WEBVTT 00:00:05.000 --> 00:00:08.000 ಎಲ್ಲರಿಗೂ ವಂದನೆಗಳು,ಕ್ರಿಸ್ ಇಲ್ಲಿಗೆ ಬಂದವರೆಲ್ಲಾ ಹೇಳಿದರು 00:00:08.000 --> 00:00:12.000 ಅವರು ಭಯಪಟ್ಟಿದ್ದಾರೆಂದು ಹೇಳಿದರು. ನನಗೆ ಭಯವಾಗಿದೆಯೊ, ಇಲ್ಲವೋ ನನಗೆ ಗೊತ್ತಿಲ್ಲ,♪♪ 00:00:12.000 --> 00:00:16.000 ಆದರೆ, ಇದೇ ಮೊದಲು ನಾನು ಇಂತಹ ಸಭಿಕರನ್ನುದ್ದೇಶಿಸಿ ಮಾತಾಡುತ್ತಿರುವುದು .♪ 00:00:16.000 --> 00:00:20.000 ಹಾಗೂ ನಿಮಗೆ ತೋರಿಸಲು ನನ್ನಲ್ಲಿ ಯಾವುದೇ ವಿಶಿಷ್ಟ ತಂತ್ರಜ್ಞಾನ ಇಲ್ಲ. 00:00:20.000 --> 00:00:23.000 ಯಾವ ಸ್ಲೈಡುಗಳೂ ಇಲ್ಲ, ಹಾಗಾಗಿ ನೀವು ಕೇವಲ ನನ್ನನ್ನು ನೋಡುತ್ತಿರಬಹುದು. 00:00:23.000 --> 00:00:26.000 (ನಗು). NOTE Paragraph 00:00:26.000 --> 00:00:32.000 ನಾನು ಈ ದಿನ ಏನು ಮಾಡಬೇಕೆಂದಿದ್ದೇನೆಂದರೆ ನಿಮ್ಮೊಂದಿಗೆ ಕೆಲವು ಕತೆಗಳನ್ನು ಹಂಚಿಕೊಳ್ಳುತ್ತೇನೆ♪ 00:00:32.000 --> 00:00:35.000 ಹಾಗೂ ಒಂದು ವಿಭಿನ್ನ ಆಫ್ರಿಕಾ ಬಗ್ಗೆ ಮಾತಾಡಬೇಕೆಂದಿದ್ದೇನೆ. 00:00:35.000 --> 00:00:39.000 ಈಗಾಗಲೇ ಇಂದು ಬೆಳಿಗ್ಗೆ ಆಫ್ರಿಕಾ ಬಗ್ಗೆ ಕೆಲವು ಪ್ರಸ್ತಾಪಗಳಿದ್ದುವು♪ 00:00:39.000 --> 00:00:44.000 ಅವು ನೀವು ಯಾವಾಗಲೂ ಕೇಳುತ್ತಲಿರುತ್ತೀರಿ: HIV/AIDS ನ ಆಫ್ರಿಕಾ, 00:00:44.000 --> 00:00:50.000 ಮಲೇರಿಯಾದ ಆಫ್ರಿಕಾ, ಬಡತನದ ಆಫ್ರಿಕಾ, ಸಂಘರ್ಷಗಳ ಆಫ್ರಿಕಾ, 00:00:50.000 --> 00:00:53.000 ಹಾಗೂ ದುರಂತಗಳ ಆಫ್ರಿಕಾ.♪ NOTE Paragraph 00:00:53.000 --> 00:00:57.000 ಇವೆಲ್ಲಾ ಸಂಭವಿಸುತ್ತಿರುವುದು ಸತ್ಯವಾದರೂ,♪ 00:00:57.000 --> 00:01:01.000 ನೀವು ಹೆಚ್ಚು ತಿಳಿದಿಲ್ಲದಿದ ಒಂದು ಆಫ್ರಿಕಾ ಇದೆ.♪ 00:01:01.000 --> 00:01:05.000 ಹಾಗೂ ಕೆಲವು ಸಾರಿ ನನಗೆ ಗೊಂದಲವಾಗಿ ನನ್ನನ್ನು ನಾನೆ ಏಕೆ ಎಂದು ಪ್ರಶ್ನಿಸುತ್ತೇನೆ. 00:01:05.000 --> 00:01:09.000 ಇದು ಕ್ರಿಸ್ ಪ್ರಸ್ತಾಪ ಮಾಡಿದ ಬದಲಾಗುತ್ತಿರುವ ಆಫ್ರಿಕಾ. 00:01:09.000 --> 00:01:11.000 ಇದು ಅವಕಾಶಗಳ ಆಫ್ರಿಕಾ. 00:01:11.000 --> 00:01:14.000 ಈ ಆಫ್ರಿಕಾ ಎಲ್ಲಿ ಜನರು ತಮ್ಮ ಭವಿಷ್ಯವನ್ನು 00:01:14.000 --> 00:01:16.000 ಮತ್ತು ಹಣೆಬರಹವನ್ನು ರೂಪಿಸಬೇಕೆಂದಿದ್ದಾರೊ ಅದು. 00:01:16.000 --> 00:01:19.000 ಈ ಆಫ್ರಿಕಾ ಎಲ್ಲಿ ಜನರು ಇದಕ್ಕಾಗಿ ಸಹಭಾಗಿತ್ವಕ್ಕಾಗಿ ಎದುರು 00:01:19.000 --> 00:01:23.000 ನೋಡುತ್ತಿದ್ದಾರೊ. ನಾನು ಈ ದಿನ ಮಾತಾಡಬೇಕೆಂದಿರುವುದು ಈ ಬಗ್ಗೆಯೇ. NOTE Paragraph 00:01:23.000 --> 00:01:25.000 ನಾನು ನಿಮಗೆ ಆಫ್ರಿಕಾದ ಬದಲಾವಣೆ ಬಗ್ಗೆ 00:01:25.000 --> 00:01:27.000 ಒಂದು ಕಥೆ ಹೇಳುವ ಮೂಲಕ ಪ್ರಾರಂಭಿಸುತ್ತೇನೆ. 00:01:28.000 --> 00:01:33.000 15 ಸೆಪ್ಟೆಂಬರ್ 2005, ಮಿ.ಡೈಯಾಪ್ರೆಯ್ ಅಲಮೈಯೆಸೈಘ, 00:01:33.000 --> 00:01:37.000 ನೈಜೀರಿಯದ ಒಂದು ತೈಲ-ಸಮೃದ್ಧ ರಾಜ್ಯದ ರಾಜ್ಯಪಾಲ 00:01:37.000 --> 00:01:44.000 ಲಂಡನ್ ಗೆ ಭೇಟಿ ನೀಡಿದ್ದಾಗ ಲಂಡನ್ ಮೆಟ್ರೊಪಾಲಿಟನ್ ಪೊಲೀಸರು ದಸ್ತಗಿರಿ ಮಾಡಿದರು.♪ 00:01:44.000 --> 00:01:49.000 ಅವರನ್ನು ಏಕೆ ದಸ್ತಗಿರಿ ಮಾಡಿದರೆಂದರೆ $8 ಮಿಲಿಯನ್ ಹಸ್ತಾಂತರವಾಗಿತ್ತು♪ 00:01:49.000 --> 00:01:52.000 ಅದು ಯಾವುದೋ ನಿಷ್ಕ್ರಿಯ ಖಾತೆಗೆ ಹೋಗಿತ್ತು 00:01:52.000 --> 00:01:55.000 ಆ ಖಾತೆ ಅವನಿಗೆ ಮತ್ತು ಅವನ ಕುಟುಂಬಕ್ಕೆ ಸೇರಿತ್ತು. 00:01:56.000 --> 00:01:58.000 ಈ ದಸ್ತಗಿರಿ ಏಕೆ ಸಂಭವಿಸಿತೆಂದರೆ ಅಲ್ಲೊಂದು ಸಹಕಾರವಿತ್ತು 00:01:58.000 --> 00:02:01.000 ಲಂಡನ್ ಮೆಟ್ರೊಪಾಲಿಟನ್ ಪೋಲಿಸ್ 00:02:01.000 --> 00:02:04.000 ಮತ್ತು ಎಕನಾಮಿಕ್ ಮತ್ತು ಫೈನಾನ್ಶಿಯಲ್ ಕ್ರೈಮ್ಸ್ ಕಮೀಶನ್ ಆಫ್ ನೈಜೀರಿಯ ಜೊತೆ - 00:02:04.000 --> 00:02:11.000 ನಮ್ಮಲ್ಲಿರುವ ಬಹಳ ದಕ್ಷ ಮತ್ತು ಧೈರ್ಯಶಾಲಿಗಳಲ್ಲಿ ಒಬ್ಬರ ನಾಯಕತ್ವದಲ್ಲಿ – ಮಿ.ನುಹು ರಿಬಾಡು. 00:02:11.000 --> 00:02:14.000 ಅಲಮೈಯೆಸೈಘ ವಿರುದ್ಧ ಲಂಡನ್ ನಲ್ಲಿ ಅಪಾದನೆ ಮಾಡಲಾಯಿತು. 00:02:14.000 --> 00:02:18.000 ಕೆಲವು ತಪ್ಪುಗಳಿಂದಾಗಿ ಅವನು ಹೆಣ್ಣಿನ ವೇಷದಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವಾಯಿತು 00:02:18.000 --> 00:02:21.000 ಹಾಗೂ ಲಂಡನ್ ನಿಂದ ನೈಜೀರಿಯಕ್ಕೆ ಓಡಿಬಂದ, ಇಲ್ಲಿ,♪ 00:02:21.000 --> 00:02:25.000 ನಮ್ಮ ಸಂವಿಧಾನದ ಪ್ರಕಾರ, ಅಧಿಕಾರದಲ್ಲಿರುವ 00:02:25.000 --> 00:02:27.000 ರಾಜ್ಯಪಾಲರು, ಅಧ್ಯಕ್ಷರು ಮುಂತಾದವರಿಗೆ – ಹಲವು ರಾಷ್ಟ್ರಗಳಲ್ಲಿರುವಂತೆ -- 00:02:27.000 --> 00:02:32.000 ರಕ್ಷಣೆಯಿದೆ ಹಾಗೂ ಅವರ ವಿರುದ್ಧ ಕಾನೂನು ಕ್ರಮ ನಡೆಯುವುದಿಲ್ಲ. ಆದರೆ ಆದದ್ದೇನು: 00:02:32.000 --> 00:02:36.000 ಈ ನಡವಳಿಕೆಯಿಂದ ಜನರು ಎಷ್ಟು ರೊಚ್ಚಿಗೆದ್ದರೆಂದರೆ ರಾಜ್ಯ ವಿಧಾನಸಭೆ 00:02:36.000 --> 00:02:42.000 ಅವರ ವಿರುದ್ಧ ದೋಷಾರೋಪಣೆ ಮಾಡಿ ಅವರನ್ನು ಪದವಿಯಿಂದ ಕಿತ್ತುಹಾಕಲು ಸಾಧ್ಯವಾಯಿತು. NOTE Paragraph 00:02:43.000 --> 00:02:45.000 ಈ ದಿನ, ಅಲಾಮ್ಸ್--ನಾವು ಅವರನ್ನು ಸಂಕ್ಷ್ತಿಪ್ತವಾಗಿ ಕರೆಯುವ ಹೆಸರು –ಜೈಲಿನಲ್ಲಿದ್ದಾರೆ. 00:02:46.000 --> 00:02:51.000 ಇದು ಒಂದು ಸತ್ಯ ಕಥೆ , ಆಫ್ರಿಕಾದ ಜನರು ತಮ್ಮ ನಾಯಕರ♪ 00:02:51.000 --> 00:02:56.000 ಲಂಚಕೋರತನವನ್ನು ಸಹಿಸಿಕೊಳ್ಳಲು ಇನ್ನು ಮುಂದೆ ಸಿದ್ಧರಿಲ್ಲ. 00:02:57.000 --> 00:03:02.000 ಈ ಕಥೆ ಯಾವುದರ ಬಗ್ಗೆಯೆಂದರೆ ಜನರು ತಮ್ಮ ಸಂಪನ್ಮೂಲಗಳನ್ನು 00:03:02.000 --> 00:03:07.000 ಅವರ ಒಳಿತಿಗಾಗಿ ನಿರ್ವಹಿಸಬೇಕು ಮತ್ತು ಅದನ್ನು ಹೊರದೇಶಗಳಿಗೆ 00:03:07.000 --> 00:03:10.000 ಯಾರೋ ಕೆಲವು ಪ್ರಭಾವಶಾಲಿ ವ್ಯಕ್ತಿಗಳ ಲಾಭಕ್ಕೆ ಕೊಂಡೊಯ್ಯುವುದಲ್ಲ ಎಂದು ಬಯಸುತ್ತಾರೆ. 00:03:10.000 --> 00:03:14.000 ಆದ್ದರಿಂದ, ನೀವು ಲಂಚಗುಳಿ ಆಫ್ರಿಕಾ ಬಗ್ಗೆ ಕೇಳಿದಾಗ --♪ 00:03:14.000 --> 00:03:18.000 ಲಂಚಕೋರತನವೇ ಗೋಚರಿಸುತ್ತದೆ – ಜನರು ಮತ್ತು ಸರಕಾರಗಳು 00:03:18.000 --> 00:03:21.000 ಇದರ ನಿರ್ಮೂಲನಕ್ಕಾಗಿ ತೀವ್ರವಾಗಿ ಪ್ರಯತ್ನಿಸುತ್ತಿವೆ ಎಂದು ನೀವು ತಿಳಿದುಕೊಳ್ಳಲಿ ಎಂದು ನಾನು ಬಯಸುತ್ತೇನೆ♪♪ 00:03:21.000 --> 00:03:25.000 ಕೆಲವು ರಾಷ್ಟ್ರಗಳಲ್ಲಿ, ಹಾಗೂ ಕೆಲವು ಯಶಸ್ಸುಗಳು ಹೊರಹೊಮ್ಮುತ್ತಿವೆ.♪♪ NOTE Paragraph 00:03:25.000 --> 00:03:28.000 ಇದರ ಅರ್ಥ ಸಮಸ್ಯೆ ಕೊನೆಗೊಂಡಿದೆಯೆ? ಇದಕ್ಕೆ ಉತ್ತರ, ’ಇಲ್ಲ’. 00:03:28.000 --> 00:03:32.000 ಇನ್ನೂ ಬಹಳ ದೂರ ಹೋಗಬೇಕಿದೆ, ಆದರೆ ಇಲ್ಲಿ ಮಾಡಬೇಕೆಂಬ ಮನಸ್ಸಿದೆ. 00:03:32.000 --> 00:03:36.000 ಹಾಗೂ ಈ ಪ್ರಮುಖ ಹೋರಾಟದಲ್ಲಿ ಯಶಸ್ಸುಗಳು ಕಂಡುಬರುತ್ತಿವೆ. 00:03:36.000 --> 00:03:38.000 ಹಾಗಾಗಿ, ನೀವು ಲಂಚಕೋರತನದ ಬಗ್ಗೆ ಕೇಳಿದರೆ 00:03:38.000 --> 00:03:41.000 ಅದರ ಬಗ್ಗೆ ಇಲ್ಲಿ ಏನೂ ಮಾಡುತ್ತಿಲ್ಲ ಎಂಬ ಭಾವನೆ ಇಟ್ಟುಕೊಳ್ಳಬೇಡಿ -- 00:03:41.000 --> 00:03:44.000 ಆಫ್ರಿಕಾದ ಯಾವುದೇ ದೇಶಗಳೊಂದಿಗೆ ವ್ಯವಹರಿಸಲು ಸಾಧ್ಯವಿಲ್ಲ ಎಂದುಕೊಳ್ಳಬೇಡಿ 00:03:44.000 --> 00:03:47.000 ಲಂಚಕೋರತನ ತುಂಬಿತುಳುಕುತ್ತಿದೆ ಎಂಬುದಕ್ಕಾಗಿ. ಈಗ ಪರಿಸ್ಥಿತಿ ಹಾಗಿಲ್ಲ.♪ 00:03:47.000 --> 00:03:53.000 ಹೋರಾಟ ಮಾಡುವ ಮನಸ್ಸಿದೆ, ಮತ್ತು ಹಲವು ರಾಷ್ಟ್ರಗಳಲ್ಲಿ ಈ ಹೋರಾಟ ನಡೆಯುತ್ತಿದೆ 00:03:53.000 --> 00:03:57.000 ಹಾಗೂ ಗೆಲುವು ದೊರೆಯುತ್ತಿದೆ. ನನ್ನಂತಹ ಬೇರೆಯವರ ವಿಚಾರದಲ್ಲಿ, 00:03:57.000 --> 00:04:00.000 ಇಲ್ಲಿ, ನೈಜೀರಿಯದಲ್ಲಿ ಸರ್ವಾಧಿಕಾರದ ದೀರ್ಘ ಚರಿತ್ರೆಯೇ ಇದೆ,♪ 00:04:00.000 --> 00:04:04.000 ಹೋರಾಟ ನಡೆಯುತ್ತಲೇ ಇದೆ ಹಾಗೂ ನಾವು ದೊಡ್ಡ ದಾರಿಯನ್ನು ಕ್ರಮಿಸಬೇಕಾಗಿದೆ. NOTE Paragraph 00:04:04.000 --> 00:04:08.000 ಆದರೆ ವಾಸ್ತವವೆಂದರೆ ಇದು ಸಂಭವಿಸುತ್ತಾ ಇದೆ. 00:04:09.000 --> 00:04:11.000 ಫಲಿತಾಂಶಗಳು ಕಂಡುಬರುತ್ತಿವೆ: 00:04:11.000 --> 00:04:15.000 ವಿಶ್ವ ಬ್ಯಾಂಕ್ ಮತ್ತು ಇತರ ಸಂಸ್ಥೆಗಳು ಸ್ವತಂತ್ರವಾಗಿ ನಿಯಂತ್ರಿಸುತ್ತಿರುವುದನ್ನು 00:04:15.000 --> 00:04:19.000 ನೋಡಿದರೆ ಹಲವು ಘಟನೆಗಳಲ್ಲಿ ಈ ಪರಿಸ್ಥಿತಿ ಇಳಿಮುಖವಾಗುತ್ತಿದೆ 00:04:19.000 --> 00:04:22.000 ಲಂಚಕೋರತನದ ವಿಚಾರದಲ್ಲಿ, ಹಾಗೂ ಆಡಳಿತ ಉತ್ತಮಗೊಳ್ಳುತ್ತಿದೆ. 00:04:22.000 --> 00:04:26.000 ಆಫ್ರಿಕಾದ ಆರ್ಥಿಕ ಆಯೋಗದ ಒಂದು ಅಧ್ಯಯನ 00:04:26.000 --> 00:04:30.000 28 ಆಫ್ರಿಕಾ ದೇಶಗಳಲ್ಲಿ ರಾಜ್ಯಭಾರ ಉತ್ತಮ ಮಟ್ಟಕ್ಕೇರುವ ನಿಚ್ಚಳ ಪ್ರವೃತ್ತಿ ಇದೆ ಎಂದು ತೋರಿಸಿಕೊಟ್ಟಿದೆ. NOTE Paragraph 00:04:30.000 --> 00:04:32.000 ಹಾಗೂ ನಾನು ಇನ್ನೊಂದು ವಿಷಯ ಹೇಳಲು ಇಚ್ಛಿಸುತ್ತೇನೆ♪ 00:04:32.000 --> 00:04:34.000 ಈ ಆಡಳಿತಾತ್ಮಕ ವಿಷಯ ಮುಗಿಸುವ ಮೊದಲು. 00:04:34.000 --> 00:04:37.000 ಅದೆಂದರೆ, ಜನರು ಲಂಚಕೋರತನದ ಲಂಚಗುಳಿತನ ಬಗ್ಗೆ ಮಾತಾಡುತ್ತಾರೆ,. 00:04:37.000 --> 00:04:39.000 ಅದರ ಬಗ್ಗೆ ಯಾರಾದರೂ ಮಾತಾಡಿದರೆ 00:04:39.000 --> 00:04:41.000 ನಿಮಗೆ ತಕ್ಷಣ ಆಫ್ರಿಕಾ ನೆನಪಿಗೆ ಬರುತ್ತದೆ. 00:04:41.000 --> 00:04:45.000 ಅದು ಇರುವ ಚಿತ್ರ: ಆಫ್ರಿಕಾ ದೇಶಗಳು. ಆದರೆ ನಾನು ಇದನ್ನು ಹೇಳುತ್ತೇನೆ: 00:04:45.000 --> 00:04:51.000 ಲಂಡನ್ನಿನ ಒಂದು ಖಾತೆಗೆ ಅಲಮ್ಸ್ $8 ಮಿಲಿಯನ್ ಸಾಗಿಸಿರಬೇಕಾದರೆ 00:04:53.000 --> 00:04:57.000 ಇತರರು ಇದೇ ರೀತಿ ಹಣ ಸಾಗಿಸಿರಬಹುದಾದ ಮೊತ್ತ 00:04:57.000 --> 00:05:01.000 20 ರಿಂದ 40 ಬಿಲಿಯನ್ ಪ್ರಗತಿಶೀಲ ದೇಶಗಳಿಗೆ ಸೇರಿದ ಹಣ 00:05:01.000 --> 00:05:04.000 ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ಕುಳಿತುಕೊಂಡಿದೆ – ಅವರು ಹೀಗೆ ಮಾಡಬಹುದಾದರೆ 00:05:04.000 --> 00:05:07.000 ಅದಿನ್ನೇನು? ಅದು ಲಂಚಕೋರತನವಲ್ಲವೇ? 00:05:08.000 --> 00:05:12.000 ಈ ದೇಶದಲ್ಲಿ, ನೀವು ಕದ್ದ ಮಾಲು ಪಡೆದರೆ ನಿಮ್ಮ ಮೇಲೆ ಕಾನೂನು ಕ್ರಮ ನಡೆಯುವುದಿಲ್ಲವೆ? 00:05:13.000 --> 00:05:16.000 ಹಾಗಾಗಿ, ನಾವು ಈ ರೀತಿಯ ಲಂಚಕೋರತನದ ಬಗ್ಗೆ ಮಾತಾಡುವಾಗ, 00:05:16.000 --> 00:05:19.000 ವಿಶ್ವದ ಮತ್ತೊಂದು ಭಾಗದಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆಯೂ ಮಾತಾಡೋಣ -- 00:05:19.000 --> 00:05:23.000 ಹಣ ಎಲ್ಲಿಗೆ ಹೋಗುತ್ತಿದೆ ಹಾಗೂ ಅದನ್ನು ಹೇಗೆ ತಡೆಯಬಹುದು. 00:05:23.000 --> 00:05:26.000 ನಾನು ಒಂದು ಪ್ರಸ್ತಾಪದ ಬಗ್ಗೆ ಕೆಲಸಮಾಡುತ್ತಿದ್ದೇನೆ, ವಿಶ್ವ ಬ್ಯಾಂಕ್ ಸಹಯೋಗದೊಡನೆ, 00:05:26.000 --> 00:05:29.000 ಆಸ್ತಿ ವಸೂಲಾತಿ ಬಗ್ಗೆ, ನಾವೇನು ಮಾಡಬಹುದು 00:05:29.000 --> 00:05:32.000 ಹೊರದೇಶಗಳಿಗೆ ಕೊಂಡೊಯ್ದಿರುವ ಹಣಗಳ ಬಗ್ಗೆ -- 00:05:32.000 --> 00:05:35.000 ಪ್ರಗತಿಶೀಲ ರಾಷ್ಟ್ರಗಳ ಹಣ – ಅದನ್ನು ಹಿಂದಕ್ಕೆ ರವಾನಿಸಲು. 00:05:35.000 --> 00:05:38.000 ಏಕೆಂದರೆ, ಅಲ್ಲಿರುವ ಕುಳಿತುಕೊಂಡಿರುವ ಬಿಲಿಯನ್ ಹಿಂದಕ್ಕೆ ಪಡೆದರೆ 00:05:38.000 --> 00:05:41.000 ಇಲ್ಲಿನ ಕೆಲವು ದೇಶಗಳಿಗೆ ದೊರೆಯುತ್ತಿರುವ 00:05:41.000 --> 00:05:44.000 ಒಟ್ಟು ಸಹಾಯಧನಕ್ಕಿಂತ ಹೆಚ್ಚು ಪಡೆದಂತೆ. 00:05:44.000 --> 00:05:51.000 (ಚಪ್ಪಾಳೆ). NOTE Paragraph 00:05:51.000 --> 00:05:55.000 ನಾನು ಮಾತಾಡಬೇಕೆಂದಿರುವ ಎರಡನೆ ವಿಷಯವೆಂದರೆ ಸುಧಾರಣೆ ಮಾಡುವ ಮನಸ್ಸು. 00:05:55.000 --> 00:05:59.000 ಆಫ್ರಿಕನ್ನರು, ಅವರು ಸುಸ್ತಾದ ನಂತರ – ನಾವು ಸುಸ್ತಾಗುತ್ತೇವೆ 00:05:59.000 --> 00:06:04.000 ಪ್ರತಿಯೊಬ್ಬರ ದಾನ ಮತ್ತು ಧರ್ಮದ ವಿಷಯವಾಗಿ. 00:06:04.000 --> 00:06:08.000 ನಾವು ಅದಕ್ಕೆ ಚಿರಋಣಿಗಳು, ಆದರೆ ನಮಗೆ ಗೊತ್ತಿದೆ 00:06:08.000 --> 00:06:12.000 ನಾವು ಮನಸ್ಸು ಮಾಡಿದರೆ ನಮ್ಮ ಭವಿಷ್ಯವನ್ನು ನಾವೇ ರೂಪಿಸಿಕೊಳ್ಳಬಲ್ಲೆವು ಎಂದು. 00:06:13.000 --> 00:06:17.000 ಹಾಗೂ ಹಲವು ಆಫ್ರಿಕಾ ದೇಶಗಳಲ್ಲಿ ಈಗ ಏನಾಗುತ್ತಿದೆ ಎಂದರೆ 00:06:17.000 --> 00:06:21.000 ನಮ್ಮನ್ನು ಬೇರಾರೂ ಇದನ್ನು ಮಾಡಲಾರರು ಎಂಬ ಅರಿವು ಮೂಡುತ್ತಿದೆ. ನಾವು ಇದನ್ನು ಮಾಡಲೇ ಬೇಕು. 00:06:21.000 --> 00:06:25.000 ನಾವು ಸಹಭಾಗಿಗಳನ್ನು ನಮ್ಮ ಬೆಂಬಲಕ್ಕೆ ಕರೆಯಬಹುದು, ಆದರೆ ಪ್ರಾರಂಭ ನಾವೇ ಮಾಡಬೇಕು. 00:06:25.000 --> 00:06:28.000 ನಾವು ನಮ್ಮ ಆರ್ಥಿಕ ವ್ಯವಸ್ಥೆಗಳನ್ನು ಸುಧಾರಿಸಬೇಕು, ನಮ್ಮ ನಾಯಕತ್ವ ಬದಲಾಯಿಸಬೇಕು, 00:06:28.000 --> 00:06:34.000 ಹೆಚ್ಚು ಪ್ರಜಾಪ್ರಭುತ್ವವಾದಿಗಳಾಗಬೇಕು, ಬದಲಾವಣೆ ಮತ್ತು ಮಾಹಿತಿಗೆ ಹೆಚ್ಚು ಮುಕ್ತ ಮನಸ್ಸು ಬೇಕು. NOTE Paragraph 00:06:34.000 --> 00:06:36.000 ಹಾಗೂ ನಾವು ಇದನ್ನೇ ಮಾಡ ಹೊರಟಿದ್ದು 00:06:36.000 --> 00:06:39.000 ಈ ಖಂಡದ ಬಹು ದೊಡ್ಡ ದೇಶಗಳಲ್ಲಿ ಒಂದಾದ, ನೈಜೀರಿಯದಲ್ಲಿ. 00:06:39.000 --> 00:06:42.000 ಒಂದು ವಿಷಯವೆಂದರೆ, ನೀವು ನೈಜೀರಿಯದಲ್ಲಿಲ್ಲದಿದ್ದರೆ ನೀವು ಆಫ್ರಿಕಾದಲ್ಲಿದ್ದಂತಲ್ಲ. 00:06:42.000 --> 00:06:43.000 ನಿಮಗೆ ಅದನ್ನು ನಾನು ಹೇಳಬೇಕು. 00:06:43.000 --> 00:06:44.000 (ನಗು) 00:06:44.000 --> 00:06:46.000 ನಾಲ್ಕು ಜನ ಸಬ್-ಸಹಾರಾ ಆಫ್ರಿಕನ್ ರಲ್ಲಿ ಒಬ್ಬ ನೈಜೀರಿಯನ್ ಆಗಿರುತ್ತಾನೆ, 00:06:48.000 --> 00:06:53.000 ಹಾಗೂ ಇಲ್ಲಿ 140 ಮಿಲಿಯನ್ ಚುರುಕಾದ ಜನರಿದ್ದಾರೆ – ಅರಾಜಕ ಜನ -- 00:06:54.000 --> 00:06:58.000 ಆದರೆ ಬಹಳ ಸ್ವಾರಸ್ಯಕರ ಜನ. ನಿಮಗೆ ಖಂಡಿತವಾಗಿಯೂ ಬೇಸರವಾಗುವುದಿಲ್ಲ. 00:06:58.000 --> 00:06:59.000 (ನಗು). NOTE Paragraph 00:06:59.000 --> 00:07:01.000 ನಾವು ಮಾಡಲು ಪ್ರಾರಂಭಿಸಿದ್ದೇನೆಂದರೆ ನಾವೇ 00:07:01.000 --> 00:07:03.000 ಮುನ್ನುಗ್ಗಬೇಕು ಮತ್ತು ಸುಧಾರಣೆ ತರಬೇಕು ಎಂಬ ತಿಳಿವಳಿಕೆ ತಂದುಕೊಂಡದ್ದು. 00:07:04.000 --> 00:07:06.000 ಹಾಗೂ ಒಬ್ಬ ನಾಯಕನ ಬೆಂಬಲದೊಂದಿಗೆ 00:07:06.000 --> 00:07:09.000 ಈ ಸಮಯದಲ್ಲಿ ಸುಧಾರಣೆ ತರುವ ಇಚ್ಛೆಯುಳ್ಳವನು ದೊರೆತರೆ 00:07:09.000 --> 00:07:11.000 ನಾವು ಒಂದು ಸಮಗ್ರ ಸುಧಾರಣೆ ಯೋಜನೆಯನ್ನು ಮುಂದಿಡುತ್ತೇವೆ 00:07:11.000 --> 00:07:13.000 ಇದನ್ನು ನಾವೇ ಅಭಿವೃದ್ಧಿಪಡಿಸಿದ್ದೇವೆ. 00:07:13.000 --> 00:07:16.000 ಇಂಟರ್ ನ್ಯಾಶನಲ್ ಮಾನೀಟರಿ ಫಂಡ್ ಅಲ್ಲ. ವಿಶ್ವ ಬ್ಯಾಂಕ್ ಅಲ್ಲ, 00:07:16.000 --> 00:07:19.000 ಇಲ್ಲಿ ನಾನು 21 ವರ್ಷ ಕೆಲಸ ಮಾಡಿದೆ ಹಾಗೂ ಅದರ ಉಪಾಧ್ಯಕ್ಷ ಸ್ಥಾನಕ್ಕೆ ಬೆಳೆದೆ. 00:07:20.000 --> 00:07:22.000 ನಿಮಗಾಗಿ ಯಾರೂ ಏನನ್ನೂ ಮಾಡಲಾರರು. ನಿಮಗೆ ನೀವೆ ಮಾಡಿಕೊಳ್ಳಬೇಕು. NOTE Paragraph 00:07:22.000 --> 00:07:26.000 ನಾವು ಒಂದು ಯೋಜನೆ ಸಿದ್ಧಪಡಿಸಿದ್ದೇವೆ, ಅದರಲ್ಲಿ, ಒಂದು: 00:07:26.000 --> 00:07:30.000 ರಾಜ್ಯವನ್ನು ವ್ಯಾಪಾರದಿಂದ ಕಿತ್ತುಹಾಕಿ – ವ್ಯಾಪಾರದಲ್ಲಿ ಅದು ಇರಬೇಕಿಲ್ಲ. 00:07:30.000 --> 00:07:32.000 ರಾಜ್ಯ ವ್ಯಾಪಾರದಲ್ಲಿ ವಸ್ತು ಮತ್ತು 00:07:32.000 --> 00:07:33.000 ಸೇವೆಗಳನ್ನು ಉತ್ಪಾದನೆ ಮಾಡುವ ಕೆಲಸದಲ್ಲಿರಕೂಡದು 00:07:33.000 --> 00:07:36.000 ಏಕೆಂದರೆ, ಅದು ಅಸಮರ್ಥ ಮತ್ತು ಅನರ್ಹ. 00:07:36.000 --> 00:07:40.000 ಹಾಗಾಗಿ ನಾವು ನಮ್ಮ ಬಹಳಷ್ಟು ಘಟಕಗಳನ್ನು ಖಾಸಗೀಕರಣ ಮಾಡಲು ನಿರ್ಧರಿಸಿದೆವು. 00:07:40.000 --> 00:07:44.000 (ಚಪ್ಪಾಳೆ). 00:07:45.000 --> 00:07:49.000 ನಾವು – ಇದರ ಫಲವಾಗಿ, ನಮ್ಮ ಹಲವಾರು ಮಾರುಕಟ್ಟೆಗಳನ್ನು ಮುಕ್ತ ಮಾಡಲು ನಿರ್ಧರಿಸಿದೆವು. 00:07:49.000 --> 00:07:52.000 ನೀವು ನಂಬುತ್ತೀರಾ, ಈ ಸುಧಾರಣೆಗೆ ಮೊದಲು -- 00:07:52.000 --> 00:07:56.000 2003 ಅಂತ್ಯದಲ್ಲಿ ಪ್ರಾರಂಭವಾದದ್ದು, ನಾನು ವಾಷಿಂಗ್ ಟನ್ ಬಿಟ್ಟು 00:07:56.000 --> 00:07:58.000 ವಿತ್ತ ಮಂತ್ರಿ ಪದವಿ ಸ್ವೀಕರಿಸಿದಾಗ -- 00:08:00.000 --> 00:08:04.000 ನಮ್ಮಲ್ಲಿ ಒಂದು ಟೆಲಿಕಮ್ಯೂನಿಕೇಶನ್ ಕಂಪನಿ ಇತ್ತು ಹಾಗೂ ಅದು 00:08:04.000 --> 00:08:09.000 ತನ್ನ 30-ವರ್ಷದ ಚರಿತ್ರೆಯಲ್ಲಿ ಕೇವಲ 4,500 ಲ್ಯಾಂಡ್ ಲೈನ್ ಗಳನ್ನು ಅಭಿವೃದ್ಧಿಪಡಿಸಿತ್ತು. 00:08:09.000 --> 00:08:11.000 (ನಗು). NOTE Paragraph 00:08:11.000 --> 00:08:14.000 ನನ್ನ ದೇಶದಲ್ಲಿ ಒಂದು ದೂರವಾಣಿ ಹೊಂದುವುದೇ ಒಂದು ದುಬಾರಿ ಕೆಲಸ. 00:08:14.000 --> 00:08:16.000 ನಿಮಗೆ ಸಿಗುತ್ತಿರಲಿಲ್ಲ. ನೀವು ಲಂಚ ಕೊಡಬೇಕಿತ್ತು. 00:08:16.000 --> 00:08:18.000 ನೀವು ಒಂದು ಟೆಲಿಫೋನ್ ಹೊಂದಲು ಏನೆಲ್ಲಾ ಮಾಡಬೇಕಿತ್ತು. 00:08:18.000 --> 00:08:21.000 ಅಧ್ಯಕ್ಷರಾದ ಒಬೇಸೇನಿಯೊ ಬೆಂಬಲನೀಡಿ ಮತ್ತು ಪ್ರಾರಂಭಿಸಿದ 00:08:21.000 --> 00:08:25.000 ಟೆಲಿಕಮ್ಯೂನಿಕೇಶನ್ ವಲಯವನ್ನು ಮುಕ್ತಗೊಳಿಸಿದ ನಂತರ♪ 00:08:26.000 --> 00:08:34.000 ನಾವು 4,500 ಲ್ಯಾಂಡ್ ಲೈನ್ ಗಳಿಂದ 32 ಮಿಲಿಯನ್ GSM ಲೈನ್ ಗಳಿಗೆ ತಲುಪಿದ್ದೇವೆ ಮತ್ತು ಇದು ಇನ್ನೂ ಹೆಚ್ಚುತ್ತಲೇ ಇದೆ. 00:08:34.000 --> 00:08:39.000 ನೈಜೀರಿಯ ಟೆಲಿಕಾಂ ಮಾರುಕಟ್ಟೆ ವಿಶ್ವದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಎರಡನೆಯದು, 00:08:39.000 --> 00:08:44.000 ಚೀನಾ ನಂತರ. ನಾವು ವರ್ಷಕ್ಕೆ ಸುಮಾರು $1 ಬಿಲಿಯನ್ ಹೂಡಿಕೆಯನ್ನು 00:08:44.000 --> 00:08:50.000 ಟೆಲಿಕಾಂ ಕ್ಷೇತ್ರದಲ್ಲಿ ಪಡೆಯುತ್ತಿದ್ದೇವೆ. ಹಾಗೂ, ಇದು ಕೆಲವು ಚುರುಕು ವ್ಯಕ್ತಿಗಳನ್ನು ಬಿಟ್ಟರೆ ಬೇರಾರಿಗೂ ಗೊತ್ತಿಲ್ಲ. 00:08:50.000 --> 00:08:53.000 (ನಗು) NOTE Paragraph 00:08:53.000 --> 00:08:57.000 ಮೊದಲು ಕಾಲಿಟ್ಟ ಬುದ್ಧಿವಂತ 00:08:57.000 --> 00:08:59.000 ಕಂಪನಿ ಎಂದರೆ ದಕ್ಷಿಣ ಆಫ್ರಿಕಾದ MTN ಕಂಪನಿ. 00:08:59.000 --> 00:09:03.000 ನಾನು ಹಣಕಾಸು ಮಂತ್ರಿಯಾಗಿದ್ದ ಮೂರು ವರ್ಷಗಳಲ್ಲಿ 00:09:03.000 --> 00:09:06.000 ಅವರು ವರ್ಷಕ್ಕೆ ಸರಾಸರಿ $360 ಮಿಲಿಯನ್ ಲಾಭ ಮಾಡಿದರು. 00:09:08.000 --> 00:09:14.000 $360 ಮಿಲಿಯನ್ ಒಂದು ಮಾರುಕಟ್ಟೆಯಲ್ಲಿ – ಒಂದು ದೇಶದಲ್ಲಿ,ಅದೂ ಒಂದು ಬಡ ದೇಶದಲ್ಲಿ, 00:09:14.000 --> 00:09:18.000 ಸರಾಸರಿ ತಲಾಆದಾಯ $500 ಕ್ಕೂ ಕಡಿಮೆ ಇರುವ ದೇಶದಲ್ಲಿ. 00:09:19.000 --> 00:09:21.000 ಹಾಗಾಗಿ ಇಲ್ಲಿ ಮಾರುಕಟ್ಟೆ ಇದೆ. 00:09:21.000 --> 00:09:24.000 ಈ ವಿಷಯವನ್ನು ಅವರು ಮುಚ್ಚಿಟ್ಟರು, ಆದರೆ ಇತರರಿಗೆ ಬೇಗನೇ ತಿಳಿಯಿತು. 00:09:25.000 --> 00:09:28.000 ನೈಜೀರಿಯನ್ನರೇ 00:09:28.000 --> 00:09:30.000 ಕೆಲವು ವೈರ್ ಲೆಸ್ ಟೆಲಿಕಮ್ಯೂನಿಕೇಶನ್ ಕಂಪನಿಗಳನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಿದರು♪ 00:09:30.000 --> 00:09:32.000 ಹಾಗೂ ಮೂರು ಅಥವಾ ನಾಲ್ಕು ಇತರ ಕಂಪನಿಗಳು ಬಂದುವು. 00:09:32.000 --> 00:09:35.000 ಆದರೆ, ಇಲ್ಲಿ ಬಹುದೊಡ್ಡ ಮಾರುಕಟ್ಟೆಯಿದೆ, 00:09:35.000 --> 00:09:38.000 ಹಾಗೂ ಜನಗಳಿಗೆ ಇದರ ಬಗ್ಗೆ ಗೊತ್ತಿಲ್ಲ, ಅಥವಾ ಅವರಿಗೆ ತಿಳಿದುಕೊಳ್ಳುವುದು ಬೇಕಿಲ್ಲ. 00:09:40.000 --> 00:09:42.000 ಹಾಗಾಗಿ ನಾವು ಮಾಡಿದ ಒಂದು ಕೆಲಸವೆಂದರೆ ಖಾಸಗೀಕರಣ. NOTE Paragraph 00:09:43.000 --> 00:09:49.000 ನಾವು ಮಾಡಿದ ಇನ್ನೊಂದು ಕೆಲಸವೆಂದರೆ ನಮ್ಮ ಹಣಕಾಸು ನಿರ್ವಹಣೆಯನ್ನು ಉತ್ತಮವಾಗಿ ಮಾಡಿದ್ದು. 00:09:50.000 --> 00:09:52.000 ಏಕೆಂದರೆ ಯಾರೋ ನಿಮಗೆ ಸಹಾಯಮಾಡಲಾರರು ಮತ್ತು ಬೆಂಬಲಿಸಲಾರರು 00:09:53.000 --> 00:09:56.000 ನಿಮ್ಮ ಹಣಕಾಸು ಪರಿಸ್ಥಿತಿಯನ್ನು ನೀವು ಚೆನ್ನಾಗಿ ನಿಭಾಯಿಸದಿದ್ದರೆ. 00:09:56.000 --> 00:10:00.000 ಹಾಗೂ, ನೈಜೀರಿಯ, ತೈಲ ವಲಯದೊಂದಿಗೆ, ಪ್ರಸಿದ್ಧಿ ಪಡೆದಿದೆ, 00:10:00.000 --> 00:10:05.000 ಲಂಚಕೋರವೆಂತಲೂ ಮತ್ತು ತಮ್ಮ ಹಣಕಾಸನ್ನು ಸರಿಯಾಗಿ ನಿರ್ವಹಿಸುವುದಿಲ್ಲವೆಂದು. 00:10:05.000 --> 00:10:09.000 ಹಾಗಾಗಿ, ನಾವೇನು ಮಾಡಲು ಪ್ರಯತ್ನಿಸಿದೆವು? ನಾವು ಒಂದು ಹಣಕಾಸು ನಿಯಮವನ್ನು ಪ್ರವೇಶಪಡಿಸಿದೆವು 00:10:10.000 --> 00:10:12.000 ಅದು ನಮ್ಮ ಆಯವ್ಯಯವನ್ನು ತೈಲ-ಬೆಲೆಯಿಂದ ಬೇರ್ಪಡಿಸಿತು. 00:10:12.000 --> 00:10:16.000 ಇದಕ್ಕೆ ಮೊದಲು ನಮ್ಮ ಆಯವ್ಯಯ ಲೆಕ್ಕಾಚಾರ ನಾವು ತರುವ ತೈಲದ ಮೇಲೆ ಮಾಡುತ್ತಿದ್ದೆವು, 00:10:16.000 --> 00:10:21.000 ಏಕೆಂದರೆ ತೈಲ ಬಹು ದೊಡ್ಡ, ಹೆಚ್ಚು ಹಣ-ಸಂಪಾದಿಸುವ ವಲಯ 00:10:21.000 --> 00:10:24.000 ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿ: ನಮ್ಮ ಹುಟ್ಟುವಳಿಯಲ್ಲಿ 70% ತೈಲದಿಂದ ಬರುತ್ತಿತ್ತು. 00:10:24.000 --> 00:10:28.000 ಅದನ್ನು ನಾವು ಬೇರೆ ಮಾಡಿದೆವು, ಒಂದು ಸಾರಿ ಇದನ್ನು ಮಾಡಿದ ನಂತರ ನಮ್ಮ ಆಯವ್ಯಯವನ್ನು 00:10:28.000 --> 00:10:31.000 ತೈಲ ಬೆಲೆಗಿಂತ ಸ್ವಲ್ಪ ಕಡಿಮೆ ಬೆಲೆಯಲ್ಲಿ ಲೆಕ್ಕಾಚಾರ ಮಾಡಲು ಪ್ರಾರಂಭಿಸಿದೆವು 00:10:31.000 --> 00:10:35.000 ಹಾಗೂ ಆ ಬೆಲೆಗಿಂತ ಮೇಲ್ಪಟ್ಟದ್ದನ್ನು ಉಳಿತಾಯ ಮಾಡಿದೆವು. 00:10:36.000 --> 00:10:39.000 ಅದು ಯಶಸ್ವಿಯಾಗುತ್ತದೆಂದು ನಮಗೆ ತಿಳಿದಿರಲಿಲ್ಲ, ಅದು ಬಹಳ ವಿವಾದಾತ್ಮಕವಾಗಿತ್ತು. 00:10:39.000 --> 00:10:42.000 ಆದರೆ ಅದು ತತ್ ಕ್ಷಣ ಏನು ಮಾಡಿತೆಂದರೆ ನಮ್ಮ 00:10:42.000 --> 00:10:45.000 ಆರ್ಥಿಕ ಅಭಿವೃದ್ದಿ ಲೆಕ್ಕಾಚಾರದಲ್ಲಿದ್ದ ಚಂಚಲತೆ -- 00:10:45.000 --> 00:10:49.000 ಅದರಲ್ಲಿ, ತೈಲ ಬೆಲೆಗಳಲ್ಲಿ ಬಹಳ ಹೆಚ್ಚಾಗಿದ್ದರೂ ನಾವು ತ್ವರಿತಗತಿಯಲ್ಲಿ ಬೆಳೆಯುತ್ತಿದ್ದೆವು. 00:10:49.000 --> 00:10:51.000 ಅವು ಕೆಳಗೆ ಬಿದ್ದರೆ, ನಾವೂ ಕೆಳಕ್ಕೆ ಬೀಳುತ್ತಿದ್ದೆವು. 00:10:51.000 --> 00:10:55.000 ಹಾಗೂ, ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿ ನಾವು ಏನನ್ನೂ ಪಾವತಿಸಲಾರದಾಗಿದ್ದೆವು, ವೇತನಗಳನ್ನು ಕೂಡ. 00:10:56.000 --> 00:11:00.000 ಅದು ನವಿರಾಯಿತು.ನಾವು ಉಳಿತಾಯ ಮಾಡುವಂತಾಯಿತು, ನಾನು ಬಿಡುವ ಮೊದಲು, 00:11:00.000 --> 00:11:06.000 $27 ಬಿಲಿಯನ್. ಆದರೆ -- ಇದು ನಮ್ಮ ಆಪದ್ಧನಕ್ಕೆ ಹೋಗುತ್ತಿತ್ತು -- 00:11:06.000 --> 00:11:10.000 ನಾನು 2003ರಲ್ಲಿ ಬಂದಾಗ, ನಾವು $7 ಬಿಲಿಯನ್ ಆಪದ್ಧನ ಹೊಂದಿದ್ದೆವು. 00:11:11.000 --> 00:11:14.000 ನಾನು ಬಿಡುವ ಸಮಯಕ್ಕೆ, ನಾವು ಇದನ್ನು ಹೆಚ್ಚು ಕಡಿಮೆ $30 ಬಿಲಿಯನ್ ಗೆ ಏರಿಸಿದ್ದೆವು. ಹಾಗೂ 00:11:14.000 --> 00:11:17.000 ಈಗ ನಾವು ಮಾತಾಡುತ್ತಿರುವ ಸಮಯದಲ್ಲಿಅದು ಸುಮಾರು $40 ಬಿಲಿಯನ್ ನಷ್ಟಾಗಿದೆ. 00:11:18.000 --> 00:11:22.000 ಅದು ಹಣಕಾಸು ನಿರ್ವಹಣೆ ಸರಿಯಾಗಿ ನಿರ್ವಹಿಸಿರುವುದರಿಂದ. 00:11:23.000 --> 00:11:26.000 ಅದು ನಮ್ಮ ಆರ್ಥಿಕ ವ್ಯವಸ್ಥೆಯನ್ನು ಹಿಡಿದಿಡುತ್ತದೆ, ಅದನ್ನು ಸದೃಢವಾಗಿ ಮಾಡುತ್ತದೆ. NOTE Paragraph 00:11:26.000 --> 00:11:29.000 ನಮ್ಮ ವಿನಿಮಯ ದರ ಯಾವಾಗಲೂ ಏರುಪೇರಾಗುತ್ತಿತ್ತು 00:11:29.000 --> 00:11:33.000 ಈಗ ಸುಮಾರಾಗಿ ದೃಢವಾಗಿದೆ ಮತ್ತು ಸರಿಯಾಗಿ ನಿರ್ವಹಿಸಲಾಗುತ್ತಿದೆ, ಹಾಗಾಗಿ ವ್ಯಾಪಾರಸ್ಥರು 00:11:33.000 --> 00:11:38.000 ಅರ್ಥ ವ್ಯವಸ್ಥೆಯಲ್ಲಿ ಬೆಲೆಗಳನ್ನು ಊಹಿಸಿಕೊಳ್ಳಬಹುದಾಗಿದೆ. 00:11:40.000 --> 00:11:44.000 ನಾವು ಹಣದುಬ್ಬರವನ್ನು ಶೇಕಡ 28 ರಿಂದ ಸುಮಾರು ಶೇಕಡ 11 ಕ್ಕೆ ಇಳಿಸಿದೆವು. 00:11:46.000 --> 00:11:52.000 ಹಾಗೂ ಹಿಂದಿನ ದಶಕದಲ್ಲಿ ಸರಾಸರಿ ಶೇಕಡ 2.3 ಇದ್ದ GDP ಏರಿಕೆಯಾಗುವಂತೆ ಮಾಡಿ 00:11:52.000 --> 00:11:55.000 ಅದು ಈಗ ಶೆಕಡ 6.5 ಆಗಿದೆ. 00:11:56.000 --> 00:11:59.000 ಹಾಗಾಗಿ, ನಾವು ಮಾಡಲು ಸಾಧ್ಯವಾದ ಎಲ್ಲ ಬದಲಾವಣೆಗಳು ಮತ್ತು ಸುಧಾರಣೆಗಳು 00:11:59.000 --> 00:12:02.000 ಆರ್ಥಿಕ ವ್ಯವಸ್ಥೆಯಲ್ಲಿ ಅಳತೆಮಾಡಬಹುದಾದಂಥ ಫಲಿತಾಂಶ ತೋರಿಸಿವೆ. NOTE Paragraph 00:12:02.000 --> 00:12:06.000 ಹಾಗೂ ಇನ್ನೂ ಮುಖ್ಯ ಅಂಶವೆಂದರೆ, ನಾವು ತೈಲದಿಂದ ದೂರ ಉಳಿಯಬೇಕೆಂದಿರುವುದರಿಂದ 00:12:06.000 --> 00:12:08.000 ಹಾಗೂ ಬೇರೆ ಮಾರ್ಗ ಆಯ್ಕೆಮಾಡಲಿರುವುದರಿಂದ -- ಹಾಗೂ ಸಾಕಷ್ಟು ಅವಕಾಶಗಳಿವೆ 00:12:08.000 --> 00:12:11.000 ಇಂಥ ಒಂದು ದೊಡ್ಡ ದೇಶದಲ್ಲಿ ,ಆಫ್ರಿಕಾದ 00:12:13.000 --> 00:12:16.000 ಹಲವು ದೇಶಗಳಲ್ಲಿರುವಂತೆ-ಗಮನಾರ್ಹ ಬೆಳವಣಿಗೆಯಾಯಿತು. 00:12:16.000 --> 00:12:19.000 ತೈಲ ವಲಯದಿಂದ ಉಂಟಾದದ್ದಲ್ಲ, ತೈಲೇತರ ವಲಯದಿಂದ. 00:12:19.000 --> 00:12:22.000 ಕೃಷಿ ಶೇಕಡ 8 ಕ್ಕೂ ಮಿಗಿಲಾಗಿ ಬೆಳೆಯಿತು. 00:12:22.000 --> 00:12:26.000 ಟೆಲಿಕಾಂ ವಲಯ ಬೆಳೆದಂತೆ, ಗೃಹ ನಿರ್ಮಾಣ ಮತ್ತು ಕಟ್ಟಡ ನಿರ್ಮಾಣ, 00:12:26.000 --> 00:12:31.000 ಹಾಗೆಯೇ ನಾನು ಹೇಳುತ್ತಲೇ ಇರಬಹುದು. ಹಾಗೂ ಇದನ್ನು ನಿಮಗೆ ನಿರೂಪಿಸಲು 00:12:31.000 --> 00:12:33.000 ಒಂದು ಸಾರಿ ನೀವು ವಿಸ್ತೃತ ಆರ್ಥಿಕ ವ್ಯವಸ್ಥೆಯನ್ನು ಹಿಡಿತಕ್ಕೆ ತೆಗೆದುಕೊಂಡರೆ, 00:12:33.000 --> 00:12:37.000 ವಿವಿಧ ವಲಯಗಳಲ್ಲಿರುವ ಅವಕಾಶಗಳು ಹೇರಳ. NOTE Paragraph 00:12:38.000 --> 00:12:41.000 ನಾನು ಹೇಳಿದಂತೆ, ನಮಗೆ ಕೃಷಿ ವಲಯದಲ್ಲಿ ಅವಕಾಶಗಳಿವೆ. 00:12:41.000 --> 00:12:45.000 ನಮಗೆ ಘನ ಖನಿಜಗಳಲ್ಲಿ ಅವಕಾಶಗಳಿವೆ. ನಮ್ಮಲ್ಲಿ ಸಾಕಷ್ಟು ಖನಿಜಗಳಿವೆ 00:12:45.000 --> 00:12:48.000 ಅವನ್ನು ಯಾರೊಬ್ಬರೂ ಪರಿಶೋಧಿಸಿಲ್ಲ ಅಥವಾ ಹೂಡಿಕೆ ಮಾಡಿಲ್ಲ. ನಮ್ಮ ತಿಳಿವಳಿಕೆಗೆ ಬಂದದ್ದು 00:12:48.000 --> 00:12:51.000 ಇದನ್ನು ಸಾಧ್ಯವಾಗಿಸಲು ಸೂಕ್ತ ಕಾನೂನುಗಳು ಇಲ್ಲದೆ, 00:12:51.000 --> 00:12:54.000 ಅದು ಸಂಭವಿಸದು. ಹಾಗಾಗಿ ನಮ್ಮಲ್ಲಿ ಗಣಿ ನಿಯಮ ಇದೆ 00:12:54.000 --> 00:12:57.000 ಅದನ್ನು ವಿಶ್ವದ ಅತ್ಯುತ್ತಮ ನಿಯಮಗಳೊಂದಿಗೆ ಹೋಲಿಸಬಹುದಾಗಿದೆ. 00:12:58.000 --> 00:13:00.000 ಗೃಹನಿರ್ಮಾಣ ಮತ್ತು ರೀಯಲ್ ಎಸ್ಟೇಟ್ ಅವಕಾಶಗಳು ನಮ್ಮಲ್ಲಿವೆ. 00:13:00.000 --> 00:13:03.000 140 ಮಿಲಿಯನ್ ಜನಸಂಖ್ಯೆಯಿರುವ ಒಂದು ರಾಷ್ಟ್ರದಲ್ಲಿ ಏನೂ ಇರಲಿಲ್ಲ-- 00:13:04.000 --> 00:13:09.000 ನಿಮಗೆ ತಿಳಿದಿರುವಂತೆ ಶಾಪಿಂಗ್ ಮಾಲ್ ಕೂಡ ಇರಲಿಲ್ಲ. 00:13:10.000 --> 00:13:13.000 ಇದು ಯಾರಿಗೋ ದೊರಕಿದ ಹೂಡಿಕೆ ಅವಕಾಶ 00:13:13.000 --> 00:13:15.000 ಅದು ಜನರ ಕಲ್ಪನೆಯನ್ನು ರೋಮಾಂಚನಗೊಳಿಸಿತು. 00:13:16.000 --> 00:13:19.000 ಈಗ, ನಾವು ಯಾವ ಸ್ಥಿತಿಯಲ್ಲಿದ್ದೇವೆಂದರೆ ಈ ಮಾಲ್ ಗಳಲ್ಲಿ ವ್ಯಾಪಾರ 00:13:19.000 --> 00:13:22.000 ಅವರು ಅಂದಾಜು ಮಾಡಿದ್ದಕ್ಕಿಂತ ನಾಲ್ಕು ಪಟ್ಟು ಹೆಚ್ಚಾಗಿದೆ. NOTE Paragraph 00:13:23.000 --> 00:13:26.000 ಹಾಗೆಯೇ, ದೊಡ್ಡ ಎತ್ತಿನಲ್ಲಿ ನಿರ್ಮಾಣ, ರೀಯಲ್ ಎಸ್ಟೇಟ್ 00:13:26.000 --> 00:13:28.000 ಮಾರ್ಟ್ ಗೇಜ್ ಮಾರುಕಟ್ಟೆಗಳಲ್ಲಿ ಅವಕಾಶಗಳು. ಹಣಕಾಸು ಸೇವೆಗಳು: 00:13:29.000 --> 00:13:33.000 ನಾವು 89 ಬ್ಯಾಂಕ್ ಗಳನ್ನು ಹೊಂದಿದ್ದೆವು. ತುಂಬಾ ದೊಡ್ಡ ಸಂಖ್ಯೆ, ನಡೆಸಬೇಕಾದ ವ್ಯವಹಾರ ನಡೆಯುತ್ತಿರಲಿಲ್ಲ. 00:13:33.000 --> 00:13:37.000 ಅವುಗಳನ್ನು ಒಂದುಗೂಡಿಸಿ 89 ರಿಂದ 25 ಮಾಡಿದೆವು 00:13:37.000 --> 00:13:42.000 ಅವು ತಮ್ಮ ಬಂಡವಾಳ ಹೆಚ್ಚಿಸಿಕೊಳ್ಳಲು ಹೇಳಿದೆವು – ಷೇರು ಬಂಡವಾಳ. 00:13:42.000 --> 00:13:47.000 ಹಾಗೂ ಅದು ಸುಮಾರು $25 ಮಿಲಿಯನ್ ನಿಂದ $150 ಮಿಲಿಯನ್ ಗೆ ಏರಿಕೆಯಾಯಿತು. 00:13:47.000 --> 00:13:51.000 ಬ್ಯಾಂಕುಗಳು – ಈ ಬ್ಯಾಂಕುಗಳು ಈಗ ಕ್ರೋಢೀಕರಿಸಿವೆ, ಹಾಗೂ ಬ್ಯಾಂಕಿಂಗ್ 00:13:51.000 --> 00:13:55.000 ವ್ಯವಸ್ಥೆಯನ್ನು ಬಲಪಡಿಸಿದ್ದರಿಂದ ಹೊರಗಿನಿಂದ ಸಾಕಷ್ಟು ಹೂಡಿಕೆಗೆ ಆಕರ್ಶಣೆ ದೊರಕಿತು. 00:13:55.000 --> 00:13:59.000 U.K. ಯ ಬಾರ್ ಕ್ಲೇಯ್ಸ್ ಬ್ಯಾಂಕ್ 500 ಮಿಲಿಯನ್ ತರುತ್ತಿದೆ. 00:13:59.000 --> 00:14:03.000 ಸ್ಟಾಂಡರ್ಡ್ ಚಾರ್ಟರ್ಡ್ 140 ಮಿಲಿಯನ್ ತಂದಿದೆ. 00:14:03.000 --> 00:14:06.000 ಹಾಗೂ ನಾನು ಹೀಗೆ ಹೇಳುತ್ತಲೇ ಇರಬಹುದು. ಡಾಲರ್ ಗಳು, ವ್ಯವಸ್ಥೆಯೊಳಕ್ಕೆ ಬರುತ್ತಲೇ ಇದೆ. NOTE Paragraph 00:14:06.000 --> 00:14:08.000 ನಾವು ಇದೇ ಕೆಲಸವನ್ನು ವಿಮೆ ವಲಯದಲ್ಲೂ ಮಾಡುತ್ತಿದ್ದೇವೆ. 00:14:08.000 --> 00:14:11.000 ಹಾಗಾಗಿ, ಹಣಕಾಸು ಸೇವೆಗಳಲ್ಲಿ ವಿಪುಲ ಅವಕಾಶಗಳಿವೆ. 00:14:11.000 --> 00:14:17.000 ಪ್ರವಾಸೋದ್ಯಮ ಕ್ಷೇತ್ರದಲ್ಲಿ, ಹಲವು ಆಫ್ರಿಕನ್ ರಾಷ್ಟ್ರಗಳಲ್ಲಿ ಹೇರಳ ಅವಕಾಶಗಳಿವೆ. 00:14:17.000 --> 00:14:20.000 ಬಹಳ ಜನಕ್ಕೆ ಪಶ್ಚಿಮ ಆಫ್ರಿಕಾ ಗೊತ್ತಿರುವುದೇ ಅದರಿಂದ: 00:14:21.000 --> 00:14:24.000 ವನ್ಯಮೃಗಗಳು, ಆನೆಗಳು ಹಾಗೂ ಇನ್ನೂ ಮುಂತಾದುವು. 00:14:24.000 --> 00:14:26.000 ಆದರೆ ಪ್ರವಾಸೋದ್ಯಮವನ್ನು ಯಾವ ರೀತಿ ನಿರ್ವಹಿಸಬೇಕೆಂದರೆ 00:14:26.000 --> 00:14:29.000 ಅದು ನಿಜವಾಗಿಯೂ ಜನರಿಗೆ ಸಹಾಯವಾಗುವಂತಿರುವುದು ಮುಖ್ಯ. NOTE Paragraph 00:14:30.000 --> 00:14:33.000 ಹಾಗಾಗಿ, ನಾನೇನು ಹೇಳಬೇಕೆಂದಿದ್ದೇನೆ? ನಾನು ಹೇಳಲು ಪ್ರಯತ್ನಿಸುತ್ತಿರುವುದು 00:14:33.000 --> 00:14:36.000 ಈ ಖಂಡದಲ್ಲಿ ಒಂದು ಹೊಸ ಅಲೆ ಎದ್ದಿದೆ. 00:14:36.000 --> 00:14:41.000 ಒಂದು ಮುಕ್ತ ಮತ್ತು ಪ್ರಜಾಪ್ರಭುತ್ವವಾದದ ಹೊಸ ಅಲೆ, 2000 ದಿಂದ, 00:14:41.000 --> 00:14:43.000 ಮೂರನೇ ಎರಡರಷ್ಟು ಆಫ್ರಿಕನ್ ದೇಶಗಳು 00:14:43.000 --> 00:14:45.000 ಬಹು-ಪಕ್ಷೀಯ ಪ್ರಜಾಪ್ರಭುತ್ವ ಚುನಾವಣೆಗಳನ್ನು ಹೊಂದಿದ್ದವು. 00:14:46.000 --> 00:14:49.000 ಅವುಗಳಲ್ಲಿ ಎಲ್ಲವೂ ದೋಷರಹಿತವಾಗಿರಲಿಲ್ಲ, ಇರುವುದೂ ಇಲ್ಲ, 00:14:49.000 --> 00:14:51.000 ಆದರೆ ಪ್ರವೃತ್ತಿ ಸ್ಪಷ್ಟವಾಗಿತ್ತು. 00:14:51.000 --> 00:14:55.000 ನಾನು ಹೇಳಲು ಪ್ರಯತ್ನಿಸುತ್ತಿರುವುದೇನೆಂದರೆ ಮೂರು ವರ್ಷಗಳಿಂದ, 00:14:55.000 --> 00:14:58.000 ಈ ಖಂಡದ ಸರಾಸರಿ ಬೆಳವಣಿಗೆ ಉತ್ತಮಗೊಂಡು 00:14:58.000 --> 00:15:02.000 ವರ್ಷಕ್ಕೆ ಸುಮಾರು ಶೇಕಡ 2.5 ರಿಂದ ಸುಮಾರು ಶೇಕಡ 5 ಕ್ಕೆ ಏರಿದೆ. 00:15:02.000 --> 00:15:06.000 ಇದು ಹಲವು OECD ದೇಶಗಳ ಪ್ರದರ್ಶನಕ್ಕಿಂತ ಉತ್ತಮವಾಗಿದೆ. 00:15:07.000 --> 00:15:11.000 ಆದ್ದರಿಂದ ಬದಲಾವಣೆ ಸಂಭವಿಸುತ್ತಿದೆ ಎನ್ನುವುದು ಸ್ಪಷ್ಟವಾಗಿದೆ. NOTE Paragraph 00:15:11.000 --> 00:15:13.000 ಖಂಡದಲ್ಲಿ ವಿವಾದಗಳು ಕಡಿಮೆಯಾಗಿವೆ; 00:15:14.000 --> 00:15:16.000 ಒಂದು ದಶಕದ ಹಿಂದೆ ಸುಮಾರು 12 ವಿವಾದಗಳಿಂದ, 00:15:16.000 --> 00:15:18.000 ಈಗ ನಾವು ಮೂರು ಅಥವಾ ನಾಲ್ಕು ವಿವಾದಗಳಿಗೆ ಇಳಿದಿದ್ದೇವೆ. 00:15:18.000 --> 00:15:21.000 ಇವುಗಳಲ್ಲಿ ಭಯಂಕರವಾದವುಗಳಲ್ಲಿ ಒಂದು, ನಿಮಗೆ ತಿಳಿದಂತೆ, ದರ್ಫುರ್. 00:15:21.000 --> 00:15:24.000 ಹಾಗೂ, ನಿಮಗೆ ತಿಳಿದೇ ಇದೆ, ನೆರೆಹೊರೆ ಪ್ರಭಾವ, ಅಂದರೆ 00:15:24.000 --> 00:15:26.000 ಖಂಡದ ಒಂದು ಭಾಗದಲ್ಲಿ ಏನಾದರೂ ಸಂಭವಿಸಿದರೆ, 00:15:26.000 --> 00:15:29.000 ಅದು ಇಡೀ ಖಂಡಕ್ಕೇ ವ್ಯಾಪಿಸಿದಂತೆ ಕಾಣುತ್ತದೆ. 00:15:29.000 --> 00:15:32.000 ನೀವು ಒಂದು ವಿಷಯ ತಿಳಿದುಕೊಳ್ಳಬೇಕು, ಈ ಖಂಡ -- 00:15:32.000 --> 00:15:38.000 ಹಲವು ರಾಷ್ಟ್ರಗಳನ್ನು ಒಳಗೊಂಡಿರುವ ಖಂಡ, ಒಂದು ರಾಷ್ಟ್ರವಲ್ಲ. 00:15:38.000 --> 00:15:40.000 ಹಾಗೂ ನಾವು ಮೂರು ಅಥವಾ ನಾಲ್ಕು ವಿವಾದಗಳಿಗೆ ಇಳಿದಿದ್ದರೆ, 00:15:40.000 --> 00:15:43.000 ಇದರ ಅರ್ಥ ಹೂಡಿಕೆ ಮಾಡಲು ಹೇರಳವಾದ ಅವಕಾಶಗಳಿವೆ 00:15:43.000 --> 00:15:50.000 ಸದೃಢ, ಬೆಳೆಯುತ್ತಿರುವ, ರೋಮಾಂಚಕಾರಿ ಅರ್ಥವ್ಯವಸ್ಥೆಗಳಲ್ಲಿ 00:15:50.000 --> 00:15:53.000 ವಿಫುಲ ಅವಕಾಶಗಳು ದೊರಕುವಲ್ಲಿ. 00:15:54.000 --> 00:15:58.000 ಹಾಗೂ ಈ ಹೂಡಿಕೆ ಬಗ್ಗೆ ಒಂದು ವಿಚಾರ ಹೇಳಲು ಇಷ್ಟಪಡುತ್ತೇನೆ. NOTE Paragraph 00:15:59.000 --> 00:16:01.000 ಆಫ್ರಿಕನ್ನರಿಗೆ ಸಹಾಯಮಾಡುವ ಉತ್ತಮ ವಿಧಾನವೆಂದರೆ 00:16:02.000 --> 00:16:05.000 ಅವರು ತಮ್ಮ ಕಾಲಮೇಲೆ ತಾವು ನಿಲ್ಲಲು ಸಹಾಯಮಾಡುವುದು. 00:16:05.000 --> 00:16:09.000 ಹಾಗೂ ಇದನ್ನು ಉತ್ತಮ ವಿಧಾನದಲ್ಲಿ ಮಾಡುವುದೆಂದರೆ ಉದ್ಯೋಗಗಳನ್ನು ಸೃಷ್ಟಿಮಾಡಲು ಸಹಾಯಮಾಡುವುದು. 00:16:10.000 --> 00:16:14.000 ಈ ವಿಚಾರದಲ್ಲಿ ಯಾವ ವಿವಾದವೂ ಇಲ್ಲ, ಮಲೇರಿಯಾ ವಿರುದ್ಧ ಹೋರಾಡುವುದು, ಅದರಲ್ಲಿ ಹಣ ಹಾಕುವುದು 00:16:14.000 --> 00:16:18.000 ಮತ್ತು ಮಕ್ಕಳ ಜೀವ ಉಳಿಸುವುದು. ನಾನು ಹೇಳುತ್ತಿರುವುದು ಆ ವಿಷವಲ್ಲ. ಅದು ಒಳ್ಳೆಯದೇ. 00:16:19.000 --> 00:16:23.000 ಆದರೆ, ಒಂದು ಕುಟುಂಬದ ಮೇಲೆ ಉಂಟಾಗುವ ಪ್ರಭಾವವನ್ನು ಕಲ್ಪಿಸಿಕೊಳ್ಳಿ, ತಂದೆತಾಯಿಗಳು ಉದ್ಯೋಗಸ್ಥರಾಗಿದ್ದರೆ 00:16:23.000 --> 00:16:25.000 ಹಾಗೂ ತಮ್ಮ ಮಕ್ಕಳು ಶಾಲೆಗೆ ಹೋಗುವುದನ್ನು ಖಚಿತಪಡಿಸಿಕೊಂಡರೆ, 00:16:25.000 --> 00:16:28.000 ಈ ಖಾಯಿಲೆಯ ವಿರುದ್ಧ ಹೋರಾಡಲು ಬೇಕಾದ ಔಷದಗಳನ್ನು ತಾವೇ ಕೊಂಡುಕೊಂಡರೆ. 00:16:28.000 --> 00:16:32.000 ನೀವೇ ಲಾಭ ಮಾಡುವಂತಹ ಸ್ಥಳಗಳಲ್ಲಿ ನೀವು ಹೂಡಿಕೆ ಮಾಡುವಂತಿದ್ದರೆ 00:16:32.000 --> 00:16:37.000 ಉದ್ಯೋಗಗಳನ್ನು ಸೃಷ್ಟಿಸಿ, ಜನರು ತಮ್ಮ ಕಾಲ ಮೇಲೆ ತಾವು ನಿಲ್ಲಲು ಸಹಾಯಮಾಡಿದರೆ 00:16:37.000 --> 00:16:42.000 ಅದು ಒಂದು ಅತ್ಯುತ್ತಮ ಅವಕಾಶವಲ್ಲವೆ? ಅನುಸರಿಸಬೇಕಾದ ದಾರಿ ಅದೇ ಅಲ್ಲವೆ? 00:16:42.000 --> 00:16:45.000 ಹಾಗೂ ನಾನು ಇನ್ನೊಂದು ವಿಷಯ ಹೇಳುತ್ತೇನೆ, ಈ ಖಂಡದಲ್ಲಿ ಹೂಡಿಕೆ ಮಾಡಿರುವ ಅತಿ 00:16:45.000 --> 00:16:47.000 ಉತ್ತಮ ವ್ಯಕ್ತಿಗಳು ಯಾರು ಗೊತ್ತೆ, ಮಹಿಳೆಯರು. 00:16:48.000 --> 00:16:55.000 (ಚಪ್ಪಾಳೆ). NOTE Paragraph 00:16:55.000 --> 00:17:00.000 ನನ್ನಲ್ಲಿ ಒಂದು CD ಇದೆ. ಕ್ಷಮಿಸಿ, ನಾನು ಇದನ್ನು ಸಕಾಲದಲ್ಲಿ ಹೇಳಲಿಲ್ಲ. 00:17:00.000 --> 00:17:02.000 ಅಥವಾ, ನೀವು ಇದನ್ನು ನೋಡಬೇಕೆಂದು ನನ್ನ ಇಚ್ಛೆಯಿತ್ತು. 00:17:02.000 --> 00:17:05.000 ಅದರ ಹೆಸರು, “ಆಫ್ರಿಕಾ: ವ್ಯಾಪಾರಕ್ಕೆ ತೆರೆದಿದೆ.” 00:17:06.000 --> 00:17:09.000 ಇದು ಒಂದು ವಿಡಿಯೊ, ವಾಸ್ತವದಲ್ಲಿ ಪಾರಿತೋಷಕ ಪಡೆದಿದೆ, 00:17:09.000 --> 00:17:11.000 ವರ್ಷದ ಅತ್ಯುತ್ತಮ ಸಾಕ್ಷ್ಯಚಿತ್ರ ಎಂದು. 00:17:11.000 --> 00:17:13.000 ತಿಳಿಯಿರಿ, ಇದನ್ನು ಮಾಡಿದ ಮಹಿಳೆ 00:17:13.000 --> 00:17:18.000 ಟಾನ್ ಜೇನಿಯಾದಲ್ಲಿರುತ್ತಾರೆ, ಅಲ್ಲಿ ಜೂನ್ ನಲ್ಲಿ ಅಧಿವೇಶನ ಇದೆ. 00:17:19.000 --> 00:17:24.000 ಇದು ತೋರಿಸುತ್ತದೆ ನೀವು ಆಫ್ರಿಕನ್ನರು, ಅದರಲ್ಲೂ ಆಫ್ರಿಕನ್ ಮಹಿಳೆಯರು, 00:17:24.000 --> 00:17:29.000 ಎಲ್ಲ ತೊಂದರೆಗಳ ನಡುವೆಯೂ ವ್ಯಾಪಾರಗಳನ್ನು ಅಭಿವೃದ್ಧಿಪಡಿಸಿದ್ದೀರಿ, ಅದರಲ್ಲಿ ಕೆಲವು ವಿಶ್ವ-ಶ್ರೇಣಿಯವು. NOTE Paragraph 00:17:29.000 --> 00:17:32.000 ಈ ವಿಡಿಯೊದಲ್ಲಿರುವ ಒಬ್ಬ ಮಹಿಳೆ, ಅಡೆನಿಕೆ ಒಕುಂಟೇಸಿ, 00:17:32.000 --> 00:17:34.000 ಮಕ್ಕಳ ಉಡುಪುಗಳನ್ನು ತಯಾರಿಸುತ್ತಾಳೆ -- 00:17:34.000 --> 00:17:39.000 ಇದನ್ನು ಅವಳು ಒಂದು ಹವ್ಯಾಸವೆಂದು ಪ್ರಾರಂಭಿಸಿದಳು, ಅದು ಒಂದು ವ್ಯಾಪಾರವಾಗಿ ಬೆಳೆಯಿತು. 00:17:39.000 --> 00:17:42.000 ಆಫ್ರಿಕನ್ ವಸ್ತುಗಳನ್ನು ಮಿಶ್ರಮಾಡಿ, ನಾವು ಹೊಂದಿರುವಂತೆ, 00:17:43.000 --> 00:17:44.000 ಬೇರೆ ಪ್ರದೇಶದ ವಸ್ತುಗಳ ಜೊತೆ. 00:17:44.000 --> 00:17:49.000 ಅಂದರೆ, ಅವಳು ಕಾರ್ಡುರೋಯ್ ನೊಂದಿಗೆ ಡುಂಗರೀಗಳನ್ನು 00:17:49.000 --> 00:17:53.000 ಆಫ್ರಿಕನ್ ವಸ್ತುಗಳನ್ನು ಮಿಶ್ರಮಾಡಿ ತಯಾರಿಸುತ್ತಾಳೆ. 00:17:55.000 --> 00:17:58.000 ಇದು ಯಾವ ಮಟ್ಟಕ್ಕೆ ಬೆಳೆದಿದೆಯೆಂದರೆ ಆಕೆಗೆ ವಾಲ್-ಮಾರ್ಟ್ ನಿಂದ ಒಂದು ಬೇಡಿಕೆ ಬಂದಿದೆ. 00:17:59.000 --> 00:18:00.000 (ನಗು). 00:18:01.000 --> 00:18:03.000 10:00 ಉಡುಪುಗಳಿಗೆ. 00:18:04.000 --> 00:18:08.000 ಇದು, ನಮ್ಮಲ್ಲಿ ಮಾಡಿತೋರಿಸುವ ಸಾಮರ್ಥ್ಯ ಉಳ್ಳವರಿದ್ದಾರೆ ಎಂಬುದನ್ನು ತೋರಿಸುತ್ತದೆ. NOTE Paragraph 00:18:08.000 --> 00:18:13.000 ಹಾಗೂ ಈ ಮಹಿಳೆಯರು ಶ್ರಮಶೀಲರು ಮತ್ತು ಹಟವಂತರು; ಅವರು ಕಷ್ಟಪಟ್ಟು ಕೆಲಸಮಾಡುವರು. 00:18:13.000 --> 00:18:15.000 ನಾನು ಈ ರೀತಿ ಉದಾಹರಣೆಗಳನ್ನು ಕೊಡಬಲ್ಲೆ: 00:18:15.000 --> 00:18:19.000 ರವಾಂಡದ ಬಿಯಾಟ್ರೈಸ್ ಗಕೂಬ, ಒಂದು ಹೂವು ವ್ಯಾಪಾರ ಪ್ರಾರಂಭಿಸಿದರು 00:18:19.000 --> 00:18:24.000 ಹಾಗೂ ಪ್ರತಿದಿನ ಬೆಳಿಗ್ಗೆ ಅದು ಅಮ್ಸ್ಟರ್ ಡಾಮ್ ನಲ್ಲಿ ಡಚ್ ಹರಾಜಿಗೆ ರಫ್ತಾಗುತ್ತದೆ, 00:18:24.000 --> 00:18:28.000 ಹಾಗೂ ತನ್ನೊಂದಿಗೆ ಕೆಲಸಮಾಡಲು 200 ಜನ ಪುರುಷರು ಮತ್ತು ಮಹಿಳೆಯರನ್ನು ನೇಮಕ ಮಾಡಿಕೊಂಡಿದ್ದಾಳೆ. 00:18:29.000 --> 00:18:33.000 ಆದರೆ, ಇವುಗಳಲ್ಲಿ ಹೆಚ್ಚುಪಾಲು ಬಂಡವಾಳದ ಕೊರತೆಯಿಂದ ವಿಸ್ತರಿಸಿಲ್ಲ, 00:18:34.000 --> 00:18:37.000 ಏಕೆಂದರೆ ನಮ್ಮ ದೇಶದಿಂದ ಹೊರಗೆ ಯಾರೂ ನಂಬುವುದಿಲ್ಲ 00:18:37.000 --> 00:18:42.000 ನಾವು ಅಗತ್ಯವಿರುವ ಕೆಲಸ ಮಾಡುತ್ತೇವೆಂದು. ಯಾರೂ ಮಾರುಕಟ್ಟೆ ದೃಷ್ಟಿಯಿಂದ ಯೋಚಿಸುವುದಿಲ್ಲ. 00:18:42.000 --> 00:18:45.000 ಅವಕಾಶಗಳಿವೆ ಎಂದು ಯಾರೂ ಯೋಚಿಸುವುದಿಲ್ಲ. 00:18:45.000 --> 00:18:48.000 ಆದರೆ, ನಾನಿಲ್ಲಿ ನಿಂತು ಹೇಳುತ್ತೇನೆ, ಯಾರು ದೋಣಿಯನ್ನು ತಪ್ಪಿಸುತ್ತಾರೊ 00:18:48.000 --> 00:18:50.000 ಅದನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತಾರೆ. NOTE Paragraph 00:18:50.000 --> 00:18:56.000 ಹಾಗಾಗಿ, ನೀವು ಆಫ್ರಿಕಾದಲ್ಲಿ ಇರಬೇಕೆಂದಿದ್ದರೆ ಹೂಡಿಕೆ ಬಗ್ಗೆ ಆಲೋಚಿಸಿ. 00:18:57.000 --> 00:19:03.000 ಈ ಪ್ರಪಂಚದ ಬಿಯಾಟ್ರೈಸ್ ಬಗ್ಗೆ ಯೋಚಿಸಿ, ಅಡೆನಿಕೇಸ್ ಬಗ್ಗೆ ಯೋಚಿಸಿ, 00:19:03.000 --> 00:19:06.000 ಇವರು ಅಸಾಧಾರಣ ಕೆಲಸ ಮಾಡುತ್ತಿದ್ದಾರೆ ಹಾಗೂ ಅವು ಅವರನ್ನು 00:19:06.000 --> 00:19:09.000 ಜಾಗತಿಕ ಆರ್ಥಿಕ ವ್ಯವಸ್ಥೆಗೆ ಕೊಂಡೊಯ್ಯುತ್ತಿದೆ, ಅದೇ ಸಮಯದಲ್ಲಿ ಅವರು 00:19:09.000 --> 00:19:12.000 ತಮ್ಮ ಜೊತೆಯೆ ಪುರುಷರು ಮತ್ತು ಮಹಿಳೆಯರಿಗೆ ಉದ್ಯೋಗ ನೀಡುತ್ತಿದ್ದಾರೆ, 00:19:12.000 --> 00:19:14.000 ಹಾಗೂ ಆ ಕುಟುಂಬಗಳಲ್ಲಿನ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ 00:19:14.000 --> 00:19:17.000 ಏಕೆಂದರೆ, ಅವರ ತಂದೆತಾಯಿಗಳು ಅಗತ್ಯವಿರುವಷ್ಟು ಸಂಪಾದಿಸುತ್ತಿದ್ದಾರೆ. NOTE Paragraph 00:19:18.000 --> 00:19:22.000 ಆದ್ದರಿಂದ, ನಾನು ನಿಮ್ಮನ್ನು ಅವಕಾಶಗಳನ್ನು ಉಪಯೋಗಿಸಿಕೊಳ್ಳಿ ಎಂದು ಆಹ್ವಾನಿಸುತ್ತಿದ್ದೇನೆ. 00:19:23.000 --> 00:19:27.000 ನೀವು ಟಾನ್ ಜೇನಿಯಾಗೆ ಹೋದರೆ ಎಚ್ಚರಿಕೆಯಿಂದ ಆಲಿಸಿ, 00:19:27.000 --> 00:19:31.000 ಏಕೆಂದರೆ ನನಗೆ ಖಚಿತವಿದೆ ನೀವು ವಿಪುಲ ಅವಕಾಶಗಳ ಬಗ್ಗೆ ಆಲಿಸುತ್ತೀರ 00:19:31.000 --> 00:19:36.000 ನೀವು ಈ ಖಂಡಕ್ಕೆ ಒಳ್ಳೆಯದು ಸಂಭವಿಸುವಂತೆ ತೊಡಗಿಸಿಕೊಳ್ಳಿ 00:19:36.000 --> 00:19:41.000 ನಿಮಗೂ ಜನರಿಗೂ ಒಳ್ಳೆಯದಾಗುವಂತೆ. NOTE Paragraph 00:19:41.000 --> 00:19:42.000 ತುಂಬಾ ಧನ್ಯವಾದಗಳು. 00:19:42.000 --> 00:19:50.000 (ಚಪ್ಪಾಳೆ)