< Return to Video

ಪ್ರಣವ್ ಮಿಸ್ತ್ರಿ: ಆರನೆಯ ಇಂದ್ರಿಯ ತಂತ್ರಜ್ಞಾನದ ಜನಕ

  • 0:00 - 0:02
    ನಾವು ಬೆಳೆದಿದ್ದೇವೆ
  • 0:02 - 0:05
    ನಮ್ಮ ಸುತ್ತಮುತ್ತಲಿನ ಅನೇಕ ಭೌತಿಕ ವಸ್ತುಗಳ ಜೊತೆಗಿನ ಸಂವಹನದೊಂದಿಗೆ
  • 0:05 - 0:07
    ಅವುಗಳಲ್ಲಿ ಅಗಾಧವಾದ ಸಂಖ್ಯೆಯ
  • 0:07 - 0:09
    ವಸ್ತುಗಳನ್ನು ನಾವು ದಿನನಿತ್ಯ ಬಳಸುತ್ತೇವೆ.
  • 0:09 - 0:12
    ಅನೇಕ ಗಣಕ ಸಂಬಂಧೀ ವಸ್ತುಗಳಿವೆ,
  • 0:12 - 0:15
    ಇವುಗಳ ಬಳಕೆ ಆನಂದದಾಯಕವಾದದ್ದು.
  • 0:15 - 0:18
    ನಾವು ವಸ್ತುಗಳ ಬಗೆಗೆ ಮಾತನಾಡುವಾಗ
  • 0:18 - 0:21
    ಒಂದು ಇನ್ನೊಂದಕ್ಕೆ ಸ್ವಯಂಚಾಲಿತವಾಗಿ ಸಂಬಂಧಿಸಿದ್ದಾಗಿದೆ
  • 0:21 - 0:23
    ಮತ್ತು ಅದೇ ನಮ್ಮ ಭಾವ-ಭಂಗಿಗಳು.
  • 0:23 - 0:25
    ನಾವು ಇವುಗಳನ್ನು ಹೇಗೆ ಬಳಸುತ್ತೇವೆ,
  • 0:25 - 0:28
    ನಾವು ಇವುಗಳನ್ನು ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಬಳಸುವುದು ಹೇಗೆ?
  • 0:28 - 0:31
    ನಾವು ಭಾವ ಭಂಗಿಗಳನ್ನು ಇವುಗಳ ಸಂವಹನದಲ್ಲಿ ಮಾತ್ರ ಬಳಸುವುದಲ್ಲ,
  • 0:31 - 0:33
    ನಾವು ಇವುಗಳನ್ನು ಇನ್ನೊಬ್ಬರೊಂದಿಗೆ ಸಂವಹನದ ಸಂದರ್ಭದಲ್ಲೂ ಬಳಸುತ್ತೇವೆ.
  • 0:33 - 0:36
    ನಮಸ್ಕರಿಸುವ ಭಂಗಿ, ಕೆಲವರನ್ನು ಗೌರವಿಸುವಾಗ
  • 0:36 - 0:37
    ಅಥವಾ--
  • 0:37 - 0:39
    ಭಾರತದಲ್ಲಿ ನಾನು ಕ್ರಿಕೆಟ್ನ ಬಗೆಗೆ ಮಕ್ಕಳಿಗೆ ತಿಳಿಸಬೇಕೆಂದಿಲ್ಲ!!
  • 0:39 - 0:41
    "ನಾಲ್ಕು ರನ್"ನ ಭಾವ-ಭಂಗಿ ಅವರಿಗೆ ತಿಳಿದಿದೆ.
  • 0:41 - 0:44
    ಅದು ಅವರ ದಿನನಿತ್ಯದ ಬದುಕಿನಲ್ಲಿ ಕಲಿತದ್ದು
  • 0:44 - 0:46
    ಹಾಗಾಗಿ ನಾನು ಇದರಲ್ಲಿ ಆಸಕ್ತಿ ಹೆಚ್ಚಿಸಿಕೊಂಡೆ,
  • 0:46 - 0:48
    ಮೊದಲಿನಿಂದಲೂ, ಅದು ಹೇಗೆ--
  • 0:48 - 0:50
    ನಮ್ಮ ಜ್ಞಾನವು ಹೇಗೆ
  • 0:50 - 0:52
    ವಸ್ತುಗಳ ಜೊತೆಗಿನ ದಿನನಿತ್ಯದ ಸಂವಹನದಲ್ಲಿನ ಭಾವ ಭಂಗಿಗಳು
  • 0:52 - 0:54
    ಮತ್ತು ನಾವು ಈ ವಸ್ತುಗಳನ್ನು ಹೇಗೆ ಬಳಸುತ್ತೇವೆ ಎಂಬ ಬಗ್ಗೆ,
  • 0:54 - 0:57
    ಡಿಜಿಟಲ್ ವಿಶ್ವದಲ್ಲಿ ನಮ್ಮಲ್ಲಿ ಪರಸ್ಪರ ಸಂವಹನ ಮಾಡಬಹುದು
  • 0:57 - 1:00
    ಕೀಬೋರ್ಡ್ ಮತ್ತು ಮೌಸ್ ಮಾತ್ರ ಬಳಸುವುದರಿಂದಲ್ಲ!
  • 1:00 - 1:03
    ನಾನು ನನ್ನ ಗಣಕಯಂತ್ರವನ್ನು ಬಳಸದೆ ಇದನ್ನು ಮಾಡಬಹುದೇ?
  • 1:03 - 1:06
    ಅದೇ ಕ್ರಮದಲ್ಲಿ ಭೌತಿಕ ವಿಶ್ವದೊಂದಿಗೆ ಸಂವಹನ ನಡೆಸಬಹುದೇ?
  • 1:06 - 1:09
    ಹಾಗಾಗಿ ಇದರ ಬಗೆಗಿನ ಹುಡುಕಾಟದಲ್ಲಿ ಎಂಟು ವರ್ಷಗಳ ಹಿಂದೆ ನನ್ನನ್ನು ತೊಡಗಿಸಿಕೊಂಡೆ,
  • 1:09 - 1:12
    ಮತ್ತು ಇದಕ್ಕಾಗಿ ನಾನು ಮೌಸ್ ಒಂದನ್ನು ಮಾತ್ರ ಬಳಸಿದೆ
  • 1:12 - 1:15
    ಗಣಕಯಂತ್ರ ಬಳಸಿದೆ ಅನ್ನೋದಕ್ಕಿಂತ,
  • 1:15 - 1:18
    ನಿಜವಾಗಿ ಅದನ್ನು ತೆರೆದೆ.
  • 1:18 - 1:20
    ಬಹಳಷ್ಟು ಜನಗಳಿಗೆ ತಿಳಿದಿರಬಹುದು
  • 1:20 - 1:22
    ಹಿಂದೆ ನಾವು ಬಳಸುತ್ತಿದ್ದ ಮೌಸ್ನಲ್ಲಿ ಒಂದು ಬಾಲ್ ಇರುತ್ತಿತ್ತು,
  • 1:22 - 1:24
    ಮತ್ತು ಅದರಲ್ಲಿ ಎರಡು ರೋಲರ್ಗಳು ಇರುತ್ತಿತ್ತು
  • 1:24 - 1:27
    ಅದು ಗಣಕಯಂತ್ರವನ್ನು ಬಾಲ್ ಚಲಿಸುವಾಗ ನಿರ್ದೇಶಿಸುತ್ತಿತ್ತು
  • 1:27 - 1:29
    ಹಾಗೂ ಮೌಸ್ ಚಲಿಸಿದಂತೆ ಅದು ವರ್ತಿಸುತ್ತಿತ್ತು
  • 1:29 - 1:32
    ಹಾಗಾಗಿ, ನಾನು ಆ ಎರಡು ರೋಲರ್ಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡೆ
  • 1:32 - 1:35
    ನನಗೆ ಇನ್ನಷ್ಟು ರೋಲರ್ಗಳು ಬೇಕಾದ ಕಾರಣ ನನ್ನ ಗೆಳೆಯನ ಬಳಿಯಿಂದ ಮೌಸ್ ತಂದೆನು
  • 1:35 - 1:37
    ಆದರೆ ಇನ್ನೂ ಹಿಂತಿರುಗಿಸಿಲ್ಲ!
  • 1:37 - 1:39
    ಮತ್ತು ಈಗ ನನ್ನ ಬಳಿ ನಾಲ್ಕು ರೋಲರ್ಗಳು ಇವೆ.
  • 1:39 - 1:42
    ಆಸಕ್ತಿದಾಯಕವಾದದ್ದೇನೆಂದರೆ, ನಾನು ಇದನ್ನು ಏನು ಮಾಡಿದೆ ಎಂಬುದು,
  • 1:42 - 1:45
    ನಾನು ಮುಖ್ಯವಾಗಿ ಅದರಿಂದ ರೋಲರ್ಗಳನ್ನು ಹೊರತೆಗೆದೆ
  • 1:45 - 1:47
    ಮತ್ತು ಅವುಗಳನ್ನು ಒಂದು ರೇಖೆಯಂತೆ ಜೋಡಿಸಿದೆ
  • 1:47 - 1:50
    ಇದು ಕೆಲವು ತಂತಿಗಳನ್ನು ಮತ್ತು ಪುಲ್ಲೀ ಮತ್ತು ಕೆಲವು ಸುರುಳಿಗಳನ್ನು ಹೊಂದಿದೆ.
  • 1:50 - 1:53
    ನಾನು ಇವುಗಳನ್ನು ಬಳಸಿ ಭಾವ ಭಂಗಿಗಳ ಜೊತೆಗೆ ಸಂಪರ್ಕ ಏರ್ಪಡಿಸುವ ಸಾಧನ ತಯಾರಿಸಿದೆ
  • 1:53 - 1:57
    ಇದು ಮೂಲತಃ ಚಲನ ಸಂವೇದಿ ಸಾಧನ.
  • 1:57 - 1:59
    ಕೇವಲ ಎರಡು ಡಾಲರ್ ಬೆಲೆಯದ್ದು!
  • 1:59 - 2:02
    ಹಾಗೆ, ನಾನು ನನ್ನ ಭೌತಿಕ ಜಗತ್ತಿನಲ್ಲಿ ಯಾವುದನ್ನಾದರೂ ಚಲಿಸಿದರೆ
  • 2:02 - 2:05
    ಅದು ಗಣಕ ವಿಶ್ವದಲ್ಲಿ ಪುನಃ ನಕಲಾಗುತ್ತದೆ!
  • 2:05 - 2:08
    ಇದು ನಾನು ಎಂಟು ವರ್ಷಗಳ ಹಿಂದೆ ತಯಾರಿಸಿದ ಈ ಪುಟ್ಟ ಸಾಧನದಿಂದ.
  • 2:08 - 2:10
    ಅಂದರೆ ಕ್ರಿ. ಶ. ೨೦೦೦ದಲ್ಲಿ.
  • 2:10 - 2:12
    ಏಕೆಂದರೆ ನಾನು ಎರಡು ವಿಶ್ವಗಳನ್ನು ಒಟ್ಟುಗೂಡಿಸಲು ಬಯಸಿದ್ದೆ,
  • 2:12 - 2:14
    ನಾನು ಸ್ಟಿಕ್ಕಿ ಟಿಪ್ಪಣಿಗಳ ಬಗ್ಗೆ ಯೋಚಿಸಿದೆ.
  • 2:14 - 2:17
    ನಾನು ಇದರ ಬಗ್ಗೆಯೂ ಯೋಚಿಸಿದೆ "ಏಕೆ ಇದನ್ನು
  • 2:17 - 2:19
    ಅಂದರೆ ಸ್ಟಿಕ್ಕಿ ಟಿಪ್ಪಣಿಗಳನ್ನು ಭೌತಿಕ ಸ್ಪರ್ಶದಿಂದ
  • 2:19 - 2:21
    ಗಣಕ ವಿಶ್ವಕ್ಕೆ ವರ್ಗಾಯಿಸಲು ಸಾಧ್ಯವಿಲ್ಲವೇ ಎಂದು.
  • 2:21 - 2:23
    ಒಂದು ಸಂದೇಶವನ್ನು ನನ್ನ ತಾಯಿ ಸ್ಟಿಕ್ಕಿ ಟಿಪ್ಪಣಿಗಳನ್ನು ಬಳಸಿ ಬರೆದರೆ
  • 2:23 - 2:24
    ಅದೂ ಕಾಗದದಲ್ಲಿ
  • 2:24 - 2:26
    ಅದು ನನ್ನ ಜಂಗಮವಾಣಿಗೆ ಸಂದೇಶವಾಗಿ ಬರಬಹುದೇ?
  • 2:26 - 2:28
    ಅಥವಾ ಸಭೆಯ ಬಗೆಗಿನ ಜ್ಞಾಪನ
  • 2:28 - 2:30
    ನನ್ನ ಗಣಕ ಪಂಚಾಂಗ ಸ್ವಚಾಲಿತವಾಗಿ ವಿನಿಮಯವಾಗುವಂತೆ
  • 2:30 - 2:33
    ಒಂದು ನಿಮ್ಮ ಕಾರ್ಯಗಳ ಪಟ್ಟಿಯು ನಿಮ್ಮೊಂದಿಗೆ ಗಣಕಕ್ಕೆ ವಿನಿಮಯವಾಗಬೇಕು.
  • 2:33 - 2:36
    ಇಷ್ಟು ಮಾತ್ರವಲ್ಲ ಗಣಕ ವಿಶ್ವದೊಂದಿಗೆ ಹುಡುಕಬಹುದು ಸಹ
  • 2:36 - 2:38
    ಅಥವಾ ನಿಮ್ಮ ಪ್ರಶ್ನೆಗಳಿಗೆ ಧ್ವನಿಯ ಮೂಲಕವೂ ಉತ್ತರ ಹುಡುಕಬಹುದು
  • 2:38 - 2:40
    "ಡಾ|ಸ್ಮಿತ್ರವರ ವಿಳಾಸವೇನು?"
  • 2:40 - 2:42
    ಮತ್ತು ಗಣಕ ಅದಕ್ಕೆ ಉತ್ತರಗಳನ್ನು ಹುಡುಕಿ ಮುದ್ರಿಸಿ ಕೊಡುತ್ತದೆ
  • 2:42 - 2:44
    ಇದು ಈ ಕಾರಣದಿಂದ ಕಾಗದವನ್ನು ಕೊಟ್ಟು ಉತ್ತರ ಪಡಕೊಂಡಂತೆ
  • 2:44 - 2:47
    ಕೇವಲ ಕಾಗದದಿಂದ ಮಾಡಿದಂತಹುದು.
  • 2:50 - 2:52
    ನನ್ನ ಇನ್ನೊಂದು ಸಂಶೋಧನೆಯಲ್ಲಿ,
  • 2:52 - 2:55
    ಒಂದು ಮೂರು ಆಯಾಮಗಳಲ್ಲಿ ಬರೆಯುವ ಲೇಖನಿ ನಿರ್ಮಾಣದ ಬಗ್ಗೆ ಯೋಚಿಸಿದೆ.
  • 2:55 - 2:57
    ಹಾಗಾಗಿ ಇದರಲ್ಲಿ ಯಶಸ್ವಿಯಾದೆ ಸಹ
  • 2:57 - 2:59
    ಇದು ವಿನ್ಯಾಸಗಾರರಿಗೆ ಮತ್ತು ವಾಸ್ತುಶಿಲ್ಪಿಗಳಿಗೆ ಸಹಾಯಕವಾದುದಾಗಿದೆ
  • 2:59 - 3:01
    ನಾನು ಕೇವಲ ಮೂರು ಆಯಾಮಗಳ ಬಗೆಗೆ ಮಾತ್ರ ಯೋಚಿಸಿದ್ದಲ್ಲ
  • 3:01 - 3:03
    ಆದರೆ ಅವರು ಅದರ ಸಹಾಯದಿಂದ ಚಿತ್ರಿಸಬಹುದು ಸಹಾ
  • 3:03 - 3:05
    ಹಾಗಾಗಿ ಇದು ಒಂದು ಅರ್ಥದಲ್ಲಿ ಬಹಳ ಅರ್ಥಗರ್ಭಿತವಾದುದು.
  • 3:05 - 3:07
    ಮತ್ತೆ ನಾನು ಯೋಚಿಸಿದೆ "ಗೂಗಲ್ ನಕಾಶೆ ತಯಾರಿ
  • 3:07 - 3:09
    ಅಂತೆಯೇ ಭೌತಿಕ ವಿಶ್ವದ ನಕಾಶೆ.
  • 3:09 - 3:12
    ನಾನು ಕೆಲವು ಪದಗಳನ್ನು ಬ್ರೌಸರ್ನಲ್ಲಿ ಟೈಪಿಸುವುದಕ್ಕಿಂತ
  • 3:12 - 3:14
    ಆ ವಸ್ತುಗಳನ್ನು ಗಣಕದ ಮೇಲೆ ಇಡುವಂತಹುದು.
  • 3:14 - 3:17
    ನಾನು ಒಂದು ಬೋರ್ಡಿಂಗ್ ಪಾಸ್ ಅನ್ನು ಗಣಕದ ಮೇಲಿಟ್ಟಾಗ ಅದು ವಿಮಾನ ಯಾವ ಗೇಟ್ನಲ್ಲಿ ಇದೆ ಎಂದು ಹೇಳುತ್ತದೆ.
  • 3:17 - 3:20
    ಒಂದು ಕಾಫೀ ಕಪ್ನ್ನು ಮೇಲಿಟ್ಟರೆ ಇನ್ನಷ್ಟು ಎಲ್ಲಿ ಸಿಗುತ್ತದೆ ಎಂಬ ಬಗ್ಗೆ ಮಾಹಿತಿ ದೊರೆಯುತ್ತದೆ,
  • 3:20 - 3:22
    ಅಥವಾ ನಿಮ್ಮ ಕಾಫೀ ಕಪ್ನ್ನು ಎಲ್ಲಿ ಎಸೆಯಬಹುದು ಎಂಬ ಮಾಹಿತಿಯೂ ಲಭ್ಯ.
  • 3:22 - 3:25
    ಇವೆಲ್ಲಾ ನನ್ನ ಹಿಂದಿನ ಕೆಲವು ಸಂಶೋಧನೆಗಳು. ಆದರೆ...
  • 3:25 - 3:28
    ನನ್ನ ನಿಜವಾದ ಗುರಿ ಈ ಎರಡು ವಿಶ್ವಗಳನ್ನು ಕೊನೆಯಿಲ್ಲದೆ ಸೇರಿಸುವುದು.
  • 3:29 - 3:31
    ಈ ಎಲ್ಲಾ ಪ್ರಯೋಗಗಳಲ್ಲಿ
  • 3:31 - 3:33
    ಒಂದು ವಿಷಯವು ಸಾಮಾನ್ಯವಾದುದಾಗಿದೆ:
  • 3:33 - 3:37
    ನಾನು ಭೌತಿಕ ವಿಶ್ವವನ್ನು ಡಿಜಿಟಲ್ ವಿಶ್ವದ ಒಂದು ಭಾಗವಾಗಿ ತರಲು ಪ್ರಯತ್ನಿಸುತ್ತಿದ್ದೆ.
  • 3:37 - 3:40
    ನಾನು ಕೆಲವು ವಸ್ತುಗಳನ್ನು ಅವುಗಳ ಭಾಗಗಳನ್ನು ಈಗ ತೆಗೆದುಕೊಳ್ಳುತ್ತೇನೆ.
  • 3:40 - 3:43
    ಅಥವಾ ನಮ್ಮ ನಿಜ ಜೀವನದ ಯಾವುದಾದರೂ ಅಂತರ್ಬೋಧ ಶಕ್ತಿ,
  • 3:43 - 3:46
    ಮತ್ತು ಅವುಗಳನ್ನು ಗಣಕ ವಿಶ್ವಕ್ಕೆ ತರುವ ಬಗ್ಗೆ,
  • 3:46 - 3:49
    ಏಕೆಂದರೆ ನಮ್ಮ ಗುರಿ ನಮ್ಮ ಲೆಕ್ಕಾಚಾರವನ್ನು ಇನ್ನಷ್ಟು ಅರ್ಥಗರ್ಭಿತವನ್ನಾಗಿಸುವುದು.
  • 3:49 - 3:51
    ಆದರೆ ಮತ್ತೆ ಅರಿವಾಯಿತು ನಾವು ಮನುಷ್ಯರು
  • 3:51 - 3:54
    ನಿಜವಾಗಿ ಲೆಕ್ಕಾಚಾರದ ಬಗೆಗೆ ಆಸಕ್ತಿ ಬೆಳೆಸಿಕೊಂಡಿಲ್ಲ ಎಂಬುದು.
  • 3:54 - 3:57
    ನಾವು ನಿಜವಾಗಿ ಮಾಹಿತಿಯ ಬಗ್ಗೆ
  • 3:57 - 3:59
    ಮತ್ತು ಇತರ ವಸ್ತುಗಳ ಬಗೆಗೆ ಅರಿಯುವುದರ ಬಗ್ಗೆ ಆಸಕ್ತಿ ಹೊಂದಿದ್ದೇವೆ.
  • 3:59 - 4:01
    ಮತ್ತು ನಮ್ಮ ಸುತ್ತ ಮುತ್ತಲಿನ ಕ್ರಿಯಾತ್ಮಕ ಚಲನಶೀಲ ವಸ್ತುಗಳ ಬಗೆಗೆ ತಿಳಿದುಕೊಳ್ಳಲು ಬಯಸಿದ್ದೇವೆ.
  • 4:01 - 4:06
    ಹಾಗಾಗಿ ನಾನು ಯೋಚಿಸಿದೆ ಕಳೆದ ವರ್ಷ- ಕಳೆದ ವರ್ಷದ ಪ್ರಾರಂಭದಲ್ಲಿ --
  • 4:06 - 4:09
    ನಾನು ಯೋಚಿಸಲಾರಂಭಿಸಿದೆ " ನಾನೇಕೆ ಇದರ ವ್ಯತಿರಿಕ್ತ ಹಾದಿಯಲ್ಲಿ ಇದನ್ನು ತಲುಪಬಾರದು" ಎಂದು
  • 4:09 - 4:12
    ಬಹುಶಃ " ನಾನು ಗಣಕ ಲೋಕಕ್ಕೆ ಹೇಗೆ ಇದನ್ನು ಕೊಂಡೊಯ್ಯಬಹುದೆಂದು
  • 4:12 - 4:17
    ಮತ್ತು ನನ್ನ ಭೌತಿಕ ವಿಶ್ವವನ್ನು ಹೇಗೆ ಗಣಕ ವಿಶ್ವದಲ್ಲಿ ಚಿತ್ರಿಸಬಹುದು?" ಎಂದು
  • 4:17 - 4:21
    ಪಿಕ್ಸೆಲ್ಗಳು ಆಯತಾಕೃತಿಯಲ್ಲಿ ನಿರ್ಬಂಧಿಸಲ್ಪಟ್ಟಿವೆ, ಗಾತ್ರದಲ್ಲಿ ಹಿರಿದಾಗಿವೆ
  • 4:21 - 4:23
    ಅವುಗಳು ನಮ್ಮ ಕಿಸೆಗೆ ಹೊಂದುವಂತಿರಬೇಕು.
  • 4:23 - 4:26
    ಮತ್ತು ನಿರ್ಬಂಧಗಳನ್ನು ಏಕೆ ಕಿತ್ತೆಸೆಯಲು ಸಾಧ್ಯವಿಲ್ಲ ಎಂದು ಯೋಚಿಸಿ
  • 4:26 - 4:29
    ಅದನ್ನು ದಿನ ನಿತ್ಯದ ಬಳಕೆಯತ್ತ ಪೂರೈಸಲು
  • 4:29 - 4:31
    ನಾವು ಬೇರೆ ಭಾಷೆಯನ್ನು ಕಲಿಯುವ ಅವಶ್ಯಕತೆ ಇಲ್ಲದೆ
  • 4:31 - 4:34
    ಈ ಪಿಕ್ಸೆಲ್ ಬಳಕೆ ಸಾಧ್ಯವೇ ಎಂದು ಯೋಚಿಸಿದೆ.
  • 4:35 - 4:37
    ಹಾಗಾಗಿ ಕನಸನ್ನು ನನಸಾಗಿಸಲು
  • 4:37 - 4:40
    ನಾನು ಬಹಳ ದೊಡ್ಡ ಪ್ರೊಜೆಕ್ಟರ್ ಒಂದನ್ನು ತಲೆಯ ಮೇಲಿಟ್ಟುಕೊಳ್ಳುವ ಬಗೆಗೆ ಯೋಚಿಸಿದೆ.
  • 4:40 - 4:43
    ಹಾಗಾಗಿ ನೀವು ಈಗ ಅರಿತಿರಬಹುದು ಇದನ್ನು ಏಕೆ ಓವರ್ ಹೆಡ್ ಪ್ರೊಜೆಕ್ಟರ್ ಎನ್ನುವರು ಎಂದು ಅಲ್ಲವೇ?
  • 4:43 - 4:45
    ಆದರೆ ನಾನು ಬಹಳವಾಗಿ ಯೋಚಿಸಿದೆ,
  • 4:45 - 4:47
    ನನ್ನ ಬೈಕ್ನ ಹೆಲ್ಮೆಟ್ ಯಾಕೆ ಬಳಸಬಾರದೆಂದು!
  • 4:47 - 4:50
    ಅದನ್ನೇ ಒಂದಿಷ್ಟು ಸರಿಪಡಿಸಿ ನನ್ನ ಪ್ರೊಜೆಕ್ಟರ್ ಅದರ ಮೇಲೆ ಸರಿಯಾಗಿ ನಿಂತುಕೊಳ್ಳುವಂತೆ ಮಾಡಿದೆ.
  • 4:50 - 4:52
    ಹಾಗಾಗಿ ಈಗ ನಾನು--
  • 4:52 - 4:56
    ನನ್ನ ಸುತ್ತ ಮುತ್ತಲಿನ ಜಗತ್ತನ್ನು ಡಿಜಿಟಲ್ ಜ್ಞಾನದ ಆಕರವಾಗಿ ಬಳಸಬಹುದು.
  • 4:56 - 4:58
    ಆದರೆ ಬಳಿಕ,
  • 4:58 - 5:01
    ನನಗೆ ಬಳಿಕ ಅರಿವಾಯಿತು, ನಾನು ಪಿಕ್ಸೆಲ್ ಗಳ ಜೊತೆ ಮಾತನಾಡಬೇಕಿತ್ತು ಎಂದು.
  • 5:01 - 5:03
    ಹಾಗಾಗಿ ಒಂದು ಸಣ್ಣ ಕೆಮೆರಾವನ್ನು ಅದರ ಮೇಲಿಟ್ಟೆ,
  • 5:03 - 5:05
    ಅದು ಒಂದು ಅದ್ಭುತ ಗಣಕನೇತ್ರದಂತೆ ಕಾರ್ಯವೆಸಗಿತು.
  • 5:05 - 5:07
    ಬಳಿಕ ನಾನು ಅದನ್ನು ಅಭಿವೃದ್ಧಿಪಡಿಸುವುದರತ್ತ ದಾಪುಗಾಲಿಟ್ಟೆ,
  • 5:07 - 5:09
    ಈಗ ಗ್ರಾಹಕರು ಬಯಸುವ/ಬಳಸುವ ಪೆಂಡೆಂಟ್ ರೂಪದ ವಸ್ತು ಇದು,
  • 5:09 - 5:12
    ಇದನ್ನು ನೀವು ಬಹಳಷ್ಟು ಜನ ಆರನೆಯ ಇಂದ್ರಿಯ ಎಂದೇ ಕರೆಯುತ್ತೀರಿ.
  • 5:12 - 5:15
    ಆದರೆ ಈ ತಂತ್ರಜ್ಞಾನದ ಹಿಂದಿನ ಅತ್ಯಂತ ಕುತೂಹಲಕಾರಿ ಅಂಶವೆಂದರೆ
  • 5:15 - 5:19
    ಇದು ನಿಮ್ಮೊಂದಿಗೆ ಗಣಕ ವಿಶ್ವವನ್ನೇ ಕೊಂಡೊಯ್ಯುತ್ತದೆ.
  • 5:19 - 5:21
    ನೀವೇಲ್ಲೇ ಚಲಿಸಿದರೂ.
  • 5:21 - 5:24
    ನೀವು ನಿಮ್ಮ ಸುತ್ತಮುತ್ತಲಿನ ಯಾವುದೇ ಮೇಲ್ಮೈಯಲ್ಲಿ
  • 5:24 - 5:26
    ಒಂದು ಮಾಧ್ಯಮವಾಗಿ ಇದನ್ನು ಬಳಸಬಹುದು.
  • 5:26 - 5:29
    ಇದರ ಕೆಮೆರಾ ನಿಮ್ಮ ಭಂಗಿಗಳನ್ನು ಸೆರೆಹಿಡಿಯುತ್ತದೆ
  • 5:29 - 5:31
    ನೀವು ನಿಮ್ಮ ಕೈಗಳಿಂದ ಏನು ಮಾಡುತ್ತಿದ್ದೀರಾ ಎಂಬುದನ್ನು ಗಮನಿಸಿ
  • 5:31 - 5:33
    ಆ ಭಂಗಿಯನ್ನು ಅರ್ಥೈಸಿಕೊಳ್ಳುತ್ತದೆ.
  • 5:33 - 5:35
    ಮತ್ತು ನಿಜವಾಗಿ ನೀವಿಲ್ಲಿ ಕೆಲವು ಬಣ್ಣದ ಮಾರ್ಕರ್ ಗಳನ್ನು ಗಮನಿಸುತ್ತಿದ್ದೀರಿ
  • 5:35 - 5:38
    ಇದು ಈ ಸಾಧನದ ಮೊದಲ ಆವೃತ್ತಿಯಲ್ಲಿ ಬಳಸಿದ ತಂತ್ರಜ್ಞಾನ.
  • 5:38 - 5:40
    ನಿಮ್ಮ ಸುತ್ತಲಿನ ಗೋಡೆಯಲ್ಲಿ ನೀವೀಗ ಚಿತ್ರಿಸಬಹುದು.
  • 5:40 - 5:43
    ಗೋಡೆ ಕಂಡ ಕ್ಷಣ ಅಲ್ಲೇ ನಿಂತು ಚಿತ್ರಿಸಲು ಪ್ರಾರಂಭಿಸಬಹುದು.
  • 5:43 - 5:45
    ಆದರೆ ಕೇವಲ ಒಂದು ಬೆರಳಿನಿಂದ ಇದು ಸಾಧ್ಯವೇ ಎನ್ನಬೇಕಿಲ್ಲ,
  • 5:45 - 5:49
    ಇಲ್ಲಿ ನಿಮ್ಮ ಎರಡೂ ಕೈಗಳನ್ನು ಬಳಸುವ ಸ್ವಾತಂತ್ರ್ಯ ನೀಡಲಾಗಿದೆ!!
  • 5:49 - 5:52
    ಹಾಗಾಗಿ ಚಿತ್ರವನ್ನು ದೊಡ್ಡ-ಸಣ್ಣ ಮಾಡಲು ನಿಮ್ಮೆರಡೂ ಕೈಗಳನ್ನು ಬಳಸಬಹುದು
  • 5:52 - 5:54
    ಕೇವಲ ಚಿತ್ರದ ಮೇಲೆ ಚಿವುಟುವುದರಿಂದಲೂ ಇದು ಸಾಧ್ಯ!
  • 5:54 - 5:57
    ನಿಮ್ಮ ಛಾಯಾಚಿತ್ರ ಗ್ರಾಹಕ (ಕೆಮೆರಾ)ವು ನಿಜವಾಗಿ--
  • 5:57 - 5:58
    ಎಲ್ಲಾ ಚಿತ್ರಗಳನ್ನು ಪಡೆದುಕೊಂಡು --
  • 5:58 - 6:01
    ಅದನ್ನು ಕೂಲಂಕುಷವಾಗಿ ಬಣ್ಣ ಸಹಿತವಾಗಿ ಗುರುತಿಸಿ
  • 6:01 - 6:04
    ಸಣ್ಣ ಪುಟ್ಟ ಲೆಕ್ಕಾಚಾರಗಳನ್ನು ತನ್ನೊಳಗೆ ಮುಗಿಸುತ್ತದೆ.
  • 6:04 - 6:06
    ಆದರೆ ತಾಂತ್ರಿಕವಾಗಿ ಇದು ಕ್ಲಿಷ್ಟಕರವಾದದ್ದು,
  • 6:06 - 6:09
    ಆದರೆ ಇದು ಕೊಡುವ ಉತ್ಪಾದನೆಯು ಬಳಕೆಗೆ ಬಹಳ ಯೋಗ್ಯವಾದುದಾಗಿದೆ.
  • 6:09 - 6:12
    ಆದರೆ ನಾನು ಬಹಳ ಹರ್ಷದಿಂದ ಹೇಳುವುದೇನೆಂದರೆ ನೀವಿದನ್ನು ಹೊರಾಂಗಣದಲ್ಲೂ ಬಳಸಬಹುದು.
  • 6:12 - 6:15
    ನಿಮ್ಮ ಕೆಮೆರಾವನ್ನು ಕಿಸೆಯಿಂದ ಹೊರತೆಗೆವ ಬದಲು,
  • 6:15 - 6:18
    ನೀವು ಛಾಯಾಚಿತ್ರ ತೆಗೆಯುವಂತೆ ನಟಿಸಿದರಾಯಿತು,
  • 6:18 - 6:20
    ನಿಮಗಾಗಿ ಇದೊಂದು ಛಾಯಾಚಿತ್ರವನ್ನು ಕೊಡುತ್ತದೆ.
  • 6:20 - 6:24
    (ಚಪ್ಪಾಳೆ)
  • 6:24 - 6:25
    ಧನ್ಯವಾದಗಳು
  • 6:26 - 6:28
    ಬಳಿಕ ನಾನು ಎಲ್ಲಾದರೊಂದು ಗೋಡೆ ಹುಡುಕಿ,
  • 6:28 - 6:30
    ಛಾಯಾಚಿತ್ರಗಳನ್ನು ಹುಡುಕಲಾರಂಭಿಸುತ್ತೇನೆ
  • 6:30 - 6:32
    ಅಥವಾ ನನಗೆ ಆ ಚಿತ್ರಗಳನ್ನು ಬದಲಿಸ ಬೇಕೆಂದರೆ,
  • 6:32 - 6:34
    ಅಥವಾ ಗೆಳೆಯನಿಗೆ ಮಿಂಚಂಚೆಯ ಮೂಲಕ ಕಳಿಸಬೇಕೆಂದರೆ ಅದೂ ಸಾಧ್ಯ!
  • 6:34 - 6:37
    ಹಾಗಾಗಿ ನಾವಲ್ಲಿ ಒಂದು ಹೊಸ ಶಕೆಯನ್ನು ನೋಡುತ್ತೇವೆ
  • 6:37 - 6:40
    ಗಣಕೀಕರಣವೂ ನಿಜವಾಗಿ ಭೌತಿಕ ವಿಶ್ವದೊಂದಿಗೆ ವಿಲೀನವಾಗಬೇಕು.
  • 6:40 - 6:43
    ಅಥವಾ ನಿಮಗೆ ಯಾವ ಮೇಲ್ಮೈಯೂ ಸಿಗಲಿಲ್ಲವೆಂದಾದಲ್ಲಿ,
  • 6:43 - 6:46
    ನಿಮ್ಮ ಅಂಗೈಯನ್ನೆ ಬಳಸಿ ಸರಳ ಕಾರ್ಯಗಳನ್ನು ಮಾಡಬಹುದು.
  • 6:46 - 6:48
    ಇಲ್ಲಿ ನಾನು ಒಂದು ದೂರವಾಣಿ ಸಂಖ್ಯೆಗೆ ನನ್ನ ಅಂಗೈ ಬಳಸಿ ಕರೆ ಮಾಡುತ್ತೇನೆ
  • 6:52 - 6:55
    ನಿಮ್ಮ ಕೆಮೆರಾವು ಕೇವಲ ನಿಮ್ಮ ಕೈಯ ಚಲನೆಯನ್ನು ಅರ್ಥ ಮಾಡಿಕೊಳ್ಳುವುದಲ್ಲದೆ
  • 6:55 - 6:56
    ಬಹಳ ಆಶ್ಚರ್ಯಜನಕವಾಗಿ,
  • 6:56 - 6:59
    ನೀವು ನಿಮ್ಮ ಕೈಯಲ್ಲಿ ಏನು ಹಿಡಿದಿರುವಿರಿ ಎಂಬುದನ್ನೂ ಗುರುತಿಸುತ್ತದೆ.
  • 6:59 - 7:02
    ಇಲ್ಲಿ ಈ ಉದಾಹರಣೆಯನ್ನು ಗಮನಿಸಿ
  • 7:02 - 7:04
    ನಾವಿಲ್ಲಿ
  • 7:04 - 7:06
    ಪುಸ್ತಕದ ಹೊರಪುಟವನ್ನು ಹೊಂದಿಸುತ್ತಿದ್ದೇವೆ
  • 7:06 - 7:09
    ಇದು ಹಲವಾರು ಸಾವಿರ ಅಥವಾ ಮಿಲಿಯನ್ ಪುಸ್ತಕಗಳನ್ನು ಅಂತರ್ಜಾಲದಿಂದ ಹುಡುಕಿ,
  • 7:09 - 7:11
    ಇದಾವ ಪುಸ್ತಕ ಎಂಬುದನ್ನು ಪತ್ತೆ ಹಚ್ಚುತ್ತದೆ.
  • 7:11 - 7:12
    ಒಮ್ಮೆ ಇದು ಈ ಮಾಹಿತಿಯನ್ನು ಪತ್ತೆ ಹಚ್ಚಿದರೆ,
  • 7:12 - 7:14
    ಇದು ಪುಸ್ತಕದ ಬಗೆಗಿನ ಹೆಚ್ಚಿನ ಮಾಹಿತಿಯನ್ನು ವಿಮರ್ಶೆಯನ್ನು ಹುಡುಕುತ್ತದೆ,
  • 7:14 - 7:17
    ಒಂದುವೇಳೆ ನ್ಯೂಯಾರ್ಕ್ ಟೈಮ್ಸ್ ಅದರ ಧ್ವನಿ ವಿಮರ್ಶೆ ಹೊಂದಿದ್ದಲ್ಲಿ,
  • 7:17 - 7:19
    ನೀವು ಪುಸ್ತಕದ ಮೂಲಕ ಅದನ್ನು ಆಲಿಸಬಹುದು,
  • 7:19 - 7:21
    ನೇರವಾಗಿ ನಿಮ್ಮ ಕಿವಿಗಳಿಂದ ಮನಮುಟ್ಟುವಂತೆ!
  • 7:21 - 7:23
    ("ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರಸಿದ್ಧ ಚರ್ಚೆ ...")
  • 7:23 - 7:26
    ಇದು ಒಬಾಮಾ ಅವರ ಕಳೆದ ವಾರದ ಎಂ ಐ ಟಿಯ ಭೇಟಿ.
  • 7:27 - 7:31
    (".... ಮತ್ತು ನಾನು ಎಂ ಐ ಟಿಯ ಅತ್ಯುತ್ತಮ ಅವಕಾಶಕ್ಕೆ ಧನ್ಯವಾದಗಳನ್ನು ಸಮರ್ಪಿಸುತ್ತಿದ್ದೇನೆ....")
  • 7:31 - 7:36
    ನಾನು ಇಲ್ಲಿ ಒಂದು ಈ ಮಾತುಕತೆಯ ನೇರ ಪ್ರಸಾರದ ಚಲನಚಿತ್ರವನ್ನು ಹೊರಗಡೆ ಅದೂ ಒಂದು ವಾರ್ತಾಪತ್ರಿಕೆಯ ಹೊರಭಾಗದಲ್ಲಿ ನೋಡುತ್ತಿದ್ದೇನೆ.
  • 7:36 - 7:39
    ನಿಮ್ಮ ವಾರ್ತಾ ಪತ್ರಿಕೆಯು ಹವಾಮಾನದ ಬಗ್ಗೆ ನೇರ ಮಾಹಿತಿಯನ್ನು ನಿಮಗೆ ಹಂಚಬಹುದು
  • 7:39 - 7:42
    ಅತ್ಯುತ್ತಮ ಮಾಹಿತಿಯನ್ನು ನಿಮ್ಮ ಗಣಕ ಯಂತ್ರ ನಿಮಗೆ ನೀಡುವಂತೆ
  • 7:42 - 7:44
    ಹಾಗಾಗಲು ಕಾರಣ?
  • 7:44 - 7:49
    (ಚಪ್ಪಾಳೆ)
  • 7:49 - 7:52
    ನಾನು ಹಿಂತಿರುಗುವಾಗ, ನನ್ನ ಬೋರ್ಡಿಂಗ್ ಪಾಸ್ ಬಳಸಬೇಕಾಗುತ್ತದೆ
  • 7:52 - 7:54
    ನನ್ನ ವಿಮಾನವು ಎಷ್ಟು ತಡವಾಗಿ ಹೊರಡುತ್ತದೆ ಎಂಬುದನ್ನೂ ತಿಳಿಯಲು,
  • 7:54 - 7:56
    ಏಕೆಂದರೆ ಆ ಅಮೂಲ್ಯವಾದ ಸಮಯದಲ್ಲಿ,
  • 7:56 - 7:58
    ನನ್ನ ಐಫೋನ್ ಅನ್ನು ಬಳಸುವ ಕಾತರವಿರಬಹುದು!,
  • 7:58 - 8:00
    ಅಥವಾ ಒಂದು ನಿರ್ದಿಷ್ಟವಾದ ಚಿಹ್ನೆಯನ್ನು ಪರೀಕ್ಷಿಸುವ ಅವಸರವಿರಬಹುದು.
  • 8:00 - 8:03
    ನಾನು ಈ ತಂತ್ರಜ್ಞಾನವನ್ನು ಈ ರೀತಿಯಲ್ಲಿ ಬಳಸಲಾಗುವುದಿಲ್ಲ ಭಾವಿಸುತ್ತೇನೆ --
  • 8:03 - 8:04
    ಸರಿ ತಾನೇ? (ನಗು).
  • 8:05 - 8:07
    ಇದು ಜನರೊಂದಿಗೆ ಸಂವಹನ ನಡೆಸುವ ವಿಧಾನವನ್ನು ಮಾತ್ರವಲ್ಲದೇ,
  • 8:07 - 8:09
    ಭೌತಿಕ ಜಗತ್ತಿನೊಂದಿಗೆ ವ್ಯವಹರಿಸುವ ವಿಧಾನವನ್ನು ಬದಲಿಸಿದೆ.
  • 8:09 - 8:12
    ಬಹಳ ವಿನೋದದ ವಿಷಯವೆಂದರೆ ನನ್ನ ಬೋಸ್ಟನ್ ಮೆಟ್ರೋ ಪ್ರಯಾಣ,
  • 8:12 - 8:15
    ನಾನು ರೈಲಿನ ಒಳಭಾಗದಲ್ಲಿ ಪಾಂಗ್ ಆಟವಾಡುತ್ತಿದ್ದೆ
  • 8:15 - 8:17
    ಅದೂ ನೆಲದಲ್ಲಿ ಸರಿ ತಾನೇ?
  • 8:17 - 8:18
    (ನಗು)
  • 8:18 - 8:20
    ಮತ್ತು ನಾನು ಯೋಚಿಸಿದೆ ಊಹನೆಗೂ ಒಂದು ಮಿತಿಯಿದೆಯೇ?
  • 8:20 - 8:22
    ನೀವು ಏನನ್ನು ಯೋಚಿಸುತ್ತೀರೋ ಅದನ್ನು ಮಾಡಲು ಸಾಧ್ಯವೇ ಎಂದು.
  • 8:22 - 8:24
    ಆದರೆ ಇಂತಹ ತಂತ್ರಜ್ಞಾನ ಎಲ್ಲವನ್ನೂ ನಿಜ ಜೀವನದಲ್ಲಿ ಸಾಧ್ಯವಾಗಿಸುತ್ತದೆ.
  • 8:24 - 8:26
    ಆದರೂ ನೀವು ವಾದಿಸಬಹುದು,
  • 8:26 - 8:29
    ಅದು ಏನೆಂದರೆ ಎಲ್ಲ ಕಾರ್ಯಗಳು ಮುಗಿಸಲು ಚಲನೆಯಿಂದ ಸಾಧ್ಯವಿಲ್ಲ ಎಂದು.
  • 8:29 - 8:32
    ಉದಾಹರಣೆಗೆ ಲೆಕ್ಕಾಚಾರಗಳು, ಲೇಖನದ ಸಂಪಾದನೆ ಇತ್ಯಾದಿ
  • 8:32 - 8:34
    ಮತ್ತು ಇವುಗಳನ್ನು ಮಾಡುವ ವಿಧಾನ ಹೇಗೆ ಎಂದು.
  • 8:34 - 8:38
    ಆದರೆ ನೀವು ಬಹಳ ಆಶ್ಚರ್ಯ ಪಡುವ ಮುಂದಿನ ಪೀಳಿಗೆಯ ಟಾಬ್ಲೆಟ್ ಗಣಕಯಂತ್ರಗಳ ಬಗ್ಗೆ
  • 8:38 - 8:40
    ಅದಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ.
  • 8:40 - 8:42
    ಆದರೆ ಅದನ್ನೇ ಕಾಡು ಕುಳಿತುಕೊಳ್ಳುವುದಕ್ಕಿಂತ,
  • 8:42 - 8:45
    ನಾನು ನನ್ನದೇ ಆದ ಕಾಗದದಿಂದಲೇ ಬಳಸಲು ಸಾಧ್ಯವಾದ ಟಾಬ್ಲೆಟ್ ಗಣಕಯಂತ್ರ ತಯಾರಿಸಿದೆ.
  • 8:45 - 8:47
    ನಾನು ಇಲ್ಲಿ ಕೆಮೆರಾವನ್ನು ಕಳಚಿದೆ--
  • 8:47 - 8:51
    ಎಲ್ಲ ವೆಬ್ ಕೆಮೆರಾಗಳಲ್ಲಿ ಧ್ವನಿ ಗ್ರಾಹಕವು ಅಡಕವಾಗಿದೆ.
  • 8:51 - 8:54
    ಆ ಧ್ವನಿ ಗ್ರಾಹಕವನ್ನು ನಾನು ಬೇರ್ಪಡಿಸಿದೆ,
  • 8:54 - 8:56
    ಮತ್ತು ನಾನು ಅದನ್ನು--
  • 8:56 - 8:59
    ಕಾಗದಕ್ಕೆ ಕ್ಲಿಪ್ನಂತೆ ಅಳವಡಿಸಿದೆ.
  • 8:59 - 9:03
    ಮತ್ತು ಕಾಗದ ಅಂದರೆ ಸಾಧಾರಣವಾಗಿ ನಿತ್ಯ ಜೀವನದಲ್ಲಿ ಬಳಸುವಂತಹುದೇ ಆಗಿತ್ತು.
  • 9:03 - 9:06
    ನಾನು ಈಗ ಕಾಗದಲ್ಲಿ ಸ್ಪರ್ಶದಿಂದ ಮೂಡಿಸಿದ ಧ್ವನಿ
  • 9:06 - 9:09
    ಅದೇ ಅನುಕ್ರಮದಲ್ಲಿ ನನಗೆ ಅರಿವಾಗುತ್ತಿತ್ತು.
  • 9:09 - 9:13
    ಆದರೆ ಕೆಮೆರಾವು ನನ್ನ ಬೆರಳನ್ನು ಅನುಸರಿಸುತ್ತಿತ್ತು.
  • 9:13 - 9:16
    ನೀವು ಚಲನಚಿತ್ರವನ್ನು ವೀಕ್ಷಿಸಬಹುದು.
  • 9:16 - 9:19
    (ಶುಭ ಅಪರಾಹ್ನ. ನನ್ನ ಹೆಸರು ರಸೆಲ್......
  • 9:19 - 9:22
    ಮತ್ತು ಗುಂಪು ೫೪ರಲ್ಲಿ ಪಾಳುಭೂಮಿ ಅನ್ವೇಷಕ.)
  • 9:22 - 9:25
    ಮತ್ತು ನೀವು ಆಟವನ್ನೂ ಆಡಬಹುದು.
  • 9:25 - 9:28
    (ಕಾರ್ ಯಂತ್ರ)
  • 9:28 - 9:31
    ಇಲ್ಲಿ ಕೆಮೆರಾವು ನೀವು ಹೇಗೆ ಕಾಗದವನ್ನು ಹಿಡಿದುಕೊಂಡಿದ್ದೀರಿ ಎಂಬುದನ್ನೂ ಗಮನಿಸುತ್ತದೆ
  • 9:31 - 9:33
    ಮತ್ತು ನೀವು ಕಾರ್ ರೇಸ್ ಆಡುವಂತೆ ಮಾಡುತ್ತದೆ!
  • 9:33 - 9:36
    (ಚಪ್ಪಾಳೆ)
  • 9:37 - 9:39
    ನೀವು ಬಹಳಷ್ಟು ಜನ ಅಂತರ್ಜಾಲ ಜಾಲಾಟದ ಬಗ್ಗೆ ಯೋಚಿಸಿರಬಹುದು, ಇದೂ ಸಾಧ್ಯ.
  • 9:39 - 9:42
    ನೀವು ಅಂತರ್ಜಾಲದ ಯಾವುದೇ ಜಾಲತಾಣವನ್ನು ಜಾಲಾಡಬಹುದು.
  • 9:42 - 9:45
    ಮತ್ತು ಸಣ್ಣ ಕಾಗದದ ಚೂರಿನೊಂದಿಗೆ ಯಾವುದೇ ಲೆಕ್ಕಾಚಾರವನ್ನು ಸಹ ಮಾಡಬಹುದು.
  • 9:45 - 9:46
    ನಿಮಗೆ ಅವಶ್ಯಕತೆ ಬಿದ್ದಾಗಲೆಲ್ಲಾ!
  • 9:46 - 9:49
    ಮತ್ತೂ ಆಶ್ಚರ್ಯದಾಯಕವಾಗಿ,
  • 9:49 - 9:52
    ನಾನು ಇದನ್ನು ಮತ್ತಷ್ಟು ಚಲನಶೀಲವಾಗಿಸುವುದರಲ್ಲಿ ಆಸಕ್ತಿ ಬೆಳೆಸಿದೆ.
  • 9:52 - 9:55
    ನಾನು ನನ್ನ ಮೇಜಿನ ಕಾಗದ ಬಳಸುವಾಗ ಮಾಹಿತಿಯನ್ನು ಚಿವುಟಿ
  • 9:55 - 9:57
    ನನ್ನ ಗಣಕಯಂತ್ರಕ್ಕೆ ಹಿಂದಿರುಗಿಸಬಹುದು
  • 9:57 - 10:00
    ಹಾಗೆಯೇ ನನ್ನ ಗಣಕಯಂತ್ರವನ್ನು ಸಹ.
  • 10:00 - 10:02
    (ಚಪ್ಪಾಳೆ)
  • 10:02 - 10:05
    ಕೇವಲ ಗಣಕಯಂತ್ರಗಳು ಮಾತ್ರ ಏಕೆ? ನಾವು ಕಾಗದದ ಚೂರುಗಳಲ್ಲೂ ಆಟವಾಡಬಹುದು!!
  • 10:05 - 10:08
    ನಿಜಕ್ಕೂ ಕಾಗದದ ಚೂರುಗಳೊಂದಿಗಿನ ಆಟ ಮಜಾ ನೀಡುತ್ತದೆ!!
  • 10:08 - 10:10
    ಇಲ್ಲಿ ನಾನೊಂದು ಮಾಹಿತಿಯ ತುಣುಕೊಂದನ್ನು ಆರಿಸಿದ್ದೇನೆ
  • 10:10 - 10:14
    ಅದನ್ನು ನನ್ನ ಆಯ್ಕೆಯ ಇನ್ನೊಂದು ಮಾಹಿತಿಯ ತುಣುಕಿನ ಮೇಲೆ ಇರಿಸುತ್ತೇನೆ--
  • 10:14 - 10:17
    ಅಂದರೆ ಇಲ್ಲಿ ಮಾಹಿತಿಯ ಸಂಪಾದನೆ ಆಗುತ್ತಿದೆ
  • 10:17 - 10:19
    ಅದನ್ನೇ ನಾನು ಇಲ್ಲಿ ಮಾಡುತ್ತಿದ್ದೇನೆ.
  • 10:19 - 10:22
    ಸರಿ, ಮತ್ತು ನಾನೀಗ ಓಕೆ, ಇದು ಬಹಳ ಚೆನ್ನಾಗಿದೆ
  • 10:22 - 10:24
    ಇದರ ಮುದ್ರಣ ಮಾಡಬೇಕು ಎಂದೆನಿಸಿದೆ.
  • 10:24 - 10:26
    ಹಾಗೆ ಮಾಡಿದೆ ಅದರ ಪ್ರತಿ ಇದೀಗ ನೀವು ನೋಡುತ್ತಿರುವಿರಿ--
  • 10:26 - 10:29
    ಇಲ್ಲಿ ಕೆಲಸ ಬಹಳ ಸುಲಭವಾಗಿ ಮುಗಿಯಿತು, ಮತ್ತು ಬಳಸಿದ ವಿಧಾನವೂ ಅಷ್ಟೇ ಸರಳ.
  • 10:29 - 10:32
    ಆದರೆ ಸುಮಾರು ೨೦ ವರ್ಷಗಳ ಹಿಂದೆ,
  • 10:32 - 10:35
    ಈಗ ನಾವು ಈ ರೀತಿ ಎರಡು ವಿಭಿನ್ನ ಲೋಕಗಳ ನಡುವೆ ಕೊಂಡಿ ಬೆಳೆಸುವ ಮೊದಲು ಇದು ಕ್ಲಿಷ್ಟಕರವಾಗಿತ್ತು.
  • 10:35 - 10:38
    ಹಾಗಾಗಿ ನಾನು ಯೋಚಿಸಿದೆ,
  • 10:38 - 10:41
    ಈ ದಿನ ನಿತ್ಯದ ಮಾಹಿತಿಯನ್ನು ಒಟ್ಟುಗೂಡಿಸುವುದರ ಬಗ್ಗೆ ಆಸಕ್ತಿ ಹೆಚ್ಚಿಸಿಕೊಳ್ಳುವುದರ ಬಗ್ಗೆ
  • 10:41 - 10:46
    ಇದು ನಿಜಕ್ಕೂ ಈ ಭೌತಿಕ ಡಿಜಿಟಲ್ ವಿಶ್ವಗಳ ನಡುವಿನ ಬಿಕ್ಕಟ್ಟನ್ನು ನಿವಾರಿಸುವುದು ಮಾತ್ರವಲ್ಲ,
  • 10:46 - 10:48
    ಇವುಗಳ ನಡುವಿನ ಅಂತರವನ್ನು ನಿವಾರಿಸುತ್ತದೆ,
  • 10:48 - 10:50
    ಆದರೆ ಇದು ನಮಗೆ ಸ್ವಲ್ಪ ಮಟ್ಟಿನಲ್ಲಿ ಸಹಾಯಕವೂ ಆಗಿದೆ.
  • 10:50 - 10:52
    ಮಾನವರಾಗಿಯೇ ಉಳಿದುಕೊಳ್ಳಲು,
  • 10:52 - 10:55
    ಮತ್ತು ಭೌತಿಕ ವಿಶ್ವದೊಂದಿಗಿನ ಸಂಪರ್ಕ ಹೆಚ್ಚಿಸಿಕೊಂಡು.
  • 10:58 - 11:01
    ಇನ್ನೊಂದು ಯಂತ್ರದ ಮುಂದಿರುವಾಗ
  • 11:01 - 11:03
    ಮಾನವರನ್ನು ಯಂತ್ರಗಳನ್ನಾಗಿ ಪರಿವರ್ತಿಸುವುದನ್ನು ತಡೆಯುವುದರಲ್ಲೂ ಸಹಕಾರಿ.
  • 11:03 - 11:06
    ಅಷ್ಟೇ! ಧನ್ಯವಾದಗಳು.
  • 11:06 - 11:20
    (ಚಪ್ಪಾಳೆ)
  • 11:20 - 11:21
    ಧನ್ಯವಾದಗಳು.
  • 11:21 - 11:24
    (ಚಪ್ಪಾಳೆ)
  • 11:24 - 11:25
    ಕ್ರಿಸ್ ಆಂಡರ್ಸನ್: ಹಾಗಾಗಿ ಪ್ರಣವ್,
  • 11:25 - 11:28
    ಮೊದಲಿಗೆ ನೀವೊಬ್ಬ ಪ್ರತಿಭಾನ್ವಿತ ಎಂದು ಹೇಳಬಯಸುತ್ತೇನೆ.
  • 11:28 - 11:31
    ಇದು ನಿಜಕ್ಕೂ ನಿಜಕ್ಕೂ ಅಮೂಲ್ಯವಾದುದು.
  • 11:31 - 11:34
    ನೀವು ಇದರಿಂದ ಏನು ಮಾಡಬಯಸುತ್ತಿರಿ? ಯಾವುದಾದರೂ ಕಂಪನಿ ತೆರೆಯುವ ಯೋಚನೆ ಇದೆಯೇ?
  • 11:34 - 11:36
    ಅಥವಾ ಒಬ್ಬ ಸಂಶೋಧಕನಾಗಿಯೇ ಉಳಿಯಬಯಸುತ್ತೀರಾ?
  • 11:36 - 11:38
    ಪ್ರಣವ್: ಈಗಾಗಲೇ ಹಲವು ಕಂಪನಿಗಳು--
  • 11:38 - 11:39
    ನಿಜವಾಗಿ ಸಹಕರಿಸಿದ ಮೀಡಿಯಾ ಲಾಬ್--
  • 11:39 - 11:42
    ಇದನ್ನು ಇನ್ನೊಂದು ದಿಕ್ಕಿನಲ್ಲಿ ಕೊಂಡೊಯ್ಯುವುದರತ್ತ ಯೋಚಿಸುತ್ತಿವೆ.
  • 11:42 - 11:44
    ಮೊಬೈಲ್ ದೂರವಾಣಿ ಸೇವಾದಾರರು
  • 11:44 - 11:47
    ಇದನ್ನು ಭಾರತದ ಸ್ವಯಂ ಸೇವಾ ಸಂಸ್ಥೆಗಳು ಯೋಚಿಸಿರುವ ವಿಧಾನದ ಬದಲು ಲಾಭದಾಯಕವಾಗುವತ್ತ ಚಿಂತಿಸುತ್ತಿವೆ.
  • 11:47 - 11:50
    ಯಾರು ಆಗ ಇದನ್ನು 'ಆರನೆಯ ಇಂದ್ರಿಯ' ಮಾಡುವುದರತ್ತ ಯೋಚಿಸುತ್ತಾರೆ?
  • 11:50 - 11:52
    ನಾವು ಪಂಚೇಂದ್ರಿಯಗಳನ್ನು ಹೊಂದಿದ್ದು ಅವುಗಳಿಲ್ಲದ ಜನರಿಗೆ
  • 11:52 - 11:53
    ಅಂದರೆ ಯಾರಿಗೆ ಮಾತನಾಡಲು ಅಸಾಧ್ಯವೋ,
  • 11:53 - 11:56
    ಈ ತಂತ್ರಜ್ಞಾನ ಅವರಿಗೆ ಹೊಸ ವಿಧಾನದಲ್ಲಿ ಮಾತನಾಡುವ ಸ್ವಾತಂತ್ರ್ಯ ಕೊಡುತ್ತದೆ.
  • 11:56 - 11:57
    ಅದು ಧ್ವನಿವರ್ಧಕದ ಮೂಲಕವಾದರೂ.
  • 11:57 - 12:00
    ಕ್ರಿಸ್: ನಿಮ್ಮ ಸ್ವಂತ ಯೋಚನೆಗಳೇನು? ಎಂ ಐ ಟಿಯಲ್ಲಿ ಉಳಿಯುವಿರೋ ಅಥವಾ
  • 12:00 - 12:01
    ಈ ತಂತ್ರಜ್ಞಾನದ ಮೂಲಕ ಬೇರೇನನ್ನಾದರೂ ಮಾಡಬಯಸುವಿರೋ?
  • 12:01 - 12:03
    ಪ್ರಣವ್: ನಾನು ಇದನ್ನು ಜನ ಸಾಮಾನ್ಯರಿಗೆ ತಲುಪಿಸಬಯಸುತ್ತೇನೆ
  • 12:03 - 12:06
    ಯಾರು ಬೇಕಾದರೂ ಅವರದೇ ಆದ ಆರನೆಯ ಇಂದ್ರಿಯ ತಯಾರಿಸುವಂತೆ,
  • 12:06 - 12:11
    ಏಕೆಂದರೆ ಇದರ ಯಂತ್ರಾಂಶಗಳ ತಯಾರಿ ಕ್ಲಿಷ್ಟಕರವಲ್ಲ
  • 12:11 - 12:13
    ಅಥವಾ ಸ್ವತಂತ್ರವಾಗಿ ತಯಾರಿಸಲು ಅಡಚಣೆಯೂ ಇಲ್ಲ.
  • 12:13 - 12:15
    ನಾವು ಇದಕ್ಕಾಗಿ ಈ ತಂತ್ರಾಂಶವನ್ನು ಉಚಿತವಾಗಿ ನೀಡಬಯಸುತ್ತೇವೆ,
  • 12:15 - 12:17
    ಇದು ಬಹುಶಃ ಬರುವ ತಿಂಗಳಿಂದ ಲಭ್ಯವಾಗಬಹುದು.
  • 12:17 - 12:19
    ಕ್ರಿಸ್: ಮುಕ್ತ ತಂತ್ರಾಂಶ ವಾವ್!!
  • 12:19 - 12:24
    (ಚಪ್ಪಾಳೆ)
  • 12:24 - 12:27
    ಕ್ರಿಸ್: ನೀವು ಭಾರತಕ್ಕೆ ಈ ಯೋಜನೆಯೊಂದಿಗೆ ಹಿಂತಿರುಗಲು ಬಯಸಿದ್ದೀರಾ?
  • 12:27 - 12:29
    ಪ್ರಣವ್: ನಿಜ, ನಿಜ, ನಿಜವಾಗಿಯೂ!
  • 12:29 - 12:31
    ಕ್ರಿಸ್: ನಿಮ್ಮ ಎಂ ಐ ಟಿಯ ಮುಂದಿನ ಯೋಜನೆಗಳು?
  • 12:31 - 12:33
    ಮತ್ತು ಭಾರತ? ನೀವು ಇದನ್ನು ಹೇಗೆ ಹೊಂದಿಸುತ್ತೀರಿ?
  • 12:33 - 12:36
    ಪ್ರಣವ್: ಇಲ್ಲದಕ್ಕೆ ಬೇಕಾದಷ್ಟು ಶಕ್ತಿಯಿದೆ, ಮತ್ತು ಕಲಿಯುವುದಕ್ಕೂ ಇದೆ.
  • 12:36 - 12:38
    ನೀವು ಇಲ್ಲಿ ವೀಕ್ಷಿಸಿದ ಎಲ್ಲ ಕೆಲಸಗಳನ್ನು
  • 12:38 - 12:40
    ನಾನು ಭಾರತದಲ್ಲಿಯೇ ಕಲಿತೆ.
  • 12:40 - 12:43
    ಮತ್ತು ಹಣಕಾಸಿನ ವಿಚಾರದ ಬಗೆಗೆ ಭಾರತವೆ ಉತ್ತಮ!
  • 12:43 - 12:45
    ಈ ಮಾದರಿ ಸುಮಾರು $೩೦೦ ಬೆಲೆ ಬಾಳುವಂತಹುದು.
  • 12:45 - 12:48
    ಸುಮಾರು $೨೦,೦೦೦ರಷ್ಟು ಬೆಲೆಬಾಳುವ ಮೇಜು ಇತ್ಯಾದಿ.
  • 12:48 - 12:51
    ಅಥವಾ ಸುಮಾರು $೨ರಷ್ಟು ಬೆಲೆಬಾಳುವ ಮೌಸ್ ಇತ್ಯಾದಿ
  • 12:51 - 12:54
    ನಾವು ಇದನ್ನು ತಯಾರಿಸುವಾಗ ಸುಮಾರು $೫೦೦೦ದಷ್ಟು ಮೌಲ್ಯ ಹೊಂದಿತ್ತು.
  • 12:54 - 12:58
    ಹಾಗಾಗಿ ಒಂದು ಸಮ್ಮೇಳನದಲ್ಲಿ ನಾವಿದನ್ನು
  • 12:58 - 13:00
    ನಮ್ಮ ರಾಷ್ಟ್ರಪತಿ ಶ್ರೀ ಅಬ್ದುಲ್ ಕಲಾಂರಿಗೆ ತೋರಿಸಿದೆವು,
  • 13:00 - 13:03
    ಆಗ ಅವರು "ನಾವಿದನ್ನು ಭಾಭಾ ಅಣುಶಕ್ತಿ ಸಂಶೋಧನಾ ಕೇಂದ್ರದಲ್ಲಿ
  • 13:03 - 13:05
    ಬಳಸೋಣ" ಎಂದು ಹೇಳಿ ಪ್ರೋತ್ಸಾಹಿಸಿದರು.
  • 13:05 - 13:08
    ಹಾಗೆ ನಾನು ಇದನ್ನು ಜನ ಸಾಮಾನ್ಯರಿಗೆ ತಲುಪಿಸುವುದರತ್ತ ಕಾರ್ಯಪ್ರವೃತ್ತನಾದೆ
  • 13:08 - 13:11
    ಇದನ್ನು ಕೇವಲ ಪ್ರಯೋಗಾಲಯದಲ್ಲಿ ಇರಿಸುವುದಕ್ಕಿಂತ ಪ್ರಯೋಜನವಾಗುತ್ತದೆ ಎಂದು ಭಾವಿಸಿದೆ.
  • 13:11 - 13:15
    (ಚಪ್ಪಾಳೆ)
  • 13:15 - 13:18
    ಸಿಎ: ನಾವು TEDಯಲ್ಲಿ ಸಂದರ್ಶಿಸಿದ ವ್ಯಕ್ತಿಗಳ ಆಧಾರದಲ್ಲಿ
  • 13:18 - 13:19
    ನೀವು ವಿಶ್ವದ ಅತ್ಯದ್ಭುತ ಸಂಶೋಧಕರಲ್ಲೊಬ್ಬರು ಎಂಬುದನ್ನು
  • 13:19 - 13:21
    ನಾನು ಹೇಳಬಯಸುತ್ತೇನೆ.
  • 13:21 - 13:23
    ನೀವು TEDಗೆ ಬಂದಿರುವುದು ನಿಜಕ್ಕೂ ಸಂತಸದಾಯಕವಾದದ್ದು.
  • 13:23 - 13:25
    ಕೃತಜ್ಞತೆಗಳು
  • 13:25 - 13:26
    ಅದು ನಿಜಕ್ಕೂ ಅತ್ಯದ್ಭುತ.
  • 13:26 - 13:30
    (ಚಪ್ಪಾಳೆ)
Title:
ಪ್ರಣವ್ ಮಿಸ್ತ್ರಿ: ಆರನೆಯ ಇಂದ್ರಿಯ ತಂತ್ರಜ್ಞಾನದ ಜನಕ
Speaker:
Pranav Mistry
Description:

TED ಭಾರತ ಮೈಸೂರಿನಲ್ಲಿ ನಡೆಸಿದ ಆರನೆಯ ಇಂದ್ರಿಯದ ಬಗೆಗಿನ ಪ್ರಣವ್ ಮಿಸ್ಟ್ರಿಯವರೊಂದಿಗಿನ ಮಾತುಕತೆ ಭೌತಿಕ ವಿಶ್ವ ಹಾಗೂ ಯಾಂತ್ರಿಕ ವಿಶ್ವದೊಂದಿಗಿನ ಸಂವಹನ ಹಾಗೂ ಸಂಗಣಕದೊಂದಿಗೆ ವರ್ತನೆಯ ಕುರಿತು ತಿಳಿಸುತ್ತದೆ. ಇದರಲ್ಲಿ ಪ್ರಣವ್ ಈ ತಂತ್ರಜ್ಞಾನವನ್ನು ಜನ ಸಾಮಾನ್ಯರಿಗೆ ತಲುಪಿಸುವಲ್ಲಿ ಮುಕ್ತ ತಂತ್ರಾಂಶವಾಗಿಸುವ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

more » « less
Video Language:
English
Team:
closed TED
Project:
TEDTalks
Duration:
13:30
Dimitra Papageorgiou approved Kannada subtitles for The thrilling potential of SixthSense technology
Abhishek Baikadi accepted Kannada subtitles for The thrilling potential of SixthSense technology
Raghu Rama added a translation

Kannada subtitles

Revisions