ಎಲ್ಲರಿಗೂ ವಂದನೆಗಳು,ಕ್ರಿಸ್ ಇಲ್ಲಿಗೆ ಬಂದವರೆಲ್ಲಾ ಹೇಳಿದರು ಅವರು ಭಯಪಟ್ಟಿದ್ದಾರೆಂದು ಹೇಳಿದರು. ನನಗೆ ಭಯವಾಗಿದೆಯೊ, ಇಲ್ಲವೋ ನನಗೆ ಗೊತ್ತಿಲ್ಲ,♪♪ ಆದರೆ, ಇದೇ ಮೊದಲು ನಾನು ಇಂತಹ ಸಭಿಕರನ್ನುದ್ದೇಶಿಸಿ ಮಾತಾಡುತ್ತಿರುವುದು .♪ ಹಾಗೂ ನಿಮಗೆ ತೋರಿಸಲು ನನ್ನಲ್ಲಿ ಯಾವುದೇ ವಿಶಿಷ್ಟ ತಂತ್ರಜ್ಞಾನ ಇಲ್ಲ. ಯಾವ ಸ್ಲೈಡುಗಳೂ ಇಲ್ಲ, ಹಾಗಾಗಿ ನೀವು ಕೇವಲ ನನ್ನನ್ನು ನೋಡುತ್ತಿರಬಹುದು. (ನಗು). ನಾನು ಈ ದಿನ ಏನು ಮಾಡಬೇಕೆಂದಿದ್ದೇನೆಂದರೆ ನಿಮ್ಮೊಂದಿಗೆ ಕೆಲವು ಕತೆಗಳನ್ನು ಹಂಚಿಕೊಳ್ಳುತ್ತೇನೆ♪ ಹಾಗೂ ಒಂದು ವಿಭಿನ್ನ ಆಫ್ರಿಕಾ ಬಗ್ಗೆ ಮಾತಾಡಬೇಕೆಂದಿದ್ದೇನೆ. ಈಗಾಗಲೇ ಇಂದು ಬೆಳಿಗ್ಗೆ ಆಫ್ರಿಕಾ ಬಗ್ಗೆ ಕೆಲವು ಪ್ರಸ್ತಾಪಗಳಿದ್ದುವು♪ ಅವು ನೀವು ಯಾವಾಗಲೂ ಕೇಳುತ್ತಲಿರುತ್ತೀರಿ: HIV/AIDS ನ ಆಫ್ರಿಕಾ, ಮಲೇರಿಯಾದ ಆಫ್ರಿಕಾ, ಬಡತನದ ಆಫ್ರಿಕಾ, ಸಂಘರ್ಷಗಳ ಆಫ್ರಿಕಾ, ಹಾಗೂ ದುರಂತಗಳ ಆಫ್ರಿಕಾ.♪ ಇವೆಲ್ಲಾ ಸಂಭವಿಸುತ್ತಿರುವುದು ಸತ್ಯವಾದರೂ,♪ ನೀವು ಹೆಚ್ಚು ತಿಳಿದಿಲ್ಲದಿದ ಒಂದು ಆಫ್ರಿಕಾ ಇದೆ.♪ ಹಾಗೂ ಕೆಲವು ಸಾರಿ ನನಗೆ ಗೊಂದಲವಾಗಿ ನನ್ನನ್ನು ನಾನೆ ಏಕೆ ಎಂದು ಪ್ರಶ್ನಿಸುತ್ತೇನೆ. ಇದು ಕ್ರಿಸ್ ಪ್ರಸ್ತಾಪ ಮಾಡಿದ ಬದಲಾಗುತ್ತಿರುವ ಆಫ್ರಿಕಾ. ಇದು ಅವಕಾಶಗಳ ಆಫ್ರಿಕಾ. ಈ ಆಫ್ರಿಕಾ ಎಲ್ಲಿ ಜನರು ತಮ್ಮ ಭವಿಷ್ಯವನ್ನು ಮತ್ತು ಹಣೆಬರಹವನ್ನು ರೂಪಿಸಬೇಕೆಂದಿದ್ದಾರೊ ಅದು. ಈ ಆಫ್ರಿಕಾ ಎಲ್ಲಿ ಜನರು ಇದಕ್ಕಾಗಿ ಸಹಭಾಗಿತ್ವಕ್ಕಾಗಿ ಎದುರು ನೋಡುತ್ತಿದ್ದಾರೊ. ನಾನು ಈ ದಿನ ಮಾತಾಡಬೇಕೆಂದಿರುವುದು ಈ ಬಗ್ಗೆಯೇ. ನಾನು ನಿಮಗೆ ಆಫ್ರಿಕಾದ ಬದಲಾವಣೆ ಬಗ್ಗೆ ಒಂದು ಕಥೆ ಹೇಳುವ ಮೂಲಕ ಪ್ರಾರಂಭಿಸುತ್ತೇನೆ. 15 ಸೆಪ್ಟೆಂಬರ್ 2005, ಮಿ.ಡೈಯಾಪ್ರೆಯ್ ಅಲಮೈಯೆಸೈಘ, ನೈಜೀರಿಯದ ಒಂದು ತೈಲ-ಸಮೃದ್ಧ ರಾಜ್ಯದ ರಾಜ್ಯಪಾಲ ಲಂಡನ್ ಗೆ ಭೇಟಿ ನೀಡಿದ್ದಾಗ ಲಂಡನ್ ಮೆಟ್ರೊಪಾಲಿಟನ್ ಪೊಲೀಸರು ದಸ್ತಗಿರಿ ಮಾಡಿದರು.♪ ಅವರನ್ನು ಏಕೆ ದಸ್ತಗಿರಿ ಮಾಡಿದರೆಂದರೆ $8 ಮಿಲಿಯನ್ ಹಸ್ತಾಂತರವಾಗಿತ್ತು♪ ಅದು ಯಾವುದೋ ನಿಷ್ಕ್ರಿಯ ಖಾತೆಗೆ ಹೋಗಿತ್ತು ಆ ಖಾತೆ ಅವನಿಗೆ ಮತ್ತು ಅವನ ಕುಟುಂಬಕ್ಕೆ ಸೇರಿತ್ತು. ಈ ದಸ್ತಗಿರಿ ಏಕೆ ಸಂಭವಿಸಿತೆಂದರೆ ಅಲ್ಲೊಂದು ಸಹಕಾರವಿತ್ತು ಲಂಡನ್ ಮೆಟ್ರೊಪಾಲಿಟನ್ ಪೋಲಿಸ್ ಮತ್ತು ಎಕನಾಮಿಕ್ ಮತ್ತು ಫೈನಾನ್ಶಿಯಲ್ ಕ್ರೈಮ್ಸ್ ಕಮೀಶನ್ ಆಫ್ ನೈಜೀರಿಯ ಜೊತೆ - ನಮ್ಮಲ್ಲಿರುವ ಬಹಳ ದಕ್ಷ ಮತ್ತು ಧೈರ್ಯಶಾಲಿಗಳಲ್ಲಿ ಒಬ್ಬರ ನಾಯಕತ್ವದಲ್ಲಿ – ಮಿ.ನುಹು ರಿಬಾಡು. ಅಲಮೈಯೆಸೈಘ ವಿರುದ್ಧ ಲಂಡನ್ ನಲ್ಲಿ ಅಪಾದನೆ ಮಾಡಲಾಯಿತು. ಕೆಲವು ತಪ್ಪುಗಳಿಂದಾಗಿ ಅವನು ಹೆಣ್ಣಿನ ವೇಷದಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವಾಯಿತು ಹಾಗೂ ಲಂಡನ್ ನಿಂದ ನೈಜೀರಿಯಕ್ಕೆ ಓಡಿಬಂದ, ಇಲ್ಲಿ,♪ ನಮ್ಮ ಸಂವಿಧಾನದ ಪ್ರಕಾರ, ಅಧಿಕಾರದಲ್ಲಿರುವ ರಾಜ್ಯಪಾಲರು, ಅಧ್ಯಕ್ಷರು ಮುಂತಾದವರಿಗೆ – ಹಲವು ರಾಷ್ಟ್ರಗಳಲ್ಲಿರುವಂತೆ -- ರಕ್ಷಣೆಯಿದೆ ಹಾಗೂ ಅವರ ವಿರುದ್ಧ ಕಾನೂನು ಕ್ರಮ ನಡೆಯುವುದಿಲ್ಲ. ಆದರೆ ಆದದ್ದೇನು: ಈ ನಡವಳಿಕೆಯಿಂದ ಜನರು ಎಷ್ಟು ರೊಚ್ಚಿಗೆದ್ದರೆಂದರೆ ರಾಜ್ಯ ವಿಧಾನಸಭೆ ಅವರ ವಿರುದ್ಧ ದೋಷಾರೋಪಣೆ ಮಾಡಿ ಅವರನ್ನು ಪದವಿಯಿಂದ ಕಿತ್ತುಹಾಕಲು ಸಾಧ್ಯವಾಯಿತು. ಈ ದಿನ, ಅಲಾಮ್ಸ್--ನಾವು ಅವರನ್ನು ಸಂಕ್ಷ್ತಿಪ್ತವಾಗಿ ಕರೆಯುವ ಹೆಸರು –ಜೈಲಿನಲ್ಲಿದ್ದಾರೆ. ಇದು ಒಂದು ಸತ್ಯ ಕಥೆ , ಆಫ್ರಿಕಾದ ಜನರು ತಮ್ಮ ನಾಯಕರ♪ ಲಂಚಕೋರತನವನ್ನು ಸಹಿಸಿಕೊಳ್ಳಲು ಇನ್ನು ಮುಂದೆ ಸಿದ್ಧರಿಲ್ಲ. ಈ ಕಥೆ ಯಾವುದರ ಬಗ್ಗೆಯೆಂದರೆ ಜನರು ತಮ್ಮ ಸಂಪನ್ಮೂಲಗಳನ್ನು ಅವರ ಒಳಿತಿಗಾಗಿ ನಿರ್ವಹಿಸಬೇಕು ಮತ್ತು ಅದನ್ನು ಹೊರದೇಶಗಳಿಗೆ ಯಾರೋ ಕೆಲವು ಪ್ರಭಾವಶಾಲಿ ವ್ಯಕ್ತಿಗಳ ಲಾಭಕ್ಕೆ ಕೊಂಡೊಯ್ಯುವುದಲ್ಲ ಎಂದು ಬಯಸುತ್ತಾರೆ. ಆದ್ದರಿಂದ, ನೀವು ಲಂಚಗುಳಿ ಆಫ್ರಿಕಾ ಬಗ್ಗೆ ಕೇಳಿದಾಗ --♪ ಲಂಚಕೋರತನವೇ ಗೋಚರಿಸುತ್ತದೆ – ಜನರು ಮತ್ತು ಸರಕಾರಗಳು ಇದರ ನಿರ್ಮೂಲನಕ್ಕಾಗಿ ತೀವ್ರವಾಗಿ ಪ್ರಯತ್ನಿಸುತ್ತಿವೆ ಎಂದು ನೀವು ತಿಳಿದುಕೊಳ್ಳಲಿ ಎಂದು ನಾನು ಬಯಸುತ್ತೇನೆ♪♪ ಕೆಲವು ರಾಷ್ಟ್ರಗಳಲ್ಲಿ, ಹಾಗೂ ಕೆಲವು ಯಶಸ್ಸುಗಳು ಹೊರಹೊಮ್ಮುತ್ತಿವೆ.♪♪ ಇದರ ಅರ್ಥ ಸಮಸ್ಯೆ ಕೊನೆಗೊಂಡಿದೆಯೆ? ಇದಕ್ಕೆ ಉತ್ತರ, ’ಇಲ್ಲ’. ಇನ್ನೂ ಬಹಳ ದೂರ ಹೋಗಬೇಕಿದೆ, ಆದರೆ ಇಲ್ಲಿ ಮಾಡಬೇಕೆಂಬ ಮನಸ್ಸಿದೆ. ಹಾಗೂ ಈ ಪ್ರಮುಖ ಹೋರಾಟದಲ್ಲಿ ಯಶಸ್ಸುಗಳು ಕಂಡುಬರುತ್ತಿವೆ. ಹಾಗಾಗಿ, ನೀವು ಲಂಚಕೋರತನದ ಬಗ್ಗೆ ಕೇಳಿದರೆ ಅದರ ಬಗ್ಗೆ ಇಲ್ಲಿ ಏನೂ ಮಾಡುತ್ತಿಲ್ಲ ಎಂಬ ಭಾವನೆ ಇಟ್ಟುಕೊಳ್ಳಬೇಡಿ -- ಆಫ್ರಿಕಾದ ಯಾವುದೇ ದೇಶಗಳೊಂದಿಗೆ ವ್ಯವಹರಿಸಲು ಸಾಧ್ಯವಿಲ್ಲ ಎಂದುಕೊಳ್ಳಬೇಡಿ ಲಂಚಕೋರತನ ತುಂಬಿತುಳುಕುತ್ತಿದೆ ಎಂಬುದಕ್ಕಾಗಿ. ಈಗ ಪರಿಸ್ಥಿತಿ ಹಾಗಿಲ್ಲ.♪ ಹೋರಾಟ ಮಾಡುವ ಮನಸ್ಸಿದೆ, ಮತ್ತು ಹಲವು ರಾಷ್ಟ್ರಗಳಲ್ಲಿ ಈ ಹೋರಾಟ ನಡೆಯುತ್ತಿದೆ ಹಾಗೂ ಗೆಲುವು ದೊರೆಯುತ್ತಿದೆ. ನನ್ನಂತಹ ಬೇರೆಯವರ ವಿಚಾರದಲ್ಲಿ, ಇಲ್ಲಿ, ನೈಜೀರಿಯದಲ್ಲಿ ಸರ್ವಾಧಿಕಾರದ ದೀರ್ಘ ಚರಿತ್ರೆಯೇ ಇದೆ,♪ ಹೋರಾಟ ನಡೆಯುತ್ತಲೇ ಇದೆ ಹಾಗೂ ನಾವು ದೊಡ್ಡ ದಾರಿಯನ್ನು ಕ್ರಮಿಸಬೇಕಾಗಿದೆ. ಆದರೆ ವಾಸ್ತವವೆಂದರೆ ಇದು ಸಂಭವಿಸುತ್ತಾ ಇದೆ. ಫಲಿತಾಂಶಗಳು ಕಂಡುಬರುತ್ತಿವೆ: ವಿಶ್ವ ಬ್ಯಾಂಕ್ ಮತ್ತು ಇತರ ಸಂಸ್ಥೆಗಳು ಸ್ವತಂತ್ರವಾಗಿ ನಿಯಂತ್ರಿಸುತ್ತಿರುವುದನ್ನು ನೋಡಿದರೆ ಹಲವು ಘಟನೆಗಳಲ್ಲಿ ಈ ಪರಿಸ್ಥಿತಿ ಇಳಿಮುಖವಾಗುತ್ತಿದೆ ಲಂಚಕೋರತನದ ವಿಚಾರದಲ್ಲಿ, ಹಾಗೂ ಆಡಳಿತ ಉತ್ತಮಗೊಳ್ಳುತ್ತಿದೆ. ಆಫ್ರಿಕಾದ ಆರ್ಥಿಕ ಆಯೋಗದ ಒಂದು ಅಧ್ಯಯನ 28 ಆಫ್ರಿಕಾ ದೇಶಗಳಲ್ಲಿ ರಾಜ್ಯಭಾರ ಉತ್ತಮ ಮಟ್ಟಕ್ಕೇರುವ ನಿಚ್ಚಳ ಪ್ರವೃತ್ತಿ ಇದೆ ಎಂದು ತೋರಿಸಿಕೊಟ್ಟಿದೆ. ಹಾಗೂ ನಾನು ಇನ್ನೊಂದು ವಿಷಯ ಹೇಳಲು ಇಚ್ಛಿಸುತ್ತೇನೆ♪ ಈ ಆಡಳಿತಾತ್ಮಕ ವಿಷಯ ಮುಗಿಸುವ ಮೊದಲು. ಅದೆಂದರೆ, ಜನರು ಲಂಚಕೋರತನದ ಲಂಚಗುಳಿತನ ಬಗ್ಗೆ ಮಾತಾಡುತ್ತಾರೆ,. ಅದರ ಬಗ್ಗೆ ಯಾರಾದರೂ ಮಾತಾಡಿದರೆ ನಿಮಗೆ ತಕ್ಷಣ ಆಫ್ರಿಕಾ ನೆನಪಿಗೆ ಬರುತ್ತದೆ. ಅದು ಇರುವ ಚಿತ್ರ: ಆಫ್ರಿಕಾ ದೇಶಗಳು. ಆದರೆ ನಾನು ಇದನ್ನು ಹೇಳುತ್ತೇನೆ: ಲಂಡನ್ನಿನ ಒಂದು ಖಾತೆಗೆ ಅಲಮ್ಸ್ $8 ಮಿಲಿಯನ್ ಸಾಗಿಸಿರಬೇಕಾದರೆ ಇತರರು ಇದೇ ರೀತಿ ಹಣ ಸಾಗಿಸಿರಬಹುದಾದ ಮೊತ್ತ 20 ರಿಂದ 40 ಬಿಲಿಯನ್ ಪ್ರಗತಿಶೀಲ ದೇಶಗಳಿಗೆ ಸೇರಿದ ಹಣ ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ಕುಳಿತುಕೊಂಡಿದೆ – ಅವರು ಹೀಗೆ ಮಾಡಬಹುದಾದರೆ ಅದಿನ್ನೇನು? ಅದು ಲಂಚಕೋರತನವಲ್ಲವೇ? ಈ ದೇಶದಲ್ಲಿ, ನೀವು ಕದ್ದ ಮಾಲು ಪಡೆದರೆ ನಿಮ್ಮ ಮೇಲೆ ಕಾನೂನು ಕ್ರಮ ನಡೆಯುವುದಿಲ್ಲವೆ? ಹಾಗಾಗಿ, ನಾವು ಈ ರೀತಿಯ ಲಂಚಕೋರತನದ ಬಗ್ಗೆ ಮಾತಾಡುವಾಗ, ವಿಶ್ವದ ಮತ್ತೊಂದು ಭಾಗದಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆಯೂ ಮಾತಾಡೋಣ -- ಹಣ ಎಲ್ಲಿಗೆ ಹೋಗುತ್ತಿದೆ ಹಾಗೂ ಅದನ್ನು ಹೇಗೆ ತಡೆಯಬಹುದು. ನಾನು ಒಂದು ಪ್ರಸ್ತಾಪದ ಬಗ್ಗೆ ಕೆಲಸಮಾಡುತ್ತಿದ್ದೇನೆ, ವಿಶ್ವ ಬ್ಯಾಂಕ್ ಸಹಯೋಗದೊಡನೆ, ಆಸ್ತಿ ವಸೂಲಾತಿ ಬಗ್ಗೆ, ನಾವೇನು ಮಾಡಬಹುದು ಹೊರದೇಶಗಳಿಗೆ ಕೊಂಡೊಯ್ದಿರುವ ಹಣಗಳ ಬಗ್ಗೆ -- ಪ್ರಗತಿಶೀಲ ರಾಷ್ಟ್ರಗಳ ಹಣ – ಅದನ್ನು ಹಿಂದಕ್ಕೆ ರವಾನಿಸಲು. ಏಕೆಂದರೆ, ಅಲ್ಲಿರುವ ಕುಳಿತುಕೊಂಡಿರುವ ಬಿಲಿಯನ್ ಹಿಂದಕ್ಕೆ ಪಡೆದರೆ ಇಲ್ಲಿನ ಕೆಲವು ದೇಶಗಳಿಗೆ ದೊರೆಯುತ್ತಿರುವ ಒಟ್ಟು ಸಹಾಯಧನಕ್ಕಿಂತ ಹೆಚ್ಚು ಪಡೆದಂತೆ. (ಚಪ್ಪಾಳೆ). ನಾನು ಮಾತಾಡಬೇಕೆಂದಿರುವ ಎರಡನೆ ವಿಷಯವೆಂದರೆ ಸುಧಾರಣೆ ಮಾಡುವ ಮನಸ್ಸು. ಆಫ್ರಿಕನ್ನರು, ಅವರು ಸುಸ್ತಾದ ನಂತರ – ನಾವು ಸುಸ್ತಾಗುತ್ತೇವೆ ಪ್ರತಿಯೊಬ್ಬರ ದಾನ ಮತ್ತು ಧರ್ಮದ ವಿಷಯವಾಗಿ. ನಾವು ಅದಕ್ಕೆ ಚಿರಋಣಿಗಳು, ಆದರೆ ನಮಗೆ ಗೊತ್ತಿದೆ ನಾವು ಮನಸ್ಸು ಮಾಡಿದರೆ ನಮ್ಮ ಭವಿಷ್ಯವನ್ನು ನಾವೇ ರೂಪಿಸಿಕೊಳ್ಳಬಲ್ಲೆವು ಎಂದು. ಹಾಗೂ ಹಲವು ಆಫ್ರಿಕಾ ದೇಶಗಳಲ್ಲಿ ಈಗ ಏನಾಗುತ್ತಿದೆ ಎಂದರೆ ನಮ್ಮನ್ನು ಬೇರಾರೂ ಇದನ್ನು ಮಾಡಲಾರರು ಎಂಬ ಅರಿವು ಮೂಡುತ್ತಿದೆ. ನಾವು ಇದನ್ನು ಮಾಡಲೇ ಬೇಕು. ನಾವು ಸಹಭಾಗಿಗಳನ್ನು ನಮ್ಮ ಬೆಂಬಲಕ್ಕೆ ಕರೆಯಬಹುದು, ಆದರೆ ಪ್ರಾರಂಭ ನಾವೇ ಮಾಡಬೇಕು. ನಾವು ನಮ್ಮ ಆರ್ಥಿಕ ವ್ಯವಸ್ಥೆಗಳನ್ನು ಸುಧಾರಿಸಬೇಕು, ನಮ್ಮ ನಾಯಕತ್ವ ಬದಲಾಯಿಸಬೇಕು, ಹೆಚ್ಚು ಪ್ರಜಾಪ್ರಭುತ್ವವಾದಿಗಳಾಗಬೇಕು, ಬದಲಾವಣೆ ಮತ್ತು ಮಾಹಿತಿಗೆ ಹೆಚ್ಚು ಮುಕ್ತ ಮನಸ್ಸು ಬೇಕು. ಹಾಗೂ ನಾವು ಇದನ್ನೇ ಮಾಡ ಹೊರಟಿದ್ದು ಈ ಖಂಡದ ಬಹು ದೊಡ್ಡ ದೇಶಗಳಲ್ಲಿ ಒಂದಾದ, ನೈಜೀರಿಯದಲ್ಲಿ. ಒಂದು ವಿಷಯವೆಂದರೆ, ನೀವು ನೈಜೀರಿಯದಲ್ಲಿಲ್ಲದಿದ್ದರೆ ನೀವು ಆಫ್ರಿಕಾದಲ್ಲಿದ್ದಂತಲ್ಲ. ನಿಮಗೆ ಅದನ್ನು ನಾನು ಹೇಳಬೇಕು. (ನಗು) ನಾಲ್ಕು ಜನ ಸಬ್-ಸಹಾರಾ ಆಫ್ರಿಕನ್ ರಲ್ಲಿ ಒಬ್ಬ ನೈಜೀರಿಯನ್ ಆಗಿರುತ್ತಾನೆ, ಹಾಗೂ ಇಲ್ಲಿ 140 ಮಿಲಿಯನ್ ಚುರುಕಾದ ಜನರಿದ್ದಾರೆ – ಅರಾಜಕ ಜನ -- ಆದರೆ ಬಹಳ ಸ್ವಾರಸ್ಯಕರ ಜನ. ನಿಮಗೆ ಖಂಡಿತವಾಗಿಯೂ ಬೇಸರವಾಗುವುದಿಲ್ಲ. (ನಗು). ನಾವು ಮಾಡಲು ಪ್ರಾರಂಭಿಸಿದ್ದೇನೆಂದರೆ ನಾವೇ ಮುನ್ನುಗ್ಗಬೇಕು ಮತ್ತು ಸುಧಾರಣೆ ತರಬೇಕು ಎಂಬ ತಿಳಿವಳಿಕೆ ತಂದುಕೊಂಡದ್ದು. ಹಾಗೂ ಒಬ್ಬ ನಾಯಕನ ಬೆಂಬಲದೊಂದಿಗೆ ಈ ಸಮಯದಲ್ಲಿ ಸುಧಾರಣೆ ತರುವ ಇಚ್ಛೆಯುಳ್ಳವನು ದೊರೆತರೆ ನಾವು ಒಂದು ಸಮಗ್ರ ಸುಧಾರಣೆ ಯೋಜನೆಯನ್ನು ಮುಂದಿಡುತ್ತೇವೆ ಇದನ್ನು ನಾವೇ ಅಭಿವೃದ್ಧಿಪಡಿಸಿದ್ದೇವೆ. ಇಂಟರ್ ನ್ಯಾಶನಲ್ ಮಾನೀಟರಿ ಫಂಡ್ ಅಲ್ಲ. ವಿಶ್ವ ಬ್ಯಾಂಕ್ ಅಲ್ಲ, ಇಲ್ಲಿ ನಾನು 21 ವರ್ಷ ಕೆಲಸ ಮಾಡಿದೆ ಹಾಗೂ ಅದರ ಉಪಾಧ್ಯಕ್ಷ ಸ್ಥಾನಕ್ಕೆ ಬೆಳೆದೆ. ನಿಮಗಾಗಿ ಯಾರೂ ಏನನ್ನೂ ಮಾಡಲಾರರು. ನಿಮಗೆ ನೀವೆ ಮಾಡಿಕೊಳ್ಳಬೇಕು. ನಾವು ಒಂದು ಯೋಜನೆ ಸಿದ್ಧಪಡಿಸಿದ್ದೇವೆ, ಅದರಲ್ಲಿ, ಒಂದು: ರಾಜ್ಯವನ್ನು ವ್ಯಾಪಾರದಿಂದ ಕಿತ್ತುಹಾಕಿ – ವ್ಯಾಪಾರದಲ್ಲಿ ಅದು ಇರಬೇಕಿಲ್ಲ. ರಾಜ್ಯ ವ್ಯಾಪಾರದಲ್ಲಿ ವಸ್ತು ಮತ್ತು ಸೇವೆಗಳನ್ನು ಉತ್ಪಾದನೆ ಮಾಡುವ ಕೆಲಸದಲ್ಲಿರಕೂಡದು ಏಕೆಂದರೆ, ಅದು ಅಸಮರ್ಥ ಮತ್ತು ಅನರ್ಹ. ಹಾಗಾಗಿ ನಾವು ನಮ್ಮ ಬಹಳಷ್ಟು ಘಟಕಗಳನ್ನು ಖಾಸಗೀಕರಣ ಮಾಡಲು ನಿರ್ಧರಿಸಿದೆವು. (ಚಪ್ಪಾಳೆ). ನಾವು – ಇದರ ಫಲವಾಗಿ, ನಮ್ಮ ಹಲವಾರು ಮಾರುಕಟ್ಟೆಗಳನ್ನು ಮುಕ್ತ ಮಾಡಲು ನಿರ್ಧರಿಸಿದೆವು. ನೀವು ನಂಬುತ್ತೀರಾ, ಈ ಸುಧಾರಣೆಗೆ ಮೊದಲು -- 2003 ಅಂತ್ಯದಲ್ಲಿ ಪ್ರಾರಂಭವಾದದ್ದು, ನಾನು ವಾಷಿಂಗ್ ಟನ್ ಬಿಟ್ಟು ವಿತ್ತ ಮಂತ್ರಿ ಪದವಿ ಸ್ವೀಕರಿಸಿದಾಗ -- ನಮ್ಮಲ್ಲಿ ಒಂದು ಟೆಲಿಕಮ್ಯೂನಿಕೇಶನ್ ಕಂಪನಿ ಇತ್ತು ಹಾಗೂ ಅದು ತನ್ನ 30-ವರ್ಷದ ಚರಿತ್ರೆಯಲ್ಲಿ ಕೇವಲ 4,500 ಲ್ಯಾಂಡ್ ಲೈನ್ ಗಳನ್ನು ಅಭಿವೃದ್ಧಿಪಡಿಸಿತ್ತು. (ನಗು). ನನ್ನ ದೇಶದಲ್ಲಿ ಒಂದು ದೂರವಾಣಿ ಹೊಂದುವುದೇ ಒಂದು ದುಬಾರಿ ಕೆಲಸ. ನಿಮಗೆ ಸಿಗುತ್ತಿರಲಿಲ್ಲ. ನೀವು ಲಂಚ ಕೊಡಬೇಕಿತ್ತು. ನೀವು ಒಂದು ಟೆಲಿಫೋನ್ ಹೊಂದಲು ಏನೆಲ್ಲಾ ಮಾಡಬೇಕಿತ್ತು. ಅಧ್ಯಕ್ಷರಾದ ಒಬೇಸೇನಿಯೊ ಬೆಂಬಲನೀಡಿ ಮತ್ತು ಪ್ರಾರಂಭಿಸಿದ ಟೆಲಿಕಮ್ಯೂನಿಕೇಶನ್ ವಲಯವನ್ನು ಮುಕ್ತಗೊಳಿಸಿದ ನಂತರ♪ ನಾವು 4,500 ಲ್ಯಾಂಡ್ ಲೈನ್ ಗಳಿಂದ 32 ಮಿಲಿಯನ್ GSM ಲೈನ್ ಗಳಿಗೆ ತಲುಪಿದ್ದೇವೆ ಮತ್ತು ಇದು ಇನ್ನೂ ಹೆಚ್ಚುತ್ತಲೇ ಇದೆ. ನೈಜೀರಿಯ ಟೆಲಿಕಾಂ ಮಾರುಕಟ್ಟೆ ವಿಶ್ವದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಎರಡನೆಯದು, ಚೀನಾ ನಂತರ. ನಾವು ವರ್ಷಕ್ಕೆ ಸುಮಾರು $1 ಬಿಲಿಯನ್ ಹೂಡಿಕೆಯನ್ನು ಟೆಲಿಕಾಂ ಕ್ಷೇತ್ರದಲ್ಲಿ ಪಡೆಯುತ್ತಿದ್ದೇವೆ. ಹಾಗೂ, ಇದು ಕೆಲವು ಚುರುಕು ವ್ಯಕ್ತಿಗಳನ್ನು ಬಿಟ್ಟರೆ ಬೇರಾರಿಗೂ ಗೊತ್ತಿಲ್ಲ. (ನಗು) ಮೊದಲು ಕಾಲಿಟ್ಟ ಬುದ್ಧಿವಂತ ಕಂಪನಿ ಎಂದರೆ ದಕ್ಷಿಣ ಆಫ್ರಿಕಾದ MTN ಕಂಪನಿ. ನಾನು ಹಣಕಾಸು ಮಂತ್ರಿಯಾಗಿದ್ದ ಮೂರು ವರ್ಷಗಳಲ್ಲಿ ಅವರು ವರ್ಷಕ್ಕೆ ಸರಾಸರಿ $360 ಮಿಲಿಯನ್ ಲಾಭ ಮಾಡಿದರು. $360 ಮಿಲಿಯನ್ ಒಂದು ಮಾರುಕಟ್ಟೆಯಲ್ಲಿ – ಒಂದು ದೇಶದಲ್ಲಿ,ಅದೂ ಒಂದು ಬಡ ದೇಶದಲ್ಲಿ, ಸರಾಸರಿ ತಲಾಆದಾಯ $500 ಕ್ಕೂ ಕಡಿಮೆ ಇರುವ ದೇಶದಲ್ಲಿ. ಹಾಗಾಗಿ ಇಲ್ಲಿ ಮಾರುಕಟ್ಟೆ ಇದೆ. ಈ ವಿಷಯವನ್ನು ಅವರು ಮುಚ್ಚಿಟ್ಟರು, ಆದರೆ ಇತರರಿಗೆ ಬೇಗನೇ ತಿಳಿಯಿತು. ನೈಜೀರಿಯನ್ನರೇ ಕೆಲವು ವೈರ್ ಲೆಸ್ ಟೆಲಿಕಮ್ಯೂನಿಕೇಶನ್ ಕಂಪನಿಗಳನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಿದರು♪ ಹಾಗೂ ಮೂರು ಅಥವಾ ನಾಲ್ಕು ಇತರ ಕಂಪನಿಗಳು ಬಂದುವು. ಆದರೆ, ಇಲ್ಲಿ ಬಹುದೊಡ್ಡ ಮಾರುಕಟ್ಟೆಯಿದೆ, ಹಾಗೂ ಜನಗಳಿಗೆ ಇದರ ಬಗ್ಗೆ ಗೊತ್ತಿಲ್ಲ, ಅಥವಾ ಅವರಿಗೆ ತಿಳಿದುಕೊಳ್ಳುವುದು ಬೇಕಿಲ್ಲ. ಹಾಗಾಗಿ ನಾವು ಮಾಡಿದ ಒಂದು ಕೆಲಸವೆಂದರೆ ಖಾಸಗೀಕರಣ. ನಾವು ಮಾಡಿದ ಇನ್ನೊಂದು ಕೆಲಸವೆಂದರೆ ನಮ್ಮ ಹಣಕಾಸು ನಿರ್ವಹಣೆಯನ್ನು ಉತ್ತಮವಾಗಿ ಮಾಡಿದ್ದು. ಏಕೆಂದರೆ ಯಾರೋ ನಿಮಗೆ ಸಹಾಯಮಾಡಲಾರರು ಮತ್ತು ಬೆಂಬಲಿಸಲಾರರು ನಿಮ್ಮ ಹಣಕಾಸು ಪರಿಸ್ಥಿತಿಯನ್ನು ನೀವು ಚೆನ್ನಾಗಿ ನಿಭಾಯಿಸದಿದ್ದರೆ. ಹಾಗೂ, ನೈಜೀರಿಯ, ತೈಲ ವಲಯದೊಂದಿಗೆ, ಪ್ರಸಿದ್ಧಿ ಪಡೆದಿದೆ, ಲಂಚಕೋರವೆಂತಲೂ ಮತ್ತು ತಮ್ಮ ಹಣಕಾಸನ್ನು ಸರಿಯಾಗಿ ನಿರ್ವಹಿಸುವುದಿಲ್ಲವೆಂದು. ಹಾಗಾಗಿ, ನಾವೇನು ಮಾಡಲು ಪ್ರಯತ್ನಿಸಿದೆವು? ನಾವು ಒಂದು ಹಣಕಾಸು ನಿಯಮವನ್ನು ಪ್ರವೇಶಪಡಿಸಿದೆವು ಅದು ನಮ್ಮ ಆಯವ್ಯಯವನ್ನು ತೈಲ-ಬೆಲೆಯಿಂದ ಬೇರ್ಪಡಿಸಿತು. ಇದಕ್ಕೆ ಮೊದಲು ನಮ್ಮ ಆಯವ್ಯಯ ಲೆಕ್ಕಾಚಾರ ನಾವು ತರುವ ತೈಲದ ಮೇಲೆ ಮಾಡುತ್ತಿದ್ದೆವು, ಏಕೆಂದರೆ ತೈಲ ಬಹು ದೊಡ್ಡ, ಹೆಚ್ಚು ಹಣ-ಸಂಪಾದಿಸುವ ವಲಯ ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿ: ನಮ್ಮ ಹುಟ್ಟುವಳಿಯಲ್ಲಿ 70% ತೈಲದಿಂದ ಬರುತ್ತಿತ್ತು. ಅದನ್ನು ನಾವು ಬೇರೆ ಮಾಡಿದೆವು, ಒಂದು ಸಾರಿ ಇದನ್ನು ಮಾಡಿದ ನಂತರ ನಮ್ಮ ಆಯವ್ಯಯವನ್ನು ತೈಲ ಬೆಲೆಗಿಂತ ಸ್ವಲ್ಪ ಕಡಿಮೆ ಬೆಲೆಯಲ್ಲಿ ಲೆಕ್ಕಾಚಾರ ಮಾಡಲು ಪ್ರಾರಂಭಿಸಿದೆವು ಹಾಗೂ ಆ ಬೆಲೆಗಿಂತ ಮೇಲ್ಪಟ್ಟದ್ದನ್ನು ಉಳಿತಾಯ ಮಾಡಿದೆವು. ಅದು ಯಶಸ್ವಿಯಾಗುತ್ತದೆಂದು ನಮಗೆ ತಿಳಿದಿರಲಿಲ್ಲ, ಅದು ಬಹಳ ವಿವಾದಾತ್ಮಕವಾಗಿತ್ತು. ಆದರೆ ಅದು ತತ್ ಕ್ಷಣ ಏನು ಮಾಡಿತೆಂದರೆ ನಮ್ಮ ಆರ್ಥಿಕ ಅಭಿವೃದ್ದಿ ಲೆಕ್ಕಾಚಾರದಲ್ಲಿದ್ದ ಚಂಚಲತೆ -- ಅದರಲ್ಲಿ, ತೈಲ ಬೆಲೆಗಳಲ್ಲಿ ಬಹಳ ಹೆಚ್ಚಾಗಿದ್ದರೂ ನಾವು ತ್ವರಿತಗತಿಯಲ್ಲಿ ಬೆಳೆಯುತ್ತಿದ್ದೆವು. ಅವು ಕೆಳಗೆ ಬಿದ್ದರೆ, ನಾವೂ ಕೆಳಕ್ಕೆ ಬೀಳುತ್ತಿದ್ದೆವು. ಹಾಗೂ, ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿ ನಾವು ಏನನ್ನೂ ಪಾವತಿಸಲಾರದಾಗಿದ್ದೆವು, ವೇತನಗಳನ್ನು ಕೂಡ. ಅದು ನವಿರಾಯಿತು.ನಾವು ಉಳಿತಾಯ ಮಾಡುವಂತಾಯಿತು, ನಾನು ಬಿಡುವ ಮೊದಲು, $27 ಬಿಲಿಯನ್. ಆದರೆ -- ಇದು ನಮ್ಮ ಆಪದ್ಧನಕ್ಕೆ ಹೋಗುತ್ತಿತ್ತು -- ನಾನು 2003ರಲ್ಲಿ ಬಂದಾಗ, ನಾವು $7 ಬಿಲಿಯನ್ ಆಪದ್ಧನ ಹೊಂದಿದ್ದೆವು. ನಾನು ಬಿಡುವ ಸಮಯಕ್ಕೆ, ನಾವು ಇದನ್ನು ಹೆಚ್ಚು ಕಡಿಮೆ $30 ಬಿಲಿಯನ್ ಗೆ ಏರಿಸಿದ್ದೆವು. ಹಾಗೂ ಈಗ ನಾವು ಮಾತಾಡುತ್ತಿರುವ ಸಮಯದಲ್ಲಿಅದು ಸುಮಾರು $40 ಬಿಲಿಯನ್ ನಷ್ಟಾಗಿದೆ. ಅದು ಹಣಕಾಸು ನಿರ್ವಹಣೆ ಸರಿಯಾಗಿ ನಿರ್ವಹಿಸಿರುವುದರಿಂದ. ಅದು ನಮ್ಮ ಆರ್ಥಿಕ ವ್ಯವಸ್ಥೆಯನ್ನು ಹಿಡಿದಿಡುತ್ತದೆ, ಅದನ್ನು ಸದೃಢವಾಗಿ ಮಾಡುತ್ತದೆ. ನಮ್ಮ ವಿನಿಮಯ ದರ ಯಾವಾಗಲೂ ಏರುಪೇರಾಗುತ್ತಿತ್ತು ಈಗ ಸುಮಾರಾಗಿ ದೃಢವಾಗಿದೆ ಮತ್ತು ಸರಿಯಾಗಿ ನಿರ್ವಹಿಸಲಾಗುತ್ತಿದೆ, ಹಾಗಾಗಿ ವ್ಯಾಪಾರಸ್ಥರು ಅರ್ಥ ವ್ಯವಸ್ಥೆಯಲ್ಲಿ ಬೆಲೆಗಳನ್ನು ಊಹಿಸಿಕೊಳ್ಳಬಹುದಾಗಿದೆ. ನಾವು ಹಣದುಬ್ಬರವನ್ನು ಶೇಕಡ 28 ರಿಂದ ಸುಮಾರು ಶೇಕಡ 11 ಕ್ಕೆ ಇಳಿಸಿದೆವು. ಹಾಗೂ ಹಿಂದಿನ ದಶಕದಲ್ಲಿ ಸರಾಸರಿ ಶೇಕಡ 2.3 ಇದ್ದ GDP ಏರಿಕೆಯಾಗುವಂತೆ ಮಾಡಿ ಅದು ಈಗ ಶೆಕಡ 6.5 ಆಗಿದೆ. ಹಾಗಾಗಿ, ನಾವು ಮಾಡಲು ಸಾಧ್ಯವಾದ ಎಲ್ಲ ಬದಲಾವಣೆಗಳು ಮತ್ತು ಸುಧಾರಣೆಗಳು ಆರ್ಥಿಕ ವ್ಯವಸ್ಥೆಯಲ್ಲಿ ಅಳತೆಮಾಡಬಹುದಾದಂಥ ಫಲಿತಾಂಶ ತೋರಿಸಿವೆ. ಹಾಗೂ ಇನ್ನೂ ಮುಖ್ಯ ಅಂಶವೆಂದರೆ, ನಾವು ತೈಲದಿಂದ ದೂರ ಉಳಿಯಬೇಕೆಂದಿರುವುದರಿಂದ ಹಾಗೂ ಬೇರೆ ಮಾರ್ಗ ಆಯ್ಕೆಮಾಡಲಿರುವುದರಿಂದ -- ಹಾಗೂ ಸಾಕಷ್ಟು ಅವಕಾಶಗಳಿವೆ ಇಂಥ ಒಂದು ದೊಡ್ಡ ದೇಶದಲ್ಲಿ ,ಆಫ್ರಿಕಾದ ಹಲವು ದೇಶಗಳಲ್ಲಿರುವಂತೆ-ಗಮನಾರ್ಹ ಬೆಳವಣಿಗೆಯಾಯಿತು. ತೈಲ ವಲಯದಿಂದ ಉಂಟಾದದ್ದಲ್ಲ, ತೈಲೇತರ ವಲಯದಿಂದ. ಕೃಷಿ ಶೇಕಡ 8 ಕ್ಕೂ ಮಿಗಿಲಾಗಿ ಬೆಳೆಯಿತು. ಟೆಲಿಕಾಂ ವಲಯ ಬೆಳೆದಂತೆ, ಗೃಹ ನಿರ್ಮಾಣ ಮತ್ತು ಕಟ್ಟಡ ನಿರ್ಮಾಣ, ಹಾಗೆಯೇ ನಾನು ಹೇಳುತ್ತಲೇ ಇರಬಹುದು. ಹಾಗೂ ಇದನ್ನು ನಿಮಗೆ ನಿರೂಪಿಸಲು ಒಂದು ಸಾರಿ ನೀವು ವಿಸ್ತೃತ ಆರ್ಥಿಕ ವ್ಯವಸ್ಥೆಯನ್ನು ಹಿಡಿತಕ್ಕೆ ತೆಗೆದುಕೊಂಡರೆ, ವಿವಿಧ ವಲಯಗಳಲ್ಲಿರುವ ಅವಕಾಶಗಳು ಹೇರಳ. ನಾನು ಹೇಳಿದಂತೆ, ನಮಗೆ ಕೃಷಿ ವಲಯದಲ್ಲಿ ಅವಕಾಶಗಳಿವೆ. ನಮಗೆ ಘನ ಖನಿಜಗಳಲ್ಲಿ ಅವಕಾಶಗಳಿವೆ. ನಮ್ಮಲ್ಲಿ ಸಾಕಷ್ಟು ಖನಿಜಗಳಿವೆ ಅವನ್ನು ಯಾರೊಬ್ಬರೂ ಪರಿಶೋಧಿಸಿಲ್ಲ ಅಥವಾ ಹೂಡಿಕೆ ಮಾಡಿಲ್ಲ. ನಮ್ಮ ತಿಳಿವಳಿಕೆಗೆ ಬಂದದ್ದು ಇದನ್ನು ಸಾಧ್ಯವಾಗಿಸಲು ಸೂಕ್ತ ಕಾನೂನುಗಳು ಇಲ್ಲದೆ, ಅದು ಸಂಭವಿಸದು. ಹಾಗಾಗಿ ನಮ್ಮಲ್ಲಿ ಗಣಿ ನಿಯಮ ಇದೆ ಅದನ್ನು ವಿಶ್ವದ ಅತ್ಯುತ್ತಮ ನಿಯಮಗಳೊಂದಿಗೆ ಹೋಲಿಸಬಹುದಾಗಿದೆ. ಗೃಹನಿರ್ಮಾಣ ಮತ್ತು ರೀಯಲ್ ಎಸ್ಟೇಟ್ ಅವಕಾಶಗಳು ನಮ್ಮಲ್ಲಿವೆ. 140 ಮಿಲಿಯನ್ ಜನಸಂಖ್ಯೆಯಿರುವ ಒಂದು ರಾಷ್ಟ್ರದಲ್ಲಿ ಏನೂ ಇರಲಿಲ್ಲ-- ನಿಮಗೆ ತಿಳಿದಿರುವಂತೆ ಶಾಪಿಂಗ್ ಮಾಲ್ ಕೂಡ ಇರಲಿಲ್ಲ. ಇದು ಯಾರಿಗೋ ದೊರಕಿದ ಹೂಡಿಕೆ ಅವಕಾಶ ಅದು ಜನರ ಕಲ್ಪನೆಯನ್ನು ರೋಮಾಂಚನಗೊಳಿಸಿತು. ಈಗ, ನಾವು ಯಾವ ಸ್ಥಿತಿಯಲ್ಲಿದ್ದೇವೆಂದರೆ ಈ ಮಾಲ್ ಗಳಲ್ಲಿ ವ್ಯಾಪಾರ ಅವರು ಅಂದಾಜು ಮಾಡಿದ್ದಕ್ಕಿಂತ ನಾಲ್ಕು ಪಟ್ಟು ಹೆಚ್ಚಾಗಿದೆ. ಹಾಗೆಯೇ, ದೊಡ್ಡ ಎತ್ತಿನಲ್ಲಿ ನಿರ್ಮಾಣ, ರೀಯಲ್ ಎಸ್ಟೇಟ್ ಮಾರ್ಟ್ ಗೇಜ್ ಮಾರುಕಟ್ಟೆಗಳಲ್ಲಿ ಅವಕಾಶಗಳು. ಹಣಕಾಸು ಸೇವೆಗಳು: ನಾವು 89 ಬ್ಯಾಂಕ್ ಗಳನ್ನು ಹೊಂದಿದ್ದೆವು. ತುಂಬಾ ದೊಡ್ಡ ಸಂಖ್ಯೆ, ನಡೆಸಬೇಕಾದ ವ್ಯವಹಾರ ನಡೆಯುತ್ತಿರಲಿಲ್ಲ. ಅವುಗಳನ್ನು ಒಂದುಗೂಡಿಸಿ 89 ರಿಂದ 25 ಮಾಡಿದೆವು ಅವು ತಮ್ಮ ಬಂಡವಾಳ ಹೆಚ್ಚಿಸಿಕೊಳ್ಳಲು ಹೇಳಿದೆವು – ಷೇರು ಬಂಡವಾಳ. ಹಾಗೂ ಅದು ಸುಮಾರು $25 ಮಿಲಿಯನ್ ನಿಂದ $150 ಮಿಲಿಯನ್ ಗೆ ಏರಿಕೆಯಾಯಿತು. ಬ್ಯಾಂಕುಗಳು – ಈ ಬ್ಯಾಂಕುಗಳು ಈಗ ಕ್ರೋಢೀಕರಿಸಿವೆ, ಹಾಗೂ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಲಪಡಿಸಿದ್ದರಿಂದ ಹೊರಗಿನಿಂದ ಸಾಕಷ್ಟು ಹೂಡಿಕೆಗೆ ಆಕರ್ಶಣೆ ದೊರಕಿತು. U.K. ಯ ಬಾರ್ ಕ್ಲೇಯ್ಸ್ ಬ್ಯಾಂಕ್ 500 ಮಿಲಿಯನ್ ತರುತ್ತಿದೆ. ಸ್ಟಾಂಡರ್ಡ್ ಚಾರ್ಟರ್ಡ್ 140 ಮಿಲಿಯನ್ ತಂದಿದೆ. ಹಾಗೂ ನಾನು ಹೀಗೆ ಹೇಳುತ್ತಲೇ ಇರಬಹುದು. ಡಾಲರ್ ಗಳು, ವ್ಯವಸ್ಥೆಯೊಳಕ್ಕೆ ಬರುತ್ತಲೇ ಇದೆ. ನಾವು ಇದೇ ಕೆಲಸವನ್ನು ವಿಮೆ ವಲಯದಲ್ಲೂ ಮಾಡುತ್ತಿದ್ದೇವೆ. ಹಾಗಾಗಿ, ಹಣಕಾಸು ಸೇವೆಗಳಲ್ಲಿ ವಿಪುಲ ಅವಕಾಶಗಳಿವೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ, ಹಲವು ಆಫ್ರಿಕನ್ ರಾಷ್ಟ್ರಗಳಲ್ಲಿ ಹೇರಳ ಅವಕಾಶಗಳಿವೆ. ಬಹಳ ಜನಕ್ಕೆ ಪಶ್ಚಿಮ ಆಫ್ರಿಕಾ ಗೊತ್ತಿರುವುದೇ ಅದರಿಂದ: ವನ್ಯಮೃಗಗಳು, ಆನೆಗಳು ಹಾಗೂ ಇನ್ನೂ ಮುಂತಾದುವು. ಆದರೆ ಪ್ರವಾಸೋದ್ಯಮವನ್ನು ಯಾವ ರೀತಿ ನಿರ್ವಹಿಸಬೇಕೆಂದರೆ ಅದು ನಿಜವಾಗಿಯೂ ಜನರಿಗೆ ಸಹಾಯವಾಗುವಂತಿರುವುದು ಮುಖ್ಯ. ಹಾಗಾಗಿ, ನಾನೇನು ಹೇಳಬೇಕೆಂದಿದ್ದೇನೆ? ನಾನು ಹೇಳಲು ಪ್ರಯತ್ನಿಸುತ್ತಿರುವುದು ಈ ಖಂಡದಲ್ಲಿ ಒಂದು ಹೊಸ ಅಲೆ ಎದ್ದಿದೆ. ಒಂದು ಮುಕ್ತ ಮತ್ತು ಪ್ರಜಾಪ್ರಭುತ್ವವಾದದ ಹೊಸ ಅಲೆ, 2000 ದಿಂದ, ಮೂರನೇ ಎರಡರಷ್ಟು ಆಫ್ರಿಕನ್ ದೇಶಗಳು ಬಹು-ಪಕ್ಷೀಯ ಪ್ರಜಾಪ್ರಭುತ್ವ ಚುನಾವಣೆಗಳನ್ನು ಹೊಂದಿದ್ದವು. ಅವುಗಳಲ್ಲಿ ಎಲ್ಲವೂ ದೋಷರಹಿತವಾಗಿರಲಿಲ್ಲ, ಇರುವುದೂ ಇಲ್ಲ, ಆದರೆ ಪ್ರವೃತ್ತಿ ಸ್ಪಷ್ಟವಾಗಿತ್ತು. ನಾನು ಹೇಳಲು ಪ್ರಯತ್ನಿಸುತ್ತಿರುವುದೇನೆಂದರೆ ಮೂರು ವರ್ಷಗಳಿಂದ, ಈ ಖಂಡದ ಸರಾಸರಿ ಬೆಳವಣಿಗೆ ಉತ್ತಮಗೊಂಡು ವರ್ಷಕ್ಕೆ ಸುಮಾರು ಶೇಕಡ 2.5 ರಿಂದ ಸುಮಾರು ಶೇಕಡ 5 ಕ್ಕೆ ಏರಿದೆ. ಇದು ಹಲವು OECD ದೇಶಗಳ ಪ್ರದರ್ಶನಕ್ಕಿಂತ ಉತ್ತಮವಾಗಿದೆ. ಆದ್ದರಿಂದ ಬದಲಾವಣೆ ಸಂಭವಿಸುತ್ತಿದೆ ಎನ್ನುವುದು ಸ್ಪಷ್ಟವಾಗಿದೆ. ಖಂಡದಲ್ಲಿ ವಿವಾದಗಳು ಕಡಿಮೆಯಾಗಿವೆ; ಒಂದು ದಶಕದ ಹಿಂದೆ ಸುಮಾರು 12 ವಿವಾದಗಳಿಂದ, ಈಗ ನಾವು ಮೂರು ಅಥವಾ ನಾಲ್ಕು ವಿವಾದಗಳಿಗೆ ಇಳಿದಿದ್ದೇವೆ. ಇವುಗಳಲ್ಲಿ ಭಯಂಕರವಾದವುಗಳಲ್ಲಿ ಒಂದು, ನಿಮಗೆ ತಿಳಿದಂತೆ, ದರ್ಫುರ್. ಹಾಗೂ, ನಿಮಗೆ ತಿಳಿದೇ ಇದೆ, ನೆರೆಹೊರೆ ಪ್ರಭಾವ, ಅಂದರೆ ಖಂಡದ ಒಂದು ಭಾಗದಲ್ಲಿ ಏನಾದರೂ ಸಂಭವಿಸಿದರೆ, ಅದು ಇಡೀ ಖಂಡಕ್ಕೇ ವ್ಯಾಪಿಸಿದಂತೆ ಕಾಣುತ್ತದೆ. ನೀವು ಒಂದು ವಿಷಯ ತಿಳಿದುಕೊಳ್ಳಬೇಕು, ಈ ಖಂಡ -- ಹಲವು ರಾಷ್ಟ್ರಗಳನ್ನು ಒಳಗೊಂಡಿರುವ ಖಂಡ, ಒಂದು ರಾಷ್ಟ್ರವಲ್ಲ. ಹಾಗೂ ನಾವು ಮೂರು ಅಥವಾ ನಾಲ್ಕು ವಿವಾದಗಳಿಗೆ ಇಳಿದಿದ್ದರೆ, ಇದರ ಅರ್ಥ ಹೂಡಿಕೆ ಮಾಡಲು ಹೇರಳವಾದ ಅವಕಾಶಗಳಿವೆ ಸದೃಢ, ಬೆಳೆಯುತ್ತಿರುವ, ರೋಮಾಂಚಕಾರಿ ಅರ್ಥವ್ಯವಸ್ಥೆಗಳಲ್ಲಿ ವಿಫುಲ ಅವಕಾಶಗಳು ದೊರಕುವಲ್ಲಿ. ಹಾಗೂ ಈ ಹೂಡಿಕೆ ಬಗ್ಗೆ ಒಂದು ವಿಚಾರ ಹೇಳಲು ಇಷ್ಟಪಡುತ್ತೇನೆ. ಆಫ್ರಿಕನ್ನರಿಗೆ ಸಹಾಯಮಾಡುವ ಉತ್ತಮ ವಿಧಾನವೆಂದರೆ ಅವರು ತಮ್ಮ ಕಾಲಮೇಲೆ ತಾವು ನಿಲ್ಲಲು ಸಹಾಯಮಾಡುವುದು. ಹಾಗೂ ಇದನ್ನು ಉತ್ತಮ ವಿಧಾನದಲ್ಲಿ ಮಾಡುವುದೆಂದರೆ ಉದ್ಯೋಗಗಳನ್ನು ಸೃಷ್ಟಿಮಾಡಲು ಸಹಾಯಮಾಡುವುದು. ಈ ವಿಚಾರದಲ್ಲಿ ಯಾವ ವಿವಾದವೂ ಇಲ್ಲ, ಮಲೇರಿಯಾ ವಿರುದ್ಧ ಹೋರಾಡುವುದು, ಅದರಲ್ಲಿ ಹಣ ಹಾಕುವುದು ಮತ್ತು ಮಕ್ಕಳ ಜೀವ ಉಳಿಸುವುದು. ನಾನು ಹೇಳುತ್ತಿರುವುದು ಆ ವಿಷವಲ್ಲ. ಅದು ಒಳ್ಳೆಯದೇ. ಆದರೆ, ಒಂದು ಕುಟುಂಬದ ಮೇಲೆ ಉಂಟಾಗುವ ಪ್ರಭಾವವನ್ನು ಕಲ್ಪಿಸಿಕೊಳ್ಳಿ, ತಂದೆತಾಯಿಗಳು ಉದ್ಯೋಗಸ್ಥರಾಗಿದ್ದರೆ ಹಾಗೂ ತಮ್ಮ ಮಕ್ಕಳು ಶಾಲೆಗೆ ಹೋಗುವುದನ್ನು ಖಚಿತಪಡಿಸಿಕೊಂಡರೆ, ಈ ಖಾಯಿಲೆಯ ವಿರುದ್ಧ ಹೋರಾಡಲು ಬೇಕಾದ ಔಷದಗಳನ್ನು ತಾವೇ ಕೊಂಡುಕೊಂಡರೆ. ನೀವೇ ಲಾಭ ಮಾಡುವಂತಹ ಸ್ಥಳಗಳಲ್ಲಿ ನೀವು ಹೂಡಿಕೆ ಮಾಡುವಂತಿದ್ದರೆ ಉದ್ಯೋಗಗಳನ್ನು ಸೃಷ್ಟಿಸಿ, ಜನರು ತಮ್ಮ ಕಾಲ ಮೇಲೆ ತಾವು ನಿಲ್ಲಲು ಸಹಾಯಮಾಡಿದರೆ ಅದು ಒಂದು ಅತ್ಯುತ್ತಮ ಅವಕಾಶವಲ್ಲವೆ? ಅನುಸರಿಸಬೇಕಾದ ದಾರಿ ಅದೇ ಅಲ್ಲವೆ? ಹಾಗೂ ನಾನು ಇನ್ನೊಂದು ವಿಷಯ ಹೇಳುತ್ತೇನೆ, ಈ ಖಂಡದಲ್ಲಿ ಹೂಡಿಕೆ ಮಾಡಿರುವ ಅತಿ ಉತ್ತಮ ವ್ಯಕ್ತಿಗಳು ಯಾರು ಗೊತ್ತೆ, ಮಹಿಳೆಯರು. (ಚಪ್ಪಾಳೆ). ನನ್ನಲ್ಲಿ ಒಂದು CD ಇದೆ. ಕ್ಷಮಿಸಿ, ನಾನು ಇದನ್ನು ಸಕಾಲದಲ್ಲಿ ಹೇಳಲಿಲ್ಲ. ಅಥವಾ, ನೀವು ಇದನ್ನು ನೋಡಬೇಕೆಂದು ನನ್ನ ಇಚ್ಛೆಯಿತ್ತು. ಅದರ ಹೆಸರು, “ಆಫ್ರಿಕಾ: ವ್ಯಾಪಾರಕ್ಕೆ ತೆರೆದಿದೆ.” ಇದು ಒಂದು ವಿಡಿಯೊ, ವಾಸ್ತವದಲ್ಲಿ ಪಾರಿತೋಷಕ ಪಡೆದಿದೆ, ವರ್ಷದ ಅತ್ಯುತ್ತಮ ಸಾಕ್ಷ್ಯಚಿತ್ರ ಎಂದು. ತಿಳಿಯಿರಿ, ಇದನ್ನು ಮಾಡಿದ ಮಹಿಳೆ ಟಾನ್ ಜೇನಿಯಾದಲ್ಲಿರುತ್ತಾರೆ, ಅಲ್ಲಿ ಜೂನ್ ನಲ್ಲಿ ಅಧಿವೇಶನ ಇದೆ. ಇದು ತೋರಿಸುತ್ತದೆ ನೀವು ಆಫ್ರಿಕನ್ನರು, ಅದರಲ್ಲೂ ಆಫ್ರಿಕನ್ ಮಹಿಳೆಯರು, ಎಲ್ಲ ತೊಂದರೆಗಳ ನಡುವೆಯೂ ವ್ಯಾಪಾರಗಳನ್ನು ಅಭಿವೃದ್ಧಿಪಡಿಸಿದ್ದೀರಿ, ಅದರಲ್ಲಿ ಕೆಲವು ವಿಶ್ವ-ಶ್ರೇಣಿಯವು. ಈ ವಿಡಿಯೊದಲ್ಲಿರುವ ಒಬ್ಬ ಮಹಿಳೆ, ಅಡೆನಿಕೆ ಒಕುಂಟೇಸಿ, ಮಕ್ಕಳ ಉಡುಪುಗಳನ್ನು ತಯಾರಿಸುತ್ತಾಳೆ -- ಇದನ್ನು ಅವಳು ಒಂದು ಹವ್ಯಾಸವೆಂದು ಪ್ರಾರಂಭಿಸಿದಳು, ಅದು ಒಂದು ವ್ಯಾಪಾರವಾಗಿ ಬೆಳೆಯಿತು. ಆಫ್ರಿಕನ್ ವಸ್ತುಗಳನ್ನು ಮಿಶ್ರಮಾಡಿ, ನಾವು ಹೊಂದಿರುವಂತೆ, ಬೇರೆ ಪ್ರದೇಶದ ವಸ್ತುಗಳ ಜೊತೆ. ಅಂದರೆ, ಅವಳು ಕಾರ್ಡುರೋಯ್ ನೊಂದಿಗೆ ಡುಂಗರೀಗಳನ್ನು ಆಫ್ರಿಕನ್ ವಸ್ತುಗಳನ್ನು ಮಿಶ್ರಮಾಡಿ ತಯಾರಿಸುತ್ತಾಳೆ. ಇದು ಯಾವ ಮಟ್ಟಕ್ಕೆ ಬೆಳೆದಿದೆಯೆಂದರೆ ಆಕೆಗೆ ವಾಲ್-ಮಾರ್ಟ್ ನಿಂದ ಒಂದು ಬೇಡಿಕೆ ಬಂದಿದೆ. (ನಗು). 10:00 ಉಡುಪುಗಳಿಗೆ. ಇದು, ನಮ್ಮಲ್ಲಿ ಮಾಡಿತೋರಿಸುವ ಸಾಮರ್ಥ್ಯ ಉಳ್ಳವರಿದ್ದಾರೆ ಎಂಬುದನ್ನು ತೋರಿಸುತ್ತದೆ. ಹಾಗೂ ಈ ಮಹಿಳೆಯರು ಶ್ರಮಶೀಲರು ಮತ್ತು ಹಟವಂತರು; ಅವರು ಕಷ್ಟಪಟ್ಟು ಕೆಲಸಮಾಡುವರು. ನಾನು ಈ ರೀತಿ ಉದಾಹರಣೆಗಳನ್ನು ಕೊಡಬಲ್ಲೆ: ರವಾಂಡದ ಬಿಯಾಟ್ರೈಸ್ ಗಕೂಬ, ಒಂದು ಹೂವು ವ್ಯಾಪಾರ ಪ್ರಾರಂಭಿಸಿದರು ಹಾಗೂ ಪ್ರತಿದಿನ ಬೆಳಿಗ್ಗೆ ಅದು ಅಮ್ಸ್ಟರ್ ಡಾಮ್ ನಲ್ಲಿ ಡಚ್ ಹರಾಜಿಗೆ ರಫ್ತಾಗುತ್ತದೆ, ಹಾಗೂ ತನ್ನೊಂದಿಗೆ ಕೆಲಸಮಾಡಲು 200 ಜನ ಪುರುಷರು ಮತ್ತು ಮಹಿಳೆಯರನ್ನು ನೇಮಕ ಮಾಡಿಕೊಂಡಿದ್ದಾಳೆ. ಆದರೆ, ಇವುಗಳಲ್ಲಿ ಹೆಚ್ಚುಪಾಲು ಬಂಡವಾಳದ ಕೊರತೆಯಿಂದ ವಿಸ್ತರಿಸಿಲ್ಲ, ಏಕೆಂದರೆ ನಮ್ಮ ದೇಶದಿಂದ ಹೊರಗೆ ಯಾರೂ ನಂಬುವುದಿಲ್ಲ ನಾವು ಅಗತ್ಯವಿರುವ ಕೆಲಸ ಮಾಡುತ್ತೇವೆಂದು. ಯಾರೂ ಮಾರುಕಟ್ಟೆ ದೃಷ್ಟಿಯಿಂದ ಯೋಚಿಸುವುದಿಲ್ಲ. ಅವಕಾಶಗಳಿವೆ ಎಂದು ಯಾರೂ ಯೋಚಿಸುವುದಿಲ್ಲ. ಆದರೆ, ನಾನಿಲ್ಲಿ ನಿಂತು ಹೇಳುತ್ತೇನೆ, ಯಾರು ದೋಣಿಯನ್ನು ತಪ್ಪಿಸುತ್ತಾರೊ ಅದನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತಾರೆ. ಹಾಗಾಗಿ, ನೀವು ಆಫ್ರಿಕಾದಲ್ಲಿ ಇರಬೇಕೆಂದಿದ್ದರೆ ಹೂಡಿಕೆ ಬಗ್ಗೆ ಆಲೋಚಿಸಿ. ಈ ಪ್ರಪಂಚದ ಬಿಯಾಟ್ರೈಸ್ ಬಗ್ಗೆ ಯೋಚಿಸಿ, ಅಡೆನಿಕೇಸ್ ಬಗ್ಗೆ ಯೋಚಿಸಿ, ಇವರು ಅಸಾಧಾರಣ ಕೆಲಸ ಮಾಡುತ್ತಿದ್ದಾರೆ ಹಾಗೂ ಅವು ಅವರನ್ನು ಜಾಗತಿಕ ಆರ್ಥಿಕ ವ್ಯವಸ್ಥೆಗೆ ಕೊಂಡೊಯ್ಯುತ್ತಿದೆ, ಅದೇ ಸಮಯದಲ್ಲಿ ಅವರು ತಮ್ಮ ಜೊತೆಯೆ ಪುರುಷರು ಮತ್ತು ಮಹಿಳೆಯರಿಗೆ ಉದ್ಯೋಗ ನೀಡುತ್ತಿದ್ದಾರೆ, ಹಾಗೂ ಆ ಕುಟುಂಬಗಳಲ್ಲಿನ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ ಏಕೆಂದರೆ, ಅವರ ತಂದೆತಾಯಿಗಳು ಅಗತ್ಯವಿರುವಷ್ಟು ಸಂಪಾದಿಸುತ್ತಿದ್ದಾರೆ. ಆದ್ದರಿಂದ, ನಾನು ನಿಮ್ಮನ್ನು ಅವಕಾಶಗಳನ್ನು ಉಪಯೋಗಿಸಿಕೊಳ್ಳಿ ಎಂದು ಆಹ್ವಾನಿಸುತ್ತಿದ್ದೇನೆ. ನೀವು ಟಾನ್ ಜೇನಿಯಾಗೆ ಹೋದರೆ ಎಚ್ಚರಿಕೆಯಿಂದ ಆಲಿಸಿ, ಏಕೆಂದರೆ ನನಗೆ ಖಚಿತವಿದೆ ನೀವು ವಿಪುಲ ಅವಕಾಶಗಳ ಬಗ್ಗೆ ಆಲಿಸುತ್ತೀರ ನೀವು ಈ ಖಂಡಕ್ಕೆ ಒಳ್ಳೆಯದು ಸಂಭವಿಸುವಂತೆ ತೊಡಗಿಸಿಕೊಳ್ಳಿ ನಿಮಗೂ ಜನರಿಗೂ ಒಳ್ಳೆಯದಾಗುವಂತೆ. ತುಂಬಾ ಧನ್ಯವಾದಗಳು. (ಚಪ್ಪಾಳೆ)