ನಿಮಗೆ ಗೊತ್ತಾ ಪ್ರಯಾಣದ ಒಂದು ಅತೀವ ಆನಂದ ಮತ್ತು
ಮಾನವ ಕುಲದ ಸಂಶೋಧನೆಯಲ್ಲಿ ದೊರಕುವ ಒಂದು ಹರ್ಷವೆಂದರೆ
ಯಾರು ತಮ್ಮ ಹಿಂದಿನ ರೀತಿಗಳನ್ನು ಮರೆತಿಲ್ಲವೊ
ಯಾರು ತಮ್ಮ ಹಿಂದಿನ ಬದುಕನ್ನು ಬೀಸುವ ಗಾಳಿಯಲ್ಲಿ ಅನುಭವಿಸುತ್ತಾರೊ,
ಮಳೆಯಿಂದ ಹಸನಾದ ಕಲ್ಲಿನ ಸ್ಪರ್ಶದಲ್ಲಿ ಕಾಣುತ್ತಾರೊ
ಗಿಡಗಳ ಕಹಿ ಎಲೆಗಳಲ್ಲಿ ಅದನ್ನು ಸವಿಯುತ್ತಾರೊ
ಅಂಥವರೊಂದಿಗೆ ಬದುಕುವ ಅವಕಾಶ ದೊರೆಯುವುದು.
ಜಾಗ್ವಾರ್ ಶಮನ್ ಗಳು ಈಗಲೂ ಆಕಾಶಗಂಗೆಯಾಚೆ ಸಂಚರಿಸುತ್ತಾರೆಂದು ತಿಳಿಯಲು
ಅಥವಾ ಇನ್ಯೂಟ್ ಹಿರಿಯರು ಇನ್ನೂ ದಂತಕಥೆಗಳಿಗೆ ಅರ್ಥ ಮಾರ್ದನಿಸುವುದು
ಅಥವಾ ಹಿಮಾಲಯದಲ್ಲಿ
ಬೌದ್ಧರು ಈಗಲೂ ಧರ್ಮದ ಉಸಿರನ್ನು ಬೆಂಬತ್ತಿರುವುದು
ಇವೆಲ್ಲ, ಮಾನವಶಾಸ್ತ್ರದ ಅಂತರ್ಜ್ಞಾನವನ್ನು ನೆನಪಿಸಿಕೊಳ್ಳುವುದು,
ಹಾಗೂ ಇದರ ಕೇಂದ್ರ ವಿಚಾರವೆಂದರೆ ನಾವು ಜೀವಿಸುತ್ತಿರುವ ಪ್ರಪಂಚ
ಯಾವುದೋ ಒಂದು ನಿರಂಕುಶ ಅಸ್ತಿತ್ವದಲ್ಲಿಲ್ಲ
ಆದರೆ ಅದು ಅಸ್ತಿತ್ವದ ಒಂದು ಮಾದರಿ ಮಾತ್ರ,
ಒಂದು ಗೊತ್ತಾದ ಹೊಂದಾಣಿಕೆ ಆಯ್ಕೆಗಳ ಕೂಟದ ಪರಿಣಾಮ
ಹಲವು ತಲೆಮಾರುಗಳ ಹಿಂದೆ ಅದು ಹೇಗೋ ಯಶಸ್ವಿಯಾಗಿ ನಮ್ಮ ಸಂತತಿ ತಲೆಯೆತ್ತಿತು.
ಮತ್ತು, ನಾವೆಲ್ಲಾ ಅದೇ ಹೊಂದಾಣಿಕೆ ವಿಧಾಯಕಗಳನ್ನು ಹಂಚಿಕೊಳ್ಳುತ್ತೇವೆ
ನಾವೆಲ್ಲ ಹುಟ್ಟಿದ್ದೇವೆ. ನಾವು ನಮ್ಮ ಮಕ್ಕಳನ್ನು ಪ್ರಪಂಚಕ್ಕೆ ತರುತ್ತೇವೆ.
ನಾವೆಲ್ಲ ದೀಕ್ಷಾ ವಿಧಿಗಳನ್ನು ಉಪಕ್ರಮಿಸುತ್ತೇವೆ.
ನಾವೆಲ್ಲ ಸಾವಿನಿಂದ ಸಂಭವಿಸುವ ಅಗಲಿಕೆಯ ನಿಷ್ಟುರತೆಯನ್ನು ಎದುರಿಸಬೇಕಾಗಿದೆ,
ಹಾಗಾಗಿ, ನಾವು ಹಾಡುವುದು, ಕುಣಿಯುವುದು ನಮಗೆ ಆಶ್ಚರ್ಯ ತರುವುದಿಲ್ಲ
ನಮ್ಮೆಲ್ಲರಲ್ಲಿ ಕಲೆ ಇದೆ.
ಆದರೆ, ಇಲ್ಲಿ ಆಸಕ್ತಿಕರ ಅಂಶವೆಂದರೆ ಗೀತೆಯ ಸ್ವರಗತಿಯ ವಿಶಿಷ್ಟತೆ,
ಪ್ರತೀ ಸಂಸ್ಕೃತಿಯಲ್ಲೂ ನಾಟ್ಯದ ಲಯ.
ಅದು ಬೋರ್ನಿಯೊ ಕಾಡುಗಳಲ್ಲಿನ ಪೆನನ್ ಆಗಿರಬಹುದು,
ಅಥವಾ ಹೈಟಿಯಲ್ಲಿ ಒಬ್ಬ ಊಡೂ ಅನುಚರನದ್ದಾಗಿರಬಹುದು
ಅಥವಾ ಉತ್ತರ ಕೇನ್ಯಾದ ಕೈಸೂಟ್ ಮರುಭೂಮಿಯಲ್ಲಿ ಯೋಧರ ನಡಿಗೆಯಾಗಿರಬಹುದು
ಯಾಂಡೇಸ್ ಪರ್ವತಗಳಲ್ಲಿನ ಕೊರಾಂಡರೋಸ್,
ಅಥವಾ ಸಹಾರ ಮರುಭೂಮಿಯ ಮಧ್ಯದಲ್ಲಿರುವ ತಂಗುದಾಣ.
ಪ್ರಾಸಂಗಿಕವಾಗಿ ಮರುಭೂಮಿಯಲ್ಲಿ ನನ್ನೊಂದಿಗೆ ಪ್ರಯಾಣ ಮಾಡಿದ ವ್ಯಕ್ತಿ
ಒಂದು ತಿಂಗಳ ಹಿಂದೆ,
ಅಥವಾ ಕ್ವೊಮೊಲಾಂಗ್ಮಾದ ಇಳಿಜಾರುಗಳಲ್ಲಿ ಚಮರಿಮೃಗ ಮೇಯಿಸುವ ಒಬ್ಬ,
ಎವರೆಸ್ಟ್, ಪ್ರಪಂಚದ ದೈವಮಾತೆ.
ಈ ಎಲ್ಲ ಜನರೂ ನಾವು ಇತರ ರೀತಿಗಳಲ್ಲಿ ಜೀವಿಸಬಹುದೆಂದು ಬೋಧಿಸುತ್ತಾರೆ,
ಇತರ ರೀತಿಯಲ್ಲಿ ಯೋಚಿಸಬಹುದೆಂದು,
ಇತರ ರೀತಿಗಳಲ್ಲಿ ನಿಮ್ಮನ್ನು ನೀವು ಈ ಪೃಥ್ವಿಯ ಮೇಲೆ ಉತ್ತೇಜಿಸಿಕೊಳ್ಳಬಹುದೆಂದು.
ನೀವು ಅದರ ಬಗ್ಗೆ ಯೋಚಿಸಿದರೆ, ಅದೊಂದು ಕಲ್ಪನೆ,
ನಿಮ್ಮಲ್ಲಿ ಆಶಾಭಾವನೆಯನ್ನು ತುಂಬಬಹುದು.
ಈಗ, ಪ್ರಪಂಚದ ಅಸಂಖ್ಯಾತ ಸಂಸ್ಕೃತಿಗಳು ಒಟ್ಟುಗೂಡಿ
ಒಂದು ಅಧ್ಯಾತ್ಮಿಕ ಜೀವನ ಮತ್ತು ಸಾಂಸ್ಕೃತಿಕ ಜೀವನದ ಬಲೆ ನೇಯುತ್ತವೆ
ಅದು ಇಡೀ ಗ್ರಹವನ್ನೇ ಆವರಿಸುತ್ತದೆ,
ಹಾಗೂ ಇದು ಈ ಗ್ರಹದ ಯೋಗ-ಕ್ಷೇಮಕ್ಕೆ ಬಹಳ ಮುಖ್ಯ
ಅದು ಜೀವನದ ಜೈವಿಕ ಬಲೆ, ಜೈವಿಕ ಮಂಡಲ ಎಂಬುದು ನಿಮಗೆ ತಿಳಿದಿದೆ.
ಹಾಗೂ ಜೀವನದ ಈ ಸಾಂಸ್ಕೃತಿಕ ಬಲೆ ಏನೆಂದು ನೀವು ಯೋಚಿಸಬಹುದು
ಅದು ನರಕುಲ ಮಂಡಲ ಎಂದು
ಹಾಗೂ ನೀವು ನರಕುಲ ಮಂಡಲವನ್ನು
ಎಲ್ಲ ಆಲೋಚನೆಗಳ ಮತ್ತು ಕನಸುಗಳ, ದಂತಕಥೆಗಳ,
ಕಲ್ಪನೆಗಳ, ದೈವಪ್ರೇರಣೆಗಳ, ಅಂತಃಪ್ರೇರಣೆಗಳ ಒಟ್ಟು ಮೊತ್ತವಾಗಿ ಅಸ್ತಿತ್ವಕ್ಕೆ ಬಂದಿವೆ
ಮಾನವನ ಕಲ್ಪನಾಶಕ್ತಿಯ ಮುಖಾಂತರ ಅಂತಃಪ್ರಜ್ಞೆಯ ಉದಯವಾದಂದಿನಿಂದ.
ಈ ನರಕುಲ ಮಂಡಲ ಮಾನವನ ಪ್ರಮುಖ ಪೂರ್ವಾರ್ಜಿತ ಆಸ್ತಿ
ಅದು ನಮ್ಮ ಇರುವಿಕೆಯ ಪ್ರತೀಕ
ಮತ್ತು ನಾವು ಆಶ್ಚರ್ಯಕರ ಅನ್ವೇಷಣಶೀಲ ಜಾತಿಯಾಗಿರುವುದರ ಪ್ರತೀಕ.
ಯಾವ ರೀತಿ ಜೈವಿಕ ಮಂಡಲ ಕಠೋರವಾಗಿ ನಾಶಹೊಂದಿದೆಯೊ,
ಅದೇ ರೀತಿ ನರಕುಲ ಮಂಡಲವೂ ಕೂಡ
-- ಅದೂ ಕೂಡ ಇನ್ನೂ ಹೆಚ್ಚಿನ ಗತಿಯಲ್ಲಿ
ಉದಾಹರಣೆಗೆ, ಯಾವ ಜೀವಶಾಸ್ತ್ರಜ್ಞರೂ
50% ಅಥವಾ ಇನ್ನೂ ಹೆಚ್ಚು ಜಾತಿಗಳು
ನಾಶದ ಅಂಚಿನಲ್ಲಿವೆ ಎಂದು ಹೇಳುವ ಸಾಹಸ ಮಾಡುವುದಿಲ್ಲ, ಏಕೆಂದರೆ ಅದು ಸತ್ಯವಲ್ಲ
ಆದರೂ ಕೂಡ -- ಭವಿಷ್ಯದ ಪರಿಸ್ಥಿತಿ
ಜೀವಶಾಸ್ತ್ರಕ್ಕೆ ಸಂಭಂಧಿಸಿದ ವೈವಿಧ್ಯತೆಯ ಲೋಕದಲ್ಲಿ
ನಮಗೆ ತಿಳಿದಿರುವ ಆಶಾವಾದ ಚಿತ್ರಣವನ್ನು ಸಾಂಸ್ಕೃತಿಕ ವೈವಿಧ್ಯತೆಯ ಪರಿಸ್ಥಿತಿಯಲ್ಲಿ
ಅಪರೂಪವಾಗಿ ತಲುಪುತ್ತದೆ.
ಹಾಗೂ ಇದರ ಪ್ರಮುಖ ಸೂಚಕವೆಂದರೆ, ಭಾಷೆ ಹಾನಿ.
ಈ ಕೊಠಡಿಯಲ್ಲಿರುವ ಪ್ರತಿಯೊಬ್ಬರೂ, ನೀವು ಹುಟ್ಟಿದಾಗ
ಈ ಗ್ರಹದ ಮೇಲೆ 6:00 ಭಾಷೆಗಳಲ್ಲಿ ಮಾತನಾಡಲಾಗುತ್ತಿತ್ತು.
ಈಗ, ಭಾಷೆ ಒಂದು ಶಬ್ದ ಸಂಗ್ರಹವಲ್ಲ
ಅಥವಾ ವ್ಯಾಕರಣ ನಿಯಮಗಳ ಒಂದು ಕಟ್ಟಲ್ಲ.
ಒಂದು ಭಾಷೆ ಮಾನವನ ಅಂತಃಕರಣದ ಪ್ರಕಾಶ.
ಅದು ಈ ಭೌತಪ್ರಪಂಚಕ್ಕೆ ಪ್ರತಿಯೊಂದು ನಿರ್ದಿಷ್ಟ ಸಂಸ್ಕೃತಿಯ ಚೇತನವು
ತಲುಪುವ ಸಾಧನ.
ಪ್ರತಿಯೊಂದು ಭಾಷೆಯೂ ಒಂದು ಮನಸ್ಸಿನ ಪ್ರಾಚೀನ ಆಲೋಚನಾ ಪ್ರಗತಿ,
ಒಂದು ಅರಿವಿನ ಸಂಗ್ರಹ , ಒಂದು ಆಲೋಚನೆ, ಅಧ್ಯಾತ್ಮಿಕ ಸಾಧ್ಯತೆಗಳ ಒಂದು ಪಾರಿಸರಿಕ ವ್ಯವಸ್ಥೆ.
ನಾವೀಗ ಮೋಂಟರೇನಲ್ಲಿ ಕುಳಿತಿರುವ ಈ ದಿನ, ಈ 6:00 ಭಾಷೆಗಳಲ್ಲಿ
ಅರ್ಧದಷ್ಟು ಭಾಷೆಗಳನ್ನು ಮಕ್ಕಳ ಕಿವಿಯಲ್ಲಿ ಪಿಸುಗುಡಲಾಗುತ್ತಿಲ್ಲ.
ಶಿಶುಗಳಿಗೆ ಈಗ ಅವನ್ನು ಕಲಿಸಲಾಗುತ್ತಿಲ್ಲ,
ಅಂದರೆ, ಪರಿಣಾಮಕಾರಿಯಾಗಿ, ಯಾವುದೋ ಒಂದು ಬದಲಾಗದಿದ್ದರೆ,
ಅವು ಈಗಾಗಲೇ ಸತ್ತಂತೆಯೇ ಸರಿ.
ನಿಃಶಬ್ದ ಆವರಿಸುವುದಕ್ಕಿಂತ ಹೆಚ್ಚು ಏಕಾಂತತೆ ಇನ್ನಾವುದಿದೆ,
ನಿಮ್ಮ ಭಾಷೆಯನ್ನು ಮಾತನಾಡುವ ಕಟ್ಟಕಡೆಯ ವ್ಯಕ್ತಿಗಳಾಗಿ,
ನಿಮ್ಮ ಪೂರ್ವಜರ ಬುದ್ದಿಮತ್ತೆಯನ್ನು ಇತರರಿಗೆ ಹಂಚುವ ದಾರಿಯಿಲ್ಲದೆ
ಅಥವಾ ಮಕ್ಕಳ ಭರವಸೆಯನ್ನು ನಿರೀಕ್ಷಿಸಲಾಗದೆ?
ಆದರೂ ಕೂಡ, ಯಾರೋ ಒಬ್ಬರ ಭಯಂಕರ ವಿಧಿಯ ದುರವಸ್ಥೆಯೆ,
ಭೂಮಂಡಲದ ಎಲ್ಲೋ ಒಂದು ಕಡೆ, ಪ್ರತಿ ಎರಡು ವಾರಗಳಿಗೆ,
ಏಕೆಂದರೆ, ಪ್ರತಿ ಎರಡು ವಾರಗಳಿಗೆ ಒಬ್ಬ ಹಿರಿಯ ಸಾಯುತ್ತಾನೆ
ಹಾಗೂ ತನ್ನೊಂದಿಗೆ ಪ್ರಾಚೀನ ಭಾಷೆಯ ಕೊನೆಯ ಪಠ್ಯಗಳನ್ನು
ತನ್ನ ಗೋರಿಗೆ ಕೊಂಡೊಯ್ಯುತ್ತಾನೆ.
ಹಾಗೆಯೇ, ನನಗೆ ಗೊತ್ತು, ನಿಮ್ಮಲ್ಲಿ ಕೆಲವರು, "ಅದಿನ್ನೂ ಒಳ್ಳೆಯದಲ್ಲವೇ?
ಪ್ರಪಂಚ ಜೀವಿಸಲು ಇನ್ನೂ ಉತ್ತಮವಾಗಿರುತ್ತಲ್ಲವೆ
ನಾವೆಲ್ಲರೂ ಒಂದೇ ಭಾಷೆ ಮಾತನಾಡಿದರೆ?" ಎನ್ನುತ್ತೀರಾ. ನಾನು ಹೇಳುತ್ತೇನೆ, "ಬಹಳ ಒಳ್ಳೆಯದು,
ನಾವು ಆ ಭಾಷೆ ಯೊರುಬಾ ಎಂದು ಮಾಡೋಣ. ಅದು ಕ್ಯಾಂಟೊನೀಸ್ ಆಗಲಿ.
ಕೋಗಿಯನ್ನು ಮಾಡೋಣ."
ಹಾಗೂ ಅದು ಹೇಗಿರುತ್ತದೆಂಬುದು ನೀವು ತಕ್ಷಣ
ನಿಮ್ಮ ಸ್ವಂತ ಭಾಷೆಯಲ್ಲಿ ಮಾತನಾಡಲಾಗದೆ ಕಂಡುಕೊಳ್ಳುತ್ತೀರಾ.
ಆದ್ದರಿಂದ, ಈ ದಿನ ನಾನು ನಿಮ್ಮೊಂದಿಗೆ ಏನು ಮಾಡಬೇಕೆಂದಿದ್ದೇನೆಂದರೆ
ನರಕುಲ ಮಂಡಲದ ಮೂಲಕ ನಿಮ್ಮನ್ನು ಕರೆದೊಯ್ಯುತ್ತೇನೆ --
ನರಕುಲ ಮಂಡಲದ ಒಂದು ಚಿಕ್ಕ ಪ್ರವಾಸ
ನಾವು ಏನು ಕಳೆದುಕೊಳ್ಳುತ್ತಿದ್ದೇವೆಂದು ನಿಮ್ಮ ಅರಿವಿಗೆ ತರಲು.
ಈಗ, ನಮ್ಮಲ್ಲಿ ಬಹಳಷ್ಟು ಜನ ಒಂದು ಅಂಶ ಮರೆಯುತ್ತೇವೆ
ನಾನು "ಬೇರೆ ಬೇರೆ ರೀತಿಯಲ್ಲಿ ಬದುಕುವುದು" ಎಂದಾಗ
ನಿಜವಾಗಿಯೂ ಬೇರೆ ಬೇರೆ ರೀತಿಯಲ್ಲಿ ಬದುಕುವುದು ಎಂದೇ.
ಉದಾಹರಣೆಗೆ, ಉತ್ತರ-ಪಶ್ಚಿಮ ಅಮೆಜಾನಿನ ಬರಸಾನದ ಒಂದು ಮಗುವನ್ನು ತೆಗೆದುಕೊಳ್ಳಿ,
ಅನಕೊಂಡದ ಜನರು
ತಾವು ಹಾಲು ನದಿಯಿಂದ ಮೇಲೆ ಬಂದೆವು ಎನ್ನುವ ದಂತಕಥೆಯನ್ನು ನಂಬಿರುವ ಜನ
ಅದೂ ಪೂರ್ವದಿಂದ ಪವಿತ್ರ ಸರ್ಪಗಳ ಉದರದಿಂದ.
ಈಗ, ಈ ಜನರು ತಮ್ಮ ಅರಿವಿನಿಂದ
ಹಸುರು ಬಣ್ಣ ಮತ್ತು ನೀಲಿ ಬಣ್ಣಗಳಿಗಿರುವ ವ್ಯತ್ಯಾಸ ಕಂಡುಹಿಡಿಯಲಾರರು
ಏಕೆಂದರೆ ಆಕಾಶದ ಸೂರು ಹಾಗೂ
ಅರಣ್ಯದ ಸೂರು ಅವರಿಗೆ ಸಮ
ಇದರ ಮೇಲೆ ಜನರು ಆವಲಂಬಿತರಾಗಿದ್ದಾರೆ.
ಅವರು ಒಂದು ವಿಲಕ್ಷಣ ಭಾಷೆ ಮತ್ತು ಮದುವೆಯ ನಿಯಮ ಹೊಂದಿದ್ದಾರೆ
ಅದನ್ನು ಭಾಷಾ ಅಂತರ್ವಿವಾಹ ಎಂದು ಕರೆಯುತ್ತಾರೆ:
ನೀವು ಬೇರೊಂದು ಭಾಷೆ ಮಾತನಾಡುವ ಒಬ್ಬರನ್ನು ವಿವಾಹವಾಗಬೇಕು.
ಹಾಗೂ ಇದೆಲ್ಲವೂ ದಂತಕಥೆಗಳಲ್ಲಿ ಬೇರೂರಿಕೊಂಡಿವೆ.
ಆದರೂ ವಿಲಕ್ಷಣವೆಂದರೆ ಆರು ಇಲ್ಲವೇ ಏಳು ಮಾತನಾಡುವ
ಭಾಷೆಗಳಿರುವ ದೊಡ್ಡ ಕುಟುಂಬಗಳಲ್ಲಿ♪
ವಿವಾಹದ ಕಾರಣದಿಂದ,
ಯಾರೋ ಒಂದು ಭಾಷೆಯನ್ನು ಕಲಿಯುತ್ತಿದ್ದಾರೆ ಎನ್ನುವುದು ನಿಮಗೆ ಕಂಡುಬರುವುದಿಲ್ಲ.
ಅವರು ಸುಮ್ಮನೆ ಕೇಳಿಸಿಕೊಳ್ಳುತ್ತಾರೆ ಮತ್ತು ಮಾತಾಡಲು ಪ್ರಾರಂಭಿಸುತ್ತಾರೆ.
ಅಥವಾ, ನಾನು ಜೊತೆಯಲ್ಲಿ ವಾಸಮಾಡಿದ ಬುಡಕಟ್ಟುಗಳಲ್ಲಿ ಒಂದಾದ
ಉತ್ತರಪೂರ್ವ ಈಕ್ವೆಡಾರ್ ನ ವೌರಾನಿ ಜನಾಂಗ ತೆಗೆದುಕೊಳ್ಳಿ,
ಮೊಟ್ಟಮೊದಲನೆಯದಾಗಿ 1958 ರಲ್ಲಿ ಈ ಆಶ್ಚರ್ಯಕರ ಜನರನ್ನು ಶಾಂತಿಯುತವಾಗಿ ಸಂಪರ್ಕಿಸಲಾಯಿತು.
1957 ಐದು ಜನ ಧರ್ಮಪ್ರಚಾರಕರು ಸಂಪರ್ಕಿಸಲು ಪ್ರಯತ್ನಪಟ್ಟರು.
ಹಾಗೂ ಒಂದು ದೊಡ್ಡ ತಪ್ಪು ಮಾಡಿದರು.
ಮೇಲಿಂದ ಕೆಳಕ್ಕೆ
ಎಂಟು x ಹತ್ತು ಗಾತ್ರದ ತಮ್ಮದೇ ಹೊಳೆಯುವ ಫೋಟೊಗಳನ್ನು ಎಸೆದರು.
ಇದನ್ನು ನಾವು ಸ್ನೇಹಪೂರಿತ ಸೂಚನೆಗಳೆನ್ನಬಹುದು,
ಆದರೆ ಎಸೆಯುವಾಗ ಅವರು ಮಳೆ ಅರಣ್ಯ ಪ್ರದೇಶದ ಈ ಜನ ತಮ್ಮ ಜೀವನದಲ್ಲಿ
ಎಂದೂ ಎರಡು-ಆಯಾಮಗಳ ವಸ್ತುವನ್ನು ನೋಡಿಲ್ಲ ಎಂಬುದನ್ನು ಮರೆತರು.
ಅವರು ಈ ಫೊಟೊಗಳನ್ನು ಕಾಡಿನ ನೆಲದಿಂದ ಎತ್ತಿಕೊಂಡು
ಫೋಟೊದಲ್ಲಿರುವ ಮುಖದ ಹಿಂದಿರುವ ಆಕಾರವನ್ನು ನೋಡಲು ಯತ್ನಿಸಿದರು,
ಅವರಿಗೆ ಏನೂ ಕಾಣಲಿಲ್ಲ ಹಾಗೂ ಇವು ಪಿಶಾಚಿಗಳಿಂದ ಬಂದಿರುವ
ಕರೆ ಕಾರ್ಡುಗಳೆಂದು ತೀರ್ಮಾನಿಸಿ, ಆ ಐದು ಜನ ಧರ್ಮ ಪ್ರಚಾರಕರನ್ನು ಭರ್ಜಿಗಳಿಂದ ಇರಿದು ಕೊಂದರು.
ಆದರೆ ವೌರಾನಿ ಜನಾಂಗ ಕೇವಲ ಹೊರಗಿನವರನ್ನು ಇರಿಯಲಿಲ್ಲ.
ಒಬ್ಬರನ್ನೊಬ್ಬರು ಇರಿದುಕೊಂಡರು
54% ಮರಣಪ್ರಮಾಣ ಇರುವುದು ಅವರು ತಮ್ಮಲ್ಲೇ ಒಬ್ಬರನ್ನೊಬ್ಬರು ಇರಿದುಕೊಳ್ಳುವುದರಿಂದ.
ನಾವು ಎಂಟು ತಲೆಮಾರುಗಳ ವಂಶಾವಳಿಯನ್ನು ಪತ್ತೆಮಾಡಿದೆವು,
ಹಾಗೂ ನಾವು ಸ್ವಾಭಾವಿಕ ಸಾವಿನ ಎರಡು ಘಟನೆಗಳನ್ನು ಮಾತ್ರ ಪತ್ತೆಮಾಡಿದೆವು
ಮತ್ತು ನಾವು ಇದರ ಬಗ್ಗೆ ಜನರನ್ನು ಇನ್ನಷ್ಟು ಬಲವಂತ ಮಾಡಿದಾಗ
ಒಬ್ಬನಿಗೆ ತುಂಬಾ ವಯಸ್ಸಾಗಿತ್ತು ಎಂದು ಒಪ್ಪಿಕೊಂಡರು
ಹಾಗೂ ಅವನು ಇಳಿವಯಸ್ಸಿನಿಂದ ಸತ್ತನು, ಆದರೂ ನಾವು ಅವನನ್ನು ಇರಿದೆವು (ನಗು)
ಆದರೆ, ಅವರಿಗೆ ಅರಣ್ಯದ ಬಗ್ಗೆ ಅತಿ ಸೂಕ್ಷ್ಮ ಮತ್ತು ತೀಕ್ಷ್ಣ
ತಿಳಿವಳಿಕೆಯಿತ್ತು, ಇದು ಅತ್ಯಂತ ಆಶ್ಚರ್ಯಕರ.
ಅವರ ಬೇಟೆಗಾರರು ಪ್ರಾಣಿಗಳ ಮೂತ್ರದ ವಾಸನೆಯನ್ನು 40 ಹೆಜ್ಜೆಗಳ ದೂರದಿಂದಲೇ ಮೂಸಬಲ್ಲರು
ಮತ್ತು ಅದು ಯಾವ ಪ್ರಾಣಿಯ ಮೂತ್ರ ಎಂದು ಹೇಳಬಲ್ಲರು
80 ರ ದಶಕದ ಪ್ರಾರಂಭದಲ್ಲಿಯೇ ನಾನು ಒಂದು ವಿಸ್ಮಯಕಾರಿ ಕಾರ್ಯ ಕೈಗೊಳ್ಳಬೇಕಾಯಿತು
ಹಾರ್ವರ್ಡಿನಲ್ಲಿ ನಮ್ಮ ಪ್ರೊಫೆಸರ್ ಕೇಳಿದರು
ಹೈಟಿಗೆ ಹೋಗಲು ನಿನಗೆ ಆಸಕ್ತಿಯಿದೆಯೇ ಎಂದು,
ರಹಸ್ಯ ಸಮಾಜಗಳಲ್ಲಿ ಒಳನುಸುಳಿ
ದುವೇಲಿಯರ್ನ ಮತ್ತು ಟೊಂಟೋನ್ ಮಕೌಟ್ಸ್ನ
ಶಕ್ತಿಯ ಮೂಲ ಮತ್ತು
ಸೋಂಭೇರಿಗಳನ್ನು ತಯಾರುಮಾಡುವ ವಿಷವಸ್ತುವನ್ನು ಪಡೆಯಲು.
ಈ ಪಯಣದ ವಿವೇಚನೆಯನ್ನು ಸಂವೇದನಾಶೀಲವಾಗಿ ಮಾಡಲು
ನಾನು ಈ ವೊಡೌನಿನ ಅದ್ವಿತೀಯ ನಂಬಿಕೆಯ ಬಗ್ಗೆ ಅರಿತುಕೊಳ್ಳಬೇಕಾಯಿತು
ಹಾಗೂ ವೂಡೂ ಮಾಟ-ಮಂತ್ರದ ಒಂದು ಪಂಥವಲ್ಲ.
ವಿಪರ್ಯಾಸವಾಗಿ ಅದೊಂದು ಸಂಕೀರ್ಣ ಅಧ್ಯಾತ್ಮಿಕ ಸಿದ್ಧಾಂತದ ವಿಶ್ವನೋಟ.
ಇದು ಆಸಕ್ತಿಕರ.
ನಾನು ನಿಮ್ಮನ್ನು ಪ್ರಪಂಚದ ಅತಿ ಉನ್ನತ ಧರ್ಮಗಳನ್ನು ಹೆಸರಿಸಿ ಎಂದರೆ
ನೀವೇನು ಹೇಳುತ್ತೀರಾ?
ಕ್ರೈಸ್ತ ಧರ್ಮ, ಇಸ್ಲಾಂ, ಬೌದ್ಧಧರ್ಮ, ಯಹೂದಿ ಧರ್ಮ, ಯಾವುದೋ ಒಂದು.
ಆದರೆ ಯಾವಾಗಲೂ ಒಂದು ಖಂಡ ಬಿಟ್ಟುಹೋಗುತ್ತದೆ
ಒಂದು ಊಹೆಯ ಮೇಲೆ, ಸಬ್ ಸಹರನ್ ಆಫ್ರಿಕಾದಲ್ಲಿ
ಯಾವುದೇ ಧಾರ್ಮಿಕ ನಂಬಿಕೆಗಳಿರಲಿಲ್ಲ. ಆದರೆ, ಅವರಲ್ಲಿ ನಂಬಿಕೆಗಳು ಇತ್ತು,
ಹಾಗೂ ಊಡೂ ಈ ಎಲ್ಲ ಗಂಭೀರವಾದ
ಧಾರ್ಮಿಕ ಕಲ್ಪನೆಗಳ ಸಾರ
ಹಾಗೂ ಇದು ಹೃದಯವಿದ್ರಾವಕ ಗುಲಾಮಗಿರಿ ಯುಗದಲ್ಲಿ ಬಂದಿತು.
ಆದರೆ, ಊಡೂ ಇಷ್ಟೊಂದು ಆಸಕ್ತಿಕರ, ಏಕೆಂದರೆ ಅದು
ಜೀವಂತವಾಗಿರುವ ಮತ್ತು ಸತ್ತವರ
ನಡುವೆ ಇರುವ ಜ್ವಲಂತ ಸಂಬಂಧ.
ಹಾಗಾಗಿ, ಜೀವಂತ ಇರುವವರು ಆತ್ಮಗಳಿಗೆ ಜನ್ಮಕೊಡುತ್ತಾರೆ.
ಈ ಆತ್ಮಗಳನ್ನು ಅಸಾಮಾನ್ಯ ಜಲದ ಕೆಳಗಿನಿಂದ ಆವಾಹಿಸಬಹುದು,
ನಾಟ್ಯದ ತಾಳಕ್ಕೆ ಮೇಳೈಸಿದಂತೆ
ಸ್ವಲ್ಪ ಕ್ಷಣ ಜೀವಂತವಿರುವವರ ಶಬ್ದ ಬದಲಾವಣೆ ಮಾಡಿದಂತೆ
ಆ ಸ್ವಲ್ಪ ಕ್ಷಣ, ಆ ಪ್ರವಾದಿಯೇ ದೈವವಾದಂತೆ.
ಅದಕ್ಕೆ, ವೂಡೂಗಳು ಹೇಳುತ್ತಾರೆ,
“ನೀವು ಬಿಳಿ ಜನ ಚರ್ಚಿಗೆ ಹೋಗುತ್ತೀರ ಮತ್ತು ದೇವರ ಬಗ್ಗೆ ಮಾತನಾಡುತ್ತೀರ.
ನಾವು ದೇವಾಲಯದಲ್ಲಿ ಕುಣಿದಾಡುತ್ತೇವೆ ಮತ್ತು ದೇವರಾಗುತ್ತೇವೆ.”
ನೀವು ಆವೇಶಗೊಂಡಿರುವುದರಿಂದ ನಿಮ್ಮನ್ನು ಪಿಶಾಚಿ ಹಿಡಿದುಕೊಳ್ಳುತ್ತದೆ,
ನಿಮಗೆ ಅಪಾಯ ಹೇಗಾಗುತ್ತದೆ?
ಹಾಗಾಗಿ, ನೀವು ಈ ಆಶ್ಚರ್ಯಕರ ಪ್ರದರ್ಶನಗಳನ್ನು ನೋಡುತ್ತೀರಿ:
ವೂಡೂ ಅನುಚರರರು ಒಂದು ಭಾವಪರವಶ ಸ್ಥಿತಿಯಲ್ಲಿರುವಂತೆ
ಉರಿಯುತ್ತಿರುವ ಕೊಳ್ಳಿಗಳನ್ನು ನಿರ್ಭೀತಿಯಿಂದ ಆಡಿಸುವುದು
ಮಾನಸಿಕ ಸಾಮರ್ಥ್ಯವನ್ನು ಆಶ್ಚರ್ಯಕರ ರೀತಿಯಲ್ಲಿ ಪ್ರದರ್ಶಿಸುವುದು
ಆ ಮನಸ್ಸು ಹೊಂದಿರುವ ದೇಹದ ಮೇಲೆ ಪ್ರಭಾವ ಬೀರುವುದು
ತೀವ್ರವಾದ ಉದ್ರೇಕ ಸ್ಥಿತಿಯಲ್ಲಿ ವೇಗವರ್ಧಿಸುವುದು.
ಈಗ, ನಾನು ಜೊತೆಗಿದ್ದ ಎಲ್ಲ ಜನರ ಪೈಕಿ
ಅತಿ ವಿಚಿತ್ರವಾದವರೆಂದರೆ ಉತ್ತರ ಕೊಲಂಬಿಯಾದ
ಸೀಯೆರಾ ನೆವೆಡಾ ಡಿ ಸಾಂಟ ಮಾರ್ತಾಕ್ಕೆ ಸೇರಿದ ಕೋಗಿಗಳು.
ಇವರು ಪ್ರಾಚೀನ ಟೈರೋನಾ ನಾಗರಿಕತೆಗಳ ಸಂತತಿಗಳು
ಇವರು ಒಮ್ಮೆ ಕೊಲಂಬಿಯಾದ ಕ್ಯಾರಿಬಿಯನ್ ಕಡಲ ತೀರದ ಬಯಲು ಪ್ರದೇಶವನ್ನು
ವಿಜಯೋತ್ಸವ ಸಂದರ್ಭದಲ್ಲಿ ನೆಲಸಮ ಮಾಡಿದ್ದರು,
ಈ ಜನ ಪ್ರತ್ಯೇಕವಾದ ಕ್ಯಾರಿಬಿಯನ್ ಕಡಲು ತೀರದ ಬಯಲು ಪ್ರದೇಶದ
ಮೇಲೆ ಚಾಚಿಕೊಂಡಿರುವ ಜ್ವಾಲಾಮುಖಿ ಪರ್ವತಕ್ಕೆ ಹಿಂದಿರುಗಿದರು.
ರಕ್ತದೋಕುಳಿಯಿಂದ ತುಂಬಿರುವ ಖಂಡದಲ್ಲಿ,
ಸ್ಪಾನಿಶರು ಜಯಸಾಧಿಸದಿರುವ ಏಕೈಕ ಗುಂಪು ಇದು.
ಇವತ್ತಿನವರೆಗೂ, ಅವರು ಧಾರ್ಮಿಕ ಸಂಸ್ಕಾರಗಳನ್ನು ಆಚರಿಸುವ ಪುರೋಹಿತಶಾಹಿ ಆಡಳಿತಕ್ಕೊಳಗಾಗಿದ್ದಾರೆ
ಆದರೆ, ಅವರ ಪುರೋಹಿತ ಸ್ಥಾನಕ್ಕೆ ಕೊಡುವ ತರಬೇತಿ ಅಸಾಧಾರಣ.
ಚಿಕ್ಕ ವಯಸ್ಸಿನ ಪ್ರವಾದಿಗಳನ್ನು ಅವರ ಮೂರು
ಮತ್ತು ನಾಲ್ಕನೆ ವಯಸ್ಸಿನಲ್ಲಿಯೇ ಮನೆಯಿಂದ ಒಯ್ಯಲಾಗುತ್ತದೆ
ಅಂಧಕಾರ ಮತ್ತು ಕತ್ತಲುಕೋಣೆಯ ಏಕಾಂತ ಸ್ಥಳದಲ್ಲಿ
ಗುಹೆಗಳಲ್ಲಿ ಹಿಮರಾಶಿಯ ಬುಡದಲ್ಲಿ 18 ವರ್ಷ ಇಡಲಾಗುವುದು.
ಒಂಬತ್ತು ವರ್ಷದ ಎರಡು ಅವಧಿಗಳನ್ನು
ಒಂಬತ್ತು ತಿಂಗಳುಗಳ ಗರ್ಭಾವಸ್ಥೆ ಅನುಕರಣೆ ಮಾಡುವಂತೆ ಅವರು ತಮ್ಮ ನೈಸರ್ಗಿಕ ತಾಯಿಯ ಗರ್ಭದಲ್ಲಿ
ಇರುವಂಥ ಅನುಭವ ಮೂಡಿಸಲು ಉದ್ದೇಶಪೂರ್ವಕವಾಗಿ ಆಯ್ಕೆಮಾಡುತ್ತಾರೆ,
ಈಗ ಅವರು ರೂಪಕವಾಗಿ ತಮ್ಮ ತಾಯಿಯ ಗರ್ಭದಲ್ಲಿದ್ದಾರೆ.
ಈ ಸಂಪೂರ್ಣ ಸಮಯ
ಅವರು ತಮ್ಮ ನಾಗರೀಕತೆಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವಂತೆ ಮಾಡಲಾಗುವುದು,
ಈ ಮೌಲ್ಯಗಳು ಅವರ ಪ್ರಾರ್ಥನೆಗಳನ್ನು ಅನುಮೋದಿಸುತ್ತವೆ.
ಹಾಗೂ ಅವರ ಪ್ರಾರ್ಥನೆಗಳು ಮಾತ್ರ ಬ್ರಹ್ಮಾಂಡದ -
ಅಥವಾ ನಾವಿದನ್ನು ಜೈವಿಕ ಪರಿಸರ ಎನ್ನಬಹುದು – ಇವು ಸಮತೋಲನ ಮಾಡುತ್ತವೆ.
ಈ ವಿಸ್ಮಯಕಾರಿ ದೀಕ್ಷೆಯ ಕೊನೆಯಲ್ಲಿ
ಒಂದು ದಿನ ಹಠಾತ್ತಾಗಿ ಅವರನ್ನು ಹೊರತರಲಾಗುತ್ತದೆ
ಹಾಗೂ ಅವರ 18 ವರ್ಷಗಳಲ್ಲಿ ಜೀವನದಲ್ಲಿ ಪ್ರಥಮ ಬಾರಿಗೆ
ಸೂರ್ಯೋದಯ ನೋಡುತ್ತಾರೆ. ಆ ಸ್ಫುಟವಾದ ಅರಿವಿನ ಕ್ಷಣದಲ್ಲಿ
ಆ ಇಳುಕಲು ಪ್ರದೇಶಗಳು ಸೂರ್ಯನ ಕಿರಣಗಳಿಂದ ಮೀಯುವಾಗ
ಆ ಮೈಮರೆಸುವಂಥ ಸುಂದರ ಭೂದೃಶ್ಯ,
ಅವರು ಅಮೂರ್ತ ಸ್ಥಿತಿಯಲ್ಲಿ ಕಲಿತಿರುವ ಎಲ್ಲವೂ ಹಠಾತ್ತಾಗಿ
ಈ ವಿಸ್ಮಯಕಾರಿ ಸ್ಥಿತಿಯಲ್ಲಿ ಸತ್ಯವೆನಿಸುತ್ತದೆ. ಹಾಗೂ ಪುರೋಹಿತ ಒಂದು ಹೆಜ್ಜೆ
ಹಿಮ್ಮೆಟ್ಟಿ ಹೇಳುತ್ತಾನೆ, “ನೀವು ನೋಡಿ? ಅದು ಸತ್ಯವಾಗಿಯೂ ನಾನು ಹೇಳಿರುವಂತೆ ಇದೆ.
ಅದು ಅಷ್ಟೊಂದು ಸುಂದರವಾಗಿದೆ. ಅದು ನಿಮ್ಮದು, ನೀವು ರಕ್ಷಿಸಬೇಕಾದ್ದು.”
ಅವರು ತಮ್ಮನ್ನು ಹಿರಿಯ ಸಹೋದರರೆಂದು ಕರೆದುಕೊಳ್ಳುತ್ತಾರೆ
ಹಾಗೂ ಅವರು ಹೇಳುತ್ತಾರೆ, ನಾವು ಕಿರಿಯ ಸಹೋದರರೆಂದು
ಹಾಗೂ ಈ ಪ್ರಪಂಚದ ನಾಶಕ್ಕೆ ನಾವು ಕಾರಣವೆನ್ನುತ್ತಾರೆ.
ಈಗ, ಈ ಮಟ್ಟದ ಒಳ ಅರಿವು ಬಹಳ ಮುಖ್ಯವಾಗುತ್ತದೆ.
ನಾವು ಯಾವಾಗ ಸ್ಥಳೀಯ ಜನ ಮತ್ತು ಭೂ ಪ್ರದೇಶದ ಬಗ್ಗೆ ಆಲೋಚಿಸಿದಾಗಲೂ
ರೊಸ್ಸೂಗೆ ಮೊರೆಯಿಡುತ್ತೇವೆ ಅಥವಾ
ಸುಳ್ಳುಸುದ್ದಿ ಹಬ್ಬಿಸುವ ಶ್ರೇಷ್ಠ ಅನಾಗರಿಕತೆ
ಸರಳವಾಗಿ ಹೇಳುವುದಾದರೆ ಅದೊಂದು ಜನಾಂಗೀಯ ಕಲ್ಪನೆ
ಅಥವಾ ಪರ್ಯಾಯವಾಗಿ, ನಾವು ಥೋರೂಗೆ ಮೊರೆಯಿಟ್ಟರೆ
ಈ ಜನರು ಹೇಳುತ್ತಾರೆ, ತಾವು ನಮಗಿಂತ ಭೂಮಿಗೆ ಹತ್ತಿರವಾಗಿದ್ದೇವೆಂದು.
ಸ್ಥಳೀಯ ಜನರು ಭಾವನಾವಶರೂ ಅಲ್ಲ
ಅಥವಾ ಹಂಬಲದ ನೆನಪುಗಳಿಂದ ದುರ್ಬಲರೂ ಅಲ್ಲ.
ಅಸ್ಮತ್ನ ಮಲೇರಿಯಾ ಪೀಡಿತ ಜವುಗುನೆಲಕ್ಕೆ
ಹೆಚ್ಚು ಅವಕಾಶವಿಲ್ಲ, ಅಥವಾ ಕೊರೆಯುವ ಟಿಬೆಟ್ನ ಚಳಿಗಾಳಿಯಲ್ಲೂ
ಸಹ ಅವರು, ಕಾಲ ಮತ್ತು ಪ್ರಾರ್ಥನಾವಿಧಿಗಳ ಮೂಲಕ,
ಒಂದು ಸಾಂಪ್ರದಾಯಿಕ ಸಂಕೇತ ಗರ್ಭಿತ ಭೂಮಿಯ ಪ್ರತಿಯನ್ನು ಮಾಡಿದರು
ಆತ್ಮ ಪ್ರಜ್ಞೆಯಿಂದ ಹುಟ್ಟಿದ ಕಲ್ಪನೆಯಿಂದ
ಆದರೆ ಇನ್ನೂ ಹೆಚ್ಚಿನ ಮಾರ್ಮಿಕ ಅಂತರ್ದೃಷ್ಟಿಯಿಂದ:
ಭೂಮಿಯು ಮಾತ್ರ ಅಸ್ತಿತ್ವದಲ್ಲಿರಬಹುದೆಂಬ ಕಲ್ಪನೆಯಿಂದ
ಏಕೆಂದರೆ ಅದಕ್ಕೆ ಉಸಿರು ಮಾನವನ ಪ್ರಜ್ಞೆ.
ಈಗ, ಇದರ ಅರ್ಥವೇನು?
ಇದರ ಅರ್ಥ ಆಂಡೀಸ್ನ ಒಂದು ಚಿಕ್ಕ ಮಗು
ಅಪುವಿನ ಪರ್ವತ ಒಂದು ಚೈತನ್ಯ ಎಂದು ನಂಬುವಂತೆ ಬೆಳೆಸಲಾಗಿದೆ
ಅದು ಅವನ ಅಥವಾ ಅವಳ ಭವಿಷ್ಯವನ್ನು ನಿರ್ದೇಶಿಸುತ್ತದೆ ಎಂದು ನಂಬಿಕೆಯಲ್ಲಿ ಬೆಳೆಸಿದರೆ
ಗಾಢವಾಗಿ ಒಬ್ಬ ಬೆರೆಯದೇ ಆದ ವ್ಯಕ್ತಿಯಾಗುತ್ತಾರೆ
ಮತ್ತು ಆ ಸ್ಥಳ ಅಥವಾ ಮೂಲದೊಂದಿಗೆ ಬೇರೆಯೇ ಸಂಬಂಧ ಹೊಂದಿರುತ್ತಾರೆ
ಮೊಂಟಾನದ ಇತರ ಮಕ್ಕಳಂತೆ
ಪರ್ವತವೆಂದರೆ ಒಡೆದು ಪುಡಿ ಮಾಡಬಹುದಾದ ಒಂದು ಕಲ್ಲಿನ ರಾಶಿ
ಎಂಬ ನಂಬಿಕೆಯ ಮೇಲೆ ಬೆಳೆದಂತಲ್ಲ.
ಅದು ಒಂದು ಚೈತನ್ಯದ ವಾಸಸ್ಥಾನವೋ ಅಥವಾ ಕಲ್ಲಿನ ರಾಶಿಯೋ ಎಂಬುದು ಮುಖ್ಯವಲ್ಲ.
ಆಸಕ್ತಿದಾಯಕ ವಿಷಯವೆಂದರೆ ಒಬ್ಬ ವ್ಯಕ್ತಿ ಮತ್ತು ನೈಸರ್ಗಿಕ ಪ್ರಪಂಚದ
ನಡುವೆ ಇರುವ ಸಂಬಂಧವನ್ನು ನಿರೂಪಿಸುವ ರೂಪಕಾಲಂಕಾರ
ನಾನು ಬ್ರಿಟಿಶ್ ಕೊಲಂಬಿಯಾದ ಕಾಡುಗಳಲ್ಲಿ ಬೆಳೆದೆ
ಆ ಕಾಡುಗಳು ಕತ್ತರಿಸಲಿಕ್ಕಾಗಿಯೇ ಇವೆ ಎಂಬ ನಂಬಿಕೆಯ ಮೇಲೆ.
ಅದು ನನ್ನನ್ನು ವಿಭಿನ್ನ ವ್ಯಕ್ತಿಯಾಗಿ ಮಾಡಿತು
ಕ್ವಾಗಿಲುತ್ ನನ್ನ ಸ್ನೇಹಿತರಿಗಿಂತ ಭಿನ್ನ
ಅವರಿಗೆ ಆ ಕಾಡುಗಳು ಹುಕ್ಸಹುಕ್ನ ವಾಸಸ್ಥಾನ ಮತ್ತು
ಸ್ವರ್ಗದ ಸೊಟ್ಟಾದ ಕೊಕ್ಕು ಎಂದು ನಂಬಿದ್ದರು
ಮತ್ತು ಪ್ರಪಂಚದ ಉತ್ತರ ದಿಕ್ಕಿನ ಕೊನೆಯಲ್ಲಿ ವಾಸಮಾಡುವ ನರಭಕ್ಷಕ ಶಕ್ತಿಗಳು,
ಇಂಥ ಶಕ್ತಿಗಳನ್ನು ಅವರ ಹಮತ್ಸಾ ದೀಕ್ಷೆ ಸಮಯದಲ್ಲಿ ಅವುಗಳನ್ನು ಎದುರಿಸಬೇಕಂತೆ.
ಈಗ, ನೀವು ಈ ಕಲ್ಪನೆಗಳ ಬಗ್ಗೆ ಯೋಚಿಸಿದರೆ,
ಈ ಸಂಸ್ಕೃತಿಗಳು ವಿಭಿನ್ನ ವಾಸ್ತವಗಳನ್ನು ಸೃಷ್ಟಿಸಬಹುದು,
ಅವರ ಕೆಲವು ಅಸಾಧಾರಣ ಶೋಧನೆಗಳನ್ನು
ಅರ್ಥಮಾಡಿಕೊಳ್ಳಲು ನೀವು ಪ್ರಾರಂಭಿಸಬಹುದು. ಈ ಗಿಡವನ್ನು ತೆಗೆದುಕೊಳ್ಳಿ.
ಈ ಚಿತ್ರವನ್ನು ನಾನು ಕಳೆದ ಏಪ್ರಿಲ್ ನಲ್ಲಿ ಉತ್ತರ-ಪಶ್ಚಿಮ ಅಮೆಜಾನಿನಲ್ಲಿ ತೆಗೆದೆ.
ಇದು ಅಯಾಹೌಸ್ಕಾ, ನಿಮ್ಮಲ್ಲಿ ಬಹಳ ಜನರಿಗೆ ತಿಳಿದಿರಬಹುದು,
ಇದು ಶಮನ್ ಭಂಡಾರದಲ್ಲಿರುವ ಅತ್ಯಂತ ಶಕ್ತಿಶಾಲಿ
ಸೈಕೊಆಕ್ಟೀವ್ ತಯಾರಿಕೆ.
ಅಯಾಹೌಸ್ಕಾ ಅತ್ಯಾಕರ್ಷಕವಾಗಲು ಏನು ಕಾರಣವೆಂದರೆ
ಈ ತಯಾರಿಕೆಯಲ್ಲಿರುವ ಕೇವಲ ಔಷಧಗಳ ಸಾಮರ್ಥ್ಯವಲ್ಲ,
ಆದರೆ ಅವುಗಳ ವಿಸ್ತಾರ. ಅದನ್ನು ವಾಸ್ತವಿಕವಾಗಿ ಎರಡು ಮೂಲಗಳಿಂದ ತಯಾರಿಸಲಾಗಿದೆ.
ಒಂದು ಕಡೆ ಇದರಲ್ಲಿ ವುಡಿ ಲಿಯಾನಾ ಇದೆ,
ಇದರಲ್ಲಿ ಬೀಟಾ-ಕಾರ್ಬೊಲೈನುಗಳ ಸರಣಿಯೇ ಇದೆ,
ಹಾರ್ಮೈನ್, ಹಾರ್ಮೊಲೈನ್, ಸ್ವಲ್ಪ ಭ್ರಮೆ ಹುಟ್ಟಿಸುವಂತಹುದು.
ಕೇವಲ ವೈನ್ ಸೇವಿಸುವುದು
ನಿಮ್ಮ ಪ್ರಜ್ಞೆಯ ಮೂಲಕ ಹಾದುಹೋಗುವ
ಒಂದು ನೀಲಿ ಬಣ್ಣದ ಅಸ್ಪಷ್ಟ ಧೂಮ,
ಆದರೆ, ಕಾಫಿ ಕುಟುಂಬದ ಸೈಕೋಟ್ರಿಯಾ ವಿರಿಡಿಸ್ ಎಂಬ ಕುರುಚಲು ಗಿಡದ
ಎಲೆಗಳೊಂದಿಗೆ ಬೆರೆಸಿದೆ.
ಈ ಗಿಡದಲ್ಲಿ ಕೆಲವು ಶಕ್ತಿಯುತವಾದ ಟ್ರಿಪ್ಟಾಮೈನ್ ಗಳು ಇವೆ,
ಬ್ರೈನ್ ಸೆರೋಟೋನಿನ್ ಗೆ ಅತಿ ಹತ್ತಿರ, ಡೈ ಮೀಥೈಲ್ ಟ್ರಿಪ್ಟಾಮೈನ್ -
5-ಮೆಥಾಕ್ಸಿಡೈಮೀಥೈಲ್ ಟ್ರಿಪ್ಟಾಮೈನ್.
ನೀವು ತಮ್ಮ ಮೂಗಿಗೆ ನಶ್ಯ ಏರಿಸುತ್ತಿರುವ
ಯನೊಮಾಮಿಯನ್ನು ಯಾವಾಗಲಾದರೂ ನೋಡಿದ್ದೀರ,
ಅದನ್ನು ವಿಭಿನ್ನ ತಳಿಗಳಿಂದ ಮಾಡುತ್ತಾರೆ
ಅದರಲ್ಲಿ ಮೆಥಾಕ್ಸಿಡೈಮೀಥೈಲ್ ಟ್ರಿಪ್ಟಾಮೈನ್ ಕೂಡ ಇರುತ್ತದೆ.
ಆ ಪುಡಿಯನ್ನು ಮೂಗಿಗೇರಿಸುವುದೆಂದರೆ
ಬಂದೂಕಿನ ಗುಂಡು ಹೊಡೆದುಕೊಂಡಂತೆಯೇ,
ಬೊರೊಕ್ಯು ಪೈಂಟಿಂಗ್ಗಳನ್ನು ಸವರಿಕೊಂಡು ವಿದ್ಯುಚ್ಚಕ್ತಿಯ ಸಾಗರದಲ್ಲಿ ಬಿದ್ದಂತೆ. (ನಗು)
ಅದು ವಾಸ್ತವಿಕತೆಯನ್ನು ವಿರೂಪಗೊಳಿಸುವುದಿಲ್ಲ;
ಅದು ವಾಸ್ತವಿಕತೆಯನ್ನು ಕರಗಿಸುತ್ತದೆ.
ಹೇಳಬೇಕೆಂದರೆ, ನನ್ನ ಪ್ರೊಫೆಸರ್ ರಿಚರ್ಡ್ ಇವಾನ್ ಶುಲ್ಟ್ಸ್ ಜೊತೆ ನಾನು ವಾದಿಸುತ್ತಿದ್ದೆ --
ಈ ವ್ಯಕ್ತಿ ವಿಸ್ಮಯಕಾರಿ ನಾಯಿಕೊಡೆ ಕಂಡುಹಿಡಿಯುವುದರೊಂದಿಗೆ
1930ರಲ್ಲಿ ಮೆಕ್ಸಿಕೋದಲ್ಲಿ
ಸೈಕೆಡೆಲಿಕ್ ಯುಗದ ಕಿಡಿ ಹೊತ್ತಿಸಿದರು.
ಈ ಟ್ರಿಪ್ಟಾಮೈನುಗಳನ್ನು ಭ್ರಮೆ ಹುಟ್ಟಿಸುವ ವಸ್ತುಗಳು ಎಂದು ವಿಭಾಗ
ಮಾಡಲಾಗುವುದಿಲ್ಲವೆಂದು ನಾನು ವಾದಿಸುತ್ತಿದ್ದೆ, ಏಕೆಂದರೆ ನೀವು ಅದರ ಪ್ರಭಾವಕ್ಕೆ
ಒಳಗಾಗುವ ಹೊತ್ತಿಗೆ ಅದನ್ನು ಅನುಭವಿಸಲು ಮನೆಯಲ್ಲಿ ಯಾರೂ ಇರುವುದಿಲ್ಲ.(ನಗು)
ಆದರೆ, ಟ್ರಿಪ್ಟಾಮೈನುಗಳ ಲಕ್ಷಣವೆಂದರೆ ಅವನ್ನು ಬಾಯಿಯ ಮೂಲಕ ಸೇವಿಸಲಾಗದು
ಏಕೆಂದರೆ, ಒಂದು ಕಿಣ್ವ ಉಪಯೋಗಿಸಿ ಅದರ ಸ್ವಭಾವ ಬದಲಾವಣೆ ಮಾಡಲಾಗಿರುತ್ತದೆ,
ಈ ಕಿಣ್ವ ನೈಸರ್ಗಿಕವಾಗಿ ಮಾನೋಮೈನ್ ಆಕ್ಸಿಡೇಸ್ ಎಂದು ಕರೆಯುವ ವಸ್ತು ಮನುಷ್ಯರ ಕರುಳಿನಲ್ಲಿರುತ್ತದೆ.
MAOದ ಸ್ವಭಾವವನ್ನು ಬದಲಾಯಿಸುವ ಬೇರೊಂದು ರಾಸಾಯನಿಕ ವಸ್ತುವಿನ ಜೊತೆಯಲ್ಲಿ
ಇದನ್ನು ಬಾಯಿಯ ಮೂಲಕ ಸೇವಿಸಬಹುದು.
ಈಗ, ವಿಸ್ಮಯಕಾರಿ ಅಂಶಗಳೆಂದರೆ
ಲಿಯಾನಾದಲ್ಲಿ ದೊರೆಯುವ ಬೀಟಾ-ಕಾರ್ಬೊಲೈನ್ಗಳು
ನಿರ್ದಿಷ್ಟ ವಿಧದ ಟ್ರಿಪ್ಟಾಮೈನ್ ನ್ನು ಶಕ್ತಿಯುತಗೊಳಿಸಲು
ಅಗತ್ಯವಿರುವ MAO ಅವರೋಧಕಗಳು. ಈಗ, ನೀವು ನಿಮ್ಮಲ್ಲೇ ಒಂದು ಪ್ರಶ್ನೆ ಮಾಡಿ.
80:00 ವಿಧದ ದಟ್ಟವಾದ ಸಸ್ಯವರ್ಗದಲ್ಲಿ
ಸಸ್ಯ ಸ್ವರೂಪದ ಸಂಬಂಧವಿಲ್ಲದ ಈ ಎರಡು ಗಿಡಗಳನ್ನು ಈ ಜನ
ಈ ಒಂದು ನಿರ್ದಿಷ್ಟ ರೀತಿಯಲ್ಲಿ ಬೆರೆಸಿದರೆ
ಒಂದು ರೀತಿಯ ಜೈವರಾಸಾಯನಿಕ ವಿಧ ಉತ್ಪತ್ತಿಯಾಗುವುದು ಎಂಬುದನ್ನು ಹೇಗೆ ಕಂಡುಹಿಡಿದರು,
ಪ್ರತ್ಯೇಕ ಭಾಗಗಳ ಮೊತ್ತಕ್ಕಿಂತ ಸಂಪೂರ್ಣ ವಸ್ತುವಿನ ಮೊತ್ತ ಹೆಚ್ಚೆ?
ಇದಕ್ಕೆ, ಅರ್ಥಹೀನವೆಂದು ನಿರ್ಧಾರವಾಗಿರುವ ಸೌಮ್ಯೋಕ್ತಿ
ತಪ್ಪು-ಒಪ್ಪು ವಿಧಾನ ಉಪಯೋಗಿಸುತ್ತೇವೆ.
ಆದರೆ, ನೀವು ಭಾರತೀಯರನ್ನು ಕೇಳಿ, ಅವರು ಹೇಳುತ್ತಾರೆ, "ಸಸ್ಯಗಳು ನಮ್ಮೊಂದಿಗೆ ಮಾತಾಡುತ್ತವೆ."
ಹಾಗಾದರೆ, ಇದರ ಅರ್ಥವೇನು?
ಈ ಜನಾಂಗ, ಕೋಫನ್, 17 ವಿಧದ ಅಯಾಹೌಸ್ಕಾ ಹೊಂದಿದ್ದಾರೆ
ಇವೆಲ್ಲವನ್ನೂ ಅವರು ಕಾಡಿನಲ್ಲಿ ಸಾಕಷ್ಟು ದೂರದಿಂದಲೇ ಗುರುತಿಸುತ್ತಾರೆ,
ಎಲ್ಲವೂ ನಮ್ಮ ಕಣ್ಣಿಗೆ ಒಂದೇ ತರಹ ಕಾಣುತ್ತವೆ.
ಹಾಗೂ ಅವರು ಸಸ್ಯಗಳ ವರ್ಗೀಕರಣ ಯಾವ ರೀತಿ ಮಾಡುತ್ತೀರೆಂದು ಕೇಳಿದರೆ
ಅವರು ಹೇಳುತ್ತಾರೆ, "ನಿಮಗೆ ಸಸ್ಯಗಳ ಬಗ್ಗೆ ಸ್ವಲ್ಪ ತಿಳಿದಿದೆಯೆಂದು ನಾನಂದುಕೊಂಡಿದ್ದೆ, ಅಂದರೆ
ನಿಮಗೇನೂ ಗೊತ್ತಿಲ್ಲವೆ?" ನಾನು ಹೇಳಿದೆ "ಇಲ್ಲ."
ಈ 17 ವಿಧದ ಪ್ರತಿ ಸಸ್ಯವನ್ನೂ ಒಂದು ಹುಣ್ಣಿಮೆಯ ರಾತ್ರಿ ತೆಗೆದುಕೊಂಡರೆ
ಒಂದೊಂದು ಬೇರೆ ಬೇರೆ ರಾಗದಲ್ಲಿ ಹಾಡುತ್ತವೆ.
ಈಗ, ಇದು ನಿಮಗೆ ಹಾರ್ವರ್ಡಲ್ಲಿ ಒಂದು Ph.D. ತಂದುಕೊಡುವುದಿಲ್ಲ,
ಆದರೆ, ಇದು ಪುಷ್ಪ ಕೇಸರಗಳನ್ನು ಎಣಿಸುವುದಕ್ಕಿಂತ ಆಸಕ್ತಿದಾಯಕವಾಗಿರುತ್ತದೆ.
ಈಗ,
(ಚಪ್ಪಾಳೆ)
ಈಗಿರುವ ಸಮಸ್ಯೆಯೆಂದರೆ-ಸ್ಥಳೀಯ ಜನರ ಪರಿಸ್ಥಿತಿಯ ಬಗ್ಗೆ
ಅನುಕಂಪ ಇರುವ ನಾವು ಕೂಡ ಅವರನ್ನು
ವಿಲಕ್ಷಣ ಮತ್ತು ರಂಗುರಂಗಾದವೆರೆಂದು
ನೋಡುತ್ತೇವೆ. ಆದರೆ ಅದೇಕೊ ಅವರು ವಾಸ್ತವಿಕ ಪ್ರಪಂಚದ, ಅಂದರೆ ನಾವಿರುವ
ಪ್ರಪಂಚದ ಅಂಚಿಗೆ ತಳ್ಳಲ್ಪಟ್ಟಿದ್ದಾರೆ, ನಮ್ಮ ಪ್ರಪಂಚ ಮಾತ್ರ ಸಾಗುತ್ತಿದೆ.
ಆದರೆ, ಸತ್ಯಸಂಗತಿಯೆಂದರೆ ಈ 20ನೆಯ ಶತಮಾನವನ್ನು, ಇಲ್ಲಿಂದ 300 ವರ್ಷಗಳ ನಂತರ,
ಅದರ ಸಮಯದಲ್ಲಿ ನಡೆದ ಯುದ್ಧಗಳು
ಮತ್ತು ವೈಜ್ಞಾನಿಕ ಅವಿಷ್ಕಾರಗಳಿಗಾಗಿ ಸ್ಮರಿಸುವುದಿಲ್ಲ,
ಆದರೆ ಒಂದು ಯುಗ,
ನಾವು ಜೊತೆಯಲ್ಲಿ ನಿಂತು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ
ಸಾಮೂಹಿಕವಾಗಿ ಆದ ನಾಶವನ್ನು ಅಂಗೀಕರಿಸಿದ ಕಾಲ
ಎಂದು ಸ್ಮರಿಸಲಾಗುತ್ತದೆ. ಈಗ ಸಮಸ್ಯೆ ಬದಲಾವಣೆಯದಲ್ಲ.
ಎಲ್ಲ ಸಂಸ್ಕೃತಿಗಳೂ ಎಲ್ಲ ಸಮಯಗಳಲ್ಲೂ
ಜೀವನದ ನಾಟ್ಯ ಮತ್ತು ಹೊಸ
ಸಾಧ್ಯತೆಗಳಲ್ಲಿ ತೊಡಗಿಸಿಕೊಂಡಿವೆ.
ಹಾಗೆಯೇ ಕೇವಲ ತಂತ್ರಜ್ಞಾನದ ಸಮಸ್ಯೆಯಲ್ಲ.
ಸಿಯೋಕ್ಸ್ ಇಂಡಿಯನ್ನರು ಸಿಯೋಕ್ಸ್ ಆಗಿಯೇ ಉಳಿದರು
ಅವರು ಬಿಲ್ಲು ಬಾಣಗಳನ್ನು ಉಪಯೋಗಿಸುವುದು ಬಿಟ್ಟರೂ ಕೂಡ
ಒಬ್ಬ ಅಮೆರಿಕನ್ ಕುದುರೆ ಮತ್ತು ಗಾಡಿಯನ್ನು
ಬಿಟ್ಟರೂ ಅಮೆರಿಕನ್ ಆಗಿರುವಂತೆ.
ಈ ನರಕುಲ ಮಂಡಲದ ಏಕೀಕರಣಕ್ಕಿರುವ ಭಯ
ಬದಲಾವಣೆ ಅಥವಾ ತಂತ್ರಜ್ಞಾನದ್ದಲ್ಲ. ಅದು ಅಧಿಕಾರ.
ಅಧಿಕಾರ ಲಾಲಸೆಯ ಒರಟು ಮುಖ.
ನೀವು ಯಾವಾಗ ಪ್ರಪಂಚದ ಕಡೆ ಕಣ್ಣು ಹಾಯಿಸಿ ನೋಡಿದರೂ
ಈ ಸಂಸ್ಕೃತಿಗಳು ಅಳಿಸಿಹೋಗುವಂತಹವಾಗಿರಲಿಲ್ಲ ಎಂದು ನಿಮಗೆ ತಿಳಿಯುತ್ತದೆ.
ಇವರೆಲ್ಲಾ ಕ್ರಿಯಾಶೀಲ ಜೀವಂತ ಜನರು,
ಇವರು ಅಳವಡಿಸಿಕೊಳ್ಳಲಾಗದಂತಹ ಆದರೆ ಗುರುತಿಸಬಹುದಾದಂಥ
ಶಕ್ತಿಗಳಿಂದ ಅಸ್ತಿತ್ವ ಕಳೆದುಕೊಂಡವರು
ಅದು ಪೆನನ್ ಮಾತೃಭೂಮಿಯಲ್ಲಿನ
ಘೋರವಾದ ಅರಣ್ಯನಾಶವಾಗಿರಬಹುದು
ದಕ್ಷಿಣ ಪೂರ್ವ ಏಷಿಯಾದ ಸರಾವಕ್ನ ಅಲೆಮಾರಿ ಜನಾಂಗವಿರಬಹುದು --
– ಒಂದು ಶತಮಾನದ ಹಿಂದೆ ಈ ಜನರು ಸ್ವತಂತ್ರವಾಗಿ ಕಾಡಿನಲ್ಲಿ ವಾಸಿಸುತ್ತಿದ್ದರು,
ಹಾಗೂ ಈಗ ಎಲ್ಲರೂ ನದಿ ತೀರಗಳಲ್ಲಿ ದಾಸತ್ವ ಮತ್ತು
ವೇಶ್ಯಾವಾಟಿಕೆಗೆ ಶರಣಾಗಿದ್ದಾರೆ,
ಆ ನದಿಗಳು ಕೆಸರಿನಿಂದ ಕಲುಷಿತವಾಗರುವುದನ್ನು ನೀವು ನೋಡುತ್ತೀರಿ
ಇವು ಅರ್ಧ ಬೋರ್ನಿಯೋವನ್ನು
ದಕ್ಷಿಣ ಚೈನಾ ಸಮುದ್ರಕ್ಕೆ ಸಾಗಿಸುತ್ತಿವೆ,
ಅಲ್ಲಿ ಜಪಾನೀ ಸಾಗಣೆದಾರರು ಅಂಚಿನಲ್ಲಿ ಬೆಳಕನ್ನು ಹೊತ್ತುಕೊಂಡು
ತಮ್ಮ ದೋಣಿಗಳಿಗೆ ಕಾಡಿನ ಮರದ ದಿಮ್ಮಿಗಳನ್ನು ತುಂಬಿಕೊಳ್ಳಲು ಸಿದ್ಧರಾಗಿದ್ದಾರೆ.
ಅಥವಾ, ಯಾನೊಮಾಮಿ ವಿಚಾರದಲ್ಲಿ,
ಉತ್ಪತ್ತಿಯಾಗಿರುವ ರೋಗಕಾರಕಗಳು.
ಚಿನ್ನದ ಅವಿಷ್ಕಾರದ ಸಮಯದಲ್ಲಿ.
ಅಥವಾ, ಟಿಬೆಟಿನ ಪರ್ವತಗಳಿಗೆ ಹೋದರೆ,
ಇಲ್ಲಿ ನಾನು ಈಚೆಗೆ ಸಾಕಷ್ಟು ಸಂಶೋಧನೆಗಳನ್ನು ನಡೆಸುತ್ತಿದ್ದೇನೆ,
ನೀವು ರಾಜಕೀಯ ನಿಯಂತ್ರಣದ ಕ್ರೂರ ಮುಖಗಳನ್ನು ನೋಡುತ್ತೀರ.
ನಿಮಗೆ ತಿಳಿದಿದೆ, ಜನಾಂಗನಾಶ, ದೈಹಿಕವಾಗಿ ಜನಗಳನ್ನು ನಾಶಮಾಡುವುದನ್ನು
ಸಾರ್ವತ್ರಿಕವಾಗಿ ಖಂಡಿಸಲಾಗುತ್ತದೆ, ಆದರೆ ಜನಕುಲನಾಶ,
ಜನಗಳ ಜೀವನರೀತಿಯ ಹತ್ಯೆಯನ್ನು ಖಂಡಿಸುವುದಿರಲಿ,
ಸಾರ್ವತ್ರಿಕವಾಗಿ ಹಲವು ಸ್ತರಗಳಲ್ಲಿ,
ಅಭಿವೃದ್ಧಿಯ ಕಾರ್ಯತಂತ್ರ ಎಂದು ಆಚರಿಸಲಾಗುತ್ತದೆ.
ಹಾಗೆಯೇ ಅದರ ನೆಲಮಟ್ಟದಲ್ಲಿ ಸಂಚರಿಸದಿದ್ದರೆ
ಟಿಬೆಟ್ನ ನೋವು ನೀವು ಅರ್ಥಮಾಡಿಕೊಳ್ಳಲಾಗದು.
ಪಶ್ಚಿಮ ಚೈನಾದ ಚೆಂಗಡುಯಿಂದ ನಾನು ಒಮ್ಮೆ 6:00 ಮೈಲಿಗಳಷ್ಟು ಪ್ರಯಾಣಮಾಡಿದೆ
ನೆಲ ಹಾದಿಯ ಮೂಲಕ ದಕ್ಷಿಣಪೂರ್ವ ಟಿಬೆಟ್ ಮೂಲಕ ಲ್ಹಾಸಾ ತಲುಪಿದೆ
ಒಬ್ಬ ಚಿಕ್ಕವಯಸ್ಸಿನ ಸಹೋದ್ಯೋಗಿಯೊಂದಿಗೆ ಲ್ಹಾಸಾ ತಲುಪಿದ ನಂತರವೇ
ನೀವು ಕೇಳಿಸಿಕೊಳ್ಳುವ ನನಗೆ ಅಂಕಿಅಂಶಗಳ ಹಿಂದಿರುವ
ಸತ್ಯಾಂಶಗಳು ಗೋಚರವಾಯಿತು.
6:00 ಪವಿತ್ರ ಸ್ಮಾರಕಗಳು ನಾಶವಾಗಿ ಬರೀ ಧೂಳು ಮತ್ತು ಬೂದಿಯಾಗಿವೆ.
1.2 ದಶಲಕ್ಷ ಜನರು ಸೇನಾಪಡೆಗಳಿಂದ ಸಂಸ್ಕೃತಿ
ಕ್ರಾಂತಿಯ ಸಮಯದಲ್ಲಿ ಕೊಲ್ಲಲ್ಪಟ್ಟರು.
ಈ ನವಯುವಕನ ತಂದೆಯನ್ನು ಪಂಚೆನ್ ಲಾಮಾಗೆ ಸಮರ್ಪಿಸಲಾಗಿತ್ತು.
ಅಂದರೆ ಅವನನ್ನು ತಕ್ಷಣ ಕೊಲ್ಲಲಾಯಿತು.
ಚೈನಾ ದೇಶ ದಂಡೆತ್ತಿದಾಗ.
ಇವನ ಅಂಕಲ್ ತನ್ನ ಗುರುವಿನೊಂದಿಗೆ ವಲಸೆಹೋಗುವವರ ಜೊತೆಯಲ್ಲಿ
ನೇಪಾಳಕ್ಕೆ ಹೋದನು.
ಅವನ ತಾಯಿಯನ್ನು ಶ್ರೀಮಂತಿಕೆ ಹೊಂದಿರುವ
ಅಪರಾಧಕ್ಕಾಗಿ ಸೆರೆಯಲ್ಲಿರಿಸಲಾಯಿತು.
ಅವನನ್ನು ಎರಡು ವರ್ಷದವನಿದ್ದಾಗ ಅವಳ ಸ್ಕರ್ಟಿನ ಅಡಿಯಲ್ಲಿ
ಜೈಲಿನೊಳಕ್ಕೆ ಗುಟ್ಟಾಗಿ ಸಾಗಿಸಲಾಯಿತು
ಏಕೆಂದರೆ ಅವನಿಲ್ಲದೆ ಅವಳಿಗೆ ಇರಲು ಸಾಧ್ಯವಾಗುತ್ತಿರಲಿಲ್ಲ.
ಈ ಸಾಹಸ ಕೆಲಸ ಮಾಡಿದ ಅವನ ಸೋದರಿಯನ್ನು
ಒಂದು ಶಿಕ್ಷಣ ಶಿಬಿರಕ್ಕೆ ಕಳಿಸಲಾಯಿತು.
ಒಂದು ದಿನ ಅವಳಿಗರಿವಿಲ್ಲದೆ ಮಾವೊನ ತೋಳುಪಟ್ಟಿಯ
ಮೇಲೆ ಕಾಲಿಟ್ಟಳು, ಈ ಉಲ್ಲಂಘನೆಗಾಗಿ
ಅವಳಿಗೆ ಏಳು ವರ್ಷ ಕಠಿಣ ಶಿಕ್ಷೆ ವಿಧಿಸಲಾಯಿತು.
ಟಿಬೆಟ್ನ ನೋವು ಸಹಿಸಲಸಾಧ್ಯ,
ಆದರೆ ಅದರಿಂದ ಹೊರಬಂದಿರುವ ಜನರ ಚೈತನ್ಯ ಅಸಾಧಾರಣವಾದದ್ದು.
ಅಂತ್ಯದಲ್ಲಿ, ವಾಸ್ತವವಾಗಿ ಅದೊಂದು ಆಯ್ಕೆ.
ನಾವು ಒಂದು ವೈವಿಧ್ಯವಿಲ್ಲದ ಏಕವರ್ಣದ ಪ್ರಪಂಚದಲ್ಲಿರಬೇಕೋ
ಅಥವಾ ಬಹುಬಣ್ಣದ ವಿಭಿನ್ನತೆಯಿಂದ ಕೂಡಿದ ವಿಶ್ವವನ್ನು ಅಪ್ಪಿಕೊಳ್ಳಬೇಕೋ?
ಮಾರ್ಗರೇಟ್ ಮೀಡ್, ವಿಖ್ಯಾತ ಮಾನವಶಾಸ್ತ್ರಜ್ಞೆ, ತಾವು ಸಾಯುವ ಮೊದಲು ಹೀಗೆ ಹೇಳಿದ್ದಾರೆ,
ಅವರ ಭಯವೆಂದರೆ ನಾವು ಈ ನಯವಾದ ಆಕಾರವಿಲ್ಲದ
ಜಾತಿವಿಶಿಷ್ಟ ಪ್ರಪಂಚ ದೃಷ್ಟಿಹೊಂದಿದರೆ
ನಾವು ಮಾನವನ ಆಲೋಚನೆ ಅಂತರದ ಸಂಕುಚಿತ ಭಾವನೆಗಳ
ವಿನ್ಯಾಸಕ್ಕೆ ಇಳಿಯುವುದಲ್ಲದೆ,
ಇತರ ಸಾಧ್ಯತೆಗಳು ಎಲ್ಲಿವೆ ಎಂಬುದನ್ನು ಮರೆತೆವಲ್ಲವೆ ಎಂದು ಒಂದು
ದಿನ ನಮ್ಮಕನಸಿನಿಂದ ಎಚ್ಚೆತ್ತು ಅಂದುಕೊಳ್ಳುತ್ತೇವೆ.
ಹಾಗೂ, ನಮ್ಮ ಸಂತತಿ ಸುಮಾರು 1,50:00 ವರ್ಷಗಳಿಂದ ಅಸ್ತಿತ್ವದಲ್ಲಿದೆಯೆಂಬುದನ್ನು
ದೈನ್ಯದಿಂದ ನೆನಪಿಸಿಕೊಳ್ಳಬೇಕು.
ನವ ಶಿಲಾಯುಗ -- ನಮಗೆ ಕೃಷಿಯನ್ನು ಕೊಟ್ಟಿತು
ಆ ಸಮಯದಲ್ಲಿ ನಾವು ಬೀಜದ ಭಕ್ತಿಗೆ ಸೋತುಹೋದೆವು,
ಶಮನ್ ಗೀತೆಗಳನ್ನು ಪದಚ್ಯುತಿಗೊಳಿಸಿ
ಪೌರೋಹಿತ್ಯದ ಪಾಠವನ್ನು ಅಪ್ಪಿಕೊಂಡೆವು,
ನಾವು ಪ್ರಧಾನ ಮಠಾಧಿಪತಿಗಳ ವೈಶಿಷ್ಟ್ಯತೆ ಬೆಳೆಸಿದೆವು --
ಅದು ಕೇವಲ 10:00 ವರ್ಷಗಳ ಹಿಂದೆ.
ಈ ನೂತನ ಕೈಗಾರಿಕಾ ಪ್ರಪಂಚ ನಮಗೆ ತಿಳಿದಂತೆ
ಕೇವಲ 300 ವರ್ಷಗಳು ಹಳೆಯದು.
ಈಗ, ಆ ಖಾಲಿ ಚರಿತ್ರೆ ನನಗೆ ಸೂಚಿಸುವುದಿಲ್ಲ
ಮುಂಬರುವ ಶತಮಾನದಲ್ಲಿ ನಾವು ಎದುರಿಸಬಹುದಾದ
ಎಲ್ಲ ಸವಾಲುಗಳಿಗೂ ಎಲ್ಲ ಉತ್ತರಗಳೂ ಇವೆಯೆಂದು.
ಪ್ರಪಂಚದ ಈ ಅಸಂಖ್ಯಾತ ಸಂಸ್ಕೃತಿಗಳು
ಮಾನವೀಯತೆಯ ಅರ್ಥ ಏನೆಂದು ಕೇಳಿದಾಗ
ಅವು, 10:00 ವಿಭಿನ್ನ ದನಿಗಳಲ್ಲಿ ಉತ್ತರಿಸುತ್ತವೆ
ಹಾಗೂ ಆ ಗೀತೆಯ ಒಳಗೆ ನಾವು ಸಾಧ್ಯತೆಯನ್ನು ಕಂಡುಕೊಳ್ಳುತ್ತೇವೆ
ನಾವು ಏನು ಎಂದು: ಸಂಪೂರ್ಣವಾಗಿ ಜ್ಞಾನದಿಂದ ಕೂಡಿದ ಸಂತತಿ,
ಎಲ್ಲ ಜನಗಳೂ ಮತ್ತು ಎಲ್ಲ ತೋಟಗಳು ವಿಕಾಸ ಹೊಂದಲು
ದಾರಿ ಕಂಡುಕೊಳ್ಳುತ್ತವೆ . ಹಾಗೆಯೇ ಆಶಾವಾದದ ಉತ್ಕೃಷ್ಟ ಕ್ಷಣಗಳೂ ಇವೆ.
ಈ ಫೋಟೊ ನಾನು ಬಾಫಿನ್ ದ್ವೀಪದ ಉತ್ತರ ತುದಿಯಲ್ಲಿ ತೆಗೆದದ್ದು
ಕೆಲವು ಇನ್ಯೂಟ್ ಜನಗಳ ಜೊತೆ ಬೇಟೆಗೆ ಹೋದಾಗ,
ಹಾಗೂ ಈ ಮನುಷ್ಯ, ಒಲಾಯುಕ್, ತನ್ನ ತಾತನ ಅದ್ಭುತವಾದ ಕಥೆಯನ್ನು ಹೇಳಿದ.
ಕೆನಡಾದ ಸರ್ಕಾರ ಯಾವಾಗಲೂ ದಯಾಮಯಿಯಲ್ಲ
ಇನ್ಯೂಟ್ ಜನರಿಗೆ, ಹಾಗೂ 1950ರ ದಶಕದಲ್ಲಿ
ನಮ್ಮ ಸಾರ್ವಭೌಮತ್ವ ಸ್ಥಾಪಿಸಲು, ಅವರನ್ನು ವಸಾಹತುಗಳಲ್ಲಿರಲು ನಾವು ಒತ್ತಾಯಿಸಿದೆವು.
ಈ ಮುದಿ ವ್ಯಕ್ತಿಯ ತಾತ ಹೋಗಲು ನಿರಾಕರಿಸಿದ.
ಅವನ ಕುಟುಂಬ, ಅವನ ಜೀವಕ್ಕೆ ಅಪಾಯ ಬರಬಹುದೆಂದು, ಅವನ ಎಲ್ಲ ಆಯುಧಗಳನ್ನೂ ಕೊಂಡೊಯ್ದರು,
ಅವನ ಎಲ್ಲ ಸಲಕರಣೆಗಳನ್ನೂ ಕೂಡ.
ಈಗ, ನಿಮಗೆ ತಿಳಿದಿದೆ ಇನ್ಯೂಟ್ಗಳಿಗೆ ಛಳಿಯ ಭಯವಿಲ್ಲ;
ಅವರು ಅದರ ಅವಕಾಶವನ್ನು ತೆಗೆದುಕೊಂಡರು.
ಅವರ ವಾಹನದ ಹಾಸನ್ನು ಮೂಲತಃ ಮೀನಿನಿಂದ ಮಾಡಲಾಗಿತ್ತು
ಜಿಂಕೆಯ ಚರ್ಮದಲ್ಲಿ ಸುತ್ತಿ.
ಆದರೆ, ಈ ವ್ಯಕ್ತಿಯ ತಾತ ಉತ್ತರ ಧೃವದ ರಾತ್ರಿಯಿಂದ ವಿಚಲಿತನಾಗಲಿಲ್ಲ
ಅಥವಾ ಹಿಮದ ಬಿರುಗಾಳಿಗೂ ಅಂಜಲಿಲ್ಲ.
ಸುಮ್ಮನೆ ಹೊರಕ್ಕೆ ಹೊರಟ, ತನ್ನ ಸೀಲ್ ಚರ್ಮದ ಪ್ಯಾಂಟನ್ನು ಬಿಚ್ಚಿದ
ತನ್ನ ಕೈಮೇಲೆ ಮಲವಿಸರ್ಜನೆ ಮಾಡಿಕೊಂಡ. ಈ ಮಲ ಮಂಜುಗಡ್ಡೆಯಾಗುತ್ತಿದ್ದಂತೆ
ಅದನ್ನು ಒಂದು ಚೂಪಾದ ಕತ್ತಿಯ ಆಕಾರ ಮಾಡಿದ.
ಈ ಮಲದ ಕತ್ತಿಯಮೇಲೆ ತನ್ನ ಎಂಜಲನ್ನು ಅದರ ಚೂಪಾದ ಭಾಗಕ್ಕೆ ಸವರಿದ
ಹಾಗೂ ಅದು ಪೂರ್ತಿ ಗಟ್ಟಿಯಾದ ನಂತರ ಅದರಿಂದ ಒಂದು ನಾಯಿಯ ಕತ್ತು ಕತ್ತರಿಸಿದ.
ನಾಯಿಯ ಚರ್ಮ ಸುಲಿದು ಒಂದು ಕವಚ ತಯಾರುಮಾಡಿದ
ಅದರ ಎದೆಗೂಡಿನಿಂದ ಮಂಜುಗಡ್ಡೆಯ ಮೇಲೆ ಚಲಿಸುವ ಸಾಧನ ಮಾಡಿದ
ಪಕ್ಕದಲ್ಲಿದ್ದ ಮತ್ತೊಂದು ನಾಯಿಯನ್ನು ಹೊತ್ತು
ಮಂಜುಗಡ್ಡೆಗಳ ಮೇಲೆ ತಪ್ಪಿಸಿಕೊಂಡ, ಸೊಂಟದ ಬೆಲ್ಟಿನಲ್ಲಿ ಮಲದ ಕತ್ತಿಯಿಟ್ಟುಕೊಂಡು.
ಏನೂ ಇಲ್ಲದೆ ಇರುವುದು ಹೇಗೆ ಎಂದುಕೊಳ್ಳುತ್ತೇವೆ. (ನಗು)
ಇದು, ಹಲವು ವಿಧಗಳಲ್ಲಿ ಸಾಧ್ಯ.
(ಚಪ್ಪಾಳೆ)
ಇದು ಇನ್ಯೂಟ್ ಜನರಲ್ಲಿನ ಚೈತನ್ಯದ ಪ್ರತೀಕ
ಹಾಗೂ ಪ್ರಪಂಚದ ಎಲ್ಲ ಮೂಲನಿವಾಸಿಗಳ ಶಕ್ತಿಯ ಪ್ರತೀಕ.
ಏಪ್ರಿಲ್ 1999ರಲ್ಲಿ ಕೆನಡಾದ ಸರ್ಕಾರ
ಇನ್ಯೂಟ್ನ ಪೂರ್ತಿ ನಿಯಂತ್ರಣ ಹಿಂದಿರುಗಿಸಿತು
ಕ್ಯಾಲಿಫೋರ್ನಿಯಾ ಮತ್ತು ಟೆಕ್ಸಾಸ್ ಎರಡರ ಒಟ್ಟು ವಿಸ್ತಾರಕ್ಕಿಂತ ಇನ್ನೂ ಹೆಚ್ಚು ಭೂಮಿ.
ಅದು ನಮ್ಮ ಹೊಸ ಮಾತೃಭೂಮಿ. ಅದನ್ನು ನುನಾವುಟ್ ಎನ್ನುತ್ತೇವೆ.
ಅದೊಂದು ಸ್ವತಂತ್ರ ಆಡಳಿತ ಪ್ರದೇಶ. ಅವರು ಎಲ್ಲ ಖನಿಜ ಸಂಪತ್ತನ್ನೂ ನಿಯಂತ್ರಿಸುತ್ತಾರೆ.
ಒಂದು ಆಶ್ಚರ್ಯಕರ ಉದಾಹರಣೆಯೆಂದರೆ ಒಂದು ದೇಶ
ಹೇಗೆ ತನ್ನ ಜನತೆಯನ್ನು ಸಮೀಪಿಸಿ ಅವರಿಗೆ ಮತ್ತೆ ತಮ್ಮ ನೆಲೆಯನ್ನು ವಹಿಸಿಕೊಡುವುದು.
ಅಂತ್ಯದಲ್ಲಿ, ನನಗನ್ನಿಸುತ್ತದೆ,
ಪ್ರಯಾಣ ಬೆಳೆಸಿರುವ ನಮ್ಮೆಲ್ಲರ ಮಟ್ಟಿಗೆ
ಈ ಗ್ರಹದ ಮೂಲೆಗಳಲ್ಲಿ ಸಂಚರಿಸಿದವರಿಗೆ
ಅವುಗಳು ಬಹುದೂರವಲ್ಲ ಎಂದು ಅರಿವಾಗುತ್ತದೆ.
ಅವೆಲ್ಲ ಯಾರೋ ಒಬ್ಬರ ಮಾತೃಭೂಮಿ.
ಅವು ಮಾನವನ ಆಲೋಚನೆಯ ಶಾಖೆಗಳನ್ನು ಪ್ರತಿನಿಧಿಸುತ್ತವೆ.
ಅದು ಕಾಲದ ಪ್ರಾರಂಭದಷ್ಟು ಹಳೆಯದು. ಮತ್ತೆ ನಾವೆಲ್ಲರೂ
ಈ ಮಕ್ಕಳ ಕನಸುಗಳು, ನಮ್ಮ ಸ್ವಂತ ಮಕ್ಕಳ ಕನಸುಗಳಂತೆ,
ನಗ್ನ ಭೂಗೋಳದ ಆಶಾವಾದದ ಭಾಗವಾಗುತ್ತೇವೆ.
ಆದ್ದರಿಂದ, ನ್ಯಾಶನಲ್ ಜಿಯಾಗ್ರಾಫಿಕ್ನಲ್ಲಿ ನಾವೇನು ಮಾಡುತ್ತಿದ್ದೇವೆಂದರೆ
ನಮ್ಮ ಪ್ರಕಾರ ರಾಜಕೀಯ ವ್ಯಕ್ತಿಗಳು
ವಾದವಿವಾದವನ್ನು ಬಿಟ್ಟು ಏನನ್ನೂ ಸಾಧಿಸುವುದಿಲ್ಲ. --
(ಚಪ್ಪಾಳೆ)
ವಾದವಿವಾದ ಏನನ್ನೂ ಸಾಧಿಸುವುದಿಲ್ಲ ಎಂದು ನಮ್ಮ ಅನಿಸಿಕೆ,
ಆದರೆ, ಕಥೆ ಹೇಳುವುದರಿಂದ ಪ್ರಪಂಚವನ್ನು ಬದಲಾಯಿಸಬಹುದು
ಆದ್ದರಿಂದ ಕಥೆ ಹೇಳುವುದರಲ್ಲಿ ನಮ್ಮ ಸಂಸ್ಥೆ ಅತ್ಯುತ್ತಮ
ಪ್ರಪಂಚದಲ್ಲಿಯೇ. ನಮ್ಮ ವೆಬ್ ಸೈಟ್ ತಿಂಗಳಿಗೆ 35 ದಶಲಕ್ಷ ಭೇಟಿಗಳನ್ನು ನೋಡುತ್ತದೆ.
ನಮ್ಮ ಟೆಲಿವಿಶನ್ ಚಾನಲ್ ನ್ನು 156 ದೇಶಗಳು ಬಿತ್ತರಿಸುತ್ತವೆ.
ಲಕ್ಷಾಂತರ ಜನ ನಮ್ಮ ಪತ್ರಿಕೆಯನ್ನು ಓದುತ್ತಾರೆ.
ಮತ್ತು ನಾವು ಮಾಡುತ್ತಿರುವುದೇನೆಂದರೆ ಗಂಭೀರ ಪ್ರವಾಸಗಳು
ನರಕುಲ ಮಂಡಲಕ್ಕೆ ನಮ್ಮ ವೀಕ್ಷಕರನ್ನು ಕರೆದೊಯ್ಯುತ್ತೇವೆ
ಸಾಂಸ್ಕೃತಿಕ ವೈವಿಧ್ಯತೆಗಳ ತಾಣಕ್ಕೆ
ತಾವು ನೋಡುವ ದೃಶ್ಯಗಳಿಂದ
ಅವರು ವಿಸ್ಮಯರಾಗುತ್ತಾರೆ, ಹಾಗೂ ಆಶೆಯಿದೆ,
ಒಬ್ಬರಾದ ಮೇಲೊಬ್ಬರು, ನಿಧಾನವಾಗಿ
ಮಾನವಶಾಸ್ತ್ರದ ಕೇಂದ್ರ ಅಂತರ್ಜ್ಞಾನವನ್ನು ಅಪ್ಪಿಕೊಳ್ಳುತ್ತಾರೆ:
ಈ ಪ್ರಪಂಚ ವಿಭಿನ್ನ ರೀತಿಯಲ್ಲಿ ಅಸ್ತಿತ್ವದಲ್ಲಿರಲು ಅರ್ಹವಾಗಿದೆ,
ನಾವು ಇಲ್ಲಿ ವಾಸಿಸಲು ದಾರಿ ಹುಡುಕಿಕೊಳ್ಳುತ್ತೇವೆ
ನೈಜವಾದ ಬಹುಸಂಸ್ಕೃತಿಯ ಬಹುತತ್ವ ಪ್ರಪಂಚದಲ್ಲಿ
ಎಲ್ಲಾ ಜನರ ಎಲ್ಲಾ ವಿವೇಕ
ನಮ್ಮೆಲ್ಲರ ಸಾಮುದಾಯಿಕ ಯೋಗಕ್ಷೇಮಕ್ಕೆ ನೆರವಾಗುತ್ತದೆ.
ನಿಮಗೆ ಧನ್ಯವಾದಗಳು.
(ಚಪ್ಪಾಳೆ)