ಕಂಪ್ಯೂಟರ್ ಸೈನ್ಸ್ ನ ಬಹು ಮುಖ್ಯ ಪರಿಕ್ಪನೆಯಲ್ಲಿ ಒಂದು ಹೊಸ ಆದೇಶಗಳನ್ನು ವ್ಯಾಖ್ಯಾನಿಸುವುದು. ಕಂಪ್ಯೂಟರ್ ಭಾಷೆಗೆ ನಿಮ್ಮ ಸ್ವಂತ ಮಾತುಗಳನ್ನು ಸೇರಿಸುವುದು. ಹೆಚ್ಚಿನ ಕಂಪ್ಯೂಟರ್ ಭಾಷೆಗಳಲ್ಲಿ ಬರೀ ನೂರು ಪದ ಅಥವಾ ಕಮಾಂಡ್ ಗಳು ಇರುತ್ತದೆ. ಈ ಬಿಲ್ಡಿಂಗ್ ಬ್ಲಾಕ್ಸ್ ಗಳಿಂದ ನಿಮ್ಮದ್ದೇ ಆದ ಹೊಸ ಪದಗಳನ್ನು ವ್ಯಾಖ್ಯಾನಿಸುವುದಕ್ಕೆ ಆಜಿಕ್ ಮ್ಯಾಜಿಕ್ ಮಾಡಬೇಕು. ಇದನ್ನು ನಾವು ಕ್ರೀಡೆಯಲ್ಲಿ ಮಾಡುತ್ತೇವೆ. ಉದಾಹರಣೆಗೆ, ಬಾಸ್ಕೆಟ್ ಬಾಲ್ ನಲ್ಲಿ, ಡ್ರಿಬಲ್ ಮಾಡಕ್ಕೆ, ಲೇಅಪ್ ಮಾಡಕ್ಕೆ, ಮತ್ತು ರಿಬೌಂಡ್ ಮಾಡಕ್ಕೆ ಕಲಿಯಲು ಆರಂಭಿಸುತ್ತೀರಿ. ನೀವು ಈ ಮೂಲಭೂತ ವಿಷಯಗಳನ್ನು ಕಲಿತ ಕೂಡಲೇ ನೀವು ಇನ್ನೂ ಹೆಚ್ಚು ಹೊಸ ವಿಷಯಗಳನ್ನು ಕಲಿಯುತ್ತೀರಿ ಮತ್ತು ಈ ಬಿಲ್ಡಿಂಗ್ ಬ್ಲಾಕ್ ಗಳನ್ನು "ಪಿಕ್ ಅಂಡ್ ರೋಲ್" ಅಥವಾ "ಗೀವ್ ಅಂಡ್ ಗೋ" ಅನ್ನೋ ರೀತಿಯಲ್ಲಿ ಒಟ್ಟಿಗೆ ಹಾಕುತ್ತೀರ ಮತ್ತು ಅಲ್ಲಿಂದ ನೀವು ಇನ್ನೂ ಜಟಿಲ ಆಟಗಳನ್ನು ಆಡುತ್ತೀರ, ಮತ್ತು ಆ ಆಟವನ್ನು ಕಲಿತು ಅದಕ್ಕೆ ಒಂದು ಹೆಸರಿಟ್ಟ ನಂತರ ತಂಡದಲ್ಲಿರುವ ಪ್ರತಿಯೊಬ್ಬರಿಗೂ ಅದನ್ನು ಹೇಗೆ ಮಾಡೋದು ಅಂತ ಗೊತ್ತಾಗುತ್ತದೆ. ಅದೇ ತರ, ನೀವು ನಿಮ್ಮ ಕಂಪ್ಯೂಟರ್ ಗೆ ಈ ಕ್ರಮದ ಕಮಾಂಡ್ ಅನ್ನು ಉಪಯೋಗಿಸಿ ಒಂದು ಕ್ರಿಯೆಯನ್ನು ಹೇಗೆ ಮಾಡೋದು ಅಂತ ಕಲಿಸಿದ ನಂತರ ಆ ಕ್ರಿಯೆಗೆ ನೀವೇ ಒಂದು ಹೆಸರನ್ನು ಇಡಬಹುದು ಹೇಗೆ ನಂತರ ಅದನ್ನು ಪುನರಾವರ್ತಿಸಲು ಸುಲಭವಾಗುತ್ತದೆ. ನಿಮ್ಮದೇ ಆದೇಶವನ್ನು ವ್ಯಾಖ್ಯಾನಿಸಿ ಅದಕ್ಕೆ ಒಂದು ಹೆಸರನ್ನು ಕೊಟ್ಟರೆ ಅದನ್ನು ಫಂಕ್ಷನ್ ಅನ್ನುತ್ತೇವೆ ನೀವು ಬ್ಲಾಕ್ಸ್ ಗಳನ್ನು ಉಪಯೋಗಿಸಿ ಪ್ರೋಗ್ರಾಮಿಂಗ್ ಮಾಡೋದಾದರೆ ನೀವು ಫಂಕ್ಷನ್ ಉಪಯೋಗಿಸುತ್ತೀರಿ. ಮುಖ್ಯವಾಗಿ, ತುಂಬಾ ಸಲ ಕೆಲವು ಕ್ರಿಯೆಗಳನ್ನು ಉಪಯೋಗಿಸಲು ನೀವು ಬಯಸುವಾಗ. ಉದಾಹರಣೆಗ, ನೀವು ಚೌಕವನ್ನು ಮಾಡಲು ಒಂದು ಕೋಡ್ ಅನ್ನು ಬರೆದಿದ್ದೀರಿ ಅಂತ ನೆನಸಿ. ಈ ಫಂಕ್ಷನ್ ಅನ್ನು ನೀವು "ಕ್ರಿಯೇಟ್ ಎ ಸ್ಕ್ವೇರ್" ಅಂತ ವ್ಯಾಖ್ಯಾನಿಸಬಹುದು. ಈಗ ನಿಮ್ಮ ಬಳಿ ಹೊಸ ಬ್ಲಾಕ್ ಇದೆ. ಇದನ್ನು ಹಲವಾರು ಚೌಕ ಮಾಡಲು ಹಲವಾರು ಬಾರಿ ಉಪಯೋಗಿಸಬಹುದು. ತುಂಬಾ ಜಟಿಲವಾದ ಆಕಾರವನ್ನು ಮಾಡಲು ಹಲವಾರು ಸರಳ ಆಕಾರಗಳನ್ನು ಉಪಯೋಗಿಸಬಹುದು. ಮುಂದಿನ ಪಜಲ್ ನಲ್ಲಿ ನೀವು ಇತ್ತೀಚಗೆ ಗೋಳಾಕಾರಕ್ಕೆ ಬರೆದ ಕೋಡ್ ನಿಮಗೆ ಹೊಸ ಫಂಕ್ಷನ್ ಆಗಿ ದೊರೆಯುತ್ತದೆ ಇದು ಹಲವಾರು ಗಾತ್ರದ ಗೋಳಾಕಾರವನ್ನು ಮಾಡುತ್ತದೆ. ಅದನ್ನು ಉಪಯೋಗಿಸಿ, ಮಂಜುಗಡ್ಡೆಯಲ್ಲಿ ಜಟಿಲವಾದ ಮತ್ತು ಸುಂದರವಾದ ಆಕಾರಗಳನ್ನು ಮಾಡಲು ಎಲ್ಸ ಗೆ ಸಹಾಯಮಾಡುತ್ತೀರ?