< Return to Video

01 What Makes A Computer v7

  • 0:05 - 0:09
    ನಾನು ಮೇ ಲಿ ಖೋಯ್. ನಾನು ಡಿಸೈನರ್
    ಹಾಗೂ ಇನ್ವೆಂಟರ್.
  • 0:10 - 0:13
    ಆಪಲ್‌ಗೆ ಕೆಲವು ಡಿಸೈನ್ ಮಾಡಿದ್ದೇನೆ
    ಈಗ ಮಕ್ಕಳ ಪ್ರಾಡಕ್ಟ್ ಡಿಸೈನ್ ಮಾಡುತ್ತೇನೆ
  • 0:16 - 0:18
    ಶಾಲೆಯಲ್ಲಿ ಅವರಿಗೆ ಸುಲಭವಾಗಲಿ ಅಂತ.
  • 0:18 - 0:22
    ಡಿಜೆ ಮತ್ತು ಡ್ಯಾನ್ಸ್ ಕೂಡಾ ಮಾಡ್ತೇನೆ.
  • 0:26 - 0:27
    ಎಲ್ಲ ಕಡೆ ಕಂಪ್ಯೂಟರ್ ಇದೆ!
  • 0:28 - 0:33
    ಜನರ ಪಾಕೆಟ್‌ಲ್ಲಿ, ಕಾರುಗಳಲ್ಲಿದೆ, ಜನರ
    ಮೊಣಕೈಯಲ್ಲೂ ಇದೆ
  • 0:33 - 0:35
    ಈಗ ನಿಮ್ಮ ಬ್ಯಾಕ್‌ಪ್ಯಾಕ್‌ನಲ್ಲಿರಬಹುದು
  • 0:36 - 0:39
    ಆದರೆ ಕಂಪ್ಯೂಟರ್ ವೈಶಿಷ್ಟ್ಯವೇನು?
  • 0:39 - 0:41
    ಹಾಗಾದರೆ. ಕಂಪ್ಯೂಟರ್ ಆಗಿದ್ದು ಹೇಗೆ?
  • 0:41 - 0:43
    ಇದು ಹೇಗೆ ಕೆಲಸ ಮಾಡುತ್ತೆ?
  • 0:46 - 0:50
    ನಾನು ನಾಟ್! Xbox ಮೂಲ ಡಿಸೈನರ್ ಪೈಕಿ ನಾನೊಬ್ಬ.
  • 0:50 - 0:56
    ಏಳನೇ ವಯಸ್ಸಿಂದ ನಾನು ಈ ಕೆಲಸ ಮಾಡ್ತಿದ್ದೇನೆ
    ಈಗ ವರ್ಚುವಲ್ ರಿಯಾಲಿಟಿ ಕೆಲಸ ಮಾಡ್ತಿದ್ದೇನೆ.
  • 1:07 - 1:11
    ಸಮಸ್ಯೆ ಪರಿಹಾರಕ್ಕೆ ನಾವು ಟೂಲ್‌ ನಿರ್ಮಿಸ್ತೇವೆ
  • 1:11 - 1:16
    ಗಾಡಿ, ಸುತ್ತಿಗೆ, ಪ್ರಿಂಟಿಂಗ್ ಪ್ರೆಸ್,
    ಟ್ರ್ಯಾಕ್ಟರ್ ರೀತಿ ಟೂಲ್‌ಗಳು.
  • 1:16 - 1:19
    ಇವೆಲ್ಲ ನಮ್ಮ ಕೆಲಸಕ್ಕೆ ಸಹಾಯ ಮಾಡಿವೆ.
  • 1:19 - 1:21
    ಕಾಲ ಕಳೆದಂತೆ ಜನರಿಗೆ ಅನಿಸಿತು
  • 1:21 - 1:26
    ನಮ್ಮ ಯೋಚನೆಗೂ ಮಶಿನ್ ಅನ್ನು ಮಾಡಿದರೆ ಹೇಗೆ ಅಂತ
  • 1:26 - 1:30
    ಉದಾ., ಸಮೀಕರಣ ಅಥವಾ ನಕ್ಷತ್ರ ಟ್ರ್ಯಾಕ್ ಮಾಡೋದು
  • 1:30 - 1:34
    ಕಲ್ಲು, ಕೊಳೆ ಸಾಗಿಸುವಂತ ಕೆಲಸವನ್ನು ಮಾಡೋ ಬದಲು
  • 1:34 - 1:38
    ಮಾಹಿತಿಗಾಗಿ ಮಶಿನ್‌ಗಳನ್ನು ವಿನ್ಯಾಸ ಮಾಡಬೇಕು.
  • 1:40 - 1:44
    ಯೋಚನೆ ಮಶಿನ್ ವಿನ್ಯಾಸದ ಬಗ್ಗೆ ಕಂಪ್ಯೂಟರ್
    ವಿಜ್ಞಾನಿಗಳು ಯೋಚನೆ ಮಾಡಿದಾಗ
  • 1:44 - 1:47
    ನಾಲ್ಕು ಕೆಲಸ ಮಾಡಬೇಕಾಗುತ್ತೆ ಎಂದು
    ಅವರು ಕಂಡುಕೊಂಡರು.
  • 1:48 - 1:50
    ಇನ್‌ಪುಟ್‌ ತೆಗೆದುಕೊಂಡು
  • 1:51 - 1:52
    ಮಾಹಿತಿ ಸಂಗ್ರಹಿಸಿ
  • 1:53 - 1:56
    ಪ್ರೊಸೆಸ್ ಮಾಡಿ, ಫಲಿತಾಂಶ ಔಟ್‌ಪುಟ್ ಮಾಡಬೇಕು.
  • 1:57 - 1:59
    ಇದು ಸರಳ ಅನಿಸಬಹುದು.
  • 1:59 - 2:02
    ಆದರೆ, ಇವು ಎಲ್ಲ ಕಂಪ್ಯೂಟರ್‌ಗಳಿಗೂ ಸಾಮಾನ್ಯ.
  • 2:03 - 2:06
    ಹೀಗಾಗಿ, ಕಂಪ್ಯೂಟರ್ ವಿಶಿಷ್ಟವಾಗಿದೆ.
  • 2:08 - 2:10
    ಆರಂಭಿಕ ಕಂಪ್ಯೂಟರ್ ಅನ್ನು ಮರ, ಲೋಹದಿಂದ
    ಮಾಡಿದ್ದರು
  • 2:10 - 2:13
    ಮೆಕಾನಿಕಲ್ ಲಿವರ್, ಗಿಯರ್‌ ಬಳಸಲಾಗಿತ್ತು.
  • 2:13 - 2:18
    20ನೇ ಶತಮಾನದ ವೇಳೆಗೆ,
    ಎಲೆಕ್ಟ್ರಿಕಲ್ ಸಾಮಗ್ರಿ ಬಳಸಲಾಯಿತು.
  • 2:18 - 2:21
    ಇವು ತುಂಬಾ ದೊಡ್ಡದಾಗಿದ್ದವು, ನಿಧಾನವಾಗಿದ್ದವು.
  • 2:21 - 2:25
    ಕೋಣೆ ಗಾತ್ರದ ಕಂಪ್ಯೂಟರ್ ಸಾಮಾನ್ಯ ಗಣಿತ ಮಾಡಲು
    ಗಂಟೆಗಳಷ್ಟು ಸಮಯವನ್ನು ತೆಗೆದುಕೊಳ್ಳುತ್ತಿತ್ತು
  • 2:27 - 2:33
    ಈ ಮಶಿನ್‌ಗಳು ಹೊಳೆಯುವ, ಬಣ್ಣ ಬಣ್ಣದ, ಹೊಳೆಯುವ
    ಲೈಟ್‌ಗಳನ್ನು ಹೊಂದಿರುತ್ತವೆ.
  • 2:33 - 2:36
    ಕಂಪ್ಯೂಟರ್‌ಗಳು ಆರಂಭದಲ್ಲಿ ಪ್ರಾಥಮಿಕ
    ಕ್ಯಾಲಕ್ಯುಲೇಟರ್‌ ಆಗಿತ್ತು.
  • 2:36 - 2:41
    ಆ ಸಮಯದಲ್ಲಿ ಅವು ಅದ್ಭುತವಾಗಿದ್ದವು
    ಆಗ ಸಂಖ್ಯೆಗಳನ್ನು ಮಾತ್ರ ಲೆಕ್ಕ ಮಾಡುತ್ತಿದ್ದವು.
  • 2:41 - 2:47
    ಈಗ ಇವನ್ನು ಪರಸ್ಪರ ಮಾತನಾಡಲು ಬಳಸಬಹುದು,
    ಗೇಮ್ ಆಡಲು, ರೋಬೋಟ್ ನಿಯಂತ್ರಿಸಲು ಬಳಸಬಹುದು
  • 2:47 - 2:50
    ಊಹಿಸಲೂ ಆಗದಂತಹ ಕೆಲಸಗಳನ್ನು ಇದರಲ್ಲಿ ಮಾಡಬಹುದು.
  • 2:51 - 2:54
    ಆಧುನಿಕ ಕಂಪ್ಯೂಟರ್‌ಗಳು ಹಳೆಯ ಕಾಲದ
    ಮಶಿನ್‌ಗಳ ಹಾಗಿಲ್ಲ.
  • 2:54 - 2:57
    ಆದರೆ, ಈ ನಾಲ್ಕು ಮುಖ್ಯ ಕೆಲಸವನ್ನೇ
    ಅವು ಮಾಡುತ್ತಿವೆ.
  • 3:03 - 3:05
    ಮೊದಲು, ಇನ್‌ಪುಟ್ ಬಗ್ಗೆ ನಾವು ಮಾತಾಡೋಣ.
  • 3:05 - 3:07
    ಇದು ನನ್ನ ಮೆಚ್ಚಿನದು. ಯಾಕೆಂದರೆ
  • 3:07 - 3:12
    ಇನ್‌ಪುಟ್ ಎಂಬುದು ವಿಶ್ವವೇ ಮಾಡುವ ಕೆಲಸ
    ನೀವು ಮಾಡುವ ಕೆಲಸವನ್ನು ಕಂಪ್ಯೂಟರ್ ಮಾಡುತ್ತೆ
  • 3:12 - 3:14
    ಕೀಬೋರ್ಡ್‌ ಮೂಲಕ ನೀವು ಸೂಚನೆ ನೀಡಬಹುದು.
  • 3:14 - 3:19
    ಮೌಸ್, ಮೈಕ್ರೋಫೊನ್‌, ಕ್ಯಾಮೆರಾದಿಂದ ಕೆಲಸವನ್ನು
    ಕಂಪ್ಯೂಟರ್‌ಗೆ ಹೇಳಬಹುದು.
  • 3:19 - 3:22
    ನಿಮ್ಮ ಮೊಣಕೈಯಲ್ಲಿ ಕಂಪ್ಯೂಟರ್ ಇದ್ದರೆ,
    ಹೃದಯ ಬಡಿತವನ್ನೂ ಕೇಳಿಸಿಕೊಳ್ಳುತ್ತದೆ
  • 3:22 - 3:26
    ನಿಮ್ಮ ಕಾರಿನಲ್ಲಿ ನಿಮ್ಮ ಕಾರಿನ ಧ್ವನಿ
    ಕೇಳಿಸಿಕೊಳ್ಳಬಹುದು.
  • 3:26 - 3:31
    ಟಚ್‌ಸ್ಕ್ರೀನ್‌ ನಿಮ್ಮ ಬೆರಳನ್ನು ಗ್ರಹಿಸುತ್ತೆ
    ಇದನ್ನು ಇನ್‌ಪುಟ್ ಆಗಿ ತಗೊಳ್ಳುತ್ತೆ.
  • 3:36 - 3:41
    ಈ ಎಲ್ಲ ಇನ್‌ಪುಟ್‌ಗಳು ಕಂಪ್ಯೂಟರ್‌ಗೆ ಮಾಹಿತಿ
    ನೀಡುತ್ತೆ. ಅದು ಮೆಮೊರಿಯಲ್ಲಿ ಉಳಿಯುತ್ತೆ.
  • 3:42 - 3:45
    ಕಂಪ್ಯೂಟರ್‌ನ ಪ್ರೊಸೆಸರ್ ಮೆಮೊರಿಯಿಂದ ಮಾಹಿತಿ
    ತೆಗೆದುಕೊಳ್ಳುತ್ತದೆ.
  • 3:45 - 3:48
    ಇದು ಅಲ್ಗೊರಿದಂ ಬಳಸಿ ಬದಲಿಸುತ್ತೆ
  • 3:48 - 3:50
    ಅಂದರೆ ಕಮಾಂಡ್‌ಗಳ ಸರಣಿ ಬಳಸಿ.
  • 3:50 - 3:54
    ನಂತರ ಪ್ರೊಸೆಸ್ ಮಾಡಿದ ಮಾಹಿತಿಯನ್ನು
    ಮೆಮೊರಿಯಲ್ಲಿ ಸಂಗ್ರಹಿಸಲು ಕಳುಹಿಸುತ್ತೆ.
  • 3:54 - 3:59
    ಸಂಸ್ಕರಿಸಿದ ಮಾಹಿತಿ ಔಟ್‌ಪುಟ್‌ಗೆ ರೆಡಿಯಾಗೋ
    ವರೆಗೆ ಇದು ನಡೀತಿರುತ್ತೆ.
  • 4:03 - 4:07
    ಕಂಪ್ಯೂಟರ್ ಕೆಲಸ ಏನು ಎಂಬುದರ ಮೇಲೆ
    ಮಾಹಿತಿಯ ಔಟ್‌ಪುಟ್ ಅವಲಂಬಿಸಿರುತ್ತೆ
  • 4:07 - 4:13
    ಪಠ್ಯ, ಫೋಟೋ, ವೀಡಿಯೋ, ಗೇಮ್ಸ್, ವರ್ಚುವಲ್
    ರಿಯಾಲಿಟಿಯನ್ನೂ ಕಂಪ್ಯೂಟರ್ ತೋರಿಸಬಹುದು.
  • 4:13 - 4:17
    ರೋಬೋಟ್ ಕಂಟ್ರೋಲ್ ಮಾಡಲು ಸಂಕೇತಗಳನ್ನೂ
    ಕಂಪ್ಯೂಟರ್ ಔಟ್‌ಪುಟ್ ಹೊಂದಿರಬಹುದು.
  • 4:17 - 4:20
    ಹಾಗೂ, ಇಂಟರ್ನೆಟ್‌ಗೆ ಕಂಪ್ಯೂಟರ್
    ಕನೆಕ್ಟ್ ಆದಾಗ
  • 4:20 - 4:24
    ಒಂದು ಕಂಪ್ಯೂಟರ್‌ನ ಔಟ್‌ಪುಟ್‌ ಇನ್ನೊಂದಕ್ಕೆ
    ಇನ್‌ಪುಟ್ ಆಗುತ್ತೆ.
  • 4:26 - 4:30
    ಆರಂಭದ ಮಶಿನ್‌ಗಳಿಗಿಂತ ಇಂದು ನಾವು ಬಳಸುವ
    ಕಂಪ್ಯೂಟರ್ ವಿಭಿನ್ನವಾಗಿ ಕಾಣಿಸುತ್ತೆ.
  • 4:30 - 4:33
    ನಾಳಿ ಕಂಪ್ಯೂಟರ್ ಹೇಗೆ ಕಾಣಿಸುತ್ತೆ
    ಎಂದು ಯಾರಿಗೆ ಗೊತ್ತು?
  • 4:33 - 4:37
    ನಾಳೆ ಕಂಪ್ಯೂಟರ್ ಹೇಗೆ ಕಾಣುತ್ತೆ ಎಂದು
    ಊಹಿಸಲು ನಿಮಗೆ ಸಹಾಯ ಬೇಕಾಗಬಹುದು.
  • 4:37 - 4:41
    ಯಾವುದೇ ತಂತ್ರಜ್ಞಾನ ಬಳಸಿದರೂ ಎಲ್ಲ ಕಂಪ್ಯೂಟರ್‌
  • 4:41 - 4:45
    ಅದೇ ನಾಲ್ಕು ಕೆಲಸವನ್ನೇ ಮಾಡುತ್ತಿರುತ್ತವೆ.
  • 4:45 - 4:46
    ಮಾಹಿತಿ ತಗೊಂಡು
  • 4:46 - 4:48
    ಡೇಟಾ ಸಂಗ್ರಹಿಸಿ
  • 4:48 - 4:50
    ಪ್ರೋಸೆಸ್ ಮಾಡಿ
  • 4:50 - 4:51
    ನಂತರ ಫಲಿತಾಂಶವನ್ನು ಔಟ್‌ಪುಟ್ ಕೊಡುತ್ತವೆ.
Title:
01 What Makes A Computer v7
Description:

more » « less
Video Language:
English
Duration:
05:10

Kannada subtitles

Revisions