- ಒಂದು ಎರಡು ಮೂರು ನಾಲ್ಕು ! ನಾನು ಟೋನಿ ಮತ್ತು ಇದು "Every Frame a Painting" ಇವತ್ತು, ನನ್ನ ಒಬ್ಬ ಮೆಚ್ಚಿನ ನಿರ್ದೇಶಕನ ಬಗ್ಗೆ ಮಾತಾಡ್ತೀನಿ ಅದಕ್ಕೂ ಮುನ್ನ,ಕೆಲವು ವಿಷಯವನ್ನು ಪ್ರಾಮಾಣಿಕವಾಗಿ ಹೇಳ್ತಿನಿ.ಈ ನಡುವೆ ಹಾಸ್ಯ ಚಿತ್ರಗಳು ಅದರಲ್ಲೂ ಅಮೆರಿಕನ್ ಚಿತ್ರಗಳು ಬಹಳ ಹಾಳಾಗಿವೆ ನನ್ನ ತಕರಾರು ಹಾಸ್ಯದಲ್ಲಾಗಲಿ, ನಟರಲ್ಲಾಗಲಿ,ಸಂಭಾಷಣೆಯಲ್ಲಾಗಲಿ ಅಥವಾ ಕಥೆಯಲ್ಲಾಗಲಿ ಇಲ್ಲ. ಇವುಗಳನ್ನು ಬಿಟ್ಟು ಇನ್ನೂ ಅನೇಕ ತೊಂದರೆಗಳಿವೆ ನನಗೆ ತೊಂದರೆ ಇರುವುದು ಚಿತ್ರೀಕರಣದಲ್ಲಿ, ಚಿತ್ರ ಮತ್ತು ಶಬ್ದಗಳನ್ನು ಸನ್ನಿವೇಶಗಳಿಗೆ ಬಳಸುವ ರೀತಿ ಮಾತ್ರ.... ----- ಏನು? ----- ಇದು ಬಹಳ ಬೋರ್ ಹೊಡೆಸುತ್ತಿದೆ ----ಅಳಿಸು ಪ್ರತಿಯೊಬ್ಬರ ಅಭಿರುಚಿ ಅವರವರಿಗೆ ಬಿಟ್ಟಿದ್ದು ನಿಮಗೆ ಏನು ಹಾಸ್ಯ ಅನ್ನಿಸೋದೋ ಅದು ನಿಮಗೆ ಬಿಟ್ಟಿದ್ದು. ಆ ಚಿತ್ರವೇ ಕೆಟ್ಟದಾಗಿದೆ... ನಿಮ್ಮ ಅಭಿರುಚಿಯೇ ಸರಿ ಇಲ್ಲ, ಅನ್ನೋಕ್ಕಾಗಲ್ಲ. ನಾ ಹೇಳೋದೇನೆಂದರೆ..... ಇವು ಚಲನಚಿತ್ರಗಳೇ ಅಲ್ಲ ಕೆಟ್ಟ ಹಾಸ್ಯ ಚಟಾಕಿಗಳ ಸರಮಾಲೆಗಳು ಅಷ್ಟೇ ಒಬ್ಬರ ಎದುರಿಗೆ ಒಬ್ಬರು ನಿಂತು ಸುಮ್ಮನೆ ಮಾತಾಡುತ್ತಿರುತ್ತಾರೆ ಇವುಗಳು ದೃಶ್ಯವಾಗಿ ತೆರೆ ಮೇಲೆ ಬರದೇ ಅರಚುವ ಶಬ್ದಗಳಾಗಿ ಹೊರಹೊಮ್ಮುತ್ತವೆ ಶಬ್ದಗಳಾಗಿಯೂ ಅಲ್ಲ, ಕೇವಲ ಸಂಭಾಷಣೆಯಾಗಿರುತ್ತದೆ ಇದು ಬಹಳ ವಿಷಾದನೀಯ ಏಕೆಂದರೆ, ಸಿನೆಮಾದ ಸಾಧ್ಯತೆಗಳಲ್ಲಿ ಇದು ಕೇವಲ ಸಣ್ಣ ಭಾಗ ಅಷ್ಟೆ. ಅನಿಮೇಷನ್ ಮತ್ತು ಜಾಹೀರಾತುಗಳನ್ನು ಹೊರೆತುಪಡಿಸಿ ಹಾಸ್ಯ ಸನ್ನಿವೇಶಗಳನ್ನು ತೆರಿಗೆಯುವ ರೀತಿ ಬಹಳ ಕೆಡುತ್ತಿದೆ ನಿಮಗೆ ಈ ರೀತಿಯ ಸಿನೆಮಾ ಹಿಡಿಸಿದರೆ, EDGAR WRIGHTನನ್ನು ನಿಮಗೆ ಪರಿಚಯಿಸಬೇಕು ---ನೀನೊಬ್ಬ ವೈದ್ಯ. ನಿಭಾಯಿಸು ----ಸರಿ, ನಿನ್ನಮ್ಮನ್ ಸಿನೆಮಾಗಳ ಅಷ್ಟೂ ಸಾಧ್ಯತೆಗಳನ್ನು ಬಳಸಿಕೊಳ್ಳುವವರಲ್ಲಿ ಇವನೂ ಒಬ್ಬ ಆದ್ದರಿಂದಲೇ, ಅಸಾಧ್ಯವೆನಿಸುವ ಸನ್ನಿವೇಶಗಳಲ್ಲಿ ಇವನಿಗೆ ಹಾಸ್ಯವನ್ನು ಹುಡುಕುವ ಶಕ್ತಿಯಿದೆ ಒಂದು ಉದಾಹರಣೆಗೆ, ನಿಮ್ಮ ಪಾತ್ರವೊಂದು ಒಂದು ಪಟ್ಟಣದಿಂದ ಇನ್ನೊಂದು ಪಟ್ಟಣ್ಣಕ್ಕೆ ಚಲಿಸಬೇಕು. ಅದನ್ನು ಹೇಗೆ ನಿಭಾಯಿಸುತ್ತೀರಿ? ಅದರಲ್ಲಿ ಹಾಸ್ಯವನ್ನು ತರಲು ಸಾಧ್ಯವೇ? ನಿಮ್ಮ ಸಹಾಯಕರನ್ನು ಕಳುಹಿಸಿದರೆ ಅಸಾಧ್ಯ. ಕ್ಯಾಮೆರಾದಿಂದ ಒಂದಷ್ಟು ಶಾಟ್ ತೆಗೆದು ಗುರುತು, ಚಿನ್ಹೆ ಹೀಗೊಂದಿಷ್ಟನ್ನು ಚಿತ್ರೀಕರಿಸಿ HELICOPTER ಶಾಟ್ ಗಳನ್ನು ಜೋಡಿಸಿ ಜೋಶ್ ಇರುವ ಸಂಗೀತವನ್ನು ಹಾಕಿ, ಪ್ರೇಕ್ಷಕರಿಗೆ ಬೋರ್ ಆಗದಂತೆ ಮಾಡುತ್ತಾರೆ ಇದು ಸೋಂಬೇರಿತನ ಅಲ್ಲದೆ ಬೇರೇನೂ ಅಲ್ಲ ಈ ರೀತಿ ಆಗಲೇ ನಾವು ಅನೇಕ ಬಾರಿ ನೋಡಿಯಾಗಿದೆ ಇದನ್ನೇ ಸ್ವಲ್ಪ ಕ್ರಿಯಾಶೀಲವಾಗಿ ತೆಗೆದರೆ ಹೇಗೆ ಮೂಡಿ ಬರಬಹುದು? ಇಲ್ಲಿ ನೋಡಿ. ಇದು ಕೇವಲ ಕತ್ತರಿಸಿ ಅಂಟಿಸಿರುವ ದೃಶ್ಯಗಳಲ್ಲ ಇದರಲ್ಲಿ ದೃಶ್ಯ ಮಾಧ್ಯಮದ ಮೂಲಕ ಹೆಣದಿರುವ ಕಥೆಗಳಿವೆ ಈ ಎರಡು ಟ್ಯಾಕ್ಸಿಗಳ ದೃಶ್ಯ ನೋಡಿ ಎಲ್ಲಿಂದ ಬಂದೆವು, ಎಲ್ಲಿಗೆ ಹೋಗುತ್ತಿದ್ದೇವೆಂದು ತಿಳಿಯುತ್ತೆ ಈ 2 ಶಾಟ್ ಗಳನ್ನೂ ಗಮನಿಸಿ 2 ಪ್ರತ್ಯೇಕ ಕಾಲಘಟ್ಟಗಳನ್ನು ಸೂಚಿಸುತ್ತದೆ ಮುಖ್ಯಪಾತ್ರ ಯಾವಾಗಲು ಮುಂದೆ ಅಥವಾ ಬಲಕ್ಕೆ ಚಲಿಸುತಿರುತ್ತದೆ ಚಿತ್ರ ನಿರ್ದೇಶನವನ್ನು ಗೌರವಿಸುವುದಕ್ಕಾಗಿ ಈ ರೀತಿ ಮಾಡಲಾಗಿದೆ. ಸಂಗೀತ ಕಡಿಮೆ ಮಾಡಿ.. SOUND FX ಅನ್ನು ಜಾಸ್ತಿ ಮಾಡಿರೋದು ಹಾಸ್ಯಾಸ್ಪದ ಏಕೆಂದರೆ ಪ್ರತಿ ದೃಶ್ಯವೂ ಕರ್ಕಶವಾಗಿರುತ್ತದೆ ಹಾಗೆಯೇ SIMON PEGG ಮತ್ತು RYAN GOSLING ಅವರ ಅಭಿನಯ ಅಮೋಘವಾಗಿದೆ ನೀವು, ಇದು ಹಿಂದು -ಮುಂದು ಇಲ್ಲದ ಒಂದು ಉದಾಹರಣೆ ಎನ್ನಬಹುದು. ಸರಿ. ಇದು ಅನ್ಯಾಯ. ಒಂದು ವಿನಾಶದ ಸನ್ನಿವೇಶವನ್ನು ನೀವು ತೋರಿಸಬೇಕು ಎಂದುಕೊಳ್ಳಿ ಅದರ ಬಗ್ಗೆ ಮುನ್ಸೂಚನೆ ನೀಡಬೇಕಿದೆ . ಪಾತ್ರಗಳು..... ಟಿವಿಯಲ್ಲಿ ಒಂದು ಮುಖ್ಯವಾದ ಸುಳಿವನ್ನು ಗಮನಿಸುವುದಿಲ್ಲ. ಹೇಗೆ ತೋರಿಸುವಿರಿ? ಬರೀ 2 ಸೆಕೆಂಡ್ 2 ಫ್ರೇಮ್ ಅನ್ನು ಜೋಡಿಸಿ ತೋರಿಸಿ ಪಾತ್ರಗಳು ಮತ್ತು TVಯ ಮಧ್ಯೆ ಯಾವುದೇ ಸಂಬಂಧ ತೋರಿಸದೆ ಇರಲು ಸಾಧ್ಯವೇ? -ಅವನು ಗೃಹಪ್ರವೇಶ ಇಟ್ಟುಕೊಂಡಿದ್ದಾನೆ -ಮೊನ್ನೆಯಷ್ಟೇ ಮನೆ ಕಟ್ಟಿದ್ದಾನೆ . ಅಥವಾ ಹೀಗೆ ಮಾಡುತ್ತೀರಾ? ಅಧಿಕಾರಿಗಳು ಪ್ರತಿಕ್ರಿಯಿಸುತಿಲ್ಲ.... ಆದರೆ ಧರ್ಮ ಸಂಸ್ಥೆಗಳು.. ಇದನ್ನು ವಿನಾಶದ ಅಂಚಿನ ದಿನಗಳು ಎನ್ನುತ್ತಿವೆ (ಗಾಯಕ ಪ್ರಸಿದ್ಧ ಹಾಡೊಂದನ್ನು ಹಾಡುತ್ತಿದ್ದಾನೆ) ಇದರ ಬಗ್ಗೆ ವರದಿಗಳು ಹೆಚ್ಚುತ್ತಿವೆ.... ಜನರ ಮೇಲೆ ಹಲ್ಲೆ ನಡೆಸಿ..... .....ಜೀವಂತವಾಗಿ ತಿನ್ನಲು ಆರಂಭಿಸಿದ್ದಾರೆ ಇದು ಸರಿ ಇಲ್ಲ. ಒಂದು ಪಾತ್ರವು ಈಗಷ್ಟೇ ಕುಡಿಯುವುದನ್ನು ಬಿಟ್ಟಿದೆ ಎಂದುಕೊಳ್ಳಿ ಇದು ಬೇರೆಯವರಿಗೆ ಹಿಡಿಸಿಲ್ಲ.ಇದರಿಂದ ಹಾಸ್ಯ ಸನ್ನಿವೇಶ ಹೊರತರಲು ಸಾಧ್ಯವೇ? ಹೇಗೆ ಮಾಡುತ್ತೀರಿ? ಸುಮ್ಮನೆ ಅವನ ಕುಡಿತದ ಬಗ್ಗೆ ಪಾತ್ರಗಳ ಹತ್ತಿರ ಮಾತಾಡಿಸುತ್ತೀರಾ? -ಸರಿ ಗುರು. -ಆದರೆ ಕುಡಿಯೋದನ್ನು ಬಿಟ್ಟಿದ್ದೇನೆಂದು ಹೆಂಡತಿಗೆ ಹೇಳಿಯಾಗಿದೆ --- ಅದು ಅಲ್ಲದೆ ನಾಳೆ ಬಹಳ ಕೆಲಸ ಇದೆ ---ನೀವು ಮಜಾ ಮಾಡಿ -- ಏನ್ ಕೆಲಸ ಗುರು? -- ಹೇಳು ಏನು ಅಂತ ಅಥವಾ ಹೀಗೆ ಮಾಡುತ್ತೀರಾ? -ಏನು!?? - ನಂಗೆ ನಂಬಕ್ಕಾಗ್ತಿಲ್ಲ ಇದೆ ಒಬ್ಬ ಸಾಧಾರಣ ಮತ್ತು ಮಹಾನ್ ನಿರ್ದೇಶಕನ ನಡುವೆ ಇರೋ ವ್ಯತ್ಯಾಸ ಬಹಳ ಸಾಧಾರಣ ದೃಶ್ಯಗಳನ್ನ ಹೊಸದಾಗಿ ತೋರಿಸುವ ಸಾಮರ್ಥ್ಯ ಪಾತ್ರಗಳನ್ನು ಸರಿಯಾಗಿ ಪ್ರಸ್ತುತ ಪಡಿಸುವ ಮೂಲಕ ಹಾಸ್ಯವನ್ನು ರಚಿಸಬಹುದು ಎಂದು ಮಹಾನ್ ನಿರ್ದೇಶಕರಿಗೆ ತಿಳಿದಿರುತ್ತದೆ David Borewell ನ ಈ ಉದಾಹರಣೆ ನೋಡಿ : ಫ್ರೇಮ್ಗಳಲ್ಲಿ ಹೊರಬರುವ ವಸ್ತುಗಳು ತಮಾಷೆಯಾಗಿದೆ ---ನಿಧಾನ. ಕಡಿಮೆ ಮಾಡು --- ಕಡಿಮೆ ಮಾಡೋ .... ಹೇಳೋದು ಅರ್ಥ ಆಗ್ತಿಲ್ವ ಫ್ರೆಮ್ ಒಳಗೆ ವಸ್ತುಗಳನ್ನು ಬೇಕಾಬಿಟ್ಟಿ ತೋರಿಸುವುದಲ್ಲ. ಇದರ ತದ್ವಿರುದ್ಧವನ್ನು ನೋಡಿ --Ms Laura ಗೆ ಬೈ ಹೇಳು ಅಂದೆ ಬೈ, Ms Laura ಕೇವಲ zoom ಮಾಡುವದರ ಮೂಲಕ ಹಾಸ್ಯವನ್ನು ತೆರೆ ಮೇಲೆ ತರಬಹುದು ---ಸ್ವಲ್ಪ ಕಿಟಕಿ ಕೆಳಗೆ ಇಳ್ಸಿ Crane ಮೇಲೆ ತೊಗೊಂಡು ಹೋಗುವುದರಿಂದ ಹಾಸ್ಯಮಯವಾಗಿಸಬಹುದು --- Shirley ನನ್ನನು ಕ್ಷಮಿಸು ---ನಾನು ಮನೆಗೆ ಹೋಗ್ತಿದೀನಿ, Britta --- ಹ್ಞೂ ಗೊತ್ತು Shirley ---ನಾನು ಮನೆಗೆ ಹೋಗ್ತಿದೀನಿ, ಸಹಾಯ ಮಾಡ್ತಿಯಾ? --- ಓಹ್ ! ಕ್ಯಾಮೆರಾ Pan ಮಾಡುವ ಮೂಲಕ ನಗಿಸಬಹುದು Martin Scorcese ಒಮ್ಮೆ ಹೇಳಿದ್ರು : "ಫ್ರೆಮ್ ಅಲ್ಲಿ ಏನಿದೆ ಮತ್ತು ಏನಿಲ್ಲ ಎಂಬುದೇ ಸಿನಿಮಾ" ಆದ್ದರಿಂದ ಫ್ರೆಮ್ ಮೇಲೆ ಗಮನವಿಡಿ. ಬರಿ ಒಳ್ಳೆಯ ಮತ್ತು ಕೆಟ್ಟ ಹಾಸ್ಯ ದೃಶ್ಯಗಳಿಗಷ್ಟೇ ಹೊರತಲ್ಲ ಅದು ಕೆಲಸ ಮಾಡೋದಿದ್ರೆ ಮಾಡುತ್ತೆ ಇಲ್ಲಾಂದ್ರೆ ಇಲ್ಲ Edgar Wright ದೃಶ್ಯ ಮತ್ತು ಶಬ್ಧಗಳನ್ನ ಇಟ್ಟುಕೊಂಡು ಏನೇನು ಮಾಡುತ್ತಾನೆ ಎಂದು ನೋಡೋಣ ಇದನ್ನು ಬೇರೆ ಹಾಸ್ಯ ಪ್ರಧಾನ ಸಿನಿಮಾಗಳನ್ನು ಮಾಡುವವರು ಮಾಡಿದರೆ ಚೆನ್ನಾಗಿರುತ್ತೆ #1 ದೃಶ್ಯದ ಚೌಕಟ್ಟಿನ ಒಳಗೆ ವಸ್ತುಗಳು ಹಾಸ್ಯಾಸ್ಪದವಾಗಿ ಪ್ರವೇಶಿಸುವುದು #2 ದೃಶ್ಯದ ಚೌಕಟ್ಟಿನ ಹೊರಗೆ ವಸ್ತುಗಳು ಹಾಸ್ಯಾಸ್ಪದವಾಗಿ ನಿರ್ಗಮಿಸುವುದು #3 ಆಗಾಗ ಬಂದು ಹೋಗಿ ಮಾಡುವ ಪಾತ್ರಗಳು #4 ದೃಶ್ಯ ಬದಲಾವಣೆಗಳನ್ನು ಹೊಂದಿಸುವುದು #5 ಸಮಯಕ್ಕೆ ಸರಿಯಾಗಿ sound effects ನೀಡುವುದು #6 ನಟನೆ ಮತ್ತು ಸಂಗೀತವು ಸರಿಯಾಗಿ ಹೊಂದುವಂತೆ ನೋಡಿಕೊಳ್ಳುವುದು #7 ನಾಟಕೀಯವಾಗಿ ಬೆಳಕಿನಿಂದ ಸೂಚನೆಗಳನ್ನು ನೀಡುವುದು #8 ಬೇಲಿ ಹಾರುವ ಹಾಸ್ಯ ಸನ್ನಿವೇಶಗಳು #9 ಕಾಲ್ಪನಿಕ ಹೊಡೆದಾಟಗಳು ನೀವು ನಿರ್ದೇಶಕರಾದರೆ, ಇವುಗಳ ಮೇಲೆ ಗಮನವಿಡಿ ಫ್ರೆಮ್ ಗಳೊಂದಿಗೆ ಪ್ರಯೋಗಗಳನ್ನ ಮಾಡಿ ಮುಂದಿನ ಸಲ ಥೀಯೇಟರ್ ಗೆ ಹೋದಾಗ ನೀವು ಕೊಡುವ ದುಡ್ಡಿಗೆ ಮೋಸ ಆಗದಂತೆ ನೋಡಿಕೊಳ್ಳಿ ಕೆಟ್ಟದಾಗಿ ಅವರು ತೋರಿಸುವುದನ್ನೇ ನೋಡಿಕೊಂಡು ಅಲ್ಪತೃಪ್ತರಾಗಬೇಡಿ