-
- ಒಂದು ಎರಡು ಮೂರು ನಾಲ್ಕು !
-
ನಾನು ಟೋನಿ ಮತ್ತು ಇದು
"Every Frame a Painting"
-
ಇವತ್ತು, ನನ್ನ ಒಬ್ಬ ಮೆಚ್ಚಿನ
ನಿರ್ದೇಶಕನ ಬಗ್ಗೆ ಮಾತಾಡ್ತೀನಿ
-
ಅದಕ್ಕೂ ಮುನ್ನ,ಕೆಲವು ವಿಷಯವನ್ನು
ಪ್ರಾಮಾಣಿಕವಾಗಿ ಹೇಳ್ತಿನಿ.ಈ ನಡುವೆ ಹಾಸ್ಯ ಚಿತ್ರಗಳು
-
ಅದರಲ್ಲೂ ಅಮೆರಿಕನ್ ಚಿತ್ರಗಳು ಬಹಳ ಹಾಳಾಗಿವೆ
-
ನನ್ನ ತಕರಾರು ಹಾಸ್ಯದಲ್ಲಾಗಲಿ,
ನಟರಲ್ಲಾಗಲಿ,ಸಂಭಾಷಣೆಯಲ್ಲಾಗಲಿ
-
ಅಥವಾ ಕಥೆಯಲ್ಲಾಗಲಿ ಇಲ್ಲ. ಇವುಗಳನ್ನು ಬಿಟ್ಟು ಇನ್ನೂ ಅನೇಕ ತೊಂದರೆಗಳಿವೆ
-
ನನಗೆ ತೊಂದರೆ ಇರುವುದು ಚಿತ್ರೀಕರಣದಲ್ಲಿ,
-
ಚಿತ್ರ ಮತ್ತು ಶಬ್ದಗಳನ್ನು ಸನ್ನಿವೇಶಗಳಿಗೆ
ಬಳಸುವ ರೀತಿ ಮಾತ್ರ....
-
----- ಏನು?
----- ಇದು ಬಹಳ ಬೋರ್ ಹೊಡೆಸುತ್ತಿದೆ
-
----ಅಳಿಸು
-
ಪ್ರತಿಯೊಬ್ಬರ ಅಭಿರುಚಿ ಅವರವರಿಗೆ ಬಿಟ್ಟಿದ್ದು
-
ನಿಮಗೆ ಏನು ಹಾಸ್ಯ ಅನ್ನಿಸೋದೋ
ಅದು ನಿಮಗೆ ಬಿಟ್ಟಿದ್ದು. ಆ ಚಿತ್ರವೇ ಕೆಟ್ಟದಾಗಿದೆ...
-
ನಿಮ್ಮ ಅಭಿರುಚಿಯೇ ಸರಿ ಇಲ್ಲ, ಅನ್ನೋಕ್ಕಾಗಲ್ಲ.
ನಾ ಹೇಳೋದೇನೆಂದರೆ.....
-
ಇವು ಚಲನಚಿತ್ರಗಳೇ ಅಲ್ಲ
ಕೆಟ್ಟ ಹಾಸ್ಯ ಚಟಾಕಿಗಳ ಸರಮಾಲೆಗಳು ಅಷ್ಟೇ
-
ಒಬ್ಬರ ಎದುರಿಗೆ ಒಬ್ಬರು ನಿಂತು
ಸುಮ್ಮನೆ ಮಾತಾಡುತ್ತಿರುತ್ತಾರೆ
-
ಇವುಗಳು ದೃಶ್ಯವಾಗಿ ತೆರೆ ಮೇಲೆ ಬರದೇ
ಅರಚುವ ಶಬ್ದಗಳಾಗಿ ಹೊರಹೊಮ್ಮುತ್ತವೆ
-
ಶಬ್ದಗಳಾಗಿಯೂ ಅಲ್ಲ, ಕೇವಲ ಸಂಭಾಷಣೆಯಾಗಿರುತ್ತದೆ
ಇದು ಬಹಳ ವಿಷಾದನೀಯ
-
ಏಕೆಂದರೆ, ಸಿನೆಮಾದ ಸಾಧ್ಯತೆಗಳಲ್ಲಿ
ಇದು ಕೇವಲ ಸಣ್ಣ ಭಾಗ ಅಷ್ಟೆ.
-
ಅನಿಮೇಷನ್ ಮತ್ತು ಜಾಹೀರಾತುಗಳನ್ನು ಹೊರೆತುಪಡಿಸಿ
-
ಹಾಸ್ಯ ಸನ್ನಿವೇಶಗಳನ್ನು ತೆರಿಗೆಯುವ ರೀತಿ
ಬಹಳ ಕೆಡುತ್ತಿದೆ
-
ನಿಮಗೆ ಈ ರೀತಿಯ ಸಿನೆಮಾ ಹಿಡಿಸಿದರೆ,
EDGAR WRIGHTನನ್ನು ನಿಮಗೆ ಪರಿಚಯಿಸಬೇಕು
-
---ನೀನೊಬ್ಬ ವೈದ್ಯ. ನಿಭಾಯಿಸು
----ಸರಿ, ನಿನ್ನಮ್ಮನ್
-
ಸಿನೆಮಾಗಳ ಅಷ್ಟೂ ಸಾಧ್ಯತೆಗಳನ್ನು
ಬಳಸಿಕೊಳ್ಳುವವರಲ್ಲಿ ಇವನೂ ಒಬ್ಬ
-
ಆದ್ದರಿಂದಲೇ, ಅಸಾಧ್ಯವೆನಿಸುವ ಸನ್ನಿವೇಶಗಳಲ್ಲಿ
ಇವನಿಗೆ ಹಾಸ್ಯವನ್ನು ಹುಡುಕುವ ಶಕ್ತಿಯಿದೆ
-
ಒಂದು ಉದಾಹರಣೆಗೆ, ನಿಮ್ಮ ಪಾತ್ರವೊಂದು
ಒಂದು ಪಟ್ಟಣದಿಂದ
-
ಇನ್ನೊಂದು ಪಟ್ಟಣ್ಣಕ್ಕೆ ಚಲಿಸಬೇಕು.
ಅದನ್ನು ಹೇಗೆ ನಿಭಾಯಿಸುತ್ತೀರಿ?
-
ಅದರಲ್ಲಿ ಹಾಸ್ಯವನ್ನು ತರಲು ಸಾಧ್ಯವೇ?
-
ನಿಮ್ಮ ಸಹಾಯಕರನ್ನು ಕಳುಹಿಸಿದರೆ ಅಸಾಧ್ಯ.
ಕ್ಯಾಮೆರಾದಿಂದ ಒಂದಷ್ಟು ಶಾಟ್ ತೆಗೆದು
-
ಗುರುತು, ಚಿನ್ಹೆ ಹೀಗೊಂದಿಷ್ಟನ್ನು ಚಿತ್ರೀಕರಿಸಿ
HELICOPTER ಶಾಟ್ ಗಳನ್ನು ಜೋಡಿಸಿ
-
ಜೋಶ್ ಇರುವ ಸಂಗೀತವನ್ನು ಹಾಕಿ,
ಪ್ರೇಕ್ಷಕರಿಗೆ ಬೋರ್ ಆಗದಂತೆ ಮಾಡುತ್ತಾರೆ
-
ಇದು ಸೋಂಬೇರಿತನ ಅಲ್ಲದೆ ಬೇರೇನೂ ಅಲ್ಲ
ಈ ರೀತಿ ಆಗಲೇ ನಾವು ಅನೇಕ ಬಾರಿ ನೋಡಿಯಾಗಿದೆ
-
ಇದನ್ನೇ ಸ್ವಲ್ಪ ಕ್ರಿಯಾಶೀಲವಾಗಿ ತೆಗೆದರೆ
ಹೇಗೆ ಮೂಡಿ ಬರಬಹುದು?
-
ಇಲ್ಲಿ ನೋಡಿ.
ಇದು ಕೇವಲ ಕತ್ತರಿಸಿ ಅಂಟಿಸಿರುವ ದೃಶ್ಯಗಳಲ್ಲ
-
ಇದರಲ್ಲಿ ದೃಶ್ಯ ಮಾಧ್ಯಮದ ಮೂಲಕ ಹೆಣದಿರುವ
ಕಥೆಗಳಿವೆ
-
ಈ ಎರಡು ಟ್ಯಾಕ್ಸಿಗಳ ದೃಶ್ಯ ನೋಡಿ
ಎಲ್ಲಿಂದ ಬಂದೆವು, ಎಲ್ಲಿಗೆ ಹೋಗುತ್ತಿದ್ದೇವೆಂದು ತಿಳಿಯುತ್ತೆ
-
ಈ 2 ಶಾಟ್ ಗಳನ್ನೂ ಗಮನಿಸಿ
2 ಪ್ರತ್ಯೇಕ ಕಾಲಘಟ್ಟಗಳನ್ನು ಸೂಚಿಸುತ್ತದೆ
-
ಮುಖ್ಯಪಾತ್ರ ಯಾವಾಗಲು ಮುಂದೆ
ಅಥವಾ ಬಲಕ್ಕೆ ಚಲಿಸುತಿರುತ್ತದೆ
-
ಚಿತ್ರ ನಿರ್ದೇಶನವನ್ನು ಗೌರವಿಸುವುದಕ್ಕಾಗಿ
ಈ ರೀತಿ ಮಾಡಲಾಗಿದೆ. ಸಂಗೀತ ಕಡಿಮೆ ಮಾಡಿ..
-
SOUND FX ಅನ್ನು ಜಾಸ್ತಿ ಮಾಡಿರೋದು ಹಾಸ್ಯಾಸ್ಪದ
ಏಕೆಂದರೆ ಪ್ರತಿ ದೃಶ್ಯವೂ ಕರ್ಕಶವಾಗಿರುತ್ತದೆ
-
ಹಾಗೆಯೇ SIMON PEGG ಮತ್ತು RYAN GOSLING
ಅವರ ಅಭಿನಯ ಅಮೋಘವಾಗಿದೆ
-
ನೀವು, ಇದು ಹಿಂದು -ಮುಂದು ಇಲ್ಲದ
ಒಂದು ಉದಾಹರಣೆ ಎನ್ನಬಹುದು. ಸರಿ. ಇದು ಅನ್ಯಾಯ.
-
ಒಂದು ವಿನಾಶದ ಸನ್ನಿವೇಶವನ್ನು ನೀವು
ತೋರಿಸಬೇಕು ಎಂದುಕೊಳ್ಳಿ
-
ಅದರ ಬಗ್ಗೆ ಮುನ್ಸೂಚನೆ ನೀಡಬೇಕಿದೆ .
ಪಾತ್ರಗಳು.....
-
ಟಿವಿಯಲ್ಲಿ ಒಂದು ಮುಖ್ಯವಾದ
ಸುಳಿವನ್ನು ಗಮನಿಸುವುದಿಲ್ಲ. ಹೇಗೆ ತೋರಿಸುವಿರಿ?
-
ಬರೀ 2 ಸೆಕೆಂಡ್ 2 ಫ್ರೇಮ್ ಅನ್ನು ಜೋಡಿಸಿ ತೋರಿಸಿ
-
ಪಾತ್ರಗಳು ಮತ್ತು TVಯ ಮಧ್ಯೆ ಯಾವುದೇ
ಸಂಬಂಧ ತೋರಿಸದೆ ಇರಲು ಸಾಧ್ಯವೇ?
-
-ಅವನು ಗೃಹಪ್ರವೇಶ ಇಟ್ಟುಕೊಂಡಿದ್ದಾನೆ
-ಮೊನ್ನೆಯಷ್ಟೇ ಮನೆ ಕಟ್ಟಿದ್ದಾನೆ .
-
ಅಥವಾ ಹೀಗೆ ಮಾಡುತ್ತೀರಾ?
-
ಅಧಿಕಾರಿಗಳು ಪ್ರತಿಕ್ರಿಯಿಸುತಿಲ್ಲ....
ಆದರೆ ಧರ್ಮ ಸಂಸ್ಥೆಗಳು..
-
ಇದನ್ನು ವಿನಾಶದ ಅಂಚಿನ ದಿನಗಳು ಎನ್ನುತ್ತಿವೆ
(ಗಾಯಕ ಪ್ರಸಿದ್ಧ ಹಾಡೊಂದನ್ನು ಹಾಡುತ್ತಿದ್ದಾನೆ)
-
ಇದರ ಬಗ್ಗೆ ವರದಿಗಳು ಹೆಚ್ಚುತ್ತಿವೆ....
ಜನರ ಮೇಲೆ ಹಲ್ಲೆ ನಡೆಸಿ.....
-
.....ಜೀವಂತವಾಗಿ ತಿನ್ನಲು ಆರಂಭಿಸಿದ್ದಾರೆ
-
ಇದು ಸರಿ ಇಲ್ಲ. ಒಂದು ಪಾತ್ರವು ಈಗಷ್ಟೇ
ಕುಡಿಯುವುದನ್ನು ಬಿಟ್ಟಿದೆ ಎಂದುಕೊಳ್ಳಿ
-
ಇದು ಬೇರೆಯವರಿಗೆ ಹಿಡಿಸಿಲ್ಲ.ಇದರಿಂದ
ಹಾಸ್ಯ ಸನ್ನಿವೇಶ ಹೊರತರಲು ಸಾಧ್ಯವೇ?
-
ಹೇಗೆ ಮಾಡುತ್ತೀರಿ?
-
ಸುಮ್ಮನೆ ಅವನ ಕುಡಿತದ ಬಗ್ಗೆ
ಪಾತ್ರಗಳ ಹತ್ತಿರ ಮಾತಾಡಿಸುತ್ತೀರಾ?
-
-ಸರಿ ಗುರು.
-ಆದರೆ ಕುಡಿಯೋದನ್ನು ಬಿಟ್ಟಿದ್ದೇನೆಂದು ಹೆಂಡತಿಗೆ ಹೇಳಿಯಾಗಿದೆ
-
--- ಅದು ಅಲ್ಲದೆ ನಾಳೆ ಬಹಳ ಕೆಲಸ ಇದೆ
---ನೀವು ಮಜಾ ಮಾಡಿ
-
-- ಏನ್ ಕೆಲಸ ಗುರು?
-- ಹೇಳು ಏನು ಅಂತ
-
ಅಥವಾ ಹೀಗೆ ಮಾಡುತ್ತೀರಾ?
-
-ಏನು!??
-
- ನಂಗೆ ನಂಬಕ್ಕಾಗ್ತಿಲ್ಲ
-
ಇದೆ ಒಬ್ಬ ಸಾಧಾರಣ ಮತ್ತು ಮಹಾನ್
ನಿರ್ದೇಶಕನ ನಡುವೆ ಇರೋ ವ್ಯತ್ಯಾಸ
-
ಬಹಳ ಸಾಧಾರಣ ದೃಶ್ಯಗಳನ್ನ ಹೊಸದಾಗಿ ತೋರಿಸುವ ಸಾಮರ್ಥ್ಯ
-
ಪಾತ್ರಗಳನ್ನು ಸರಿಯಾಗಿ ಪ್ರಸ್ತುತ ಪಡಿಸುವ ಮೂಲಕ ಹಾಸ್ಯವನ್ನು
ರಚಿಸಬಹುದು ಎಂದು ಮಹಾನ್ ನಿರ್ದೇಶಕರಿಗೆ ತಿಳಿದಿರುತ್ತದೆ
-
David Borewell ನ ಈ ಉದಾಹರಣೆ ನೋಡಿ :
ಫ್ರೇಮ್ಗಳಲ್ಲಿ ಹೊರಬರುವ ವಸ್ತುಗಳು ತಮಾಷೆಯಾಗಿದೆ
-
---ನಿಧಾನ. ಕಡಿಮೆ ಮಾಡು
--- ಕಡಿಮೆ ಮಾಡೋ .... ಹೇಳೋದು ಅರ್ಥ ಆಗ್ತಿಲ್ವ
-
ಫ್ರೆಮ್ ಒಳಗೆ ವಸ್ತುಗಳನ್ನು ಬೇಕಾಬಿಟ್ಟಿ
ತೋರಿಸುವುದಲ್ಲ. ಇದರ ತದ್ವಿರುದ್ಧವನ್ನು ನೋಡಿ
-
--Ms Laura ಗೆ ಬೈ ಹೇಳು ಅಂದೆ
-
ಬೈ, Ms Laura
-
ಕೇವಲ zoom ಮಾಡುವದರ ಮೂಲಕ ಹಾಸ್ಯವನ್ನು ತೆರೆ ಮೇಲೆ ತರಬಹುದು
-
---ಸ್ವಲ್ಪ ಕಿಟಕಿ ಕೆಳಗೆ ಇಳ್ಸಿ
-
Crane ಮೇಲೆ ತೊಗೊಂಡು ಹೋಗುವುದರಿಂದ ಹಾಸ್ಯಮಯವಾಗಿಸಬಹುದು
--- Shirley ನನ್ನನು ಕ್ಷಮಿಸು
-
---ನಾನು ಮನೆಗೆ ಹೋಗ್ತಿದೀನಿ, Britta
--- ಹ್ಞೂ ಗೊತ್ತು Shirley
-
---ನಾನು ಮನೆಗೆ ಹೋಗ್ತಿದೀನಿ, ಸಹಾಯ ಮಾಡ್ತಿಯಾ?
--- ಓಹ್ !
-
ಕ್ಯಾಮೆರಾ Pan ಮಾಡುವ ಮೂಲಕ ನಗಿಸಬಹುದು
-
Martin Scorcese ಒಮ್ಮೆ ಹೇಳಿದ್ರು :
-
"ಫ್ರೆಮ್ ಅಲ್ಲಿ ಏನಿದೆ ಮತ್ತು ಏನಿಲ್ಲ
ಎಂಬುದೇ ಸಿನಿಮಾ"
-
ಆದ್ದರಿಂದ ಫ್ರೆಮ್ ಮೇಲೆ ಗಮನವಿಡಿ. ಬರಿ ಒಳ್ಳೆಯ
ಮತ್ತು ಕೆಟ್ಟ ಹಾಸ್ಯ ದೃಶ್ಯಗಳಿಗಷ್ಟೇ ಹೊರತಲ್ಲ
-
ಅದು ಕೆಲಸ ಮಾಡೋದಿದ್ರೆ ಮಾಡುತ್ತೆ
ಇಲ್ಲಾಂದ್ರೆ ಇಲ್ಲ
-
Edgar Wright ದೃಶ್ಯ ಮತ್ತು ಶಬ್ಧಗಳನ್ನ ಇಟ್ಟುಕೊಂಡು
ಏನೇನು ಮಾಡುತ್ತಾನೆ ಎಂದು ನೋಡೋಣ
-
ಇದನ್ನು ಬೇರೆ ಹಾಸ್ಯ ಪ್ರಧಾನ ಸಿನಿಮಾಗಳನ್ನು
ಮಾಡುವವರು ಮಾಡಿದರೆ ಚೆನ್ನಾಗಿರುತ್ತೆ
-
#1 ದೃಶ್ಯದ ಚೌಕಟ್ಟಿನ ಒಳಗೆ ವಸ್ತುಗಳು
ಹಾಸ್ಯಾಸ್ಪದವಾಗಿ ಪ್ರವೇಶಿಸುವುದು
-
#2 ದೃಶ್ಯದ ಚೌಕಟ್ಟಿನ ಹೊರಗೆ ವಸ್ತುಗಳು
ಹಾಸ್ಯಾಸ್ಪದವಾಗಿ ನಿರ್ಗಮಿಸುವುದು
-
#3 ಆಗಾಗ ಬಂದು ಹೋಗಿ ಮಾಡುವ ಪಾತ್ರಗಳು
-
#4 ದೃಶ್ಯ ಬದಲಾವಣೆಗಳನ್ನು ಹೊಂದಿಸುವುದು
-
#5 ಸಮಯಕ್ಕೆ ಸರಿಯಾಗಿ sound effects ನೀಡುವುದು
-
#6 ನಟನೆ ಮತ್ತು ಸಂಗೀತವು ಸರಿಯಾಗಿ
ಹೊಂದುವಂತೆ ನೋಡಿಕೊಳ್ಳುವುದು
-
#7 ನಾಟಕೀಯವಾಗಿ ಬೆಳಕಿನಿಂದ
ಸೂಚನೆಗಳನ್ನು ನೀಡುವುದು
-
#8 ಬೇಲಿ ಹಾರುವ
ಹಾಸ್ಯ ಸನ್ನಿವೇಶಗಳು
-
#9 ಕಾಲ್ಪನಿಕ ಹೊಡೆದಾಟಗಳು
-
ನೀವು ನಿರ್ದೇಶಕರಾದರೆ, ಇವುಗಳ ಮೇಲೆ ಗಮನವಿಡಿ
ಫ್ರೆಮ್ ಗಳೊಂದಿಗೆ ಪ್ರಯೋಗಗಳನ್ನ ಮಾಡಿ
-
ಮುಂದಿನ ಸಲ ಥೀಯೇಟರ್ ಗೆ ಹೋದಾಗ
ನೀವು ಕೊಡುವ ದುಡ್ಡಿಗೆ ಮೋಸ ಆಗದಂತೆ ನೋಡಿಕೊಳ್ಳಿ
-
ಕೆಟ್ಟದಾಗಿ ಅವರು ತೋರಿಸುವುದನ್ನೇ ನೋಡಿಕೊಂಡು
ಅಲ್ಪತೃಪ್ತರಾಗಬೇಡಿ