< Return to Video

Frozen - Hour of Code Introduction to Functions

  • 0:00 - 0:05
    ಕಂಪ್ಯೂಟರ್ ಸೈನ್ಸ್ ನ ಬಹು ಮುಖ್ಯ ಪರಿಕ್ಪನೆಯಲ್ಲಿ
    ಒಂದು ಹೊಸ ಆದೇಶಗಳನ್ನು ವ್ಯಾಖ್ಯಾನಿಸುವುದು.
  • 0:05 - 0:08
    ಕಂಪ್ಯೂಟರ್ ಭಾಷೆಗೆ ನಿಮ್ಮ
    ಸ್ವಂತ ಮಾತುಗಳನ್ನು ಸೇರಿಸುವುದು.
  • 0:09 - 0:13
    ಹೆಚ್ಚಿನ ಕಂಪ್ಯೂಟರ್ ಭಾಷೆಗಳಲ್ಲಿ ಬರೀ
    ನೂರು ಪದ ಅಥವಾ ಕಮಾಂಡ್ ಗಳು ಇರುತ್ತದೆ.
  • 0:13 - 0:15
    ಈ ಬಿಲ್ಡಿಂಗ್ ಬ್ಲಾಕ್ಸ್ ಗಳಿಂದ
  • 0:15 - 0:18
    ನಿಮ್ಮದ್ದೇ ಆದ ಹೊಸ ಪದಗಳನ್ನು
    ವ್ಯಾಖ್ಯಾನಿಸುವುದಕ್ಕೆ ಆಜಿಕ್ ಮ್ಯಾಜಿಕ್ ಮಾಡಬೇಕು.
  • 0:19 - 0:22
    ಇದನ್ನು ನಾವು ಕ್ರೀಡೆಯಲ್ಲಿ
    ಮಾಡುತ್ತೇವೆ. ಉದಾಹರಣೆಗೆ,
  • 0:22 - 0:24
    ಬಾಸ್ಕೆಟ್ ಬಾಲ್ ನಲ್ಲಿ, ಡ್ರಿಬಲ್ ಮಾಡಕ್ಕೆ,
  • 0:25 - 0:27
    ಲೇಅಪ್ ಮಾಡಕ್ಕೆ, ಮತ್ತು ರಿಬೌಂಡ್
    ಮಾಡಕ್ಕೆ ಕಲಿಯಲು ಆರಂಭಿಸುತ್ತೀರಿ.
  • 0:27 - 0:31
    ನೀವು ಈ ಮೂಲಭೂತ ವಿಷಯಗಳನ್ನು ಕಲಿತ ಕೂಡಲೇ ನೀವು
    ಇನ್ನೂ ಹೆಚ್ಚು ಹೊಸ ವಿಷಯಗಳನ್ನು ಕಲಿಯುತ್ತೀರಿ
  • 0:31 - 0:33
    ಮತ್ತು ಈ ಬಿಲ್ಡಿಂಗ್ ಬ್ಲಾಕ್
    ಗಳನ್ನು "ಪಿಕ್ ಅಂಡ್ ರೋಲ್"
  • 0:33 - 0:35
    ಅಥವಾ "ಗೀವ್ ಅಂಡ್ ಗೋ"
    ಅನ್ನೋ ರೀತಿಯಲ್ಲಿ ಒಟ್ಟಿಗೆ ಹಾಕುತ್ತೀರ
  • 0:35 - 0:38
    ಮತ್ತು ಅಲ್ಲಿಂದ ನೀವು ಇನ್ನೂ
    ಜಟಿಲ ಆಟಗಳನ್ನು ಆಡುತ್ತೀರ,
  • 0:38 - 0:41
    ಮತ್ತು ಆ ಆಟವನ್ನು ಕಲಿತು
    ಅದಕ್ಕೆ ಒಂದು ಹೆಸರಿಟ್ಟ ನಂತರ
  • 0:41 - 0:42
    ತಂಡದಲ್ಲಿರುವ ಪ್ರತಿಯೊಬ್ಬರಿಗೂ ಅದನ್ನು
    ಹೇಗೆ ಮಾಡೋದು ಅಂತ ಗೊತ್ತಾಗುತ್ತದೆ.
  • 0:43 - 0:47
    ಅದೇ ತರ, ನೀವು ನಿಮ್ಮ ಕಂಪ್ಯೂಟರ್ ಗೆ
    ಈ ಕ್ರಮದ ಕಮಾಂಡ್ ಅನ್ನು ಉಪಯೋಗಿಸಿ
  • 0:47 - 0:49
    ಒಂದು ಕ್ರಿಯೆಯನ್ನು ಹೇಗೆ
    ಮಾಡೋದು ಅಂತ ಕಲಿಸಿದ ನಂತರ
  • 0:49 - 0:54
    ಆ ಕ್ರಿಯೆಗೆ ನೀವೇ ಒಂದು ಹೆಸರನ್ನು ಇಡಬಹುದು ಹೇಗೆ
    ನಂತರ ಅದನ್ನು ಪುನರಾವರ್ತಿಸಲು ಸುಲಭವಾಗುತ್ತದೆ.
  • 0:54 - 0:58
    ನಿಮ್ಮದೇ ಆದೇಶವನ್ನು ವ್ಯಾಖ್ಯಾನಿಸಿ ಅದಕ್ಕೆ ಒಂದು
    ಹೆಸರನ್ನು ಕೊಟ್ಟರೆ ಅದನ್ನು ಫಂಕ್ಷನ್ ಅನ್ನುತ್ತೇವೆ
  • 1:00 - 1:03
    ನೀವು ಬ್ಲಾಕ್ಸ್ ಗಳನ್ನು ಉಪಯೋಗಿಸಿ ಪ್ರೋಗ್ರಾಮಿಂಗ್
    ಮಾಡೋದಾದರೆ ನೀವು ಫಂಕ್ಷನ್ ಉಪಯೋಗಿಸುತ್ತೀರಿ.
  • 1:03 - 1:05
    ಮುಖ್ಯವಾಗಿ, ತುಂಬಾ ಸಲ ಕೆಲವು ಕ್ರಿಯೆಗಳನ್ನು
    ಉಪಯೋಗಿಸಲು ನೀವು ಬಯಸುವಾಗ.
  • 1:06 - 1:09
    ಉದಾಹರಣೆಗ, ನೀವು ಚೌಕವನ್ನು ಮಾಡಲು
    ಒಂದು ಕೋಡ್ ಅನ್ನು ಬರೆದಿದ್ದೀರಿ ಅಂತ ನೆನಸಿ.
  • 1:10 - 1:14
    ಈ ಫಂಕ್ಷನ್ ಅನ್ನು ನೀವು "ಕ್ರಿಯೇಟ್
    ಎ ಸ್ಕ್ವೇರ್" ಅಂತ ವ್ಯಾಖ್ಯಾನಿಸಬಹುದು.
  • 1:14 - 1:19
    ಈಗ ನಿಮ್ಮ ಬಳಿ ಹೊಸ ಬ್ಲಾಕ್ ಇದೆ. ಇದನ್ನು ಹಲವಾರು
    ಚೌಕ ಮಾಡಲು ಹಲವಾರು ಬಾರಿ ಉಪಯೋಗಿಸಬಹುದು.
  • 1:20 - 1:24
    ತುಂಬಾ ಜಟಿಲವಾದ ಆಕಾರವನ್ನು ಮಾಡಲು
    ಹಲವಾರು ಸರಳ ಆಕಾರಗಳನ್ನು ಉಪಯೋಗಿಸಬಹುದು.
  • 1:24 - 1:30
    ಮುಂದಿನ ಪಜಲ್ ನಲ್ಲಿ ನೀವು ಇತ್ತೀಚಗೆ ಗೋಳಾಕಾರಕ್ಕೆ
    ಬರೆದ ಕೋಡ್ ನಿಮಗೆ ಹೊಸ ಫಂಕ್ಷನ್ ಆಗಿ ದೊರೆಯುತ್ತದೆ
  • 1:30 - 1:32
    ಇದು ಹಲವಾರು ಗಾತ್ರದ ಗೋಳಾಕಾರವನ್ನು ಮಾಡುತ್ತದೆ.
  • 1:33 - 1:34
    ಅದನ್ನು ಉಪಯೋಗಿಸಿ, ಮಂಜುಗಡ್ಡೆಯಲ್ಲಿ
  • 1:34 - 1:38
    ಜಟಿಲವಾದ ಮತ್ತು ಸುಂದರವಾದ ಆಕಾರಗಳನ್ನು
    ಮಾಡಲು ಎಲ್ಸ ಗೆ ಸಹಾಯಮಾಡುತ್ತೀರ?
Title:
Frozen - Hour of Code Introduction to Functions
Description:

more » « less
Video Language:
English
Duration:
01:38

Kannada subtitles

Revisions