-
ನೀವು ಹಾಕುವ ಡೇಟಾ ಎಷ್ಟು ಉತ್ತಮವೋ ಅಷ್ಟೇ
ಮಶಿನ್ ಲರ್ನಿಂಗ್ ಉತ್ತಮವಾಗಿರುತ್ತದೆ.
-
ಹೀಗಾಗಿ, ಉನ್ನತ ಗುಣಮಟ್ಟದ ಮತ್ತು ಭಾರಿ
ಪ್ರಮಾಣದ ಡೇಟಾ ಅತ್ಯಂತ ಮುಖ್ಯ.
-
ಆದರೆ, ಡೇಟಾ ಮುಖ್ಯವಾದರೆ, ಎಲ್ಲಿಂದ ತರಬೇತಿ ಡೇಟಾ
ಬರುತ್ತದೆ ಎಂದು ಕೇಳುವುದೂ ಮುಖ್ಯವಲ್ಲವೇ?
-
ಸಾಮಾನ್ಯವಾಗಿ, ನೀವು ಮತ್ತು ನಮ್ಮಂತಹವರಿಂದ
ಕಂಪ್ಯೂಟರ್ ತರಬೇತಿ ಡೇಟಾ ಸಂಗ್ರಹಿಸುತ್ತದೆ.
-
ಇದರಲ್ಲಿ ನಮ್ಮ ಪಾತ್ರ ಏನೂ ಇರೊಲ್ಲ.
-
ನೀವು ವೀಕ್ಷಿಸುವುದನ್ನು ವೀಡಿಯೋ ಸ್ಟ್ರೀಮಿಂಗ್
ಟ್ರ್ಯಾಕ್ ಮಾಡಬಹುದು, ನಂತರ
-
ಪ್ಯಾಟರ್ನ್ ಗುರುತಿಸಿ ಮುಂದಿನ ವೀಕ್ಷಣೆಯನ್ನು
ನಿಮಗೆ ಶಿಫಾರಸು ಮಾಡಬಹುದು.
-
ಕೆಲವು ಬಾರಿ ನೀವೇ ಸಹಾಯ ಕೇಳುತ್ತೀರಿ. ಬೀದಿ
ಚಿಹ್ನೆ, ಫೋಟೋ ಗುರುತಿಸುವಂತೆ ವೆಬ್‌ಸೈಟ್ ಕೇಳಿದಾಗ
-
ಮಶಿನ್ ಕಲಿಯಲು ನೀವು ತರಬೇತಿ ಡೇಟಾ ಒದಗಿಸುತ್ತೀರಿ
ಹಾಗೂ ಒಂದು ದಿನದ ಡ್ರೈವ್ ಕೂಡಾ ಒದಗಿಸುತ್ತೀರಿ.
-
ವೈದ್ಯಕೀಯ ಸಂಶೋಧಕರು ವೈದ್ಯಕೀಯ ಚಿತ್ರಗಳನ್ನು
ಬಳಸಿ ರೋಗಗಳನ್ನು ಹೇಗೆ ಗುರುತಿಸುವುದು ಮತ್ತು
-
ಪತ್ತೆ ಮಾಡುವುದು ಎಂದು ಕಂಪ್ಯೂಟರ್‌ಗೆ ಬೋಧಿಸಲು
ತರಬೇತಿ ನೀಡಬಹುದು.
-
ಮಶಿನ್ ಲರ್ನಿಂಗ್‌ಗೆ ಸಾವಿರಾರು ಚಿತ್ರಗಳು ಬೇಕು
ಮತ್ತು ಬಲ್ಲ ವೈದ್ಯರಿಂದ ತರಬೇತಿ ಅಗತ್ಯವಿರುತ್ತದೆ
-
ನಂತರವೇ ಅದು ಸರಿಯಾಗಿ ರೋಗ ಗುರುತಿಸಬಹುದು.
-
ಸಾವಿರಾರು ಉದಾಹರಣೆ ಇದ್ದರೂ, ಕಂಪ್ಯೂಟರ್
ಊಹೆಯಲ್ಲಿ ಸಮಸ್ಯೆ ಇದ್ದಿರಬಹುದು.
-
ಪುರುಷರಿಂದ ಮಾತ್ರ ಎಕ್ಸ್‌ರೇ ಡೇಟಾ ಸಂಗ್ರಹ
ಮಾಡಿದ್ದರೆ, ಪುರುಷರಿಗೆ ಮಾತ್ರ ಕೆಲಸ ಮಾಡಬಹುದು.
-
ಮಹಿಳೆ ಎಕ್ಸ್ ರೇ ಕೊಟ್ಟರೆ ಅದು ರೋಗ ಗುರುತು
ಮಾಡದೇ ಇರಬಹುದು.
-
ತರಬೇತಿಯಲ್ಲಿನ ಈ ಕುರುಡು ಡೇಟಾದಿಂದಾಗಿ
ಬಯಾಸ್ ಉಂಟಾಗುತ್ತದೆ.
-
ಬಯಾಸ್ ಡೇಟಾ ಕೆಲವಕ್ಕೆ ಆದ್ಯತೆ ನೀಡಿದರೆ
ಇನ್ನು ಕೆಲವಕ್ಕೆ ಆದ್ಯತೆ ನೀಡುದೇ ಹೊರಗಿಡುತ್ತೆ.
-
ಟ್ರೇನಿಂಗ್ ಡೇಟಾ ಸಂಗ್ರಹಿಸಿದ ವಿಧಾನ, ಯಾರು
ಸಂಗ್ರಹಿಸಿದ್ದಾರೆ ಮತ್ತು ಹೇಗೆ ಫೀಡ್ ಮಾಡಲಾಗಿದೆ
-
ಎಂಬುದನ್ನು ಆಧರಿಸಿ ಡೇಟಾದಲ್ಲಿ
ಮಾನವ ಬಯಾಸ್ ಇರುತ್ತದೆ.
-
ಬಯಾಸ್ ಡೇಟಾದಿಂದ ಕಲಿತು, ಕಂಪ್ಯೂಟರ್ ಬಯಾಸ್ಡ್
ಊಹೆ ಮಾಡಬಹುದು
-
ಕಂಪ್ಯೂಟರ್‌ಗೆ ತರಬೇತಿ ನೀಡಿದ ಜನರಿಗೆ ಇದರ ಬಗ್ಗೆ
ತಿಳಿದಿರಲಿ ಅಥವಾ ಇಲ್ಲದಿರಲಿ.
-
ನೀವು ತರಬೇತಿ ಡೇಟಾ ನೋಡುತ್ತಿರುವಾಗ, ಎರಡು
ಪ್ರಶ್ನೆಗಳನ್ನು ಕೇಳಿಕೊಳ್ಳಿ:
-
ಕಂಪ್ಯೂಟರ್‌ಗೆ ತರಬೇತಿ ನೀಡಲು ಸಾಕಷ್ಟು
ಡೇಟಾ ಇದೆಯೇ?
-
ಬಯಾಸ್ ಇಲ್ಲದೇ ಎಲ್ಲ ಸಂಭಾವ್ಯ ಸನ್ನಿವೇಶ ಮತ್ತು
ಬಳಕೆದಾರರನ್ನು ಇದು ಪ್ರತಿನಿಧಿಸುತ್ತದೆಯೇ?
-
ಇಲ್ಲಿ ಮಾನವ ತರಬೇತಿ ಮುಖ್ಯ ಪಾತ್ರ ವಹಿಸುತ್ತದೆ.
-
ನಿಮ್ಮ ಮಶಿನ್‌ಗೆ ಬಯಾಸ್ ಇಲ್ಲದ ಡೇಟಾ ನೀಡುವುದು
ನಿಮ್ಮ ಜವಾಬ್ದಾರಿ.
-
ಅಂದರೆ, ಹಲವು ಮೂಲಗಳಿಂದ ಟನ್‌ಗಟ್ಟಲೆ ಉದಾಹರಣೆ
ಸಂಗ್ರಹ ಮಾಡುವುದು.
-
ನೆನಪಿಡಿ, ಮಶಿನ್ ಲರ್ನಿಂಗ್‌ನಿಂದ ಡೇಟಾ
ಆಯ್ದುಕೊಂಡರೆ
-
ಕೋಡ್ ಬದಲಿಗೆ ತರಬೇತಿ ಡೇಟಾ ಬಳಸಿ ಅಲ್ಗೊರಿಥಂ
ಪ್ರೋಗ್ರಾಮ್ ಮಾಡುತ್ತಿರುತ್ತೀರಿ.
-
ಇಲ್ಲಿನ ಡೇಟಾ ಎಂಬುದೇ ಕೋಡ್.
-
ನೀವು ನೀಡುವ ಡೇಟಾ ಚೆನ್ನಾಗಿದ್ದಷ್ಟೂ,
ಕಂಪ್ಯೂಟರ್ ಚೆನ್ನಾಗಿ ಕಲಿಯುತ್ತದೆ.