಸುವಾಗಲೂ ಅವು ಕೇಳಬಲ್ಲವು
  • 0:35 - 0:37
    ಗ್ರಹಿಕೆಗೆ ಬರಬಲ್ಲ ಶಬ್ದವು ಕಿವಿಪದರವನ್ನು
  • 0:37 - 0:40
    ನಾಲ್ಕುಪರಮಾಣು ವ್ಯಾಸದಷ್ಟು ಚಲಿಸುತ್ತದೆ
  • 0:40 - 0:42
    ನೀವು ಕೇಳಬಲ್ಲ ಅತೀ ಗಟ್ಟಿಯಾದಶಬ್ದವು
  • 0:42 - 0:44
    ಆ ಸಣ್ಣ ಶಬ್ದಕ್ಕಿಂತ ಶತಕೋಟಿ ಪಟ್ಟು ಹೆಚ್ಚು
  • 0:44 - 0:46
    ಕಿವಿಗಳಿರುವುದು ಆಲಿಸಲು; ಕೇಳುವುದಕ್ಕಲ್ಲ
  • 0:46 - 0:48
    ಕೇಳುವುದು ಎಂದರೆ ನಾವು ಏನೂ ಮಾಡದೆ
  • 0:48 - 0:50
    ನಮ್ಮ ಕಿವಿಗೆ ಬೀಳುವ ಶಬ್ದ, ಆಲಿಸುವುದು
  • 0:50 - 0:53
    ಒಂದು ಸಕ್ರಿಯ ಕೌಶಲ್ಯ ನಾವು ಧ್ವನಿಯೊಂದಿಗಿನ
    ಸಂಬಂಧ
  • 0:53 - 0:55
    ಹೊಂದಿರಬೇಕಾದ ವಿಷಯ,
  • 0:55 - 0:57
    ನಮಗೆ ಯಾರೂ ಕಲಿಸದ ಒಂದು ಕೌಶಲ್ಯ
  • 0:57 - 1:00
    ಉದಾಹರಣೆಗೆ ,ನೀವು ಆಲಿಸಲೂ
  • 1:00 - 1:02
    ಕೆಲವು ಸ್ಥಳಗಳಿವೆ ಎಂದು ಯೋಚಿಸಿದ್ದೀರಾ ?
  • 1:02 - 1:04
    ಅವುಗಳಲ್ಲಿ ಎರಡು ಇಲ್ಲಿವೆ.
  • 1:04 - 1:06
    ತಿಳಿಆಲಿಸುವಿಕೆ ಎಂದರೆ - ಆಲಿಸಬೇಕಿರುವುದು
  • 1:06 - 1:09
    ನಮಗೇನು ಬೇಕೋ ಅಗತ್ಯವಿದ್ದಷ್ಟು
  • 1:09 - 1:11
    ಮಾತ್ರ ಆಲಿಸಿ ಮಿಕ್ಕಿದ್ದನ್ನು ಬಿಡುವುದು.
  • 1:11 - 1:13
    ಗಂಡಸರು ಹಾಗೆಯೇ - ಕುಗ್ಗಿಸಿ ಆಲಿಸುವುದು
  • 1:13 - 1:15
    ಅವನು ಹೇಳ್ತಾನೆ "ನನಗೆ ಈ ಸಮಸ್ಯೆ ಇದೆ"
  • 1:15 - 1:17
    ಇವನು ಹೇಳ್ತಾನೆ "ಹೌದಾ ಅದಕ್ಕೆಹೀಗೆ ಮಾಡು
    ಮುಂದೆ"
  • 1:17 - 1:19
    ನಾವೆಲ್ಲಾ ಹಾಗೇ ಅಲ್ವಾ ಮಾತಾಡೋದು ?
  • 1:19 - 1:21
    ಮತ್ತೊಂದು "ವಿಸ್ತಾರ ಆಲಿಸುವಿಕೆ"
  • 1:21 - 1:23
    ಸವಿಸ್ತಾರವಾಗಿ ಗಮನವಿಟ್ಟು ಆಲಿಸುವುದು
  • 1:23 - 1:25
    ಇದರಲ್ಲಿ ಪ್ರಯಾಣ ಮುಖ್ಯ,
  • 1:25 - 1:27
    ಗಮ್ಯವಲ್ಲ
  • 1:27 - 1:29
    ಹೆಂಗಸರದ್ದು ವಿಸ್ತಾರ ಆಲಿಸುವಿಕೆ
  • 1:29 - 1:31
    ಈ ಚಿತ್ರದಲ್ಲಿ ಆ ಇಬ್ಬರೂ ಮುಖಾಮುಖಿಯಾಗಿ
  • 1:31 - 1:33
    ಕಣ್ಣಲ್ಲಿ ಕಣ್ಣಿಟ್ಟು ಒಂದೇಸಮ ಮಾತಾಡುತ್ತಿದ್ದಾರೆ
  • 1:33 - 1:36
    (ನಗು)
  • 1:36 - 1:38
    ಈ ಸಭೆಯಿಂದ ಏನೂ ಸಿಗದಿದ್ದರೂ,
  • 1:38 - 1:40
    ಗಂಡಸರು ವಿಸ್ತಾರ ಆಲಿಸುವಿಕೆ ಆರಂಭಿಸಿದರೆ
  • 1:40 - 1:42
    ಸಂಬಂಧಗಳು ಉತ್ತಮಗೊಳ್ಳುತ್ತವೆ
  • 1:42 - 1:45
    ಆಲಿಸಲು ನಮಗೆಲ್ಲಾ ಇರುವ ತೊಂದರೆ
  • 1:45 - 1:48
    ಎಂದರೆ ನಮ್ಮ ಸುತ್ತಲೂ ಇರುವ ಶಬ್ದ
  • 1:48 - 1:51
    ಐರೋಪ್ಯ ಒಕ್ಕೂಟದ ಪ್ರಕಾರ, ಈ ರೀತಿ
  • 1:51 - 1:53
    ಶಬ್ದವು ಯುರೋಪಿನ 25 ಪ್ರತಿಶತದಷ್ಟು
  • 1:53 - 1:55
    ಜನರ ಆರೋಗ್ಯ ಮತ್ತು
  • 1:55 - 1:57
    ಜೀವನ ಗುಣಮಟ್ಟವನ್ನು ಕಡಿಮೆಗೊಳಿಸುತ್ತಿದೆ.
  • 1:57 - 1:59
    ಈ ರೀತಿಯ ಶಬ್ದ ಯುರೋಪಿನ
  • 1:59 - 2:01
    ಜನಸಂಖ್ಯೆಯ ಎರಡು ಶೇಕಡಾ
  • 2:01 - 2:03
    - ಅಂದರೆ 1.6 ಕೋಟಿ ಜನ -
  • 2:03 - 2:05
    ಅವರ ನಿದ್ರೆ ಧ್ವಂಸಗೊಳಿಸುತ್ತದೆ
  • 2:05 - 2:07
    ಶಬ್ದವು ಯುರೋಪ್ನಲ್ಲಿ ವರ್ಷಕ್ಕೆ 200,000
  • 2:07 - 2:09
    ಜನರನ್ನು ಕೊಲ್ಲುತ್ತದೆ.
  • 2:09 - 2:11
    ಇದು ನಿಜವಾಗಿಯೂ ದೊಡ್ಡ ಸಮಸ್ಯೆ.
  • 2:11 - 2:13
    ಚಿಕ್ಕಂದಿನಲ್ಲಿ ನಿಮಗೆ ಇಷ್ಟವಿಲ್ಲದ ಶಬ್ದ ಇದ್ದಾಗ
  • 2:13 - 2:15
    ಕಿವಿ ಮುಚ್ಚಿಕೊಳ್ಳುತ್ತಿದ್ದೀರಲ್ಲವಾ,
  • 2:15 - 2:18
    ಈಗಲೂ ಅದನ್ನೇ ಮಾಡಬಹುದು,
  • 2:18 - 2:20
    ನೋಡಿ - ಈ ರೀತಿ ಕಾಣುತ್ತೆ
  • 2:20 - 2:22
    ಅತಿಯಾದ ಹೆಡ್ ಫೋನ್ ಬಳಕೆ ಮೂರು
  • 2:22 - 2:25
    ರೀತಿಯ ಬೃಹತ್ ಆರೋಗ್ಯ ಸಮಸ್ಯೆ ಒಡ್ದಬಹುದು
  • 2:25 - 2:28
    ಮೊಟ್ಟಮೊದಲ ದೊಡ್ಡ ಆರೋಗ್ಯ ಸಮಸ್ಯೆ
  • 2:28 - 2:30
    "ಸ್ಕಿಜೋಫೋನಿಯಾ."
  • 2:30 - 2:32
    ನೀವು ನೋಡುವುದಕ್ಕೂ ಮತ್ತು ನೀವು ಕೇಳುವುದಕ್ಕೂ
  • 2:32 - 2:34
    ಹೊಂದಾಣಿಕೆ ಇರುವುದಿಲ್ಲ
  • 2:34 - 2:36
    ಅಂದರೆ, ನಮ್ಮೊಂದಿಗೆ ಇಲ್ಲದವರ ಧ್ವನಿ ಕೂಡಾ
  • 2:36 - 2:39
    ನಮಗೆ ಕೇಳಿಸುತ್ತದೆ
  • 2:39 - 2:41
    ಸ್ಕಿಜೋಫೋನಿಯಾ ಸ್ಥಿತಿಯಲ್ಲೇ ನಿರಂತರವಾಗಿ
  • 2:41 - 2:43
    ಇರುವುದು ಅನಾರೋಗ್ಯ ಎಂದೇ ನಾನು ಭಾವಿಸುತ್ತೇನೆ
  • 2:43 - 2:45
    ಹೆಡ್ಫೋನ್ ದುರುಪಯೋಗದಿಂದ ಬರುವ ಎರಡನೆಯ ಸಮಸ್ಯೆ
  • 2:45 - 2:47
    ಸಂಕೋಚನವಾಗಿದೆ.
  • 2:47 - 2:49
    ನಾವು ಯಾವಾಗಲೂ ಹೆಡ್ಫೋನ್ ಬಳಸಿಕೇಳುವ ಸಂಗೀತಕ್ಕೂ
  • 2:49 - 2:51
    ಬೆಲೆ ತೆರಬೇಕಾಗುತ್ತದೆ
  • 2:51 - 2:54
    ಇದು ಸಂಕ್ಷೇಪಿಸದ ಸಂಗೀತದ ತುಣುಕು - ಕೇಳಿ
  • 2:54 - 2:57
    (ಸಂಗೀತ)
  • 3:00 - 3:03
    ಮತ್ತೀಗ 98% ರಷ್ಟು ತೆಗೆದುಹಾಕಿರುವ ಅದೇ ಸಂಗೀತ
  • 3:03 - 3:07
    (ಸಂಗೀತ)
  • 3:07 - 3:09
    ಅವೆರಡರ ನಡುವೆ ವ್ಯತ್ಯಾಸ ಕೆಲವರಿಗಾದರೂ
  • 3:09 - 3:11
    ಕೇಳಿಸಿದೆ ಅಂದುಕೊಂಡಿದ್ದೇನೆ
  • 3:11 - 3:13
    ಸಂಕೋಚನದ ಲಕ್ಷಣ ಎಂದರೆ ಅದು
  • 3:13 - 3:15
    ನಿಮಗೆ ದಣಿವನ್ನುಂಟು ಮಾಡುತ್ತದೆ ಕೆರಳಿಸುತ್ತದೆ
  • 3:15 - 3:17
    ನೀವು ಇದನ್ನು ಊಹಿಸಬೇಕಾಗುತ್ತದೆ.
  • 3:17 - 3:19
    ದೀರ್ಘ ಕಾಲದಲ್ಲಿ ಅದು ಒಳ್ಳೆಯದಲ್ಲ
  • 3:19 - 3:22
    ಹೆಡ್ ಫೋನ್ ಬಳಕೆಯಿಂದ ಮೂರನೆ ಸಮಸ್ಯೆ - ಕಿವುಡುತನ
  • 3:22 - 3:24
    ಶಬ್ದಪ್ರೇರಿತ ಕೇಳವಿಕೆಯ ಅಸ್ವಸ್ಥತೆ.
  • 3:24 - 3:27
    ಒಂದು ಕೋಟಿ ಅಮೆರಿಕನ್ನರು ಇವುಗಳಿಂದ
  • 3:27 - 3:29
    ಕಂಗೆಟ್ಟಿದ್ದಾರೆ, ನಿಜವಾಗಿಯೂ ಚಿಂತಿಸಬೇಕಾದ್ದು
  • 3:29 - 3:31
    ಎಂದರೆ ೧೬ ಪ್ರತಿಶತ
  • 3:31 - 3:33
    ಪ್ರತೀ ಆರರಲ್ಲೊಬ್ಬ ಅಮೇರಿಕದ ಯುವಕರು
  • 3:33 - 3:35
    ಶಬ್ದಪ್ರೇರಿತ ಕೇಳವಿಕೆಯ ಅಸ್ವಸ್ಥತೆ ಹೊಂದಿದ್ದಾರೆ
  • 3:35 - 3:38
    ಇದೆಲ್ಲಾ ಹೆಡ್ ಫೋನ್ ಅತೀಬಳಕೆ ಮಹಾತ್ಮೆ
  • 3:38 - 3:40
    ಅಮೆರಿಕಾದ ವಿಶ್ವವಿದ್ಯಾಲಯದ ಒಂದು ಅಧ್ಯಯನ
  • 3:40 - 3:43
    ಕಂಡುಕೊಂಡಿದ್ದು ಹೆಡ್ಫೋನ್ ದುರುಪಯೋಗದ
  • 3:43 - 3:45
    ಪರಿಣಾಮ ಶೇಕಡಾ 61 ರಷ್ಟು ಕಾಲೇಜು
  • 3:45 - 3:47
    ವಿದ್ಯಾರ್ಥಿಗಳು ತೊಂದರೆಗೀಡಾಗಿದ್ದಾರೆ
  • 3:47 - 3:50
    ನಾವು ಕಿವುಡರ ಪೀಳಿಗೆಯನ್ನು
    ಹುಟ್ಟುಹಾಕುತ್ತಿರಬಹುದು
  • 3:50 - 3:52
    ಅದು ನಿಜವಾಗಿಯೂ ಗಂಭೀರ ಸಮಸ್ಯೆಯಾಗಿದೆ.
  • 3:52 - 3:54
    ನಿಮ್ಮ ಕಿವಿಗಳನ್ನು ರಕ್ಷಿಸಲು ನಾನು ಮೂರು ಸಲಹೆ
  • 3:54 - 3:56
    ನೀಡುತ್ತೇನೆ, ನಿಮ್ಮ ಮಕ್ಕಳಿಗೂ ಹೇಳಿ
  • 3:56 - 3:58
    ಉತ್ತಮ ಹಿಯರಿಂಗ್ ಪ್ರೊಟೆಕ್ಟರ ನಿಜಕ್ಕೂ ಅದ್ಭುತ
  • 3:58 - 4:00
    ನಾನು ಯಾವಾಗಲೂ ಬಳಸುತ್ತೇನೆ
  • 4:00 - 4:03
    ಸಾಧ್ಯವಾದಷ್ಟೂಒಳ್ಳೆಯ ಹೆಡ್ ಫೋನ್ ಕೊಳ್ಳಿ ಹೆಚ್ಚು
  • 4:03 - 4:05
    ಶಬ್ದ ಬರುವುದಲ್ಲ ಹೆಚ್ಚು ಶಬ್ದದ ಅವಶ್ಯ ನಮಗಿಲ್ಲ
  • 4:05 - 4:07
    ಬಹಳ ದೊಡ್ದಧ್ವನಿಯಲ್ಲಿ ಯಾರಾದರೂ ಮಾತಾಡಿದರೆ
  • 4:07 - 4:09
    ಅದು ಶಬ್ದ ಅಷ್ಟೇ
  • 4:09 - 4:11
    ನೀವು ಶಬ್ದಮಾಲಿನ್ಯದ ಕಡೆ ಇದ್ದರೆ ಕಿವಿಯನ್ನು
  • 4:11 - 4:13
    ಬೆರಳಿಂದ ಮುಚ್ಚಿಕೊಂಡು ಅಲ್ಲಿಂದ ಹೊರಡಿ
  • 4:13 - 4:15
    ಈ ರೀತಿ ನಿಮ್ಮ ಕಿವಿಗಳನ್ನು ರಕ್ಷಿಸಿಕೊಳ್ಳಿ
  • 4:15 - 4:18
    ಕೆಟ್ಟದ್ದರ ಬದಲು ಒಳ್ಳೆಯದರ ಬಗ್ಗೆ ಸ್ವಲ್ಪ ನೋಡೋಣ
  • 4:18 - 4:20
    WWB
  • 4:20 - 4:23
    Wind Water Birds
  • 4:23 - 4:25
    ಸಂಭವನೀಯ ನೈಸರ್ಗಿಕ ಶಬ್ದಗಳು
  • 4:25 - 4:27
    ಸಾಕಷ್ಟು ಯಾದೃಚ್ಛಿಕ ಘಟನೆಗಳ ಸಂಯೋಜನೆ
  • 4:28 - 4:30
    ಇದು ಎಲ್ಲಾ ತುಂಬಾ ಆರೋಗ್ಯಕರ
  • 4:30 - 4:32
    ನಾವು ಮುಂದುವರಿದ ಲಕ್ಷಣ ಇದು
  • 4:32 - 4:35
    ನಿಮಗೆ ಒಳ್ಳೆಯದೆನಿಸುವ ಶಬ್ದಗಳನ್ನು ಕಂಡುಕೊಳ್ಳಿ
  • 4:38 - 4:40
    ಮೌನವೂ ಸುಂದರ, ಮಧುರ
  • 4:40 - 4:42
    ಎಲಿಜೆಬೆಥ್ ಯುಗದವರು ಭಾಷೆಯನ್ನು ಅಲಂಕೃತ
  • 4:42 - 4:44
    ಮೌನವೆಂದು ವರ್ಣಿಸಿದ್ದಾರೆ. ಉದ್ದೇಶಪೂರ್ವಕವಾಗಿ
  • 4:44 - 4:47
    ಮೌನದಿಂದ ದೂರವಿರಲು ಮತ್ತು ಕಲೆಯ ರೀತಿಯಲ್ಲಿ
    ಧ್ವನಿಗಳನ್ನು
  • 4:47 - 4:50
    ವಿನ್ಯಾಸಗೊಳಿಸಲು ನಿಮ್ಮನ್ನು ಕೇಳಿಕೊಳ್ಳುತ್ತೇನೆ
  • 4:50 - 4:53
    ಮುನ್ನೆಲೆ ಹಿನ್ನೆಲೆ ಧ್ವನಿಗಳನ್ನು ಹದವಾಗಿ
    ಬೆರೆಸಿ
  • 4:53 - 4:55
    ಧ್ವನಿವಿನ್ಯಾಸ ಖುಶಿ ಕೊಡುತ್ತದೆ
  • 4:55 - 4:58
    ನಿಮಗಾಗದಿದ್ದರೆ ನಿಪುಣರ ಸಹಾಯ ಪಡೆಯಿರಿ
  • 4:58 - 5:00
    ಧ್ವನಿವಿನ್ಯಾಸ ಮುಂದಿನ ಭವಿಷ್ಯ
  • 5:00 - 5:03
    ಈ ರೀತಿ ನಾವು ಪ್ರಪಂಚದ ಧ್ವನಿಯನ್ನೇ ಬದಲಿಸಬಹುದು
  • 5:03 - 5:05
    ನಾನೀಗ ಎಂಟು ವಿಧಾನಗಳನ್ನು ಹೇಳುತ್ತೇನೆ
  • 5:05 - 5:08
    ಆರೋಗ್ಯ ಸುಧಾರಣೆಗೂ ಈ ಎಂಟು ಧ್ವನಿ ಸಹಕಾರಿ
  • 5:08 - 5:11
    ಮೊದಲನೆಯದಾಗಿ ಅಲ್ಟ್ರಾಸೌಂಡ್, ಇದು ಗೊತ್ತಿರುವುದೇ
  • 5:11 - 5:13
    ಇದು ಈಗ ಕ್ಯಾನ್ಸರ ಚಿಕಿತ್ಸೆಗೂ ಬಳಸಲಾಗುತ್ತಿದೆ.
  • 5:13 - 5:16
    ಲಿಥೊಟ್ರಿಪ್ಸಿ - ಹೆಚ್ಚು ಧ್ವನಿತೀವ್ರತೆಯ ಗಣಿ ಪ್ರದೇಶದ
  • 5:16 - 5:19
    ಸಾವಿರಾರು ಜನರಿಗೆ ಉಪಯುಕ್ತ
  • 5:19 - 5:21
    ಧ್ವನಿಚಿಕಿತ್ಸೆ ಒಂದು ಅಧ್ಭುತ ವಿಧಾನವಾಗಿದೆ
  • 5:21 - 5:23
    ಸಹಸ್ರಾರು ವರ್ಷಗಳಿಂದಲೂ ಇದೆ
  • 5:23 - 5:25
    ಇದನ್ನು ಅನ್ವೇಷಿಸಲು ನಾನು ಕೇಳಿಕೊಳ್ಳುತ್ತೇನೆ
  • 5:25 - 5:27
    ಸ್ವಲೀನತೆ, ಬುದ್ದಿಮಾಂದ್ಯತೆ ಮುಂತಾದ ಹಲವಕ್ಕೆ
  • 5:27 - 5:29
    ಚಿಕಿತ್ಸೆ ಅದರಲ್ಲಿ ಲಭ್ಯವಿದೆ
  • 5:29 - 5:32
    ಮತ್ತೆ ಸಂಗೀತ. ಸಂಗೀತ ಕೇಳುವುದು ಆರೋಗ್ಯಕರ
  • 5:32 - 5:34
    ಸದುದ್ದೇಶ ಪ್ರೀತಿಯಿಂದ ಕೂಡಿದ ಸಂಗೀತವಾಗಿದ್ದರೆ
  • 5:34 - 5:36
    ಅದು ಆರೋಗ್ಯಕರ ಸಂಗೀತ
  • 5:36 - 5:38
    ಭಕ್ತಿ ಸಂಗೀತ - ಒಳ್ಳೆಯದು. ಶಾಸ್ತ್ರೀಯ ಸಂಗೀತ ಸಹ
  • 5:38 - 5:40
    ತುಂಬಾ ಆರೋಗ್ಯಕರವಾಗಿರುವ ಎಲ್ಲಾವಿಧದ
  • 5:40 - 5:42
    ಸಂಗೀತಗಳಿವೆ
  • 5:42 - 5:44
    ನೀವು ಕ್ರಮತೆಗೆದುಕೊಳ್ಳಬೇಕಾದ ನಾಲ್ಕು
  • 5:44 - 5:46
    ವಿಧಾನಗಳಿವೆ
  • 5:46 - 5:48
    ಮೊದಲನೆಯದಾಗಿ, ಗಮನವಿಟ್ಟು ಕೇಳಿ ಈ ಭಾಷಣದ ನಂತರ
  • 5:48 - 5:50
    ನೀವು ಅದನ್ನು ಮಾಡುತ್ತೀರಿ ಎಂದು ಭಾವಿಸುತ್ತೇನೆ.
  • 5:50 - 5:53
    ಜೀವನಕ್ಕೆ ಒಂದು ಹೊಸ ಆಯಾಮವನ್ನೇ ಇದು ನೀಡುತ್ತದೆ
  • 5:53 - 5:56
    ಎರಡನೆಯದಾಗಿ, ಕೆಲವು ಶಬ್ದ ನೀವೇ ಮಾಡಿ
  • 5:56 - 5:58
    ಧ್ವನಿ ರಚಿಸಿ.
  • 5:58 - 6:00
    ನಮ್ಮೆಲ್ಲರ ವಾದ್ಯ ಧ್ವನಿ.
  • 6:00 - 6:03
    ಧ್ವನಿ ಉತ್ತಮಪಡಿಸಿಕೊಳ್ಳಲು ತರಬೇತಿ ಪಡೆಯಿರಿ.
  • 6:03 - 6:05
    ಹಾಡಲು, ವಾದ್ಯ ನುಡಿಸಲು ಕಲಿಯಿರಿ
  • 6:05 - 6:08
    ಸಂಗೀತಗಾರರ ಮಿದುಳು ದೊಡ್ಡದು, ಇದು ಸತ್ಯ
  • 6:08 - 6:10
    ನೀವಿದನ್ನು ಗುಂಪಾಗಿಯೂ ಮಾಡಬಹುದು
  • 6:10 - 6:12
    ಇದು ಸ್ಕಿಜೋಫೊನಿಯಕ್ಕೆ ಒಂದು ಅದ್ಭುತ ಔಷಧ
  • 6:12 - 6:14
    ಚೇತೋಹಾರಿಯಾದ ಧ್ವನಿರಚನೆ ಗುಂಪಿನಲ್ಲಿ ಮಾಡಿ
  • 6:14 - 6:17
    ನಿಮಗೆ ಆಹ್ಲಾದವೆನಿಸಬೇಕು
  • 6:17 - 6:19
    ನೀವೇ ಈ ಹೊಸ ಶಬ್ದ ಪ್ರಪಂಚದ ಪ್ರತಿನಿಧಿಯಾಗಿ
  • 6:19 - 6:21
    ಕಿವಿಗಳನ್ನು ಕಾಪಾಡಿಕೊಳ್ಳಬೇಕಾ ? ಖಂಡಿತವಾಗಿಯೂ
  • 6:21 - 6:23
    ನಿಮ್ಮ ಸುತ್ತಲೂ ಆರೋಗ್ಯಕರ ಧ್ವನಿವಿನ್ಯಾಸಗಳನ್ನು
  • 6:23 - 6:25
    ಇಟ್ಟುಕೊಳ್ಳಿ ಮನೆಯಲ್ಲಿ ಕೆಲಸದ ಸ್ಥಳದಲ್ಲಿ ಎಲ್ಲಾ
  • 6:25 - 6:27
    ಮತ್ತು ಜನರು ನಮ್ಮನ್ನು ಆಕ್ರಮಣ ಮಾಡುವಾಗ
  • 6:27 - 6:29
    ಮಾತನಾಡಲು ಪ್ರಾರಂಭಿಸೋಣ
  • 6:29 - 6:31
    ನಾನು ಮೊದಲೇ ನಾನು ಹಾಕಿದ ಗದ್ದಲದಿಂದ.
  • 6:31 - 6:34
    ಧ್ವನಿಯೊಂದಿಗೆ ನಿಮ್ಮ ಆರೋಗ್ಯವನ್ನು ಸುಧಾರಿಸಲು
  • 6:34 - 6:36
    ನೀವು ಏಳು ವಿಷಯಗಳನ್ನು ಮಾಡಬಹುದು.
  • 6:36 - 6:39
    ನನ್ನ ದೃಷ್ಟಿಯಲ್ಲಿ ಪ್ರಪಂಚ ಉತ್ತಮ ಶಬ್ದಗಳಿಂದ
  • 6:39 - 6:41
    ಕೂಡಿದೆ. ಎಲ್ಲರೂ ಇದೇ ಮಾಡಿದರೆ ಒಂದು ಹೊಸ
  • 6:41 - 6:43
    ವಿಶ್ವಕ್ಕೆ ದಾಪುಗಾಲಿಟ್ಟಂತೆ.
  • 6:43 - 6:46
    ಆ ಪಥದೆಡೆಗೆ ಹೆಜ್ಜೆ ಹಾಕಲು ವಿನಂತಿಸುತ್ತೇನೆ
  • 6:46 - 6:48
    ಒಳ್ಳೆಯ ಕಲರವ ಧ್ವನಿ ನೀಡಿ ನಿರ್ಗಮಿಸುತ್ತಿದ್ದೇನೆ
  • 6:48 - 6:50
    ಉತ್ತಮ ಧ್ವನಿ ಆರೋಗ್ಯ ನಿಮ್ಮದಾಗಲಿ
  • 6:50 - 6:53
    (ಚಪ್ಪಾಳೆ)
Title:
೮ ಹೆಜ್ಜೆಗಳು - ಧ್ವನಿ ಆರೋಗ್ಯದೆಡೆಗೆ
Speaker:
ಜೂಲಿಯನ್ ಟ್ರೀಶರ್
Description:

ಜೂಲಿಯನ್ ಟ್ರೆಷರ್ ನಮ್ಮ ಹೆಚ್ಚುತ್ತಿರುವ ಗದ್ದಲ ಪ್ರಪಂಚವು ನಮ್ಮ ಮಾನಸಿಕ ಆರೋಗ್ಯಕ್ಕೆ ಹಾನಿ ಮಾಡುತ್ತಿದೆ, ಸಾವಿಗೂ ಕಾರಣವಾಗುತ್ತಿದೆ ಎಂದು ಹೇಳುತ್ತಾರೆ. ಅವರು ಈ ಸೋಂಕಿನ ಆಕ್ರಮಣವನ್ನು ಮೃದುಗೊಳಿಸಲು 8-ಹಂತದ ಯೋಜನೆಯನ್ನು ಪ್ರಸ್ತುತಪಡಿಸಿ ಧ್ವನಿಯೊಂದಿಗಿನ ನಮ್ಮ ಸಂಬಂಧವನ್ನು ಮರುಸ್ಥಾಪಿಸುತ್ತಾರೆ.

more » « less
Video Language:
English
Team:
closed TED
Project:
TEDTalks
Duration:
06:54
TED Translators admin approved Kannada subtitles for Shh! Sound health in 8 steps
Gananath S N accepted Kannada subtitles for Shh! Sound health in 8 steps
Gananath S N edited Kannada subtitles for Shh! Sound health in 8 steps
Harsha DP edited Kannada subtitles for Shh! Sound health in 8 steps
Gananath S N declined Kannada subtitles for Shh! Sound health in 8 steps
Gananath S N edited Kannada subtitles for Shh! Sound health in 8 steps
Harsha DP edited Kannada subtitles for Shh! Sound health in 8 steps

Kannada subtitles

Revisions