ನಾದಬ್ರಹ್ಮ ಎಂದರೆ ಶಬ್ದವನ್ನು ಬ್ರಹ್ಮನಿಗೆ ಹೋಲಿಸಿದ್ದಾರೆ ಹಿಂದೂಗಳು. ಅದು ಸತ್ಯವೇ, ಏಕೆಂದರೆ ಎಲ್ಲವೂ ಕಂಪಿಸುತ್ತವೆ. ನೀವು ಕೂತಿರುವಾಗಲೂ ಕಂಪಿಸುತ್ತಿದ್ದೀರಿ. ದೇಹದ ಅಂಗಗಳು ತಮ್ಮದೇ ತರಂಗಾಂತರದಲ್ಲಿ ಕಂಪಿಸುತ್ತಿವೆ ಕಂಪನವಿದ್ದಮೇಲೆ ಸ್ವರವಿದೆ. ನೀವೊಂದು ಸ್ವರಮೇಳ ಇದ್ದಂತೆ ಆರೋಗ್ಯದ ಒಂದು ವ್ಯಾಖ್ಯಾನವೆಂದರೆ ಆ ಸ್ವರಮೇಳವು ಸಂಪೂರ್ಣ ಸಾಮರಸ್ಯದಲ್ಲಿದೆ. ನಿಮ್ಮ ಕಿವಿಗಳಿಗೆ ಆ ಸ್ವರಮೇಳ ಕೇಳುತ್ತಿಲ್ಲ ಕಿವಿಗಳು ಅದ್ಭುತವಾದ ೧೦ ಸಂಗತಿಗಳನ್ನು ಕೇಳಬಲ್ಲದು. ಇದೂ ಅದರಲ್ಲೊಂದು ಕಿವಿಗೆ ರೆಪ್ಪೆ ಮುಚ್ಚಳಗಳಿಲ್ಲ, ಯಾವಾಗಲೂ ಜಾಗೃತ ನಿದ್ರಿಸುವಾಗಲೂ ಅವು ಕೇಳಬಲ್ಲವು ಗ್ರಹಿಕೆಗೆ ಬರಬಲ್ಲ ಶಬ್ದವು ಕಿವಿಪದರವನ್ನು ನಾಲ್ಕುಪರಮಾಣು ವ್ಯಾಸದಷ್ಟು ಚಲಿಸುತ್ತದೆ ನೀವು ಕೇಳಬಲ್ಲ ಅತೀ ಗಟ್ಟಿಯಾದಶಬ್ದವು ಆ ಸಣ್ಣ ಶಬ್ದಕ್ಕಿಂತ ಶತಕೋಟಿ ಪಟ್ಟು ಹೆಚ್ಚು ಕಿವಿಗಳಿರುವುದು ಆಲಿಸಲು; ಕೇಳುವುದಕ್ಕಲ್ಲ ಕೇಳುವುದು ಎಂದರೆ ನಾವು ಏನೂ ಮಾಡದೆ ನಮ್ಮ ಕಿವಿಗೆ ಬೀಳುವ ಶಬ್ದ, ಆಲಿಸುವುದು ಒಂದು ಸಕ್ರಿಯ ಕೌಶಲ್ಯ ನಾವು ಧ್ವನಿಯೊಂದಿಗಿನ ಸಂಬಂಧ ಹೊಂದಿರಬೇಕಾದ ವಿಷಯ, ನಮಗೆ ಯಾರೂ ಕಲಿಸದ ಒಂದು ಕೌಶಲ್ಯ ಉದಾಹರಣೆಗೆ ,ನೀವು ಆಲಿಸಲೂ ಕೆಲವು ಸ್ಥಳಗಳಿವೆ ಎಂದು ಯೋಚಿಸಿದ್ದೀರಾ ? ಅವುಗಳಲ್ಲಿ ಎರಡು ಇಲ್ಲಿವೆ. ತಿಳಿಆಲಿಸುವಿಕೆ ಎಂದರೆ - ಆಲಿಸಬೇಕಿರುವುದು ನಮಗೇನು ಬೇಕೋ ಅಗತ್ಯವಿದ್ದಷ್ಟು ಮಾತ್ರ ಆಲಿಸಿ ಮಿಕ್ಕಿದ್ದನ್ನು ಬಿಡುವುದು. ಗಂಡಸರು ಹಾಗೆಯೇ - ಕುಗ್ಗಿಸಿ ಆಲಿಸುವುದು ಅವನು ಹೇಳ್ತಾನೆ "ನನಗೆ ಈ ಸಮಸ್ಯೆ ಇದೆ" ಇವನು ಹೇಳ್ತಾನೆ "ಹೌದಾ ಅದಕ್ಕೆಹೀಗೆ ಮಾಡು ಮುಂದೆ" ನಾವೆಲ್ಲಾ ಹಾಗೇ ಅಲ್ವಾ ಮಾತಾಡೋದು ? ಮತ್ತೊಂದು "ವಿಸ್ತಾರ ಆಲಿಸುವಿಕೆ" ಸವಿಸ್ತಾರವಾಗಿ ಗಮನವಿಟ್ಟು ಆಲಿಸುವುದು ಇದರಲ್ಲಿ ಪ್ರಯಾಣ ಮುಖ್ಯ, ಗಮ್ಯವಲ್ಲ ಹೆಂಗಸರದ್ದು ವಿಸ್ತಾರ ಆಲಿಸುವಿಕೆ ಈ ಚಿತ್ರದಲ್ಲಿ ಆ ಇಬ್ಬರೂ ಮುಖಾಮುಖಿಯಾಗಿ ಕಣ್ಣಲ್ಲಿ ಕಣ್ಣಿಟ್ಟು ಒಂದೇಸಮ ಮಾತಾಡುತ್ತಿದ್ದಾರೆ (ನಗು) ಈ ಸಭೆಯಿಂದ ಏನೂ ಸಿಗದಿದ್ದರೂ, ಗಂಡಸರು ವಿಸ್ತಾರ ಆಲಿಸುವಿಕೆ ಆರಂಭಿಸಿದರೆ ಸಂಬಂಧಗಳು ಉತ್ತಮಗೊಳ್ಳುತ್ತವೆ ಆಲಿಸಲು ನಮಗೆಲ್ಲಾ ಇರುವ ತೊಂದರೆ ಎಂದರೆ ನಮ್ಮ ಸುತ್ತಲೂ ಇರುವ ಶಬ್ದ ಐರೋಪ್ಯ ಒಕ್ಕೂಟದ ಪ್ರಕಾರ, ಈ ರೀತಿ ಶಬ್ದವು ಯುರೋಪಿನ 25 ಪ್ರತಿಶತದಷ್ಟು ಜನರ ಆರೋಗ್ಯ ಮತ್ತು ಜೀವನ ಗುಣಮಟ್ಟವನ್ನು ಕಡಿಮೆಗೊಳಿಸುತ್ತಿದೆ. ಈ ರೀತಿಯ ಶಬ್ದ ಯುರೋಪಿನ ಜನಸಂಖ್ಯೆಯ ಎರಡು ಶೇಕಡಾ - ಅಂದರೆ 1.6 ಕೋಟಿ ಜನ - ಅವರ ನಿದ್ರೆ ಧ್ವಂಸಗೊಳಿಸುತ್ತದೆ ಶಬ್ದವು ಯುರೋಪ್ನಲ್ಲಿ ವರ್ಷಕ್ಕೆ 200,000 ಜನರನ್ನು ಕೊಲ್ಲುತ್ತದೆ. ಇದು ನಿಜವಾಗಿಯೂ ದೊಡ್ಡ ಸಮಸ್ಯೆ. ಚಿಕ್ಕಂದಿನಲ್ಲಿ ನಿಮಗೆ ಇಷ್ಟವಿಲ್ಲದ ಶಬ್ದ ಇದ್ದಾಗ ಕಿವಿ ಮುಚ್ಚಿಕೊಳ್ಳುತ್ತಿದ್ದೀರಲ್ಲವಾ, ಈಗಲೂ ಅದನ್ನೇ ಮಾಡಬಹುದು, ನೋಡಿ - ಈ ರೀತಿ ಕಾಣುತ್ತೆ ಅತಿಯಾದ ಹೆಡ್ ಫೋನ್ ಬಳಕೆ ಮೂರು ರೀತಿಯ ಬೃಹತ್ ಆರೋಗ್ಯ ಸಮಸ್ಯೆ ಒಡ್ದಬಹುದು ಮೊಟ್ಟಮೊದಲ ದೊಡ್ಡ ಆರೋಗ್ಯ ಸಮಸ್ಯೆ "ಸ್ಕಿಜೋಫೋನಿಯಾ." ನೀವು ನೋಡುವುದಕ್ಕೂ ಮತ್ತು ನೀವು ಕೇಳುವುದಕ್ಕೂ ಹೊಂದಾಣಿಕೆ ಇರುವುದಿಲ್ಲ ಅಂದರೆ, ನಮ್ಮೊಂದಿಗೆ ಇಲ್ಲದವರ ಧ್ವನಿ ಕೂಡಾ ನಮಗೆ ಕೇಳಿಸುತ್ತದೆ ಸ್ಕಿಜೋಫೋನಿಯಾ ಸ್ಥಿತಿಯಲ್ಲೇ ನಿರಂತರವಾಗಿ ಇರುವುದು ಅನಾರೋಗ್ಯ ಎಂದೇ ನಾನು ಭಾವಿಸುತ್ತೇನೆ ಹೆಡ್ಫೋನ್ ದುರುಪಯೋಗದಿಂದ ಬರುವ ಎರಡನೆಯ ಸಮಸ್ಯೆ ಸಂಕೋಚನವಾಗಿದೆ. ನಾವು ಯಾವಾಗಲೂ ಹೆಡ್ಫೋನ್ ಬಳಸಿಕೇಳುವ ಸಂಗೀತಕ್ಕೂ ಬೆಲೆ ತೆರಬೇಕಾಗುತ್ತದೆ ಇದು ಸಂಕ್ಷೇಪಿಸದ ಸಂಗೀತದ ತುಣುಕು - ಕೇಳಿ (ಸಂಗೀತ) ಮತ್ತೀಗ 98% ರಷ್ಟು ತೆಗೆದುಹಾಕಿರುವ ಅದೇ ಸಂಗೀತ (ಸಂಗೀತ) ಅವೆರಡರ ನಡುವೆ ವ್ಯತ್ಯಾಸ ಕೆಲವರಿಗಾದರೂ ಕೇಳಿಸಿದೆ ಅಂದುಕೊಂಡಿದ್ದೇನೆ ಸಂಕೋಚನದ ಲಕ್ಷಣ ಎಂದರೆ ಅದು ನಿಮಗೆ ದಣಿವನ್ನುಂಟು ಮಾಡುತ್ತದೆ ಕೆರಳಿಸುತ್ತದೆ ನೀವು ಇದನ್ನು ಊಹಿಸಬೇಕಾಗುತ್ತದೆ. ದೀರ್ಘ ಕಾಲದಲ್ಲಿ ಅದು ಒಳ್ಳೆಯದಲ್ಲ ಹೆಡ್ ಫೋನ್ ಬಳಕೆಯಿಂದ ಮೂರನೆ ಸಮಸ್ಯೆ - ಕಿವುಡುತನ ಶಬ್ದಪ್ರೇರಿತ ಕೇಳವಿಕೆಯ ಅಸ್ವಸ್ಥತೆ. ಒಂದು ಕೋಟಿ ಅಮೆರಿಕನ್ನರು ಇವುಗಳಿಂದ ಕಂಗೆಟ್ಟಿದ್ದಾರೆ, ನಿಜವಾಗಿಯೂ ಚಿಂತಿಸಬೇಕಾದ್ದು ಎಂದರೆ ೧೬ ಪ್ರತಿಶತ ಪ್ರತೀ ಆರರಲ್ಲೊಬ್ಬ ಅಮೇರಿಕದ ಯುವಕರು ಶಬ್ದಪ್ರೇರಿತ ಕೇಳವಿಕೆಯ ಅಸ್ವಸ್ಥತೆ ಹೊಂದಿದ್ದಾರೆ ಇದೆಲ್ಲಾ ಹೆಡ್ ಫೋನ್ ಅತೀಬಳಕೆ ಮಹಾತ್ಮೆ ಅಮೆರಿಕಾದ ವಿಶ್ವವಿದ್ಯಾಲಯದ ಒಂದು ಅಧ್ಯಯನ ಕಂಡುಕೊಂಡಿದ್ದು ಹೆಡ್ಫೋನ್ ದುರುಪಯೋಗದ ಪರಿಣಾಮ ಶೇಕಡಾ 61 ರಷ್ಟು ಕಾಲೇಜು ವಿದ್ಯಾರ್ಥಿಗಳು ತೊಂದರೆಗೀಡಾಗಿದ್ದಾರೆ ನಾವು ಕಿವುಡರ ಪೀಳಿಗೆಯನ್ನು ಹುಟ್ಟುಹಾಕುತ್ತಿರಬಹುದು ಅದು ನಿಜವಾಗಿಯೂ ಗಂಭೀರ ಸಮಸ್ಯೆಯಾಗಿದೆ. ನಿಮ್ಮ ಕಿವಿಗಳನ್ನು ರಕ್ಷಿಸಲು ನಾನು ಮೂರು ಸಲಹೆ ನೀಡುತ್ತೇನೆ, ನಿಮ್ಮ ಮಕ್ಕಳಿಗೂ ಹೇಳಿ ಉತ್ತಮ ಹಿಯರಿಂಗ್ ಪ್ರೊಟೆಕ್ಟರ ನಿಜಕ್ಕೂ ಅದ್ಭುತ ನಾನು ಯಾವಾಗಲೂ ಬಳಸುತ್ತೇನೆ ಸಾಧ್ಯವಾದಷ್ಟೂಒಳ್ಳೆಯ ಹೆಡ್ ಫೋನ್ ಕೊಳ್ಳಿ ಹೆಚ್ಚು ಶಬ್ದ ಬರುವುದಲ್ಲ ಹೆಚ್ಚು ಶಬ್ದದ ಅವಶ್ಯ ನಮಗಿಲ್ಲ ಬಹಳ ದೊಡ್ದಧ್ವನಿಯಲ್ಲಿ ಯಾರಾದರೂ ಮಾತಾಡಿದರೆ ಅದು ಶಬ್ದ ಅಷ್ಟೇ ನೀವು ಶಬ್ದಮಾಲಿನ್ಯದ ಕಡೆ ಇದ್ದರೆ ಕಿವಿಯನ್ನು ಬೆರಳಿಂದ ಮುಚ್ಚಿಕೊಂಡು ಅಲ್ಲಿಂದ ಹೊರಡಿ ಈ ರೀತಿ ನಿಮ್ಮ ಕಿವಿಗಳನ್ನು ರಕ್ಷಿಸಿಕೊಳ್ಳಿ ಕೆಟ್ಟದ್ದರ ಬದಲು ಒಳ್ಳೆಯದರ ಬಗ್ಗೆ ಸ್ವಲ್ಪ ನೋಡೋಣ WWB Wind Water Birds ಸಂಭವನೀಯ ನೈಸರ್ಗಿಕ ಶಬ್ದಗಳು ಸಾಕಷ್ಟು ಯಾದೃಚ್ಛಿಕ ಘಟನೆಗಳ ಸಂಯೋಜನೆ ಇದು ಎಲ್ಲಾ ತುಂಬಾ ಆರೋಗ್ಯಕರ ನಾವು ಮುಂದುವರಿದ ಲಕ್ಷಣ ಇದು ನಿಮಗೆ ಒಳ್ಳೆಯದೆನಿಸುವ ಶಬ್ದಗಳನ್ನು ಕಂಡುಕೊಳ್ಳಿ ಮೌನವೂ ಸುಂದರ, ಮಧುರ ಎಲಿಜೆಬೆಥ್ ಯುಗದವರು ಭಾಷೆಯನ್ನು ಅಲಂಕೃತ ಮೌನವೆಂದು ವರ್ಣಿಸಿದ್ದಾರೆ. ಉದ್ದೇಶಪೂರ್ವಕವಾಗಿ ಮೌನದಿಂದ ದೂರವಿರಲು ಮತ್ತು ಕಲೆಯ ರೀತಿಯಲ್ಲಿ ಧ್ವನಿಗಳನ್ನು ವಿನ್ಯಾಸಗೊಳಿಸಲು ನಿಮ್ಮನ್ನು ಕೇಳಿಕೊಳ್ಳುತ್ತೇನೆ ಮುನ್ನೆಲೆ ಹಿನ್ನೆಲೆ ಧ್ವನಿಗಳನ್ನು ಹದವಾಗಿ ಬೆರೆಸಿ ಧ್ವನಿವಿನ್ಯಾಸ ಖುಶಿ ಕೊಡುತ್ತದೆ ನಿಮಗಾಗದಿದ್ದರೆ ನಿಪುಣರ ಸಹಾಯ ಪಡೆಯಿರಿ ಧ್ವನಿವಿನ್ಯಾಸ ಮುಂದಿನ ಭವಿಷ್ಯ ಈ ರೀತಿ ನಾವು ಪ್ರಪಂಚದ ಧ್ವನಿಯನ್ನೇ ಬದಲಿಸಬಹುದು ನಾನೀಗ ಎಂಟು ವಿಧಾನಗಳನ್ನು ಹೇಳುತ್ತೇನೆ ಆರೋಗ್ಯ ಸುಧಾರಣೆಗೂ ಈ ಎಂಟು ಧ್ವನಿ ಸಹಕಾರಿ ಮೊದಲನೆಯದಾಗಿ ಅಲ್ಟ್ರಾಸೌಂಡ್, ಇದು ಗೊತ್ತಿರುವುದೇ ಇದು ಈಗ ಕ್ಯಾನ್ಸರ ಚಿಕಿತ್ಸೆಗೂ ಬಳಸಲಾಗುತ್ತಿದೆ. ಲಿಥೊಟ್ರಿಪ್ಸಿ - ಹೆಚ್ಚು ಧ್ವನಿತೀವ್ರತೆಯ ಗಣಿ ಪ್ರದೇಶದ ಸಾವಿರಾರು ಜನರಿಗೆ ಉಪಯುಕ್ತ ಧ್ವನಿಚಿಕಿತ್ಸೆ ಒಂದು ಅಧ್ಭುತ ವಿಧಾನವಾಗಿದೆ ಸಹಸ್ರಾರು ವರ್ಷಗಳಿಂದಲೂ ಇದೆ ಇದನ್ನು ಅನ್ವೇಷಿಸಲು ನಾನು ಕೇಳಿಕೊಳ್ಳುತ್ತೇನೆ ಸ್ವಲೀನತೆ, ಬುದ್ದಿಮಾಂದ್ಯತೆ ಮುಂತಾದ ಹಲವಕ್ಕೆ ಚಿಕಿತ್ಸೆ ಅದರಲ್ಲಿ ಲಭ್ಯವಿದೆ ಮತ್ತೆ ಸಂಗೀತ. ಸಂಗೀತ ಕೇಳುವುದು ಆರೋಗ್ಯಕರ ಸದುದ್ದೇಶ ಪ್ರೀತಿಯಿಂದ ಕೂಡಿದ ಸಂಗೀತವಾಗಿದ್ದರೆ ಅದು ಆರೋಗ್ಯಕರ ಸಂಗೀತ ಭಕ್ತಿ ಸಂಗೀತ - ಒಳ್ಳೆಯದು. ಶಾಸ್ತ್ರೀಯ ಸಂಗೀತ ಸಹ ತುಂಬಾ ಆರೋಗ್ಯಕರವಾಗಿರುವ ಎಲ್ಲಾವಿಧದ ಸಂಗೀತಗಳಿವೆ ನೀವು ಕ್ರಮತೆಗೆದುಕೊಳ್ಳಬೇಕಾದ ನಾಲ್ಕು ವಿಧಾನಗಳಿವೆ ಮೊದಲನೆಯದಾಗಿ, ಗಮನವಿಟ್ಟು ಕೇಳಿ ಈ ಭಾಷಣದ ನಂತರ ನೀವು ಅದನ್ನು ಮಾಡುತ್ತೀರಿ ಎಂದು ಭಾವಿಸುತ್ತೇನೆ. ಜೀವನಕ್ಕೆ ಒಂದು ಹೊಸ ಆಯಾಮವನ್ನೇ ಇದು ನೀಡುತ್ತದೆ ಎರಡನೆಯದಾಗಿ, ಕೆಲವು ಶಬ್ದ ನೀವೇ ಮಾಡಿ ಧ್ವನಿ ರಚಿಸಿ. ನಮ್ಮೆಲ್ಲರ ವಾದ್ಯ ಧ್ವನಿ. ಧ್ವನಿ ಉತ್ತಮಪಡಿಸಿಕೊಳ್ಳಲು ತರಬೇತಿ ಪಡೆಯಿರಿ. ಹಾಡಲು, ವಾದ್ಯ ನುಡಿಸಲು ಕಲಿಯಿರಿ ಸಂಗೀತಗಾರರ ಮಿದುಳು ದೊಡ್ಡದು, ಇದು ಸತ್ಯ ನೀವಿದನ್ನು ಗುಂಪಾಗಿಯೂ ಮಾಡಬಹುದು ಇದು ಸ್ಕಿಜೋಫೊನಿಯಕ್ಕೆ ಒಂದು ಅದ್ಭುತ ಔಷಧ ಚೇತೋಹಾರಿಯಾದ ಧ್ವನಿರಚನೆ ಗುಂಪಿನಲ್ಲಿ ಮಾಡಿ ನಿಮಗೆ ಆಹ್ಲಾದವೆನಿಸಬೇಕು ನೀವೇ ಈ ಹೊಸ ಶಬ್ದ ಪ್ರಪಂಚದ ಪ್ರತಿನಿಧಿಯಾಗಿ ಕಿವಿಗಳನ್ನು ಕಾಪಾಡಿಕೊಳ್ಳಬೇಕಾ ? ಖಂಡಿತವಾಗಿಯೂ ನಿಮ್ಮ ಸುತ್ತಲೂ ಆರೋಗ್ಯಕರ ಧ್ವನಿವಿನ್ಯಾಸಗಳನ್ನು ಇಟ್ಟುಕೊಳ್ಳಿ ಮನೆಯಲ್ಲಿ ಕೆಲಸದ ಸ್ಥಳದಲ್ಲಿ ಎಲ್ಲಾ ಮತ್ತು ಜನರು ನಮ್ಮನ್ನು ಆಕ್ರಮಣ ಮಾಡುವಾಗ ಮಾತನಾಡಲು ಪ್ರಾರಂಭಿಸೋಣ ನಾನು ಮೊದಲೇ ನಾನು ಹಾಕಿದ ಗದ್ದಲದಿಂದ. ಧ್ವನಿಯೊಂದಿಗೆ ನಿಮ್ಮ ಆರೋಗ್ಯವನ್ನು ಸುಧಾರಿಸಲು ನೀವು ಏಳು ವಿಷಯಗಳನ್ನು ಮಾಡಬಹುದು. ನನ್ನ ದೃಷ್ಟಿಯಲ್ಲಿ ಪ್ರಪಂಚ ಉತ್ತಮ ಶಬ್ದಗಳಿಂದ ಕೂಡಿದೆ. ಎಲ್ಲರೂ ಇದೇ ಮಾಡಿದರೆ ಒಂದು ಹೊಸ ವಿಶ್ವಕ್ಕೆ ದಾಪುಗಾಲಿಟ್ಟಂತೆ. ಆ ಪಥದೆಡೆಗೆ ಹೆಜ್ಜೆ ಹಾಕಲು ವಿನಂತಿಸುತ್ತೇನೆ ಒಳ್ಳೆಯ ಕಲರವ ಧ್ವನಿ ನೀಡಿ ನಿರ್ಗಮಿಸುತ್ತಿದ್ದೇನೆ ಉತ್ತಮ ಧ್ವನಿ ಆರೋಗ್ಯ ನಿಮ್ಮದಾಗಲಿ (ಚಪ್ಪಾಳೆ)