< Return to Video

Buster Keaton - The Art of the Gag

  • 0:04 - 0:07
    ಹಾಯ್, ನಾನು ಟೋನಿ,
    ಇದು 'ಎವೆರಿ ಫ್ರೇಮ್ ಎ ಪೇಂಟಿಂಗ್'
  • 0:08 - 0:11
    ಕೆಲವು ನಿರ್ದೇಶಕರು ಎಷ್ಟು ಪ್ರಭಾವಿಗಳೆಂದರೆ,
  • 0:11 - 0:14
    ಎಲ್ಲಿ ನೋಡಿದ್ರೂ ಅವರ ನೆರಳು ಇದ್ದೇ ಇರತ್ತೆ.
  • 0:17 - 0:21
    ಅವನ ಫ್ರೇಮ್‌ಗಳನ್ನ ವೆಸ್ ಆಂಡರ್ಸನ್
    ಚಿತ್ರಗಳಲ್ಲಿ ನೋಡಬಹುದು.
  • 0:23 - 0:27
    ಜಾಕಿ ಚಾನ್‌‍‌ನ ಸಾಹಸಗಳಲ್ಲಿ ಅವನನ್ನ ನೋಡಬಹುದು.
  • 0:29 - 0:31
    ಅವನ ನಿರ್ಭಾವುಕ ಮುಖವನ್ನ
    ಬಿಲ್ ಮರ್‍ರಿ ಚಿತ್ರಗಳಲ್ಲಿ ನೋಡಬಹುದು.
  • 0:35 - 0:38
    ಅವನೇ ಬಸ್ಟರ್ ಕೀಟನ್, ಮೂಕಿ ಹಾಸ್ಯಚಿತ್ರಗಳ
    ದಿಗ್ಗಜರಾದ ಮೂವರಲ್ಲಿ ಒಬ್ಬ.
  • Not Synced
    "ಸಿನಿಮಾ ಇತಿಹಾಸದಲ್ಲಿ ಅವನೆಂತ ಹಾಸ್ಯಗಾರ ಅಂತ...
  • Not Synced
    ...ನಮಗೆ ಈಗ ಅರ್ಥ ಆಗ್ತಿದೆ."
  • Not Synced
    ನೂರು ವರ್ಷ ಆಗಿದ್ರೂ ಅವನಿಂದ ನಾವು
  • Not Synced
    ವಿಷುವಲ್ ಕಾಮಿಡಿ ಬಗ್ಗೆ
    ಕಲಿಯುವುದು ಬೇಕಾದಷ್ಟಿದೆ.
  • Not Synced
    ಈ ಕಿಲಾಡಿ ನನ್ಮಗ ಹೆಂಗೆ ನಗು
    ಹುಟ್ಟಿಸ್ತಾನೆ ಅಂತ ನೋಡೋಣ.
  • Not Synced
    ರೆಡೀನಾ?
  • Not Synced
    ಬನ್ನಿ.
  • Not Synced
    ವಿಷುವಲ್ ಕಾಮಿಡಿಯ ಮೊದಲ ಪಾಠ ಏನಂದ್ರೆ
  • Not Synced
    ಕಥೆಯನ್ನ ದೃಶ್ಯದ ಮೂಲಕ ಹೇಳಬೇಕು ಅನ್ನೋದು.
  • Not Synced
    ಕೀಟನ್ ಒಬ್ಬ ವಿಶುವಲ್ ಕತೆಗಾರ, ಅವನಿಗೆ
  • Not Synced
    ಟೈಟಲ್ ಕಾರ್ಡ್‌ಗಳ ಮೂಲಕ ಕತೆ
    ಹೇಳೋರನ್ನ ಕಂಡ್ರೆ ಆಗ್ತಾ ಇರ್ಲಿಲ್ಲ.
  • Not Synced
    "ಒಂದು ಸಾಧಾರಣ ಸಿನಿಮಾದಲ್ಲಿ
    240 ಟೈಟಲ್ ಇರುತ್ತಿದ್ದವು...
  • Not Synced
    "...ಅದೇ ಅವಾಗ ಇದ್ದಿದ್ದು."
  • Not Synced
    -"240 ಸಾಧಾರಣಾನ?"
    -"ಹೂಂ. ನಾನು ಹೆಚ್ಚು ಅಂದ್ರೆ 56 ಬಳಸಿದ್ದೆ ಒಂದರಲ್ಲಿ"
  • Not Synced
    ಹಾವಭಾವ ಮಾಡ್ಕೊಂಡು ಅವನು ಇದನ್ನ ದೂರ ಇಡ್ತಿದ್ದ.
  • Not Synced
    ಈ ಶಾಟಲ್ಲಿ, ಇವರಿಬ್ಬರು ಏನು
    ಮಾತಾಡ್ತಾರೆ ಅಂತ ಗೊತ್ತೇ ಆಗಲ್ಲ.
  • Not Synced
    ಗೊತ್ತಾಗಬೇಕಾಗಿರೋದೆಲ್ಲ ಟೇಬಲ್,
    ಹಾವಭಾವದಲ್ಲೇ ಗೊತ್ತಾಗತ್ತೆ
  • Not Synced
    "ಹೇಳಬೇಕಿರೋದನ್ನ...
  • Not Synced
    "ನೋಡುಗರಿಗೆ ಒಂದೇ ದಾರಿಯಲ್ಲಿ ಹೇಳಬೇಕು..."
  • Not Synced
    -"ಅದು ಆಕ್ಷನ್ ಮೂಲಕ"
    -"ಹೌದು. ನಾವು ಅಡಿಬರಹವನ್ನೇ ತೆಗೆದ್ವಿ..."
  • Not Synced
    "...ಆಕ್ಷನ್ ಅಲ್ಲೇ ಹೇಳಬಹುದಾದರೆ ಅದು ಯಾಕೆ"
  • Not Synced
    ಕೀಟನ್ ಪ್ರಕಾರ ನಿಮ್ಮ ಒಂದೊಂದು
    ಹಾವಭಾವವೂ ಹೊಸದಾಗಿರಬೇಕು.
  • Not Synced
    ಅದದನ್ನೇ ಎರಡು ಸಲ ಮಾಡಬಾರದು.
  • Not Synced
    ಪ್ರತಿ ಸಲ ಬೀಳುವಾಗಲೂ...
  • Not Synced
    ಒಂದು ಅವಕಾಶ...
  • Not Synced
    ಕ್ರಿಯೇಟಿವಿಟಿಗೆ.
  • Not Synced
    ಆದ್ರೆ ಆಕ್ಷನ್ ಗೊತ್ತಾದಮೇಲೆ
    ಎರಡನೇ ಪ್ರಶ್ನೆ ಬರತ್ತೆ.
  • Not Synced
    ಕ್ಯಾಮರ ಎಲ್ಲಿಡಬೇಕು?
  • Not Synced
    ವಿಶುವಲ್ ಜೋಕ್‌ಗಳು ಒಂದು ನಿರ್ದಿಷ್ಟ
    ಆಂಗಲ್ ಇದ್ರೆ ಮಾತ್ರ ವರ್ಕ್ ಆಗ್ತವೆ.
  • Not Synced
    ಆಂಗಲ್ ಬದಲಾಯಿಸಿದರೆ...
  • Not Synced
    ಜೋಕ್ ಕೂಡ ಬದಲಾಗತ್ತೆ,
    ಅಷ್ಟು ನಗು ಬಾರದೇ ಇರಬಹುದು.
  • Not Synced
    ಸರಿಯಾದ ಆಂಗಲ್‌‌ನ ಮಾಡಿ ಮಾಡಿ ಕಲಿಯಬೇಕು.
  • Not Synced
    ಒಂದೇ ಜೋಕ್‌ಗೆ ಎರಡು ತರ
    ಎಲ್ಲಿ ಕ್ಯಾಮರ ಇಡೋದು ನೋಡೋಣ.
  • Not Synced
    ಇದು ಮೊದಲನೆಯದು.
  • Not Synced
    ಇದು ಎರಡನೆಯದು.
  • Not Synced
    ಮೊದಲನೇ ಆಂಗಲ್‌ನಲ್ಲಿ ಫ್ರೇಮ್
    ತುಂಬಾ ಕಾರೇ ಇದೇ ಕಾಣುತ್ತಿದೆಯಾ?
  • Not Synced
    ಬಸ್ಟರ್ ತಿರುಗುವ ತನಕ ಅವನು ನಮಗೆ ಕಾಣುವುದಿಲ್ಲ.
  • Not Synced
    ಆದ್ರೆ, ಎರಡನೇ ಆಂಗಲ್‌ನಲ್ಲಿ
    ಕಾರು ಹಿನ್ನೆಲೆಯಲ್ಲಿದೆ
  • Not Synced
    ಅವನ ಮುಖ ನಮಗೆ ಕಾಣುತ್ತಲೇ ಇರುವಂತೆ.
  • Not Synced
    ಕ್ಷಣಮಾತ್ರದಲ್ಲಿ, ಅವನಿಗೆ ಏನಾಗತ್ತೆ
    ಅಂತ ಗೊತ್ತಿಲ್ಲ, ಆದರೆ ನಮಗೆ ಗೊತ್ತು...
  • Not Synced
    ...ಇಲ್ಲಿಂದ ಚೆನ್ನಾಗಿ ಕಾಣತ್ತೆ.
  • Not Synced
    ಮೊದಲನೇ ಆಂಗಲ್‌ನಲ್ಲಿ, ಫ್ರೇಮಿಂಗ್
    ನಮ್ಮ ಗಮನವನ್ನ ಹೋಳು ಮಾಡುತ್ತದೆ.
  • Not Synced
    ನಮ್ಮ ಕಣ್ಣಿಗೆ ಅವನ ಮುಖ
    ಮತ್ತೆ ಬೋರ್ಡು ಒಮ್ಮೆಗೇ ಕಾಣುತ್ತದೆ.
  • Not Synced
    ಆದ್ರೆ ಫ್ರೇಮನ್ನ ಬದಲಾಯಿಸಿದಾಗ...
  • Not Synced
    ನಮ್ಮ ಕಣ್ಣು ಅವನ ಮೇಲೆ ಹೋಗೇ ಹೋಗುತ್ತವೆ...
  • Not Synced
    ಆಮೇಲೆ ಬೋರ್ಡಿಗೆ
  • Not Synced
    ವಾಪಸ್ ಅವನಿಗೆ.
    ಇದು ತುಂಬಾನೆ ಬೆಟರ್.
  • Not Synced
    ಈಗ ಮೂರನೇ ಪ್ರಶ್ನೆ ಏಳತ್ತೆ...
  • Not Synced
    ಈ ನಿರ್ದಿಷ್ಟ ಪ್ರಪಂಚದ ನೀತಿ ನಿಯಮಗಳೇನು?
  • Not Synced
    ಬಸ್ಟರ್‌ನ ಪ್ರಪಂಚ ಫ್ಲಾಟ್
    ಆಗಿದ್ದು ಅದಕ್ಕಿರುವುದು ಒಂದೇ ನಿಯಮ.
  • Not Synced
    ಕ್ಯಾಮರಾಕ್ಕೆ ಕಾಣುತ್ತಿಲ್ಲ ಅಂದ್ರೆ,
    ಪಾತ್ರಗಳಿಗೂ ಕಾಣುವುದಿಲ್ಲ.
  • Not Synced
    ಬಸ್ಟರ್ ಪ್ರಪಂಚದಲ್ಲಿ,
    ಫ್ರೇಮ್‌ನ ಅಂಚೇ ಪಾತ್ರಗಳ ಅಂಚೂ ಕೂಡ
  • Not Synced
    ನೋಡುಗರಿಗೆ ಏನು ಕಾಣುತ್ತೋ
    ಎಲ್ಲಾ ಅದರ ಮೇಲೆ ನಿಂತಿರತ್ತೆ.
  • Not Synced
    ಈ ತರ ಅವನು ವಿಷುವಲಿ ಜೋಕ್ ಮಾಡಿದ್ರೆ ನಡಿಯತ್ತೆ
  • Not Synced
    ಲಾಜಿಕ್ ಇಲ್ಲ ಅಂದ್ರೂನು.
  • Not Synced
    ಈ ಫ್ಲಾಟ್ ಪ್ರಪಂಚದಲ್ಲಿ ಮನುಷ್ಯನ ಓಡಾಟದ
    ಮೇಲೆ ಇವನ ಹೆಚ್ಚಿನ ಜೋಕ್‌ಗಳು ನಿಂತಿವೆ.
Title:
Buster Keaton - The Art of the Gag
Description:

more » « less
Video Language:
English
Duration:
08:35

Kannada subtitles

Incomplete

Revisions Compare revisions