-
ಈಗ ನಾವು ಇಫ್ ಸ್ಟೇಟ್ಮೆಂಟ್ ಬಗ್ಗೆ ತಿಳಿಯೋಣ
ಪ್ರೋಗ್ರಾಮ್ ಕಲಿಕೆಯ ಮುಖ್ಯ ಭಾಗವೇ ಇಫ್
-
ಸ್ಟೇಟ್ಮೆಂಟ್. ಕಂಪ್ಯೂಟರ್ ನಿರ್ಧಾರ ಮಾಡಲು ಇವು ಸಹಾಯ ಮಾಡುತ್ತವೆ.
ಎಲ್ಲ ಕಂಪ್ಯೂಟರ್‌ಗಳು ಇಫ್ ಸ್ಟೇಟ್‌ಮೆಂಟ್ ಬಳಸುತ್ತವೆ. ನನ್ನ ಫೋನ್
-
ಸಹಿತ. ಉದಾಹರಣೆಗೆ. ನನ್ನ ಫೋನ್ ಅನ್‌ಲಾಕ್ ಮಾಡಿದಾಗ
ಅದು ಕೆಲವು ಕೋಡ್ ರನ್ ಮಾಡುತ್ತದೆ. ಪಾಸ್‌ವರ್ಡ್ ಅನ್ನು ನಾನು
-
ಸರಿಯಾಗಿ ನಮೂದಿಸಿದರೆ, ಫೋನ್ ಅನ್‌ಲಾಕ್ ಮಾಡು ಎನ್ನುತ್ತದೆ.
ಇಲ್ಲವಾದರೆ, ಅದು ತಪ್ಪು ಸಂದೇಶ ತೋರಿಸುತ್ತದೆ.
-
ಸ್ಟೀವ್ ಮತ್ತು ಅಲೈಸ್ ಪ್ರತಿಕ್ರಿಯಿಸಲು ನಿಮ್ಮ
ಕೋಡ್‌ನಲ್ಲಿ ಇಫ್ ಸ್ಟೇಟ್ಮೆಂಟ್ ಬಳಸಬಹುದು.
-
ಉದಾ., ಅವರ ಎದುರು ಬಂಡೆ ಇದ್ದರೆ, ಅವರು ಎಡಕ್ಕೆ
ತಿರುಗಬಹುದು ಅಥವಾ ಮರದ ಎದುರು ಇದ್ದರೆ
-
ಅವರು ಬಲಕ್ಕೆ ತಿರುಗಬಹುದು. ಈ ಸನ್ನಿವೇಶದಲ್ಲಿ
ಲಾವಾದ ಮೇಲೆ ನಾವು ಬೀಳಬೇಕಿಲ್ಲ.
-
ಲಾವಾ ಪ್ಲಾನ್ ಮಾಡುವುದು ಸುಲಭ. ಸ್ಕ್ರೀನ್ ಮೇಲೆ
ನಮಗೆ ಇದು ಕಾಣುತ್ತದೆ. ಆದರೆ ಬಂಡೆಯ ಕೆಳಗೆ ಇರುವ
-
ಲಾವಾ ಅನ್ನು ಏನು ಮಾಡುವುದು?
ಕಲ್ಲು ತೆಗೆ ದನಂತರ, ಚೆಕ್ ಮಾಡಬೇಕು
-
ಮುಂದೆ ಹೋಗುವ ಮೊದಲು ಲಾವಾ ಇದೆಯೇ
ಎಂದು ನೋಡಬೇಕು. ಲಾವಾ ಅಲ್ಲಿದ್ದರೆ,
-
ಮುಂದಕ್ಕೆ ಹೋಗುವ ಮೊದಲು ಅದರ ಎದುರು
ನಾವು ಕಲ್ಲು ಇಡಬೇಕು. ಹಾಗೆ ಸುರಕ್ಷಿತವಾಗಬಹುದು.
-
ಇನ್ನಷ್ಟು ಮೈನಿಂಗ್ ಸಮಯ ಇದು. ಎಚ್ಚರಿಕೆಯಿಂದಿರಲು
ಇಫ್ ಸ್ಟೇಟ್ಮೆಂಟ್ ಬಳಸಿ.