-
ನಾನು ಅಲೆ ಫ್ಲೋರ್ಸ್. ಅಲೆಕ್ಸಾದಲ್ಲಿ ನಾನು
ಪ್ರಾಡಕ್ಟ್ ಮ್ಯಾನೇಜರ್.
-
ನಾನು ಡಾ. ಚೆಲ್ಸಿಯಾ ಹೌಪ್ಟ್.
ಅಲೆನ್ ಇನ್‌ಸ್ಟಿಟ್ಯೂಟ್‌ನಲ್ಲಿ ಕೆಲಸ
-
ಎಐ ಪವರ್ಡ್ ಅಕಾಡೆಮಿಕ್ ಸರ್ಚ್ ಇಂಜಿನ್ ಬಗ್ಗೆ
ಕೆಲಸ ಮಾಡ್ತಾ ಇದ್ದೇನೆ.
-
ನಿಮ್ಮ ಸುತ್ತ ಕಂಪ್ಯೂಟರ್‌ಗಳು ನಿರ್ಧಾರ ಮಾಡ್ತಿವೆ
ಈ ನಿರ್ಧಾರಗಳು ನಿಮ್ಮ ದೈನಂದಿನ ಜೀವನದ ಮೇಲೆ
-
ಪರಿಣಾಮ ಬೀರುತ್ತಿವೆ. ಇಂಟರ್ನೆಟ್‌ನಲ್ಲಿ ಹುಡುಕಾಟ
ಅಥವಾ ನ್ಯೂಸ್‌ಫೀಡ್ ಸ್ಕ್ರೋಲ್ ಮಾಡಿದಾಗ
-
ನೀವು ಏನನ್ನು ನೋಡಬೇಕೆಂದು ಕಂಪ್ಯೂಟರ್
ನಿರ್ಧಾರ ಮಾಡುತ್ತದೆ.
-
ಕಂಪ್ಯೂಟರ್‌ಗಳು ನಿಮ್ಮ ಮುಖ ಗುರುತಿಸಿ ನಿಮ್ಮ
ಧ್ವನಿಯನ್ನು ಈಗಾಗಲೇ ಅರ್ಥ ಮಾಡಿಕೊಳ್ಳಬಲ್ಲದು.
-
ಶೀಘ್ರ ಅವು ಕಾರು ಓಡಿಸುತ್ತವೆ, ರೋಗವನ್ನು
ಮಾನವನಿಗಿಂತ ಚೆನ್ನಾಗಿ ಗುರುತಿಸುತ್ತವೆ
-
ಇದೆಲ್ಲ ಹೇಗೆ ಸಾಧ್ಯವಾಗುತ್ತದೆ?
-
ನೀವು AI ಅಥವಾ ಆರ್ಟಿಫಿಶಿಯಲ್ ಇಂಟಲಿಜೆನ್ಸ್
ಬಗ್ಗೆ ಕೇಳಿರಬಹುದು.
-
ನಿಜವಾದ ಆರ್ಟಿಫಿಶಿಯಲ್ ಇಂಟಲಿಜೆನ್ಸ್
ದಶಕಗಳಷ್ಟು ಮುಂದಿದೆ.
-
ಆದರೆ ಒಂದು ವಿಧದ AI ಈಗ ಲಭ್ಯವಿದೆ.
ಅದೇ ಮಶಿನ್ ಲರ್ನಿಂಗ್.
-
ನಿಮಗೆ ಗೊತ್ತಿಲ್ಲದೇ ನೀವು ಪ್ರತಿ ದಿನ ಇದರ ಜೊತೆ
ಸಂವಹನ ನಡೆಸುತ್ತಿರುತ್ತೀರಿ.
-
ವಿಶ್ವದ ಸವಾಲುಗಳನ್ನು ಎದುರಿಸಲು ಇದು ಕೆಲವು
ಅವಕಾಶಗಳನ್ನು ಹೊಂದಿದೆ.
-
ಮಶಿನ್ ಲರ್ನಿಂಗ್ ಎಂದರೆ ಪ್ಯಾಟರ್ನ್ ಅನ್ನು
ಕಂಪ್ಯೂಟರ್ ಗುರುತಿಸುವುದು, ನಿರ್ಧಾರ ಮಾಡುವುದು
-
ಪ್ರೋಗ್ರಾಮ್ ಮಾಡದೆಯೇ.
-
ಕುತೂಹಲಕರ ಎಂದರೆ, ನಾವು ಈ ಹಿಂದೆ ಪ್ರೋಗ್ರಾಮ್
ಮಾಡಿದ್ದಕ್ಕಿಂತ ಸಂಪೂರ್ಣ ವಿಭಿನ್ನ
-
ವಿಧಾನದಲ್ಲಿ ಇದು ಇರುತ್ತದೆ.
-
ಮಶಿನ್ ಲರ್ನಿಂಗ್‌ನಲ್ಲಿ ಕಂಪ್ಯೂಟರ್ ಪ್ರೋಗ್ರಾಮ್
ಮಾಡುವ ಬದಲಿಗೆ
-
ಕಲಿಕೆಗಾಗಿ ಪ್ರೋಗ್ರಾಮ್ ಮಾಡುತ್ತೀರಿ, ಟ್ರಯಲ್
ಆಂಡ್ ಎರರ್, ಅಭ್ಯಾಸ ಮಾಡುತ್ತೀರಿ.
-
ಕಲಿಕೆ ಅನುಭವದಿಂದ ಬರುತ್ತದೆ. ಮಶಿನ್
ಲರ್ನಿಂಗ್‌ನಲ್ಲೂ ಹೀಗೆಯೇ ಆಗುತ್ತದೆ.
-
ಈ ವಿಷಯದಲ್ಲಿ, "ಅನುಭವ" ಎಂದರೆ
ಭಾರಿ ಸಂಖ್ಯೆಯ ಡೇಟಾ.
-
ಮಶಿನ್ ಲರ್ನಿಂಗ್ ಯಾವುದೇ ರೀತಿಯ
ಡೇಟಾ ತೆಗೆದುಕೊಳ್ಳಬಹುದು:
-
ಚಿತ್ರಗಳು, ವೀಡಿಯೋ, ಆಡಿಯೋ, ಪಠ್ಯ
ಆ ಡೇಟಾದಲ್ಲಿ ಪ್ಯಾಟರ್ನ್ ಹುಡುಕಲು ಆರಂಭಿಸುತ್ತೆ
-
ಆ ಡೇಟಾದಲ್ಲಿ ಪ್ಯಾಟರ್ನ್ ಹುಡುಕಲು ಕಲಿತರೆ
ಆ ಪ್ಯಾಟರ್ನ್ ಆಧರಿಸಿ ಊಹೆ ಮಾಡಲೂ ಅದು
-
ಆರಂಭ ಮಾಡಬಹುದು.
-
ಕಾರ್ ಚಿತ್ರ, ಸೈಕಲ್ ಚಿತ್ರದಲ್ಲಿ ವ್ಯತ್ಯಾಸ
ಗುರುತಿಸುವ ಹಾಗೆ.
-
ಸಮಾಜದಲ್ಲಿ AI ಮತ್ತು ಮಶಿನ್ ಲರ್ನಿಂಗ್ ದೊಡ್ಡ
ಪಾತ್ರವನ್ನು ನಿರ್ವಹಣೆ ಮಾಡುತ್ತಿವೆ
-
ನಮ್ಮ ಎಲ್ಲ ಭವಿಷ್ಯವನ್ನೂ ನಿರ್ಧರಿಸುತ್ತಿವೆ.
-
ಹೀಗಾಗಿ ಇದು ಕೆಲಸ ಮಾಡುವ ಬಗೆ ತಿಳಿಯುವುದು
ಅನುಭವದ ಜೊತೆಗೆ ಅತ್ಯಂತ ಮುಖ್ಯವಾಗಿದೆ.
-
ನಿಮ್ಮದೇ ಮಶಿನ್ ಲರ್ನಿಂಗ್ ಮಾಡೆಲ್‌ಗೆ ತರಬೇತಿ
ನೀಡಲು ನಿಮಗೆ ಅವಕಾಶ ಸಿಗುತ್ತದೆ.
-
ನೆನಪಿಡಿ, AI ಯಾವುದೇ ಟೂಲ್‌ನ ಹಾಗೆ: ಮೊದಲು ನೀವು
ತಿಳಿದುಕೊಳ್ಳಿ, ನಂತರ ನಿಮಗೆ ಶಕ್ತಿ ಸಿಗುತ್ತದೆ!