ಅಳಿದುಹೋದ ಸಂಸ್ಕೃತಿಯ ಬಗ್ಗೆ ವೇಡ್ ಡೆವಿಸ್
-
0:00 - 0:03ನಿಮಗೆ ಗೊತ್ತಾ ಪ್ರಯಾಣದ ಒಂದು ಅತೀವ ಆನಂದ ಮತ್ತು
-
0:03 - 0:05ಮಾನವ ಕುಲದ ಸಂಶೋಧನೆಯಲ್ಲಿ ದೊರಕುವ ಒಂದು ಹರ್ಷವೆಂದರೆ
-
0:05 - 0:07ಯಾರು ತಮ್ಮ ಹಿಂದಿನ ರೀತಿಗಳನ್ನು ಮರೆತಿಲ್ಲವೊ
-
0:07 - 0:09ಯಾರು ತಮ್ಮ ಹಿಂದಿನ ಬದುಕನ್ನು ಬೀಸುವ ಗಾಳಿಯಲ್ಲಿ ಅನುಭವಿಸುತ್ತಾರೊ,
-
0:09 - 0:12ಮಳೆಯಿಂದ ಹಸನಾದ ಕಲ್ಲಿನ ಸ್ಪರ್ಶದಲ್ಲಿ ಕಾಣುತ್ತಾರೊ
-
0:12 - 0:15ಗಿಡಗಳ ಕಹಿ ಎಲೆಗಳಲ್ಲಿ ಅದನ್ನು ಸವಿಯುತ್ತಾರೊ
-
0:15 - 0:17ಅಂಥವರೊಂದಿಗೆ ಬದುಕುವ ಅವಕಾಶ ದೊರೆಯುವುದು.
-
0:17 - 0:21ಜಾಗ್ವಾರ್ ಶಮನ್ ಗಳು ಈಗಲೂ ಆಕಾಶಗಂಗೆಯಾಚೆ ಸಂಚರಿಸುತ್ತಾರೆಂದು ತಿಳಿಯಲು
-
0:21 - 0:25ಅಥವಾ ಇನ್ಯೂಟ್ ಹಿರಿಯರು ಇನ್ನೂ ದಂತಕಥೆಗಳಿಗೆ ಅರ್ಥ ಮಾರ್ದನಿಸುವುದು
-
0:25 - 0:27ಅಥವಾ ಹಿಮಾಲಯದಲ್ಲಿ
-
0:28 - 0:32ಬೌದ್ಧರು ಈಗಲೂ ಧರ್ಮದ ಉಸಿರನ್ನು ಬೆಂಬತ್ತಿರುವುದು
-
0:32 - 0:35ಇವೆಲ್ಲ, ಮಾನವಶಾಸ್ತ್ರದ ಅಂತರ್ಜ್ಞಾನವನ್ನು ನೆನಪಿಸಿಕೊಳ್ಳುವುದು,
-
0:35 - 0:37ಹಾಗೂ ಇದರ ಕೇಂದ್ರ ವಿಚಾರವೆಂದರೆ ನಾವು ಜೀವಿಸುತ್ತಿರುವ ಪ್ರಪಂಚ
-
0:38 - 0:40ಯಾವುದೋ ಒಂದು ನಿರಂಕುಶ ಅಸ್ತಿತ್ವದಲ್ಲಿಲ್ಲ
-
0:40 - 0:41ಆದರೆ ಅದು ಅಸ್ತಿತ್ವದ ಒಂದು ಮಾದರಿ ಮಾತ್ರ,
-
0:41 - 0:45ಒಂದು ಗೊತ್ತಾದ ಹೊಂದಾಣಿಕೆ ಆಯ್ಕೆಗಳ ಕೂಟದ ಪರಿಣಾಮ
-
0:45 - 0:49ಹಲವು ತಲೆಮಾರುಗಳ ಹಿಂದೆ ಅದು ಹೇಗೋ ಯಶಸ್ವಿಯಾಗಿ ನಮ್ಮ ಸಂತತಿ ತಲೆಯೆತ್ತಿತು.
-
0:50 - 0:54ಮತ್ತು, ನಾವೆಲ್ಲಾ ಅದೇ ಹೊಂದಾಣಿಕೆ ವಿಧಾಯಕಗಳನ್ನು ಹಂಚಿಕೊಳ್ಳುತ್ತೇವೆ
-
0:54 - 0:56ನಾವೆಲ್ಲ ಹುಟ್ಟಿದ್ದೇವೆ. ನಾವು ನಮ್ಮ ಮಕ್ಕಳನ್ನು ಪ್ರಪಂಚಕ್ಕೆ ತರುತ್ತೇವೆ.
-
0:56 - 0:58ನಾವೆಲ್ಲ ದೀಕ್ಷಾ ವಿಧಿಗಳನ್ನು ಉಪಕ್ರಮಿಸುತ್ತೇವೆ.
-
0:58 - 1:00ನಾವೆಲ್ಲ ಸಾವಿನಿಂದ ಸಂಭವಿಸುವ ಅಗಲಿಕೆಯ ನಿಷ್ಟುರತೆಯನ್ನು ಎದುರಿಸಬೇಕಾಗಿದೆ,
-
1:00 - 1:04ಹಾಗಾಗಿ, ನಾವು ಹಾಡುವುದು, ಕುಣಿಯುವುದು ನಮಗೆ ಆಶ್ಚರ್ಯ ತರುವುದಿಲ್ಲ
-
1:04 - 1:06ನಮ್ಮೆಲ್ಲರಲ್ಲಿ ಕಲೆ ಇದೆ.
-
1:06 - 1:09ಆದರೆ, ಇಲ್ಲಿ ಆಸಕ್ತಿಕರ ಅಂಶವೆಂದರೆ ಗೀತೆಯ ಸ್ವರಗತಿಯ ವಿಶಿಷ್ಟತೆ,
-
1:09 - 1:11ಪ್ರತೀ ಸಂಸ್ಕೃತಿಯಲ್ಲೂ ನಾಟ್ಯದ ಲಯ.
-
1:11 - 1:14ಅದು ಬೋರ್ನಿಯೊ ಕಾಡುಗಳಲ್ಲಿನ ಪೆನನ್ ಆಗಿರಬಹುದು,
-
1:14 - 1:17ಅಥವಾ ಹೈಟಿಯಲ್ಲಿ ಒಬ್ಬ ಊಡೂ ಅನುಚರನದ್ದಾಗಿರಬಹುದು
-
1:18 - 1:22ಅಥವಾ ಉತ್ತರ ಕೇನ್ಯಾದ ಕೈಸೂಟ್ ಮರುಭೂಮಿಯಲ್ಲಿ ಯೋಧರ ನಡಿಗೆಯಾಗಿರಬಹುದು
-
1:24 - 1:26ಯಾಂಡೇಸ್ ಪರ್ವತಗಳಲ್ಲಿನ ಕೊರಾಂಡರೋಸ್,
-
1:27 - 1:32ಅಥವಾ ಸಹಾರ ಮರುಭೂಮಿಯ ಮಧ್ಯದಲ್ಲಿರುವ ತಂಗುದಾಣ.
-
1:32 - 1:34ಪ್ರಾಸಂಗಿಕವಾಗಿ ಮರುಭೂಮಿಯಲ್ಲಿ ನನ್ನೊಂದಿಗೆ ಪ್ರಯಾಣ ಮಾಡಿದ ವ್ಯಕ್ತಿ
-
1:34 - 1:35ಒಂದು ತಿಂಗಳ ಹಿಂದೆ,
-
1:35 - 1:38ಅಥವಾ ಕ್ವೊಮೊಲಾಂಗ್ಮಾದ ಇಳಿಜಾರುಗಳಲ್ಲಿ ಚಮರಿಮೃಗ ಮೇಯಿಸುವ ಒಬ್ಬ,
-
1:38 - 1:40ಎವರೆಸ್ಟ್, ಪ್ರಪಂಚದ ದೈವಮಾತೆ.
-
1:40 - 1:43ಈ ಎಲ್ಲ ಜನರೂ ನಾವು ಇತರ ರೀತಿಗಳಲ್ಲಿ ಜೀವಿಸಬಹುದೆಂದು ಬೋಧಿಸುತ್ತಾರೆ,
-
1:43 - 1:44ಇತರ ರೀತಿಯಲ್ಲಿ ಯೋಚಿಸಬಹುದೆಂದು,
-
1:44 - 1:46ಇತರ ರೀತಿಗಳಲ್ಲಿ ನಿಮ್ಮನ್ನು ನೀವು ಈ ಪೃಥ್ವಿಯ ಮೇಲೆ ಉತ್ತೇಜಿಸಿಕೊಳ್ಳಬಹುದೆಂದು.
-
1:46 - 1:48ನೀವು ಅದರ ಬಗ್ಗೆ ಯೋಚಿಸಿದರೆ, ಅದೊಂದು ಕಲ್ಪನೆ,
-
1:48 - 1:50ನಿಮ್ಮಲ್ಲಿ ಆಶಾಭಾವನೆಯನ್ನು ತುಂಬಬಹುದು.
-
1:50 - 1:53ಈಗ, ಪ್ರಪಂಚದ ಅಸಂಖ್ಯಾತ ಸಂಸ್ಕೃತಿಗಳು ಒಟ್ಟುಗೂಡಿ
-
1:53 - 1:57ಒಂದು ಅಧ್ಯಾತ್ಮಿಕ ಜೀವನ ಮತ್ತು ಸಾಂಸ್ಕೃತಿಕ ಜೀವನದ ಬಲೆ ನೇಯುತ್ತವೆ
-
1:57 - 1:59ಅದು ಇಡೀ ಗ್ರಹವನ್ನೇ ಆವರಿಸುತ್ತದೆ,
-
1:59 - 2:01ಹಾಗೂ ಇದು ಈ ಗ್ರಹದ ಯೋಗ-ಕ್ಷೇಮಕ್ಕೆ ಬಹಳ ಮುಖ್ಯ
-
2:01 - 2:04ಅದು ಜೀವನದ ಜೈವಿಕ ಬಲೆ, ಜೈವಿಕ ಮಂಡಲ ಎಂಬುದು ನಿಮಗೆ ತಿಳಿದಿದೆ.
-
2:04 - 2:07ಹಾಗೂ ಜೀವನದ ಈ ಸಾಂಸ್ಕೃತಿಕ ಬಲೆ ಏನೆಂದು ನೀವು ಯೋಚಿಸಬಹುದು
-
2:07 - 2:08ಅದು ನರಕುಲ ಮಂಡಲ ಎಂದು
-
2:08 - 2:10ಹಾಗೂ ನೀವು ನರಕುಲ ಮಂಡಲವನ್ನು
-
2:10 - 2:13ಎಲ್ಲ ಆಲೋಚನೆಗಳ ಮತ್ತು ಕನಸುಗಳ, ದಂತಕಥೆಗಳ,
-
2:13 - 2:16ಕಲ್ಪನೆಗಳ, ದೈವಪ್ರೇರಣೆಗಳ, ಅಂತಃಪ್ರೇರಣೆಗಳ ಒಟ್ಟು ಮೊತ್ತವಾಗಿ ಅಸ್ತಿತ್ವಕ್ಕೆ ಬಂದಿವೆ
-
2:16 - 2:20ಮಾನವನ ಕಲ್ಪನಾಶಕ್ತಿಯ ಮುಖಾಂತರ ಅಂತಃಪ್ರಜ್ಞೆಯ ಉದಯವಾದಂದಿನಿಂದ.
-
2:20 - 2:23ಈ ನರಕುಲ ಮಂಡಲ ಮಾನವನ ಪ್ರಮುಖ ಪೂರ್ವಾರ್ಜಿತ ಆಸ್ತಿ
-
2:23 - 2:25ಅದು ನಮ್ಮ ಇರುವಿಕೆಯ ಪ್ರತೀಕ
-
2:25 - 2:29ಮತ್ತು ನಾವು ಆಶ್ಚರ್ಯಕರ ಅನ್ವೇಷಣಶೀಲ ಜಾತಿಯಾಗಿರುವುದರ ಪ್ರತೀಕ.
-
2:30 - 2:33ಯಾವ ರೀತಿ ಜೈವಿಕ ಮಂಡಲ ಕಠೋರವಾಗಿ ನಾಶಹೊಂದಿದೆಯೊ,
-
2:33 - 2:35ಅದೇ ರೀತಿ ನರಕುಲ ಮಂಡಲವೂ ಕೂಡ
-
2:35 - 2:37-- ಅದೂ ಕೂಡ ಇನ್ನೂ ಹೆಚ್ಚಿನ ಗತಿಯಲ್ಲಿ
-
2:37 - 2:39ಉದಾಹರಣೆಗೆ, ಯಾವ ಜೀವಶಾಸ್ತ್ರಜ್ಞರೂ
-
2:39 - 2:4250% ಅಥವಾ ಇನ್ನೂ ಹೆಚ್ಚು ಜಾತಿಗಳು
-
2:42 - 2:44ನಾಶದ ಅಂಚಿನಲ್ಲಿವೆ ಎಂದು ಹೇಳುವ ಸಾಹಸ ಮಾಡುವುದಿಲ್ಲ, ಏಕೆಂದರೆ ಅದು ಸತ್ಯವಲ್ಲ
-
2:44 - 2:46ಆದರೂ ಕೂಡ -- ಭವಿಷ್ಯದ ಪರಿಸ್ಥಿತಿ
-
2:46 - 2:49ಜೀವಶಾಸ್ತ್ರಕ್ಕೆ ಸಂಭಂಧಿಸಿದ ವೈವಿಧ್ಯತೆಯ ಲೋಕದಲ್ಲಿ
-
2:49 - 2:52ನಮಗೆ ತಿಳಿದಿರುವ ಆಶಾವಾದ ಚಿತ್ರಣವನ್ನು ಸಾಂಸ್ಕೃತಿಕ ವೈವಿಧ್ಯತೆಯ ಪರಿಸ್ಥಿತಿಯಲ್ಲಿ
-
2:52 - 2:54ಅಪರೂಪವಾಗಿ ತಲುಪುತ್ತದೆ.
-
2:54 - 2:57ಹಾಗೂ ಇದರ ಪ್ರಮುಖ ಸೂಚಕವೆಂದರೆ, ಭಾಷೆ ಹಾನಿ.
-
2:57 - 3:00ಈ ಕೊಠಡಿಯಲ್ಲಿರುವ ಪ್ರತಿಯೊಬ್ಬರೂ, ನೀವು ಹುಟ್ಟಿದಾಗ
-
3:00 - 3:03ಈ ಗ್ರಹದ ಮೇಲೆ 6:00 ಭಾಷೆಗಳಲ್ಲಿ ಮಾತನಾಡಲಾಗುತ್ತಿತ್ತು.
-
3:03 - 3:06ಈಗ, ಭಾಷೆ ಒಂದು ಶಬ್ದ ಸಂಗ್ರಹವಲ್ಲ
-
3:06 - 3:08ಅಥವಾ ವ್ಯಾಕರಣ ನಿಯಮಗಳ ಒಂದು ಕಟ್ಟಲ್ಲ.
-
3:08 - 3:10ಒಂದು ಭಾಷೆ ಮಾನವನ ಅಂತಃಕರಣದ ಪ್ರಕಾಶ.
-
3:10 - 3:13ಅದು ಈ ಭೌತಪ್ರಪಂಚಕ್ಕೆ ಪ್ರತಿಯೊಂದು ನಿರ್ದಿಷ್ಟ ಸಂಸ್ಕೃತಿಯ ಚೇತನವು
-
3:13 - 3:14ತಲುಪುವ ಸಾಧನ.
-
3:14 - 3:17ಪ್ರತಿಯೊಂದು ಭಾಷೆಯೂ ಒಂದು ಮನಸ್ಸಿನ ಪ್ರಾಚೀನ ಆಲೋಚನಾ ಪ್ರಗತಿ,
-
3:17 - 3:21ಒಂದು ಅರಿವಿನ ಸಂಗ್ರಹ , ಒಂದು ಆಲೋಚನೆ, ಅಧ್ಯಾತ್ಮಿಕ ಸಾಧ್ಯತೆಗಳ ಒಂದು ಪಾರಿಸರಿಕ ವ್ಯವಸ್ಥೆ.
-
3:21 - 3:25ನಾವೀಗ ಮೋಂಟರೇನಲ್ಲಿ ಕುಳಿತಿರುವ ಈ ದಿನ, ಈ 6:00 ಭಾಷೆಗಳಲ್ಲಿ
-
3:25 - 3:29ಅರ್ಧದಷ್ಟು ಭಾಷೆಗಳನ್ನು ಮಕ್ಕಳ ಕಿವಿಯಲ್ಲಿ ಪಿಸುಗುಡಲಾಗುತ್ತಿಲ್ಲ.
-
3:29 - 3:32ಶಿಶುಗಳಿಗೆ ಈಗ ಅವನ್ನು ಕಲಿಸಲಾಗುತ್ತಿಲ್ಲ,
-
3:32 - 3:34ಅಂದರೆ, ಪರಿಣಾಮಕಾರಿಯಾಗಿ, ಯಾವುದೋ ಒಂದು ಬದಲಾಗದಿದ್ದರೆ,
-
3:34 - 3:35ಅವು ಈಗಾಗಲೇ ಸತ್ತಂತೆಯೇ ಸರಿ.
-
3:35 - 3:39ನಿಃಶಬ್ದ ಆವರಿಸುವುದಕ್ಕಿಂತ ಹೆಚ್ಚು ಏಕಾಂತತೆ ಇನ್ನಾವುದಿದೆ,
-
3:39 - 3:41ನಿಮ್ಮ ಭಾಷೆಯನ್ನು ಮಾತನಾಡುವ ಕಟ್ಟಕಡೆಯ ವ್ಯಕ್ತಿಗಳಾಗಿ,
-
3:41 - 3:44ನಿಮ್ಮ ಪೂರ್ವಜರ ಬುದ್ದಿಮತ್ತೆಯನ್ನು ಇತರರಿಗೆ ಹಂಚುವ ದಾರಿಯಿಲ್ಲದೆ
-
3:44 - 3:47ಅಥವಾ ಮಕ್ಕಳ ಭರವಸೆಯನ್ನು ನಿರೀಕ್ಷಿಸಲಾಗದೆ?
-
3:47 - 3:50ಆದರೂ ಕೂಡ, ಯಾರೋ ಒಬ್ಬರ ಭಯಂಕರ ವಿಧಿಯ ದುರವಸ್ಥೆಯೆ,
-
3:50 - 3:52ಭೂಮಂಡಲದ ಎಲ್ಲೋ ಒಂದು ಕಡೆ, ಪ್ರತಿ ಎರಡು ವಾರಗಳಿಗೆ,
-
3:52 - 3:54ಏಕೆಂದರೆ, ಪ್ರತಿ ಎರಡು ವಾರಗಳಿಗೆ ಒಬ್ಬ ಹಿರಿಯ ಸಾಯುತ್ತಾನೆ
-
3:54 - 3:56ಹಾಗೂ ತನ್ನೊಂದಿಗೆ ಪ್ರಾಚೀನ ಭಾಷೆಯ ಕೊನೆಯ ಪಠ್ಯಗಳನ್ನು
-
3:56 - 3:58ತನ್ನ ಗೋರಿಗೆ ಕೊಂಡೊಯ್ಯುತ್ತಾನೆ.
-
3:58 - 4:00ಹಾಗೆಯೇ, ನನಗೆ ಗೊತ್ತು, ನಿಮ್ಮಲ್ಲಿ ಕೆಲವರು, "ಅದಿನ್ನೂ ಒಳ್ಳೆಯದಲ್ಲವೇ?
-
4:00 - 4:01ಪ್ರಪಂಚ ಜೀವಿಸಲು ಇನ್ನೂ ಉತ್ತಮವಾಗಿರುತ್ತಲ್ಲವೆ
-
4:01 - 4:04ನಾವೆಲ್ಲರೂ ಒಂದೇ ಭಾಷೆ ಮಾತನಾಡಿದರೆ?" ಎನ್ನುತ್ತೀರಾ. ನಾನು ಹೇಳುತ್ತೇನೆ, "ಬಹಳ ಒಳ್ಳೆಯದು,
-
4:04 - 4:07ನಾವು ಆ ಭಾಷೆ ಯೊರುಬಾ ಎಂದು ಮಾಡೋಣ. ಅದು ಕ್ಯಾಂಟೊನೀಸ್ ಆಗಲಿ.
-
4:07 - 4:08ಕೋಗಿಯನ್ನು ಮಾಡೋಣ."
-
4:08 - 4:10ಹಾಗೂ ಅದು ಹೇಗಿರುತ್ತದೆಂಬುದು ನೀವು ತಕ್ಷಣ
-
4:10 - 4:13ನಿಮ್ಮ ಸ್ವಂತ ಭಾಷೆಯಲ್ಲಿ ಮಾತನಾಡಲಾಗದೆ ಕಂಡುಕೊಳ್ಳುತ್ತೀರಾ.
-
4:13 - 4:16ಆದ್ದರಿಂದ, ಈ ದಿನ ನಾನು ನಿಮ್ಮೊಂದಿಗೆ ಏನು ಮಾಡಬೇಕೆಂದಿದ್ದೇನೆಂದರೆ
-
4:16 - 4:20ನರಕುಲ ಮಂಡಲದ ಮೂಲಕ ನಿಮ್ಮನ್ನು ಕರೆದೊಯ್ಯುತ್ತೇನೆ --
-
4:20 - 4:22ನರಕುಲ ಮಂಡಲದ ಒಂದು ಚಿಕ್ಕ ಪ್ರವಾಸ
-
4:22 - 4:26ನಾವು ಏನು ಕಳೆದುಕೊಳ್ಳುತ್ತಿದ್ದೇವೆಂದು ನಿಮ್ಮ ಅರಿವಿಗೆ ತರಲು.
-
4:27 - 4:34ಈಗ, ನಮ್ಮಲ್ಲಿ ಬಹಳಷ್ಟು ಜನ ಒಂದು ಅಂಶ ಮರೆಯುತ್ತೇವೆ
-
4:34 - 4:36ನಾನು "ಬೇರೆ ಬೇರೆ ರೀತಿಯಲ್ಲಿ ಬದುಕುವುದು" ಎಂದಾಗ
-
4:36 - 4:38ನಿಜವಾಗಿಯೂ ಬೇರೆ ಬೇರೆ ರೀತಿಯಲ್ಲಿ ಬದುಕುವುದು ಎಂದೇ.
-
4:39 - 4:44ಉದಾಹರಣೆಗೆ, ಉತ್ತರ-ಪಶ್ಚಿಮ ಅಮೆಜಾನಿನ ಬರಸಾನದ ಒಂದು ಮಗುವನ್ನು ತೆಗೆದುಕೊಳ್ಳಿ,
-
4:44 - 4:45ಅನಕೊಂಡದ ಜನರು
-
4:45 - 4:47ತಾವು ಹಾಲು ನದಿಯಿಂದ ಮೇಲೆ ಬಂದೆವು ಎನ್ನುವ ದಂತಕಥೆಯನ್ನು ನಂಬಿರುವ ಜನ
-
4:47 - 4:50ಅದೂ ಪೂರ್ವದಿಂದ ಪವಿತ್ರ ಸರ್ಪಗಳ ಉದರದಿಂದ.
-
4:50 - 4:53ಈಗ, ಈ ಜನರು ತಮ್ಮ ಅರಿವಿನಿಂದ
-
4:53 - 4:55ಹಸುರು ಬಣ್ಣ ಮತ್ತು ನೀಲಿ ಬಣ್ಣಗಳಿಗಿರುವ ವ್ಯತ್ಯಾಸ ಕಂಡುಹಿಡಿಯಲಾರರು
-
4:55 - 4:57ಏಕೆಂದರೆ ಆಕಾಶದ ಸೂರು ಹಾಗೂ
-
4:57 - 4:58ಅರಣ್ಯದ ಸೂರು ಅವರಿಗೆ ಸಮ
-
4:58 - 5:00ಇದರ ಮೇಲೆ ಜನರು ಆವಲಂಬಿತರಾಗಿದ್ದಾರೆ.
-
5:00 - 5:03ಅವರು ಒಂದು ವಿಲಕ್ಷಣ ಭಾಷೆ ಮತ್ತು ಮದುವೆಯ ನಿಯಮ ಹೊಂದಿದ್ದಾರೆ
-
5:03 - 5:05ಅದನ್ನು ಭಾಷಾ ಅಂತರ್ವಿವಾಹ ಎಂದು ಕರೆಯುತ್ತಾರೆ:
-
5:05 - 5:08ನೀವು ಬೇರೊಂದು ಭಾಷೆ ಮಾತನಾಡುವ ಒಬ್ಬರನ್ನು ವಿವಾಹವಾಗಬೇಕು.
-
5:08 - 5:10ಹಾಗೂ ಇದೆಲ್ಲವೂ ದಂತಕಥೆಗಳಲ್ಲಿ ಬೇರೂರಿಕೊಂಡಿವೆ.
-
5:10 - 5:12ಆದರೂ ವಿಲಕ್ಷಣವೆಂದರೆ ಆರು ಇಲ್ಲವೇ ಏಳು ಮಾತನಾಡುವ
-
5:12 - 5:14ಭಾಷೆಗಳಿರುವ ದೊಡ್ಡ ಕುಟುಂಬಗಳಲ್ಲಿ♪
-
5:14 - 5:16ವಿವಾಹದ ಕಾರಣದಿಂದ,
-
5:16 - 5:19ಯಾರೋ ಒಂದು ಭಾಷೆಯನ್ನು ಕಲಿಯುತ್ತಿದ್ದಾರೆ ಎನ್ನುವುದು ನಿಮಗೆ ಕಂಡುಬರುವುದಿಲ್ಲ.
-
5:19 - 5:22ಅವರು ಸುಮ್ಮನೆ ಕೇಳಿಸಿಕೊಳ್ಳುತ್ತಾರೆ ಮತ್ತು ಮಾತಾಡಲು ಪ್ರಾರಂಭಿಸುತ್ತಾರೆ.
-
5:22 - 5:24ಅಥವಾ, ನಾನು ಜೊತೆಯಲ್ಲಿ ವಾಸಮಾಡಿದ ಬುಡಕಟ್ಟುಗಳಲ್ಲಿ ಒಂದಾದ
-
5:24 - 5:28ಉತ್ತರಪೂರ್ವ ಈಕ್ವೆಡಾರ್ ನ ವೌರಾನಿ ಜನಾಂಗ ತೆಗೆದುಕೊಳ್ಳಿ,
-
5:28 - 5:31ಮೊಟ್ಟಮೊದಲನೆಯದಾಗಿ 1958 ರಲ್ಲಿ ಈ ಆಶ್ಚರ್ಯಕರ ಜನರನ್ನು ಶಾಂತಿಯುತವಾಗಿ ಸಂಪರ್ಕಿಸಲಾಯಿತು.
-
5:31 - 5:351957 ಐದು ಜನ ಧರ್ಮಪ್ರಚಾರಕರು ಸಂಪರ್ಕಿಸಲು ಪ್ರಯತ್ನಪಟ್ಟರು.
-
5:35 - 5:36ಹಾಗೂ ಒಂದು ದೊಡ್ಡ ತಪ್ಪು ಮಾಡಿದರು.
-
5:36 - 5:37ಮೇಲಿಂದ ಕೆಳಕ್ಕೆ
-
5:37 - 5:39ಎಂಟು x ಹತ್ತು ಗಾತ್ರದ ತಮ್ಮದೇ ಹೊಳೆಯುವ ಫೋಟೊಗಳನ್ನು ಎಸೆದರು.
-
5:39 - 5:41ಇದನ್ನು ನಾವು ಸ್ನೇಹಪೂರಿತ ಸೂಚನೆಗಳೆನ್ನಬಹುದು,
-
5:41 - 5:43ಆದರೆ ಎಸೆಯುವಾಗ ಅವರು ಮಳೆ ಅರಣ್ಯ ಪ್ರದೇಶದ ಈ ಜನ ತಮ್ಮ ಜೀವನದಲ್ಲಿ
-
5:43 - 5:46ಎಂದೂ ಎರಡು-ಆಯಾಮಗಳ ವಸ್ತುವನ್ನು ನೋಡಿಲ್ಲ ಎಂಬುದನ್ನು ಮರೆತರು.
-
5:46 - 5:48ಅವರು ಈ ಫೊಟೊಗಳನ್ನು ಕಾಡಿನ ನೆಲದಿಂದ ಎತ್ತಿಕೊಂಡು
-
5:48 - 5:51ಫೋಟೊದಲ್ಲಿರುವ ಮುಖದ ಹಿಂದಿರುವ ಆಕಾರವನ್ನು ನೋಡಲು ಯತ್ನಿಸಿದರು,
-
5:51 - 5:53ಅವರಿಗೆ ಏನೂ ಕಾಣಲಿಲ್ಲ ಹಾಗೂ ಇವು ಪಿಶಾಚಿಗಳಿಂದ ಬಂದಿರುವ
-
5:53 - 5:56ಕರೆ ಕಾರ್ಡುಗಳೆಂದು ತೀರ್ಮಾನಿಸಿ, ಆ ಐದು ಜನ ಧರ್ಮ ಪ್ರಚಾರಕರನ್ನು ಭರ್ಜಿಗಳಿಂದ ಇರಿದು ಕೊಂದರು.
-
5:57 - 5:59ಆದರೆ ವೌರಾನಿ ಜನಾಂಗ ಕೇವಲ ಹೊರಗಿನವರನ್ನು ಇರಿಯಲಿಲ್ಲ.
-
5:59 - 6:00ಒಬ್ಬರನ್ನೊಬ್ಬರು ಇರಿದುಕೊಂಡರು
-
6:00 - 6:0354% ಮರಣಪ್ರಮಾಣ ಇರುವುದು ಅವರು ತಮ್ಮಲ್ಲೇ ಒಬ್ಬರನ್ನೊಬ್ಬರು ಇರಿದುಕೊಳ್ಳುವುದರಿಂದ.
-
6:03 - 6:06ನಾವು ಎಂಟು ತಲೆಮಾರುಗಳ ವಂಶಾವಳಿಯನ್ನು ಪತ್ತೆಮಾಡಿದೆವು,
-
6:06 - 6:08ಹಾಗೂ ನಾವು ಸ್ವಾಭಾವಿಕ ಸಾವಿನ ಎರಡು ಘಟನೆಗಳನ್ನು ಮಾತ್ರ ಪತ್ತೆಮಾಡಿದೆವು
-
6:08 - 6:10ಮತ್ತು ನಾವು ಇದರ ಬಗ್ಗೆ ಜನರನ್ನು ಇನ್ನಷ್ಟು ಬಲವಂತ ಮಾಡಿದಾಗ
-
6:10 - 6:12ಒಬ್ಬನಿಗೆ ತುಂಬಾ ವಯಸ್ಸಾಗಿತ್ತು ಎಂದು ಒಪ್ಪಿಕೊಂಡರು
-
6:12 - 6:16ಹಾಗೂ ಅವನು ಇಳಿವಯಸ್ಸಿನಿಂದ ಸತ್ತನು, ಆದರೂ ನಾವು ಅವನನ್ನು ಇರಿದೆವು (ನಗು)
-
6:16 - 6:19ಆದರೆ, ಅವರಿಗೆ ಅರಣ್ಯದ ಬಗ್ಗೆ ಅತಿ ಸೂಕ್ಷ್ಮ ಮತ್ತು ತೀಕ್ಷ್ಣ
-
6:19 - 6:20ತಿಳಿವಳಿಕೆಯಿತ್ತು, ಇದು ಅತ್ಯಂತ ಆಶ್ಚರ್ಯಕರ.
-
6:20 - 6:23ಅವರ ಬೇಟೆಗಾರರು ಪ್ರಾಣಿಗಳ ಮೂತ್ರದ ವಾಸನೆಯನ್ನು 40 ಹೆಜ್ಜೆಗಳ ದೂರದಿಂದಲೇ ಮೂಸಬಲ್ಲರು
-
6:23 - 6:26ಮತ್ತು ಅದು ಯಾವ ಪ್ರಾಣಿಯ ಮೂತ್ರ ಎಂದು ಹೇಳಬಲ್ಲರು
-
6:26 - 6:2880 ರ ದಶಕದ ಪ್ರಾರಂಭದಲ್ಲಿಯೇ ನಾನು ಒಂದು ವಿಸ್ಮಯಕಾರಿ ಕಾರ್ಯ ಕೈಗೊಳ್ಳಬೇಕಾಯಿತು
-
6:28 - 6:30ಹಾರ್ವರ್ಡಿನಲ್ಲಿ ನಮ್ಮ ಪ್ರೊಫೆಸರ್ ಕೇಳಿದರು
-
6:30 - 6:32ಹೈಟಿಗೆ ಹೋಗಲು ನಿನಗೆ ಆಸಕ್ತಿಯಿದೆಯೇ ಎಂದು,
-
6:33 - 6:35ರಹಸ್ಯ ಸಮಾಜಗಳಲ್ಲಿ ಒಳನುಸುಳಿ
-
6:35 - 6:37ದುವೇಲಿಯರ್ನ ಮತ್ತು ಟೊಂಟೋನ್ ಮಕೌಟ್ಸ್ನ
-
6:37 - 6:38ಶಕ್ತಿಯ ಮೂಲ ಮತ್ತು
-
6:38 - 6:41ಸೋಂಭೇರಿಗಳನ್ನು ತಯಾರುಮಾಡುವ ವಿಷವಸ್ತುವನ್ನು ಪಡೆಯಲು.
-
6:41 - 6:44ಈ ಪಯಣದ ವಿವೇಚನೆಯನ್ನು ಸಂವೇದನಾಶೀಲವಾಗಿ ಮಾಡಲು
-
6:44 - 6:47ನಾನು ಈ ವೊಡೌನಿನ ಅದ್ವಿತೀಯ ನಂಬಿಕೆಯ ಬಗ್ಗೆ ಅರಿತುಕೊಳ್ಳಬೇಕಾಯಿತು
-
6:47 - 6:50ಹಾಗೂ ವೂಡೂ ಮಾಟ-ಮಂತ್ರದ ಒಂದು ಪಂಥವಲ್ಲ.
-
6:50 - 6:53ವಿಪರ್ಯಾಸವಾಗಿ ಅದೊಂದು ಸಂಕೀರ್ಣ ಅಧ್ಯಾತ್ಮಿಕ ಸಿದ್ಧಾಂತದ ವಿಶ್ವನೋಟ.
-
6:53 - 6:54ಇದು ಆಸಕ್ತಿಕರ.
-
6:54 - 6:55ನಾನು ನಿಮ್ಮನ್ನು ಪ್ರಪಂಚದ ಅತಿ ಉನ್ನತ ಧರ್ಮಗಳನ್ನು ಹೆಸರಿಸಿ ಎಂದರೆ
-
6:55 - 6:56ನೀವೇನು ಹೇಳುತ್ತೀರಾ?
-
6:56 - 6:59ಕ್ರೈಸ್ತ ಧರ್ಮ, ಇಸ್ಲಾಂ, ಬೌದ್ಧಧರ್ಮ, ಯಹೂದಿ ಧರ್ಮ, ಯಾವುದೋ ಒಂದು.
-
6:59 - 7:01ಆದರೆ ಯಾವಾಗಲೂ ಒಂದು ಖಂಡ ಬಿಟ್ಟುಹೋಗುತ್ತದೆ
-
7:01 - 7:03ಒಂದು ಊಹೆಯ ಮೇಲೆ, ಸಬ್ ಸಹರನ್ ಆಫ್ರಿಕಾದಲ್ಲಿ
-
7:03 - 7:05ಯಾವುದೇ ಧಾರ್ಮಿಕ ನಂಬಿಕೆಗಳಿರಲಿಲ್ಲ. ಆದರೆ, ಅವರಲ್ಲಿ ನಂಬಿಕೆಗಳು ಇತ್ತು,
-
7:05 - 7:07ಹಾಗೂ ಊಡೂ ಈ ಎಲ್ಲ ಗಂಭೀರವಾದ
-
7:08 - 7:09ಧಾರ್ಮಿಕ ಕಲ್ಪನೆಗಳ ಸಾರ
-
7:09 - 7:12ಹಾಗೂ ಇದು ಹೃದಯವಿದ್ರಾವಕ ಗುಲಾಮಗಿರಿ ಯುಗದಲ್ಲಿ ಬಂದಿತು.
-
7:12 - 7:14ಆದರೆ, ಊಡೂ ಇಷ್ಟೊಂದು ಆಸಕ್ತಿಕರ, ಏಕೆಂದರೆ ಅದು
-
7:14 - 7:16ಜೀವಂತವಾಗಿರುವ ಮತ್ತು ಸತ್ತವರ
-
7:16 - 7:17ನಡುವೆ ಇರುವ ಜ್ವಲಂತ ಸಂಬಂಧ.
-
7:17 - 7:18ಹಾಗಾಗಿ, ಜೀವಂತ ಇರುವವರು ಆತ್ಮಗಳಿಗೆ ಜನ್ಮಕೊಡುತ್ತಾರೆ.
-
7:18 - 7:21ಈ ಆತ್ಮಗಳನ್ನು ಅಸಾಮಾನ್ಯ ಜಲದ ಕೆಳಗಿನಿಂದ ಆವಾಹಿಸಬಹುದು,
-
7:21 - 7:23ನಾಟ್ಯದ ತಾಳಕ್ಕೆ ಮೇಳೈಸಿದಂತೆ
-
7:23 - 7:25ಸ್ವಲ್ಪ ಕ್ಷಣ ಜೀವಂತವಿರುವವರ ಶಬ್ದ ಬದಲಾವಣೆ ಮಾಡಿದಂತೆ
-
7:25 - 7:29ಆ ಸ್ವಲ್ಪ ಕ್ಷಣ, ಆ ಪ್ರವಾದಿಯೇ ದೈವವಾದಂತೆ.
-
7:29 - 7:31ಅದಕ್ಕೆ, ವೂಡೂಗಳು ಹೇಳುತ್ತಾರೆ,
-
7:31 - 7:34“ನೀವು ಬಿಳಿ ಜನ ಚರ್ಚಿಗೆ ಹೋಗುತ್ತೀರ ಮತ್ತು ದೇವರ ಬಗ್ಗೆ ಮಾತನಾಡುತ್ತೀರ.
-
7:34 - 7:36ನಾವು ದೇವಾಲಯದಲ್ಲಿ ಕುಣಿದಾಡುತ್ತೇವೆ ಮತ್ತು ದೇವರಾಗುತ್ತೇವೆ.”
-
7:36 - 7:39ನೀವು ಆವೇಶಗೊಂಡಿರುವುದರಿಂದ ನಿಮ್ಮನ್ನು ಪಿಶಾಚಿ ಹಿಡಿದುಕೊಳ್ಳುತ್ತದೆ,
-
7:39 - 7:40ನಿಮಗೆ ಅಪಾಯ ಹೇಗಾಗುತ್ತದೆ?
-
7:40 - 7:43ಹಾಗಾಗಿ, ನೀವು ಈ ಆಶ್ಚರ್ಯಕರ ಪ್ರದರ್ಶನಗಳನ್ನು ನೋಡುತ್ತೀರಿ:
-
7:43 - 7:45ವೂಡೂ ಅನುಚರರರು ಒಂದು ಭಾವಪರವಶ ಸ್ಥಿತಿಯಲ್ಲಿರುವಂತೆ
-
7:45 - 7:48ಉರಿಯುತ್ತಿರುವ ಕೊಳ್ಳಿಗಳನ್ನು ನಿರ್ಭೀತಿಯಿಂದ ಆಡಿಸುವುದು
-
7:48 - 7:51ಮಾನಸಿಕ ಸಾಮರ್ಥ್ಯವನ್ನು ಆಶ್ಚರ್ಯಕರ ರೀತಿಯಲ್ಲಿ ಪ್ರದರ್ಶಿಸುವುದು
-
7:51 - 7:52ಆ ಮನಸ್ಸು ಹೊಂದಿರುವ ದೇಹದ ಮೇಲೆ ಪ್ರಭಾವ ಬೀರುವುದು
-
7:52 - 7:55ತೀವ್ರವಾದ ಉದ್ರೇಕ ಸ್ಥಿತಿಯಲ್ಲಿ ವೇಗವರ್ಧಿಸುವುದು.
-
7:56 - 7:58ಈಗ, ನಾನು ಜೊತೆಗಿದ್ದ ಎಲ್ಲ ಜನರ ಪೈಕಿ
-
7:58 - 8:00ಅತಿ ವಿಚಿತ್ರವಾದವರೆಂದರೆ ಉತ್ತರ ಕೊಲಂಬಿಯಾದ
-
8:00 - 8:03ಸೀಯೆರಾ ನೆವೆಡಾ ಡಿ ಸಾಂಟ ಮಾರ್ತಾಕ್ಕೆ ಸೇರಿದ ಕೋಗಿಗಳು.
-
8:03 - 8:06ಇವರು ಪ್ರಾಚೀನ ಟೈರೋನಾ ನಾಗರಿಕತೆಗಳ ಸಂತತಿಗಳು
-
8:06 - 8:09ಇವರು ಒಮ್ಮೆ ಕೊಲಂಬಿಯಾದ ಕ್ಯಾರಿಬಿಯನ್ ಕಡಲ ತೀರದ ಬಯಲು ಪ್ರದೇಶವನ್ನು
-
8:09 - 8:10ವಿಜಯೋತ್ಸವ ಸಂದರ್ಭದಲ್ಲಿ ನೆಲಸಮ ಮಾಡಿದ್ದರು,
-
8:10 - 8:13ಈ ಜನ ಪ್ರತ್ಯೇಕವಾದ ಕ್ಯಾರಿಬಿಯನ್ ಕಡಲು ತೀರದ ಬಯಲು ಪ್ರದೇಶದ
-
8:13 - 8:15ಮೇಲೆ ಚಾಚಿಕೊಂಡಿರುವ ಜ್ವಾಲಾಮುಖಿ ಪರ್ವತಕ್ಕೆ ಹಿಂದಿರುಗಿದರು.
-
8:15 - 8:17ರಕ್ತದೋಕುಳಿಯಿಂದ ತುಂಬಿರುವ ಖಂಡದಲ್ಲಿ,
-
8:17 - 8:20ಸ್ಪಾನಿಶರು ಜಯಸಾಧಿಸದಿರುವ ಏಕೈಕ ಗುಂಪು ಇದು.
-
8:20 - 8:23ಇವತ್ತಿನವರೆಗೂ, ಅವರು ಧಾರ್ಮಿಕ ಸಂಸ್ಕಾರಗಳನ್ನು ಆಚರಿಸುವ ಪುರೋಹಿತಶಾಹಿ ಆಡಳಿತಕ್ಕೊಳಗಾಗಿದ್ದಾರೆ
-
8:23 - 8:25ಆದರೆ, ಅವರ ಪುರೋಹಿತ ಸ್ಥಾನಕ್ಕೆ ಕೊಡುವ ತರಬೇತಿ ಅಸಾಧಾರಣ.
-
8:26 - 8:28ಚಿಕ್ಕ ವಯಸ್ಸಿನ ಪ್ರವಾದಿಗಳನ್ನು ಅವರ ಮೂರು
-
8:28 - 8:30ಮತ್ತು ನಾಲ್ಕನೆ ವಯಸ್ಸಿನಲ್ಲಿಯೇ ಮನೆಯಿಂದ ಒಯ್ಯಲಾಗುತ್ತದೆ
-
8:30 - 8:32ಅಂಧಕಾರ ಮತ್ತು ಕತ್ತಲುಕೋಣೆಯ ಏಕಾಂತ ಸ್ಥಳದಲ್ಲಿ
-
8:32 - 8:36ಗುಹೆಗಳಲ್ಲಿ ಹಿಮರಾಶಿಯ ಬುಡದಲ್ಲಿ 18 ವರ್ಷ ಇಡಲಾಗುವುದು.
-
8:36 - 8:37ಒಂಬತ್ತು ವರ್ಷದ ಎರಡು ಅವಧಿಗಳನ್ನು
-
8:37 - 8:40ಒಂಬತ್ತು ತಿಂಗಳುಗಳ ಗರ್ಭಾವಸ್ಥೆ ಅನುಕರಣೆ ಮಾಡುವಂತೆ ಅವರು ತಮ್ಮ ನೈಸರ್ಗಿಕ ತಾಯಿಯ ಗರ್ಭದಲ್ಲಿ
-
8:40 - 8:42ಇರುವಂಥ ಅನುಭವ ಮೂಡಿಸಲು ಉದ್ದೇಶಪೂರ್ವಕವಾಗಿ ಆಯ್ಕೆಮಾಡುತ್ತಾರೆ,
-
8:42 - 8:45ಈಗ ಅವರು ರೂಪಕವಾಗಿ ತಮ್ಮ ತಾಯಿಯ ಗರ್ಭದಲ್ಲಿದ್ದಾರೆ.
-
8:45 - 8:46ಈ ಸಂಪೂರ್ಣ ಸಮಯ
-
8:47 - 8:50ಅವರು ತಮ್ಮ ನಾಗರೀಕತೆಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವಂತೆ ಮಾಡಲಾಗುವುದು,
-
8:50 - 8:52ಈ ಮೌಲ್ಯಗಳು ಅವರ ಪ್ರಾರ್ಥನೆಗಳನ್ನು ಅನುಮೋದಿಸುತ್ತವೆ.
-
8:52 - 8:55ಹಾಗೂ ಅವರ ಪ್ರಾರ್ಥನೆಗಳು ಮಾತ್ರ ಬ್ರಹ್ಮಾಂಡದ -
-
8:55 - 8:57ಅಥವಾ ನಾವಿದನ್ನು ಜೈವಿಕ ಪರಿಸರ ಎನ್ನಬಹುದು – ಇವು ಸಮತೋಲನ ಮಾಡುತ್ತವೆ.
-
8:58 - 8:59ಈ ವಿಸ್ಮಯಕಾರಿ ದೀಕ್ಷೆಯ ಕೊನೆಯಲ್ಲಿ
-
8:59 - 9:01ಒಂದು ದಿನ ಹಠಾತ್ತಾಗಿ ಅವರನ್ನು ಹೊರತರಲಾಗುತ್ತದೆ
-
9:01 - 9:04ಹಾಗೂ ಅವರ 18 ವರ್ಷಗಳಲ್ಲಿ ಜೀವನದಲ್ಲಿ ಪ್ರಥಮ ಬಾರಿಗೆ
-
9:04 - 9:08ಸೂರ್ಯೋದಯ ನೋಡುತ್ತಾರೆ. ಆ ಸ್ಫುಟವಾದ ಅರಿವಿನ ಕ್ಷಣದಲ್ಲಿ
-
9:08 - 9:11ಆ ಇಳುಕಲು ಪ್ರದೇಶಗಳು ಸೂರ್ಯನ ಕಿರಣಗಳಿಂದ ಮೀಯುವಾಗ
-
9:11 - 9:12ಆ ಮೈಮರೆಸುವಂಥ ಸುಂದರ ಭೂದೃಶ್ಯ,
-
9:13 - 9:15ಅವರು ಅಮೂರ್ತ ಸ್ಥಿತಿಯಲ್ಲಿ ಕಲಿತಿರುವ ಎಲ್ಲವೂ ಹಠಾತ್ತಾಗಿ
-
9:15 - 9:18ಈ ವಿಸ್ಮಯಕಾರಿ ಸ್ಥಿತಿಯಲ್ಲಿ ಸತ್ಯವೆನಿಸುತ್ತದೆ. ಹಾಗೂ ಪುರೋಹಿತ ಒಂದು ಹೆಜ್ಜೆ
-
9:18 - 9:20ಹಿಮ್ಮೆಟ್ಟಿ ಹೇಳುತ್ತಾನೆ, “ನೀವು ನೋಡಿ? ಅದು ಸತ್ಯವಾಗಿಯೂ ನಾನು ಹೇಳಿರುವಂತೆ ಇದೆ.
-
9:20 - 9:23ಅದು ಅಷ್ಟೊಂದು ಸುಂದರವಾಗಿದೆ. ಅದು ನಿಮ್ಮದು, ನೀವು ರಕ್ಷಿಸಬೇಕಾದ್ದು.”
-
9:23 - 9:25ಅವರು ತಮ್ಮನ್ನು ಹಿರಿಯ ಸಹೋದರರೆಂದು ಕರೆದುಕೊಳ್ಳುತ್ತಾರೆ
-
9:25 - 9:28ಹಾಗೂ ಅವರು ಹೇಳುತ್ತಾರೆ, ನಾವು ಕಿರಿಯ ಸಹೋದರರೆಂದು
-
9:28 - 9:31ಹಾಗೂ ಈ ಪ್ರಪಂಚದ ನಾಶಕ್ಕೆ ನಾವು ಕಾರಣವೆನ್ನುತ್ತಾರೆ.
-
9:32 - 9:34ಈಗ, ಈ ಮಟ್ಟದ ಒಳ ಅರಿವು ಬಹಳ ಮುಖ್ಯವಾಗುತ್ತದೆ.
-
9:34 - 9:36ನಾವು ಯಾವಾಗ ಸ್ಥಳೀಯ ಜನ ಮತ್ತು ಭೂ ಪ್ರದೇಶದ ಬಗ್ಗೆ ಆಲೋಚಿಸಿದಾಗಲೂ
-
9:36 - 9:38ರೊಸ್ಸೂಗೆ ಮೊರೆಯಿಡುತ್ತೇವೆ ಅಥವಾ
-
9:38 - 9:41ಸುಳ್ಳುಸುದ್ದಿ ಹಬ್ಬಿಸುವ ಶ್ರೇಷ್ಠ ಅನಾಗರಿಕತೆ
-
9:41 - 9:43ಸರಳವಾಗಿ ಹೇಳುವುದಾದರೆ ಅದೊಂದು ಜನಾಂಗೀಯ ಕಲ್ಪನೆ
-
9:43 - 9:46ಅಥವಾ ಪರ್ಯಾಯವಾಗಿ, ನಾವು ಥೋರೂಗೆ ಮೊರೆಯಿಟ್ಟರೆ
-
9:46 - 9:48ಈ ಜನರು ಹೇಳುತ್ತಾರೆ, ತಾವು ನಮಗಿಂತ ಭೂಮಿಗೆ ಹತ್ತಿರವಾಗಿದ್ದೇವೆಂದು.
-
9:48 - 9:50ಸ್ಥಳೀಯ ಜನರು ಭಾವನಾವಶರೂ ಅಲ್ಲ
-
9:50 - 9:52ಅಥವಾ ಹಂಬಲದ ನೆನಪುಗಳಿಂದ ದುರ್ಬಲರೂ ಅಲ್ಲ.
-
9:52 - 9:54ಅಸ್ಮತ್ನ ಮಲೇರಿಯಾ ಪೀಡಿತ ಜವುಗುನೆಲಕ್ಕೆ
-
9:54 - 9:56ಹೆಚ್ಚು ಅವಕಾಶವಿಲ್ಲ, ಅಥವಾ ಕೊರೆಯುವ ಟಿಬೆಟ್ನ ಚಳಿಗಾಳಿಯಲ್ಲೂ
-
9:56 - 9:59ಸಹ ಅವರು, ಕಾಲ ಮತ್ತು ಪ್ರಾರ್ಥನಾವಿಧಿಗಳ ಮೂಲಕ,
-
9:59 - 10:03ಒಂದು ಸಾಂಪ್ರದಾಯಿಕ ಸಂಕೇತ ಗರ್ಭಿತ ಭೂಮಿಯ ಪ್ರತಿಯನ್ನು ಮಾಡಿದರು
-
10:03 - 10:06ಆತ್ಮ ಪ್ರಜ್ಞೆಯಿಂದ ಹುಟ್ಟಿದ ಕಲ್ಪನೆಯಿಂದ
-
10:06 - 10:08ಆದರೆ ಇನ್ನೂ ಹೆಚ್ಚಿನ ಮಾರ್ಮಿಕ ಅಂತರ್ದೃಷ್ಟಿಯಿಂದ:
-
10:08 - 10:11ಭೂಮಿಯು ಮಾತ್ರ ಅಸ್ತಿತ್ವದಲ್ಲಿರಬಹುದೆಂಬ ಕಲ್ಪನೆಯಿಂದ
-
10:12 - 10:14ಏಕೆಂದರೆ ಅದಕ್ಕೆ ಉಸಿರು ಮಾನವನ ಪ್ರಜ್ಞೆ.
-
10:14 - 10:16ಈಗ, ಇದರ ಅರ್ಥವೇನು?
-
10:16 - 10:18ಇದರ ಅರ್ಥ ಆಂಡೀಸ್ನ ಒಂದು ಚಿಕ್ಕ ಮಗು
-
10:18 - 10:20ಅಪುವಿನ ಪರ್ವತ ಒಂದು ಚೈತನ್ಯ ಎಂದು ನಂಬುವಂತೆ ಬೆಳೆಸಲಾಗಿದೆ
-
10:20 - 10:22ಅದು ಅವನ ಅಥವಾ ಅವಳ ಭವಿಷ್ಯವನ್ನು ನಿರ್ದೇಶಿಸುತ್ತದೆ ಎಂದು ನಂಬಿಕೆಯಲ್ಲಿ ಬೆಳೆಸಿದರೆ
-
10:22 - 10:25ಗಾಢವಾಗಿ ಒಬ್ಬ ಬೆರೆಯದೇ ಆದ ವ್ಯಕ್ತಿಯಾಗುತ್ತಾರೆ
-
10:25 - 10:28ಮತ್ತು ಆ ಸ್ಥಳ ಅಥವಾ ಮೂಲದೊಂದಿಗೆ ಬೇರೆಯೇ ಸಂಬಂಧ ಹೊಂದಿರುತ್ತಾರೆ
-
10:28 - 10:30ಮೊಂಟಾನದ ಇತರ ಮಕ್ಕಳಂತೆ
-
10:30 - 10:33ಪರ್ವತವೆಂದರೆ ಒಡೆದು ಪುಡಿ ಮಾಡಬಹುದಾದ ಒಂದು ಕಲ್ಲಿನ ರಾಶಿ
-
10:33 - 10:34ಎಂಬ ನಂಬಿಕೆಯ ಮೇಲೆ ಬೆಳೆದಂತಲ್ಲ.
-
10:34 - 10:38ಅದು ಒಂದು ಚೈತನ್ಯದ ವಾಸಸ್ಥಾನವೋ ಅಥವಾ ಕಲ್ಲಿನ ರಾಶಿಯೋ ಎಂಬುದು ಮುಖ್ಯವಲ್ಲ.
-
10:38 - 10:41ಆಸಕ್ತಿದಾಯಕ ವಿಷಯವೆಂದರೆ ಒಬ್ಬ ವ್ಯಕ್ತಿ ಮತ್ತು ನೈಸರ್ಗಿಕ ಪ್ರಪಂಚದ
-
10:41 - 10:43ನಡುವೆ ಇರುವ ಸಂಬಂಧವನ್ನು ನಿರೂಪಿಸುವ ರೂಪಕಾಲಂಕಾರ
-
10:43 - 10:45ನಾನು ಬ್ರಿಟಿಶ್ ಕೊಲಂಬಿಯಾದ ಕಾಡುಗಳಲ್ಲಿ ಬೆಳೆದೆ
-
10:45 - 10:47ಆ ಕಾಡುಗಳು ಕತ್ತರಿಸಲಿಕ್ಕಾಗಿಯೇ ಇವೆ ಎಂಬ ನಂಬಿಕೆಯ ಮೇಲೆ.
-
10:47 - 10:49ಅದು ನನ್ನನ್ನು ವಿಭಿನ್ನ ವ್ಯಕ್ತಿಯಾಗಿ ಮಾಡಿತು
-
10:49 - 10:51ಕ್ವಾಗಿಲುತ್ ನನ್ನ ಸ್ನೇಹಿತರಿಗಿಂತ ಭಿನ್ನ
-
10:51 - 10:53ಅವರಿಗೆ ಆ ಕಾಡುಗಳು ಹುಕ್ಸಹುಕ್ನ ವಾಸಸ್ಥಾನ ಮತ್ತು
-
10:53 - 10:54ಸ್ವರ್ಗದ ಸೊಟ್ಟಾದ ಕೊಕ್ಕು ಎಂದು ನಂಬಿದ್ದರು
-
10:54 - 10:57ಮತ್ತು ಪ್ರಪಂಚದ ಉತ್ತರ ದಿಕ್ಕಿನ ಕೊನೆಯಲ್ಲಿ ವಾಸಮಾಡುವ ನರಭಕ್ಷಕ ಶಕ್ತಿಗಳು,
-
10:57 - 11:01ಇಂಥ ಶಕ್ತಿಗಳನ್ನು ಅವರ ಹಮತ್ಸಾ ದೀಕ್ಷೆ ಸಮಯದಲ್ಲಿ ಅವುಗಳನ್ನು ಎದುರಿಸಬೇಕಂತೆ.
-
11:01 - 11:03ಈಗ, ನೀವು ಈ ಕಲ್ಪನೆಗಳ ಬಗ್ಗೆ ಯೋಚಿಸಿದರೆ,
-
11:03 - 11:05ಈ ಸಂಸ್ಕೃತಿಗಳು ವಿಭಿನ್ನ ವಾಸ್ತವಗಳನ್ನು ಸೃಷ್ಟಿಸಬಹುದು,
-
11:05 - 11:06ಅವರ ಕೆಲವು ಅಸಾಧಾರಣ ಶೋಧನೆಗಳನ್ನು
-
11:06 - 11:11ಅರ್ಥಮಾಡಿಕೊಳ್ಳಲು ನೀವು ಪ್ರಾರಂಭಿಸಬಹುದು. ಈ ಗಿಡವನ್ನು ತೆಗೆದುಕೊಳ್ಳಿ.
-
11:11 - 11:13ಈ ಚಿತ್ರವನ್ನು ನಾನು ಕಳೆದ ಏಪ್ರಿಲ್ ನಲ್ಲಿ ಉತ್ತರ-ಪಶ್ಚಿಮ ಅಮೆಜಾನಿನಲ್ಲಿ ತೆಗೆದೆ.
-
11:13 - 11:16ಇದು ಅಯಾಹೌಸ್ಕಾ, ನಿಮ್ಮಲ್ಲಿ ಬಹಳ ಜನರಿಗೆ ತಿಳಿದಿರಬಹುದು,
-
11:16 - 11:19ಇದು ಶಮನ್ ಭಂಡಾರದಲ್ಲಿರುವ ಅತ್ಯಂತ ಶಕ್ತಿಶಾಲಿ
-
11:19 - 11:21ಸೈಕೊಆಕ್ಟೀವ್ ತಯಾರಿಕೆ.
-
11:21 - 11:23ಅಯಾಹೌಸ್ಕಾ ಅತ್ಯಾಕರ್ಷಕವಾಗಲು ಏನು ಕಾರಣವೆಂದರೆ
-
11:23 - 11:27ಈ ತಯಾರಿಕೆಯಲ್ಲಿರುವ ಕೇವಲ ಔಷಧಗಳ ಸಾಮರ್ಥ್ಯವಲ್ಲ,
-
11:27 - 11:31ಆದರೆ ಅವುಗಳ ವಿಸ್ತಾರ. ಅದನ್ನು ವಾಸ್ತವಿಕವಾಗಿ ಎರಡು ಮೂಲಗಳಿಂದ ತಯಾರಿಸಲಾಗಿದೆ.
-
11:31 - 11:33ಒಂದು ಕಡೆ ಇದರಲ್ಲಿ ವುಡಿ ಲಿಯಾನಾ ಇದೆ,
-
11:33 - 11:35ಇದರಲ್ಲಿ ಬೀಟಾ-ಕಾರ್ಬೊಲೈನುಗಳ ಸರಣಿಯೇ ಇದೆ,
-
11:35 - 11:38ಹಾರ್ಮೈನ್, ಹಾರ್ಮೊಲೈನ್, ಸ್ವಲ್ಪ ಭ್ರಮೆ ಹುಟ್ಟಿಸುವಂತಹುದು.
-
11:38 - 11:40ಕೇವಲ ವೈನ್ ಸೇವಿಸುವುದು
-
11:40 - 11:42ನಿಮ್ಮ ಪ್ರಜ್ಞೆಯ ಮೂಲಕ ಹಾದುಹೋಗುವ
-
11:42 - 11:44ಒಂದು ನೀಲಿ ಬಣ್ಣದ ಅಸ್ಪಷ್ಟ ಧೂಮ,
-
11:44 - 11:47ಆದರೆ, ಕಾಫಿ ಕುಟುಂಬದ ಸೈಕೋಟ್ರಿಯಾ ವಿರಿಡಿಸ್ ಎಂಬ ಕುರುಚಲು ಗಿಡದ
-
11:47 - 11:49ಎಲೆಗಳೊಂದಿಗೆ ಬೆರೆಸಿದೆ.
-
11:49 - 11:52ಈ ಗಿಡದಲ್ಲಿ ಕೆಲವು ಶಕ್ತಿಯುತವಾದ ಟ್ರಿಪ್ಟಾಮೈನ್ ಗಳು ಇವೆ,
-
11:52 - 11:56ಬ್ರೈನ್ ಸೆರೋಟೋನಿನ್ ಗೆ ಅತಿ ಹತ್ತಿರ, ಡೈ ಮೀಥೈಲ್ ಟ್ರಿಪ್ಟಾಮೈನ್ -
-
11:56 - 11:575-ಮೆಥಾಕ್ಸಿಡೈಮೀಥೈಲ್ ಟ್ರಿಪ್ಟಾಮೈನ್.
-
11:57 - 11:59ನೀವು ತಮ್ಮ ಮೂಗಿಗೆ ನಶ್ಯ ಏರಿಸುತ್ತಿರುವ
-
11:59 - 12:01ಯನೊಮಾಮಿಯನ್ನು ಯಾವಾಗಲಾದರೂ ನೋಡಿದ್ದೀರ,
-
12:01 - 12:04ಅದನ್ನು ವಿಭಿನ್ನ ತಳಿಗಳಿಂದ ಮಾಡುತ್ತಾರೆ
-
12:04 - 12:08ಅದರಲ್ಲಿ ಮೆಥಾಕ್ಸಿಡೈಮೀಥೈಲ್ ಟ್ರಿಪ್ಟಾಮೈನ್ ಕೂಡ ಇರುತ್ತದೆ.
-
12:08 - 12:10ಆ ಪುಡಿಯನ್ನು ಮೂಗಿಗೇರಿಸುವುದೆಂದರೆ
-
12:10 - 12:14ಬಂದೂಕಿನ ಗುಂಡು ಹೊಡೆದುಕೊಂಡಂತೆಯೇ,
-
12:14 - 12:21ಬೊರೊಕ್ಯು ಪೈಂಟಿಂಗ್ಗಳನ್ನು ಸವರಿಕೊಂಡು ವಿದ್ಯುಚ್ಚಕ್ತಿಯ ಸಾಗರದಲ್ಲಿ ಬಿದ್ದಂತೆ. (ನಗು)
-
12:21 - 12:23ಅದು ವಾಸ್ತವಿಕತೆಯನ್ನು ವಿರೂಪಗೊಳಿಸುವುದಿಲ್ಲ;
-
12:23 - 12:24ಅದು ವಾಸ್ತವಿಕತೆಯನ್ನು ಕರಗಿಸುತ್ತದೆ.
-
12:24 - 12:27ಹೇಳಬೇಕೆಂದರೆ, ನನ್ನ ಪ್ರೊಫೆಸರ್ ರಿಚರ್ಡ್ ಇವಾನ್ ಶುಲ್ಟ್ಸ್ ಜೊತೆ ನಾನು ವಾದಿಸುತ್ತಿದ್ದೆ --
-
12:27 - 12:29ಈ ವ್ಯಕ್ತಿ ವಿಸ್ಮಯಕಾರಿ ನಾಯಿಕೊಡೆ ಕಂಡುಹಿಡಿಯುವುದರೊಂದಿಗೆ
-
12:29 - 12:311930ರಲ್ಲಿ ಮೆಕ್ಸಿಕೋದಲ್ಲಿ
-
12:31 - 12:33ಸೈಕೆಡೆಲಿಕ್ ಯುಗದ ಕಿಡಿ ಹೊತ್ತಿಸಿದರು.
-
12:33 - 12:35ಈ ಟ್ರಿಪ್ಟಾಮೈನುಗಳನ್ನು ಭ್ರಮೆ ಹುಟ್ಟಿಸುವ ವಸ್ತುಗಳು ಎಂದು ವಿಭಾಗ
-
12:35 - 12:38ಮಾಡಲಾಗುವುದಿಲ್ಲವೆಂದು ನಾನು ವಾದಿಸುತ್ತಿದ್ದೆ, ಏಕೆಂದರೆ ನೀವು ಅದರ ಪ್ರಭಾವಕ್ಕೆ
-
12:38 - 12:42ಒಳಗಾಗುವ ಹೊತ್ತಿಗೆ ಅದನ್ನು ಅನುಭವಿಸಲು ಮನೆಯಲ್ಲಿ ಯಾರೂ ಇರುವುದಿಲ್ಲ.(ನಗು)
-
12:42 - 12:45ಆದರೆ, ಟ್ರಿಪ್ಟಾಮೈನುಗಳ ಲಕ್ಷಣವೆಂದರೆ ಅವನ್ನು ಬಾಯಿಯ ಮೂಲಕ ಸೇವಿಸಲಾಗದು
-
12:45 - 12:47ಏಕೆಂದರೆ, ಒಂದು ಕಿಣ್ವ ಉಪಯೋಗಿಸಿ ಅದರ ಸ್ವಭಾವ ಬದಲಾವಣೆ ಮಾಡಲಾಗಿರುತ್ತದೆ,
-
12:47 - 12:50ಈ ಕಿಣ್ವ ನೈಸರ್ಗಿಕವಾಗಿ ಮಾನೋಮೈನ್ ಆಕ್ಸಿಡೇಸ್ ಎಂದು ಕರೆಯುವ ವಸ್ತು ಮನುಷ್ಯರ ಕರುಳಿನಲ್ಲಿರುತ್ತದೆ.
-
12:50 - 12:53MAOದ ಸ್ವಭಾವವನ್ನು ಬದಲಾಯಿಸುವ ಬೇರೊಂದು ರಾಸಾಯನಿಕ ವಸ್ತುವಿನ ಜೊತೆಯಲ್ಲಿ
-
12:53 - 12:56ಇದನ್ನು ಬಾಯಿಯ ಮೂಲಕ ಸೇವಿಸಬಹುದು.
-
12:56 - 12:57ಈಗ, ವಿಸ್ಮಯಕಾರಿ ಅಂಶಗಳೆಂದರೆ
-
12:57 - 13:01ಲಿಯಾನಾದಲ್ಲಿ ದೊರೆಯುವ ಬೀಟಾ-ಕಾರ್ಬೊಲೈನ್ಗಳು
-
13:01 - 13:04ನಿರ್ದಿಷ್ಟ ವಿಧದ ಟ್ರಿಪ್ಟಾಮೈನ್ ನ್ನು ಶಕ್ತಿಯುತಗೊಳಿಸಲು
-
13:05 - 13:08ಅಗತ್ಯವಿರುವ MAO ಅವರೋಧಕಗಳು. ಈಗ, ನೀವು ನಿಮ್ಮಲ್ಲೇ ಒಂದು ಪ್ರಶ್ನೆ ಮಾಡಿ.
-
13:08 - 13:1280:00 ವಿಧದ ದಟ್ಟವಾದ ಸಸ್ಯವರ್ಗದಲ್ಲಿ
-
13:12 - 13:16ಸಸ್ಯ ಸ್ವರೂಪದ ಸಂಬಂಧವಿಲ್ಲದ ಈ ಎರಡು ಗಿಡಗಳನ್ನು ಈ ಜನ
-
13:16 - 13:17ಈ ಒಂದು ನಿರ್ದಿಷ್ಟ ರೀತಿಯಲ್ಲಿ ಬೆರೆಸಿದರೆ
-
13:17 - 13:19ಒಂದು ರೀತಿಯ ಜೈವರಾಸಾಯನಿಕ ವಿಧ ಉತ್ಪತ್ತಿಯಾಗುವುದು ಎಂಬುದನ್ನು ಹೇಗೆ ಕಂಡುಹಿಡಿದರು,
-
13:19 - 13:21ಪ್ರತ್ಯೇಕ ಭಾಗಗಳ ಮೊತ್ತಕ್ಕಿಂತ ಸಂಪೂರ್ಣ ವಸ್ತುವಿನ ಮೊತ್ತ ಹೆಚ್ಚೆ?
-
13:21 - 13:24ಇದಕ್ಕೆ, ಅರ್ಥಹೀನವೆಂದು ನಿರ್ಧಾರವಾಗಿರುವ ಸೌಮ್ಯೋಕ್ತಿ
-
13:24 - 13:25ತಪ್ಪು-ಒಪ್ಪು ವಿಧಾನ ಉಪಯೋಗಿಸುತ್ತೇವೆ.
-
13:26 - 13:29ಆದರೆ, ನೀವು ಭಾರತೀಯರನ್ನು ಕೇಳಿ, ಅವರು ಹೇಳುತ್ತಾರೆ, "ಸಸ್ಯಗಳು ನಮ್ಮೊಂದಿಗೆ ಮಾತಾಡುತ್ತವೆ."
-
13:29 - 13:30ಹಾಗಾದರೆ, ಇದರ ಅರ್ಥವೇನು?
-
13:30 - 13:34ಈ ಜನಾಂಗ, ಕೋಫನ್, 17 ವಿಧದ ಅಯಾಹೌಸ್ಕಾ ಹೊಂದಿದ್ದಾರೆ
-
13:34 - 13:37ಇವೆಲ್ಲವನ್ನೂ ಅವರು ಕಾಡಿನಲ್ಲಿ ಸಾಕಷ್ಟು ದೂರದಿಂದಲೇ ಗುರುತಿಸುತ್ತಾರೆ,
-
13:38 - 13:42ಎಲ್ಲವೂ ನಮ್ಮ ಕಣ್ಣಿಗೆ ಒಂದೇ ತರಹ ಕಾಣುತ್ತವೆ.
-
13:42 - 13:44ಹಾಗೂ ಅವರು ಸಸ್ಯಗಳ ವರ್ಗೀಕರಣ ಯಾವ ರೀತಿ ಮಾಡುತ್ತೀರೆಂದು ಕೇಳಿದರೆ
-
13:44 - 13:47ಅವರು ಹೇಳುತ್ತಾರೆ, "ನಿಮಗೆ ಸಸ್ಯಗಳ ಬಗ್ಗೆ ಸ್ವಲ್ಪ ತಿಳಿದಿದೆಯೆಂದು ನಾನಂದುಕೊಂಡಿದ್ದೆ, ಅಂದರೆ
-
13:47 - 13:49ನಿಮಗೇನೂ ಗೊತ್ತಿಲ್ಲವೆ?" ನಾನು ಹೇಳಿದೆ "ಇಲ್ಲ."
-
13:49 - 13:52ಈ 17 ವಿಧದ ಪ್ರತಿ ಸಸ್ಯವನ್ನೂ ಒಂದು ಹುಣ್ಣಿಮೆಯ ರಾತ್ರಿ ತೆಗೆದುಕೊಂಡರೆ
-
13:52 - 13:55ಒಂದೊಂದು ಬೇರೆ ಬೇರೆ ರಾಗದಲ್ಲಿ ಹಾಡುತ್ತವೆ.
-
13:55 - 13:57ಈಗ, ಇದು ನಿಮಗೆ ಹಾರ್ವರ್ಡಲ್ಲಿ ಒಂದು Ph.D. ತಂದುಕೊಡುವುದಿಲ್ಲ,
-
13:57 - 14:01ಆದರೆ, ಇದು ಪುಷ್ಪ ಕೇಸರಗಳನ್ನು ಎಣಿಸುವುದಕ್ಕಿಂತ ಆಸಕ್ತಿದಾಯಕವಾಗಿರುತ್ತದೆ.
-
14:01 - 14:02ಈಗ,
-
14:02 - 14:05(ಚಪ್ಪಾಳೆ)
-
14:05 - 14:07ಈಗಿರುವ ಸಮಸ್ಯೆಯೆಂದರೆ-ಸ್ಥಳೀಯ ಜನರ ಪರಿಸ್ಥಿತಿಯ ಬಗ್ಗೆ
-
14:07 - 14:09ಅನುಕಂಪ ಇರುವ ನಾವು ಕೂಡ ಅವರನ್ನು
-
14:09 - 14:10ವಿಲಕ್ಷಣ ಮತ್ತು ರಂಗುರಂಗಾದವೆರೆಂದು
-
14:10 - 14:12ನೋಡುತ್ತೇವೆ. ಆದರೆ ಅದೇಕೊ ಅವರು ವಾಸ್ತವಿಕ ಪ್ರಪಂಚದ, ಅಂದರೆ ನಾವಿರುವ
-
14:12 - 14:15ಪ್ರಪಂಚದ ಅಂಚಿಗೆ ತಳ್ಳಲ್ಪಟ್ಟಿದ್ದಾರೆ, ನಮ್ಮ ಪ್ರಪಂಚ ಮಾತ್ರ ಸಾಗುತ್ತಿದೆ.
-
14:15 - 14:17ಆದರೆ, ಸತ್ಯಸಂಗತಿಯೆಂದರೆ ಈ 20ನೆಯ ಶತಮಾನವನ್ನು, ಇಲ್ಲಿಂದ 300 ವರ್ಷಗಳ ನಂತರ,
-
14:17 - 14:20ಅದರ ಸಮಯದಲ್ಲಿ ನಡೆದ ಯುದ್ಧಗಳು
-
14:20 - 14:21ಮತ್ತು ವೈಜ್ಞಾನಿಕ ಅವಿಷ್ಕಾರಗಳಿಗಾಗಿ ಸ್ಮರಿಸುವುದಿಲ್ಲ,
-
14:21 - 14:23ಆದರೆ ಒಂದು ಯುಗ,
-
14:24 - 14:26ನಾವು ಜೊತೆಯಲ್ಲಿ ನಿಂತು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ
-
14:26 - 14:29ಸಾಮೂಹಿಕವಾಗಿ ಆದ ನಾಶವನ್ನು ಅಂಗೀಕರಿಸಿದ ಕಾಲ
-
14:29 - 14:32ಎಂದು ಸ್ಮರಿಸಲಾಗುತ್ತದೆ. ಈಗ ಸಮಸ್ಯೆ ಬದಲಾವಣೆಯದಲ್ಲ.
-
14:32 - 14:34ಎಲ್ಲ ಸಂಸ್ಕೃತಿಗಳೂ ಎಲ್ಲ ಸಮಯಗಳಲ್ಲೂ
-
14:34 - 14:37ಜೀವನದ ನಾಟ್ಯ ಮತ್ತು ಹೊಸ
-
14:37 - 14:38ಸಾಧ್ಯತೆಗಳಲ್ಲಿ ತೊಡಗಿಸಿಕೊಂಡಿವೆ.
-
14:39 - 14:41ಹಾಗೆಯೇ ಕೇವಲ ತಂತ್ರಜ್ಞಾನದ ಸಮಸ್ಯೆಯಲ್ಲ.
-
14:42 - 14:44ಸಿಯೋಕ್ಸ್ ಇಂಡಿಯನ್ನರು ಸಿಯೋಕ್ಸ್ ಆಗಿಯೇ ಉಳಿದರು
-
14:44 - 14:45ಅವರು ಬಿಲ್ಲು ಬಾಣಗಳನ್ನು ಉಪಯೋಗಿಸುವುದು ಬಿಟ್ಟರೂ ಕೂಡ
-
14:45 - 14:47ಒಬ್ಬ ಅಮೆರಿಕನ್ ಕುದುರೆ ಮತ್ತು ಗಾಡಿಯನ್ನು
-
14:47 - 14:49ಬಿಟ್ಟರೂ ಅಮೆರಿಕನ್ ಆಗಿರುವಂತೆ.
-
14:49 - 14:50ಈ ನರಕುಲ ಮಂಡಲದ ಏಕೀಕರಣಕ್ಕಿರುವ ಭಯ
-
14:50 - 14:54ಬದಲಾವಣೆ ಅಥವಾ ತಂತ್ರಜ್ಞಾನದ್ದಲ್ಲ. ಅದು ಅಧಿಕಾರ.
-
14:54 - 14:56ಅಧಿಕಾರ ಲಾಲಸೆಯ ಒರಟು ಮುಖ.
-
14:56 - 14:58ನೀವು ಯಾವಾಗ ಪ್ರಪಂಚದ ಕಡೆ ಕಣ್ಣು ಹಾಯಿಸಿ ನೋಡಿದರೂ
-
14:58 - 15:01ಈ ಸಂಸ್ಕೃತಿಗಳು ಅಳಿಸಿಹೋಗುವಂತಹವಾಗಿರಲಿಲ್ಲ ಎಂದು ನಿಮಗೆ ತಿಳಿಯುತ್ತದೆ.
-
15:01 - 15:03ಇವರೆಲ್ಲಾ ಕ್ರಿಯಾಶೀಲ ಜೀವಂತ ಜನರು,
-
15:03 - 15:06ಇವರು ಅಳವಡಿಸಿಕೊಳ್ಳಲಾಗದಂತಹ ಆದರೆ ಗುರುತಿಸಬಹುದಾದಂಥ
-
15:06 - 15:08ಶಕ್ತಿಗಳಿಂದ ಅಸ್ತಿತ್ವ ಕಳೆದುಕೊಂಡವರು
-
15:08 - 15:10ಅದು ಪೆನನ್ ಮಾತೃಭೂಮಿಯಲ್ಲಿನ
-
15:11 - 15:13ಘೋರವಾದ ಅರಣ್ಯನಾಶವಾಗಿರಬಹುದು
-
15:13 - 15:16ದಕ್ಷಿಣ ಪೂರ್ವ ಏಷಿಯಾದ ಸರಾವಕ್ನ ಅಲೆಮಾರಿ ಜನಾಂಗವಿರಬಹುದು --
-
15:16 - 15:20– ಒಂದು ಶತಮಾನದ ಹಿಂದೆ ಈ ಜನರು ಸ್ವತಂತ್ರವಾಗಿ ಕಾಡಿನಲ್ಲಿ ವಾಸಿಸುತ್ತಿದ್ದರು,
-
15:20 - 15:23ಹಾಗೂ ಈಗ ಎಲ್ಲರೂ ನದಿ ತೀರಗಳಲ್ಲಿ ದಾಸತ್ವ ಮತ್ತು
-
15:23 - 15:25ವೇಶ್ಯಾವಾಟಿಕೆಗೆ ಶರಣಾಗಿದ್ದಾರೆ,
-
15:25 - 15:29ಆ ನದಿಗಳು ಕೆಸರಿನಿಂದ ಕಲುಷಿತವಾಗರುವುದನ್ನು ನೀವು ನೋಡುತ್ತೀರಿ
-
15:29 - 15:31ಇವು ಅರ್ಧ ಬೋರ್ನಿಯೋವನ್ನು
-
15:31 - 15:32ದಕ್ಷಿಣ ಚೈನಾ ಸಮುದ್ರಕ್ಕೆ ಸಾಗಿಸುತ್ತಿವೆ,
-
15:32 - 15:34ಅಲ್ಲಿ ಜಪಾನೀ ಸಾಗಣೆದಾರರು ಅಂಚಿನಲ್ಲಿ ಬೆಳಕನ್ನು ಹೊತ್ತುಕೊಂಡು
-
15:34 - 15:38ತಮ್ಮ ದೋಣಿಗಳಿಗೆ ಕಾಡಿನ ಮರದ ದಿಮ್ಮಿಗಳನ್ನು ತುಂಬಿಕೊಳ್ಳಲು ಸಿದ್ಧರಾಗಿದ್ದಾರೆ.
-
15:38 - 15:39ಅಥವಾ, ಯಾನೊಮಾಮಿ ವಿಚಾರದಲ್ಲಿ,
-
15:39 - 15:41ಉತ್ಪತ್ತಿಯಾಗಿರುವ ರೋಗಕಾರಕಗಳು.
-
15:41 - 15:43ಚಿನ್ನದ ಅವಿಷ್ಕಾರದ ಸಮಯದಲ್ಲಿ.
-
15:43 - 15:45ಅಥವಾ, ಟಿಬೆಟಿನ ಪರ್ವತಗಳಿಗೆ ಹೋದರೆ,
-
15:45 - 15:47ಇಲ್ಲಿ ನಾನು ಈಚೆಗೆ ಸಾಕಷ್ಟು ಸಂಶೋಧನೆಗಳನ್ನು ನಡೆಸುತ್ತಿದ್ದೇನೆ,
-
15:48 - 15:51ನೀವು ರಾಜಕೀಯ ನಿಯಂತ್ರಣದ ಕ್ರೂರ ಮುಖಗಳನ್ನು ನೋಡುತ್ತೀರ.
-
15:51 - 15:53ನಿಮಗೆ ತಿಳಿದಿದೆ, ಜನಾಂಗನಾಶ, ದೈಹಿಕವಾಗಿ ಜನಗಳನ್ನು ನಾಶಮಾಡುವುದನ್ನು
-
15:53 - 15:55ಸಾರ್ವತ್ರಿಕವಾಗಿ ಖಂಡಿಸಲಾಗುತ್ತದೆ, ಆದರೆ ಜನಕುಲನಾಶ,
-
15:56 - 15:59ಜನಗಳ ಜೀವನರೀತಿಯ ಹತ್ಯೆಯನ್ನು ಖಂಡಿಸುವುದಿರಲಿ,
-
15:59 - 16:02ಸಾರ್ವತ್ರಿಕವಾಗಿ ಹಲವು ಸ್ತರಗಳಲ್ಲಿ,
-
16:02 - 16:04ಅಭಿವೃದ್ಧಿಯ ಕಾರ್ಯತಂತ್ರ ಎಂದು ಆಚರಿಸಲಾಗುತ್ತದೆ.
-
16:04 - 16:07ಹಾಗೆಯೇ ಅದರ ನೆಲಮಟ್ಟದಲ್ಲಿ ಸಂಚರಿಸದಿದ್ದರೆ
-
16:07 - 16:09ಟಿಬೆಟ್ನ ನೋವು ನೀವು ಅರ್ಥಮಾಡಿಕೊಳ್ಳಲಾಗದು.
-
16:09 - 16:13ಪಶ್ಚಿಮ ಚೈನಾದ ಚೆಂಗಡುಯಿಂದ ನಾನು ಒಮ್ಮೆ 6:00 ಮೈಲಿಗಳಷ್ಟು ಪ್ರಯಾಣಮಾಡಿದೆ
-
16:13 - 16:16ನೆಲ ಹಾದಿಯ ಮೂಲಕ ದಕ್ಷಿಣಪೂರ್ವ ಟಿಬೆಟ್ ಮೂಲಕ ಲ್ಹಾಸಾ ತಲುಪಿದೆ
-
16:16 - 16:20ಒಬ್ಬ ಚಿಕ್ಕವಯಸ್ಸಿನ ಸಹೋದ್ಯೋಗಿಯೊಂದಿಗೆ ಲ್ಹಾಸಾ ತಲುಪಿದ ನಂತರವೇ
-
16:20 - 16:23ನೀವು ಕೇಳಿಸಿಕೊಳ್ಳುವ ನನಗೆ ಅಂಕಿಅಂಶಗಳ ಹಿಂದಿರುವ
-
16:23 - 16:24ಸತ್ಯಾಂಶಗಳು ಗೋಚರವಾಯಿತು.
-
16:24 - 16:286:00 ಪವಿತ್ರ ಸ್ಮಾರಕಗಳು ನಾಶವಾಗಿ ಬರೀ ಧೂಳು ಮತ್ತು ಬೂದಿಯಾಗಿವೆ.
-
16:28 - 16:311.2 ದಶಲಕ್ಷ ಜನರು ಸೇನಾಪಡೆಗಳಿಂದ ಸಂಸ್ಕೃತಿ
-
16:31 - 16:32ಕ್ರಾಂತಿಯ ಸಮಯದಲ್ಲಿ ಕೊಲ್ಲಲ್ಪಟ್ಟರು.
-
16:33 - 16:35ಈ ನವಯುವಕನ ತಂದೆಯನ್ನು ಪಂಚೆನ್ ಲಾಮಾಗೆ ಸಮರ್ಪಿಸಲಾಗಿತ್ತು.
-
16:35 - 16:37ಅಂದರೆ ಅವನನ್ನು ತಕ್ಷಣ ಕೊಲ್ಲಲಾಯಿತು.
-
16:37 - 16:39ಚೈನಾ ದೇಶ ದಂಡೆತ್ತಿದಾಗ.
-
16:39 - 16:41ಇವನ ಅಂಕಲ್ ತನ್ನ ಗುರುವಿನೊಂದಿಗೆ ವಲಸೆಹೋಗುವವರ ಜೊತೆಯಲ್ಲಿ
-
16:41 - 16:44ನೇಪಾಳಕ್ಕೆ ಹೋದನು.
-
16:44 - 16:46ಅವನ ತಾಯಿಯನ್ನು ಶ್ರೀಮಂತಿಕೆ ಹೊಂದಿರುವ
-
16:46 - 16:48ಅಪರಾಧಕ್ಕಾಗಿ ಸೆರೆಯಲ್ಲಿರಿಸಲಾಯಿತು.
-
16:49 - 16:51ಅವನನ್ನು ಎರಡು ವರ್ಷದವನಿದ್ದಾಗ ಅವಳ ಸ್ಕರ್ಟಿನ ಅಡಿಯಲ್ಲಿ
-
16:51 - 16:53ಜೈಲಿನೊಳಕ್ಕೆ ಗುಟ್ಟಾಗಿ ಸಾಗಿಸಲಾಯಿತು
-
16:53 - 16:55ಏಕೆಂದರೆ ಅವನಿಲ್ಲದೆ ಅವಳಿಗೆ ಇರಲು ಸಾಧ್ಯವಾಗುತ್ತಿರಲಿಲ್ಲ.
-
16:55 - 16:57ಈ ಸಾಹಸ ಕೆಲಸ ಮಾಡಿದ ಅವನ ಸೋದರಿಯನ್ನು
-
16:57 - 16:58ಒಂದು ಶಿಕ್ಷಣ ಶಿಬಿರಕ್ಕೆ ಕಳಿಸಲಾಯಿತು.
-
16:58 - 17:00ಒಂದು ದಿನ ಅವಳಿಗರಿವಿಲ್ಲದೆ ಮಾವೊನ ತೋಳುಪಟ್ಟಿಯ
-
17:01 - 17:03ಮೇಲೆ ಕಾಲಿಟ್ಟಳು, ಈ ಉಲ್ಲಂಘನೆಗಾಗಿ
-
17:03 - 17:06ಅವಳಿಗೆ ಏಳು ವರ್ಷ ಕಠಿಣ ಶಿಕ್ಷೆ ವಿಧಿಸಲಾಯಿತು.
-
17:06 - 17:09ಟಿಬೆಟ್ನ ನೋವು ಸಹಿಸಲಸಾಧ್ಯ,
-
17:09 - 17:12ಆದರೆ ಅದರಿಂದ ಹೊರಬಂದಿರುವ ಜನರ ಚೈತನ್ಯ ಅಸಾಧಾರಣವಾದದ್ದು.
-
17:13 - 17:16ಅಂತ್ಯದಲ್ಲಿ, ವಾಸ್ತವವಾಗಿ ಅದೊಂದು ಆಯ್ಕೆ.
-
17:16 - 17:19ನಾವು ಒಂದು ವೈವಿಧ್ಯವಿಲ್ಲದ ಏಕವರ್ಣದ ಪ್ರಪಂಚದಲ್ಲಿರಬೇಕೋ
-
17:19 - 17:22ಅಥವಾ ಬಹುಬಣ್ಣದ ವಿಭಿನ್ನತೆಯಿಂದ ಕೂಡಿದ ವಿಶ್ವವನ್ನು ಅಪ್ಪಿಕೊಳ್ಳಬೇಕೋ?
-
17:22 - 17:25ಮಾರ್ಗರೇಟ್ ಮೀಡ್, ವಿಖ್ಯಾತ ಮಾನವಶಾಸ್ತ್ರಜ್ಞೆ, ತಾವು ಸಾಯುವ ಮೊದಲು ಹೀಗೆ ಹೇಳಿದ್ದಾರೆ,
-
17:25 - 17:28ಅವರ ಭಯವೆಂದರೆ ನಾವು ಈ ನಯವಾದ ಆಕಾರವಿಲ್ಲದ
-
17:28 - 17:30ಜಾತಿವಿಶಿಷ್ಟ ಪ್ರಪಂಚ ದೃಷ್ಟಿಹೊಂದಿದರೆ
-
17:30 - 17:35ನಾವು ಮಾನವನ ಆಲೋಚನೆ ಅಂತರದ ಸಂಕುಚಿತ ಭಾವನೆಗಳ
-
17:35 - 17:39ವಿನ್ಯಾಸಕ್ಕೆ ಇಳಿಯುವುದಲ್ಲದೆ,
-
17:39 - 17:40ಇತರ ಸಾಧ್ಯತೆಗಳು ಎಲ್ಲಿವೆ ಎಂಬುದನ್ನು ಮರೆತೆವಲ್ಲವೆ ಎಂದು ಒಂದು
-
17:40 - 17:43ದಿನ ನಮ್ಮಕನಸಿನಿಂದ ಎಚ್ಚೆತ್ತು ಅಂದುಕೊಳ್ಳುತ್ತೇವೆ.
-
17:44 - 17:47ಹಾಗೂ, ನಮ್ಮ ಸಂತತಿ ಸುಮಾರು 1,50:00 ವರ್ಷಗಳಿಂದ ಅಸ್ತಿತ್ವದಲ್ಲಿದೆಯೆಂಬುದನ್ನು
-
17:47 - 17:49ದೈನ್ಯದಿಂದ ನೆನಪಿಸಿಕೊಳ್ಳಬೇಕು.
-
17:49 - 17:52ನವ ಶಿಲಾಯುಗ -- ನಮಗೆ ಕೃಷಿಯನ್ನು ಕೊಟ್ಟಿತು
-
17:52 - 17:54ಆ ಸಮಯದಲ್ಲಿ ನಾವು ಬೀಜದ ಭಕ್ತಿಗೆ ಸೋತುಹೋದೆವು,
-
17:54 - 17:56ಶಮನ್ ಗೀತೆಗಳನ್ನು ಪದಚ್ಯುತಿಗೊಳಿಸಿ
-
17:56 - 17:57ಪೌರೋಹಿತ್ಯದ ಪಾಠವನ್ನು ಅಪ್ಪಿಕೊಂಡೆವು,
-
17:57 - 18:00ನಾವು ಪ್ರಧಾನ ಮಠಾಧಿಪತಿಗಳ ವೈಶಿಷ್ಟ್ಯತೆ ಬೆಳೆಸಿದೆವು --
-
18:00 - 18:02ಅದು ಕೇವಲ 10:00 ವರ್ಷಗಳ ಹಿಂದೆ.
-
18:02 - 18:04ಈ ನೂತನ ಕೈಗಾರಿಕಾ ಪ್ರಪಂಚ ನಮಗೆ ತಿಳಿದಂತೆ
-
18:04 - 18:06ಕೇವಲ 300 ವರ್ಷಗಳು ಹಳೆಯದು.
-
18:06 - 18:08ಈಗ, ಆ ಖಾಲಿ ಚರಿತ್ರೆ ನನಗೆ ಸೂಚಿಸುವುದಿಲ್ಲ
-
18:08 - 18:11ಮುಂಬರುವ ಶತಮಾನದಲ್ಲಿ ನಾವು ಎದುರಿಸಬಹುದಾದ
-
18:11 - 18:13ಎಲ್ಲ ಸವಾಲುಗಳಿಗೂ ಎಲ್ಲ ಉತ್ತರಗಳೂ ಇವೆಯೆಂದು.
-
18:13 - 18:15ಪ್ರಪಂಚದ ಈ ಅಸಂಖ್ಯಾತ ಸಂಸ್ಕೃತಿಗಳು
-
18:15 - 18:18ಮಾನವೀಯತೆಯ ಅರ್ಥ ಏನೆಂದು ಕೇಳಿದಾಗ
-
18:18 - 18:20ಅವು, 10:00 ವಿಭಿನ್ನ ದನಿಗಳಲ್ಲಿ ಉತ್ತರಿಸುತ್ತವೆ
-
18:20 - 18:26ಹಾಗೂ ಆ ಗೀತೆಯ ಒಳಗೆ ನಾವು ಸಾಧ್ಯತೆಯನ್ನು ಕಂಡುಕೊಳ್ಳುತ್ತೇವೆ
-
18:26 - 18:29ನಾವು ಏನು ಎಂದು: ಸಂಪೂರ್ಣವಾಗಿ ಜ್ಞಾನದಿಂದ ಕೂಡಿದ ಸಂತತಿ,
-
18:29 - 18:32ಎಲ್ಲ ಜನಗಳೂ ಮತ್ತು ಎಲ್ಲ ತೋಟಗಳು ವಿಕಾಸ ಹೊಂದಲು
-
18:32 - 18:38ದಾರಿ ಕಂಡುಕೊಳ್ಳುತ್ತವೆ . ಹಾಗೆಯೇ ಆಶಾವಾದದ ಉತ್ಕೃಷ್ಟ ಕ್ಷಣಗಳೂ ಇವೆ.
-
18:38 - 18:41ಈ ಫೋಟೊ ನಾನು ಬಾಫಿನ್ ದ್ವೀಪದ ಉತ್ತರ ತುದಿಯಲ್ಲಿ ತೆಗೆದದ್ದು
-
18:41 - 18:43ಕೆಲವು ಇನ್ಯೂಟ್ ಜನಗಳ ಜೊತೆ ಬೇಟೆಗೆ ಹೋದಾಗ,
-
18:44 - 18:47ಹಾಗೂ ಈ ಮನುಷ್ಯ, ಒಲಾಯುಕ್, ತನ್ನ ತಾತನ ಅದ್ಭುತವಾದ ಕಥೆಯನ್ನು ಹೇಳಿದ.
-
18:48 - 18:50ಕೆನಡಾದ ಸರ್ಕಾರ ಯಾವಾಗಲೂ ದಯಾಮಯಿಯಲ್ಲ
-
18:50 - 18:52ಇನ್ಯೂಟ್ ಜನರಿಗೆ, ಹಾಗೂ 1950ರ ದಶಕದಲ್ಲಿ
-
18:52 - 18:55ನಮ್ಮ ಸಾರ್ವಭೌಮತ್ವ ಸ್ಥಾಪಿಸಲು, ಅವರನ್ನು ವಸಾಹತುಗಳಲ್ಲಿರಲು ನಾವು ಒತ್ತಾಯಿಸಿದೆವು.
-
18:55 - 18:59ಈ ಮುದಿ ವ್ಯಕ್ತಿಯ ತಾತ ಹೋಗಲು ನಿರಾಕರಿಸಿದ.
-
18:59 - 19:03ಅವನ ಕುಟುಂಬ, ಅವನ ಜೀವಕ್ಕೆ ಅಪಾಯ ಬರಬಹುದೆಂದು, ಅವನ ಎಲ್ಲ ಆಯುಧಗಳನ್ನೂ ಕೊಂಡೊಯ್ದರು,
-
19:03 - 19:04ಅವನ ಎಲ್ಲ ಸಲಕರಣೆಗಳನ್ನೂ ಕೂಡ.
-
19:05 - 19:07ಈಗ, ನಿಮಗೆ ತಿಳಿದಿದೆ ಇನ್ಯೂಟ್ಗಳಿಗೆ ಛಳಿಯ ಭಯವಿಲ್ಲ;
-
19:07 - 19:08ಅವರು ಅದರ ಅವಕಾಶವನ್ನು ತೆಗೆದುಕೊಂಡರು.
-
19:08 - 19:11ಅವರ ವಾಹನದ ಹಾಸನ್ನು ಮೂಲತಃ ಮೀನಿನಿಂದ ಮಾಡಲಾಗಿತ್ತು
-
19:11 - 19:12ಜಿಂಕೆಯ ಚರ್ಮದಲ್ಲಿ ಸುತ್ತಿ.
-
19:12 - 19:17ಆದರೆ, ಈ ವ್ಯಕ್ತಿಯ ತಾತ ಉತ್ತರ ಧೃವದ ರಾತ್ರಿಯಿಂದ ವಿಚಲಿತನಾಗಲಿಲ್ಲ
-
19:17 - 19:19ಅಥವಾ ಹಿಮದ ಬಿರುಗಾಳಿಗೂ ಅಂಜಲಿಲ್ಲ.
-
19:19 - 19:22ಸುಮ್ಮನೆ ಹೊರಕ್ಕೆ ಹೊರಟ, ತನ್ನ ಸೀಲ್ ಚರ್ಮದ ಪ್ಯಾಂಟನ್ನು ಬಿಚ್ಚಿದ
-
19:23 - 19:26ತನ್ನ ಕೈಮೇಲೆ ಮಲವಿಸರ್ಜನೆ ಮಾಡಿಕೊಂಡ. ಈ ಮಲ ಮಂಜುಗಡ್ಡೆಯಾಗುತ್ತಿದ್ದಂತೆ
-
19:26 - 19:29ಅದನ್ನು ಒಂದು ಚೂಪಾದ ಕತ್ತಿಯ ಆಕಾರ ಮಾಡಿದ.
-
19:29 - 19:31ಈ ಮಲದ ಕತ್ತಿಯಮೇಲೆ ತನ್ನ ಎಂಜಲನ್ನು ಅದರ ಚೂಪಾದ ಭಾಗಕ್ಕೆ ಸವರಿದ
-
19:31 - 19:34ಹಾಗೂ ಅದು ಪೂರ್ತಿ ಗಟ್ಟಿಯಾದ ನಂತರ ಅದರಿಂದ ಒಂದು ನಾಯಿಯ ಕತ್ತು ಕತ್ತರಿಸಿದ.
-
19:34 - 19:37ನಾಯಿಯ ಚರ್ಮ ಸುಲಿದು ಒಂದು ಕವಚ ತಯಾರುಮಾಡಿದ
-
19:37 - 19:40ಅದರ ಎದೆಗೂಡಿನಿಂದ ಮಂಜುಗಡ್ಡೆಯ ಮೇಲೆ ಚಲಿಸುವ ಸಾಧನ ಮಾಡಿದ
-
19:41 - 19:42ಪಕ್ಕದಲ್ಲಿದ್ದ ಮತ್ತೊಂದು ನಾಯಿಯನ್ನು ಹೊತ್ತು
-
19:42 - 19:46ಮಂಜುಗಡ್ಡೆಗಳ ಮೇಲೆ ತಪ್ಪಿಸಿಕೊಂಡ, ಸೊಂಟದ ಬೆಲ್ಟಿನಲ್ಲಿ ಮಲದ ಕತ್ತಿಯಿಟ್ಟುಕೊಂಡು.
-
19:46 - 19:50ಏನೂ ಇಲ್ಲದೆ ಇರುವುದು ಹೇಗೆ ಎಂದುಕೊಳ್ಳುತ್ತೇವೆ. (ನಗು)
-
19:50 - 19:51ಇದು, ಹಲವು ವಿಧಗಳಲ್ಲಿ ಸಾಧ್ಯ.
-
19:51 - 19:53(ಚಪ್ಪಾಳೆ)
-
19:53 - 19:55ಇದು ಇನ್ಯೂಟ್ ಜನರಲ್ಲಿನ ಚೈತನ್ಯದ ಪ್ರತೀಕ
-
19:55 - 19:58ಹಾಗೂ ಪ್ರಪಂಚದ ಎಲ್ಲ ಮೂಲನಿವಾಸಿಗಳ ಶಕ್ತಿಯ ಪ್ರತೀಕ.
-
19:58 - 20:00ಏಪ್ರಿಲ್ 1999ರಲ್ಲಿ ಕೆನಡಾದ ಸರ್ಕಾರ
-
20:00 - 20:03ಇನ್ಯೂಟ್ನ ಪೂರ್ತಿ ನಿಯಂತ್ರಣ ಹಿಂದಿರುಗಿಸಿತು
-
20:03 - 20:06ಕ್ಯಾಲಿಫೋರ್ನಿಯಾ ಮತ್ತು ಟೆಕ್ಸಾಸ್ ಎರಡರ ಒಟ್ಟು ವಿಸ್ತಾರಕ್ಕಿಂತ ಇನ್ನೂ ಹೆಚ್ಚು ಭೂಮಿ.
-
20:06 - 20:08ಅದು ನಮ್ಮ ಹೊಸ ಮಾತೃಭೂಮಿ. ಅದನ್ನು ನುನಾವುಟ್ ಎನ್ನುತ್ತೇವೆ.
-
20:09 - 20:12ಅದೊಂದು ಸ್ವತಂತ್ರ ಆಡಳಿತ ಪ್ರದೇಶ. ಅವರು ಎಲ್ಲ ಖನಿಜ ಸಂಪತ್ತನ್ನೂ ನಿಯಂತ್ರಿಸುತ್ತಾರೆ.
-
20:12 - 20:14ಒಂದು ಆಶ್ಚರ್ಯಕರ ಉದಾಹರಣೆಯೆಂದರೆ ಒಂದು ದೇಶ
-
20:14 - 20:18ಹೇಗೆ ತನ್ನ ಜನತೆಯನ್ನು ಸಮೀಪಿಸಿ ಅವರಿಗೆ ಮತ್ತೆ ತಮ್ಮ ನೆಲೆಯನ್ನು ವಹಿಸಿಕೊಡುವುದು.
-
20:19 - 20:22ಅಂತ್ಯದಲ್ಲಿ, ನನಗನ್ನಿಸುತ್ತದೆ,
-
20:22 - 20:23ಪ್ರಯಾಣ ಬೆಳೆಸಿರುವ ನಮ್ಮೆಲ್ಲರ ಮಟ್ಟಿಗೆ
-
20:23 - 20:25ಈ ಗ್ರಹದ ಮೂಲೆಗಳಲ್ಲಿ ಸಂಚರಿಸಿದವರಿಗೆ
-
20:27 - 20:28ಅವುಗಳು ಬಹುದೂರವಲ್ಲ ಎಂದು ಅರಿವಾಗುತ್ತದೆ.
-
20:28 - 20:30ಅವೆಲ್ಲ ಯಾರೋ ಒಬ್ಬರ ಮಾತೃಭೂಮಿ.
-
20:30 - 20:32ಅವು ಮಾನವನ ಆಲೋಚನೆಯ ಶಾಖೆಗಳನ್ನು ಪ್ರತಿನಿಧಿಸುತ್ತವೆ.
-
20:32 - 20:36ಅದು ಕಾಲದ ಪ್ರಾರಂಭದಷ್ಟು ಹಳೆಯದು. ಮತ್ತೆ ನಾವೆಲ್ಲರೂ
-
20:36 - 20:39ಈ ಮಕ್ಕಳ ಕನಸುಗಳು, ನಮ್ಮ ಸ್ವಂತ ಮಕ್ಕಳ ಕನಸುಗಳಂತೆ,
-
20:39 - 20:42ನಗ್ನ ಭೂಗೋಳದ ಆಶಾವಾದದ ಭಾಗವಾಗುತ್ತೇವೆ.
-
20:42 - 20:46ಆದ್ದರಿಂದ, ನ್ಯಾಶನಲ್ ಜಿಯಾಗ್ರಾಫಿಕ್ನಲ್ಲಿ ನಾವೇನು ಮಾಡುತ್ತಿದ್ದೇವೆಂದರೆ
-
20:46 - 20:50ನಮ್ಮ ಪ್ರಕಾರ ರಾಜಕೀಯ ವ್ಯಕ್ತಿಗಳು
-
20:50 - 20:51ವಾದವಿವಾದವನ್ನು ಬಿಟ್ಟು ಏನನ್ನೂ ಸಾಧಿಸುವುದಿಲ್ಲ. --
-
20:51 - 20:53(ಚಪ್ಪಾಳೆ)
-
20:53 - 20:55ವಾದವಿವಾದ ಏನನ್ನೂ ಸಾಧಿಸುವುದಿಲ್ಲ ಎಂದು ನಮ್ಮ ಅನಿಸಿಕೆ,
-
20:55 - 20:58ಆದರೆ, ಕಥೆ ಹೇಳುವುದರಿಂದ ಪ್ರಪಂಚವನ್ನು ಬದಲಾಯಿಸಬಹುದು
-
20:58 - 21:01ಆದ್ದರಿಂದ ಕಥೆ ಹೇಳುವುದರಲ್ಲಿ ನಮ್ಮ ಸಂಸ್ಥೆ ಅತ್ಯುತ್ತಮ
-
21:01 - 21:04ಪ್ರಪಂಚದಲ್ಲಿಯೇ. ನಮ್ಮ ವೆಬ್ ಸೈಟ್ ತಿಂಗಳಿಗೆ 35 ದಶಲಕ್ಷ ಭೇಟಿಗಳನ್ನು ನೋಡುತ್ತದೆ.
-
21:04 - 21:07ನಮ್ಮ ಟೆಲಿವಿಶನ್ ಚಾನಲ್ ನ್ನು 156 ದೇಶಗಳು ಬಿತ್ತರಿಸುತ್ತವೆ.
-
21:08 - 21:10ಲಕ್ಷಾಂತರ ಜನ ನಮ್ಮ ಪತ್ರಿಕೆಯನ್ನು ಓದುತ್ತಾರೆ.
-
21:10 - 21:13ಮತ್ತು ನಾವು ಮಾಡುತ್ತಿರುವುದೇನೆಂದರೆ ಗಂಭೀರ ಪ್ರವಾಸಗಳು
-
21:13 - 21:15ನರಕುಲ ಮಂಡಲಕ್ಕೆ ನಮ್ಮ ವೀಕ್ಷಕರನ್ನು ಕರೆದೊಯ್ಯುತ್ತೇವೆ
-
21:15 - 21:17ಸಾಂಸ್ಕೃತಿಕ ವೈವಿಧ್ಯತೆಗಳ ತಾಣಕ್ಕೆ
-
21:18 - 21:20ತಾವು ನೋಡುವ ದೃಶ್ಯಗಳಿಂದ
-
21:20 - 21:22ಅವರು ವಿಸ್ಮಯರಾಗುತ್ತಾರೆ, ಹಾಗೂ ಆಶೆಯಿದೆ,
-
21:22 - 21:25ಒಬ್ಬರಾದ ಮೇಲೊಬ್ಬರು, ನಿಧಾನವಾಗಿ
-
21:25 - 21:27ಮಾನವಶಾಸ್ತ್ರದ ಕೇಂದ್ರ ಅಂತರ್ಜ್ಞಾನವನ್ನು ಅಪ್ಪಿಕೊಳ್ಳುತ್ತಾರೆ:
-
21:27 - 21:31ಈ ಪ್ರಪಂಚ ವಿಭಿನ್ನ ರೀತಿಯಲ್ಲಿ ಅಸ್ತಿತ್ವದಲ್ಲಿರಲು ಅರ್ಹವಾಗಿದೆ,
-
21:31 - 21:32ನಾವು ಇಲ್ಲಿ ವಾಸಿಸಲು ದಾರಿ ಹುಡುಕಿಕೊಳ್ಳುತ್ತೇವೆ
-
21:32 - 21:35ನೈಜವಾದ ಬಹುಸಂಸ್ಕೃತಿಯ ಬಹುತತ್ವ ಪ್ರಪಂಚದಲ್ಲಿ
-
21:35 - 21:37ಎಲ್ಲಾ ಜನರ ಎಲ್ಲಾ ವಿವೇಕ
-
21:37 - 21:40ನಮ್ಮೆಲ್ಲರ ಸಾಮುದಾಯಿಕ ಯೋಗಕ್ಷೇಮಕ್ಕೆ ನೆರವಾಗುತ್ತದೆ.
-
21:40 - 21:41ನಿಮಗೆ ಧನ್ಯವಾದಗಳು.
-
21:41 - 21:43(ಚಪ್ಪಾಳೆ)
- Title:
- ಅಳಿದುಹೋದ ಸಂಸ್ಕೃತಿಯ ಬಗ್ಗೆ ವೇಡ್ ಡೆವಿಸ್
- Speaker:
- Wade Davis
- Description:
-
ಅಚ್ಚರಿಯ ಫೋಟೊಗಳು ಮತ್ತು ಕಥನಗಳೊಂದಿಗೆ ನ್ಯಾಷನಲ್ ಜಿಯೋಗ್ರಾಫಿಕ್‌ನ ಸಾಹಸಿ ವೇಡ್ ಡೆವಿಸ್, ಆತಂಕಕಾರಿ ರೀತಿಯಲ್ಲಿ ಅಳಿದುಹೋಗುತ್ತಿರುವ ವಿಶ್ವದ ಮೂಲನಿವಾಸಿಗಳ ಸಂಸ್ಕೃತಿಗಳ ಅತಿವಿಶಿಷ್ಟ ವೈವಿಧ್ಯತೆಯನ್ನು ಮುಂದಿಟ್ಟಿದ್ದಾರೆ.
- Video Language:
- English
- Team:
- closed TED
- Project:
- TEDTalks
- Duration:
- 21:44