ಶಾಲೆಗಳು ಕ್ರಿಯಾತ್ಮಕತೆಯನ್ನು ಕೊಲ್ಲುತ್ತವೆ ಎನ್ನುತ್ತಾರೆ ಕೆನ್ ರಾಬಿನ್ಸನ್
-
0:00 - 0:07ಶುಭೋದಯ. ಚೆನ್ನಾಗಿದ್ದೀರಾ ? ಇದು ತುಂಬ ಅದ್ಭುತವಾಗಿದೆ, ಅಲ್ಲವೆ ?
-
0:07 - 0:11ನಾನಂತೂ ಈ ಎಲ್ಲದರಿಂದ ಮೂಕವಿಸ್ಮಿತನಾಗಿದ್ದೇನೆ.
-
0:11 - 0:15ನಿಜ ಹೇಳಬೇಕು ಅಂದ್ರೆ, ನಾ ಹೊರಟೆ. (ನಗು)
-
0:15 - 0:19ಮೂರು ವಿಚಾರಧಾರೆಗಳು
-
0:19 - 0:23ಈ ಸಭೆಗಳಲ್ಲಿ ಕಂಡುಬಂದಿದೆ.
-
0:23 - 0:25ಇವುಗಳು ನನ್ನ ಈ ಭಾಷಣಕ್ಕೆ ಪ್ರಸಕ್ತವಾಗಿವೆ.
-
0:25 - 0:29ಮೊದಲನೆಯದಾಗಿ, ಮಾನವನ ಕ್ರಿಯಾತ್ಮಕತೆಗೆ ಅದ್ಬುತವಾದ ಸಾಕ್ಷಿ
-
0:29 - 0:32ನಾವು ಕೇಳಿದ ಪ್ರತಿಯೊಂದು ಭಾಷಣದಲ್ಲಿಯೂ
-
0:32 - 0:35ಹಾಗೂ ಇಲ್ಲಿ ನೆರೆದಿರುವ ಪ್ರತಿಯೊಬ್ಬ ವ್ಯಕಿಯಲ್ಲಿಯೂ ಇದು ಗೋಚರವಾಗುತ್ತಿದೆ. ಇದರ ವ್ಯವಿದ್ಯಥೆ
-
0:35 - 0:38ಹಾಗೂ ಇದರ ಪರಿಮಿತಿ ಅಪಾರ. ಎರಡನೆಯದಾಗಿ,
-
0:38 - 0:41ಇದರಿಂದಾಗಿ ಪರಿಸ್ಥಿತಿ ಹೇಗಾಗಿದೆಯೆಂದರೆ ಮುಂದೆ ಏನು ನಡಿಯಬಹುದು ನಮಗೆ ಹೊತ್ತಿಲ್ಲ,
-
0:41 - 0:43ಭವಿಷ್ಯತ್ ಕಾಲದ ಬಗ್ಗೆ ನಮಗೆ ಸ್ಪಷ್ಟ ಕಲ್ಪನೆ ಇಲ್ಲ.
-
0:43 - 0:45ಹೇಗೆ ಇದು ರೂಪಗೊಳ್ಳುವುದೆಂದು.
-
0:45 - 0:48ನನಗೆ ಶಿಕ್ಷಣದ ವಿಚಾರದಲ್ಲಿ ಬಹಳ ಆಸಕ್ತಿ --
-
0:48 - 0:51ವಾಸ್ತವವಾಗಿ, ನಾನು ಕಂಡ ಸಂಗತಿ ಏನಂದ್ರೆ ಶಿಕ್ಷಣದ ಬಗ್ಗೆ ಎಲ್ಲರಿಗೂ ಆಸಕ್ತಿ ಇದೆ.
-
0:51 - 0:53ನಿಮಗೆ ಇಲ್ಲವೇ ? ಇದು ನನಗೆ ಬಹಳ ಕುತೂಹಲಕಾರಿಯಾದ ಸಂಗತಿ.
-
0:53 - 0:56ನೀವು ಯಾವುದಾರು ಊಟದ ಔತಣಕ್ಕೆ ಹೋಗಿ,
-
0:56 - 0:59ನಾನು ಶಿಕ್ಷಣದ ಕ್ಷೇತ್ರದಲ್ಲಿ ಕೆಲಸ ಮಾಡ್ತೀನಿ ಅಂತ ಹೇಳಿ --
-
0:59 - 1:06ವಾಸ್ತವವಾಗಿ, ನೀವು ಶಿಕ್ಷಣ ಕ್ಷೇತ್ರದಲ್ಲೇ ಇದ್ದರೆ, ಹೆಚ್ಚಿನಪಕ್ಷ ನೀವು ಯಾವ ಔತಣದಲ್ಲೂ ಇರಲ್ಲ.
-
1:06 - 1:09(ನಗು) ಇದ್ದರುನೂ ಯಾರು ನಿಮ್ಮನ್ನ ಕೇಳಲ್ಲ.
-
1:09 - 1:14ನಾ ಕೇಳಿದರೂ ತಿರುಗಿ ನನ್ನನ್ನ ಯಾರು ಕೇಳಲ್ಲ, ಆಶ್ಚರ್ಯ. ಇದು ನನಗೆ ವಿಚಿತ್ರ ಅನ್ಸುತ್ತೆ.
-
1:14 - 1:16ಆದರೂ ಊಹಿಸಿಕೊಳ್ಳಿ, ನೀವು ಯಾರನ್ನೋ ಮಾತಾಡಿಸ್ತೀರಿ,
-
1:16 - 1:18ಆಗ ಅವರು ನಿಮ್ಮನ್ನ, "ನೀವು ಏನು ಮಾಡ್ತೀರಿ?" ಅಂಥ ಕೇಳ್ತಾರೆ
-
1:18 - 1:20ಆಗ ನೀವು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡ್ತೀನಿ ಎಂದರೆ
-
1:20 - 1:24ಆಗ ಅವರ ಮುಖ ಹೇಗೆ ಕೋಪದಿಂದ ಕೆಂಪಿಡುತ್ತದೆಂದು ನೀವು ಕಾಣಬಹುದು. ಅವರ ಭಾವನೆ,
-
1:24 - 1:30"ಅಯ್ಯೋ ದೇವರೇ, ನಾನೇ ಯಾಕೆ ಸಿಕ್ಬಿದ್ದೆ ? ಇಡೀ ವಾರದಲ್ಲಿ ನನ್ನ ಒಂದು ಬಿಡುವಿನ ಸಂಜೆ." (ನಗು)
-
1:30 - 1:32ನೀವು ಅವರ ಓದಿನ ಬಗ್ಗೆ ಕೇಳಿದಾಗ ಮಾತ್ರ
-
1:32 - 1:34ಅವರು ನಿಮ್ಮನ್ನ ಚೆನ್ನಾಗಿ ದಬಾಯಿಸ್ತಾರೆ. ಏಕಂದರೆ ಇದು, ಒಂದು ವಿಷಯ
-
1:34 - 1:37ವಕ್ತಿಗಳ ಅಂತರಾಳವನ್ನು ಮುಟ್ಟುತ್ತದೆ, ನಿಜ ಅಲ್ವೆ ?
-
1:37 - 1:40ಇದು ಮತ ಹಾಗೂ ಹಣಕಾಸು ಅಂತಹ ವಿಚಾರಗಳ ತರಹ.
-
1:40 - 1:44ನನಗೆ ಶಿಕ್ಷಣದಲ್ಲಿ ಬಹಳ ಆಸಕ್ತಿ , ನನಗ್ ಅನ್ಸುತ್ತೆ ಪ್ರತಿಯೊಬ್ಬರಿಗೂ ಇದು ಅನ್ವಯಿಸುತ್ತೆ.
-
1:44 - 1:46ನಾವೆಲ್ಲರೂ ಇದರ ದೊಡ್ಡ ಪಾಲುದಾರರು,
-
1:46 - 1:49ಏಕಂದರೆ, ಶಿಕ್ಷಣವೆ
-
1:49 - 1:52ನಮ್ಮನು ಅನಿರ್ದಿಷ್ಟ ಭವಿಷ್ಯದೆಡೆಗೆ ಕೊಂಡೊಯ್ಯಬೇಕು
-
1:52 - 1:55ನೀವು ಯೋಚಿಸಿ ನೋಡಿ, ಈ ವರ್ಷದಿಂದ ಶಾಲೆಗೆ ಹೋಗುವ ಮಕ್ಕಳು
-
1:55 - 2:01೨೦೬೫ ರಲ್ಲಿ ನಿವೃತ್ತಿಯಾಗುತ್ತಾರೆ.
-
2:01 - 2:04ಕಳೆದ ನಾಲ್ಕು ದಿನಗಳಿಂದ ನಡೆದ ಪಾಂಡಿತ್ಯ ಪ್ರದರ್ಶನದ ನಂತರವೂ
-
2:04 - 2:06ಈ ಜಗತ್ತು ಮುಂದಿನ ಐದು ವರ್ಷಗಳಲ್ಲಿ ಹೇಗಿರುತ್ತೆ
-
2:06 - 2:08ಅಂಥ ಯಾರಿಗೂ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಮಕ್ಕಳನ್ನ
-
2:08 - 2:11ಈ ಭವಿಷ್ಯವನ್ನು ಎದುರಿಸಲು ಶಿಕ್ಷಿಸಬೇಕು. ನನಗೆ ಅನ್ಸುತ್ತೆ ಈ ಅನಿರ್ದಿಷ್ಟತೆ
-
2:11 - 2:13ಅದ್ಬುಥವಾದದ್ದು .
-
2:13 - 2:15ಮೂರನೆಯದಾಗಿ,
-
2:15 - 2:20ನಾವೆಲ್ಲರೂ ಒಪ್ಪುವಂತಹ ವಿಷಯ ಅಂದ್ರೆ
-
2:20 - 2:23ಮಕ್ಕಳ ಅದ್ಭುತವಾದ ಸಾಮರ್ಥ್ಯಗಳು --
-
2:23 - 2:25ಆವಿಷ್ಕಾರಕ್ಕೆ ಬೇಕಾದ ಅವರ ಸಾಮರ್ಥ್ಯ. ನಿನ್ನೆ ರಾತ್ರಿ ನಾವು ನೋಡಿದ ಸಿರೀನಳು ಒಂದು ವಿಸ್ಮಯ
-
2:25 - 2:28ಅಲ್ಲವೇ ? ಸುಮ್ಮನೆ ಅವಳು ಏನು ಮಾಡಬಹುದು ಅನ್ನುವಂತಹದ್ದು
-
2:28 - 2:33ಹಾಗೂ ಅವಳು ಅಸಾಧಾರಣವಾದವಳು, ಆದರೆ ಒಂದು ದ್ರಿಷ್ಟಿಕೊನದಲ್ಲಿ
-
2:33 - 2:36ಮಕ್ಕಳೆಲ್ಲರನ್ನ ನೋಡಿದರೆ ಅಷ್ಟು ಅಸಾಧಾರಣ ಅಲ್ಲ ಅನ್ಸುತ್ತೆ.
-
2:36 - 2:39ನಾವು ಇಲ್ಲಿ ಕಾಣುವುದೆನಂದರೆ, ಇವಳಿಗೆ ಅಸಾಧಾರಣ ಸಂಕಲ್ಪ ಶಕ್ತಿ ಇದೆ
-
2:39 - 2:41ಹಾಗೂ ಇವಳು ಒಂದು ಪ್ರತಿಭೆಯನ್ನ ಆರಿಸಿಕೊಂಡಿದ್ದಾಳೆ. ನನ್ನ ವಾದ ಏನಂದರೆ
-
2:41 - 2:43ಎಲ್ಲ ಮಕ್ಕಳಿಗೂ ಅಗಾಧವಾದ ಪ್ರತಿಭೆ ಇರುತ್ತದೆ.
-
2:43 - 2:45ಆದರೆ ನಾವು ಅದನ್ನ ಪೋಲು ಮಾಡ್ತೀವಿ, ಅದು ನಿರ್ದಾಕ್ಷಿಣ್ಯವಾಗಿ.
-
2:45 - 2:48ಅದಕ್ಕೆ ನಾನು ಶಿಕ್ಷಣದ ಬಗ್ಗೆ ಮಾತಾಡಲು ಬಯಸ್ತೀನಿ ಮತ್ತು
-
2:48 - 2:51ಕ್ರಿಯಾತ್ಮಕತೆಯ ಬಗ್ಗೆ ಮಾತಾಡಲು ಇಚ್ಛೆ ಪಡ್ತೀನಿ. ನನ್ನ ಅಭಿಪ್ರಾಯ ಏನಂದ್ರೆ
-
2:51 - 2:54ಕ್ರಿಯತ್ಮಕತೆಗೆ ಈಗ ಮುಖ್ಯ ಸ್ಥಾನ ಇದೆ ಹೇಗೆ ಸಾಕ್ಷರತೆಗೆ ಇದಿಯೋ ಹಾಗೆ,
-
2:54 - 2:58ಮತ್ತು ನಾವು ಅದಕ್ಕೆ ಅಷ್ಟೇ ಮಹತ್ವದ ಸ್ಥಾನ ಕೊಡಬೇಕು.
-
2:58 - 3:06(ಚಪ್ಪಾಳೆ) ಧನ್ಯವಾದಗಳು. ಅಷ್ಟೇ, ಅಲ್ಲಿಗೆ ಮುಗಿತು.
-
3:06 - 3:10ನಿಮ್ಮೆಲ್ಲರಿಗೂ ಧನ್ಯವಾದಗಳು. (ನಗು). ಇನ್ನು ೧೫ ನಿಮಿಷಗಳು ಉಳಿಯಿತು.
-
3:10 - 3:17ನಾನು ಹುಟ್ಟಿದೆ -- ಇಲ್ಲ (ನಗು)
-
3:17 - 3:21ನಾನು ಈಚೆಗೆ ಒಂದು ಮಹತ್ತರವಾದ ಕಥೆ ಕೇಳ್ದೆ -- ಅದನ್ನ ಹೇಳೋಕ್ಕೆ ನನಗೆ ತುಂಬಾ ಇಷ್ಟ --
-
3:21 - 3:25ಒಂದು ಚಿಕ್ಕ ಹುಡುಗಿಯ ಬಗ್ಗೆ . ಅವಳು ಚಿತ್ರ ಬಿಡಿಸುವ ತರಗತಿಯಲ್ಲಿದ್ದಳು. ಅವಳಿಗೆ ಆರು ವರ್ಷ.
-
3:25 - 3:27ಮತ್ತೆ ಅವಳು ಹಿಂದೆ ಚಿತ್ರ ಬಿಡಿಸುತ್ತ ಕುಳಿತಿದ್ಲು ,
-
3:27 - 3:29ಅವಳ ಶಿಕ್ಷಕಿ ಹೇಳ್ತಿದ್ರು ಈ ಹುಡುಗಿ ಯಾವತ್ತೂ ಗಮನವಿಟ್ಟು
-
3:29 - 3:33ಪಾಠ ಕೇಳ್ತಿರಲಿಲ್ಲ. ಆದರೆ ಈ ಚಿತ್ರ ಬಿಡಿಸುವ ತರಗತಿಯಲ್ಲಿ ಮಾತ್ರ ಗಂಭೀರವಾಗಿ ಕೆಲಸ ಮಾಡ್ತಿದ್ಲು .
-
3:33 - 3:35ಅಚ್ಚರಿಗೊಂಡ ಶಿಕ್ಷಕಿ ಇವಳ ಹತ್ತಿರ ಹೋಗಿ
-
3:35 - 3:38"ಯಾವ ಚಿತ್ರ ಬಿಡಿಸ್ತಿದಿಯ ?" ಎಂದು ಕೇಳಿದ್ರು
-
3:38 - 3:41"ನಾನು ದೇವರ ಚಿತ್ರ ಬಿಡಿಸ್ತಿದೀನಿ" ಎಂದು ಉತ್ತರಿಸಿದಳು ಅ ಹುಡುಗಿ
-
3:41 - 3:44ಅದಕ್ಕೆ ಶಿಕ್ಷಕಿ ಹೇಳಿದ್ರು, "ಯಾರಿಗೂ ದೇವರು ಹೇಗಿದ್ದಾನೆ ಅಂತ ಗೊತಿಲ್ವಲ್ಲ."
-
3:44 - 3:51ಅದಕ್ಕೆ ಹುಡುಗಿ ಹೇಳಿದಳು, "ಇನ್ನೊಂದು ನಿಮಿಷದಲ್ಲಿ ಎಲ್ಲರಗೂ ತಿಳಿಯುತ್ತೆ."
-
3:51 - 3:52(ನಗು)
-
3:52 - 3:57ಇಂಗ್ಲೆಂಡಿನಲ್ಲಿ ನನ್ನ ಮಗನಿಗೆ ನಾಲ್ಕು ವರ್ಷವಾಗಿದ್ದಾಗ --
-
3:57 - 4:00ವಾಸ್ತವವಾಗಿ ಎಲ್ಲ ಕಡೆಯೂ ಅವನಿಗೆ ನಾಲ್ಕೇ ವರ್ಷ, (ನಗು)
-
4:00 - 4:06ಗಂಭೀರವಾಗಿ ಹೇಳ್ಬೇಕು ಅಂದ್ರೆ, ಅವನಿಗೆ ನಾಲ್ಕು ವರ್ಷ ಆಗ.
-
4:06 - 4:08ಅವನು "ನೇಟಿವಿಟಿ" ಅನ್ನುವ ನಾಟಕದಲ್ಲಿದ್ದ.
-
4:08 - 4:11ನಿಮಗೆ ಇದರ ಕಥೆ ಜ್ಞಾಪಕ ಇದೆಯೇ ? ಇಲ್ಲ , ಇದು ತುಂಬಾ ದೊಡ್ಡದಾಗಿತ್ತು.
-
4:11 - 4:14ಇದು ತುಂಬಾ ದೊಡ್ಡ ಕಥೆ. ಇದರ ಎರಡನೆಯ ಕಂತಲ್ಲಿ ಮೆಲ್ ಗಿಬ್ಸನ್ ಮಾಡಿದಾರೆ.
-
4:14 - 4:19ಇದನ್ನ ನೀವು ನೋಡಿರಬಹುದು: "ನೇಟಿವಿಟಿ ೨". ಆದರೆ ಜೇಮ್ಸ್ ಗೆ ಜೋಸೆಫ್ ಪಾತ್ರ ಸಿಕ್ಕಿತ್ತು.
-
4:19 - 4:22ಇದು ನಮ್ಮೆಲ್ಲರಿಗೆ ರೋಮಾಂಚಕ ಸಂಗತಿಯಾಗಿತ್ತು.
-
4:22 - 4:24ಇದನ್ನು ನಾಟಕಾದ ಪ್ರಮುಖ ಪಾತ್ರವೆಂದು ಪರಿಗಣಿಸಿದ್ದೆವು.
-
4:24 - 4:26ನಮ್ಮ ಏಜಂಟರು ಟಿ- ಷರಟುಗಳನ್ನು ಧರಿಸಿ ಇಡೀ ಜಾಗವನ್ನು ಮುತ್ತಿದ್ದರು.
-
4:26 - 4:29"ಜೇಮ್ಸ್ ರಾಬಿನ್ಸನ್ ಅವರೇ ಜೋಸೆಫ್!" (ನಗು)
-
4:29 - 4:31ಅವರು ಮಾತಾಡೋ ಗೋಜಿರಲಿಲ್ಲ, ಆದರೆ ನಿಮಗೆ ಸನ್ನಿವೇಶ ಗೊತ್ತು
-
4:31 - 4:34ಮೂರು ಜನ ರಾಜರು ಉಡುಗರೆಗಳನ್ನು ಹೊತ್ತು ಒಳಗೆ ಬರ್ತಾರೆ.
-
4:34 - 4:36ಮತ್ತು ಚಿನ್ನ, ಫ್ರಾಂಕಿನ್ಸೆನ್ಸ್ ಹಾಗೂ ಮಿರ್ಹ್ (ಸುಗಂಧ ದ್ರವ್ಯಗಳು) ಇವುಗಳನ್ನು ತರುತ್ತಾರೆ.
-
4:36 - 4:38ನಿಜವಾಗಿ ನಡೆದ ಸಂಗತಿ ಇದು. ನಾವು ಅಲ್ಲಿ ಕುಳಿತಿದ್ದೆವು
-
4:38 - 4:40ಮತ್ತೆ ನನಗೆ ಅನ್ಸುತ್ತೆ ಅವರು ದೃಶ್ಯಾವಳಿಯ ಅನುಕ್ರಮವನ್ನು ತಪ್ಪಿದರು,
-
4:40 - 4:42ಯಾಕಂದ್ರೆ ನಾವು ತರುವಾಯ ನಮ್ಮ ಚಿಕ್ಕ ಹುಡುಗನ ಹತ್ತಿರ ಕೇಳಿದೆವು,
-
4:42 - 4:44"ನಿನಗೆ ಸರಿಯನ್ನಿಸ್ತ ?" ಅದಕ್ಕೆ ಅವನು, "ಹೌದು, ಯಾಕೆ, ಅದು ತಪ್ಪಾಗಿತ್ತಾ?"
-
4:44 - 4:46ಅವರು ಸ್ವಲ್ಪ ಬದಲಾವಣೆ ಮಾಡಿದ್ರು, ಅಷ್ಟೇ.
-
4:46 - 4:47ಆ ದ್ರಿಶ್ಯದ ವಿವರ ಹೀಗೆ, ಮೂರು ಹುಡುಗರು ಬಂದರು,
-
4:47 - 4:49ನಾಲ್ಕು ವರ್ಷದವರು, ತಲೆಮೇಲಿ ಟೀ-ಟವಲ್ಗಳನ್ನ ಹೊದೆದವರು,
-
4:49 - 4:52ಮತ್ತು ಅವರು ಹೊತ್ತು ತಂದ ಡಬ್ಬಗಳನ್ನ ಕೆಳಗಿಟ್ಟು ,
-
4:52 - 4:54ಮೊದಲನೆಯ ಬಾಲಕ ಹೇಳಿದ, "ನಾನು ಚಿನ್ನವನ್ನು ತಂದಿದ್ದೇನೆ."
-
4:54 - 4:57ಎರಡನೆಯ ಬಾಲಕ ಹೇಳಿದ, "ನಾನು ಮಿರ್ಹವನ್ನು ತಂದಿದ್ದೇನೆ."
-
4:57 - 5:11ಮೂರನೆಯ ಬಾಲಕ ಹೇಳಿದ, "ಫ್ರಾಂಕ್ ಇದನ್ನು ಕಳಿಸಿದ." (ನಗು)
-
5:11 - 5:13ಇವೆಲ್ಲ ಸಂಗತಿಗಳಲ್ಲಿ ಸಾಮಾನ್ಯವಾದ ಅಂಶವೇನಂದರೆ ಮಕ್ಕಳು [ ಇಲ್ಲಿ ಏನು ? ]
-
5:13 - 5:16ಅವರಿಗೆ ಗೊತ್ತಿಲ್ಲ ಅಂದ್ರೂ ಸಹ, ಅವರು ಹಿಂಜರಿಯಲ್ಲ.
-
5:16 - 5:19ಸರಿ ಅಲ್ವೇ ? ಅವರು ತಪ್ಪು ಮಾಡೋಕೆ ಹೆದರೋದಿಲ್ಲ.
-
5:19 - 5:24ಇವಾಗ, ಕ್ರಿಯಾತ್ಮಕವಾಗಿರೋದು ಹಾಗೂ ತಪ್ಪು ಮಾಡೋದು ಒಂದೇ ಅಂತ ನಾ ಹೇಳ್ತಿಲ್ಲ.
-
5:24 - 5:25ಆದರೆ ನಮಗೆ ಗೊತ್ತಿರೋದು ಏನಂದ್ರೆ,
-
5:25 - 5:28ನೀವು ತಪ್ಪು ಮಾಡೋಕೆ ಸಿದ್ದವಿಲ್ಲ ಅಂದ್ರೆ,
-
5:28 - 5:31ನೀವು ಸ್ವಂತವಾಗಿ ಏನೂ ಮಾಡೋಕ್ಕೆ ಆಗಲ್ಲ.
-
5:31 - 5:34ನೀವು ತಪ್ಪು ಮಾಡೋಕೆ ಸಿದ್ದವಿಲ್ಲ ಅಂದ್ರೆ. ಮತ್ತೆ ದೊಡ್ದವರಾಗುವಷ್ಟರಲ್ಲಿ,
-
5:34 - 5:36ಮಕ್ಕಳು ಬಹುಪಾಲಿಗೆ ಈ ಸಾಮರ್ಥ್ಯವನ್ನ ಕಳಕೊಂಡುಬಿಡ್ತಾರೆ.
-
5:36 - 5:39ದೊಡ್ದವರಾಗ್ತಿದ್ದಾಗೆ ತಪ್ಪು ಮಾಡೋಕ್ಕೆ ಭಯ ಪಟ್ಕೊಳ್ತಾರೆ.
-
5:39 - 5:41ನಾವು ನಮ್ಮ ಕಂಪನಿಗಳನ್ನ ಹೀಗೆ ನಡಿಸ್ತೀವಿ.
-
5:41 - 5:44ನಾವು ತಪ್ಪುಗಳಿಗೆ ಕಳಂಕದ ಭಾವನೆ ಹಚ್ತೀವಿ . ಇವಾಗ ನಾವು
-
5:44 - 5:47ನಮ್ಮ ರಾಷ್ಟ್ರೀಯ ಶಿಕ್ಷಣ ಪದ್ದತಿಯನ್ನ ಹೀಗೆ ನಡಿಸ್ತಿದೀವಿ,
-
5:47 - 5:50ಇದರಲ್ಲಿ ತಪ್ಪುಗಳನ್ನ ಮಾಡುವುದೆಂದರೆ ಘೋರ ಅಪರಾಧ.
-
5:50 - 5:53ಪರಿಣಾಮ ಏನಂದರೆ ನಾವು ವ್ಯಕ್ತಿಗಳನ್ನ ತಮ್ಮ ಕ್ರಿಯಾತ್ಮಕ ಸಾಮರ್ಥ್ಯವನ್ನ
-
5:53 - 5:56ಬೆಳೆಸದ ಹಾಗೆ ಶಿಕ್ಷಿಸ್ತಿದೀವಿ. ಪಿಕಾಸ್ಸೋ ಮಹಾಶಯ ಒಮ್ಮೆ ಹೀಗೆ ನುಡಿದಿದ್ದ:
-
5:56 - 5:59ಅವನು ಹೇಳಿದ್ದ ಎಲ್ಲ ಮಕ್ಕಳೂ ಹುಟ್ಟು ಕಲೆಗಾರರು.
-
5:59 - 6:03ಸಮಸ್ಯೆ ಏನಂದರೆ ಅವರು ಬೆಳೆಯುತ್ತಿದ್ದ ಹಾಗೆ ಕಲಾವಿದರಾಗಿ ಉಳಿಯುವುದು. ನಾನು ಇದನ್ನ ಸಂಪೂರ್ಣವಾಗಿ ನಂಬುತ್ತೀನಿ:
-
6:03 - 6:05ಏನಂದ್ರೆ, ನಾವು ಬೆಳೆಯುತಿದ್ದ ಹಾಗೆ ಕ್ರಿಯಾತ್ಮಕತೆಯನ್ನು ಮೈಗೂಡಿಸಿಕೊಳ್ಳುವುದಿಲ್ಲ
-
6:05 - 6:08ಅದರಿಂದ ದೂರವಾಗ್ತೀವಿ. ಸರಿಯಾಗಿ ಹೇಳೋದಾದ್ರೆ, ಶಿಕ್ಷಣದ ದೆಸೆಯಿಂದ ಇದು ನಡೆಯುತ್ತದೆ.
-
6:08 - 6:10ಯಾಕೆ ಹೀಗೆ ?
-
6:10 - 6:14ನಾನು ಐದು ವರ್ಷಗಳ ಹಿಂದೆ ಸ್ಟ್ರಾಟ್ಫೋರ್ಡ್-ಆನ್-ಅವೊನ್ ಅಲ್ಲಿ ವಾಸಿಸುತ್ತಿದ್ದೆ.
-
6:14 - 6:16ನಾವು ಸ್ಟ್ರಾಟ್ಫೋರ್ಡನಿಂದ ಲಾಸ್ ಎನ್ಜಿಲೀಸ್ ಗೆ ತೆರೆಳಿದೆವು.
-
6:16 - 6:20ನೀವೇ ಊಹಿಸಬಹುದು ಎಂತಹ ಸಲೀಸಾದ ಪರಿವರ್ತನೆ ಅದು ಅಂತ.
-
6:20 - 6:22(ನಗು)
-
6:22 - 6:24ನಾವು ಸ್ನಿಟ್ಟೆರ್-ಫೀಲ್ಡ್ ಎಂಬ ಜಾಗದಲ್ಲಿ ವಾಸಿದುತ್ತಿದ್ದೆವು,
-
6:24 - 6:26ಸ್ಟ್ರಾಟ್ಫೋರ್ಡ್-ನ ಸ್ವಲ್ಪ ಆಚೆ,
-
6:26 - 6:31ಶೇಕ್ಸ್-ಸ್ಪಿಯರ್ ನ ತಂದೆ ಜನಿಸಿದ ಊರು. ಹೊಸದೊಂದು ಆಲೋಚನೆಗೆ ಸಿಲುಕಿದಿರ ನೀವು ? ನನಗೆ ಬಂದಿತ್ತು ಈ ಆಲೋಚನೆ.
-
6:31 - 6:33ಶೇಕ್ಸ್-ಸ್ಪಿಯರ್-ಗೆ ತಂದೆ ಇರುವ ವಿಷಯ ನೀವು ಯೋಚಿಸಿರಲಿಲ್ಲ, ಅಲ್ಲವೆ ?
-
6:33 - 6:35ಏಕಂದ್ರೆ ನೀವು ಶೇಕ್ಸ್-ಸ್ಪಿಯರ್ ಮಗುವಾಗಿದ್ದ
-
6:35 - 6:37ಅಂತಾನೂ ಯೋಚಿಸಿರಲಿಲ್ಲ, ಹೌದಲ್ಲವೆ ?
-
6:37 - 6:40ಶೇಕ್ಸ್-ಸ್ಪಿಯರ್ ಏಳು ವರ್ಷದ ಬಾಲಕ ? ನಾನಂತೂ ಆಲೋಚಿಸಿರಲಿಲ್ಲ. ಅವನು
-
6:40 - 6:42ಯಾವಾಗಲೋ ಒಂದು ಕಾಲದಲ್ಲಿ ಏಳು ವರ್ಷದ ಬಾಲಕನಾಗಿದ್ದ. ಅವನು
-
6:42 - 6:51ಯಾರದೋ ಇಂಗ್ಲೀಷ್ ತರಗತಿಯಲ್ಲಿ ಇದ್ದ, ಅಲ್ಲವೆ ? [ ಇಲ್ಲಿ ಏನು ]
-
6:51 - 7:05(ನಗು) "ನೀನು ಇನ್ನು ಕಷ್ಟ ಪಡಬೇಕು." ಅವನ ತಂದೆ ಅವನ್ನು ಮಲಗು ಅಂತ ಹೇಳೋದು,
-
7:05 - 7:08ಶೇಕ್ಸ್-ಸ್ಪಿಯರ್-ಗೆ, "ಮಲಗು ನೀನು ಈಗ,"
-
7:08 - 7:10ವಿಲ್ಲಿಯಮ್ ಶೇಕ್ಸ್-ಸ್ಪಿಯರ್-ಗೆ, "ಪೆನ್ಸಿಲ್ ಕೆಳಗೆ ಹಾಕು
-
7:10 - 7:18ಹಾಗೆ ಸುತ್ತಿ-ಬಳಸಿ ಮಾತಾಡಬೇಡ. ಎಲ್ಲಾರ್ಗೂ ಕಷ್ಟ ಆಗುತ್ತೆ ಅರ್ಥವಾಗುವುದಕ್ಕೆ ."
-
7:18 - 7:23(ನಗು)
-
7:23 - 7:26ನಾವು ಸ್ಟ್ರಾಟ್ಫೋರ್ಡನಿಂದ ಲಾಸ್ ಎನ್ಜಿಲೀಸ್ ಗೆ ತೆರೆಳಿದೆವು.
-
7:26 - 7:30ಮತ್ತು ನಮ್ಮ ಈ ಬದಲಾವಣೆಯ ಬಗ್ಗೆ ಒಂದೆರಡು ಮಾತುಗಳನ್ನ ಆಡಲು ಇಷ್ಟ ಪಡ್ತೇನೆ
-
7:30 - 7:33ನನ್ನ ಮಗನಿಗೆ ಊರು ಬಿಟ್ಟು ಬರಲು ಇಷ್ಟ ಇರಲಿಲ್ಲ.
-
7:33 - 7:36ನನಗೆ ಎರಡು ಮಕ್ಕಳು. ಅವನಿಗೆ ೨೧ ವರ್ಷ ಈಗ; ನನ್ನ ಮಗಳಿಗೆ ೧೬.
-
7:36 - 7:38ಅವನಿಗೆ ಲಾಸ್ ಎನ್ಜಿಲೀಸ್ ಗೆ ಹೋಗಲು ಮನಸು ಇರಲಿಲ್ಲ. ಅವನಿಗೆ ಆಸೆ ಏನೋ ಇತ್ತು,
-
7:38 - 7:43ಆದರೆ ಅವನಿಗೆ ಅಬ್ಬಳು ಗರ್ಲ್-ಫ್ರೆಂಡ್ ಇದ್ದಳು ಇಂಗ್ಲೆಂಡಿನಲ್ಲಿ. ಅವನ ಪ್ರಾಣದ ಪ್ರೇಯಸಿಯಾಗಿದ್ದಳು, ಸಾರಾ ಅವಳ ಹೆಸರು.
-
7:43 - 7:45ಒಂದು ತಿಂಗಳ ದೀರ್ಘ-ಕಾಲದಿಂದ ಅವಳ ಪರಿಚಯವಿತ್ತು.
-
7:45 - 7:48[ ಇಲ್ಲಿ ಏನು ? ]
-
7:48 - 7:52ಏಕಂದ್ರೆ ನೀವು ೧೬ ವರ್ಷಕ್ಕಿಂತ ದೊಡ್ದವರಾಗಿದ್ದರೆ ಇದು ಬಹಳ ದೀರ್ಘಾವಧಿ.
-
7:52 - 7:54ಆದ್ದರಿಂದ ವಿಮಾನದಲ್ಲಿ ಬಹಳ ಬೇಸರ ಪಟ್ಕೊಂಡಿದ್ದ.
-
7:54 - 7:56ಮತ್ತೆ ಹೇಳಿದ, "ನನಗೆ ಸಾರಾ ಅಂತ ಹುಡುಗಿ ಎಲ್ಲೂ ಸಿಗದಿಲ್ಲ."
-
7:56 - 7:58ಆದರೆ ನಾವು ಬಹಳ ಖುಷಿಯಾಗಿದ್ವಿ , ನಿಜವಾಗಲೂ,
-
7:58 - 8:10ಏಕಂದ್ರೆ ಅವಳೇ ನಾವು ದೇಶ ಬಿಟ್ಟು ಹೋಗಲು ಮುಖ್ಯ ಕಾರಣ.
-
8:10 - 8:13(ನಗು)
-
8:13 - 8:16ನೀವು ಅಮೇರಿಕಾಗೆ ಹೋದರೆ ಒಂದು ವಿಚಾರ ನಿಮ್ಮ ಗಮನಕ್ಕೆ ಬರುತ್ತದೆ
-
8:16 - 8:18ನೀವು ಪ್ರಪಂಚದಲ್ಲಿ ಎಲ್ಲೇ ಹೋದರೂ ಇದು ಗಮನಕ್ಕೆ ಬರುತ್ತದೆ:
-
8:18 - 8:22ಜಗತ್ತಿನ ಪ್ರತಿಯೊಂದು ಶಿಕ್ಷಣ ಪದ್ದತಿಯಲ್ಲೂ ಒಂದೇ ವಿಧವಾದ ಪಠ್ಯಕ್ರಮ.
-
8:22 - 8:24ಎಲ್ಲದರಲ್ಲಿಯೂ ಒಂದೇ ಕ್ರಮ. ನೀವು ಎಲ್ಲೇ ಹೋಗಿ.
-
8:24 - 8:26ನೀವು ಬೇರೆ ಇರಬಹುದು ಅಂದ್ಕೋಳ್ಬಹುದು, ಆದರೆ ಹಾಗೆ ಇಲ್ಲ.
-
8:26 - 8:29ಮುಂಚೂಣಿಯಲ್ಲಿ ಗಣಿತ ಮತ್ತು ಭಾಷೆಗಳು,
-
8:29 - 8:31ಆಮೇಲೆ ಸಮಾಜ ಶಾಸ್ತ್ರ, ಮತ್ತು ಕೆಳಗೆ ಕಲೆ.
-
8:31 - 8:33ಭೂಮಿಯ ಎಲ್ಲ ಕಡೆಯೂ ಅಷ್ಟೇ.
-
8:33 - 8:36ಹಾಗೂ ಎಲ್ಲಾ ಶಿಕ್ಷಣ ಪದ್ದತಿಗಳಲ್ಲೂ ಇದೇ ರೀತಿ,
-
8:36 - 8:38ಕಲೆಯಲ್ಲಿಯೂ ಒಂದು ಕ್ರಮ ಉಂಟು.
-
8:38 - 8:40ಶಾಲೆಗಳಲ್ಲಿ ಚಿತ್ರಕಲೆ ಹಾಗೂ ಸಂಗೀತಕ್ಕೆ ಹೆಚ್ಚು ಪ್ರಾಮುಖ್ಯತೆ, ಆದ್ಯತೆ
-
8:40 - 8:43ಆಮೇಲೆ ನಾಟಕ ಹಾಗೂ ನೃತ್ಯ. ಈ ಭೂಮಿಯ ಮೇಲೆ ಒಂದು ಶಿಕ್ಷಣ ಪದ್ದತಿಯೂ
-
8:43 - 8:45ಇಲ್ಲ, ಯಾವುದಲ್ಲಿ ನೃತ್ಯವನ್ನ ದಿನನಿತ್ಯವೂ ಮಕ್ಕಳಿಗೆ ಕಲಿಸುತ್ತಾರೆ
-
8:45 - 8:48ಯಾವ ರೀತಿಯಲ್ಲಿ ಗಣಿತವನ್ನ ಕಲಿಸುತ್ತೀವೋ ಹಾಗೆ. ಯಾಕೆ ?
-
8:48 - 8:50ಯಾಕೆ ಇರಬಾರದು ? ನನಗೆ ಅನ್ಸುತ್ತೆ ಇದು (ನೃತ್ಯ) ಬಹಳ ಮುಖ್ಯ.
-
8:50 - 8:53ಗಣಿತವೂ ಅತಿಮುಖ್ಯ , ಆದರೆ ನೃತ್ಯವೂ ಅಷ್ಟೇ ಮುಖ್ಯ.
-
8:53 - 8:56ಮಕ್ಕಳನ್ನ ಬಿಟ್ಟರೆ ಯಾವಾಗಲೂ ನರ್ತಿಸ್ತಾರೆ, ನಾವೆಲ್ಲಾರೂ ಮಾಡ್ತೀವಿ.
-
8:56 - 8:59ನಮ್ಮೆಲ್ಲರಿಗೂ ದೇಹ ಇದೆ, ಅಲ್ಲವೇ ? [ ಇಲ್ಲಿ ಏನು ?]
-
8:59 - 9:03(ನಗು) ನಿಜವಾಗಿಲು, ಏನಾಗುತ್ತೆ ಅಂದ್ರೆ,
-
9:03 - 9:05ಮಕ್ಕಳು ಬೆಳಿತಿದ್ದ ಹಾಗೆ, ನಾವು ಅವರನ್ನ ಶಿಕ್ಷಿಸ್ತೀವಿ
-
9:05 - 9:08ಹೇಗೆಂದರೆ ಸೊಂಟದಿಂದ ಮೇಲಕ್ಕೆ . ಆಮೇಲೆ ನಾವು ಮೆದುಳಿನ ಮೇಲೆ ಹೆಚ್ಚಿನ ಗಮನವಹಿಸುತ್ತೀವಿ.
-
9:08 - 9:10ಅದೂ ಒಂದು ಭಾಗದಲ್ಲಿ ಮಾತ್ರ.
-
9:10 - 9:14ನೀವು ಶಿಕ್ಷಣವನ್ನು ಒಂದು ಅನ್ಯಗ್ರಹ ಜೀವಿಗೆ ಇರಬಹುದಾದ ದೃಷ್ಟಿಕೋನದಿಂದ ವೀಕ್ಷಿಸಿದರೆ,
-
9:14 - 9:17ಹಾಗೂ "ಸಾರ್ವಜನಿಕ ಶಿಕ್ಷಣ ಪದ್ದತಿಯು ಯಾವ ಕಾರಣಕ್ಕೆ ಇದೆ ?" ಎಂದು ಕೇಳಿದರೆ,
-
9:17 - 9:19ನನಗೆ ಅನ್ಸುತ್ತೆ ನೀವು ಈ ನಿರ್ಣಯಕ್ಕೆ ಬರಬೇಕಾಗುತ್ತದೆ -- ನೀವು ಇದರ (ಶಿಕ್ಷಣದ) ಉತ್ಪತ್ತಿಯನ್ನ ನೋಡಿದರೆ,
-
9:19 - 9:21ಯಾರು ನಿಜವಾಗಿಲು ಯಶಸ್ವಿಗಳಾಗುತ್ತಾರೆ ಇದರಿಂದ,
-
9:21 - 9:23ಯಾರು ಮಾಡಬೇಕಾದದ್ದನ್ನೆಲ್ಲಾನೂ ಮಾಡುತ್ತಾರೆ,
-
9:23 - 9:26ಯಾರಿಗೆ [ಇಲ್ಲಿ ಏನು?], ಯಾರು ನಿಜವಾದ ವಿಜೇತರು --
-
9:26 - 9:29ನನಗೆ ಅನ್ಸುತ್ತೆ ನೀವು ಈ ನಿರ್ಣಯಕ್ಕೆ ಬರಬೇಕಾಗುತ್ತದೆ -- ಸಾರ್ವಜನಿಕ ಶಿಕ್ಷಣ ಪದ್ದತಿಯ ಮೂಲ ಉದ್ದೇಶ
-
9:29 - 9:30ವಿಶ್ವದ ಎಲ್ಲ ಭಾಗದಲ್ಲೂ
-
9:30 - 9:34ಏನಂದರೆ ವಿಶ್ವವಿದ್ಯಾಲಯಗಳ ಪ್ರಾಧ್ಯಾಪರುಗಳನ್ನ ತಯಾರು ಮಾಡೋದು. ಅಲ್ಲವೇ ?
-
9:34 - 9:36ಅವರುಗಳೆ ಈ ಪದ್ದತಿಯ ಮುಂಚೂಣಿಯಲ್ಲಿ ಬರ್ತಾರೆ.
-
9:37 - 9:40ಹಿಂದೆ ನೀನು ಒಬ್ಬ ಅಂತಹ ವ್ಯಕ್ತಿ ಆಗಿದ್ದೆ. (ನಗು)
-
9:40 - 9:44ವಿಶ್ವವಿದ್ಯಾಲಯಗಳ ಪ್ರಾಧ್ಯಾಪರುಗಳನ್ನ ನಾನು ಮೆಚ್ಚುತ್ತೀನಿ, ಆದರೆ
-
9:44 - 9:48ಅವರನ್ನ ನಾವು ಮಾನವನ ಸಾಧನೆಯ ಶಿಖರಕ್ಕೆ ಸೇರಿಸಬಾರದು.
-
9:48 - 9:50ಅವರು ಒಂದು ತರಹದ ಜೀವದ ಪ್ರಕಾರ,
-
9:50 - 9:52[ಇಲ್ಲಿ ಏನು?]. ಆದರೆ ಅವರು ಬಹಳ ಕುತೂಹಲಕಾರಿಯಾದ ಪ್ರಕಾರ,
-
9:52 - 9:54ಅವರ ಮೇಲಿನ ನನ್ನ ಆದರದಿಂದ ಹೀಗೆ ಹೇಳ್ತೀನಿ.
-
9:54 - 9:57ನನ್ನ ಅನುಭವದಲ್ಲಿ ಕಂಡ ಪ್ರಾಧ್ಯಾಪಕರ ಒಂದು ಕುತೂಹಲಕಾರಿಯಾದ ಸಂಗತಿ
-
9:57 - 10:00ಎಲ್ಲರೂ ಅಲ್ಲ, ಆದರೆ ಸಾಮಾನ್ಯವಾಗಿ -- ಅವರುಗಳು ಮಾನಸಿಕ ಪ್ರಪಂಚದಲ್ಲಿ ಬದುಕುತ್ತಾರೆ
-
10:00 - 10:02ಅವರ ಜೀವನ ಮೆದುಳಿಗೆ ಸೀಮಿತ, ಅದರಲ್ಲೂ ಒಂದು ಭಾಗದಲ್ಲಿ ಮಾತ್ರ.
-
10:02 - 10:06ಅವರು ಕಾಯರಹಿತರು, ಗೊತ್ತ, ಒಂದು ರೀತಿ ಅಕ್ಷರಸಹ ನಿಜ,
-
10:06 - 10:08ತಮ್ಮ ದೇಹವನ್ನು
-
10:08 - 10:17ಮಿದುಳಿಗೆ ಒಂದು ಮಾದರಿಯ ವಾಹನವಾಗಿ ಕಾಣುತ್ತಾರೆ, ಅಲ್ಲವೇ ?
-
10:17 - 10:24(ನಗು) ಅವರ ಮಿದುಳನ್ನ ಮೀಟಿಂಗ್-ಗಳಿಗೆ ಒಯ್ಯುವಂಥ ಮಾರ್ಗ.
-
10:24 - 10:27ನಿಮಗೆ ದೇಹ-ಬಾಹಿರ ಅನುಭವದ ನಿಜವಾದ ಸಾಕ್ಷಿ ಬೇಕೆಂದರೆ
-
10:27 - 10:30ನೀವು ಹಿರಿಯ ಶಿಕ್ಷಕರ ಕಾನ್ಫಾರೆನ್ಸೆಗೆ
-
10:30 - 10:32ಹೋಗಿ
-
10:32 - 10:35ಹಾಗೂ ಕೊನೆಯ ದಿನ ರಾತ್ರಿ ನಡೆಯುವ ಡಿಸ್ಕೋಗೆ ಒಂದು ಭೇಟಿ ನೀಡಿ
-
10:35 - 10:39(ನಗು) ಅಲ್ಲಿ ನೀವು ನೋಡ್ತೀರಿ -- ದೊಡ್ಡವರಾದ ಪುರಷರು ಹಾಗೂ ಮಹಿಳೆಯರು
-
10:39 - 10:43[ಇಲ್ಲಿ ಏನು]
- Title:
- ಶಾಲೆಗಳು ಕ್ರಿಯಾತ್ಮಕತೆಯನ್ನು ಕೊಲ್ಲುತ್ತವೆ ಎನ್ನುತ್ತಾರೆ ಕೆನ್ ರಾಬಿನ್ಸನ್
- Speaker:
- Sir Ken Robinson
- Description:
-
ಕ್ರಿಯಾತ್ಮಕತೆಯನ್ನು ಪೋಷಿಸುವ (ಕುಂಟಿತ ಗೊಳಿಸದ) ಶೈಕ್ಷಣಿಕ ಪದ್ದತಿಯ ರಚನೆ ಆಗಬೇಕೆನ್ನುವ ವಿಚಾರವನ್ನು ಬಹಳ ಮನೋಹರವಾಗಿಯೂ ಹಾಗು ಪ್ರಬುದ್ಧವಾಗಿಯೂ ಸರ್ ಕೆನ್ ರಾಬಿನ್ಸನ್ ಅವರು ಪ್ರಸ್ತಾಪಿಸುತ್ತಾರೆ.
- Video Language:
- English
- Team:
- closed TED
- Project:
- TEDTalks
- Duration:
- 19:00