Return to Video

The Internet: Wires, Cables, & Wifi

  • 0:03 - 0:08
    ಇಂಟರ್ನೆಟ್ | ವೈರ್‌ಗಳು, ಕೇಬಲ್‌ಗಳು ಮತ್ತು ವೈಫೈ
  • 0:08 - 0:13
    ನಾನು ಟೆಸ್‌ ವಿನ್ಲಾಕ್‌,
    ಗೂಗಲ್ ಸಾಫ್ಟ್‌ವೇರ್ ಇಂಜಿನಿಯರ್
  • 0:13 - 0:18
    ಒಂದರಿಂದ ಇನ್ನೊಂದು ಸಾಧನಕ್ಕೆ ಚಿತ್ರ, ಪಠ್ಯ
    ಇಮೇಲ್ ಹೇಗೆ ಹೋಗುತ್ತೆ?
  • 0:18 - 0:25
    ಇದು ಮ್ಯಾಜಿಕ್ ಅಲ್ಲ, ಇಂಟರ್ನೆಟ್.
    ಮಾಹಿತಿ ಸಾಗಿಸಲು ಇರುವ ಭೌತಿಕ ವ್ಯವಸ್ಥೆ ಇದು.
  • 0:25 - 0:30
    ಇಂಟರ್ನೆಟ್ ಎಂಬುದು ಅಂಚೆ ಸೇವೆಯ ಹಾಗೆ.
    ಇಲ್ಲಿ ಕಳುಹಿಸುವ ಭೌತಿಕ ಸಾಮಗ್ರಿ ಸ್ವಲ್ಪ ಭಿನ್ನ.
  • 0:30 - 0:37
    ಬಾಕ್ಸ್, ಕವರ್ ಬದಲಿಗೆ ಬೈನರಿ ಮಾಹಿತಿಯನ್ನು
    ಇಂಟರ್ನೆಟ್ ಕಳುಹಿಸುತ್ತದೆ.
  • 0:37 - 0:41
    ಮಾಹಿತಿಯನ್ನು ಬಿಟ್ ಮಾಡಲಾಗುತ್ತದೆ.
    ಇದನ್ನು ಆನ್, ಆಫ್, ಹೌದು, ಇಲ್ಲ ಎಂದು
  • 0:41 - 0:49
    ಪ್ರತ್ಯೇಕಿಸಬಹುದು. 1 ಎಂದರೆ ಆನ್, 0 ಎಂದರೆ ಆಫ್‌
    ಎಂದು ನಾವು ಬಳಸುತ್ತೇವೆ. ಯಾಕೆಂದರೆ ಒಂದು ಬಿಟ್
  • 0:49 - 0:56
    ಎರಡು ಸಾಧ್ಯತೆ ಹೊಂದಿರುತ್ತವೆ. 8 ಬಿಟ್‌ಗಳು ಸೇರಿ
    1 ಬೈಟ್ ಆಗುತ್ತದೆ. 100 ಬೈಟ್‌ಗಳು ಸೇರಿ
  • 0:56 - 1:02
    ಕಿಲೋಬೈಟ್ ಆಗುತ್ತೆ. ಒಂದು ಹಾಡನ್ನು 3-4 ಎಂಬಿ
    ಬಳಸಿ ಎನ್‌ಕೋಡ್ ಮಾಡಲಾಗಿರುತ್ತದೆ
  • 1:02 - 1:08
    ಇದು ಚಿತ್ರ, ವಿಡಿಯೋ, ಹಾಡು ಯಾವುದೇ ಆದರೂ
    ಇದು ಹೀಗೆಯೇ ನಡೆಯುತ್ತದೆ.
  • 1:08 - 1:13
    ಎಲ್ಲವನ್ನೂ ಬಿಟ್ ರೀತಿ ಕಳುಹಿಸುತ್ತದೆ. ಇವು
    ಮಾಹಿತಿಯ ಅಣುಗಳು.
  • 1:13 - 1:17
    ಆದರೆ 1, 0 ಯನ್ನು ಇನ್ನೊಂದೆಡೆಗೆ ವ್ಯಕ್ತಿಯಿಂದ
    ವ್ಯಕ್ತಿಗೆ ಕಳಿಸಿದಂತಲ್ಲ. ಹಾಗಾದರೆ,
  • 1:17 - 1:22
    ವೈರ್‌ಗಳು ಏರ್‌ವೇಯಲ್ಲಿ ಕಳಿಸುವ ಭೌತಿಕ ಸಂಗತಿಗಳು
    ಯಾವುದಾಗಿರುತ್ತವೆ?
  • 1:22 - 1:26
    ಇನ್ನೊಂದು ಕಡೆಗೆ ಮಾಹಿತಿಯ ಒಂದು ಬಿಟ್ ಕಳುಹಿಸಲು
    ಮಾನವರು ಭೌತಿಕವಾಗಿ ಹೇಗೆ
  • 1:26 - 1:31
    ಸಂವಹನ ನಡೆಸುತ್ತಾರೆ ಎಂಬುದನ್ನು ನಾವು ನೋಡೋಣ.
  • 1:31 - 1:37
    1 ಕ್ಕೆ ಲೈಟ್ ಆನ್ 0 ಗೆ ಆಫ್ ಮಾಡುತ್ತೇವೆ ಎನ್ನೋಣ
    ಅಥವಾ ಮೋರ್ಸ್‌ ಕೋಡ್ ರೀತಿ ಹೀಗೆ ಮಾಡುತ್ತೇವೆ.
  • 1:37 - 1:42
    ಈ ವಿಧಾನಗಳು ನಿಧಾನ, ದೋಷಕ್ಕೆ ಕಾರಣವಾಗುತ್ತವೆ
    ಮಾನವರ ಮೇಲೆ ಅವಲಂಬಿತವಾಗಿವೆ.
  • 1:42 - 1:47
    ನಮಗೆ ಮಶಿನ್ ಬೇಕಿದೆ.
    ಇತಿಹಾಸದಾದ್ಯಂತ ನಾವು ಹಲವು ಮಶಿನ್ ಮಾಡಿದ್ದೇವೆ
  • 1:47 - 1:51
    ವಿಭಿನ್ನ ಭೌತಿಕ ಮಾಧ್ಯಮದ ಮೂಲಕ ವಿಭಿನ್ನವಾಗಿ
    ಮಾಹಿತಿಯನ್ನು ಇವು ಕಳುಹಿಸುತ್ತವೆ.
  • 1:51 - 2:00
    ಇಂದು, ವಿದ್ಯುತ್, ಲೈಟ್, ರೇಡಿಯೋ ಅಲೆಗಳ ಮೂಲಕ
    ಬಿಟ್ಸ್ ಕಳುಹಿಸುತ್ತೇವೆ. ವಿದ್ಯುತ್‌ನಲ್ಲಿ ಬಿಟ್
  • 2:00 - 2:05
    ಕಳಿಸಲು ನಿಮ್ಮ ಬಳಿ ತಂತಿಯ ಜೊತೆಗೆ ಎರಡು ಬಲ್ಬ್
    ಇವೆ. ಒಂದು ಸಾಧನಕ್ಕೆ ವಿದ್ಯುತ್ ಆನ್ ಮಾಡಿದರೆ ಆಗ
  • 2:05 - 2:09
    ಬಲ್ಬ್ ಬೆಳಗುತ್ತದೆ. ವಿದ್ಯುತ್ ಇಲ್ಲದಿದ್ದರೆ
    ಲೈಟ್ ಇಲ್ಲ.
  • 2:09 - 2:14
    ಲೈಟ್ ಆನ್ ಎಂದರೆ 1 ಆಫ್ ಎಂದರೆ 0 ಎಂದು
    ಎರಡೂ ಕಡೆಯ ಆಪರೇಟರ್ ಒಪ್ಪಿಕೊಂಡರೆ
  • 2:14 - 2:20
    ಒಬ್ಬರಿಂದ ಇನ್ನೊಬ್ಬರಿಗೆ ವಿದ್ಯುತ್ ಕಳಿಸಲು
    ಬಿಟ್ಸ್ ಮಾಹಿತಿ ಕಳುಹಿಸುವ ವ್ಯವಸ್ಥೆ ಇದೆ ಎಂದರ್ಥ
  • 2:20 - 2:25
    ಆದರೆ ಒಂದು ಸಮಸ್ಯೆ ಇದೆ.
    ಸತತ 5 ಬಾರಿ 0 ಕಳಿಸಲು
  • 2:25 - 2:30
    0 ಸಂಖ್ಯೆಯನ್ನು ವ್ಯಕ್ತಿ ಹೇಗೆ ಲೆಕ್ಕವನ್ನೂ
    ಮಾಡಬಹುದು ?
  • 2:30 - 2:35
    ಇದಕ್ಕೆ ಪರಿಹಾರವೆಂದರೆ ಕ್ಲಾಕ್ ಅಥವಾ ಟೈಮರ್
    ಪರಿಚಯಿಸುವುದು. ಸೆಕೆಂಡಿಗೆ 1 ಬಿಟ್ ಕಳುಹಿಸಲು
  • 2:35 - 2:39
    ಆಪರೇಟರ್ ಒಪ್ಪಿಕೊಳ್ಳಬಹುದು ಮತ್ತು ರಿಸೀವರ್
    ಕುಳಿತು ಪ್ರತಿ ಸೆಕೆಂಡನ್ನೂ ರೆಕಾರ್ಡ್ ಮಾಡುವರು
  • 2:39 - 2:44
    ಸತತ 5 ಬಾರಿ 0 ಕಳುಹಿಸಲು, 5 ಬಾರಿ ನೀವು
    ಲೈಟ್ ಆಫ್ ಮಾಡಬೇಕು.
  • 2:44 - 2:48
    ಇನ್ನೊಂದೆಡೆ ಇರುವ ವ್ಯಕ್ತಿ ಎಲ್ಲ 5 ಸೆಕೆಂಡುಗಳ
    ಬರೆದಿಡುತ್ತಾನೆ.
  • 2:48 - 2:54
    ಸತತ 5 ಬಾರಿ 1 ಕ್ಕೆ, ಆನ್ ಮಾಡಿ, 5 ಸೆಕೆಂಡು
    ಕಾಯಿರಿ, ಪ್ರತಿ ಸೆಕೆಂಡನ್ನೂ ಬರೆದಿಡಿ.
  • 2:54 - 2:58
    ಸೆಕೆಂಡಿಗೆ ಒಂದು ಬಿಟ್‌ಗಿಂತ ವೇಗವಾಗಿ ಕಳಿಸಬಹುದು
    ಹೀಗಾಗಿ ನಾವು ನಮ್ಮ ಬ್ಯಾಂಡ್‌ವಿಡ್ತ್
  • 2:58 - 3:04
    ಸಾಧನದ ಗರಿಷ್ಠ ಟ್ರಾನ್ಸ್‌ಮಿಶನ್ ಸಾಮರ್ಥ್ಯಕ್ಕೆ
    ಹೆಚ್ಚಳ ಮಾಡಬೇಕು. ಬಿಟ್‌ರೇಟ್‌ನಿಂದ
  • 3:04 - 3:09
    ಬ್ಯಾಂಡ್‌ವಿಡ್ತ್ ಅಳೆಯಲಾಗುತ್ತದೆ. ಸೆಕೆಂಡ್‌ಲಿ
    ಅಳೆಯುವ ಬಿಟ್‌ಗಳ ಸಂಖ್ಯೆ ಇದಾಗಿದೆ.
  • 3:09 - 3:14
    ವಿಭಿನ್ನ ವೇಗದ ಅಳತೆ ಲ್ಯಾಟೆನ್ಸಿ ಅಥವಾ ಒಂದು
    ಬಿಟ್ ಇನ್ನೊಂದೆಡೆಗೆ ಸಾಗಲು ಬೇಕಿರುವ ಸಮಯ
  • 3:14 - 3:22
    ಮೂಲದಿಂದ ವಿನಂತಿಸಿದ ಸಾಧನಕ್ಕೆ ಸಾಗುವ ಸಮಯ
    ಲ್ಯಾಟೆನ್ಸಿ ಆಗಿರುತ್ತದೆ.
  • 3:22 - 3:27
    ಮಾನವನ ಅನಾಲಜಿಯಲ್ಲಿ, ಸೆಕೆಂಡಿಗೆ ಒಂದು ಬಿಟ್
    ತುಂಬಾ ವೇಗದ್ದು. ಆದರೆ ಮಾನವ ಇದನ್ನು ಊಹಿಸಲು
  • 3:27 - 3:31
    ಆಗದು. 3 ಸೆಕೆಂಡಿನಲ್ಲಿ 3 ಎಂಬಿ ಹಾಡು ಡೌನ್‌ಲೋಡ್
    ಮಾಡಲು ಬಯಸಿದ್ದೀರಿ ಎನ್ನೋಣ.
  • 3:31 - 3:37
    8 ಮಿಲಿಯನ್ ಬಿಟ್‌ ಪ್ರತಿ ಮೆಗಾಬೈಟ್‌ನಲ್ಲಿ ಅಂದರೆ
    ಸೆಕೆಂಡಿಗೆ 8 ಮಿಲಿಯನ್ ಬಿಟ್‌ ದರದಲ್ಲಿ.
  • 3:37 - 3:41
    ಮನುಷ್ಯರು 8 ಮಿಲಿಯನ್ ಬಿಟ್ ಕಳಿಸಲಾಗದು. ಆದರೆ
    ಮಶಿನ್ ಹಾಗೆ ಮಾಡಬಹುದು.
  • 3:41 - 3:45
    ಈ ಮೆಸೇಜ್ ಕಳಿಸಲು ಯಾವ ರೀತಿ ಕೇಬಲ್
    ಬಳಸಬೇಕು ಎಂಬ ಪ್ರಶ್ನೆ ಮೂಡುತ್ತದೆ
  • 3:45 - 3:50
    ಸಿಗ್ನಲ್ ಎಷ್ಟು ದೂರ ಹೋಗಬಹುದು. ನಿಮ್ಮ ಮನೆ,
    ಕಚೇರಿ ಅಥವಾ ಶಾಲೆಯಲ್ಲಿ ಸಿಗುವ ಎಥರ್ನೆಟ್ ಕೇಬಲ್
  • 3:50 - 3:56
    ಮೂಲಕ ಸಿಗ್ನಲ್ ನಷ್ಟ ಅಥವಾ ಅಡ್ಡಿಯನ್ನು ನೀವು
    ಕೆಲವು ನೂರು ಅಡಿ ದೂರದಲ್ಲಿ ಗಮನಿಸಬಹುದು.
  • 3:56 - 4:01
    ವಿಶ್ವದೆಲ್ಲ ಕಡೆ ಇಂಟರ್ನೆಟ್ ಕೆಲಸ ಮಾಡಲು,
    ದೂರದ ಪ್ರದೇಶಕ್ಕೆ ಬಿಟ್‌ಗಳನ್ನು ಕಳುಹಿಸಲು
  • 4:01 - 4:06
    ನಮಗೆ ಪರ್ಯಾಯವಾದ ಬೇರೊಂದು ವಿಧಾನ
    ಅಗತ್ಯವಿದೆ. ನಾವು ಸಮುದ್ರದಾಚೆಯ ಮಾತು
  • 4:06 - 4:11
    ಆಡುತ್ತಿದ್ದೇವೆ. ಬೇರೇನು ಬಳಸಬಹುದು? ವೈರ್ ಮೂಲಕ
    ಎಲೆಕ್ಟ್ರಿಸಿಟಿಗಿಂತ ವೇಗವಾಗಿ ಯಾವುದು ಸಾಗಬಹುದು?
  • 4:11 - 4:18
    ಲೈಟ್. ಫೈಬರ್ ಆಪ್ಟಿಕ್ ಕೇಬಲ್ ಬಳಸಿ ನಾವು
    ಇನ್ನೊಂದೆಡೆ ಬೆಳಕಿನ ಕಿರಣಗಳಾಗಿ ಬಿಟ್‌ಗಳನ್ನು
  • 4:18 - 4:23
    ನಾವು ಕಳಿಸಬಹುದು. ಗ್ಲಾಸ್ ಇಂಜಿನಿಯರ್ಡ್‌ನ ದಾರ
    ಫೈಬರ್ ಆಪ್ಟಿಕ್ ಕೇಬಲ್ ಆಗಿದೆ. ಇದು ಬೆಳಕನ್ನು
  • 4:23 - 4:27
    ರಿಫ್ಲೆಕ್ಟ್ ಮಾಡುತ್ತದೆ. ಕೇಬಲ್‌ನಲ್ಲಿ ಬೆಳಕಿನ
    ಕಿರಣ ಕಳಿಸಿದಾಗ, ಬೆಳಕು ಕೇಬಲ್‌ನ ಉದ್ದಕ್ಕೆ ಮೇಲೆ
  • 4:27 - 4:31
    ಕೆಳಗೆ ಸಾಗುತ್ತದೆ. ಇನ್ನೊಂದೆಡೆ ಸಾಗುವವರೆಗೂ.
    ಬೌನ್ಸ್ ಕೋನ ಆಧರಿಸಿ, ಒಂದೇ ಬಾರಿ ಹಲವು ಬಿಟ್‌
  • 4:31 - 4:36
    ಕಳಿಸಬಹುದು. ಎಲ್ಲ ಬೆಳಕಿನ ವೇಗದಲ್ಲಿ
    ಸಾಗುತ್ತಿರುತ್ತವೆ.
  • 4:36 - 4:41
    ಫೈಬರ್ ತುಂಬಾ ವೇಗ. ಆದರೆ, ಮುಖ್ಯವಾಗಿ ಸಿಗ್ನಲ್
    ದೂರ ಹೋದಾಗ ಡಿಗ್ರೇಡ್ ಆಗದು.
  • 4:41 - 4:45
    ಸಿಗ್ನಲ್ ನಷ್ಟ ಇಲ್ಲದೇ ನೂರಾರು ಮೈಲು ದೂರ
    ಕಳಿಸಬಹುದು. ಹೀಗಾಗಿ ಇನ್ನೊಂದು ಖಂಡವನ್ನು
  • 4:45 - 4:50
    ಸಂಪರ್ಕಿಸಲು ಸಮುದ್ರದ ಆಚೆಯವರೆಗೆ
    ನಾವು ಫೈಬರ್ ಆಪ್ಟಿಕ್ ಕೇಬಲ್‌ ಬಳಸ್ತೇವೆ.
  • 4:50 - 4:56
    2008 ರಲ್ಲಿ, ಅಲೆಕ್ಸಾಂಡ್ರಿಯಾದಲ್ಲಿ ಕೇಬಲ್ ಕಟ್
    ಆಗಿತ್ತು. ಇದರಿಂದ ಮಧ್ಯ ಏಷ್ಯಾ ಮತ್ತು ಭಾರತದಲ್ಲಿ
  • 4:56 - 5:01
    ಇಂಟರ್ನೆಟ್ ಸಮಸ್ಯೆಯಾಗಿತ್ತು. ಇಂಟರ್ನೆಟ್ಟನ್ನು
    ನಾವು ಸುಲಭ ಎಂದುಕೊಳ್ಳುತ್ತೇವೆ. ಆದರೆ, ಇದು
  • 5:01 - 5:05
    ತುಂಬಾ ದುರ್ಬಲ, ಭೌತಿಕ ವ್ಯವಸ್ಥೆ.
    ಫೈಬರ್ ಅದ್ಭುತವಾಗಿದೆ. ಆದರೆ,
  • 5:05 - 5:09
    ವೆಚ್ಚದಾಯಕ ಮತ್ತು ನಿರ್ವಹಣೆ ಕಷ್ಟ.
    ಬಹುತೇಕ ಉದ್ದೇಶಗಳಿಗೆ, ನಿಮಗೆ
  • 5:09 - 5:17
    ಕಾಪರ್ ಕೇಬಲ್ ಸಿಗುತ್ತದೆ. ವೈರ್ ಇಲ್ಲದಿದ್ದರೆ
    ಹೇಗೆ? ವೈರ್‌ಲೆಸ್ ಆಗಿ ಕಳಿಸೋದು ಹೇಗೆ?
  • 5:17 - 5:21
    ಇನ್ನೊಂದೆಡೆಗೆ ಬಿಟ್ ಕಳಿಸಲು ರೇಡಿಯೋ ಸಿಗ್ನಲ್
    ಅನ್ನು ಮಶಿನ್‌ ವೈರ್‌ಲೆಸ್ ಬಿಟ್ ಆಗಿ ಬಳಸುತ್ತವೆ.
  • 5:21 - 5:28
    ಬೇರೆ ಬೇರೆ ಫ್ರೀಕ್ವೆನ್ಸಿಯ ರೇಡಿಯೋ ಅಲೆಗಳಾಗಿ
    1, 0 ಅನ್ನು ಮಶಿನ್ ಪರಿವರ್ತಿಸಬೇಕಾಗಿರುತ್ತದೆ.
  • 5:28 - 5:32
    ಸ್ವೀಕರಿಸುವ ಮಶಿನ್ ಇದನ್ನು ರಿವರ್ಸ್ ಮಾಡುತ್ತೆ.
    ನಿಮ್ಮ ಕಂಪ್ಯೂಟರ್‌ನಲ್ಲಿ ಬೈನರಿಯಾಗಿ
  • 5:32 - 5:38
    ಇದನ್ನು ಕನ್ವರ್ಟ್ ಮಾಡುತ್ತದೆ. ವೈರ್‌ಲೆಸ್‌ನಿಂದ
    ನಮ್ಮ ಮೊಬೈಲ್‌ ಇಂಟರ್ನೆಟ್ ಬರುತ್ತೆ. ಆದರೆ
  • 5:38 - 5:42
    ರೇಡಿಯೋ ಸಿಗ್ನಲ್ ದೂರದ ವರೆಗೆ ಹೋಗದು.
    ಹೀಗಾಗಿ ಲಾಸ್ ಏಂಜಲ್ಸ್ ರೇಡಿಯೋ ನಿಮಗೆ
  • 5:42 - 5:48
    ಶಿಕಾಗೋದಲ್ಲಿ ಸಿಗದು. ವೈರ್‌ಲೆಸ್ ಚೆನ್ನಾಗಿದ್ದರೂ
    ಇಂದಿಗೂ ಇಂಟರ್ನೆಟ್ ವೈರ್‌ ಮೇಲೆಯೇ ನಿಂತಿದೆ.
  • 5:48 - 5:52
    ನೀವು ವೈಫೈ ಬಳಸುತ್ತಾ ಕಾಫಿ ಶಾಪ್‌ನಲ್ಲಿದ್ದರೆ
    ಬಿಟ್‌ ಅನ್ನು ವೈರ್‌ಲೆಸ್ ರೂಟರ್‌ಗೆ ಹೋಗುತ್ತದೆ.
  • 5:52 - 5:56
    ನಂತರ ವೈರ್ ಮೂಲಕ ವರ್ಗಾವಣೆಯಾಗಿ
    ದೂರದವರೆಗೆ ಇಂಟರ್ನೆಟ್ ಆಗುತ್ತದೆ
  • 5:56 - 6:01
    ಭವಿಷ್ಯದಲ್ಲಿ ಬಿಟ್ ಕಳುಹಿಸುವ ಭೌತಿಕ ವಿಧಾನ
    ಬದಲಾವಣೆ ಕಾಣಬಹುದು.
  • 6:01 - 6:06
    ಸ್ಯಾಟಲೈಟ್‌ಗಳ ಮಧ್ಯೆ ಅಥವಾ ಬಲೂನ್‌ಗಳು
    ಡ್ರೋನ್‌ಗಳಿಂದ ರೇಡಿಯೋ ವೇವ್‌ ಕಳಿಸುವುದು
  • 6:06 - 6:11
    ಇದರಲ್ಲಿರುವ ಬೈನರಿ ವಿಧಾನ ಮತ್ತು ಆ ಮಾಹಿತಿ
    ಕಳಿಸಲು ಬಳಸುವ ಪ್ರೊಟೋಕೋಲ್
  • 6:11 - 6:15
    ಮಾಹಿತಿ ಸ್ವೀಕಾರವು ಬಹುತೇಕ ಹೀಗೆಯೆ ಇರುತ್ತದೆ.
    ಶಬ್ದ, ಇಮೇಲ್, ಚಿತ್ರ, ಬೆಕ್ಕಿನ ವೀಡಿಯೋ
  • 6:15 - 6:21
    ಪಪ್ಪಿ ವೀಡಿಯೋ, ಇಂಟರ್ನೆಟ್‌ನಲ್ಲಿರುವ ಎಲ್ಲವೂ
    ಈ 1 ಮತ್ತು 0 ಆಧಾರದಲ್ಲೇ ಇರುತ್ತವೆ.
  • 6:21 - 6:26
    ಇವು ಎಲೆಕ್ಟ್ರಾನಿಕ್ ಪಲ್ಸ್, ಬೆಳಕಿನ ಬೀಮ್‌,
    ರೇಡಿಯೋ ವೇವ್ ಹಾಗೂ ಇತರ ವಿಧಾನದಲ್ಲಿರುತ್ತವೆ.
Title:
The Internet: Wires, Cables, & Wifi
Description:

more » « less
Video Language:
English
Duration:
06:41

Kannada subtitles

Revisions