WEBVTT 00:00:00.000 --> 00:00:03.000 ನಿಮಗೆ ಗೊತ್ತಾ ಪ್ರಯಾಣದ ಒಂದು ಅತೀವ ಆನಂದ ಮತ್ತು 00:00:03.000 --> 00:00:05.000 ಮಾನವ ಕುಲದ ಸಂಶೋಧನೆಯಲ್ಲಿ ದೊರಕುವ ಒಂದು ಹರ್ಷವೆಂದರೆ 00:00:05.000 --> 00:00:07.000 ಯಾರು ತಮ್ಮ ಹಿಂದಿನ ರೀತಿಗಳನ್ನು ಮರೆತಿಲ್ಲವೊ 00:00:07.000 --> 00:00:09.000 ಯಾರು ತಮ್ಮ ಹಿಂದಿನ ಬದುಕನ್ನು ಬೀಸುವ ಗಾಳಿಯಲ್ಲಿ ಅನುಭವಿಸುತ್ತಾರೊ, 00:00:09.000 --> 00:00:12.000 ಮಳೆಯಿಂದ ಹಸನಾದ ಕಲ್ಲಿನ ಸ್ಪರ್ಶದಲ್ಲಿ ಕಾಣುತ್ತಾರೊ 00:00:12.000 --> 00:00:15.000 ಗಿಡಗಳ ಕಹಿ ಎಲೆಗಳಲ್ಲಿ ಅದನ್ನು ಸವಿಯುತ್ತಾರೊ 00:00:15.000 --> 00:00:17.000 ಅಂಥವರೊಂದಿಗೆ ಬದುಕುವ ಅವಕಾಶ ದೊರೆಯುವುದು. 00:00:17.000 --> 00:00:21.000 ಜಾಗ್ವಾರ್ ಶಮನ್ ಗಳು ಈಗಲೂ ಆಕಾಶಗಂಗೆಯಾಚೆ ಸಂಚರಿಸುತ್ತಾರೆಂದು ತಿಳಿಯಲು 00:00:21.000 --> 00:00:25.000 ಅಥವಾ ಇನ್ಯೂಟ್ ಹಿರಿಯರು ಇನ್ನೂ ದಂತಕಥೆಗಳಿಗೆ ಅರ್ಥ ಮಾರ್ದನಿಸುವುದು 00:00:25.000 --> 00:00:27.000 ಅಥವಾ ಹಿಮಾಲಯದಲ್ಲಿ 00:00:28.000 --> 00:00:32.000 ಬೌದ್ಧರು ಈಗಲೂ ಧರ್ಮದ ಉಸಿರನ್ನು ಬೆಂಬತ್ತಿರುವುದು 00:00:32.000 --> 00:00:35.000 ಇವೆಲ್ಲ, ಮಾನವಶಾಸ್ತ್ರದ ಅಂತರ್ಜ್ಞಾನವನ್ನು ನೆನಪಿಸಿಕೊಳ್ಳುವುದು, 00:00:35.000 --> 00:00:37.000 ಹಾಗೂ ಇದರ ಕೇಂದ್ರ ವಿಚಾರವೆಂದರೆ ನಾವು ಜೀವಿಸುತ್ತಿರುವ ಪ್ರಪಂಚ 00:00:38.000 --> 00:00:40.000 ಯಾವುದೋ ಒಂದು ನಿರಂಕುಶ ಅಸ್ತಿತ್ವದಲ್ಲಿಲ್ಲ 00:00:40.000 --> 00:00:41.000 ಆದರೆ ಅದು ಅಸ್ತಿತ್ವದ ಒಂದು ಮಾದರಿ ಮಾತ್ರ, 00:00:41.000 --> 00:00:45.000 ಒಂದು ಗೊತ್ತಾದ ಹೊಂದಾಣಿಕೆ ಆಯ್ಕೆಗಳ ಕೂಟದ ಪರಿಣಾಮ 00:00:45.000 --> 00:00:49.000 ಹಲವು ತಲೆಮಾರುಗಳ ಹಿಂದೆ ಅದು ಹೇಗೋ ಯಶಸ್ವಿಯಾಗಿ ನಮ್ಮ ಸಂತತಿ ತಲೆಯೆತ್ತಿತು. NOTE Paragraph 00:00:50.000 --> 00:00:54.000 ಮತ್ತು, ನಾವೆಲ್ಲಾ ಅದೇ ಹೊಂದಾಣಿಕೆ ವಿಧಾಯಕಗಳನ್ನು ಹಂಚಿಕೊಳ್ಳುತ್ತೇವೆ 00:00:54.000 --> 00:00:56.000 ನಾವೆಲ್ಲ ಹುಟ್ಟಿದ್ದೇವೆ. ನಾವು ನಮ್ಮ ಮಕ್ಕಳನ್ನು ಪ್ರಪಂಚಕ್ಕೆ ತರುತ್ತೇವೆ. 00:00:56.000 --> 00:00:58.000 ನಾವೆಲ್ಲ ದೀಕ್ಷಾ ವಿಧಿಗಳನ್ನು ಉಪಕ್ರಮಿಸುತ್ತೇವೆ. 00:00:58.000 --> 00:01:00.000 ನಾವೆಲ್ಲ ಸಾವಿನಿಂದ ಸಂಭವಿಸುವ ಅಗಲಿಕೆಯ ನಿಷ್ಟುರತೆಯನ್ನು ಎದುರಿಸಬೇಕಾಗಿದೆ, 00:01:00.000 --> 00:01:04.000 ಹಾಗಾಗಿ, ನಾವು ಹಾಡುವುದು, ಕುಣಿಯುವುದು ನಮಗೆ ಆಶ್ಚರ್ಯ ತರುವುದಿಲ್ಲ 00:01:04.000 --> 00:01:06.000 ನಮ್ಮೆಲ್ಲರಲ್ಲಿ ಕಲೆ ಇದೆ. NOTE Paragraph 00:01:06.000 --> 00:01:09.000 ಆದರೆ, ಇಲ್ಲಿ ಆಸಕ್ತಿಕರ ಅಂಶವೆಂದರೆ ಗೀತೆಯ ಸ್ವರಗತಿಯ ವಿಶಿಷ್ಟತೆ, 00:01:09.000 --> 00:01:11.000 ಪ್ರತೀ ಸಂಸ್ಕೃತಿಯಲ್ಲೂ ನಾಟ್ಯದ ಲಯ. 00:01:11.000 --> 00:01:14.000 ಅದು ಬೋರ್ನಿಯೊ ಕಾಡುಗಳಲ್ಲಿನ ಪೆನನ್ ಆಗಿರಬಹುದು, 00:01:14.000 --> 00:01:17.000 ಅಥವಾ ಹೈಟಿಯಲ್ಲಿ ಒಬ್ಬ ಊಡೂ ಅನುಚರನದ್ದಾಗಿರಬಹುದು 00:01:18.000 --> 00:01:22.000 ಅಥವಾ ಉತ್ತರ ಕೇನ್ಯಾದ ಕೈಸೂಟ್ ಮರುಭೂಮಿಯಲ್ಲಿ ಯೋಧರ ನಡಿಗೆಯಾಗಿರಬಹುದು 00:01:24.000 --> 00:01:26.000 ಯಾಂಡೇಸ್ ಪರ್ವತಗಳಲ್ಲಿನ ಕೊರಾಂಡರೋಸ್, 00:01:27.000 --> 00:01:32.000 ಅಥವಾ ಸಹಾರ ಮರುಭೂಮಿಯ ಮಧ್ಯದಲ್ಲಿರುವ ತಂಗುದಾಣ. 00:01:32.000 --> 00:01:34.000 ಪ್ರಾಸಂಗಿಕವಾಗಿ ಮರುಭೂಮಿಯಲ್ಲಿ ನನ್ನೊಂದಿಗೆ ಪ್ರಯಾಣ ಮಾಡಿದ ವ್ಯಕ್ತಿ 00:01:34.000 --> 00:01:35.000 ಒಂದು ತಿಂಗಳ ಹಿಂದೆ, 00:01:35.000 --> 00:01:38.000 ಅಥವಾ ಕ್ವೊಮೊಲಾಂಗ್ಮಾದ ಇಳಿಜಾರುಗಳಲ್ಲಿ ಚಮರಿಮೃಗ ಮೇಯಿಸುವ ಒಬ್ಬ, 00:01:38.000 --> 00:01:40.000 ಎವರೆಸ್ಟ್, ಪ್ರಪಂಚದ ದೈವಮಾತೆ. NOTE Paragraph 00:01:40.000 --> 00:01:43.000 ಈ ಎಲ್ಲ ಜನರೂ ನಾವು ಇತರ ರೀತಿಗಳಲ್ಲಿ ಜೀವಿಸಬಹುದೆಂದು ಬೋಧಿಸುತ್ತಾರೆ, 00:01:43.000 --> 00:01:44.000 ಇತರ ರೀತಿಯಲ್ಲಿ ಯೋಚಿಸಬಹುದೆಂದು, 00:01:44.000 --> 00:01:46.000 ಇತರ ರೀತಿಗಳಲ್ಲಿ ನಿಮ್ಮನ್ನು ನೀವು ಈ ಪೃಥ್ವಿಯ ಮೇಲೆ ಉತ್ತೇಜಿಸಿಕೊಳ್ಳಬಹುದೆಂದು. 00:01:46.000 --> 00:01:48.000 ನೀವು ಅದರ ಬಗ್ಗೆ ಯೋಚಿಸಿದರೆ, ಅದೊಂದು ಕಲ್ಪನೆ, 00:01:48.000 --> 00:01:50.000 ನಿಮ್ಮಲ್ಲಿ ಆಶಾಭಾವನೆಯನ್ನು ತುಂಬಬಹುದು. 00:01:50.000 --> 00:01:53.000 ಈಗ, ಪ್ರಪಂಚದ ಅಸಂಖ್ಯಾತ ಸಂಸ್ಕೃತಿಗಳು ಒಟ್ಟುಗೂಡಿ 00:01:53.000 --> 00:01:57.000 ಒಂದು ಅಧ್ಯಾತ್ಮಿಕ ಜೀವನ ಮತ್ತು ಸಾಂಸ್ಕೃತಿಕ ಜೀವನದ ಬಲೆ ನೇಯುತ್ತವೆ 00:01:57.000 --> 00:01:59.000 ಅದು ಇಡೀ ಗ್ರಹವನ್ನೇ ಆವರಿಸುತ್ತದೆ, 00:01:59.000 --> 00:02:01.000 ಹಾಗೂ ಇದು ಈ ಗ್ರಹದ ಯೋಗ-ಕ್ಷೇಮಕ್ಕೆ ಬಹಳ ಮುಖ್ಯ 00:02:01.000 --> 00:02:04.000 ಅದು ಜೀವನದ ಜೈವಿಕ ಬಲೆ, ಜೈವಿಕ ಮಂಡಲ ಎಂಬುದು ನಿಮಗೆ ತಿಳಿದಿದೆ. 00:02:04.000 --> 00:02:07.000 ಹಾಗೂ ಜೀವನದ ಈ ಸಾಂಸ್ಕೃತಿಕ ಬಲೆ ಏನೆಂದು ನೀವು ಯೋಚಿಸಬಹುದು 00:02:07.000 --> 00:02:08.000 ಅದು ನರಕುಲ ಮಂಡಲ ಎಂದು 00:02:08.000 --> 00:02:10.000 ಹಾಗೂ ನೀವು ನರಕುಲ ಮಂಡಲವನ್ನು 00:02:10.000 --> 00:02:13.000 ಎಲ್ಲ ಆಲೋಚನೆಗಳ ಮತ್ತು ಕನಸುಗಳ, ದಂತಕಥೆಗಳ, 00:02:13.000 --> 00:02:16.000 ಕಲ್ಪನೆಗಳ, ದೈವಪ್ರೇರಣೆಗಳ, ಅಂತಃಪ್ರೇರಣೆಗಳ ಒಟ್ಟು ಮೊತ್ತವಾಗಿ ಅಸ್ತಿತ್ವಕ್ಕೆ ಬಂದಿವೆ 00:02:16.000 --> 00:02:20.000 ಮಾನವನ ಕಲ್ಪನಾಶಕ್ತಿಯ ಮುಖಾಂತರ ಅಂತಃಪ್ರಜ್ಞೆಯ ಉದಯವಾದಂದಿನಿಂದ. 00:02:20.000 --> 00:02:23.000 ಈ ನರಕುಲ ಮಂಡಲ ಮಾನವನ ಪ್ರಮುಖ ಪೂರ್ವಾರ್ಜಿತ ಆಸ್ತಿ 00:02:23.000 --> 00:02:25.000 ಅದು ನಮ್ಮ ಇರುವಿಕೆಯ ಪ್ರತೀಕ 00:02:25.000 --> 00:02:29.000 ಮತ್ತು ನಾವು ಆಶ್ಚರ್ಯಕರ ಅನ್ವೇಷಣಶೀಲ ಜಾತಿಯಾಗಿರುವುದರ ಪ್ರತೀಕ. NOTE Paragraph 00:02:30.000 --> 00:02:33.000 ಯಾವ ರೀತಿ ಜೈವಿಕ ಮಂಡಲ ಕಠೋರವಾಗಿ ನಾಶಹೊಂದಿದೆಯೊ, 00:02:33.000 --> 00:02:35.000 ಅದೇ ರೀತಿ ನರಕುಲ ಮಂಡಲವೂ ಕೂಡ 00:02:35.000 --> 00:02:37.000 -- ಅದೂ ಕೂಡ ಇನ್ನೂ ಹೆಚ್ಚಿನ ಗತಿಯಲ್ಲಿ 00:02:37.000 --> 00:02:39.000 ಉದಾಹರಣೆಗೆ, ಯಾವ ಜೀವಶಾಸ್ತ್ರಜ್ಞರೂ 00:02:39.000 --> 00:02:42.000 50% ಅಥವಾ ಇನ್ನೂ ಹೆಚ್ಚು ಜಾತಿಗಳು 00:02:42.000 --> 00:02:44.000 ನಾಶದ ಅಂಚಿನಲ್ಲಿವೆ ಎಂದು ಹೇಳುವ ಸಾಹಸ ಮಾಡುವುದಿಲ್ಲ, ಏಕೆಂದರೆ ಅದು ಸತ್ಯವಲ್ಲ 00:02:44.000 --> 00:02:46.000 ಆದರೂ ಕೂಡ -- ಭವಿಷ್ಯದ ಪರಿಸ್ಥಿತಿ 00:02:46.000 --> 00:02:49.000 ಜೀವಶಾಸ್ತ್ರಕ್ಕೆ ಸಂಭಂಧಿಸಿದ ವೈವಿಧ್ಯತೆಯ ಲೋಕದಲ್ಲಿ 00:02:49.000 --> 00:02:52.000 ನಮಗೆ ತಿಳಿದಿರುವ ಆಶಾವಾದ ಚಿತ್ರಣವನ್ನು ಸಾಂಸ್ಕೃತಿಕ ವೈವಿಧ್ಯತೆಯ ಪರಿಸ್ಥಿತಿಯಲ್ಲಿ 00:02:52.000 --> 00:02:54.000 ಅಪರೂಪವಾಗಿ ತಲುಪುತ್ತದೆ. 00:02:54.000 --> 00:02:57.000 ಹಾಗೂ ಇದರ ಪ್ರಮುಖ ಸೂಚಕವೆಂದರೆ, ಭಾಷೆ ಹಾನಿ. NOTE Paragraph 00:02:57.000 --> 00:03:00.000 ಈ ಕೊಠಡಿಯಲ್ಲಿರುವ ಪ್ರತಿಯೊಬ್ಬರೂ, ನೀವು ಹುಟ್ಟಿದಾಗ 00:03:00.000 --> 00:03:03.000 ಈ ಗ್ರಹದ ಮೇಲೆ 6:00 ಭಾಷೆಗಳಲ್ಲಿ ಮಾತನಾಡಲಾಗುತ್ತಿತ್ತು. 00:03:03.000 --> 00:03:06.000 ಈಗ, ಭಾಷೆ ಒಂದು ಶಬ್ದ ಸಂಗ್ರಹವಲ್ಲ 00:03:06.000 --> 00:03:08.000 ಅಥವಾ ವ್ಯಾಕರಣ ನಿಯಮಗಳ ಒಂದು ಕಟ್ಟಲ್ಲ. 00:03:08.000 --> 00:03:10.000 ಒಂದು ಭಾಷೆ ಮಾನವನ ಅಂತಃಕರಣದ ಪ್ರಕಾಶ. 00:03:10.000 --> 00:03:13.000 ಅದು ಈ ಭೌತಪ್ರಪಂಚಕ್ಕೆ ಪ್ರತಿಯೊಂದು ನಿರ್ದಿಷ್ಟ ಸಂಸ್ಕೃತಿಯ ಚೇತನವು 00:03:13.000 --> 00:03:14.000 ತಲುಪುವ ಸಾಧನ. 00:03:14.000 --> 00:03:17.000 ಪ್ರತಿಯೊಂದು ಭಾಷೆಯೂ ಒಂದು ಮನಸ್ಸಿನ ಪ್ರಾಚೀನ ಆಲೋಚನಾ ಪ್ರಗತಿ, 00:03:17.000 --> 00:03:21.000 ಒಂದು ಅರಿವಿನ ಸಂಗ್ರಹ , ಒಂದು ಆಲೋಚನೆ, ಅಧ್ಯಾತ್ಮಿಕ ಸಾಧ್ಯತೆಗಳ ಒಂದು ಪಾರಿಸರಿಕ ವ್ಯವಸ್ಥೆ. NOTE Paragraph 00:03:21.000 --> 00:03:25.000 ನಾವೀಗ ಮೋಂಟರೇನಲ್ಲಿ ಕುಳಿತಿರುವ ಈ ದಿನ, ಈ 6:00 ಭಾಷೆಗಳಲ್ಲಿ 00:03:25.000 --> 00:03:29.000 ಅರ್ಧದಷ್ಟು ಭಾಷೆಗಳನ್ನು ಮಕ್ಕಳ ಕಿವಿಯಲ್ಲಿ ಪಿಸುಗುಡಲಾಗುತ್ತಿಲ್ಲ. 00:03:29.000 --> 00:03:32.000 ಶಿಶುಗಳಿಗೆ ಈಗ ಅವನ್ನು ಕಲಿಸಲಾಗುತ್ತಿಲ್ಲ, 00:03:32.000 --> 00:03:34.000 ಅಂದರೆ, ಪರಿಣಾಮಕಾರಿಯಾಗಿ, ಯಾವುದೋ ಒಂದು ಬದಲಾಗದಿದ್ದರೆ, 00:03:34.000 --> 00:03:35.000 ಅವು ಈಗಾಗಲೇ ಸತ್ತಂತೆಯೇ ಸರಿ. 00:03:35.000 --> 00:03:39.000 ನಿಃಶಬ್ದ ಆವರಿಸುವುದಕ್ಕಿಂತ ಹೆಚ್ಚು ಏಕಾಂತತೆ ಇನ್ನಾವುದಿದೆ, 00:03:39.000 --> 00:03:41.000 ನಿಮ್ಮ ಭಾಷೆಯನ್ನು ಮಾತನಾಡುವ ಕಟ್ಟಕಡೆಯ ವ್ಯಕ್ತಿಗಳಾಗಿ, 00:03:41.000 --> 00:03:44.000 ನಿಮ್ಮ ಪೂರ್ವಜರ ಬುದ್ದಿಮತ್ತೆಯನ್ನು ಇತರರಿಗೆ ಹಂಚುವ ದಾರಿಯಿಲ್ಲದೆ 00:03:44.000 --> 00:03:47.000 ಅಥವಾ ಮಕ್ಕಳ ಭರವಸೆಯನ್ನು ನಿರೀಕ್ಷಿಸಲಾಗದೆ? 00:03:47.000 --> 00:03:50.000 ಆದರೂ ಕೂಡ, ಯಾರೋ ಒಬ್ಬರ ಭಯಂಕರ ವಿಧಿಯ ದುರವಸ್ಥೆಯೆ, 00:03:50.000 --> 00:03:52.000 ಭೂಮಂಡಲದ ಎಲ್ಲೋ ಒಂದು ಕಡೆ, ಪ್ರತಿ ಎರಡು ವಾರಗಳಿಗೆ, 00:03:52.000 --> 00:03:54.000 ಏಕೆಂದರೆ, ಪ್ರತಿ ಎರಡು ವಾರಗಳಿಗೆ ಒಬ್ಬ ಹಿರಿಯ ಸಾಯುತ್ತಾನೆ 00:03:54.000 --> 00:03:56.000 ಹಾಗೂ ತನ್ನೊಂದಿಗೆ ಪ್ರಾಚೀನ ಭಾಷೆಯ ಕೊನೆಯ ಪಠ್ಯಗಳನ್ನು 00:03:56.000 --> 00:03:58.000 ತನ್ನ ಗೋರಿಗೆ ಕೊಂಡೊಯ್ಯುತ್ತಾನೆ. NOTE Paragraph 00:03:58.000 --> 00:04:00.000 ಹಾಗೆಯೇ, ನನಗೆ ಗೊತ್ತು, ನಿಮ್ಮಲ್ಲಿ ಕೆಲವರು, "ಅದಿನ್ನೂ ಒಳ್ಳೆಯದಲ್ಲವೇ? 00:04:00.000 --> 00:04:01.000 ಪ್ರಪಂಚ ಜೀವಿಸಲು ಇನ್ನೂ ಉತ್ತಮವಾಗಿರುತ್ತಲ್ಲವೆ 00:04:01.000 --> 00:04:04.000 ನಾವೆಲ್ಲರೂ ಒಂದೇ ಭಾಷೆ ಮಾತನಾಡಿದರೆ?" ಎನ್ನುತ್ತೀರಾ. ನಾನು ಹೇಳುತ್ತೇನೆ, "ಬಹಳ ಒಳ್ಳೆಯದು, 00:04:04.000 --> 00:04:07.000 ನಾವು ಆ ಭಾಷೆ ಯೊರುಬಾ ಎಂದು ಮಾಡೋಣ. ಅದು ಕ್ಯಾಂಟೊನೀಸ್ ಆಗಲಿ. 00:04:07.000 --> 00:04:08.000 ಕೋಗಿಯನ್ನು ಮಾಡೋಣ." 00:04:08.000 --> 00:04:10.000 ಹಾಗೂ ಅದು ಹೇಗಿರುತ್ತದೆಂಬುದು ನೀವು ತಕ್ಷಣ 00:04:10.000 --> 00:04:13.000 ನಿಮ್ಮ ಸ್ವಂತ ಭಾಷೆಯಲ್ಲಿ ಮಾತನಾಡಲಾಗದೆ ಕಂಡುಕೊಳ್ಳುತ್ತೀರಾ. NOTE Paragraph 00:04:13.000 --> 00:04:16.000 ಆದ್ದರಿಂದ, ಈ ದಿನ ನಾನು ನಿಮ್ಮೊಂದಿಗೆ ಏನು ಮಾಡಬೇಕೆಂದಿದ್ದೇನೆಂದರೆ 00:04:16.000 --> 00:04:20.000 ನರಕುಲ ಮಂಡಲದ ಮೂಲಕ ನಿಮ್ಮನ್ನು ಕರೆದೊಯ್ಯುತ್ತೇನೆ -- 00:04:20.000 --> 00:04:22.000 ನರಕುಲ ಮಂಡಲದ ಒಂದು ಚಿಕ್ಕ ಪ್ರವಾಸ 00:04:22.000 --> 00:04:26.000 ನಾವು ಏನು ಕಳೆದುಕೊಳ್ಳುತ್ತಿದ್ದೇವೆಂದು ನಿಮ್ಮ ಅರಿವಿಗೆ ತರಲು. 00:04:27.000 --> 00:04:34.000 ಈಗ, ನಮ್ಮಲ್ಲಿ ಬಹಳಷ್ಟು ಜನ ಒಂದು ಅಂಶ ಮರೆಯುತ್ತೇವೆ 00:04:34.000 --> 00:04:36.000 ನಾನು "ಬೇರೆ ಬೇರೆ ರೀತಿಯಲ್ಲಿ ಬದುಕುವುದು" ಎಂದಾಗ 00:04:36.000 --> 00:04:38.000 ನಿಜವಾಗಿಯೂ ಬೇರೆ ಬೇರೆ ರೀತಿಯಲ್ಲಿ ಬದುಕುವುದು ಎಂದೇ. NOTE Paragraph 00:04:39.000 --> 00:04:44.000 ಉದಾಹರಣೆಗೆ, ಉತ್ತರ-ಪಶ್ಚಿಮ ಅಮೆಜಾನಿನ ಬರಸಾನದ ಒಂದು ಮಗುವನ್ನು ತೆಗೆದುಕೊಳ್ಳಿ, 00:04:44.000 --> 00:04:45.000 ಅನಕೊಂಡದ ಜನರು 00:04:45.000 --> 00:04:47.000 ತಾವು ಹಾಲು ನದಿಯಿಂದ ಮೇಲೆ ಬಂದೆವು ಎನ್ನುವ ದಂತಕಥೆಯನ್ನು ನಂಬಿರುವ ಜನ 00:04:47.000 --> 00:04:50.000 ಅದೂ ಪೂರ್ವದಿಂದ ಪವಿತ್ರ ಸರ್ಪಗಳ ಉದರದಿಂದ. 00:04:50.000 --> 00:04:53.000 ಈಗ, ಈ ಜನರು ತಮ್ಮ ಅರಿವಿನಿಂದ 00:04:53.000 --> 00:04:55.000 ಹಸುರು ಬಣ್ಣ ಮತ್ತು ನೀಲಿ ಬಣ್ಣಗಳಿಗಿರುವ ವ್ಯತ್ಯಾಸ ಕಂಡುಹಿಡಿಯಲಾರರು 00:04:55.000 --> 00:04:57.000 ಏಕೆಂದರೆ ಆಕಾಶದ ಸೂರು ಹಾಗೂ 00:04:57.000 --> 00:04:58.000 ಅರಣ್ಯದ ಸೂರು ಅವರಿಗೆ ಸಮ 00:04:58.000 --> 00:05:00.000 ಇದರ ಮೇಲೆ ಜನರು ಆವಲಂಬಿತರಾಗಿದ್ದಾರೆ. 00:05:00.000 --> 00:05:03.000 ಅವರು ಒಂದು ವಿಲಕ್ಷಣ ಭಾಷೆ ಮತ್ತು ಮದುವೆಯ ನಿಯಮ ಹೊಂದಿದ್ದಾರೆ 00:05:03.000 --> 00:05:05.000 ಅದನ್ನು ಭಾಷಾ ಅಂತರ್ವಿವಾಹ ಎಂದು ಕರೆಯುತ್ತಾರೆ: 00:05:05.000 --> 00:05:08.000 ನೀವು ಬೇರೊಂದು ಭಾಷೆ ಮಾತನಾಡುವ ಒಬ್ಬರನ್ನು ವಿವಾಹವಾಗಬೇಕು. 00:05:08.000 --> 00:05:10.000 ಹಾಗೂ ಇದೆಲ್ಲವೂ ದಂತಕಥೆಗಳಲ್ಲಿ ಬೇರೂರಿಕೊಂಡಿವೆ. 00:05:10.000 --> 00:05:12.000 ಆದರೂ ವಿಲಕ್ಷಣವೆಂದರೆ ಆರು ಇಲ್ಲವೇ ಏಳು ಮಾತನಾಡುವ 00:05:12.000 --> 00:05:14.000 ಭಾಷೆಗಳಿರುವ ದೊಡ್ಡ ಕುಟುಂಬಗಳಲ್ಲಿ♪ 00:05:14.000 --> 00:05:16.000 ವಿವಾಹದ ಕಾರಣದಿಂದ, 00:05:16.000 --> 00:05:19.000 ಯಾರೋ ಒಂದು ಭಾಷೆಯನ್ನು ಕಲಿಯುತ್ತಿದ್ದಾರೆ ಎನ್ನುವುದು ನಿಮಗೆ ಕಂಡುಬರುವುದಿಲ್ಲ. 00:05:19.000 --> 00:05:22.000 ಅವರು ಸುಮ್ಮನೆ ಕೇಳಿಸಿಕೊಳ್ಳುತ್ತಾರೆ ಮತ್ತು ಮಾತಾಡಲು ಪ್ರಾರಂಭಿಸುತ್ತಾರೆ. NOTE Paragraph 00:05:22.000 --> 00:05:24.000 ಅಥವಾ, ನಾನು ಜೊತೆಯಲ್ಲಿ ವಾಸಮಾಡಿದ ಬುಡಕಟ್ಟುಗಳಲ್ಲಿ ಒಂದಾದ 00:05:24.000 --> 00:05:28.000 ಉತ್ತರಪೂರ್ವ ಈಕ್ವೆಡಾರ್ ನ ವೌರಾನಿ ಜನಾಂಗ ತೆಗೆದುಕೊಳ್ಳಿ, 00:05:28.000 --> 00:05:31.000 ಮೊಟ್ಟಮೊದಲನೆಯದಾಗಿ 1958 ರಲ್ಲಿ ಈ ಆಶ್ಚರ್ಯಕರ ಜನರನ್ನು ಶಾಂತಿಯುತವಾಗಿ ಸಂಪರ್ಕಿಸಲಾಯಿತು. 00:05:31.000 --> 00:05:35.000 1957 ಐದು ಜನ ಧರ್ಮಪ್ರಚಾರಕರು ಸಂಪರ್ಕಿಸಲು ಪ್ರಯತ್ನಪಟ್ಟರು. 00:05:35.000 --> 00:05:36.000 ಹಾಗೂ ಒಂದು ದೊಡ್ಡ ತಪ್ಪು ಮಾಡಿದರು. 00:05:36.000 --> 00:05:37.000 ಮೇಲಿಂದ ಕೆಳಕ್ಕೆ 00:05:37.000 --> 00:05:39.000 ಎಂಟು x ಹತ್ತು ಗಾತ್ರದ ತಮ್ಮದೇ ಹೊಳೆಯುವ ಫೋಟೊಗಳನ್ನು ಎಸೆದರು. 00:05:39.000 --> 00:05:41.000 ಇದನ್ನು ನಾವು ಸ್ನೇಹಪೂರಿತ ಸೂಚನೆಗಳೆನ್ನಬಹುದು, 00:05:41.000 --> 00:05:43.000 ಆದರೆ ಎಸೆಯುವಾಗ ಅವರು ಮಳೆ ಅರಣ್ಯ ಪ್ರದೇಶದ ಈ ಜನ ತಮ್ಮ ಜೀವನದಲ್ಲಿ 00:05:43.000 --> 00:05:46.000 ಎಂದೂ ಎರಡು-ಆಯಾಮಗಳ ವಸ್ತುವನ್ನು ನೋಡಿಲ್ಲ ಎಂಬುದನ್ನು ಮರೆತರು. 00:05:46.000 --> 00:05:48.000 ಅವರು ಈ ಫೊಟೊಗಳನ್ನು ಕಾಡಿನ ನೆಲದಿಂದ ಎತ್ತಿಕೊಂಡು 00:05:48.000 --> 00:05:51.000 ಫೋಟೊದಲ್ಲಿರುವ ಮುಖದ ಹಿಂದಿರುವ ಆಕಾರವನ್ನು ನೋಡಲು ಯತ್ನಿಸಿದರು, 00:05:51.000 --> 00:05:53.000 ಅವರಿಗೆ ಏನೂ ಕಾಣಲಿಲ್ಲ ಹಾಗೂ ಇವು ಪಿಶಾಚಿಗಳಿಂದ ಬಂದಿರುವ 00:05:53.000 --> 00:05:56.000 ಕರೆ ಕಾರ್ಡುಗಳೆಂದು ತೀರ್ಮಾನಿಸಿ, ಆ ಐದು ಜನ ಧರ್ಮ ಪ್ರಚಾರಕರನ್ನು ಭರ್ಜಿಗಳಿಂದ ಇರಿದು ಕೊಂದರು. 00:05:57.000 --> 00:05:59.000 ಆದರೆ ವೌರಾನಿ ಜನಾಂಗ ಕೇವಲ ಹೊರಗಿನವರನ್ನು ಇರಿಯಲಿಲ್ಲ. 00:05:59.000 --> 00:06:00.000 ಒಬ್ಬರನ್ನೊಬ್ಬರು ಇರಿದುಕೊಂಡರು 00:06:00.000 --> 00:06:03.000 54% ಮರಣಪ್ರಮಾಣ ಇರುವುದು ಅವರು ತಮ್ಮಲ್ಲೇ ಒಬ್ಬರನ್ನೊಬ್ಬರು ಇರಿದುಕೊಳ್ಳುವುದರಿಂದ. 00:06:03.000 --> 00:06:06.000 ನಾವು ಎಂಟು ತಲೆಮಾರುಗಳ ವಂಶಾವಳಿಯನ್ನು ಪತ್ತೆಮಾಡಿದೆವು, 00:06:06.000 --> 00:06:08.000 ಹಾಗೂ ನಾವು ಸ್ವಾಭಾವಿಕ ಸಾವಿನ ಎರಡು ಘಟನೆಗಳನ್ನು ಮಾತ್ರ ಪತ್ತೆಮಾಡಿದೆವು 00:06:08.000 --> 00:06:10.000 ಮತ್ತು ನಾವು ಇದರ ಬಗ್ಗೆ ಜನರನ್ನು ಇನ್ನಷ್ಟು ಬಲವಂತ ಮಾಡಿದಾಗ 00:06:10.000 --> 00:06:12.000 ಒಬ್ಬನಿಗೆ ತುಂಬಾ ವಯಸ್ಸಾಗಿತ್ತು ಎಂದು ಒಪ್ಪಿಕೊಂಡರು 00:06:12.000 --> 00:06:16.000 ಹಾಗೂ ಅವನು ಇಳಿವಯಸ್ಸಿನಿಂದ ಸತ್ತನು, ಆದರೂ ನಾವು ಅವನನ್ನು ಇರಿದೆವು (ನಗು) 00:06:16.000 --> 00:06:19.000 ಆದರೆ, ಅವರಿಗೆ ಅರಣ್ಯದ ಬಗ್ಗೆ ಅತಿ ಸೂಕ್ಷ್ಮ ಮತ್ತು ತೀಕ್ಷ್ಣ 00:06:19.000 --> 00:06:20.000 ತಿಳಿವಳಿಕೆಯಿತ್ತು, ಇದು ಅತ್ಯಂತ ಆಶ್ಚರ್ಯಕರ. 00:06:20.000 --> 00:06:23.000 ಅವರ ಬೇಟೆಗಾರರು ಪ್ರಾಣಿಗಳ ಮೂತ್ರದ ವಾಸನೆಯನ್ನು 40 ಹೆಜ್ಜೆಗಳ ದೂರದಿಂದಲೇ ಮೂಸಬಲ್ಲರು 00:06:23.000 --> 00:06:26.000 ಮತ್ತು ಅದು ಯಾವ ಪ್ರಾಣಿಯ ಮೂತ್ರ ಎಂದು ಹೇಳಬಲ್ಲರು NOTE Paragraph 00:06:26.000 --> 00:06:28.000 80 ರ ದಶಕದ ಪ್ರಾರಂಭದಲ್ಲಿಯೇ ನಾನು ಒಂದು ವಿಸ್ಮಯಕಾರಿ ಕಾರ್ಯ ಕೈಗೊಳ್ಳಬೇಕಾಯಿತು 00:06:28.000 --> 00:06:30.000 ಹಾರ್ವರ್ಡಿನಲ್ಲಿ ನಮ್ಮ ಪ್ರೊಫೆಸರ್ ಕೇಳಿದರು 00:06:30.000 --> 00:06:32.000 ಹೈಟಿಗೆ ಹೋಗಲು ನಿನಗೆ ಆಸಕ್ತಿಯಿದೆಯೇ ಎಂದು, 00:06:33.000 --> 00:06:35.000 ರಹಸ್ಯ ಸಮಾಜಗಳಲ್ಲಿ ಒಳನುಸುಳಿ 00:06:35.000 --> 00:06:37.000 ದುವೇಲಿಯರ್ನ ಮತ್ತು ಟೊಂಟೋನ್ ಮಕೌಟ್ಸ್ನ 00:06:37.000 --> 00:06:38.000 ಶಕ್ತಿಯ ಮೂಲ ಮತ್ತು 00:06:38.000 --> 00:06:41.000 ಸೋಂಭೇರಿಗಳನ್ನು ತಯಾರುಮಾಡುವ ವಿಷವಸ್ತುವನ್ನು ಪಡೆಯಲು. 00:06:41.000 --> 00:06:44.000 ಈ ಪಯಣದ ವಿವೇಚನೆಯನ್ನು ಸಂವೇದನಾಶೀಲವಾಗಿ ಮಾಡಲು 00:06:44.000 --> 00:06:47.000 ನಾನು ಈ ವೊಡೌನಿನ ಅದ್ವಿತೀಯ ನಂಬಿಕೆಯ ಬಗ್ಗೆ ಅರಿತುಕೊಳ್ಳಬೇಕಾಯಿತು 00:06:47.000 --> 00:06:50.000 ಹಾಗೂ ವೂಡೂ ಮಾಟ-ಮಂತ್ರದ ಒಂದು ಪಂಥವಲ್ಲ. 00:06:50.000 --> 00:06:53.000 ವಿಪರ್ಯಾಸವಾಗಿ ಅದೊಂದು ಸಂಕೀರ್ಣ ಅಧ್ಯಾತ್ಮಿಕ ಸಿದ್ಧಾಂತದ ವಿಶ್ವನೋಟ. 00:06:53.000 --> 00:06:54.000 ಇದು ಆಸಕ್ತಿಕರ. 00:06:54.000 --> 00:06:55.000 ನಾನು ನಿಮ್ಮನ್ನು ಪ್ರಪಂಚದ ಅತಿ ಉನ್ನತ ಧರ್ಮಗಳನ್ನು ಹೆಸರಿಸಿ ಎಂದರೆ 00:06:55.000 --> 00:06:56.000 ನೀವೇನು ಹೇಳುತ್ತೀರಾ? 00:06:56.000 --> 00:06:59.000 ಕ್ರೈಸ್ತ ಧರ್ಮ, ಇಸ್ಲಾಂ, ಬೌದ್ಧಧರ್ಮ, ಯಹೂದಿ ಧರ್ಮ, ಯಾವುದೋ ಒಂದು. NOTE Paragraph 00:06:59.000 --> 00:07:01.000 ಆದರೆ ಯಾವಾಗಲೂ ಒಂದು ಖಂಡ ಬಿಟ್ಟುಹೋಗುತ್ತದೆ 00:07:01.000 --> 00:07:03.000 ಒಂದು ಊಹೆಯ ಮೇಲೆ, ಸಬ್ ಸಹರನ್ ಆಫ್ರಿಕಾದಲ್ಲಿ 00:07:03.000 --> 00:07:05.000 ಯಾವುದೇ ಧಾರ್ಮಿಕ ನಂಬಿಕೆಗಳಿರಲಿಲ್ಲ. ಆದರೆ, ಅವರಲ್ಲಿ ನಂಬಿಕೆಗಳು ಇತ್ತು, 00:07:05.000 --> 00:07:07.000 ಹಾಗೂ ಊಡೂ ಈ ಎಲ್ಲ ಗಂಭೀರವಾದ 00:07:08.000 --> 00:07:09.000 ಧಾರ್ಮಿಕ ಕಲ್ಪನೆಗಳ ಸಾರ 00:07:09.000 --> 00:07:12.000 ಹಾಗೂ ಇದು ಹೃದಯವಿದ್ರಾವಕ ಗುಲಾಮಗಿರಿ ಯುಗದಲ್ಲಿ ಬಂದಿತು. 00:07:12.000 --> 00:07:14.000 ಆದರೆ, ಊಡೂ ಇಷ್ಟೊಂದು ಆಸಕ್ತಿಕರ, ಏಕೆಂದರೆ ಅದು 00:07:14.000 --> 00:07:16.000 ಜೀವಂತವಾಗಿರುವ ಮತ್ತು ಸತ್ತವರ 00:07:16.000 --> 00:07:17.000 ನಡುವೆ ಇರುವ ಜ್ವಲಂತ ಸಂಬಂಧ. 00:07:17.000 --> 00:07:18.000 ಹಾಗಾಗಿ, ಜೀವಂತ ಇರುವವರು ಆತ್ಮಗಳಿಗೆ ಜನ್ಮಕೊಡುತ್ತಾರೆ. 00:07:18.000 --> 00:07:21.000 ಈ ಆತ್ಮಗಳನ್ನು ಅಸಾಮಾನ್ಯ ಜಲದ ಕೆಳಗಿನಿಂದ ಆವಾಹಿಸಬಹುದು, 00:07:21.000 --> 00:07:23.000 ನಾಟ್ಯದ ತಾಳಕ್ಕೆ ಮೇಳೈಸಿದಂತೆ 00:07:23.000 --> 00:07:25.000 ಸ್ವಲ್ಪ ಕ್ಷಣ ಜೀವಂತವಿರುವವರ ಶಬ್ದ ಬದಲಾವಣೆ ಮಾಡಿದಂತೆ 00:07:25.000 --> 00:07:29.000 ಆ ಸ್ವಲ್ಪ ಕ್ಷಣ, ಆ ಪ್ರವಾದಿಯೇ ದೈವವಾದಂತೆ. 00:07:29.000 --> 00:07:31.000 ಅದಕ್ಕೆ, ವೂಡೂಗಳು ಹೇಳುತ್ತಾರೆ, 00:07:31.000 --> 00:07:34.000 “ನೀವು ಬಿಳಿ ಜನ ಚರ್ಚಿಗೆ ಹೋಗುತ್ತೀರ ಮತ್ತು ದೇವರ ಬಗ್ಗೆ ಮಾತನಾಡುತ್ತೀರ. 00:07:34.000 --> 00:07:36.000 ನಾವು ದೇವಾಲಯದಲ್ಲಿ ಕುಣಿದಾಡುತ್ತೇವೆ ಮತ್ತು ದೇವರಾಗುತ್ತೇವೆ.” 00:07:36.000 --> 00:07:39.000 ನೀವು ಆವೇಶಗೊಂಡಿರುವುದರಿಂದ ನಿಮ್ಮನ್ನು ಪಿಶಾಚಿ ಹಿಡಿದುಕೊಳ್ಳುತ್ತದೆ, 00:07:39.000 --> 00:07:40.000 ನಿಮಗೆ ಅಪಾಯ ಹೇಗಾಗುತ್ತದೆ? 00:07:40.000 --> 00:07:43.000 ಹಾಗಾಗಿ, ನೀವು ಈ ಆಶ್ಚರ್ಯಕರ ಪ್ರದರ್ಶನಗಳನ್ನು ನೋಡುತ್ತೀರಿ: 00:07:43.000 --> 00:07:45.000 ವೂಡೂ ಅನುಚರರರು ಒಂದು ಭಾವಪರವಶ ಸ್ಥಿತಿಯಲ್ಲಿರುವಂತೆ 00:07:45.000 --> 00:07:48.000 ಉರಿಯುತ್ತಿರುವ ಕೊಳ್ಳಿಗಳನ್ನು ನಿರ್ಭೀತಿಯಿಂದ ಆಡಿಸುವುದು 00:07:48.000 --> 00:07:51.000 ಮಾನಸಿಕ ಸಾಮರ್ಥ್ಯವನ್ನು ಆಶ್ಚರ್ಯಕರ ರೀತಿಯಲ್ಲಿ ಪ್ರದರ್ಶಿಸುವುದು 00:07:51.000 --> 00:07:52.000 ಆ ಮನಸ್ಸು ಹೊಂದಿರುವ ದೇಹದ ಮೇಲೆ ಪ್ರಭಾವ ಬೀರುವುದು 00:07:52.000 --> 00:07:55.000 ತೀವ್ರವಾದ ಉದ್ರೇಕ ಸ್ಥಿತಿಯಲ್ಲಿ ವೇಗವರ್ಧಿಸುವುದು. NOTE Paragraph 00:07:56.000 --> 00:07:58.000 ಈಗ, ನಾನು ಜೊತೆಗಿದ್ದ ಎಲ್ಲ ಜನರ ಪೈಕಿ 00:07:58.000 --> 00:08:00.000 ಅತಿ ವಿಚಿತ್ರವಾದವರೆಂದರೆ ಉತ್ತರ ಕೊಲಂಬಿಯಾದ 00:08:00.000 --> 00:08:03.000 ಸೀಯೆರಾ ನೆವೆಡಾ ಡಿ ಸಾಂಟ ಮಾರ್ತಾಕ್ಕೆ ಸೇರಿದ ಕೋಗಿಗಳು. 00:08:03.000 --> 00:08:06.000 ಇವರು ಪ್ರಾಚೀನ ಟೈರೋನಾ ನಾಗರಿಕತೆಗಳ ಸಂತತಿಗಳು 00:08:06.000 --> 00:08:09.000 ಇವರು ಒಮ್ಮೆ ಕೊಲಂಬಿಯಾದ ಕ್ಯಾರಿಬಿಯನ್ ಕಡಲ ತೀರದ ಬಯಲು ಪ್ರದೇಶವನ್ನು 00:08:09.000 --> 00:08:10.000 ವಿಜಯೋತ್ಸವ ಸಂದರ್ಭದಲ್ಲಿ ನೆಲಸಮ ಮಾಡಿದ್ದರು, 00:08:10.000 --> 00:08:13.000 ಈ ಜನ ಪ್ರತ್ಯೇಕವಾದ ಕ್ಯಾರಿಬಿಯನ್ ಕಡಲು ತೀರದ ಬಯಲು ಪ್ರದೇಶದ 00:08:13.000 --> 00:08:15.000 ಮೇಲೆ ಚಾಚಿಕೊಂಡಿರುವ ಜ್ವಾಲಾಮುಖಿ ಪರ್ವತಕ್ಕೆ ಹಿಂದಿರುಗಿದರು. 00:08:15.000 --> 00:08:17.000 ರಕ್ತದೋಕುಳಿಯಿಂದ ತುಂಬಿರುವ ಖಂಡದಲ್ಲಿ, 00:08:17.000 --> 00:08:20.000 ಸ್ಪಾನಿಶರು ಜಯಸಾಧಿಸದಿರುವ ಏಕೈಕ ಗುಂಪು ಇದು. 00:08:20.000 --> 00:08:23.000 ಇವತ್ತಿನವರೆಗೂ, ಅವರು ಧಾರ್ಮಿಕ ಸಂಸ್ಕಾರಗಳನ್ನು ಆಚರಿಸುವ ಪುರೋಹಿತಶಾಹಿ ಆಡಳಿತಕ್ಕೊಳಗಾಗಿದ್ದಾರೆ 00:08:23.000 --> 00:08:25.000 ಆದರೆ, ಅವರ ಪುರೋಹಿತ ಸ್ಥಾನಕ್ಕೆ ಕೊಡುವ ತರಬೇತಿ ಅಸಾಧಾರಣ. 00:08:26.000 --> 00:08:28.000 ಚಿಕ್ಕ ವಯಸ್ಸಿನ ಪ್ರವಾದಿಗಳನ್ನು ಅವರ ಮೂರು 00:08:28.000 --> 00:08:30.000 ಮತ್ತು ನಾಲ್ಕನೆ ವಯಸ್ಸಿನಲ್ಲಿಯೇ ಮನೆಯಿಂದ ಒಯ್ಯಲಾಗುತ್ತದೆ 00:08:30.000 --> 00:08:32.000 ಅಂಧಕಾರ ಮತ್ತು ಕತ್ತಲುಕೋಣೆಯ ಏಕಾಂತ ಸ್ಥಳದಲ್ಲಿ 00:08:32.000 --> 00:08:36.000 ಗುಹೆಗಳಲ್ಲಿ ಹಿಮರಾಶಿಯ ಬುಡದಲ್ಲಿ 18 ವರ್ಷ ಇಡಲಾಗುವುದು. 00:08:36.000 --> 00:08:37.000 ಒಂಬತ್ತು ವರ್ಷದ ಎರಡು ಅವಧಿಗಳನ್ನು 00:08:37.000 --> 00:08:40.000 ಒಂಬತ್ತು ತಿಂಗಳುಗಳ ಗರ್ಭಾವಸ್ಥೆ ಅನುಕರಣೆ ಮಾಡುವಂತೆ ಅವರು ತಮ್ಮ ನೈಸರ್ಗಿಕ ತಾಯಿಯ ಗರ್ಭದಲ್ಲಿ 00:08:40.000 --> 00:08:42.000 ಇರುವಂಥ ಅನುಭವ ಮೂಡಿಸಲು ಉದ್ದೇಶಪೂರ್ವಕವಾಗಿ ಆಯ್ಕೆಮಾಡುತ್ತಾರೆ, 00:08:42.000 --> 00:08:45.000 ಈಗ ಅವರು ರೂಪಕವಾಗಿ ತಮ್ಮ ತಾಯಿಯ ಗರ್ಭದಲ್ಲಿದ್ದಾರೆ. 00:08:45.000 --> 00:08:46.000 ಈ ಸಂಪೂರ್ಣ ಸಮಯ 00:08:47.000 --> 00:08:50.000 ಅವರು ತಮ್ಮ ನಾಗರೀಕತೆಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವಂತೆ ಮಾಡಲಾಗುವುದು, 00:08:50.000 --> 00:08:52.000 ಈ ಮೌಲ್ಯಗಳು ಅವರ ಪ್ರಾರ್ಥನೆಗಳನ್ನು ಅನುಮೋದಿಸುತ್ತವೆ. 00:08:52.000 --> 00:08:55.000 ಹಾಗೂ ಅವರ ಪ್ರಾರ್ಥನೆಗಳು ಮಾತ್ರ ಬ್ರಹ್ಮಾಂಡದ - 00:08:55.000 --> 00:08:57.000 ಅಥವಾ ನಾವಿದನ್ನು ಜೈವಿಕ ಪರಿಸರ ಎನ್ನಬಹುದು – ಇವು ಸಮತೋಲನ ಮಾಡುತ್ತವೆ. 00:08:58.000 --> 00:08:59.000 ಈ ವಿಸ್ಮಯಕಾರಿ ದೀಕ್ಷೆಯ ಕೊನೆಯಲ್ಲಿ 00:08:59.000 --> 00:09:01.000 ಒಂದು ದಿನ ಹಠಾತ್ತಾಗಿ ಅವರನ್ನು ಹೊರತರಲಾಗುತ್ತದೆ 00:09:01.000 --> 00:09:04.000 ಹಾಗೂ ಅವರ 18 ವರ್ಷಗಳಲ್ಲಿ ಜೀವನದಲ್ಲಿ ಪ್ರಥಮ ಬಾರಿಗೆ 00:09:04.000 --> 00:09:08.000 ಸೂರ್ಯೋದಯ ನೋಡುತ್ತಾರೆ. ಆ ಸ್ಫುಟವಾದ ಅರಿವಿನ ಕ್ಷಣದಲ್ಲಿ 00:09:08.000 --> 00:09:11.000 ಆ ಇಳುಕಲು ಪ್ರದೇಶಗಳು ಸೂರ್ಯನ ಕಿರಣಗಳಿಂದ ಮೀಯುವಾಗ 00:09:11.000 --> 00:09:12.000 ಆ ಮೈಮರೆಸುವಂಥ ಸುಂದರ ಭೂದೃಶ್ಯ, 00:09:13.000 --> 00:09:15.000 ಅವರು ಅಮೂರ್ತ ಸ್ಥಿತಿಯಲ್ಲಿ ಕಲಿತಿರುವ ಎಲ್ಲವೂ ಹಠಾತ್ತಾಗಿ 00:09:15.000 --> 00:09:18.000 ಈ ವಿಸ್ಮಯಕಾರಿ ಸ್ಥಿತಿಯಲ್ಲಿ ಸತ್ಯವೆನಿಸುತ್ತದೆ. ಹಾಗೂ ಪುರೋಹಿತ ಒಂದು ಹೆಜ್ಜೆ 00:09:18.000 --> 00:09:20.000 ಹಿಮ್ಮೆಟ್ಟಿ ಹೇಳುತ್ತಾನೆ, “ನೀವು ನೋಡಿ? ಅದು ಸತ್ಯವಾಗಿಯೂ ನಾನು ಹೇಳಿರುವಂತೆ ಇದೆ. 00:09:20.000 --> 00:09:23.000 ಅದು ಅಷ್ಟೊಂದು ಸುಂದರವಾಗಿದೆ. ಅದು ನಿಮ್ಮದು, ನೀವು ರಕ್ಷಿಸಬೇಕಾದ್ದು.” 00:09:23.000 --> 00:09:25.000 ಅವರು ತಮ್ಮನ್ನು ಹಿರಿಯ ಸಹೋದರರೆಂದು ಕರೆದುಕೊಳ್ಳುತ್ತಾರೆ 00:09:25.000 --> 00:09:28.000 ಹಾಗೂ ಅವರು ಹೇಳುತ್ತಾರೆ, ನಾವು ಕಿರಿಯ ಸಹೋದರರೆಂದು 00:09:28.000 --> 00:09:31.000 ಹಾಗೂ ಈ ಪ್ರಪಂಚದ ನಾಶಕ್ಕೆ ನಾವು ಕಾರಣವೆನ್ನುತ್ತಾರೆ. NOTE Paragraph 00:09:32.000 --> 00:09:34.000 ಈಗ, ಈ ಮಟ್ಟದ ಒಳ ಅರಿವು ಬಹಳ ಮುಖ್ಯವಾಗುತ್ತದೆ. 00:09:34.000 --> 00:09:36.000 ನಾವು ಯಾವಾಗ ಸ್ಥಳೀಯ ಜನ ಮತ್ತು ಭೂ ಪ್ರದೇಶದ ಬಗ್ಗೆ ಆಲೋಚಿಸಿದಾಗಲೂ 00:09:36.000 --> 00:09:38.000 ರೊಸ್ಸೂಗೆ ಮೊರೆಯಿಡುತ್ತೇವೆ ಅಥವಾ 00:09:38.000 --> 00:09:41.000 ಸುಳ್ಳುಸುದ್ದಿ ಹಬ್ಬಿಸುವ ಶ್ರೇಷ್ಠ ಅನಾಗರಿಕತೆ 00:09:41.000 --> 00:09:43.000 ಸರಳವಾಗಿ ಹೇಳುವುದಾದರೆ ಅದೊಂದು ಜನಾಂಗೀಯ ಕಲ್ಪನೆ 00:09:43.000 --> 00:09:46.000 ಅಥವಾ ಪರ್ಯಾಯವಾಗಿ, ನಾವು ಥೋರೂಗೆ ಮೊರೆಯಿಟ್ಟರೆ 00:09:46.000 --> 00:09:48.000 ಈ ಜನರು ಹೇಳುತ್ತಾರೆ, ತಾವು ನಮಗಿಂತ ಭೂಮಿಗೆ ಹತ್ತಿರವಾಗಿದ್ದೇವೆಂದು. 00:09:48.000 --> 00:09:50.000 ಸ್ಥಳೀಯ ಜನರು ಭಾವನಾವಶರೂ ಅಲ್ಲ 00:09:50.000 --> 00:09:52.000 ಅಥವಾ ಹಂಬಲದ ನೆನಪುಗಳಿಂದ ದುರ್ಬಲರೂ ಅಲ್ಲ. 00:09:52.000 --> 00:09:54.000 ಅಸ್ಮತ್ನ ಮಲೇರಿಯಾ ಪೀಡಿತ ಜವುಗುನೆಲಕ್ಕೆ 00:09:54.000 --> 00:09:56.000 ಹೆಚ್ಚು ಅವಕಾಶವಿಲ್ಲ, ಅಥವಾ ಕೊರೆಯುವ ಟಿಬೆಟ್ನ ಚಳಿಗಾಳಿಯಲ್ಲೂ 00:09:56.000 --> 00:09:59.000 ಸಹ ಅವರು, ಕಾಲ ಮತ್ತು ಪ್ರಾರ್ಥನಾವಿಧಿಗಳ ಮೂಲಕ, 00:09:59.000 --> 00:10:03.000 ಒಂದು ಸಾಂಪ್ರದಾಯಿಕ ಸಂಕೇತ ಗರ್ಭಿತ ಭೂಮಿಯ ಪ್ರತಿಯನ್ನು ಮಾಡಿದರು 00:10:03.000 --> 00:10:06.000 ಆತ್ಮ ಪ್ರಜ್ಞೆಯಿಂದ ಹುಟ್ಟಿದ ಕಲ್ಪನೆಯಿಂದ 00:10:06.000 --> 00:10:08.000 ಆದರೆ ಇನ್ನೂ ಹೆಚ್ಚಿನ ಮಾರ್ಮಿಕ ಅಂತರ್ದೃಷ್ಟಿಯಿಂದ: 00:10:08.000 --> 00:10:11.000 ಭೂಮಿಯು ಮಾತ್ರ ಅಸ್ತಿತ್ವದಲ್ಲಿರಬಹುದೆಂಬ ಕಲ್ಪನೆಯಿಂದ 00:10:12.000 --> 00:10:14.000 ಏಕೆಂದರೆ ಅದಕ್ಕೆ ಉಸಿರು ಮಾನವನ ಪ್ರಜ್ಞೆ. NOTE Paragraph 00:10:14.000 --> 00:10:16.000 ಈಗ, ಇದರ ಅರ್ಥವೇನು? 00:10:16.000 --> 00:10:18.000 ಇದರ ಅರ್ಥ ಆಂಡೀಸ್ನ ಒಂದು ಚಿಕ್ಕ ಮಗು 00:10:18.000 --> 00:10:20.000 ಅಪುವಿನ ಪರ್ವತ ಒಂದು ಚೈತನ್ಯ ಎಂದು ನಂಬುವಂತೆ ಬೆಳೆಸಲಾಗಿದೆ 00:10:20.000 --> 00:10:22.000 ಅದು ಅವನ ಅಥವಾ ಅವಳ ಭವಿಷ್ಯವನ್ನು ನಿರ್ದೇಶಿಸುತ್ತದೆ ಎಂದು ನಂಬಿಕೆಯಲ್ಲಿ ಬೆಳೆಸಿದರೆ 00:10:22.000 --> 00:10:25.000 ಗಾಢವಾಗಿ ಒಬ್ಬ ಬೆರೆಯದೇ ಆದ ವ್ಯಕ್ತಿಯಾಗುತ್ತಾರೆ 00:10:25.000 --> 00:10:28.000 ಮತ್ತು ಆ ಸ್ಥಳ ಅಥವಾ ಮೂಲದೊಂದಿಗೆ ಬೇರೆಯೇ ಸಂಬಂಧ ಹೊಂದಿರುತ್ತಾರೆ 00:10:28.000 --> 00:10:30.000 ಮೊಂಟಾನದ ಇತರ ಮಕ್ಕಳಂತೆ 00:10:30.000 --> 00:10:33.000 ಪರ್ವತವೆಂದರೆ ಒಡೆದು ಪುಡಿ ಮಾಡಬಹುದಾದ ಒಂದು ಕಲ್ಲಿನ ರಾಶಿ 00:10:33.000 --> 00:10:34.000 ಎಂಬ ನಂಬಿಕೆಯ ಮೇಲೆ ಬೆಳೆದಂತಲ್ಲ. 00:10:34.000 --> 00:10:38.000 ಅದು ಒಂದು ಚೈತನ್ಯದ ವಾಸಸ್ಥಾನವೋ ಅಥವಾ ಕಲ್ಲಿನ ರಾಶಿಯೋ ಎಂಬುದು ಮುಖ್ಯವಲ್ಲ. 00:10:38.000 --> 00:10:41.000 ಆಸಕ್ತಿದಾಯಕ ವಿಷಯವೆಂದರೆ ಒಬ್ಬ ವ್ಯಕ್ತಿ ಮತ್ತು ನೈಸರ್ಗಿಕ ಪ್ರಪಂಚದ 00:10:41.000 --> 00:10:43.000 ನಡುವೆ ಇರುವ ಸಂಬಂಧವನ್ನು ನಿರೂಪಿಸುವ ರೂಪಕಾಲಂಕಾರ 00:10:43.000 --> 00:10:45.000 ನಾನು ಬ್ರಿಟಿಶ್ ಕೊಲಂಬಿಯಾದ ಕಾಡುಗಳಲ್ಲಿ ಬೆಳೆದೆ 00:10:45.000 --> 00:10:47.000 ಆ ಕಾಡುಗಳು ಕತ್ತರಿಸಲಿಕ್ಕಾಗಿಯೇ ಇವೆ ಎಂಬ ನಂಬಿಕೆಯ ಮೇಲೆ. 00:10:47.000 --> 00:10:49.000 ಅದು ನನ್ನನ್ನು ವಿಭಿನ್ನ ವ್ಯಕ್ತಿಯಾಗಿ ಮಾಡಿತು 00:10:49.000 --> 00:10:51.000 ಕ್ವಾಗಿಲುತ್ ನನ್ನ ಸ್ನೇಹಿತರಿಗಿಂತ ಭಿನ್ನ 00:10:51.000 --> 00:10:53.000 ಅವರಿಗೆ ಆ ಕಾಡುಗಳು ಹುಕ್ಸಹುಕ್ನ ವಾಸಸ್ಥಾನ ಮತ್ತು 00:10:53.000 --> 00:10:54.000 ಸ್ವರ್ಗದ ಸೊಟ್ಟಾದ ಕೊಕ್ಕು ಎಂದು ನಂಬಿದ್ದರು 00:10:54.000 --> 00:10:57.000 ಮತ್ತು ಪ್ರಪಂಚದ ಉತ್ತರ ದಿಕ್ಕಿನ ಕೊನೆಯಲ್ಲಿ ವಾಸಮಾಡುವ ನರಭಕ್ಷಕ ಶಕ್ತಿಗಳು, 00:10:57.000 --> 00:11:01.000 ಇಂಥ ಶಕ್ತಿಗಳನ್ನು ಅವರ ಹಮತ್ಸಾ ದೀಕ್ಷೆ ಸಮಯದಲ್ಲಿ ಅವುಗಳನ್ನು ಎದುರಿಸಬೇಕಂತೆ. NOTE Paragraph 00:11:01.000 --> 00:11:03.000 ಈಗ, ನೀವು ಈ ಕಲ್ಪನೆಗಳ ಬಗ್ಗೆ ಯೋಚಿಸಿದರೆ, 00:11:03.000 --> 00:11:05.000 ಈ ಸಂಸ್ಕೃತಿಗಳು ವಿಭಿನ್ನ ವಾಸ್ತವಗಳನ್ನು ಸೃಷ್ಟಿಸಬಹುದು, 00:11:05.000 --> 00:11:06.000 ಅವರ ಕೆಲವು ಅಸಾಧಾರಣ ಶೋಧನೆಗಳನ್ನು 00:11:06.000 --> 00:11:11.000 ಅರ್ಥಮಾಡಿಕೊಳ್ಳಲು ನೀವು ಪ್ರಾರಂಭಿಸಬಹುದು. ಈ ಗಿಡವನ್ನು ತೆಗೆದುಕೊಳ್ಳಿ. 00:11:11.000 --> 00:11:13.000 ಈ ಚಿತ್ರವನ್ನು ನಾನು ಕಳೆದ ಏಪ್ರಿಲ್ ನಲ್ಲಿ ಉತ್ತರ-ಪಶ್ಚಿಮ ಅಮೆಜಾನಿನಲ್ಲಿ ತೆಗೆದೆ. 00:11:13.000 --> 00:11:16.000 ಇದು ಅಯಾಹೌಸ್ಕಾ, ನಿಮ್ಮಲ್ಲಿ ಬಹಳ ಜನರಿಗೆ ತಿಳಿದಿರಬಹುದು, 00:11:16.000 --> 00:11:19.000 ಇದು ಶಮನ್ ಭಂಡಾರದಲ್ಲಿರುವ ಅತ್ಯಂತ ಶಕ್ತಿಶಾಲಿ 00:11:19.000 --> 00:11:21.000 ಸೈಕೊಆಕ್ಟೀವ್ ತಯಾರಿಕೆ. 00:11:21.000 --> 00:11:23.000 ಅಯಾಹೌಸ್ಕಾ ಅತ್ಯಾಕರ್ಷಕವಾಗಲು ಏನು ಕಾರಣವೆಂದರೆ 00:11:23.000 --> 00:11:27.000 ಈ ತಯಾರಿಕೆಯಲ್ಲಿರುವ ಕೇವಲ ಔಷಧಗಳ ಸಾಮರ್ಥ್ಯವಲ್ಲ, 00:11:27.000 --> 00:11:31.000 ಆದರೆ ಅವುಗಳ ವಿಸ್ತಾರ. ಅದನ್ನು ವಾಸ್ತವಿಕವಾಗಿ ಎರಡು ಮೂಲಗಳಿಂದ ತಯಾರಿಸಲಾಗಿದೆ. 00:11:31.000 --> 00:11:33.000 ಒಂದು ಕಡೆ ಇದರಲ್ಲಿ ವುಡಿ ಲಿಯಾನಾ ಇದೆ, 00:11:33.000 --> 00:11:35.000 ಇದರಲ್ಲಿ ಬೀಟಾ-ಕಾರ್ಬೊಲೈನುಗಳ ಸರಣಿಯೇ ಇದೆ, 00:11:35.000 --> 00:11:38.000 ಹಾರ್ಮೈನ್, ಹಾರ್ಮೊಲೈನ್, ಸ್ವಲ್ಪ ಭ್ರಮೆ ಹುಟ್ಟಿಸುವಂತಹುದು. 00:11:38.000 --> 00:11:40.000 ಕೇವಲ ವೈನ್ ಸೇವಿಸುವುದು 00:11:40.000 --> 00:11:42.000 ನಿಮ್ಮ ಪ್ರಜ್ಞೆಯ ಮೂಲಕ ಹಾದುಹೋಗುವ 00:11:42.000 --> 00:11:44.000 ಒಂದು ನೀಲಿ ಬಣ್ಣದ ಅಸ್ಪಷ್ಟ ಧೂಮ, 00:11:44.000 --> 00:11:47.000 ಆದರೆ, ಕಾಫಿ ಕುಟುಂಬದ ಸೈಕೋಟ್ರಿಯಾ ವಿರಿಡಿಸ್ ಎಂಬ ಕುರುಚಲು ಗಿಡದ 00:11:47.000 --> 00:11:49.000 ಎಲೆಗಳೊಂದಿಗೆ ಬೆರೆಸಿದೆ. 00:11:49.000 --> 00:11:52.000 ಈ ಗಿಡದಲ್ಲಿ ಕೆಲವು ಶಕ್ತಿಯುತವಾದ ಟ್ರಿಪ್ಟಾಮೈನ್ ಗಳು ಇವೆ, 00:11:52.000 --> 00:11:56.000 ಬ್ರೈನ್ ಸೆರೋಟೋನಿನ್ ಗೆ ಅತಿ ಹತ್ತಿರ, ಡೈ ಮೀಥೈಲ್ ಟ್ರಿಪ್ಟಾಮೈನ್ - 00:11:56.000 --> 00:11:57.000 5-ಮೆಥಾಕ್ಸಿಡೈಮೀಥೈಲ್ ಟ್ರಿಪ್ಟಾಮೈನ್. 00:11:57.000 --> 00:11:59.000 ನೀವು ತಮ್ಮ ಮೂಗಿಗೆ ನಶ್ಯ ಏರಿಸುತ್ತಿರುವ 00:11:59.000 --> 00:12:01.000 ಯನೊಮಾಮಿಯನ್ನು ಯಾವಾಗಲಾದರೂ ನೋಡಿದ್ದೀರ, 00:12:01.000 --> 00:12:04.000 ಅದನ್ನು ವಿಭಿನ್ನ ತಳಿಗಳಿಂದ ಮಾಡುತ್ತಾರೆ 00:12:04.000 --> 00:12:08.000 ಅದರಲ್ಲಿ ಮೆಥಾಕ್ಸಿಡೈಮೀಥೈಲ್ ಟ್ರಿಪ್ಟಾಮೈನ್ ಕೂಡ ಇರುತ್ತದೆ. 00:12:08.000 --> 00:12:10.000 ಆ ಪುಡಿಯನ್ನು ಮೂಗಿಗೇರಿಸುವುದೆಂದರೆ 00:12:10.000 --> 00:12:14.000 ಬಂದೂಕಿನ ಗುಂಡು ಹೊಡೆದುಕೊಂಡಂತೆಯೇ, 00:12:14.000 --> 00:12:21.000 ಬೊರೊಕ್ಯು ಪೈಂಟಿಂಗ್ಗಳನ್ನು ಸವರಿಕೊಂಡು ವಿದ್ಯುಚ್ಚಕ್ತಿಯ ಸಾಗರದಲ್ಲಿ ಬಿದ್ದಂತೆ. (ನಗು) 00:12:21.000 --> 00:12:23.000 ಅದು ವಾಸ್ತವಿಕತೆಯನ್ನು ವಿರೂಪಗೊಳಿಸುವುದಿಲ್ಲ; 00:12:23.000 --> 00:12:24.000 ಅದು ವಾಸ್ತವಿಕತೆಯನ್ನು ಕರಗಿಸುತ್ತದೆ. NOTE Paragraph 00:12:24.000 --> 00:12:27.000 ಹೇಳಬೇಕೆಂದರೆ, ನನ್ನ ಪ್ರೊಫೆಸರ್ ರಿಚರ್ಡ್ ಇವಾನ್ ಶುಲ್ಟ್ಸ್ ಜೊತೆ ನಾನು ವಾದಿಸುತ್ತಿದ್ದೆ -- 00:12:27.000 --> 00:12:29.000 ಈ ವ್ಯಕ್ತಿ ವಿಸ್ಮಯಕಾರಿ ನಾಯಿಕೊಡೆ ಕಂಡುಹಿಡಿಯುವುದರೊಂದಿಗೆ 00:12:29.000 --> 00:12:31.000 1930ರಲ್ಲಿ ಮೆಕ್ಸಿಕೋದಲ್ಲಿ 00:12:31.000 --> 00:12:33.000 ಸೈಕೆಡೆಲಿಕ್ ಯುಗದ ಕಿಡಿ ಹೊತ್ತಿಸಿದರು. 00:12:33.000 --> 00:12:35.000 ಈ ಟ್ರಿಪ್ಟಾಮೈನುಗಳನ್ನು ಭ್ರಮೆ ಹುಟ್ಟಿಸುವ ವಸ್ತುಗಳು ಎಂದು ವಿಭಾಗ 00:12:35.000 --> 00:12:38.000 ಮಾಡಲಾಗುವುದಿಲ್ಲವೆಂದು ನಾನು ವಾದಿಸುತ್ತಿದ್ದೆ, ಏಕೆಂದರೆ ನೀವು ಅದರ ಪ್ರಭಾವಕ್ಕೆ 00:12:38.000 --> 00:12:42.000 ಒಳಗಾಗುವ ಹೊತ್ತಿಗೆ ಅದನ್ನು ಅನುಭವಿಸಲು ಮನೆಯಲ್ಲಿ ಯಾರೂ ಇರುವುದಿಲ್ಲ.(ನಗು) NOTE Paragraph 00:12:42.000 --> 00:12:45.000 ಆದರೆ, ಟ್ರಿಪ್ಟಾಮೈನುಗಳ ಲಕ್ಷಣವೆಂದರೆ ಅವನ್ನು ಬಾಯಿಯ ಮೂಲಕ ಸೇವಿಸಲಾಗದು 00:12:45.000 --> 00:12:47.000 ಏಕೆಂದರೆ, ಒಂದು ಕಿಣ್ವ ಉಪಯೋಗಿಸಿ ಅದರ ಸ್ವಭಾವ ಬದಲಾವಣೆ ಮಾಡಲಾಗಿರುತ್ತದೆ, 00:12:47.000 --> 00:12:50.000 ಈ ಕಿಣ್ವ ನೈಸರ್ಗಿಕವಾಗಿ ಮಾನೋಮೈನ್ ಆಕ್ಸಿಡೇಸ್ ಎಂದು ಕರೆಯುವ ವಸ್ತು ಮನುಷ್ಯರ ಕರುಳಿನಲ್ಲಿರುತ್ತದೆ. 00:12:50.000 --> 00:12:53.000 MAOದ ಸ್ವಭಾವವನ್ನು ಬದಲಾಯಿಸುವ ಬೇರೊಂದು ರಾಸಾಯನಿಕ ವಸ್ತುವಿನ ಜೊತೆಯಲ್ಲಿ 00:12:53.000 --> 00:12:56.000 ಇದನ್ನು ಬಾಯಿಯ ಮೂಲಕ ಸೇವಿಸಬಹುದು. 00:12:56.000 --> 00:12:57.000 ಈಗ, ವಿಸ್ಮಯಕಾರಿ ಅಂಶಗಳೆಂದರೆ 00:12:57.000 --> 00:13:01.000 ಲಿಯಾನಾದಲ್ಲಿ ದೊರೆಯುವ ಬೀಟಾ-ಕಾರ್ಬೊಲೈನ್ಗಳು 00:13:01.000 --> 00:13:04.000 ನಿರ್ದಿಷ್ಟ ವಿಧದ ಟ್ರಿಪ್ಟಾಮೈನ್ ನ್ನು ಶಕ್ತಿಯುತಗೊಳಿಸಲು 00:13:05.000 --> 00:13:08.000 ಅಗತ್ಯವಿರುವ MAO ಅವರೋಧಕಗಳು. ಈಗ, ನೀವು ನಿಮ್ಮಲ್ಲೇ ಒಂದು ಪ್ರಶ್ನೆ ಮಾಡಿ. 00:13:08.000 --> 00:13:12.000 80:00 ವಿಧದ ದಟ್ಟವಾದ ಸಸ್ಯವರ್ಗದಲ್ಲಿ 00:13:12.000 --> 00:13:16.000 ಸಸ್ಯ ಸ್ವರೂಪದ ಸಂಬಂಧವಿಲ್ಲದ ಈ ಎರಡು ಗಿಡಗಳನ್ನು ಈ ಜನ 00:13:16.000 --> 00:13:17.000 ಈ ಒಂದು ನಿರ್ದಿಷ್ಟ ರೀತಿಯಲ್ಲಿ ಬೆರೆಸಿದರೆ 00:13:17.000 --> 00:13:19.000 ಒಂದು ರೀತಿಯ ಜೈವರಾಸಾಯನಿಕ ವಿಧ ಉತ್ಪತ್ತಿಯಾಗುವುದು ಎಂಬುದನ್ನು ಹೇಗೆ ಕಂಡುಹಿಡಿದರು, 00:13:19.000 --> 00:13:21.000 ಪ್ರತ್ಯೇಕ ಭಾಗಗಳ ಮೊತ್ತಕ್ಕಿಂತ ಸಂಪೂರ್ಣ ವಸ್ತುವಿನ ಮೊತ್ತ ಹೆಚ್ಚೆ? NOTE Paragraph 00:13:21.000 --> 00:13:24.000 ಇದಕ್ಕೆ, ಅರ್ಥಹೀನವೆಂದು ನಿರ್ಧಾರವಾಗಿರುವ ಸೌಮ್ಯೋಕ್ತಿ 00:13:24.000 --> 00:13:25.000 ತಪ್ಪು-ಒಪ್ಪು ವಿಧಾನ ಉಪಯೋಗಿಸುತ್ತೇವೆ. 00:13:26.000 --> 00:13:29.000 ಆದರೆ, ನೀವು ಭಾರತೀಯರನ್ನು ಕೇಳಿ, ಅವರು ಹೇಳುತ್ತಾರೆ, "ಸಸ್ಯಗಳು ನಮ್ಮೊಂದಿಗೆ ಮಾತಾಡುತ್ತವೆ." NOTE Paragraph 00:13:29.000 --> 00:13:30.000 ಹಾಗಾದರೆ, ಇದರ ಅರ್ಥವೇನು? 00:13:30.000 --> 00:13:34.000 ಈ ಜನಾಂಗ, ಕೋಫನ್, 17 ವಿಧದ ಅಯಾಹೌಸ್ಕಾ ಹೊಂದಿದ್ದಾರೆ 00:13:34.000 --> 00:13:37.000 ಇವೆಲ್ಲವನ್ನೂ ಅವರು ಕಾಡಿನಲ್ಲಿ ಸಾಕಷ್ಟು ದೂರದಿಂದಲೇ ಗುರುತಿಸುತ್ತಾರೆ, 00:13:38.000 --> 00:13:42.000 ಎಲ್ಲವೂ ನಮ್ಮ ಕಣ್ಣಿಗೆ ಒಂದೇ ತರಹ ಕಾಣುತ್ತವೆ. 00:13:42.000 --> 00:13:44.000 ಹಾಗೂ ಅವರು ಸಸ್ಯಗಳ ವರ್ಗೀಕರಣ ಯಾವ ರೀತಿ ಮಾಡುತ್ತೀರೆಂದು ಕೇಳಿದರೆ 00:13:44.000 --> 00:13:47.000 ಅವರು ಹೇಳುತ್ತಾರೆ, "ನಿಮಗೆ ಸಸ್ಯಗಳ ಬಗ್ಗೆ ಸ್ವಲ್ಪ ತಿಳಿದಿದೆಯೆಂದು ನಾನಂದುಕೊಂಡಿದ್ದೆ, ಅಂದರೆ 00:13:47.000 --> 00:13:49.000 ನಿಮಗೇನೂ ಗೊತ್ತಿಲ್ಲವೆ?" ನಾನು ಹೇಳಿದೆ "ಇಲ್ಲ." 00:13:49.000 --> 00:13:52.000 ಈ 17 ವಿಧದ ಪ್ರತಿ ಸಸ್ಯವನ್ನೂ ಒಂದು ಹುಣ್ಣಿಮೆಯ ರಾತ್ರಿ ತೆಗೆದುಕೊಂಡರೆ 00:13:52.000 --> 00:13:55.000 ಒಂದೊಂದು ಬೇರೆ ಬೇರೆ ರಾಗದಲ್ಲಿ ಹಾಡುತ್ತವೆ. 00:13:55.000 --> 00:13:57.000 ಈಗ, ಇದು ನಿಮಗೆ ಹಾರ್ವರ್ಡಲ್ಲಿ ಒಂದು Ph.D. ತಂದುಕೊಡುವುದಿಲ್ಲ, 00:13:57.000 --> 00:14:01.000 ಆದರೆ, ಇದು ಪುಷ್ಪ ಕೇಸರಗಳನ್ನು ಎಣಿಸುವುದಕ್ಕಿಂತ ಆಸಕ್ತಿದಾಯಕವಾಗಿರುತ್ತದೆ. NOTE Paragraph 00:14:01.000 --> 00:14:02.000 ಈಗ, 00:14:02.000 --> 00:14:05.000 (ಚಪ್ಪಾಳೆ) 00:14:05.000 --> 00:14:07.000 ಈಗಿರುವ ಸಮಸ್ಯೆಯೆಂದರೆ-ಸ್ಥಳೀಯ ಜನರ ಪರಿಸ್ಥಿತಿಯ ಬಗ್ಗೆ 00:14:07.000 --> 00:14:09.000 ಅನುಕಂಪ ಇರುವ ನಾವು ಕೂಡ ಅವರನ್ನು 00:14:09.000 --> 00:14:10.000 ವಿಲಕ್ಷಣ ಮತ್ತು ರಂಗುರಂಗಾದವೆರೆಂದು 00:14:10.000 --> 00:14:12.000 ನೋಡುತ್ತೇವೆ. ಆದರೆ ಅದೇಕೊ ಅವರು ವಾಸ್ತವಿಕ ಪ್ರಪಂಚದ, ಅಂದರೆ ನಾವಿರುವ 00:14:12.000 --> 00:14:15.000 ಪ್ರಪಂಚದ ಅಂಚಿಗೆ ತಳ್ಳಲ್ಪಟ್ಟಿದ್ದಾರೆ, ನಮ್ಮ ಪ್ರಪಂಚ ಮಾತ್ರ ಸಾಗುತ್ತಿದೆ. 00:14:15.000 --> 00:14:17.000 ಆದರೆ, ಸತ್ಯಸಂಗತಿಯೆಂದರೆ ಈ 20ನೆಯ ಶತಮಾನವನ್ನು, ಇಲ್ಲಿಂದ 300 ವರ್ಷಗಳ ನಂತರ, 00:14:17.000 --> 00:14:20.000 ಅದರ ಸಮಯದಲ್ಲಿ ನಡೆದ ಯುದ್ಧಗಳು 00:14:20.000 --> 00:14:21.000 ಮತ್ತು ವೈಜ್ಞಾನಿಕ ಅವಿಷ್ಕಾರಗಳಿಗಾಗಿ ಸ್ಮರಿಸುವುದಿಲ್ಲ, 00:14:21.000 --> 00:14:23.000 ಆದರೆ ಒಂದು ಯುಗ, 00:14:24.000 --> 00:14:26.000 ನಾವು ಜೊತೆಯಲ್ಲಿ ನಿಂತು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ 00:14:26.000 --> 00:14:29.000 ಸಾಮೂಹಿಕವಾಗಿ ಆದ ನಾಶವನ್ನು ಅಂಗೀಕರಿಸಿದ ಕಾಲ 00:14:29.000 --> 00:14:32.000 ಎಂದು ಸ್ಮರಿಸಲಾಗುತ್ತದೆ. ಈಗ ಸಮಸ್ಯೆ ಬದಲಾವಣೆಯದಲ್ಲ. 00:14:32.000 --> 00:14:34.000 ಎಲ್ಲ ಸಂಸ್ಕೃತಿಗಳೂ ಎಲ್ಲ ಸಮಯಗಳಲ್ಲೂ 00:14:34.000 --> 00:14:37.000 ಜೀವನದ ನಾಟ್ಯ ಮತ್ತು ಹೊಸ 00:14:37.000 --> 00:14:38.000 ಸಾಧ್ಯತೆಗಳಲ್ಲಿ ತೊಡಗಿಸಿಕೊಂಡಿವೆ. NOTE Paragraph 00:14:39.000 --> 00:14:41.000 ಹಾಗೆಯೇ ಕೇವಲ ತಂತ್ರಜ್ಞಾನದ ಸಮಸ್ಯೆಯಲ್ಲ. 00:14:42.000 --> 00:14:44.000 ಸಿಯೋಕ್ಸ್ ಇಂಡಿಯನ್ನರು ಸಿಯೋಕ್ಸ್ ಆಗಿಯೇ ಉಳಿದರು 00:14:44.000 --> 00:14:45.000 ಅವರು ಬಿಲ್ಲು ಬಾಣಗಳನ್ನು ಉಪಯೋಗಿಸುವುದು ಬಿಟ್ಟರೂ ಕೂಡ 00:14:45.000 --> 00:14:47.000 ಒಬ್ಬ ಅಮೆರಿಕನ್ ಕುದುರೆ ಮತ್ತು ಗಾಡಿಯನ್ನು 00:14:47.000 --> 00:14:49.000 ಬಿಟ್ಟರೂ ಅಮೆರಿಕನ್ ಆಗಿರುವಂತೆ. 00:14:49.000 --> 00:14:50.000 ಈ ನರಕುಲ ಮಂಡಲದ ಏಕೀಕರಣಕ್ಕಿರುವ ಭಯ 00:14:50.000 --> 00:14:54.000 ಬದಲಾವಣೆ ಅಥವಾ ತಂತ್ರಜ್ಞಾನದ್ದಲ್ಲ. ಅದು ಅಧಿಕಾರ. 00:14:54.000 --> 00:14:56.000 ಅಧಿಕಾರ ಲಾಲಸೆಯ ಒರಟು ಮುಖ. 00:14:56.000 --> 00:14:58.000 ನೀವು ಯಾವಾಗ ಪ್ರಪಂಚದ ಕಡೆ ಕಣ್ಣು ಹಾಯಿಸಿ ನೋಡಿದರೂ 00:14:58.000 --> 00:15:01.000 ಈ ಸಂಸ್ಕೃತಿಗಳು ಅಳಿಸಿಹೋಗುವಂತಹವಾಗಿರಲಿಲ್ಲ ಎಂದು ನಿಮಗೆ ತಿಳಿಯುತ್ತದೆ. 00:15:01.000 --> 00:15:03.000 ಇವರೆಲ್ಲಾ ಕ್ರಿಯಾಶೀಲ ಜೀವಂತ ಜನರು, 00:15:03.000 --> 00:15:06.000 ಇವರು ಅಳವಡಿಸಿಕೊಳ್ಳಲಾಗದಂತಹ ಆದರೆ ಗುರುತಿಸಬಹುದಾದಂಥ 00:15:06.000 --> 00:15:08.000 ಶಕ್ತಿಗಳಿಂದ ಅಸ್ತಿತ್ವ ಕಳೆದುಕೊಂಡವರು 00:15:08.000 --> 00:15:10.000 ಅದು ಪೆನನ್ ಮಾತೃಭೂಮಿಯಲ್ಲಿನ 00:15:11.000 --> 00:15:13.000 ಘೋರವಾದ ಅರಣ್ಯನಾಶವಾಗಿರಬಹುದು 00:15:13.000 --> 00:15:16.000 ದಕ್ಷಿಣ ಪೂರ್ವ ಏಷಿಯಾದ ಸರಾವಕ್ನ ಅಲೆಮಾರಿ ಜನಾಂಗವಿರಬಹುದು -- 00:15:16.000 --> 00:15:20.000 – ಒಂದು ಶತಮಾನದ ಹಿಂದೆ ಈ ಜನರು ಸ್ವತಂತ್ರವಾಗಿ ಕಾಡಿನಲ್ಲಿ ವಾಸಿಸುತ್ತಿದ್ದರು, 00:15:20.000 --> 00:15:23.000 ಹಾಗೂ ಈಗ ಎಲ್ಲರೂ ನದಿ ತೀರಗಳಲ್ಲಿ ದಾಸತ್ವ ಮತ್ತು 00:15:23.000 --> 00:15:25.000 ವೇಶ್ಯಾವಾಟಿಕೆಗೆ ಶರಣಾಗಿದ್ದಾರೆ, 00:15:25.000 --> 00:15:29.000 ಆ ನದಿಗಳು ಕೆಸರಿನಿಂದ ಕಲುಷಿತವಾಗರುವುದನ್ನು ನೀವು ನೋಡುತ್ತೀರಿ 00:15:29.000 --> 00:15:31.000 ಇವು ಅರ್ಧ ಬೋರ್ನಿಯೋವನ್ನು 00:15:31.000 --> 00:15:32.000 ದಕ್ಷಿಣ ಚೈನಾ ಸಮುದ್ರಕ್ಕೆ ಸಾಗಿಸುತ್ತಿವೆ, 00:15:32.000 --> 00:15:34.000 ಅಲ್ಲಿ ಜಪಾನೀ ಸಾಗಣೆದಾರರು ಅಂಚಿನಲ್ಲಿ ಬೆಳಕನ್ನು ಹೊತ್ತುಕೊಂಡು 00:15:34.000 --> 00:15:38.000 ತಮ್ಮ ದೋಣಿಗಳಿಗೆ ಕಾಡಿನ ಮರದ ದಿಮ್ಮಿಗಳನ್ನು ತುಂಬಿಕೊಳ್ಳಲು ಸಿದ್ಧರಾಗಿದ್ದಾರೆ. 00:15:38.000 --> 00:15:39.000 ಅಥವಾ, ಯಾನೊಮಾಮಿ ವಿಚಾರದಲ್ಲಿ, 00:15:39.000 --> 00:15:41.000 ಉತ್ಪತ್ತಿಯಾಗಿರುವ ರೋಗಕಾರಕಗಳು. 00:15:41.000 --> 00:15:43.000 ಚಿನ್ನದ ಅವಿಷ್ಕಾರದ ಸಮಯದಲ್ಲಿ. NOTE Paragraph 00:15:43.000 --> 00:15:45.000 ಅಥವಾ, ಟಿಬೆಟಿನ ಪರ್ವತಗಳಿಗೆ ಹೋದರೆ, 00:15:45.000 --> 00:15:47.000 ಇಲ್ಲಿ ನಾನು ಈಚೆಗೆ ಸಾಕಷ್ಟು ಸಂಶೋಧನೆಗಳನ್ನು ನಡೆಸುತ್ತಿದ್ದೇನೆ, 00:15:48.000 --> 00:15:51.000 ನೀವು ರಾಜಕೀಯ ನಿಯಂತ್ರಣದ ಕ್ರೂರ ಮುಖಗಳನ್ನು ನೋಡುತ್ತೀರ. 00:15:51.000 --> 00:15:53.000 ನಿಮಗೆ ತಿಳಿದಿದೆ, ಜನಾಂಗನಾಶ, ದೈಹಿಕವಾಗಿ ಜನಗಳನ್ನು ನಾಶಮಾಡುವುದನ್ನು 00:15:53.000 --> 00:15:55.000 ಸಾರ್ವತ್ರಿಕವಾಗಿ ಖಂಡಿಸಲಾಗುತ್ತದೆ, ಆದರೆ ಜನಕುಲನಾಶ, 00:15:56.000 --> 00:15:59.000 ಜನಗಳ ಜೀವನರೀತಿಯ ಹತ್ಯೆಯನ್ನು ಖಂಡಿಸುವುದಿರಲಿ, 00:15:59.000 --> 00:16:02.000 ಸಾರ್ವತ್ರಿಕವಾಗಿ ಹಲವು ಸ್ತರಗಳಲ್ಲಿ, 00:16:02.000 --> 00:16:04.000 ಅಭಿವೃದ್ಧಿಯ ಕಾರ್ಯತಂತ್ರ ಎಂದು ಆಚರಿಸಲಾಗುತ್ತದೆ. 00:16:04.000 --> 00:16:07.000 ಹಾಗೆಯೇ ಅದರ ನೆಲಮಟ್ಟದಲ್ಲಿ ಸಂಚರಿಸದಿದ್ದರೆ 00:16:07.000 --> 00:16:09.000 ಟಿಬೆಟ್ನ ನೋವು ನೀವು ಅರ್ಥಮಾಡಿಕೊಳ್ಳಲಾಗದು. 00:16:09.000 --> 00:16:13.000 ಪಶ್ಚಿಮ ಚೈನಾದ ಚೆಂಗಡುಯಿಂದ ನಾನು ಒಮ್ಮೆ 6:00 ಮೈಲಿಗಳಷ್ಟು ಪ್ರಯಾಣಮಾಡಿದೆ 00:16:13.000 --> 00:16:16.000 ನೆಲ ಹಾದಿಯ ಮೂಲಕ ದಕ್ಷಿಣಪೂರ್ವ ಟಿಬೆಟ್ ಮೂಲಕ ಲ್ಹಾಸಾ ತಲುಪಿದೆ 00:16:16.000 --> 00:16:20.000 ಒಬ್ಬ ಚಿಕ್ಕವಯಸ್ಸಿನ ಸಹೋದ್ಯೋಗಿಯೊಂದಿಗೆ ಲ್ಹಾಸಾ ತಲುಪಿದ ನಂತರವೇ 00:16:20.000 --> 00:16:23.000 ನೀವು ಕೇಳಿಸಿಕೊಳ್ಳುವ ನನಗೆ ಅಂಕಿಅಂಶಗಳ ಹಿಂದಿರುವ 00:16:23.000 --> 00:16:24.000 ಸತ್ಯಾಂಶಗಳು ಗೋಚರವಾಯಿತು. 00:16:24.000 --> 00:16:28.000 6:00 ಪವಿತ್ರ ಸ್ಮಾರಕಗಳು ನಾಶವಾಗಿ ಬರೀ ಧೂಳು ಮತ್ತು ಬೂದಿಯಾಗಿವೆ. 00:16:28.000 --> 00:16:31.000 1.2 ದಶಲಕ್ಷ ಜನರು ಸೇನಾಪಡೆಗಳಿಂದ ಸಂಸ್ಕೃತಿ 00:16:31.000 --> 00:16:32.000 ಕ್ರಾಂತಿಯ ಸಮಯದಲ್ಲಿ ಕೊಲ್ಲಲ್ಪಟ್ಟರು. 00:16:33.000 --> 00:16:35.000 ಈ ನವಯುವಕನ ತಂದೆಯನ್ನು ಪಂಚೆನ್ ಲಾಮಾಗೆ ಸಮರ್ಪಿಸಲಾಗಿತ್ತು. 00:16:35.000 --> 00:16:37.000 ಅಂದರೆ ಅವನನ್ನು ತಕ್ಷಣ ಕೊಲ್ಲಲಾಯಿತು. 00:16:37.000 --> 00:16:39.000 ಚೈನಾ ದೇಶ ದಂಡೆತ್ತಿದಾಗ. 00:16:39.000 --> 00:16:41.000 ಇವನ ಅಂಕಲ್ ತನ್ನ ಗುರುವಿನೊಂದಿಗೆ ವಲಸೆಹೋಗುವವರ ಜೊತೆಯಲ್ಲಿ 00:16:41.000 --> 00:16:44.000 ನೇಪಾಳಕ್ಕೆ ಹೋದನು. 00:16:44.000 --> 00:16:46.000 ಅವನ ತಾಯಿಯನ್ನು ಶ್ರೀಮಂತಿಕೆ ಹೊಂದಿರುವ 00:16:46.000 --> 00:16:48.000 ಅಪರಾಧಕ್ಕಾಗಿ ಸೆರೆಯಲ್ಲಿರಿಸಲಾಯಿತು. 00:16:49.000 --> 00:16:51.000 ಅವನನ್ನು ಎರಡು ವರ್ಷದವನಿದ್ದಾಗ ಅವಳ ಸ್ಕರ್ಟಿನ ಅಡಿಯಲ್ಲಿ 00:16:51.000 --> 00:16:53.000 ಜೈಲಿನೊಳಕ್ಕೆ ಗುಟ್ಟಾಗಿ ಸಾಗಿಸಲಾಯಿತು 00:16:53.000 --> 00:16:55.000 ಏಕೆಂದರೆ ಅವನಿಲ್ಲದೆ ಅವಳಿಗೆ ಇರಲು ಸಾಧ್ಯವಾಗುತ್ತಿರಲಿಲ್ಲ. 00:16:55.000 --> 00:16:57.000 ಈ ಸಾಹಸ ಕೆಲಸ ಮಾಡಿದ ಅವನ ಸೋದರಿಯನ್ನು 00:16:57.000 --> 00:16:58.000 ಒಂದು ಶಿಕ್ಷಣ ಶಿಬಿರಕ್ಕೆ ಕಳಿಸಲಾಯಿತು. 00:16:58.000 --> 00:17:00.000 ಒಂದು ದಿನ ಅವಳಿಗರಿವಿಲ್ಲದೆ ಮಾವೊನ ತೋಳುಪಟ್ಟಿಯ 00:17:01.000 --> 00:17:03.000 ಮೇಲೆ ಕಾಲಿಟ್ಟಳು, ಈ ಉಲ್ಲಂಘನೆಗಾಗಿ 00:17:03.000 --> 00:17:06.000 ಅವಳಿಗೆ ಏಳು ವರ್ಷ ಕಠಿಣ ಶಿಕ್ಷೆ ವಿಧಿಸಲಾಯಿತು. 00:17:06.000 --> 00:17:09.000 ಟಿಬೆಟ್ನ ನೋವು ಸಹಿಸಲಸಾಧ್ಯ, 00:17:09.000 --> 00:17:12.000 ಆದರೆ ಅದರಿಂದ ಹೊರಬಂದಿರುವ ಜನರ ಚೈತನ್ಯ ಅಸಾಧಾರಣವಾದದ್ದು. NOTE Paragraph 00:17:13.000 --> 00:17:16.000 ಅಂತ್ಯದಲ್ಲಿ, ವಾಸ್ತವವಾಗಿ ಅದೊಂದು ಆಯ್ಕೆ. 00:17:16.000 --> 00:17:19.000 ನಾವು ಒಂದು ವೈವಿಧ್ಯವಿಲ್ಲದ ಏಕವರ್ಣದ ಪ್ರಪಂಚದಲ್ಲಿರಬೇಕೋ 00:17:19.000 --> 00:17:22.000 ಅಥವಾ ಬಹುಬಣ್ಣದ ವಿಭಿನ್ನತೆಯಿಂದ ಕೂಡಿದ ವಿಶ್ವವನ್ನು ಅಪ್ಪಿಕೊಳ್ಳಬೇಕೋ? 00:17:22.000 --> 00:17:25.000 ಮಾರ್ಗರೇಟ್ ಮೀಡ್, ವಿಖ್ಯಾತ ಮಾನವಶಾಸ್ತ್ರಜ್ಞೆ, ತಾವು ಸಾಯುವ ಮೊದಲು ಹೀಗೆ ಹೇಳಿದ್ದಾರೆ, 00:17:25.000 --> 00:17:28.000 ಅವರ ಭಯವೆಂದರೆ ನಾವು ಈ ನಯವಾದ ಆಕಾರವಿಲ್ಲದ 00:17:28.000 --> 00:17:30.000 ಜಾತಿವಿಶಿಷ್ಟ ಪ್ರಪಂಚ ದೃಷ್ಟಿಹೊಂದಿದರೆ 00:17:30.000 --> 00:17:35.000 ನಾವು ಮಾನವನ ಆಲೋಚನೆ ಅಂತರದ ಸಂಕುಚಿತ ಭಾವನೆಗಳ 00:17:35.000 --> 00:17:39.000 ವಿನ್ಯಾಸಕ್ಕೆ ಇಳಿಯುವುದಲ್ಲದೆ, 00:17:39.000 --> 00:17:40.000 ಇತರ ಸಾಧ್ಯತೆಗಳು ಎಲ್ಲಿವೆ ಎಂಬುದನ್ನು ಮರೆತೆವಲ್ಲವೆ ಎಂದು ಒಂದು 00:17:40.000 --> 00:17:43.000 ದಿನ ನಮ್ಮಕನಸಿನಿಂದ ಎಚ್ಚೆತ್ತು ಅಂದುಕೊಳ್ಳುತ್ತೇವೆ. NOTE Paragraph 00:17:44.000 --> 00:17:47.000 ಹಾಗೂ, ನಮ್ಮ ಸಂತತಿ ಸುಮಾರು 1,50:00 ವರ್ಷಗಳಿಂದ ಅಸ್ತಿತ್ವದಲ್ಲಿದೆಯೆಂಬುದನ್ನು 00:17:47.000 --> 00:17:49.000 ದೈನ್ಯದಿಂದ ನೆನಪಿಸಿಕೊಳ್ಳಬೇಕು. 00:17:49.000 --> 00:17:52.000 ನವ ಶಿಲಾಯುಗ -- ನಮಗೆ ಕೃಷಿಯನ್ನು ಕೊಟ್ಟಿತು 00:17:52.000 --> 00:17:54.000 ಆ ಸಮಯದಲ್ಲಿ ನಾವು ಬೀಜದ ಭಕ್ತಿಗೆ ಸೋತುಹೋದೆವು, 00:17:54.000 --> 00:17:56.000 ಶಮನ್ ಗೀತೆಗಳನ್ನು ಪದಚ್ಯುತಿಗೊಳಿಸಿ 00:17:56.000 --> 00:17:57.000 ಪೌರೋಹಿತ್ಯದ ಪಾಠವನ್ನು ಅಪ್ಪಿಕೊಂಡೆವು, 00:17:57.000 --> 00:18:00.000 ನಾವು ಪ್ರಧಾನ ಮಠಾಧಿಪತಿಗಳ ವೈಶಿಷ್ಟ್ಯತೆ ಬೆಳೆಸಿದೆವು -- 00:18:00.000 --> 00:18:02.000 ಅದು ಕೇವಲ 10:00 ವರ್ಷಗಳ ಹಿಂದೆ. 00:18:02.000 --> 00:18:04.000 ಈ ನೂತನ ಕೈಗಾರಿಕಾ ಪ್ರಪಂಚ ನಮಗೆ ತಿಳಿದಂತೆ 00:18:04.000 --> 00:18:06.000 ಕೇವಲ 300 ವರ್ಷಗಳು ಹಳೆಯದು. 00:18:06.000 --> 00:18:08.000 ಈಗ, ಆ ಖಾಲಿ ಚರಿತ್ರೆ ನನಗೆ ಸೂಚಿಸುವುದಿಲ್ಲ 00:18:08.000 --> 00:18:11.000 ಮುಂಬರುವ ಶತಮಾನದಲ್ಲಿ ನಾವು ಎದುರಿಸಬಹುದಾದ 00:18:11.000 --> 00:18:13.000 ಎಲ್ಲ ಸವಾಲುಗಳಿಗೂ ಎಲ್ಲ ಉತ್ತರಗಳೂ ಇವೆಯೆಂದು. 00:18:13.000 --> 00:18:15.000 ಪ್ರಪಂಚದ ಈ ಅಸಂಖ್ಯಾತ ಸಂಸ್ಕೃತಿಗಳು 00:18:15.000 --> 00:18:18.000 ಮಾನವೀಯತೆಯ ಅರ್ಥ ಏನೆಂದು ಕೇಳಿದಾಗ 00:18:18.000 --> 00:18:20.000 ಅವು, 10:00 ವಿಭಿನ್ನ ದನಿಗಳಲ್ಲಿ ಉತ್ತರಿಸುತ್ತವೆ NOTE Paragraph 00:18:20.000 --> 00:18:26.000 ಹಾಗೂ ಆ ಗೀತೆಯ ಒಳಗೆ ನಾವು ಸಾಧ್ಯತೆಯನ್ನು ಕಂಡುಕೊಳ್ಳುತ್ತೇವೆ 00:18:26.000 --> 00:18:29.000 ನಾವು ಏನು ಎಂದು: ಸಂಪೂರ್ಣವಾಗಿ ಜ್ಞಾನದಿಂದ ಕೂಡಿದ ಸಂತತಿ, 00:18:29.000 --> 00:18:32.000 ಎಲ್ಲ ಜನಗಳೂ ಮತ್ತು ಎಲ್ಲ ತೋಟಗಳು ವಿಕಾಸ ಹೊಂದಲು 00:18:32.000 --> 00:18:38.000 ದಾರಿ ಕಂಡುಕೊಳ್ಳುತ್ತವೆ . ಹಾಗೆಯೇ ಆಶಾವಾದದ ಉತ್ಕೃಷ್ಟ ಕ್ಷಣಗಳೂ ಇವೆ. NOTE Paragraph 00:18:38.000 --> 00:18:41.000 ಈ ಫೋಟೊ ನಾನು ಬಾಫಿನ್ ದ್ವೀಪದ ಉತ್ತರ ತುದಿಯಲ್ಲಿ ತೆಗೆದದ್ದು 00:18:41.000 --> 00:18:43.000 ಕೆಲವು ಇನ್ಯೂಟ್ ಜನಗಳ ಜೊತೆ ಬೇಟೆಗೆ ಹೋದಾಗ, 00:18:44.000 --> 00:18:47.000 ಹಾಗೂ ಈ ಮನುಷ್ಯ, ಒಲಾಯುಕ್, ತನ್ನ ತಾತನ ಅದ್ಭುತವಾದ ಕಥೆಯನ್ನು ಹೇಳಿದ. 00:18:48.000 --> 00:18:50.000 ಕೆನಡಾದ ಸರ್ಕಾರ ಯಾವಾಗಲೂ ದಯಾಮಯಿಯಲ್ಲ 00:18:50.000 --> 00:18:52.000 ಇನ್ಯೂಟ್ ಜನರಿಗೆ, ಹಾಗೂ 1950ರ ದಶಕದಲ್ಲಿ 00:18:52.000 --> 00:18:55.000 ನಮ್ಮ ಸಾರ್ವಭೌಮತ್ವ ಸ್ಥಾಪಿಸಲು, ಅವರನ್ನು ವಸಾಹತುಗಳಲ್ಲಿರಲು ನಾವು ಒತ್ತಾಯಿಸಿದೆವು. 00:18:55.000 --> 00:18:59.000 ಈ ಮುದಿ ವ್ಯಕ್ತಿಯ ತಾತ ಹೋಗಲು ನಿರಾಕರಿಸಿದ. 00:18:59.000 --> 00:19:03.000 ಅವನ ಕುಟುಂಬ, ಅವನ ಜೀವಕ್ಕೆ ಅಪಾಯ ಬರಬಹುದೆಂದು, ಅವನ ಎಲ್ಲ ಆಯುಧಗಳನ್ನೂ ಕೊಂಡೊಯ್ದರು, 00:19:03.000 --> 00:19:04.000 ಅವನ ಎಲ್ಲ ಸಲಕರಣೆಗಳನ್ನೂ ಕೂಡ. 00:19:05.000 --> 00:19:07.000 ಈಗ, ನಿಮಗೆ ತಿಳಿದಿದೆ ಇನ್ಯೂಟ್ಗಳಿಗೆ ಛಳಿಯ ಭಯವಿಲ್ಲ; 00:19:07.000 --> 00:19:08.000 ಅವರು ಅದರ ಅವಕಾಶವನ್ನು ತೆಗೆದುಕೊಂಡರು. 00:19:08.000 --> 00:19:11.000 ಅವರ ವಾಹನದ ಹಾಸನ್ನು ಮೂಲತಃ ಮೀನಿನಿಂದ ಮಾಡಲಾಗಿತ್ತು 00:19:11.000 --> 00:19:12.000 ಜಿಂಕೆಯ ಚರ್ಮದಲ್ಲಿ ಸುತ್ತಿ. 00:19:12.000 --> 00:19:17.000 ಆದರೆ, ಈ ವ್ಯಕ್ತಿಯ ತಾತ ಉತ್ತರ ಧೃವದ ರಾತ್ರಿಯಿಂದ ವಿಚಲಿತನಾಗಲಿಲ್ಲ 00:19:17.000 --> 00:19:19.000 ಅಥವಾ ಹಿಮದ ಬಿರುಗಾಳಿಗೂ ಅಂಜಲಿಲ್ಲ. 00:19:19.000 --> 00:19:22.000 ಸುಮ್ಮನೆ ಹೊರಕ್ಕೆ ಹೊರಟ, ತನ್ನ ಸೀಲ್ ಚರ್ಮದ ಪ್ಯಾಂಟನ್ನು ಬಿಚ್ಚಿದ 00:19:23.000 --> 00:19:26.000 ತನ್ನ ಕೈಮೇಲೆ ಮಲವಿಸರ್ಜನೆ ಮಾಡಿಕೊಂಡ. ಈ ಮಲ ಮಂಜುಗಡ್ಡೆಯಾಗುತ್ತಿದ್ದಂತೆ 00:19:26.000 --> 00:19:29.000 ಅದನ್ನು ಒಂದು ಚೂಪಾದ ಕತ್ತಿಯ ಆಕಾರ ಮಾಡಿದ. 00:19:29.000 --> 00:19:31.000 ಈ ಮಲದ ಕತ್ತಿಯಮೇಲೆ ತನ್ನ ಎಂಜಲನ್ನು ಅದರ ಚೂಪಾದ ಭಾಗಕ್ಕೆ ಸವರಿದ 00:19:31.000 --> 00:19:34.000 ಹಾಗೂ ಅದು ಪೂರ್ತಿ ಗಟ್ಟಿಯಾದ ನಂತರ ಅದರಿಂದ ಒಂದು ನಾಯಿಯ ಕತ್ತು ಕತ್ತರಿಸಿದ. 00:19:34.000 --> 00:19:37.000 ನಾಯಿಯ ಚರ್ಮ ಸುಲಿದು ಒಂದು ಕವಚ ತಯಾರುಮಾಡಿದ 00:19:37.000 --> 00:19:40.000 ಅದರ ಎದೆಗೂಡಿನಿಂದ ಮಂಜುಗಡ್ಡೆಯ ಮೇಲೆ ಚಲಿಸುವ ಸಾಧನ ಮಾಡಿದ 00:19:41.000 --> 00:19:42.000 ಪಕ್ಕದಲ್ಲಿದ್ದ ಮತ್ತೊಂದು ನಾಯಿಯನ್ನು ಹೊತ್ತು 00:19:42.000 --> 00:19:46.000 ಮಂಜುಗಡ್ಡೆಗಳ ಮೇಲೆ ತಪ್ಪಿಸಿಕೊಂಡ, ಸೊಂಟದ ಬೆಲ್ಟಿನಲ್ಲಿ ಮಲದ ಕತ್ತಿಯಿಟ್ಟುಕೊಂಡು. 00:19:46.000 --> 00:19:50.000 ಏನೂ ಇಲ್ಲದೆ ಇರುವುದು ಹೇಗೆ ಎಂದುಕೊಳ್ಳುತ್ತೇವೆ. (ನಗು) NOTE Paragraph 00:19:50.000 --> 00:19:51.000 ಇದು, ಹಲವು ವಿಧಗಳಲ್ಲಿ ಸಾಧ್ಯ. 00:19:51.000 --> 00:19:53.000 (ಚಪ್ಪಾಳೆ) 00:19:53.000 --> 00:19:55.000 ಇದು ಇನ್ಯೂಟ್ ಜನರಲ್ಲಿನ ಚೈತನ್ಯದ ಪ್ರತೀಕ 00:19:55.000 --> 00:19:58.000 ಹಾಗೂ ಪ್ರಪಂಚದ ಎಲ್ಲ ಮೂಲನಿವಾಸಿಗಳ ಶಕ್ತಿಯ ಪ್ರತೀಕ. 00:19:58.000 --> 00:20:00.000 ಏಪ್ರಿಲ್ 1999ರಲ್ಲಿ ಕೆನಡಾದ ಸರ್ಕಾರ 00:20:00.000 --> 00:20:03.000 ಇನ್ಯೂಟ್ನ ಪೂರ್ತಿ ನಿಯಂತ್ರಣ ಹಿಂದಿರುಗಿಸಿತು 00:20:03.000 --> 00:20:06.000 ಕ್ಯಾಲಿಫೋರ್ನಿಯಾ ಮತ್ತು ಟೆಕ್ಸಾಸ್ ಎರಡರ ಒಟ್ಟು ವಿಸ್ತಾರಕ್ಕಿಂತ ಇನ್ನೂ ಹೆಚ್ಚು ಭೂಮಿ. 00:20:06.000 --> 00:20:08.000 ಅದು ನಮ್ಮ ಹೊಸ ಮಾತೃಭೂಮಿ. ಅದನ್ನು ನುನಾವುಟ್ ಎನ್ನುತ್ತೇವೆ. 00:20:09.000 --> 00:20:12.000 ಅದೊಂದು ಸ್ವತಂತ್ರ ಆಡಳಿತ ಪ್ರದೇಶ. ಅವರು ಎಲ್ಲ ಖನಿಜ ಸಂಪತ್ತನ್ನೂ ನಿಯಂತ್ರಿಸುತ್ತಾರೆ. 00:20:12.000 --> 00:20:14.000 ಒಂದು ಆಶ್ಚರ್ಯಕರ ಉದಾಹರಣೆಯೆಂದರೆ ಒಂದು ದೇಶ 00:20:14.000 --> 00:20:18.000 ಹೇಗೆ ತನ್ನ ಜನತೆಯನ್ನು ಸಮೀಪಿಸಿ ಅವರಿಗೆ ಮತ್ತೆ ತಮ್ಮ ನೆಲೆಯನ್ನು ವಹಿಸಿಕೊಡುವುದು. NOTE Paragraph 00:20:19.000 --> 00:20:22.000 ಅಂತ್ಯದಲ್ಲಿ, ನನಗನ್ನಿಸುತ್ತದೆ, 00:20:22.000 --> 00:20:23.000 ಪ್ರಯಾಣ ಬೆಳೆಸಿರುವ ನಮ್ಮೆಲ್ಲರ ಮಟ್ಟಿಗೆ 00:20:23.000 --> 00:20:25.000 ಈ ಗ್ರಹದ ಮೂಲೆಗಳಲ್ಲಿ ಸಂಚರಿಸಿದವರಿಗೆ 00:20:27.000 --> 00:20:28.000 ಅವುಗಳು ಬಹುದೂರವಲ್ಲ ಎಂದು ಅರಿವಾಗುತ್ತದೆ. 00:20:28.000 --> 00:20:30.000 ಅವೆಲ್ಲ ಯಾರೋ ಒಬ್ಬರ ಮಾತೃಭೂಮಿ. 00:20:30.000 --> 00:20:32.000 ಅವು ಮಾನವನ ಆಲೋಚನೆಯ ಶಾಖೆಗಳನ್ನು ಪ್ರತಿನಿಧಿಸುತ್ತವೆ. 00:20:32.000 --> 00:20:36.000 ಅದು ಕಾಲದ ಪ್ರಾರಂಭದಷ್ಟು ಹಳೆಯದು. ಮತ್ತೆ ನಾವೆಲ್ಲರೂ 00:20:36.000 --> 00:20:39.000 ಈ ಮಕ್ಕಳ ಕನಸುಗಳು, ನಮ್ಮ ಸ್ವಂತ ಮಕ್ಕಳ ಕನಸುಗಳಂತೆ, 00:20:39.000 --> 00:20:42.000 ನಗ್ನ ಭೂಗೋಳದ ಆಶಾವಾದದ ಭಾಗವಾಗುತ್ತೇವೆ. NOTE Paragraph 00:20:42.000 --> 00:20:46.000 ಆದ್ದರಿಂದ, ನ್ಯಾಶನಲ್ ಜಿಯಾಗ್ರಾಫಿಕ್ನಲ್ಲಿ ನಾವೇನು ಮಾಡುತ್ತಿದ್ದೇವೆಂದರೆ 00:20:46.000 --> 00:20:50.000 ನಮ್ಮ ಪ್ರಕಾರ ರಾಜಕೀಯ ವ್ಯಕ್ತಿಗಳು 00:20:50.000 --> 00:20:51.000 ವಾದವಿವಾದವನ್ನು ಬಿಟ್ಟು ಏನನ್ನೂ ಸಾಧಿಸುವುದಿಲ್ಲ. -- 00:20:51.000 --> 00:20:53.000 (ಚಪ್ಪಾಳೆ) 00:20:53.000 --> 00:20:55.000 ವಾದವಿವಾದ ಏನನ್ನೂ ಸಾಧಿಸುವುದಿಲ್ಲ ಎಂದು ನಮ್ಮ ಅನಿಸಿಕೆ, 00:20:55.000 --> 00:20:58.000 ಆದರೆ, ಕಥೆ ಹೇಳುವುದರಿಂದ ಪ್ರಪಂಚವನ್ನು ಬದಲಾಯಿಸಬಹುದು 00:20:58.000 --> 00:21:01.000 ಆದ್ದರಿಂದ ಕಥೆ ಹೇಳುವುದರಲ್ಲಿ ನಮ್ಮ ಸಂಸ್ಥೆ ಅತ್ಯುತ್ತಮ 00:21:01.000 --> 00:21:04.000 ಪ್ರಪಂಚದಲ್ಲಿಯೇ. ನಮ್ಮ ವೆಬ್ ಸೈಟ್ ತಿಂಗಳಿಗೆ 35 ದಶಲಕ್ಷ ಭೇಟಿಗಳನ್ನು ನೋಡುತ್ತದೆ. 00:21:04.000 --> 00:21:07.000 ನಮ್ಮ ಟೆಲಿವಿಶನ್ ಚಾನಲ್ ನ್ನು 156 ದೇಶಗಳು ಬಿತ್ತರಿಸುತ್ತವೆ. 00:21:08.000 --> 00:21:10.000 ಲಕ್ಷಾಂತರ ಜನ ನಮ್ಮ ಪತ್ರಿಕೆಯನ್ನು ಓದುತ್ತಾರೆ. 00:21:10.000 --> 00:21:13.000 ಮತ್ತು ನಾವು ಮಾಡುತ್ತಿರುವುದೇನೆಂದರೆ ಗಂಭೀರ ಪ್ರವಾಸಗಳು 00:21:13.000 --> 00:21:15.000 ನರಕುಲ ಮಂಡಲಕ್ಕೆ ನಮ್ಮ ವೀಕ್ಷಕರನ್ನು ಕರೆದೊಯ್ಯುತ್ತೇವೆ 00:21:15.000 --> 00:21:17.000 ಸಾಂಸ್ಕೃತಿಕ ವೈವಿಧ್ಯತೆಗಳ ತಾಣಕ್ಕೆ 00:21:18.000 --> 00:21:20.000 ತಾವು ನೋಡುವ ದೃಶ್ಯಗಳಿಂದ 00:21:20.000 --> 00:21:22.000 ಅವರು ವಿಸ್ಮಯರಾಗುತ್ತಾರೆ, ಹಾಗೂ ಆಶೆಯಿದೆ, 00:21:22.000 --> 00:21:25.000 ಒಬ್ಬರಾದ ಮೇಲೊಬ್ಬರು, ನಿಧಾನವಾಗಿ 00:21:25.000 --> 00:21:27.000 ಮಾನವಶಾಸ್ತ್ರದ ಕೇಂದ್ರ ಅಂತರ್ಜ್ಞಾನವನ್ನು ಅಪ್ಪಿಕೊಳ್ಳುತ್ತಾರೆ: 00:21:27.000 --> 00:21:31.000 ಈ ಪ್ರಪಂಚ ವಿಭಿನ್ನ ರೀತಿಯಲ್ಲಿ ಅಸ್ತಿತ್ವದಲ್ಲಿರಲು ಅರ್ಹವಾಗಿದೆ, 00:21:31.000 --> 00:21:32.000 ನಾವು ಇಲ್ಲಿ ವಾಸಿಸಲು ದಾರಿ ಹುಡುಕಿಕೊಳ್ಳುತ್ತೇವೆ 00:21:32.000 --> 00:21:35.000 ನೈಜವಾದ ಬಹುಸಂಸ್ಕೃತಿಯ ಬಹುತತ್ವ ಪ್ರಪಂಚದಲ್ಲಿ 00:21:35.000 --> 00:21:37.000 ಎಲ್ಲಾ ಜನರ ಎಲ್ಲಾ ವಿವೇಕ 00:21:37.000 --> 00:21:40.000 ನಮ್ಮೆಲ್ಲರ ಸಾಮುದಾಯಿಕ ಯೋಗಕ್ಷೇಮಕ್ಕೆ ನೆರವಾಗುತ್ತದೆ. NOTE Paragraph 00:21:40.000 --> 00:21:41.000 ನಿಮಗೆ ಧನ್ಯವಾದಗಳು. 00:21:41.000 --> 00:21:43.000 (ಚಪ್ಪಾಳೆ)