[Script Info] Title: [Events] Format: Layer, Start, End, Style, Name, MarginL, MarginR, MarginV, Effect, Text Dialogue: 0,0:00:05.00,0:00:08.00,Default,,0000,0000,0000,,ಎಲ್ಲರಿಗೂ ವಂದನೆಗಳು,ಕ್ರಿಸ್ ಇಲ್ಲಿಗೆ ಬಂದವರೆಲ್ಲಾ ಹೇಳಿದರು Dialogue: 0,0:00:08.00,0:00:12.00,Default,,0000,0000,0000,,ಅವರು ಭಯಪಟ್ಟಿದ್ದಾರೆಂದು ಹೇಳಿದರು. ನನಗೆ ಭಯವಾಗಿದೆಯೊ, ಇಲ್ಲವೋ ನನಗೆ ಗೊತ್ತಿಲ್ಲ,♪♪ Dialogue: 0,0:00:12.00,0:00:16.00,Default,,0000,0000,0000,,ಆದರೆ, ಇದೇ ಮೊದಲು ನಾನು ಇಂತಹ ಸಭಿಕರನ್ನುದ್ದೇಶಿಸಿ ಮಾತಾಡುತ್ತಿರುವುದು .♪ Dialogue: 0,0:00:16.00,0:00:20.00,Default,,0000,0000,0000,,ಹಾಗೂ ನಿಮಗೆ ತೋರಿಸಲು ನನ್ನಲ್ಲಿ ಯಾವುದೇ ವಿಶಿಷ್ಟ ತಂತ್ರಜ್ಞಾನ ಇಲ್ಲ. Dialogue: 0,0:00:20.00,0:00:23.00,Default,,0000,0000,0000,,ಯಾವ ಸ್ಲೈಡುಗಳೂ ಇಲ್ಲ, ಹಾಗಾಗಿ ನೀವು ಕೇವಲ ನನ್ನನ್ನು ನೋಡುತ್ತಿರಬಹುದು. Dialogue: 0,0:00:23.00,0:00:26.00,Default,,0000,0000,0000,,(ನಗು). Dialogue: 0,0:00:26.00,0:00:32.00,Default,,0000,0000,0000,,ನಾನು ಈ ದಿನ ಏನು ಮಾಡಬೇಕೆಂದಿದ್ದೇನೆಂದರೆ ನಿಮ್ಮೊಂದಿಗೆ ಕೆಲವು ಕತೆಗಳನ್ನು ಹಂಚಿಕೊಳ್ಳುತ್ತೇನೆ♪ Dialogue: 0,0:00:32.00,0:00:35.00,Default,,0000,0000,0000,,ಹಾಗೂ ಒಂದು ವಿಭಿನ್ನ ಆಫ್ರಿಕಾ ಬಗ್ಗೆ ಮಾತಾಡಬೇಕೆಂದಿದ್ದೇನೆ. Dialogue: 0,0:00:35.00,0:00:39.00,Default,,0000,0000,0000,,ಈಗಾಗಲೇ ಇಂದು ಬೆಳಿಗ್ಗೆ ಆಫ್ರಿಕಾ ಬಗ್ಗೆ ಕೆಲವು ಪ್ರಸ್ತಾಪಗಳಿದ್ದುವು♪ Dialogue: 0,0:00:39.00,0:00:44.00,Default,,0000,0000,0000,,ಅವು ನೀವು ಯಾವಾಗಲೂ ಕೇಳುತ್ತಲಿರುತ್ತೀರಿ: HIV/AIDS ನ ಆಫ್ರಿಕಾ, Dialogue: 0,0:00:44.00,0:00:50.00,Default,,0000,0000,0000,,ಮಲೇರಿಯಾದ ಆಫ್ರಿಕಾ, ಬಡತನದ ಆಫ್ರಿಕಾ, ಸಂಘರ್ಷಗಳ ಆಫ್ರಿಕಾ, Dialogue: 0,0:00:50.00,0:00:53.00,Default,,0000,0000,0000,,ಹಾಗೂ ದುರಂತಗಳ ಆಫ್ರಿಕಾ.♪ Dialogue: 0,0:00:53.00,0:00:57.00,Default,,0000,0000,0000,,ಇವೆಲ್ಲಾ ಸಂಭವಿಸುತ್ತಿರುವುದು ಸತ್ಯವಾದರೂ,♪ Dialogue: 0,0:00:57.00,0:01:01.00,Default,,0000,0000,0000,,ನೀವು ಹೆಚ್ಚು ತಿಳಿದಿಲ್ಲದಿದ ಒಂದು ಆಫ್ರಿಕಾ ಇದೆ.♪ Dialogue: 0,0:01:01.00,0:01:05.00,Default,,0000,0000,0000,,ಹಾಗೂ ಕೆಲವು ಸಾರಿ ನನಗೆ ಗೊಂದಲವಾಗಿ ನನ್ನನ್ನು ನಾನೆ ಏಕೆ ಎಂದು ಪ್ರಶ್ನಿಸುತ್ತೇನೆ. Dialogue: 0,0:01:05.00,0:01:09.00,Default,,0000,0000,0000,,ಇದು ಕ್ರಿಸ್ ಪ್ರಸ್ತಾಪ ಮಾಡಿದ ಬದಲಾಗುತ್ತಿರುವ ಆಫ್ರಿಕಾ. Dialogue: 0,0:01:09.00,0:01:11.00,Default,,0000,0000,0000,,ಇದು ಅವಕಾಶಗಳ ಆಫ್ರಿಕಾ. Dialogue: 0,0:01:11.00,0:01:14.00,Default,,0000,0000,0000,,ಈ ಆಫ್ರಿಕಾ ಎಲ್ಲಿ ಜನರು ತಮ್ಮ ಭವಿಷ್ಯವನ್ನು Dialogue: 0,0:01:14.00,0:01:16.00,Default,,0000,0000,0000,,ಮತ್ತು ಹಣೆಬರಹವನ್ನು ರೂಪಿಸಬೇಕೆಂದಿದ್ದಾರೊ ಅದು. Dialogue: 0,0:01:16.00,0:01:19.00,Default,,0000,0000,0000,,ಈ ಆಫ್ರಿಕಾ ಎಲ್ಲಿ ಜನರು ಇದಕ್ಕಾಗಿ ಸಹಭಾಗಿತ್ವಕ್ಕಾಗಿ ಎದುರು Dialogue: 0,0:01:19.00,0:01:23.00,Default,,0000,0000,0000,,ನೋಡುತ್ತಿದ್ದಾರೊ. ನಾನು ಈ ದಿನ ಮಾತಾಡಬೇಕೆಂದಿರುವುದು ಈ ಬಗ್ಗೆಯೇ. Dialogue: 0,0:01:23.00,0:01:25.00,Default,,0000,0000,0000,,ನಾನು ನಿಮಗೆ ಆಫ್ರಿಕಾದ ಬದಲಾವಣೆ ಬಗ್ಗೆ Dialogue: 0,0:01:25.00,0:01:27.00,Default,,0000,0000,0000,,ಒಂದು ಕಥೆ ಹೇಳುವ ಮೂಲಕ ಪ್ರಾರಂಭಿಸುತ್ತೇನೆ. Dialogue: 0,0:01:28.00,0:01:33.00,Default,,0000,0000,0000,,15 ಸೆಪ್ಟೆಂಬರ್ 2005, ಮಿ.ಡೈಯಾಪ್ರೆಯ್ ಅಲಮೈಯೆಸೈಘ, Dialogue: 0,0:01:33.00,0:01:37.00,Default,,0000,0000,0000,,ನೈಜೀರಿಯದ ಒಂದು ತೈಲ-ಸಮೃದ್ಧ ರಾಜ್ಯದ ರಾಜ್ಯಪಾಲ Dialogue: 0,0:01:37.00,0:01:44.00,Default,,0000,0000,0000,,ಲಂಡನ್ ಗೆ ಭೇಟಿ ನೀಡಿದ್ದಾಗ ಲಂಡನ್ ಮೆಟ್ರೊಪಾಲಿಟನ್ ಪೊಲೀಸರು ದಸ್ತಗಿರಿ ಮಾಡಿದರು.♪ Dialogue: 0,0:01:44.00,0:01:49.00,Default,,0000,0000,0000,,ಅವರನ್ನು ಏಕೆ ದಸ್ತಗಿರಿ ಮಾಡಿದರೆಂದರೆ $8 ಮಿಲಿಯನ್ ಹಸ್ತಾಂತರವಾಗಿತ್ತು♪ Dialogue: 0,0:01:49.00,0:01:52.00,Default,,0000,0000,0000,,ಅದು ಯಾವುದೋ ನಿಷ್ಕ್ರಿಯ ಖಾತೆಗೆ ಹೋಗಿತ್ತು Dialogue: 0,0:01:52.00,0:01:55.00,Default,,0000,0000,0000,,ಆ ಖಾತೆ ಅವನಿಗೆ ಮತ್ತು ಅವನ ಕುಟುಂಬಕ್ಕೆ ಸೇರಿತ್ತು. Dialogue: 0,0:01:56.00,0:01:58.00,Default,,0000,0000,0000,,ಈ ದಸ್ತಗಿರಿ ಏಕೆ ಸಂಭವಿಸಿತೆಂದರೆ ಅಲ್ಲೊಂದು ಸಹಕಾರವಿತ್ತು Dialogue: 0,0:01:58.00,0:02:01.00,Default,,0000,0000,0000,,ಲಂಡನ್ ಮೆಟ್ರೊಪಾಲಿಟನ್ ಪೋಲಿಸ್ Dialogue: 0,0:02:01.00,0:02:04.00,Default,,0000,0000,0000,,ಮತ್ತು ಎಕನಾಮಿಕ್ ಮತ್ತು ಫೈನಾನ್ಶಿಯಲ್ ಕ್ರೈಮ್ಸ್ ಕಮೀಶನ್ ಆಫ್ ನೈಜೀರಿಯ ಜೊತೆ - Dialogue: 0,0:02:04.00,0:02:11.00,Default,,0000,0000,0000,,ನಮ್ಮಲ್ಲಿರುವ ಬಹಳ ದಕ್ಷ ಮತ್ತು ಧೈರ್ಯಶಾಲಿಗಳಲ್ಲಿ ಒಬ್ಬರ ನಾಯಕತ್ವದಲ್ಲಿ – ಮಿ.ನುಹು ರಿಬಾಡು. Dialogue: 0,0:02:11.00,0:02:14.00,Default,,0000,0000,0000,,ಅಲಮೈಯೆಸೈಘ ವಿರುದ್ಧ ಲಂಡನ್ ನಲ್ಲಿ ಅಪಾದನೆ ಮಾಡಲಾಯಿತು. Dialogue: 0,0:02:14.00,0:02:18.00,Default,,0000,0000,0000,,ಕೆಲವು ತಪ್ಪುಗಳಿಂದಾಗಿ ಅವನು ಹೆಣ್ಣಿನ ವೇಷದಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವಾಯಿತು Dialogue: 0,0:02:18.00,0:02:21.00,Default,,0000,0000,0000,,ಹಾಗೂ ಲಂಡನ್ ನಿಂದ ನೈಜೀರಿಯಕ್ಕೆ ಓಡಿಬಂದ, ಇಲ್ಲಿ,♪ Dialogue: 0,0:02:21.00,0:02:25.00,Default,,0000,0000,0000,,ನಮ್ಮ ಸಂವಿಧಾನದ ಪ್ರಕಾರ, ಅಧಿಕಾರದಲ್ಲಿರುವ Dialogue: 0,0:02:25.00,0:02:27.00,Default,,0000,0000,0000,,ರಾಜ್ಯಪಾಲರು, ಅಧ್ಯಕ್ಷರು ಮುಂತಾದವರಿಗೆ – ಹಲವು ರಾಷ್ಟ್ರಗಳಲ್ಲಿರುವಂತೆ -- Dialogue: 0,0:02:27.00,0:02:32.00,Default,,0000,0000,0000,,ರಕ್ಷಣೆಯಿದೆ ಹಾಗೂ ಅವರ ವಿರುದ್ಧ ಕಾನೂನು ಕ್ರಮ ನಡೆಯುವುದಿಲ್ಲ. ಆದರೆ ಆದದ್ದೇನು: Dialogue: 0,0:02:32.00,0:02:36.00,Default,,0000,0000,0000,,ಈ ನಡವಳಿಕೆಯಿಂದ ಜನರು ಎಷ್ಟು ರೊಚ್ಚಿಗೆದ್ದರೆಂದರೆ ರಾಜ್ಯ ವಿಧಾನಸಭೆ Dialogue: 0,0:02:36.00,0:02:42.00,Default,,0000,0000,0000,,ಅವರ ವಿರುದ್ಧ ದೋಷಾರೋಪಣೆ ಮಾಡಿ ಅವರನ್ನು ಪದವಿಯಿಂದ ಕಿತ್ತುಹಾಕಲು ಸಾಧ್ಯವಾಯಿತು. Dialogue: 0,0:02:43.00,0:02:45.00,Default,,0000,0000,0000,,ಈ ದಿನ, ಅಲಾಮ್ಸ್--ನಾವು ಅವರನ್ನು ಸಂಕ್ಷ್ತಿಪ್ತವಾಗಿ ಕರೆಯುವ ಹೆಸರು –ಜೈಲಿನಲ್ಲಿದ್ದಾರೆ. Dialogue: 0,0:02:46.00,0:02:51.00,Default,,0000,0000,0000,,ಇದು ಒಂದು ಸತ್ಯ ಕಥೆ , ಆಫ್ರಿಕಾದ ಜನರು ತಮ್ಮ ನಾಯಕರ♪ Dialogue: 0,0:02:51.00,0:02:56.00,Default,,0000,0000,0000,,ಲಂಚಕೋರತನವನ್ನು ಸಹಿಸಿಕೊಳ್ಳಲು ಇನ್ನು ಮುಂದೆ ಸಿದ್ಧರಿಲ್ಲ. Dialogue: 0,0:02:57.00,0:03:02.00,Default,,0000,0000,0000,,ಈ ಕಥೆ ಯಾವುದರ ಬಗ್ಗೆಯೆಂದರೆ ಜನರು ತಮ್ಮ ಸಂಪನ್ಮೂಲಗಳನ್ನು Dialogue: 0,0:03:02.00,0:03:07.00,Default,,0000,0000,0000,,ಅವರ ಒಳಿತಿಗಾಗಿ ನಿರ್ವಹಿಸಬೇಕು ಮತ್ತು ಅದನ್ನು ಹೊರದೇಶಗಳಿಗೆ Dialogue: 0,0:03:07.00,0:03:10.00,Default,,0000,0000,0000,,ಯಾರೋ ಕೆಲವು ಪ್ರಭಾವಶಾಲಿ ವ್ಯಕ್ತಿಗಳ ಲಾಭಕ್ಕೆ ಕೊಂಡೊಯ್ಯುವುದಲ್ಲ ಎಂದು ಬಯಸುತ್ತಾರೆ. Dialogue: 0,0:03:10.00,0:03:14.00,Default,,0000,0000,0000,,ಆದ್ದರಿಂದ, ನೀವು ಲಂಚಗುಳಿ ಆಫ್ರಿಕಾ ಬಗ್ಗೆ ಕೇಳಿದಾಗ --♪ Dialogue: 0,0:03:14.00,0:03:18.00,Default,,0000,0000,0000,,ಲಂಚಕೋರತನವೇ ಗೋಚರಿಸುತ್ತದೆ – ಜನರು ಮತ್ತು ಸರಕಾರಗಳು Dialogue: 0,0:03:18.00,0:03:21.00,Default,,0000,0000,0000,,ಇದರ ನಿರ್ಮೂಲನಕ್ಕಾಗಿ ತೀವ್ರವಾಗಿ ಪ್ರಯತ್ನಿಸುತ್ತಿವೆ ಎಂದು ನೀವು ತಿಳಿದುಕೊಳ್ಳಲಿ ಎಂದು ನಾನು ಬಯಸುತ್ತೇನೆ♪♪ Dialogue: 0,0:03:21.00,0:03:25.00,Default,,0000,0000,0000,,ಕೆಲವು ರಾಷ್ಟ್ರಗಳಲ್ಲಿ, ಹಾಗೂ ಕೆಲವು ಯಶಸ್ಸುಗಳು ಹೊರಹೊಮ್ಮುತ್ತಿವೆ.♪♪ Dialogue: 0,0:03:25.00,0:03:28.00,Default,,0000,0000,0000,,ಇದರ ಅರ್ಥ ಸಮಸ್ಯೆ ಕೊನೆಗೊಂಡಿದೆಯೆ? ಇದಕ್ಕೆ ಉತ್ತರ, ’ಇಲ್ಲ’. Dialogue: 0,0:03:28.00,0:03:32.00,Default,,0000,0000,0000,,ಇನ್ನೂ ಬಹಳ ದೂರ ಹೋಗಬೇಕಿದೆ, ಆದರೆ ಇಲ್ಲಿ ಮಾಡಬೇಕೆಂಬ ಮನಸ್ಸಿದೆ. Dialogue: 0,0:03:32.00,0:03:36.00,Default,,0000,0000,0000,,ಹಾಗೂ ಈ ಪ್ರಮುಖ ಹೋರಾಟದಲ್ಲಿ ಯಶಸ್ಸುಗಳು ಕಂಡುಬರುತ್ತಿವೆ. Dialogue: 0,0:03:36.00,0:03:38.00,Default,,0000,0000,0000,,ಹಾಗಾಗಿ, ನೀವು ಲಂಚಕೋರತನದ ಬಗ್ಗೆ ಕೇಳಿದರೆ Dialogue: 0,0:03:38.00,0:03:41.00,Default,,0000,0000,0000,,ಅದರ ಬಗ್ಗೆ ಇಲ್ಲಿ ಏನೂ ಮಾಡುತ್ತಿಲ್ಲ ಎಂಬ ಭಾವನೆ ಇಟ್ಟುಕೊಳ್ಳಬೇಡಿ -- Dialogue: 0,0:03:41.00,0:03:44.00,Default,,0000,0000,0000,,ಆಫ್ರಿಕಾದ ಯಾವುದೇ ದೇಶಗಳೊಂದಿಗೆ ವ್ಯವಹರಿಸಲು ಸಾಧ್ಯವಿಲ್ಲ ಎಂದುಕೊಳ್ಳಬೇಡಿ Dialogue: 0,0:03:44.00,0:03:47.00,Default,,0000,0000,0000,,ಲಂಚಕೋರತನ ತುಂಬಿತುಳುಕುತ್ತಿದೆ ಎಂಬುದಕ್ಕಾಗಿ. ಈಗ ಪರಿಸ್ಥಿತಿ ಹಾಗಿಲ್ಲ.♪ Dialogue: 0,0:03:47.00,0:03:53.00,Default,,0000,0000,0000,,ಹೋರಾಟ ಮಾಡುವ ಮನಸ್ಸಿದೆ, ಮತ್ತು ಹಲವು ರಾಷ್ಟ್ರಗಳಲ್ಲಿ ಈ ಹೋರಾಟ ನಡೆಯುತ್ತಿದೆ Dialogue: 0,0:03:53.00,0:03:57.00,Default,,0000,0000,0000,,ಹಾಗೂ ಗೆಲುವು ದೊರೆಯುತ್ತಿದೆ. ನನ್ನಂತಹ ಬೇರೆಯವರ ವಿಚಾರದಲ್ಲಿ, Dialogue: 0,0:03:57.00,0:04:00.00,Default,,0000,0000,0000,,ಇಲ್ಲಿ, ನೈಜೀರಿಯದಲ್ಲಿ ಸರ್ವಾಧಿಕಾರದ ದೀರ್ಘ ಚರಿತ್ರೆಯೇ ಇದೆ,♪ Dialogue: 0,0:04:00.00,0:04:04.00,Default,,0000,0000,0000,,ಹೋರಾಟ ನಡೆಯುತ್ತಲೇ ಇದೆ ಹಾಗೂ ನಾವು ದೊಡ್ಡ ದಾರಿಯನ್ನು ಕ್ರಮಿಸಬೇಕಾಗಿದೆ. Dialogue: 0,0:04:04.00,0:04:08.00,Default,,0000,0000,0000,,ಆದರೆ ವಾಸ್ತವವೆಂದರೆ ಇದು ಸಂಭವಿಸುತ್ತಾ ಇದೆ. Dialogue: 0,0:04:09.00,0:04:11.00,Default,,0000,0000,0000,,ಫಲಿತಾಂಶಗಳು ಕಂಡುಬರುತ್ತಿವೆ: Dialogue: 0,0:04:11.00,0:04:15.00,Default,,0000,0000,0000,,ವಿಶ್ವ ಬ್ಯಾಂಕ್ ಮತ್ತು ಇತರ ಸಂಸ್ಥೆಗಳು ಸ್ವತಂತ್ರವಾಗಿ ನಿಯಂತ್ರಿಸುತ್ತಿರುವುದನ್ನು Dialogue: 0,0:04:15.00,0:04:19.00,Default,,0000,0000,0000,,ನೋಡಿದರೆ ಹಲವು ಘಟನೆಗಳಲ್ಲಿ ಈ ಪರಿಸ್ಥಿತಿ ಇಳಿಮುಖವಾಗುತ್ತಿದೆ Dialogue: 0,0:04:19.00,0:04:22.00,Default,,0000,0000,0000,,ಲಂಚಕೋರತನದ ವಿಚಾರದಲ್ಲಿ, ಹಾಗೂ ಆಡಳಿತ ಉತ್ತಮಗೊಳ್ಳುತ್ತಿದೆ. Dialogue: 0,0:04:22.00,0:04:26.00,Default,,0000,0000,0000,,ಆಫ್ರಿಕಾದ ಆರ್ಥಿಕ ಆಯೋಗದ ಒಂದು ಅಧ್ಯಯನ Dialogue: 0,0:04:26.00,0:04:30.00,Default,,0000,0000,0000,,28 ಆಫ್ರಿಕಾ ದೇಶಗಳಲ್ಲಿ ರಾಜ್ಯಭಾರ ಉತ್ತಮ ಮಟ್ಟಕ್ಕೇರುವ ನಿಚ್ಚಳ ಪ್ರವೃತ್ತಿ ಇದೆ ಎಂದು ತೋರಿಸಿಕೊಟ್ಟಿದೆ. Dialogue: 0,0:04:30.00,0:04:32.00,Default,,0000,0000,0000,,ಹಾಗೂ ನಾನು ಇನ್ನೊಂದು ವಿಷಯ ಹೇಳಲು ಇಚ್ಛಿಸುತ್ತೇನೆ♪ Dialogue: 0,0:04:32.00,0:04:34.00,Default,,0000,0000,0000,,ಈ ಆಡಳಿತಾತ್ಮಕ ವಿಷಯ ಮುಗಿಸುವ ಮೊದಲು. Dialogue: 0,0:04:34.00,0:04:37.00,Default,,0000,0000,0000,,ಅದೆಂದರೆ, ಜನರು ಲಂಚಕೋರತನದ ಲಂಚಗುಳಿತನ ಬಗ್ಗೆ ಮಾತಾಡುತ್ತಾರೆ,. Dialogue: 0,0:04:37.00,0:04:39.00,Default,,0000,0000,0000,,ಅದರ ಬಗ್ಗೆ ಯಾರಾದರೂ ಮಾತಾಡಿದರೆ Dialogue: 0,0:04:39.00,0:04:41.00,Default,,0000,0000,0000,,ನಿಮಗೆ ತಕ್ಷಣ ಆಫ್ರಿಕಾ ನೆನಪಿಗೆ ಬರುತ್ತದೆ. Dialogue: 0,0:04:41.00,0:04:45.00,Default,,0000,0000,0000,,ಅದು ಇರುವ ಚಿತ್ರ: ಆಫ್ರಿಕಾ ದೇಶಗಳು. ಆದರೆ ನಾನು ಇದನ್ನು ಹೇಳುತ್ತೇನೆ: Dialogue: 0,0:04:45.00,0:04:51.00,Default,,0000,0000,0000,,ಲಂಡನ್ನಿನ ಒಂದು ಖಾತೆಗೆ ಅಲಮ್ಸ್ $8 ಮಿಲಿಯನ್ ಸಾಗಿಸಿರಬೇಕಾದರೆ Dialogue: 0,0:04:53.00,0:04:57.00,Default,,0000,0000,0000,,ಇತರರು ಇದೇ ರೀತಿ ಹಣ ಸಾಗಿಸಿರಬಹುದಾದ ಮೊತ್ತ Dialogue: 0,0:04:57.00,0:05:01.00,Default,,0000,0000,0000,,20 ರಿಂದ 40 ಬಿಲಿಯನ್ ಪ್ರಗತಿಶೀಲ ದೇಶಗಳಿಗೆ ಸೇರಿದ ಹಣ Dialogue: 0,0:05:01.00,0:05:04.00,Default,,0000,0000,0000,,ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ಕುಳಿತುಕೊಂಡಿದೆ – ಅವರು ಹೀಗೆ ಮಾಡಬಹುದಾದರೆ Dialogue: 0,0:05:04.00,0:05:07.00,Default,,0000,0000,0000,,ಅದಿನ್ನೇನು? ಅದು ಲಂಚಕೋರತನವಲ್ಲವೇ? Dialogue: 0,0:05:08.00,0:05:12.00,Default,,0000,0000,0000,,ಈ ದೇಶದಲ್ಲಿ, ನೀವು ಕದ್ದ ಮಾಲು ಪಡೆದರೆ ನಿಮ್ಮ ಮೇಲೆ ಕಾನೂನು ಕ್ರಮ ನಡೆಯುವುದಿಲ್ಲವೆ? Dialogue: 0,0:05:13.00,0:05:16.00,Default,,0000,0000,0000,,ಹಾಗಾಗಿ, ನಾವು ಈ ರೀತಿಯ ಲಂಚಕೋರತನದ ಬಗ್ಗೆ ಮಾತಾಡುವಾಗ, Dialogue: 0,0:05:16.00,0:05:19.00,Default,,0000,0000,0000,,ವಿಶ್ವದ ಮತ್ತೊಂದು ಭಾಗದಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆಯೂ ಮಾತಾಡೋಣ -- Dialogue: 0,0:05:19.00,0:05:23.00,Default,,0000,0000,0000,,ಹಣ ಎಲ್ಲಿಗೆ ಹೋಗುತ್ತಿದೆ ಹಾಗೂ ಅದನ್ನು ಹೇಗೆ ತಡೆಯಬಹುದು. Dialogue: 0,0:05:23.00,0:05:26.00,Default,,0000,0000,0000,,ನಾನು ಒಂದು ಪ್ರಸ್ತಾಪದ ಬಗ್ಗೆ ಕೆಲಸಮಾಡುತ್ತಿದ್ದೇನೆ, ವಿಶ್ವ ಬ್ಯಾಂಕ್ ಸಹಯೋಗದೊಡನೆ, Dialogue: 0,0:05:26.00,0:05:29.00,Default,,0000,0000,0000,,ಆಸ್ತಿ ವಸೂಲಾತಿ ಬಗ್ಗೆ, ನಾವೇನು ಮಾಡಬಹುದು Dialogue: 0,0:05:29.00,0:05:32.00,Default,,0000,0000,0000,,ಹೊರದೇಶಗಳಿಗೆ ಕೊಂಡೊಯ್ದಿರುವ ಹಣಗಳ ಬಗ್ಗೆ -- Dialogue: 0,0:05:32.00,0:05:35.00,Default,,0000,0000,0000,,ಪ್ರಗತಿಶೀಲ ರಾಷ್ಟ್ರಗಳ ಹಣ – ಅದನ್ನು ಹಿಂದಕ್ಕೆ ರವಾನಿಸಲು. Dialogue: 0,0:05:35.00,0:05:38.00,Default,,0000,0000,0000,,ಏಕೆಂದರೆ, ಅಲ್ಲಿರುವ ಕುಳಿತುಕೊಂಡಿರುವ ಬಿಲಿಯನ್ ಹಿಂದಕ್ಕೆ ಪಡೆದರೆ Dialogue: 0,0:05:38.00,0:05:41.00,Default,,0000,0000,0000,,ಇಲ್ಲಿನ ಕೆಲವು ದೇಶಗಳಿಗೆ ದೊರೆಯುತ್ತಿರುವ Dialogue: 0,0:05:41.00,0:05:44.00,Default,,0000,0000,0000,,ಒಟ್ಟು ಸಹಾಯಧನಕ್ಕಿಂತ ಹೆಚ್ಚು ಪಡೆದಂತೆ. Dialogue: 0,0:05:44.00,0:05:51.00,Default,,0000,0000,0000,,(ಚಪ್ಪಾಳೆ). Dialogue: 0,0:05:51.00,0:05:55.00,Default,,0000,0000,0000,,ನಾನು ಮಾತಾಡಬೇಕೆಂದಿರುವ ಎರಡನೆ ವಿಷಯವೆಂದರೆ ಸುಧಾರಣೆ ಮಾಡುವ ಮನಸ್ಸು. Dialogue: 0,0:05:55.00,0:05:59.00,Default,,0000,0000,0000,,ಆಫ್ರಿಕನ್ನರು, ಅವರು ಸುಸ್ತಾದ ನಂತರ – ನಾವು ಸುಸ್ತಾಗುತ್ತೇವೆ Dialogue: 0,0:05:59.00,0:06:04.00,Default,,0000,0000,0000,,ಪ್ರತಿಯೊಬ್ಬರ ದಾನ ಮತ್ತು ಧರ್ಮದ ವಿಷಯವಾಗಿ. Dialogue: 0,0:06:04.00,0:06:08.00,Default,,0000,0000,0000,,ನಾವು ಅದಕ್ಕೆ ಚಿರಋಣಿಗಳು, ಆದರೆ ನಮಗೆ ಗೊತ್ತಿದೆ Dialogue: 0,0:06:08.00,0:06:12.00,Default,,0000,0000,0000,,ನಾವು ಮನಸ್ಸು ಮಾಡಿದರೆ ನಮ್ಮ ಭವಿಷ್ಯವನ್ನು ನಾವೇ ರೂಪಿಸಿಕೊಳ್ಳಬಲ್ಲೆವು ಎಂದು. Dialogue: 0,0:06:13.00,0:06:17.00,Default,,0000,0000,0000,,ಹಾಗೂ ಹಲವು ಆಫ್ರಿಕಾ ದೇಶಗಳಲ್ಲಿ ಈಗ ಏನಾಗುತ್ತಿದೆ ಎಂದರೆ Dialogue: 0,0:06:17.00,0:06:21.00,Default,,0000,0000,0000,,ನಮ್ಮನ್ನು ಬೇರಾರೂ ಇದನ್ನು ಮಾಡಲಾರರು ಎಂಬ ಅರಿವು ಮೂಡುತ್ತಿದೆ. ನಾವು ಇದನ್ನು ಮಾಡಲೇ ಬೇಕು. Dialogue: 0,0:06:21.00,0:06:25.00,Default,,0000,0000,0000,,ನಾವು ಸಹಭಾಗಿಗಳನ್ನು ನಮ್ಮ ಬೆಂಬಲಕ್ಕೆ ಕರೆಯಬಹುದು, ಆದರೆ ಪ್ರಾರಂಭ ನಾವೇ ಮಾಡಬೇಕು. Dialogue: 0,0:06:25.00,0:06:28.00,Default,,0000,0000,0000,,ನಾವು ನಮ್ಮ ಆರ್ಥಿಕ ವ್ಯವಸ್ಥೆಗಳನ್ನು ಸುಧಾರಿಸಬೇಕು, ನಮ್ಮ ನಾಯಕತ್ವ ಬದಲಾಯಿಸಬೇಕು, Dialogue: 0,0:06:28.00,0:06:34.00,Default,,0000,0000,0000,,ಹೆಚ್ಚು ಪ್ರಜಾಪ್ರಭುತ್ವವಾದಿಗಳಾಗಬೇಕು, ಬದಲಾವಣೆ ಮತ್ತು ಮಾಹಿತಿಗೆ ಹೆಚ್ಚು ಮುಕ್ತ ಮನಸ್ಸು ಬೇಕು. Dialogue: 0,0:06:34.00,0:06:36.00,Default,,0000,0000,0000,,ಹಾಗೂ ನಾವು ಇದನ್ನೇ ಮಾಡ ಹೊರಟಿದ್ದು Dialogue: 0,0:06:36.00,0:06:39.00,Default,,0000,0000,0000,,ಈ ಖಂಡದ ಬಹು ದೊಡ್ಡ ದೇಶಗಳಲ್ಲಿ ಒಂದಾದ, ನೈಜೀರಿಯದಲ್ಲಿ. Dialogue: 0,0:06:39.00,0:06:42.00,Default,,0000,0000,0000,,ಒಂದು ವಿಷಯವೆಂದರೆ, ನೀವು ನೈಜೀರಿಯದಲ್ಲಿಲ್ಲದಿದ್ದರೆ ನೀವು ಆಫ್ರಿಕಾದಲ್ಲಿದ್ದಂತಲ್ಲ. Dialogue: 0,0:06:42.00,0:06:43.00,Default,,0000,0000,0000,,ನಿಮಗೆ ಅದನ್ನು ನಾನು ಹೇಳಬೇಕು. Dialogue: 0,0:06:43.00,0:06:44.00,Default,,0000,0000,0000,,(ನಗು) Dialogue: 0,0:06:44.00,0:06:46.00,Default,,0000,0000,0000,,ನಾಲ್ಕು ಜನ ಸಬ್-ಸಹಾರಾ ಆಫ್ರಿಕನ್ ರಲ್ಲಿ ಒಬ್ಬ ನೈಜೀರಿಯನ್ ಆಗಿರುತ್ತಾನೆ, Dialogue: 0,0:06:48.00,0:06:53.00,Default,,0000,0000,0000,,ಹಾಗೂ ಇಲ್ಲಿ 140 ಮಿಲಿಯನ್ ಚುರುಕಾದ ಜನರಿದ್ದಾರೆ – ಅರಾಜಕ ಜನ -- Dialogue: 0,0:06:54.00,0:06:58.00,Default,,0000,0000,0000,,ಆದರೆ ಬಹಳ ಸ್ವಾರಸ್ಯಕರ ಜನ. ನಿಮಗೆ ಖಂಡಿತವಾಗಿಯೂ ಬೇಸರವಾಗುವುದಿಲ್ಲ. Dialogue: 0,0:06:58.00,0:06:59.00,Default,,0000,0000,0000,,(ನಗು). Dialogue: 0,0:06:59.00,0:07:01.00,Default,,0000,0000,0000,,ನಾವು ಮಾಡಲು ಪ್ರಾರಂಭಿಸಿದ್ದೇನೆಂದರೆ ನಾವೇ Dialogue: 0,0:07:01.00,0:07:03.00,Default,,0000,0000,0000,,ಮುನ್ನುಗ್ಗಬೇಕು ಮತ್ತು ಸುಧಾರಣೆ ತರಬೇಕು ಎಂಬ ತಿಳಿವಳಿಕೆ ತಂದುಕೊಂಡದ್ದು. Dialogue: 0,0:07:04.00,0:07:06.00,Default,,0000,0000,0000,,ಹಾಗೂ ಒಬ್ಬ ನಾಯಕನ ಬೆಂಬಲದೊಂದಿಗೆ Dialogue: 0,0:07:06.00,0:07:09.00,Default,,0000,0000,0000,,ಈ ಸಮಯದಲ್ಲಿ ಸುಧಾರಣೆ ತರುವ ಇಚ್ಛೆಯುಳ್ಳವನು ದೊರೆತರೆ Dialogue: 0,0:07:09.00,0:07:11.00,Default,,0000,0000,0000,,ನಾವು ಒಂದು ಸಮಗ್ರ ಸುಧಾರಣೆ ಯೋಜನೆಯನ್ನು ಮುಂದಿಡುತ್ತೇವೆ Dialogue: 0,0:07:11.00,0:07:13.00,Default,,0000,0000,0000,,ಇದನ್ನು ನಾವೇ ಅಭಿವೃದ್ಧಿಪಡಿಸಿದ್ದೇವೆ. Dialogue: 0,0:07:13.00,0:07:16.00,Default,,0000,0000,0000,,ಇಂಟರ್ ನ್ಯಾಶನಲ್ ಮಾನೀಟರಿ ಫಂಡ್ ಅಲ್ಲ. ವಿಶ್ವ ಬ್ಯಾಂಕ್ ಅಲ್ಲ, Dialogue: 0,0:07:16.00,0:07:19.00,Default,,0000,0000,0000,,ಇಲ್ಲಿ ನಾನು 21 ವರ್ಷ ಕೆಲಸ ಮಾಡಿದೆ ಹಾಗೂ ಅದರ ಉಪಾಧ್ಯಕ್ಷ ಸ್ಥಾನಕ್ಕೆ ಬೆಳೆದೆ. Dialogue: 0,0:07:20.00,0:07:22.00,Default,,0000,0000,0000,,ನಿಮಗಾಗಿ ಯಾರೂ ಏನನ್ನೂ ಮಾಡಲಾರರು. ನಿಮಗೆ ನೀವೆ ಮಾಡಿಕೊಳ್ಳಬೇಕು. Dialogue: 0,0:07:22.00,0:07:26.00,Default,,0000,0000,0000,,ನಾವು ಒಂದು ಯೋಜನೆ ಸಿದ್ಧಪಡಿಸಿದ್ದೇವೆ, ಅದರಲ್ಲಿ, ಒಂದು: Dialogue: 0,0:07:26.00,0:07:30.00,Default,,0000,0000,0000,,ರಾಜ್ಯವನ್ನು ವ್ಯಾಪಾರದಿಂದ ಕಿತ್ತುಹಾಕಿ – ವ್ಯಾಪಾರದಲ್ಲಿ ಅದು ಇರಬೇಕಿಲ್ಲ. Dialogue: 0,0:07:30.00,0:07:32.00,Default,,0000,0000,0000,,ರಾಜ್ಯ ವ್ಯಾಪಾರದಲ್ಲಿ ವಸ್ತು ಮತ್ತು Dialogue: 0,0:07:32.00,0:07:33.00,Default,,0000,0000,0000,,ಸೇವೆಗಳನ್ನು ಉತ್ಪಾದನೆ ಮಾಡುವ ಕೆಲಸದಲ್ಲಿರಕೂಡದು Dialogue: 0,0:07:33.00,0:07:36.00,Default,,0000,0000,0000,,ಏಕೆಂದರೆ, ಅದು ಅಸಮರ್ಥ ಮತ್ತು ಅನರ್ಹ. Dialogue: 0,0:07:36.00,0:07:40.00,Default,,0000,0000,0000,,ಹಾಗಾಗಿ ನಾವು ನಮ್ಮ ಬಹಳಷ್ಟು ಘಟಕಗಳನ್ನು ಖಾಸಗೀಕರಣ ಮಾಡಲು ನಿರ್ಧರಿಸಿದೆವು. Dialogue: 0,0:07:40.00,0:07:44.00,Default,,0000,0000,0000,,(ಚಪ್ಪಾಳೆ). Dialogue: 0,0:07:45.00,0:07:49.00,Default,,0000,0000,0000,,ನಾವು – ಇದರ ಫಲವಾಗಿ, ನಮ್ಮ ಹಲವಾರು ಮಾರುಕಟ್ಟೆಗಳನ್ನು ಮುಕ್ತ ಮಾಡಲು ನಿರ್ಧರಿಸಿದೆವು. Dialogue: 0,0:07:49.00,0:07:52.00,Default,,0000,0000,0000,,ನೀವು ನಂಬುತ್ತೀರಾ, ಈ ಸುಧಾರಣೆಗೆ ಮೊದಲು -- Dialogue: 0,0:07:52.00,0:07:56.00,Default,,0000,0000,0000,,2003 ಅಂತ್ಯದಲ್ಲಿ ಪ್ರಾರಂಭವಾದದ್ದು, ನಾನು ವಾಷಿಂಗ್ ಟನ್ ಬಿಟ್ಟು Dialogue: 0,0:07:56.00,0:07:58.00,Default,,0000,0000,0000,,ವಿತ್ತ ಮಂತ್ರಿ ಪದವಿ ಸ್ವೀಕರಿಸಿದಾಗ -- Dialogue: 0,0:08:00.00,0:08:04.00,Default,,0000,0000,0000,,ನಮ್ಮಲ್ಲಿ ಒಂದು ಟೆಲಿಕಮ್ಯೂನಿಕೇಶನ್ ಕಂಪನಿ ಇತ್ತು ಹಾಗೂ ಅದು Dialogue: 0,0:08:04.00,0:08:09.00,Default,,0000,0000,0000,,ತನ್ನ 30-ವರ್ಷದ ಚರಿತ್ರೆಯಲ್ಲಿ ಕೇವಲ 4,500 ಲ್ಯಾಂಡ್ ಲೈನ್ ಗಳನ್ನು ಅಭಿವೃದ್ಧಿಪಡಿಸಿತ್ತು. Dialogue: 0,0:08:09.00,0:08:11.00,Default,,0000,0000,0000,,(ನಗು). Dialogue: 0,0:08:11.00,0:08:14.00,Default,,0000,0000,0000,,ನನ್ನ ದೇಶದಲ್ಲಿ ಒಂದು ದೂರವಾಣಿ ಹೊಂದುವುದೇ ಒಂದು ದುಬಾರಿ ಕೆಲಸ. Dialogue: 0,0:08:14.00,0:08:16.00,Default,,0000,0000,0000,,ನಿಮಗೆ ಸಿಗುತ್ತಿರಲಿಲ್ಲ. ನೀವು ಲಂಚ ಕೊಡಬೇಕಿತ್ತು. Dialogue: 0,0:08:16.00,0:08:18.00,Default,,0000,0000,0000,,ನೀವು ಒಂದು ಟೆಲಿಫೋನ್ ಹೊಂದಲು ಏನೆಲ್ಲಾ ಮಾಡಬೇಕಿತ್ತು. Dialogue: 0,0:08:18.00,0:08:21.00,Default,,0000,0000,0000,,ಅಧ್ಯಕ್ಷರಾದ ಒಬೇಸೇನಿಯೊ ಬೆಂಬಲನೀಡಿ ಮತ್ತು ಪ್ರಾರಂಭಿಸಿದ Dialogue: 0,0:08:21.00,0:08:25.00,Default,,0000,0000,0000,,ಟೆಲಿಕಮ್ಯೂನಿಕೇಶನ್ ವಲಯವನ್ನು ಮುಕ್ತಗೊಳಿಸಿದ ನಂತರ♪ Dialogue: 0,0:08:26.00,0:08:34.00,Default,,0000,0000,0000,,ನಾವು 4,500 ಲ್ಯಾಂಡ್ ಲೈನ್ ಗಳಿಂದ 32 ಮಿಲಿಯನ್ GSM ಲೈನ್ ಗಳಿಗೆ ತಲುಪಿದ್ದೇವೆ ಮತ್ತು ಇದು ಇನ್ನೂ ಹೆಚ್ಚುತ್ತಲೇ ಇದೆ. Dialogue: 0,0:08:34.00,0:08:39.00,Default,,0000,0000,0000,,ನೈಜೀರಿಯ ಟೆಲಿಕಾಂ ಮಾರುಕಟ್ಟೆ ವಿಶ್ವದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಎರಡನೆಯದು, Dialogue: 0,0:08:39.00,0:08:44.00,Default,,0000,0000,0000,,ಚೀನಾ ನಂತರ. ನಾವು ವರ್ಷಕ್ಕೆ ಸುಮಾರು $1 ಬಿಲಿಯನ್ ಹೂಡಿಕೆಯನ್ನು Dialogue: 0,0:08:44.00,0:08:50.00,Default,,0000,0000,0000,,ಟೆಲಿಕಾಂ ಕ್ಷೇತ್ರದಲ್ಲಿ ಪಡೆಯುತ್ತಿದ್ದೇವೆ. ಹಾಗೂ, ಇದು ಕೆಲವು ಚುರುಕು ವ್ಯಕ್ತಿಗಳನ್ನು ಬಿಟ್ಟರೆ ಬೇರಾರಿಗೂ ಗೊತ್ತಿಲ್ಲ. Dialogue: 0,0:08:50.00,0:08:53.00,Default,,0000,0000,0000,,(ನಗು) Dialogue: 0,0:08:53.00,0:08:57.00,Default,,0000,0000,0000,,ಮೊದಲು ಕಾಲಿಟ್ಟ ಬುದ್ಧಿವಂತ Dialogue: 0,0:08:57.00,0:08:59.00,Default,,0000,0000,0000,,ಕಂಪನಿ ಎಂದರೆ ದಕ್ಷಿಣ ಆಫ್ರಿಕಾದ MTN ಕಂಪನಿ. Dialogue: 0,0:08:59.00,0:09:03.00,Default,,0000,0000,0000,,ನಾನು ಹಣಕಾಸು ಮಂತ್ರಿಯಾಗಿದ್ದ ಮೂರು ವರ್ಷಗಳಲ್ಲಿ Dialogue: 0,0:09:03.00,0:09:06.00,Default,,0000,0000,0000,,ಅವರು ವರ್ಷಕ್ಕೆ ಸರಾಸರಿ $360 ಮಿಲಿಯನ್ ಲಾಭ ಮಾಡಿದರು. Dialogue: 0,0:09:08.00,0:09:14.00,Default,,0000,0000,0000,,$360 ಮಿಲಿಯನ್ ಒಂದು ಮಾರುಕಟ್ಟೆಯಲ್ಲಿ – ಒಂದು ದೇಶದಲ್ಲಿ,ಅದೂ ಒಂದು ಬಡ ದೇಶದಲ್ಲಿ, Dialogue: 0,0:09:14.00,0:09:18.00,Default,,0000,0000,0000,,ಸರಾಸರಿ ತಲಾಆದಾಯ $500 ಕ್ಕೂ ಕಡಿಮೆ ಇರುವ ದೇಶದಲ್ಲಿ. Dialogue: 0,0:09:19.00,0:09:21.00,Default,,0000,0000,0000,,ಹಾಗಾಗಿ ಇಲ್ಲಿ ಮಾರುಕಟ್ಟೆ ಇದೆ. Dialogue: 0,0:09:21.00,0:09:24.00,Default,,0000,0000,0000,,ಈ ವಿಷಯವನ್ನು ಅವರು ಮುಚ್ಚಿಟ್ಟರು, ಆದರೆ ಇತರರಿಗೆ ಬೇಗನೇ ತಿಳಿಯಿತು. Dialogue: 0,0:09:25.00,0:09:28.00,Default,,0000,0000,0000,,ನೈಜೀರಿಯನ್ನರೇ Dialogue: 0,0:09:28.00,0:09:30.00,Default,,0000,0000,0000,,ಕೆಲವು ವೈರ್ ಲೆಸ್ ಟೆಲಿಕಮ್ಯೂನಿಕೇಶನ್ ಕಂಪನಿಗಳನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಿದರು♪ Dialogue: 0,0:09:30.00,0:09:32.00,Default,,0000,0000,0000,,ಹಾಗೂ ಮೂರು ಅಥವಾ ನಾಲ್ಕು ಇತರ ಕಂಪನಿಗಳು ಬಂದುವು. Dialogue: 0,0:09:32.00,0:09:35.00,Default,,0000,0000,0000,,ಆದರೆ, ಇಲ್ಲಿ ಬಹುದೊಡ್ಡ ಮಾರುಕಟ್ಟೆಯಿದೆ, Dialogue: 0,0:09:35.00,0:09:38.00,Default,,0000,0000,0000,,ಹಾಗೂ ಜನಗಳಿಗೆ ಇದರ ಬಗ್ಗೆ ಗೊತ್ತಿಲ್ಲ, ಅಥವಾ ಅವರಿಗೆ ತಿಳಿದುಕೊಳ್ಳುವುದು ಬೇಕಿಲ್ಲ. Dialogue: 0,0:09:40.00,0:09:42.00,Default,,0000,0000,0000,,ಹಾಗಾಗಿ ನಾವು ಮಾಡಿದ ಒಂದು ಕೆಲಸವೆಂದರೆ ಖಾಸಗೀಕರಣ. Dialogue: 0,0:09:43.00,0:09:49.00,Default,,0000,0000,0000,,ನಾವು ಮಾಡಿದ ಇನ್ನೊಂದು ಕೆಲಸವೆಂದರೆ ನಮ್ಮ ಹಣಕಾಸು ನಿರ್ವಹಣೆಯನ್ನು ಉತ್ತಮವಾಗಿ ಮಾಡಿದ್ದು. Dialogue: 0,0:09:50.00,0:09:52.00,Default,,0000,0000,0000,,ಏಕೆಂದರೆ ಯಾರೋ ನಿಮಗೆ ಸಹಾಯಮಾಡಲಾರರು ಮತ್ತು ಬೆಂಬಲಿಸಲಾರರು Dialogue: 0,0:09:53.00,0:09:56.00,Default,,0000,0000,0000,,ನಿಮ್ಮ ಹಣಕಾಸು ಪರಿಸ್ಥಿತಿಯನ್ನು ನೀವು ಚೆನ್ನಾಗಿ ನಿಭಾಯಿಸದಿದ್ದರೆ. Dialogue: 0,0:09:56.00,0:10:00.00,Default,,0000,0000,0000,,ಹಾಗೂ, ನೈಜೀರಿಯ, ತೈಲ ವಲಯದೊಂದಿಗೆ, ಪ್ರಸಿದ್ಧಿ ಪಡೆದಿದೆ, Dialogue: 0,0:10:00.00,0:10:05.00,Default,,0000,0000,0000,,ಲಂಚಕೋರವೆಂತಲೂ ಮತ್ತು ತಮ್ಮ ಹಣಕಾಸನ್ನು ಸರಿಯಾಗಿ ನಿರ್ವಹಿಸುವುದಿಲ್ಲವೆಂದು. Dialogue: 0,0:10:05.00,0:10:09.00,Default,,0000,0000,0000,,ಹಾಗಾಗಿ, ನಾವೇನು ಮಾಡಲು ಪ್ರಯತ್ನಿಸಿದೆವು? ನಾವು ಒಂದು ಹಣಕಾಸು ನಿಯಮವನ್ನು ಪ್ರವೇಶಪಡಿಸಿದೆವು Dialogue: 0,0:10:10.00,0:10:12.00,Default,,0000,0000,0000,,ಅದು ನಮ್ಮ ಆಯವ್ಯಯವನ್ನು ತೈಲ-ಬೆಲೆಯಿಂದ ಬೇರ್ಪಡಿಸಿತು. Dialogue: 0,0:10:12.00,0:10:16.00,Default,,0000,0000,0000,,ಇದಕ್ಕೆ ಮೊದಲು ನಮ್ಮ ಆಯವ್ಯಯ ಲೆಕ್ಕಾಚಾರ ನಾವು ತರುವ ತೈಲದ ಮೇಲೆ ಮಾಡುತ್ತಿದ್ದೆವು, Dialogue: 0,0:10:16.00,0:10:21.00,Default,,0000,0000,0000,,ಏಕೆಂದರೆ ತೈಲ ಬಹು ದೊಡ್ಡ, ಹೆಚ್ಚು ಹಣ-ಸಂಪಾದಿಸುವ ವಲಯ Dialogue: 0,0:10:21.00,0:10:24.00,Default,,0000,0000,0000,,ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿ: ನಮ್ಮ ಹುಟ್ಟುವಳಿಯಲ್ಲಿ 70% ತೈಲದಿಂದ ಬರುತ್ತಿತ್ತು. Dialogue: 0,0:10:24.00,0:10:28.00,Default,,0000,0000,0000,,ಅದನ್ನು ನಾವು ಬೇರೆ ಮಾಡಿದೆವು, ಒಂದು ಸಾರಿ ಇದನ್ನು ಮಾಡಿದ ನಂತರ ನಮ್ಮ ಆಯವ್ಯಯವನ್ನು Dialogue: 0,0:10:28.00,0:10:31.00,Default,,0000,0000,0000,,ತೈಲ ಬೆಲೆಗಿಂತ ಸ್ವಲ್ಪ ಕಡಿಮೆ ಬೆಲೆಯಲ್ಲಿ ಲೆಕ್ಕಾಚಾರ ಮಾಡಲು ಪ್ರಾರಂಭಿಸಿದೆವು Dialogue: 0,0:10:31.00,0:10:35.00,Default,,0000,0000,0000,,ಹಾಗೂ ಆ ಬೆಲೆಗಿಂತ ಮೇಲ್ಪಟ್ಟದ್ದನ್ನು ಉಳಿತಾಯ ಮಾಡಿದೆವು. Dialogue: 0,0:10:36.00,0:10:39.00,Default,,0000,0000,0000,,ಅದು ಯಶಸ್ವಿಯಾಗುತ್ತದೆಂದು ನಮಗೆ ತಿಳಿದಿರಲಿಲ್ಲ, ಅದು ಬಹಳ ವಿವಾದಾತ್ಮಕವಾಗಿತ್ತು. Dialogue: 0,0:10:39.00,0:10:42.00,Default,,0000,0000,0000,,ಆದರೆ ಅದು ತತ್ ಕ್ಷಣ ಏನು ಮಾಡಿತೆಂದರೆ ನಮ್ಮ Dialogue: 0,0:10:42.00,0:10:45.00,Default,,0000,0000,0000,,ಆರ್ಥಿಕ ಅಭಿವೃದ್ದಿ ಲೆಕ್ಕಾಚಾರದಲ್ಲಿದ್ದ ಚಂಚಲತೆ -- Dialogue: 0,0:10:45.00,0:10:49.00,Default,,0000,0000,0000,,ಅದರಲ್ಲಿ, ತೈಲ ಬೆಲೆಗಳಲ್ಲಿ ಬಹಳ ಹೆಚ್ಚಾಗಿದ್ದರೂ ನಾವು ತ್ವರಿತಗತಿಯಲ್ಲಿ ಬೆಳೆಯುತ್ತಿದ್ದೆವು. Dialogue: 0,0:10:49.00,0:10:51.00,Default,,0000,0000,0000,,ಅವು ಕೆಳಗೆ ಬಿದ್ದರೆ, ನಾವೂ ಕೆಳಕ್ಕೆ ಬೀಳುತ್ತಿದ್ದೆವು. Dialogue: 0,0:10:51.00,0:10:55.00,Default,,0000,0000,0000,,ಹಾಗೂ, ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿ ನಾವು ಏನನ್ನೂ ಪಾವತಿಸಲಾರದಾಗಿದ್ದೆವು, ವೇತನಗಳನ್ನು ಕೂಡ. Dialogue: 0,0:10:56.00,0:11:00.00,Default,,0000,0000,0000,,ಅದು ನವಿರಾಯಿತು.ನಾವು ಉಳಿತಾಯ ಮಾಡುವಂತಾಯಿತು, ನಾನು ಬಿಡುವ ಮೊದಲು, Dialogue: 0,0:11:00.00,0:11:06.00,Default,,0000,0000,0000,,$27 ಬಿಲಿಯನ್. ಆದರೆ -- ಇದು ನಮ್ಮ ಆಪದ್ಧನಕ್ಕೆ ಹೋಗುತ್ತಿತ್ತು -- Dialogue: 0,0:11:06.00,0:11:10.00,Default,,0000,0000,0000,,ನಾನು 2003ರಲ್ಲಿ ಬಂದಾಗ, ನಾವು $7 ಬಿಲಿಯನ್ ಆಪದ್ಧನ ಹೊಂದಿದ್ದೆವು. Dialogue: 0,0:11:11.00,0:11:14.00,Default,,0000,0000,0000,,ನಾನು ಬಿಡುವ ಸಮಯಕ್ಕೆ, ನಾವು ಇದನ್ನು ಹೆಚ್ಚು ಕಡಿಮೆ $30 ಬಿಲಿಯನ್ ಗೆ ಏರಿಸಿದ್ದೆವು. ಹಾಗೂ Dialogue: 0,0:11:14.00,0:11:17.00,Default,,0000,0000,0000,,ಈಗ ನಾವು ಮಾತಾಡುತ್ತಿರುವ ಸಮಯದಲ್ಲಿಅದು ಸುಮಾರು $40 ಬಿಲಿಯನ್ ನಷ್ಟಾಗಿದೆ. Dialogue: 0,0:11:18.00,0:11:22.00,Default,,0000,0000,0000,,ಅದು ಹಣಕಾಸು ನಿರ್ವಹಣೆ ಸರಿಯಾಗಿ ನಿರ್ವಹಿಸಿರುವುದರಿಂದ. Dialogue: 0,0:11:23.00,0:11:26.00,Default,,0000,0000,0000,,ಅದು ನಮ್ಮ ಆರ್ಥಿಕ ವ್ಯವಸ್ಥೆಯನ್ನು ಹಿಡಿದಿಡುತ್ತದೆ, ಅದನ್ನು ಸದೃಢವಾಗಿ ಮಾಡುತ್ತದೆ. Dialogue: 0,0:11:26.00,0:11:29.00,Default,,0000,0000,0000,,ನಮ್ಮ ವಿನಿಮಯ ದರ ಯಾವಾಗಲೂ ಏರುಪೇರಾಗುತ್ತಿತ್ತು Dialogue: 0,0:11:29.00,0:11:33.00,Default,,0000,0000,0000,,ಈಗ ಸುಮಾರಾಗಿ ದೃಢವಾಗಿದೆ ಮತ್ತು ಸರಿಯಾಗಿ ನಿರ್ವಹಿಸಲಾಗುತ್ತಿದೆ, ಹಾಗಾಗಿ ವ್ಯಾಪಾರಸ್ಥರು Dialogue: 0,0:11:33.00,0:11:38.00,Default,,0000,0000,0000,,ಅರ್ಥ ವ್ಯವಸ್ಥೆಯಲ್ಲಿ ಬೆಲೆಗಳನ್ನು ಊಹಿಸಿಕೊಳ್ಳಬಹುದಾಗಿದೆ. Dialogue: 0,0:11:40.00,0:11:44.00,Default,,0000,0000,0000,,ನಾವು ಹಣದುಬ್ಬರವನ್ನು ಶೇಕಡ 28 ರಿಂದ ಸುಮಾರು ಶೇಕಡ 11 ಕ್ಕೆ ಇಳಿಸಿದೆವು. Dialogue: 0,0:11:46.00,0:11:52.00,Default,,0000,0000,0000,,ಹಾಗೂ ಹಿಂದಿನ ದಶಕದಲ್ಲಿ ಸರಾಸರಿ ಶೇಕಡ 2.3 ಇದ್ದ GDP ಏರಿಕೆಯಾಗುವಂತೆ ಮಾಡಿ Dialogue: 0,0:11:52.00,0:11:55.00,Default,,0000,0000,0000,,ಅದು ಈಗ ಶೆಕಡ 6.5 ಆಗಿದೆ. Dialogue: 0,0:11:56.00,0:11:59.00,Default,,0000,0000,0000,,ಹಾಗಾಗಿ, ನಾವು ಮಾಡಲು ಸಾಧ್ಯವಾದ ಎಲ್ಲ ಬದಲಾವಣೆಗಳು ಮತ್ತು ಸುಧಾರಣೆಗಳು Dialogue: 0,0:11:59.00,0:12:02.00,Default,,0000,0000,0000,,ಆರ್ಥಿಕ ವ್ಯವಸ್ಥೆಯಲ್ಲಿ ಅಳತೆಮಾಡಬಹುದಾದಂಥ ಫಲಿತಾಂಶ ತೋರಿಸಿವೆ. Dialogue: 0,0:12:02.00,0:12:06.00,Default,,0000,0000,0000,,ಹಾಗೂ ಇನ್ನೂ ಮುಖ್ಯ ಅಂಶವೆಂದರೆ, ನಾವು ತೈಲದಿಂದ ದೂರ ಉಳಿಯಬೇಕೆಂದಿರುವುದರಿಂದ Dialogue: 0,0:12:06.00,0:12:08.00,Default,,0000,0000,0000,,ಹಾಗೂ ಬೇರೆ ಮಾರ್ಗ ಆಯ್ಕೆಮಾಡಲಿರುವುದರಿಂದ -- ಹಾಗೂ ಸಾಕಷ್ಟು ಅವಕಾಶಗಳಿವೆ Dialogue: 0,0:12:08.00,0:12:11.00,Default,,0000,0000,0000,,ಇಂಥ ಒಂದು ದೊಡ್ಡ ದೇಶದಲ್ಲಿ ,ಆಫ್ರಿಕಾದ Dialogue: 0,0:12:13.00,0:12:16.00,Default,,0000,0000,0000,,ಹಲವು ದೇಶಗಳಲ್ಲಿರುವಂತೆ-ಗಮನಾರ್ಹ ಬೆಳವಣಿಗೆಯಾಯಿತು. Dialogue: 0,0:12:16.00,0:12:19.00,Default,,0000,0000,0000,,ತೈಲ ವಲಯದಿಂದ ಉಂಟಾದದ್ದಲ್ಲ, ತೈಲೇತರ ವಲಯದಿಂದ. Dialogue: 0,0:12:19.00,0:12:22.00,Default,,0000,0000,0000,,ಕೃಷಿ ಶೇಕಡ 8 ಕ್ಕೂ ಮಿಗಿಲಾಗಿ ಬೆಳೆಯಿತು. Dialogue: 0,0:12:22.00,0:12:26.00,Default,,0000,0000,0000,,ಟೆಲಿಕಾಂ ವಲಯ ಬೆಳೆದಂತೆ, ಗೃಹ ನಿರ್ಮಾಣ ಮತ್ತು ಕಟ್ಟಡ ನಿರ್ಮಾಣ, Dialogue: 0,0:12:26.00,0:12:31.00,Default,,0000,0000,0000,,ಹಾಗೆಯೇ ನಾನು ಹೇಳುತ್ತಲೇ ಇರಬಹುದು. ಹಾಗೂ ಇದನ್ನು ನಿಮಗೆ ನಿರೂಪಿಸಲು Dialogue: 0,0:12:31.00,0:12:33.00,Default,,0000,0000,0000,,ಒಂದು ಸಾರಿ ನೀವು ವಿಸ್ತೃತ ಆರ್ಥಿಕ ವ್ಯವಸ್ಥೆಯನ್ನು ಹಿಡಿತಕ್ಕೆ ತೆಗೆದುಕೊಂಡರೆ, Dialogue: 0,0:12:33.00,0:12:37.00,Default,,0000,0000,0000,,ವಿವಿಧ ವಲಯಗಳಲ್ಲಿರುವ ಅವಕಾಶಗಳು ಹೇರಳ. Dialogue: 0,0:12:38.00,0:12:41.00,Default,,0000,0000,0000,,ನಾನು ಹೇಳಿದಂತೆ, ನಮಗೆ ಕೃಷಿ ವಲಯದಲ್ಲಿ ಅವಕಾಶಗಳಿವೆ. Dialogue: 0,0:12:41.00,0:12:45.00,Default,,0000,0000,0000,,ನಮಗೆ ಘನ ಖನಿಜಗಳಲ್ಲಿ ಅವಕಾಶಗಳಿವೆ. ನಮ್ಮಲ್ಲಿ ಸಾಕಷ್ಟು ಖನಿಜಗಳಿವೆ Dialogue: 0,0:12:45.00,0:12:48.00,Default,,0000,0000,0000,,ಅವನ್ನು ಯಾರೊಬ್ಬರೂ ಪರಿಶೋಧಿಸಿಲ್ಲ ಅಥವಾ ಹೂಡಿಕೆ ಮಾಡಿಲ್ಲ. ನಮ್ಮ ತಿಳಿವಳಿಕೆಗೆ ಬಂದದ್ದು Dialogue: 0,0:12:48.00,0:12:51.00,Default,,0000,0000,0000,,ಇದನ್ನು ಸಾಧ್ಯವಾಗಿಸಲು ಸೂಕ್ತ ಕಾನೂನುಗಳು ಇಲ್ಲದೆ, Dialogue: 0,0:12:51.00,0:12:54.00,Default,,0000,0000,0000,,ಅದು ಸಂಭವಿಸದು. ಹಾಗಾಗಿ ನಮ್ಮಲ್ಲಿ ಗಣಿ ನಿಯಮ ಇದೆ Dialogue: 0,0:12:54.00,0:12:57.00,Default,,0000,0000,0000,,ಅದನ್ನು ವಿಶ್ವದ ಅತ್ಯುತ್ತಮ ನಿಯಮಗಳೊಂದಿಗೆ ಹೋಲಿಸಬಹುದಾಗಿದೆ. Dialogue: 0,0:12:58.00,0:13:00.00,Default,,0000,0000,0000,,ಗೃಹನಿರ್ಮಾಣ ಮತ್ತು ರೀಯಲ್ ಎಸ್ಟೇಟ್ ಅವಕಾಶಗಳು ನಮ್ಮಲ್ಲಿವೆ. Dialogue: 0,0:13:00.00,0:13:03.00,Default,,0000,0000,0000,,140 ಮಿಲಿಯನ್ ಜನಸಂಖ್ಯೆಯಿರುವ ಒಂದು ರಾಷ್ಟ್ರದಲ್ಲಿ ಏನೂ ಇರಲಿಲ್ಲ-- Dialogue: 0,0:13:04.00,0:13:09.00,Default,,0000,0000,0000,,ನಿಮಗೆ ತಿಳಿದಿರುವಂತೆ ಶಾಪಿಂಗ್ ಮಾಲ್ ಕೂಡ ಇರಲಿಲ್ಲ. Dialogue: 0,0:13:10.00,0:13:13.00,Default,,0000,0000,0000,,ಇದು ಯಾರಿಗೋ ದೊರಕಿದ ಹೂಡಿಕೆ ಅವಕಾಶ Dialogue: 0,0:13:13.00,0:13:15.00,Default,,0000,0000,0000,,ಅದು ಜನರ ಕಲ್ಪನೆಯನ್ನು ರೋಮಾಂಚನಗೊಳಿಸಿತು. Dialogue: 0,0:13:16.00,0:13:19.00,Default,,0000,0000,0000,,ಈಗ, ನಾವು ಯಾವ ಸ್ಥಿತಿಯಲ್ಲಿದ್ದೇವೆಂದರೆ ಈ ಮಾಲ್ ಗಳಲ್ಲಿ ವ್ಯಾಪಾರ Dialogue: 0,0:13:19.00,0:13:22.00,Default,,0000,0000,0000,,ಅವರು ಅಂದಾಜು ಮಾಡಿದ್ದಕ್ಕಿಂತ ನಾಲ್ಕು ಪಟ್ಟು ಹೆಚ್ಚಾಗಿದೆ. Dialogue: 0,0:13:23.00,0:13:26.00,Default,,0000,0000,0000,,ಹಾಗೆಯೇ, ದೊಡ್ಡ ಎತ್ತಿನಲ್ಲಿ ನಿರ್ಮಾಣ, ರೀಯಲ್ ಎಸ್ಟೇಟ್ Dialogue: 0,0:13:26.00,0:13:28.00,Default,,0000,0000,0000,,ಮಾರ್ಟ್ ಗೇಜ್ ಮಾರುಕಟ್ಟೆಗಳಲ್ಲಿ ಅವಕಾಶಗಳು. ಹಣಕಾಸು ಸೇವೆಗಳು: Dialogue: 0,0:13:29.00,0:13:33.00,Default,,0000,0000,0000,,ನಾವು 89 ಬ್ಯಾಂಕ್ ಗಳನ್ನು ಹೊಂದಿದ್ದೆವು. ತುಂಬಾ ದೊಡ್ಡ ಸಂಖ್ಯೆ, ನಡೆಸಬೇಕಾದ ವ್ಯವಹಾರ ನಡೆಯುತ್ತಿರಲಿಲ್ಲ. Dialogue: 0,0:13:33.00,0:13:37.00,Default,,0000,0000,0000,,ಅವುಗಳನ್ನು ಒಂದುಗೂಡಿಸಿ 89 ರಿಂದ 25 ಮಾಡಿದೆವು Dialogue: 0,0:13:37.00,0:13:42.00,Default,,0000,0000,0000,,ಅವು ತಮ್ಮ ಬಂಡವಾಳ ಹೆಚ್ಚಿಸಿಕೊಳ್ಳಲು ಹೇಳಿದೆವು – ಷೇರು ಬಂಡವಾಳ. Dialogue: 0,0:13:42.00,0:13:47.00,Default,,0000,0000,0000,,ಹಾಗೂ ಅದು ಸುಮಾರು $25 ಮಿಲಿಯನ್ ನಿಂದ $150 ಮಿಲಿಯನ್ ಗೆ ಏರಿಕೆಯಾಯಿತು. Dialogue: 0,0:13:47.00,0:13:51.00,Default,,0000,0000,0000,,ಬ್ಯಾಂಕುಗಳು – ಈ ಬ್ಯಾಂಕುಗಳು ಈಗ ಕ್ರೋಢೀಕರಿಸಿವೆ, ಹಾಗೂ ಬ್ಯಾಂಕಿಂಗ್ Dialogue: 0,0:13:51.00,0:13:55.00,Default,,0000,0000,0000,,ವ್ಯವಸ್ಥೆಯನ್ನು ಬಲಪಡಿಸಿದ್ದರಿಂದ ಹೊರಗಿನಿಂದ ಸಾಕಷ್ಟು ಹೂಡಿಕೆಗೆ ಆಕರ್ಶಣೆ ದೊರಕಿತು. Dialogue: 0,0:13:55.00,0:13:59.00,Default,,0000,0000,0000,,U.K. ಯ ಬಾರ್ ಕ್ಲೇಯ್ಸ್ ಬ್ಯಾಂಕ್ 500 ಮಿಲಿಯನ್ ತರುತ್ತಿದೆ. Dialogue: 0,0:13:59.00,0:14:03.00,Default,,0000,0000,0000,,ಸ್ಟಾಂಡರ್ಡ್ ಚಾರ್ಟರ್ಡ್ 140 ಮಿಲಿಯನ್ ತಂದಿದೆ. Dialogue: 0,0:14:03.00,0:14:06.00,Default,,0000,0000,0000,,ಹಾಗೂ ನಾನು ಹೀಗೆ ಹೇಳುತ್ತಲೇ ಇರಬಹುದು. ಡಾಲರ್ ಗಳು, ವ್ಯವಸ್ಥೆಯೊಳಕ್ಕೆ ಬರುತ್ತಲೇ ಇದೆ. Dialogue: 0,0:14:06.00,0:14:08.00,Default,,0000,0000,0000,,ನಾವು ಇದೇ ಕೆಲಸವನ್ನು ವಿಮೆ ವಲಯದಲ್ಲೂ ಮಾಡುತ್ತಿದ್ದೇವೆ. Dialogue: 0,0:14:08.00,0:14:11.00,Default,,0000,0000,0000,,ಹಾಗಾಗಿ, ಹಣಕಾಸು ಸೇವೆಗಳಲ್ಲಿ ವಿಪುಲ ಅವಕಾಶಗಳಿವೆ. Dialogue: 0,0:14:11.00,0:14:17.00,Default,,0000,0000,0000,,ಪ್ರವಾಸೋದ್ಯಮ ಕ್ಷೇತ್ರದಲ್ಲಿ, ಹಲವು ಆಫ್ರಿಕನ್ ರಾಷ್ಟ್ರಗಳಲ್ಲಿ ಹೇರಳ ಅವಕಾಶಗಳಿವೆ. Dialogue: 0,0:14:17.00,0:14:20.00,Default,,0000,0000,0000,,ಬಹಳ ಜನಕ್ಕೆ ಪಶ್ಚಿಮ ಆಫ್ರಿಕಾ ಗೊತ್ತಿರುವುದೇ ಅದರಿಂದ: Dialogue: 0,0:14:21.00,0:14:24.00,Default,,0000,0000,0000,,ವನ್ಯಮೃಗಗಳು, ಆನೆಗಳು ಹಾಗೂ ಇನ್ನೂ ಮುಂತಾದುವು. Dialogue: 0,0:14:24.00,0:14:26.00,Default,,0000,0000,0000,,ಆದರೆ ಪ್ರವಾಸೋದ್ಯಮವನ್ನು ಯಾವ ರೀತಿ ನಿರ್ವಹಿಸಬೇಕೆಂದರೆ Dialogue: 0,0:14:26.00,0:14:29.00,Default,,0000,0000,0000,,ಅದು ನಿಜವಾಗಿಯೂ ಜನರಿಗೆ ಸಹಾಯವಾಗುವಂತಿರುವುದು ಮುಖ್ಯ. Dialogue: 0,0:14:30.00,0:14:33.00,Default,,0000,0000,0000,,ಹಾಗಾಗಿ, ನಾನೇನು ಹೇಳಬೇಕೆಂದಿದ್ದೇನೆ? ನಾನು ಹೇಳಲು ಪ್ರಯತ್ನಿಸುತ್ತಿರುವುದು Dialogue: 0,0:14:33.00,0:14:36.00,Default,,0000,0000,0000,,ಈ ಖಂಡದಲ್ಲಿ ಒಂದು ಹೊಸ ಅಲೆ ಎದ್ದಿದೆ. Dialogue: 0,0:14:36.00,0:14:41.00,Default,,0000,0000,0000,,ಒಂದು ಮುಕ್ತ ಮತ್ತು ಪ್ರಜಾಪ್ರಭುತ್ವವಾದದ ಹೊಸ ಅಲೆ, 2000 ದಿಂದ, Dialogue: 0,0:14:41.00,0:14:43.00,Default,,0000,0000,0000,,ಮೂರನೇ ಎರಡರಷ್ಟು ಆಫ್ರಿಕನ್ ದೇಶಗಳು Dialogue: 0,0:14:43.00,0:14:45.00,Default,,0000,0000,0000,,ಬಹು-ಪಕ್ಷೀಯ ಪ್ರಜಾಪ್ರಭುತ್ವ ಚುನಾವಣೆಗಳನ್ನು ಹೊಂದಿದ್ದವು. Dialogue: 0,0:14:46.00,0:14:49.00,Default,,0000,0000,0000,,ಅವುಗಳಲ್ಲಿ ಎಲ್ಲವೂ ದೋಷರಹಿತವಾಗಿರಲಿಲ್ಲ, ಇರುವುದೂ ಇಲ್ಲ, Dialogue: 0,0:14:49.00,0:14:51.00,Default,,0000,0000,0000,,ಆದರೆ ಪ್ರವೃತ್ತಿ ಸ್ಪಷ್ಟವಾಗಿತ್ತು. Dialogue: 0,0:14:51.00,0:14:55.00,Default,,0000,0000,0000,,ನಾನು ಹೇಳಲು ಪ್ರಯತ್ನಿಸುತ್ತಿರುವುದೇನೆಂದರೆ ಮೂರು ವರ್ಷಗಳಿಂದ, Dialogue: 0,0:14:55.00,0:14:58.00,Default,,0000,0000,0000,,ಈ ಖಂಡದ ಸರಾಸರಿ ಬೆಳವಣಿಗೆ ಉತ್ತಮಗೊಂಡು Dialogue: 0,0:14:58.00,0:15:02.00,Default,,0000,0000,0000,,ವರ್ಷಕ್ಕೆ ಸುಮಾರು ಶೇಕಡ 2.5 ರಿಂದ ಸುಮಾರು ಶೇಕಡ 5 ಕ್ಕೆ ಏರಿದೆ. Dialogue: 0,0:15:02.00,0:15:06.00,Default,,0000,0000,0000,,ಇದು ಹಲವು OECD ದೇಶಗಳ ಪ್ರದರ್ಶನಕ್ಕಿಂತ ಉತ್ತಮವಾಗಿದೆ. Dialogue: 0,0:15:07.00,0:15:11.00,Default,,0000,0000,0000,,ಆದ್ದರಿಂದ ಬದಲಾವಣೆ ಸಂಭವಿಸುತ್ತಿದೆ ಎನ್ನುವುದು ಸ್ಪಷ್ಟವಾಗಿದೆ. Dialogue: 0,0:15:11.00,0:15:13.00,Default,,0000,0000,0000,,ಖಂಡದಲ್ಲಿ ವಿವಾದಗಳು ಕಡಿಮೆಯಾಗಿವೆ; Dialogue: 0,0:15:14.00,0:15:16.00,Default,,0000,0000,0000,,ಒಂದು ದಶಕದ ಹಿಂದೆ ಸುಮಾರು 12 ವಿವಾದಗಳಿಂದ, Dialogue: 0,0:15:16.00,0:15:18.00,Default,,0000,0000,0000,,ಈಗ ನಾವು ಮೂರು ಅಥವಾ ನಾಲ್ಕು ವಿವಾದಗಳಿಗೆ ಇಳಿದಿದ್ದೇವೆ. Dialogue: 0,0:15:18.00,0:15:21.00,Default,,0000,0000,0000,,ಇವುಗಳಲ್ಲಿ ಭಯಂಕರವಾದವುಗಳಲ್ಲಿ ಒಂದು, ನಿಮಗೆ ತಿಳಿದಂತೆ, ದರ್ಫುರ್. Dialogue: 0,0:15:21.00,0:15:24.00,Default,,0000,0000,0000,,ಹಾಗೂ, ನಿಮಗೆ ತಿಳಿದೇ ಇದೆ, ನೆರೆಹೊರೆ ಪ್ರಭಾವ, ಅಂದರೆ Dialogue: 0,0:15:24.00,0:15:26.00,Default,,0000,0000,0000,,ಖಂಡದ ಒಂದು ಭಾಗದಲ್ಲಿ ಏನಾದರೂ ಸಂಭವಿಸಿದರೆ, Dialogue: 0,0:15:26.00,0:15:29.00,Default,,0000,0000,0000,,ಅದು ಇಡೀ ಖಂಡಕ್ಕೇ ವ್ಯಾಪಿಸಿದಂತೆ ಕಾಣುತ್ತದೆ. Dialogue: 0,0:15:29.00,0:15:32.00,Default,,0000,0000,0000,,ನೀವು ಒಂದು ವಿಷಯ ತಿಳಿದುಕೊಳ್ಳಬೇಕು, ಈ ಖಂಡ -- Dialogue: 0,0:15:32.00,0:15:38.00,Default,,0000,0000,0000,,ಹಲವು ರಾಷ್ಟ್ರಗಳನ್ನು ಒಳಗೊಂಡಿರುವ ಖಂಡ, ಒಂದು ರಾಷ್ಟ್ರವಲ್ಲ. Dialogue: 0,0:15:38.00,0:15:40.00,Default,,0000,0000,0000,,ಹಾಗೂ ನಾವು ಮೂರು ಅಥವಾ ನಾಲ್ಕು ವಿವಾದಗಳಿಗೆ ಇಳಿದಿದ್ದರೆ, Dialogue: 0,0:15:40.00,0:15:43.00,Default,,0000,0000,0000,,ಇದರ ಅರ್ಥ ಹೂಡಿಕೆ ಮಾಡಲು ಹೇರಳವಾದ ಅವಕಾಶಗಳಿವೆ Dialogue: 0,0:15:43.00,0:15:50.00,Default,,0000,0000,0000,,ಸದೃಢ, ಬೆಳೆಯುತ್ತಿರುವ, ರೋಮಾಂಚಕಾರಿ ಅರ್ಥವ್ಯವಸ್ಥೆಗಳಲ್ಲಿ Dialogue: 0,0:15:50.00,0:15:53.00,Default,,0000,0000,0000,,ವಿಫುಲ ಅವಕಾಶಗಳು ದೊರಕುವಲ್ಲಿ. Dialogue: 0,0:15:54.00,0:15:58.00,Default,,0000,0000,0000,,ಹಾಗೂ ಈ ಹೂಡಿಕೆ ಬಗ್ಗೆ ಒಂದು ವಿಚಾರ ಹೇಳಲು ಇಷ್ಟಪಡುತ್ತೇನೆ. Dialogue: 0,0:15:59.00,0:16:01.00,Default,,0000,0000,0000,,ಆಫ್ರಿಕನ್ನರಿಗೆ ಸಹಾಯಮಾಡುವ ಉತ್ತಮ ವಿಧಾನವೆಂದರೆ Dialogue: 0,0:16:02.00,0:16:05.00,Default,,0000,0000,0000,,ಅವರು ತಮ್ಮ ಕಾಲಮೇಲೆ ತಾವು ನಿಲ್ಲಲು ಸಹಾಯಮಾಡುವುದು. Dialogue: 0,0:16:05.00,0:16:09.00,Default,,0000,0000,0000,,ಹಾಗೂ ಇದನ್ನು ಉತ್ತಮ ವಿಧಾನದಲ್ಲಿ ಮಾಡುವುದೆಂದರೆ ಉದ್ಯೋಗಗಳನ್ನು ಸೃಷ್ಟಿಮಾಡಲು ಸಹಾಯಮಾಡುವುದು. Dialogue: 0,0:16:10.00,0:16:14.00,Default,,0000,0000,0000,,ಈ ವಿಚಾರದಲ್ಲಿ ಯಾವ ವಿವಾದವೂ ಇಲ್ಲ, ಮಲೇರಿಯಾ ವಿರುದ್ಧ ಹೋರಾಡುವುದು, ಅದರಲ್ಲಿ ಹಣ ಹಾಕುವುದು Dialogue: 0,0:16:14.00,0:16:18.00,Default,,0000,0000,0000,,ಮತ್ತು ಮಕ್ಕಳ ಜೀವ ಉಳಿಸುವುದು. ನಾನು ಹೇಳುತ್ತಿರುವುದು ಆ ವಿಷವಲ್ಲ. ಅದು ಒಳ್ಳೆಯದೇ. Dialogue: 0,0:16:19.00,0:16:23.00,Default,,0000,0000,0000,,ಆದರೆ, ಒಂದು ಕುಟುಂಬದ ಮೇಲೆ ಉಂಟಾಗುವ ಪ್ರಭಾವವನ್ನು ಕಲ್ಪಿಸಿಕೊಳ್ಳಿ, ತಂದೆತಾಯಿಗಳು ಉದ್ಯೋಗಸ್ಥರಾಗಿದ್ದರೆ Dialogue: 0,0:16:23.00,0:16:25.00,Default,,0000,0000,0000,,ಹಾಗೂ ತಮ್ಮ ಮಕ್ಕಳು ಶಾಲೆಗೆ ಹೋಗುವುದನ್ನು ಖಚಿತಪಡಿಸಿಕೊಂಡರೆ, Dialogue: 0,0:16:25.00,0:16:28.00,Default,,0000,0000,0000,,ಈ ಖಾಯಿಲೆಯ ವಿರುದ್ಧ ಹೋರಾಡಲು ಬೇಕಾದ ಔಷದಗಳನ್ನು ತಾವೇ ಕೊಂಡುಕೊಂಡರೆ. Dialogue: 0,0:16:28.00,0:16:32.00,Default,,0000,0000,0000,,ನೀವೇ ಲಾಭ ಮಾಡುವಂತಹ ಸ್ಥಳಗಳಲ್ಲಿ ನೀವು ಹೂಡಿಕೆ ಮಾಡುವಂತಿದ್ದರೆ Dialogue: 0,0:16:32.00,0:16:37.00,Default,,0000,0000,0000,,ಉದ್ಯೋಗಗಳನ್ನು ಸೃಷ್ಟಿಸಿ, ಜನರು ತಮ್ಮ ಕಾಲ ಮೇಲೆ ತಾವು ನಿಲ್ಲಲು ಸಹಾಯಮಾಡಿದರೆ Dialogue: 0,0:16:37.00,0:16:42.00,Default,,0000,0000,0000,,ಅದು ಒಂದು ಅತ್ಯುತ್ತಮ ಅವಕಾಶವಲ್ಲವೆ? ಅನುಸರಿಸಬೇಕಾದ ದಾರಿ ಅದೇ ಅಲ್ಲವೆ? Dialogue: 0,0:16:42.00,0:16:45.00,Default,,0000,0000,0000,,ಹಾಗೂ ನಾನು ಇನ್ನೊಂದು ವಿಷಯ ಹೇಳುತ್ತೇನೆ, ಈ ಖಂಡದಲ್ಲಿ ಹೂಡಿಕೆ ಮಾಡಿರುವ ಅತಿ Dialogue: 0,0:16:45.00,0:16:47.00,Default,,0000,0000,0000,,ಉತ್ತಮ ವ್ಯಕ್ತಿಗಳು ಯಾರು ಗೊತ್ತೆ, ಮಹಿಳೆಯರು. Dialogue: 0,0:16:48.00,0:16:55.00,Default,,0000,0000,0000,,(ಚಪ್ಪಾಳೆ). Dialogue: 0,0:16:55.00,0:17:00.00,Default,,0000,0000,0000,,ನನ್ನಲ್ಲಿ ಒಂದು CD ಇದೆ. ಕ್ಷಮಿಸಿ, ನಾನು ಇದನ್ನು ಸಕಾಲದಲ್ಲಿ ಹೇಳಲಿಲ್ಲ. Dialogue: 0,0:17:00.00,0:17:02.00,Default,,0000,0000,0000,,ಅಥವಾ, ನೀವು ಇದನ್ನು ನೋಡಬೇಕೆಂದು ನನ್ನ ಇಚ್ಛೆಯಿತ್ತು. Dialogue: 0,0:17:02.00,0:17:05.00,Default,,0000,0000,0000,,ಅದರ ಹೆಸರು, “ಆಫ್ರಿಕಾ: ವ್ಯಾಪಾರಕ್ಕೆ ತೆರೆದಿದೆ.” Dialogue: 0,0:17:06.00,0:17:09.00,Default,,0000,0000,0000,,ಇದು ಒಂದು ವಿಡಿಯೊ, ವಾಸ್ತವದಲ್ಲಿ ಪಾರಿತೋಷಕ ಪಡೆದಿದೆ, Dialogue: 0,0:17:09.00,0:17:11.00,Default,,0000,0000,0000,,ವರ್ಷದ ಅತ್ಯುತ್ತಮ ಸಾಕ್ಷ್ಯಚಿತ್ರ ಎಂದು. Dialogue: 0,0:17:11.00,0:17:13.00,Default,,0000,0000,0000,,ತಿಳಿಯಿರಿ, ಇದನ್ನು ಮಾಡಿದ ಮಹಿಳೆ Dialogue: 0,0:17:13.00,0:17:18.00,Default,,0000,0000,0000,,ಟಾನ್ ಜೇನಿಯಾದಲ್ಲಿರುತ್ತಾರೆ, ಅಲ್ಲಿ ಜೂನ್ ನಲ್ಲಿ ಅಧಿವೇಶನ ಇದೆ. Dialogue: 0,0:17:19.00,0:17:24.00,Default,,0000,0000,0000,,ಇದು ತೋರಿಸುತ್ತದೆ ನೀವು ಆಫ್ರಿಕನ್ನರು, ಅದರಲ್ಲೂ ಆಫ್ರಿಕನ್ ಮಹಿಳೆಯರು, Dialogue: 0,0:17:24.00,0:17:29.00,Default,,0000,0000,0000,,ಎಲ್ಲ ತೊಂದರೆಗಳ ನಡುವೆಯೂ ವ್ಯಾಪಾರಗಳನ್ನು ಅಭಿವೃದ್ಧಿಪಡಿಸಿದ್ದೀರಿ, ಅದರಲ್ಲಿ ಕೆಲವು ವಿಶ್ವ-ಶ್ರೇಣಿಯವು. Dialogue: 0,0:17:29.00,0:17:32.00,Default,,0000,0000,0000,,ಈ ವಿಡಿಯೊದಲ್ಲಿರುವ ಒಬ್ಬ ಮಹಿಳೆ, ಅಡೆನಿಕೆ ಒಕುಂಟೇಸಿ, Dialogue: 0,0:17:32.00,0:17:34.00,Default,,0000,0000,0000,,ಮಕ್ಕಳ ಉಡುಪುಗಳನ್ನು ತಯಾರಿಸುತ್ತಾಳೆ -- Dialogue: 0,0:17:34.00,0:17:39.00,Default,,0000,0000,0000,,ಇದನ್ನು ಅವಳು ಒಂದು ಹವ್ಯಾಸವೆಂದು ಪ್ರಾರಂಭಿಸಿದಳು, ಅದು ಒಂದು ವ್ಯಾಪಾರವಾಗಿ ಬೆಳೆಯಿತು. Dialogue: 0,0:17:39.00,0:17:42.00,Default,,0000,0000,0000,,ಆಫ್ರಿಕನ್ ವಸ್ತುಗಳನ್ನು ಮಿಶ್ರಮಾಡಿ, ನಾವು ಹೊಂದಿರುವಂತೆ, Dialogue: 0,0:17:43.00,0:17:44.00,Default,,0000,0000,0000,,ಬೇರೆ ಪ್ರದೇಶದ ವಸ್ತುಗಳ ಜೊತೆ. Dialogue: 0,0:17:44.00,0:17:49.00,Default,,0000,0000,0000,,ಅಂದರೆ, ಅವಳು ಕಾರ್ಡುರೋಯ್ ನೊಂದಿಗೆ ಡುಂಗರೀಗಳನ್ನು Dialogue: 0,0:17:49.00,0:17:53.00,Default,,0000,0000,0000,,ಆಫ್ರಿಕನ್ ವಸ್ತುಗಳನ್ನು ಮಿಶ್ರಮಾಡಿ ತಯಾರಿಸುತ್ತಾಳೆ. Dialogue: 0,0:17:55.00,0:17:58.00,Default,,0000,0000,0000,,ಇದು ಯಾವ ಮಟ್ಟಕ್ಕೆ ಬೆಳೆದಿದೆಯೆಂದರೆ ಆಕೆಗೆ ವಾಲ್-ಮಾರ್ಟ್ ನಿಂದ ಒಂದು ಬೇಡಿಕೆ ಬಂದಿದೆ. Dialogue: 0,0:17:59.00,0:18:00.00,Default,,0000,0000,0000,,(ನಗು). Dialogue: 0,0:18:01.00,0:18:03.00,Default,,0000,0000,0000,,10:00 ಉಡುಪುಗಳಿಗೆ. Dialogue: 0,0:18:04.00,0:18:08.00,Default,,0000,0000,0000,,ಇದು, ನಮ್ಮಲ್ಲಿ ಮಾಡಿತೋರಿಸುವ ಸಾಮರ್ಥ್ಯ ಉಳ್ಳವರಿದ್ದಾರೆ ಎಂಬುದನ್ನು ತೋರಿಸುತ್ತದೆ. Dialogue: 0,0:18:08.00,0:18:13.00,Default,,0000,0000,0000,,ಹಾಗೂ ಈ ಮಹಿಳೆಯರು ಶ್ರಮಶೀಲರು ಮತ್ತು ಹಟವಂತರು; ಅವರು ಕಷ್ಟಪಟ್ಟು ಕೆಲಸಮಾಡುವರು. Dialogue: 0,0:18:13.00,0:18:15.00,Default,,0000,0000,0000,,ನಾನು ಈ ರೀತಿ ಉದಾಹರಣೆಗಳನ್ನು ಕೊಡಬಲ್ಲೆ: Dialogue: 0,0:18:15.00,0:18:19.00,Default,,0000,0000,0000,,ರವಾಂಡದ ಬಿಯಾಟ್ರೈಸ್ ಗಕೂಬ, ಒಂದು ಹೂವು ವ್ಯಾಪಾರ ಪ್ರಾರಂಭಿಸಿದರು Dialogue: 0,0:18:19.00,0:18:24.00,Default,,0000,0000,0000,,ಹಾಗೂ ಪ್ರತಿದಿನ ಬೆಳಿಗ್ಗೆ ಅದು ಅಮ್ಸ್ಟರ್ ಡಾಮ್ ನಲ್ಲಿ ಡಚ್ ಹರಾಜಿಗೆ ರಫ್ತಾಗುತ್ತದೆ, Dialogue: 0,0:18:24.00,0:18:28.00,Default,,0000,0000,0000,,ಹಾಗೂ ತನ್ನೊಂದಿಗೆ ಕೆಲಸಮಾಡಲು 200 ಜನ ಪುರುಷರು ಮತ್ತು ಮಹಿಳೆಯರನ್ನು ನೇಮಕ ಮಾಡಿಕೊಂಡಿದ್ದಾಳೆ. Dialogue: 0,0:18:29.00,0:18:33.00,Default,,0000,0000,0000,,ಆದರೆ, ಇವುಗಳಲ್ಲಿ ಹೆಚ್ಚುಪಾಲು ಬಂಡವಾಳದ ಕೊರತೆಯಿಂದ ವಿಸ್ತರಿಸಿಲ್ಲ, Dialogue: 0,0:18:34.00,0:18:37.00,Default,,0000,0000,0000,,ಏಕೆಂದರೆ ನಮ್ಮ ದೇಶದಿಂದ ಹೊರಗೆ ಯಾರೂ ನಂಬುವುದಿಲ್ಲ Dialogue: 0,0:18:37.00,0:18:42.00,Default,,0000,0000,0000,,ನಾವು ಅಗತ್ಯವಿರುವ ಕೆಲಸ ಮಾಡುತ್ತೇವೆಂದು. ಯಾರೂ ಮಾರುಕಟ್ಟೆ ದೃಷ್ಟಿಯಿಂದ ಯೋಚಿಸುವುದಿಲ್ಲ. Dialogue: 0,0:18:42.00,0:18:45.00,Default,,0000,0000,0000,,ಅವಕಾಶಗಳಿವೆ ಎಂದು ಯಾರೂ ಯೋಚಿಸುವುದಿಲ್ಲ. Dialogue: 0,0:18:45.00,0:18:48.00,Default,,0000,0000,0000,,ಆದರೆ, ನಾನಿಲ್ಲಿ ನಿಂತು ಹೇಳುತ್ತೇನೆ, ಯಾರು ದೋಣಿಯನ್ನು ತಪ್ಪಿಸುತ್ತಾರೊ Dialogue: 0,0:18:48.00,0:18:50.00,Default,,0000,0000,0000,,ಅದನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತಾರೆ. Dialogue: 0,0:18:50.00,0:18:56.00,Default,,0000,0000,0000,,ಹಾಗಾಗಿ, ನೀವು ಆಫ್ರಿಕಾದಲ್ಲಿ ಇರಬೇಕೆಂದಿದ್ದರೆ ಹೂಡಿಕೆ ಬಗ್ಗೆ ಆಲೋಚಿಸಿ. Dialogue: 0,0:18:57.00,0:19:03.00,Default,,0000,0000,0000,,ಈ ಪ್ರಪಂಚದ ಬಿಯಾಟ್ರೈಸ್ ಬಗ್ಗೆ ಯೋಚಿಸಿ, ಅಡೆನಿಕೇಸ್ ಬಗ್ಗೆ ಯೋಚಿಸಿ, Dialogue: 0,0:19:03.00,0:19:06.00,Default,,0000,0000,0000,,ಇವರು ಅಸಾಧಾರಣ ಕೆಲಸ ಮಾಡುತ್ತಿದ್ದಾರೆ ಹಾಗೂ ಅವು ಅವರನ್ನು Dialogue: 0,0:19:06.00,0:19:09.00,Default,,0000,0000,0000,,ಜಾಗತಿಕ ಆರ್ಥಿಕ ವ್ಯವಸ್ಥೆಗೆ ಕೊಂಡೊಯ್ಯುತ್ತಿದೆ, ಅದೇ ಸಮಯದಲ್ಲಿ ಅವರು Dialogue: 0,0:19:09.00,0:19:12.00,Default,,0000,0000,0000,,ತಮ್ಮ ಜೊತೆಯೆ ಪುರುಷರು ಮತ್ತು ಮಹಿಳೆಯರಿಗೆ ಉದ್ಯೋಗ ನೀಡುತ್ತಿದ್ದಾರೆ, Dialogue: 0,0:19:12.00,0:19:14.00,Default,,0000,0000,0000,,ಹಾಗೂ ಆ ಕುಟುಂಬಗಳಲ್ಲಿನ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ Dialogue: 0,0:19:14.00,0:19:17.00,Default,,0000,0000,0000,,ಏಕೆಂದರೆ, ಅವರ ತಂದೆತಾಯಿಗಳು ಅಗತ್ಯವಿರುವಷ್ಟು ಸಂಪಾದಿಸುತ್ತಿದ್ದಾರೆ. Dialogue: 0,0:19:18.00,0:19:22.00,Default,,0000,0000,0000,,ಆದ್ದರಿಂದ, ನಾನು ನಿಮ್ಮನ್ನು ಅವಕಾಶಗಳನ್ನು ಉಪಯೋಗಿಸಿಕೊಳ್ಳಿ ಎಂದು ಆಹ್ವಾನಿಸುತ್ತಿದ್ದೇನೆ. Dialogue: 0,0:19:23.00,0:19:27.00,Default,,0000,0000,0000,,ನೀವು ಟಾನ್ ಜೇನಿಯಾಗೆ ಹೋದರೆ ಎಚ್ಚರಿಕೆಯಿಂದ ಆಲಿಸಿ, Dialogue: 0,0:19:27.00,0:19:31.00,Default,,0000,0000,0000,,ಏಕೆಂದರೆ ನನಗೆ ಖಚಿತವಿದೆ ನೀವು ವಿಪುಲ ಅವಕಾಶಗಳ ಬಗ್ಗೆ ಆಲಿಸುತ್ತೀರ Dialogue: 0,0:19:31.00,0:19:36.00,Default,,0000,0000,0000,,ನೀವು ಈ ಖಂಡಕ್ಕೆ ಒಳ್ಳೆಯದು ಸಂಭವಿಸುವಂತೆ ತೊಡಗಿಸಿಕೊಳ್ಳಿ Dialogue: 0,0:19:36.00,0:19:41.00,Default,,0000,0000,0000,,ನಿಮಗೂ ಜನರಿಗೂ ಒಳ್ಳೆಯದಾಗುವಂತೆ. Dialogue: 0,0:19:41.00,0:19:42.00,Default,,0000,0000,0000,,ತುಂಬಾ ಧನ್ಯವಾದಗಳು. Dialogue: 0,0:19:42.00,0:19:50.00,Default,,0000,0000,0000,,(ಚಪ್ಪಾಳೆ)