-
ಹಾಯ್, ನಾನು ಟೋನಿ,
ಇದು "ಒಂದೊಂದು ಫ್ರೇಂ ಕೂಡಾ ಪೇಂಟಿಂಗ್".
-
ಒಂದು ವಿಚಿತ್ರ ಪ್ರಶ್ನೆ- ಯಾವತ್ತಾದ್ರೂ ಒಂದು ಸೀನ್ ನೋಡಿ…
-
ಸಕತ್ ಚೇರ್ ಗುರು ಅನ್ನಿಸಿದೆಯಾ?
-
ಈ ಚೇರ್ ನಮ್ಮನೇಲಿದ್ರೆ ಚೆನ್ನಾಗಿರತ್ತೆ ಅಂತಲ್ಲ, ಅದೂ ಹೌದು ಅನ್ನಿ.
-
ಟೈಮ್ ತಗೊಂಡು ಕತೆಗೆ ಸರಿಯಾಗಿ ಹೊಂದುವ ಚೇರ್ ಹುಡುಕಿರುತ್ತಾರಲ್ಲ ಅದು.
-
ಅದು ಒಂದಲ್ಲ ಒಂದು ರೀತಿಯಲ್ಲಿ ಫಲ ಕೊಟ್ಟಿರತ್ತೆ.
-
-”ಈ ಹೋಟೆಲ್ ರೂಮಿನಲ್ಲಿ ಐದು ಬೇರೆ ಬೇರೆ ತರದ ಚೇರುಗಳಿವೆ.”
-
-”ಯಪ್ಪಾ, ಅವೆಲ್ಲ ಏನು ತರಿಯಕ್ಕಾ”
-”ಐದು ಬೇರೆ ಬೇರೆ ತರದ ಚೇರುಗಳು.”
-
- ಎತ್ಕೊಂಡು ಹೋಗಯ್ಯ ಅವನ್ನ.”
-
ಯಾಕಂದ್ರೆ ಸಿನಿಮಾದಲ್ಲಿ ಚೇರ್ ಅಂದ್ರೆ ಬರೀ ಚೇರ್ ಅಲ್ಲ.
-
ಅದೊಂದು ಪ್ರೊಡಕ್ಷನ್ ಡಿಸೈನ್‍ನ ಭಾಗ.
ಯಾವ ಚೇರ್ ಆರಿಸಿಕೊಳ್ತೀರ ಅನ್ನೋದ್ರಿಂದ
-
ಆ ವ್ಯಕ್ತಿ ಮತ್ತವನ ಪ್ರಪಂಚ ಏನು ಎತ್ತ ಅಂತೆಲ್ಲ ಗೊತ್ತಾಗತ್ತೆ.
-
-”ನನ್ ಪೇಪರ್ಸು.
ಬಿಸ್ನೆಸ್ ಪೇಪರ್ಸು”
-
ಬನ್ನಿ ಹಂಗಾದ್ರೆ ಒಂದು ಸುತ್ತು ಹಾಕೊಂಡು ಬರೋಣ.
-
ಸಿನಿಮಾಗಳ ಹೆಸರು ನೋಡಬೇಕಂದ್ರೆ
CC ಬಟನ್ ಕ್ಲಿಕ್ ಮಾಡಿ.
-
ಒಂದು ಕತೆ ಬರೆದಿದ್ದೀರಾ ಅಂತಿಟ್ಟುಕೊಳ್ಳೋಣ.
ಅದ್ರಲ್ಲಿ ಇದು ಹೆಂಗೆ ಉಪಯೋಗಕ್ಕೆ ಬರತ್ತೆ?
-
ಚೇರ್‌ನ ಮೊದಲನೆಯ ಉಪಯೋಗ ಅಂದ್ರೆ
ಅದು ಆ ಪ್ರಪಂಚದ ಮುಂದುವರಿಕೆ ಆಗಿರತ್ತೆ.
-
ಇದು ದಿನಾಲೂ ನಾವೂ ನೀವು ನೋಡುವ ರೀತಿ,
ಅವನ್ನ ಸುತ್ತಮುತ್ತಲ ಭಾಗ ಅಂದುಕೊಂಡಿರುತ್ತೀವಿ.
-
ಆದ್ರೆ ನೋಡುಗರು ಒಂದ್ಸಲ ನೋಡಿ
-
ಈ ಪ್ರಪಂಚ ಅಚ್ಚುಕಟ್ಟಾಗಿದೆಯಾ
-
ಗಲೀಜಾಗಿದೆಯಾ ಅಂತ ಹೇಳಬಲ್ಲರು.
-
ನಮ್ಮ ಪಾತ್ರಗಳ ಹತ್ರ ದುಡ್ಡು ಕಮ್ಮಿ ಇದ್ಯಾ
-
ಅಥವಾ ಜಾಸ್ತಿ ಇದ್ಯಾ ಅಂತ ಹೇಳಬಲ್ಲರು
-
-" ಲೀಫ್ ಟೇಬಲ್ ಮಾರಿ ಚೇರ್ ಮಾರದೇ ಇರಕಾಗಲ್ಲ..."
-
"ಚೇರ್‌ಗಳು ಇದ್ರೆ ಡೈನೆಟ್ ಸೆಟ್ ಅಂತಾರೆ.
ಚೇರ್ ಇಲ್ಲ ಅಂದ್ರೆ ತುಣ್ಣಿ ಅಂತಾರೆ!"
-
ಎಲ್ಲಾ ಒಳ್ಳೇ ಪ್ರೊಡಕ್ಷನ್ ಡಿಸೈನ್ ತರ,
ಸರಿಯಾದ ಚೇರು ಫ್ರೇಮಲ್ಲಿರೋದನ್ನ ಮೀರಿ
-
ನಮಗೆ ಪ್ರಪಂಚವನ್ನ ಊಹಿಸಿಕೊಳ್ಳುವಂತೆ ಮಾಡತ್ತೆ.
-
-"ಸೀದೋಗಿರೋ ಮುಂಡೇದು".
-
-"ಆದ್ರೂ ಏನೋ ಒಂದು ಸೆಳೆತ ಐತೆ."
-
-"ಮಾರಿ ಇದ್ದಂಗೆ ಈ ಚೇರು"
-
ಇದ್ರಿಂದ ಯಾರು ಮೇಲ್ಮಟ್ಟದವರು ಕೆಳಮಟ್ಟದವರು
ಅನ್ನೋದು ಸುಲಭವಾಗಿ ಗೊತ್ತಾಗತ್ತೆ.
-
ಅರಮನೆಯ ಹೆಗ್ಗಡೆ.
-
ಶಿಪ್‌ನ ಕ್ಯಾಪ್ಟನ್.
-
ಅಥವಾ ಇಡೀ ಸಾಮ್ರಾಜ್ಯದ ದೊರೆ.
-
-"ಬಾರಪ್ಪ ಸ್ಕೈವಾಕರ್ ಹುಡುಗ."
-
ಎರಡನೆಯ ಉಪಯೋಗ ಅಂದ್ರೆ
ಅದು ಪಾತ್ರದ ಮುಂದುವರಿಕೆ ತರ ಇರುವುದು.
-
ಉದಾಹರಣೆಗೆ ಒಬ್ಬ ಕೈಲಾಗದ ಪುಕ್ಕಲ ಇರಬಹುದು.
-
-"ಅವನು ಯಾವಾಗ್ಲೂ ನಿಮ್ಮನ್ನ ತಲೆಯೆತ್ತಿ ನೋಡಬೇಕು
ಮತ್ತೆ ನೀವು ಅವನನ್ನ ಬಗ್ಗಿ ನೋಡಬೇಕು...
-
...ಆ ತರ ವ್ಯವಸ್ಥೆ ಮಾಡಿದೀನಿ.
-
-"ಶಭಾಶ್."
-
ಬೇರೆ ಜನರನ್ನ ಕೆಳಗೆ ಇಡುವಂತಹ ಪಾತ್ರ.
-
ಅವನ ಪ್ಲಾನುಗಳಿಗೆಲ್ಲ ಸವಾಲು ಬರ್ತಾನೆ ಇರ್ತವೆ.
ಅವನು ಮೇಲಿರಕೆ ಆಗದೇ ಇಲ್ಲ.
-
-"ವೆರಿ ಇಂಟ್ರಸ್ಟಿಂಗ್."
-"ಇಷ್ಟ ಆಯ್ತಾ?"
-
ಸಿಂಪಲ್ಲಾಗಿ ಹೇಳಬೇಕಂದ್ರೆ ಚೇರು
ಒಬ್ಬ ವ್ಯಕ್ತಿಯ ಮನಸ್ಥಿತಿಯನ್ನ ಹೇಳಬಲ್ಲದು.
-
ಜಂಬದ ಕೋಳಿನಾ...
-
ಅಂಜದ ಗಂಡಾ...
-
ಅಥ್ವಾ ಬರೀ ಇವನಿಗೆ ಜಾಯ್ ಸ್ಟಿಕ್ ಇಷ್ಟ ಅಂತ.
-
ಅನಿಮೇಷನ್ ತಗೊಂಡ್ರೆ ಇದನ್ನ
ಇನ್ನೂ ಮುಂದಕ್ಕೆ ಕೊಂಡೊಯ್ಯಬಹುದು-
-
ಕ್ಯಾರೆಕ್ಟರ್ ತರಾನೇ ಇರುವ ಚೇರ್ ಬಿಡಿಸುವುದರ ಮೂಲಕ.
-
ಕಾರ್ಲ್‌ನ ಚೌಕದ ತಲೆ ಹೆಂಗೆ
ಅವನ ಚೇರನ್ನ ಹೋಲುತ್ತಿದೆ ಅಂತ ಗಮನಿಸಿ
-
ಅದೇ "ಎಲ್ಲಿ"ಯ ದುಂಡಗಿನ
ತಲೆ ಮತ್ತು ಕಿವಿ ಅವಳ ಚೇರ್ ತರ ಇವೆ.
-
ಅವಳು ಸತ್ತಮೇಲೆ ಕಾರ್ಲ್
ಅವಳ ಚೇರನ್ನ ಹತ್ರಾನೇ ಇಟ್ಟುಕೊಂಡಿರುತ್ತಾನೆ.
-
ಅದನ್ನ ಪ್ರತಿಸಲ ನೋಡಿದಾಗ ಅವಳನ್ನ ಎಷ್ಟು
ಇಷ್ಟಪಡುತ್ತಿದ್ದ ಅಂತ ನಮಗೆ ನೆನಪಾಗಲಿ ಅಂತ.
-
ಆದ್ರೆ ಮೂರನೆಯದು ಇನ್ನೂ ಜಾಸ್ತಿ ಉಪಯೋಗಕ್ಕೆ ಬರತ್ತೆ ಅನ್ಸತ್ತೆ.
-
ಚೇರು ಪರಿಸ್ಥಿತಿಯ ಮುಂದುವರಿಕೆ ಆಗಿರಬಹುದು.
-
-"ಆ ಕತೇನ ನೀನು ನಂಬಿದ್ಯಾ?"
-
ಗಾಡ್‌ಫಾದರ್ 2ನ ಈ ದೃಶ್ಯದಲ್ಲಿ ಫ್ರೇಡೋ
ಎದ್ದೇಳಕ್ಕೆ ಪ್ರಯತ್ನಿಸುತ್ತಿರೋದನ್ನ ಗಮನಿಸಿ
-
-"ನಿನ್ನನ್ನ ಮೊದ್ಲಿಂದ ನೋಡ್ಕೊಂಡಿದೀನಿ, ಫ್ರೇಡೋ"
-ನೋಡ್ಕೊಂಡಿದೀಯಾ!?"
-
ಆದ್ರೆ ಅವನ ಚೇರ್ ಎದ್ದೇಳಕ್ಕೆ ಬಿಡಲ್ಲ.
-
"ನನ್ನ ತಮ್ಮ ನೀನು,
ನೀನು ನನ್ನ ನೋಡ್ಕೊಂಡಿದೀಯಾ?"
-
ಅವನು ಕೊಸರಾಡಿದಷ್ಟೂ ಇನ್ನಷ್ಟು
ಕೈಲಾಗದವನ ತರ ಕಾಣುತ್ತಾನೆ.
-
ಫ್ರಾನ್ಸಿಸ್ ಫೋರ್ಡ್ ಕೊಪ್ಪೋಲಾ: "ಆ ಚೇರಲ್ಲಿ ಏನೋ ಒಂದಿತ್ತು..."
-
"...ಅದು ದೃಶ್ಯಕ್ಕೆ ಸಕತ್ತಾಗಿ ವರ್ಕ್ ಆಯ್ತು.
ನಾನು ನಿಮ್ಮಣ್ಣ ಅಂತ ಹೇಳ್ತಾನೇ ಇರ್ತಾನೆ!"
-
"...ಆದ್ರೆ ಚೇರ್ ಅವನನ್ನ ಕಾಲು ಮುರಿದವನಂತೆ
ಕಾಣೋ ತರ ಮಾಡುತ್ತಿತ್ತು..."
-
"ಅದು ಸಕತ್ತಾಗಿ ವರ್ಕ್ ಆಯ್ತು"
-
ಚೇರ್‌ಗಳ ಒಳ್ಳೇ ವಿಷಯ ಅಂದ್ರೆ
-
ಅವು ನಟರ ಭಂಗಿಯನ್ನ ಬದಲಾಯಿಸುತ್ತವೆ.
-
ಕೆಲವು ಚೇರುಗಳು ಆರಮಾಗಿ ಕೂರಕ್ಕೇ ಬಿಡಲ್ಲ.
-
ಇನ್ನ ಕೆಲವು ಚೇರಲ್ಲಿ ಆರಾಮಂದ್ರೆ ಆರಾಮು.
-
-"ಏನಪ್ಪಾ, ಬರ್ನೀ."
-"ಏನಪ್ಪ ಟಾಮಣ್ಣ, ಏನ್ ನಡ್ಸಾಕತ್ತೀಯ"
-
ಇನ್ನೂ ಕೆಲವು ಹೆಂಗಿರ್ತವೆ ಅಂದ್ರೆ...
-
-"ಬ್ಲೋಫೆಲ್ಡ್"
-
...ನಾಟಕದ್ ತರ.
-
ಇವೆಲ್ಲ ಒಂದನ್ನೊಂದು ಬಿಟ್ಟಿರಬೇಕು ಅಂತಿಲ್ಲ.
ಹೇಳಬೇಕು ಅಂದ್ರೆ ಸಕತ್ ಮಜ ಬರೋದು
-
ಒಂದ್ರಿಂದ ಶುರುವಾಗಿ ಇನ್ನೊಂದೇನೋ ಆದಾಗ.
-
"ಪ್ಲೇಟೈಮ್"ನ ಈ ದೃಶ್ಯದಲ್ಲಿ,
ಚೇರ್ ಮಾಡುವ ಸದ್ದನ್ನ ಗಮನಿಸಿ.
-
ಸಿಂಪಲ್ ಜೋಕು ಇದು.
ಆದ್ರೆ ಕೆಲವು ನಿಮಿಷ ಆದಮೇಲೆ
-
ಆ ಜೋಕ್ ಬೆಳಿಯತ್ತೆ,
ಇಬ್ರು ವ್ಯಕ್ತಿಗಳು ಎರಡು ಚೇರುಗಳು.
-
ಚೇರ್ ಒಂದೊಂದು ಸೀನಲ್ಲೂ ಮತ್ತೆ ಮತ್ತೆ ಕಾಣಿಸಿಕೊಂಡಂಗೂ
-
ಜೋಕ್ ಬೆಳಿತಾನೇ ಹೋಗತ್ತೆ, ಮಾಡರ್ನ್ ಜನ
ಎಲ್ರೂ ಒಂದೇ ತರದ ಚೇರ್ ತಗೋತಾರೆ ಅಂತ.
-
ಒಳ್ಳೆಯ ಪ್ರೊಡಕ್ಷನ್ ಡಿಸೈನಿಂದ ಇದು ಸಿಗತ್ತೆ.
-
ಊಹಿಸಲಾಗದ ರೀತಿಯಲ್ಲಿ ಮಜ ಕೊಡುವ ಆ ಒಂದು ಡೀಟೇಲ್.
-
ಮತ್ತಿದು ಚೇರೇ ಆಗಿರಬೇಕು ಅಂತಿಲ್ಲ.
ಅವು ಸರ್ವೇಸಾಮಾನ್ಯ ಮತ್ತೆ ಅಗ್ಗ ಅಷ್ಟೇ.
-
ಮುಂದಿನ ಸಲ ಒಂದು ದೃಶ್ಯದಲ್ಲಿ ಒಬ್ಬ ನಟನಿಗೆ
ಚೇರ್ ಮೇಲೆ ಕೂರೋದಕ್ಕೆ ಹೇಳೋ ಸಂದರ್ಭ ಬಂದಾಗ
-
ಇದನ್ನ ಲೆಕ್ಕಕ್ಕೆ ತಗೊಳಿ:
ಯಾವುದರ ಮೇಲೆ ಕೂತ್ಕೊತಾನೆ ಇವನು?
-
-"ನಿಜವಾದ್ದಲ್ಲ ತಾನೆ ಇದು?"
-
ಆ ವಸ್ತುವನ್ನ ಇನ್ನೂ ಹೆಚ್ಚಿನದಾಗಿ ಬಳಸಿಕೊಳ್ಳಲು ಆಗತ್ತಾ?
-
ಕನ್ನಡ ಅಡಿಬರಹ-
ರಾಘವೇಂದ್ರ ಮಾಯಕೊಂಡ