1 00:00:05,000 --> 00:00:08,000 ಎಲ್ಲರಿಗೂ ವಂದನೆಗಳು,ಕ್ರಿಸ್ ಇಲ್ಲಿಗೆ ಬಂದವರೆಲ್ಲಾ ಹೇಳಿದರು 2 00:00:08,000 --> 00:00:12,000 ಅವರು ಭಯಪಟ್ಟಿದ್ದಾರೆಂದು ಹೇಳಿದರು. ನನಗೆ ಭಯವಾಗಿದೆಯೊ, ಇಲ್ಲವೋ ನನಗೆ ಗೊತ್ತಿಲ್ಲ,♪♪ 3 00:00:12,000 --> 00:00:16,000 ಆದರೆ, ಇದೇ ಮೊದಲು ನಾನು ಇಂತಹ ಸಭಿಕರನ್ನುದ್ದೇಶಿಸಿ ಮಾತಾಡುತ್ತಿರುವುದು .♪ 4 00:00:16,000 --> 00:00:20,000 ಹಾಗೂ ನಿಮಗೆ ತೋರಿಸಲು ನನ್ನಲ್ಲಿ ಯಾವುದೇ ವಿಶಿಷ್ಟ ತಂತ್ರಜ್ಞಾನ ಇಲ್ಲ. 5 00:00:20,000 --> 00:00:23,000 ಯಾವ ಸ್ಲೈಡುಗಳೂ ಇಲ್ಲ, ಹಾಗಾಗಿ ನೀವು ಕೇವಲ ನನ್ನನ್ನು ನೋಡುತ್ತಿರಬಹುದು. 6 00:00:23,000 --> 00:00:26,000 (ನಗು). 7 00:00:26,000 --> 00:00:32,000 ನಾನು ಈ ದಿನ ಏನು ಮಾಡಬೇಕೆಂದಿದ್ದೇನೆಂದರೆ ನಿಮ್ಮೊಂದಿಗೆ ಕೆಲವು ಕತೆಗಳನ್ನು ಹಂಚಿಕೊಳ್ಳುತ್ತೇನೆ♪ 8 00:00:32,000 --> 00:00:35,000 ಹಾಗೂ ಒಂದು ವಿಭಿನ್ನ ಆಫ್ರಿಕಾ ಬಗ್ಗೆ ಮಾತಾಡಬೇಕೆಂದಿದ್ದೇನೆ. 9 00:00:35,000 --> 00:00:39,000 ಈಗಾಗಲೇ ಇಂದು ಬೆಳಿಗ್ಗೆ ಆಫ್ರಿಕಾ ಬಗ್ಗೆ ಕೆಲವು ಪ್ರಸ್ತಾಪಗಳಿದ್ದುವು♪ 10 00:00:39,000 --> 00:00:44,000 ಅವು ನೀವು ಯಾವಾಗಲೂ ಕೇಳುತ್ತಲಿರುತ್ತೀರಿ: HIV/AIDS ನ ಆಫ್ರಿಕಾ, 11 00:00:44,000 --> 00:00:50,000 ಮಲೇರಿಯಾದ ಆಫ್ರಿಕಾ, ಬಡತನದ ಆಫ್ರಿಕಾ, ಸಂಘರ್ಷಗಳ ಆಫ್ರಿಕಾ, 12 00:00:50,000 --> 00:00:53,000 ಹಾಗೂ ದುರಂತಗಳ ಆಫ್ರಿಕಾ.♪ 13 00:00:53,000 --> 00:00:57,000 ಇವೆಲ್ಲಾ ಸಂಭವಿಸುತ್ತಿರುವುದು ಸತ್ಯವಾದರೂ,♪ 14 00:00:57,000 --> 00:01:01,000 ನೀವು ಹೆಚ್ಚು ತಿಳಿದಿಲ್ಲದಿದ ಒಂದು ಆಫ್ರಿಕಾ ಇದೆ.♪ 15 00:01:01,000 --> 00:01:05,000 ಹಾಗೂ ಕೆಲವು ಸಾರಿ ನನಗೆ ಗೊಂದಲವಾಗಿ ನನ್ನನ್ನು ನಾನೆ ಏಕೆ ಎಂದು ಪ್ರಶ್ನಿಸುತ್ತೇನೆ. 16 00:01:05,000 --> 00:01:09,000 ಇದು ಕ್ರಿಸ್ ಪ್ರಸ್ತಾಪ ಮಾಡಿದ ಬದಲಾಗುತ್ತಿರುವ ಆಫ್ರಿಕಾ. 17 00:01:09,000 --> 00:01:11,000 ಇದು ಅವಕಾಶಗಳ ಆಫ್ರಿಕಾ. 18 00:01:11,000 --> 00:01:14,000 ಈ ಆಫ್ರಿಕಾ ಎಲ್ಲಿ ಜನರು ತಮ್ಮ ಭವಿಷ್ಯವನ್ನು 19 00:01:14,000 --> 00:01:16,000 ಮತ್ತು ಹಣೆಬರಹವನ್ನು ರೂಪಿಸಬೇಕೆಂದಿದ್ದಾರೊ ಅದು. 20 00:01:16,000 --> 00:01:19,000 ಈ ಆಫ್ರಿಕಾ ಎಲ್ಲಿ ಜನರು ಇದಕ್ಕಾಗಿ ಸಹಭಾಗಿತ್ವಕ್ಕಾಗಿ ಎದುರು 21 00:01:19,000 --> 00:01:23,000 ನೋಡುತ್ತಿದ್ದಾರೊ. ನಾನು ಈ ದಿನ ಮಾತಾಡಬೇಕೆಂದಿರುವುದು ಈ ಬಗ್ಗೆಯೇ. 22 00:01:23,000 --> 00:01:25,000 ನಾನು ನಿಮಗೆ ಆಫ್ರಿಕಾದ ಬದಲಾವಣೆ ಬಗ್ಗೆ 23 00:01:25,000 --> 00:01:27,000 ಒಂದು ಕಥೆ ಹೇಳುವ ಮೂಲಕ ಪ್ರಾರಂಭಿಸುತ್ತೇನೆ. 24 00:01:28,000 --> 00:01:33,000 15 ಸೆಪ್ಟೆಂಬರ್ 2005, ಮಿ.ಡೈಯಾಪ್ರೆಯ್ ಅಲಮೈಯೆಸೈಘ, 25 00:01:33,000 --> 00:01:37,000 ನೈಜೀರಿಯದ ಒಂದು ತೈಲ-ಸಮೃದ್ಧ ರಾಜ್ಯದ ರಾಜ್ಯಪಾಲ 26 00:01:37,000 --> 00:01:44,000 ಲಂಡನ್ ಗೆ ಭೇಟಿ ನೀಡಿದ್ದಾಗ ಲಂಡನ್ ಮೆಟ್ರೊಪಾಲಿಟನ್ ಪೊಲೀಸರು ದಸ್ತಗಿರಿ ಮಾಡಿದರು.♪ 27 00:01:44,000 --> 00:01:49,000 ಅವರನ್ನು ಏಕೆ ದಸ್ತಗಿರಿ ಮಾಡಿದರೆಂದರೆ $8 ಮಿಲಿಯನ್ ಹಸ್ತಾಂತರವಾಗಿತ್ತು♪ 28 00:01:49,000 --> 00:01:52,000 ಅದು ಯಾವುದೋ ನಿಷ್ಕ್ರಿಯ ಖಾತೆಗೆ ಹೋಗಿತ್ತು 29 00:01:52,000 --> 00:01:55,000 ಆ ಖಾತೆ ಅವನಿಗೆ ಮತ್ತು ಅವನ ಕುಟುಂಬಕ್ಕೆ ಸೇರಿತ್ತು. 30 00:01:56,000 --> 00:01:58,000 ಈ ದಸ್ತಗಿರಿ ಏಕೆ ಸಂಭವಿಸಿತೆಂದರೆ ಅಲ್ಲೊಂದು ಸಹಕಾರವಿತ್ತು 31 00:01:58,000 --> 00:02:01,000 ಲಂಡನ್ ಮೆಟ್ರೊಪಾಲಿಟನ್ ಪೋಲಿಸ್ 32 00:02:01,000 --> 00:02:04,000 ಮತ್ತು ಎಕನಾಮಿಕ್ ಮತ್ತು ಫೈನಾನ್ಶಿಯಲ್ ಕ್ರೈಮ್ಸ್ ಕಮೀಶನ್ ಆಫ್ ನೈಜೀರಿಯ ಜೊತೆ - 33 00:02:04,000 --> 00:02:11,000 ನಮ್ಮಲ್ಲಿರುವ ಬಹಳ ದಕ್ಷ ಮತ್ತು ಧೈರ್ಯಶಾಲಿಗಳಲ್ಲಿ ಒಬ್ಬರ ನಾಯಕತ್ವದಲ್ಲಿ – ಮಿ.ನುಹು ರಿಬಾಡು. 34 00:02:11,000 --> 00:02:14,000 ಅಲಮೈಯೆಸೈಘ ವಿರುದ್ಧ ಲಂಡನ್ ನಲ್ಲಿ ಅಪಾದನೆ ಮಾಡಲಾಯಿತು. 35 00:02:14,000 --> 00:02:18,000 ಕೆಲವು ತಪ್ಪುಗಳಿಂದಾಗಿ ಅವನು ಹೆಣ್ಣಿನ ವೇಷದಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವಾಯಿತು 36 00:02:18,000 --> 00:02:21,000 ಹಾಗೂ ಲಂಡನ್ ನಿಂದ ನೈಜೀರಿಯಕ್ಕೆ ಓಡಿಬಂದ, ಇಲ್ಲಿ,♪ 37 00:02:21,000 --> 00:02:25,000 ನಮ್ಮ ಸಂವಿಧಾನದ ಪ್ರಕಾರ, ಅಧಿಕಾರದಲ್ಲಿರುವ 38 00:02:25,000 --> 00:02:27,000 ರಾಜ್ಯಪಾಲರು, ಅಧ್ಯಕ್ಷರು ಮುಂತಾದವರಿಗೆ – ಹಲವು ರಾಷ್ಟ್ರಗಳಲ್ಲಿರುವಂತೆ -- 39 00:02:27,000 --> 00:02:32,000 ರಕ್ಷಣೆಯಿದೆ ಹಾಗೂ ಅವರ ವಿರುದ್ಧ ಕಾನೂನು ಕ್ರಮ ನಡೆಯುವುದಿಲ್ಲ. ಆದರೆ ಆದದ್ದೇನು: 40 00:02:32,000 --> 00:02:36,000 ಈ ನಡವಳಿಕೆಯಿಂದ ಜನರು ಎಷ್ಟು ರೊಚ್ಚಿಗೆದ್ದರೆಂದರೆ ರಾಜ್ಯ ವಿಧಾನಸಭೆ 41 00:02:36,000 --> 00:02:42,000 ಅವರ ವಿರುದ್ಧ ದೋಷಾರೋಪಣೆ ಮಾಡಿ ಅವರನ್ನು ಪದವಿಯಿಂದ ಕಿತ್ತುಹಾಕಲು ಸಾಧ್ಯವಾಯಿತು. 42 00:02:43,000 --> 00:02:45,000 ಈ ದಿನ, ಅಲಾಮ್ಸ್--ನಾವು ಅವರನ್ನು ಸಂಕ್ಷ್ತಿಪ್ತವಾಗಿ ಕರೆಯುವ ಹೆಸರು –ಜೈಲಿನಲ್ಲಿದ್ದಾರೆ. 43 00:02:46,000 --> 00:02:51,000 ಇದು ಒಂದು ಸತ್ಯ ಕಥೆ , ಆಫ್ರಿಕಾದ ಜನರು ತಮ್ಮ ನಾಯಕರ♪ 44 00:02:51,000 --> 00:02:56,000 ಲಂಚಕೋರತನವನ್ನು ಸಹಿಸಿಕೊಳ್ಳಲು ಇನ್ನು ಮುಂದೆ ಸಿದ್ಧರಿಲ್ಲ. 45 00:02:57,000 --> 00:03:02,000 ಈ ಕಥೆ ಯಾವುದರ ಬಗ್ಗೆಯೆಂದರೆ ಜನರು ತಮ್ಮ ಸಂಪನ್ಮೂಲಗಳನ್ನು 46 00:03:02,000 --> 00:03:07,000 ಅವರ ಒಳಿತಿಗಾಗಿ ನಿರ್ವಹಿಸಬೇಕು ಮತ್ತು ಅದನ್ನು ಹೊರದೇಶಗಳಿಗೆ 47 00:03:07,000 --> 00:03:10,000 ಯಾರೋ ಕೆಲವು ಪ್ರಭಾವಶಾಲಿ ವ್ಯಕ್ತಿಗಳ ಲಾಭಕ್ಕೆ ಕೊಂಡೊಯ್ಯುವುದಲ್ಲ ಎಂದು ಬಯಸುತ್ತಾರೆ. 48 00:03:10,000 --> 00:03:14,000 ಆದ್ದರಿಂದ, ನೀವು ಲಂಚಗುಳಿ ಆಫ್ರಿಕಾ ಬಗ್ಗೆ ಕೇಳಿದಾಗ --♪ 49 00:03:14,000 --> 00:03:18,000 ಲಂಚಕೋರತನವೇ ಗೋಚರಿಸುತ್ತದೆ – ಜನರು ಮತ್ತು ಸರಕಾರಗಳು 50 00:03:18,000 --> 00:03:21,000 ಇದರ ನಿರ್ಮೂಲನಕ್ಕಾಗಿ ತೀವ್ರವಾಗಿ ಪ್ರಯತ್ನಿಸುತ್ತಿವೆ ಎಂದು ನೀವು ತಿಳಿದುಕೊಳ್ಳಲಿ ಎಂದು ನಾನು ಬಯಸುತ್ತೇನೆ♪♪ 51 00:03:21,000 --> 00:03:25,000 ಕೆಲವು ರಾಷ್ಟ್ರಗಳಲ್ಲಿ, ಹಾಗೂ ಕೆಲವು ಯಶಸ್ಸುಗಳು ಹೊರಹೊಮ್ಮುತ್ತಿವೆ.♪♪ 52 00:03:25,000 --> 00:03:28,000 ಇದರ ಅರ್ಥ ಸಮಸ್ಯೆ ಕೊನೆಗೊಂಡಿದೆಯೆ? ಇದಕ್ಕೆ ಉತ್ತರ, ’ಇಲ್ಲ’. 53 00:03:28,000 --> 00:03:32,000 ಇನ್ನೂ ಬಹಳ ದೂರ ಹೋಗಬೇಕಿದೆ, ಆದರೆ ಇಲ್ಲಿ ಮಾಡಬೇಕೆಂಬ ಮನಸ್ಸಿದೆ. 54 00:03:32,000 --> 00:03:36,000 ಹಾಗೂ ಈ ಪ್ರಮುಖ ಹೋರಾಟದಲ್ಲಿ ಯಶಸ್ಸುಗಳು ಕಂಡುಬರುತ್ತಿವೆ. 55 00:03:36,000 --> 00:03:38,000 ಹಾಗಾಗಿ, ನೀವು ಲಂಚಕೋರತನದ ಬಗ್ಗೆ ಕೇಳಿದರೆ 56 00:03:38,000 --> 00:03:41,000 ಅದರ ಬಗ್ಗೆ ಇಲ್ಲಿ ಏನೂ ಮಾಡುತ್ತಿಲ್ಲ ಎಂಬ ಭಾವನೆ ಇಟ್ಟುಕೊಳ್ಳಬೇಡಿ -- 57 00:03:41,000 --> 00:03:44,000 ಆಫ್ರಿಕಾದ ಯಾವುದೇ ದೇಶಗಳೊಂದಿಗೆ ವ್ಯವಹರಿಸಲು ಸಾಧ್ಯವಿಲ್ಲ ಎಂದುಕೊಳ್ಳಬೇಡಿ 58 00:03:44,000 --> 00:03:47,000 ಲಂಚಕೋರತನ ತುಂಬಿತುಳುಕುತ್ತಿದೆ ಎಂಬುದಕ್ಕಾಗಿ. ಈಗ ಪರಿಸ್ಥಿತಿ ಹಾಗಿಲ್ಲ.♪ 59 00:03:47,000 --> 00:03:53,000 ಹೋರಾಟ ಮಾಡುವ ಮನಸ್ಸಿದೆ, ಮತ್ತು ಹಲವು ರಾಷ್ಟ್ರಗಳಲ್ಲಿ ಈ ಹೋರಾಟ ನಡೆಯುತ್ತಿದೆ 60 00:03:53,000 --> 00:03:57,000 ಹಾಗೂ ಗೆಲುವು ದೊರೆಯುತ್ತಿದೆ. ನನ್ನಂತಹ ಬೇರೆಯವರ ವಿಚಾರದಲ್ಲಿ, 61 00:03:57,000 --> 00:04:00,000 ಇಲ್ಲಿ, ನೈಜೀರಿಯದಲ್ಲಿ ಸರ್ವಾಧಿಕಾರದ ದೀರ್ಘ ಚರಿತ್ರೆಯೇ ಇದೆ,♪ 62 00:04:00,000 --> 00:04:04,000 ಹೋರಾಟ ನಡೆಯುತ್ತಲೇ ಇದೆ ಹಾಗೂ ನಾವು ದೊಡ್ಡ ದಾರಿಯನ್ನು ಕ್ರಮಿಸಬೇಕಾಗಿದೆ. 63 00:04:04,000 --> 00:04:08,000 ಆದರೆ ವಾಸ್ತವವೆಂದರೆ ಇದು ಸಂಭವಿಸುತ್ತಾ ಇದೆ. 64 00:04:09,000 --> 00:04:11,000 ಫಲಿತಾಂಶಗಳು ಕಂಡುಬರುತ್ತಿವೆ: 65 00:04:11,000 --> 00:04:15,000 ವಿಶ್ವ ಬ್ಯಾಂಕ್ ಮತ್ತು ಇತರ ಸಂಸ್ಥೆಗಳು ಸ್ವತಂತ್ರವಾಗಿ ನಿಯಂತ್ರಿಸುತ್ತಿರುವುದನ್ನು 66 00:04:15,000 --> 00:04:19,000 ನೋಡಿದರೆ ಹಲವು ಘಟನೆಗಳಲ್ಲಿ ಈ ಪರಿಸ್ಥಿತಿ ಇಳಿಮುಖವಾಗುತ್ತಿದೆ 67 00:04:19,000 --> 00:04:22,000 ಲಂಚಕೋರತನದ ವಿಚಾರದಲ್ಲಿ, ಹಾಗೂ ಆಡಳಿತ ಉತ್ತಮಗೊಳ್ಳುತ್ತಿದೆ. 68 00:04:22,000 --> 00:04:26,000 ಆಫ್ರಿಕಾದ ಆರ್ಥಿಕ ಆಯೋಗದ ಒಂದು ಅಧ್ಯಯನ 69 00:04:26,000 --> 00:04:30,000 28 ಆಫ್ರಿಕಾ ದೇಶಗಳಲ್ಲಿ ರಾಜ್ಯಭಾರ ಉತ್ತಮ ಮಟ್ಟಕ್ಕೇರುವ ನಿಚ್ಚಳ ಪ್ರವೃತ್ತಿ ಇದೆ ಎಂದು ತೋರಿಸಿಕೊಟ್ಟಿದೆ. 70 00:04:30,000 --> 00:04:32,000 ಹಾಗೂ ನಾನು ಇನ್ನೊಂದು ವಿಷಯ ಹೇಳಲು ಇಚ್ಛಿಸುತ್ತೇನೆ♪ 71 00:04:32,000 --> 00:04:34,000 ಈ ಆಡಳಿತಾತ್ಮಕ ವಿಷಯ ಮುಗಿಸುವ ಮೊದಲು. 72 00:04:34,000 --> 00:04:37,000 ಅದೆಂದರೆ, ಜನರು ಲಂಚಕೋರತನದ ಲಂಚಗುಳಿತನ ಬಗ್ಗೆ ಮಾತಾಡುತ್ತಾರೆ,. 73 00:04:37,000 --> 00:04:39,000 ಅದರ ಬಗ್ಗೆ ಯಾರಾದರೂ ಮಾತಾಡಿದರೆ 74 00:04:39,000 --> 00:04:41,000 ನಿಮಗೆ ತಕ್ಷಣ ಆಫ್ರಿಕಾ ನೆನಪಿಗೆ ಬರುತ್ತದೆ. 75 00:04:41,000 --> 00:04:45,000 ಅದು ಇರುವ ಚಿತ್ರ: ಆಫ್ರಿಕಾ ದೇಶಗಳು. ಆದರೆ ನಾನು ಇದನ್ನು ಹೇಳುತ್ತೇನೆ: 76 00:04:45,000 --> 00:04:51,000 ಲಂಡನ್ನಿನ ಒಂದು ಖಾತೆಗೆ ಅಲಮ್ಸ್ $8 ಮಿಲಿಯನ್ ಸಾಗಿಸಿರಬೇಕಾದರೆ 77 00:04:53,000 --> 00:04:57,000 ಇತರರು ಇದೇ ರೀತಿ ಹಣ ಸಾಗಿಸಿರಬಹುದಾದ ಮೊತ್ತ 78 00:04:57,000 --> 00:05:01,000 20 ರಿಂದ 40 ಬಿಲಿಯನ್ ಪ್ರಗತಿಶೀಲ ದೇಶಗಳಿಗೆ ಸೇರಿದ ಹಣ 79 00:05:01,000 --> 00:05:04,000 ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ಕುಳಿತುಕೊಂಡಿದೆ – ಅವರು ಹೀಗೆ ಮಾಡಬಹುದಾದರೆ 80 00:05:04,000 --> 00:05:07,000 ಅದಿನ್ನೇನು? ಅದು ಲಂಚಕೋರತನವಲ್ಲವೇ? 81 00:05:08,000 --> 00:05:12,000 ಈ ದೇಶದಲ್ಲಿ, ನೀವು ಕದ್ದ ಮಾಲು ಪಡೆದರೆ ನಿಮ್ಮ ಮೇಲೆ ಕಾನೂನು ಕ್ರಮ ನಡೆಯುವುದಿಲ್ಲವೆ? 82 00:05:13,000 --> 00:05:16,000 ಹಾಗಾಗಿ, ನಾವು ಈ ರೀತಿಯ ಲಂಚಕೋರತನದ ಬಗ್ಗೆ ಮಾತಾಡುವಾಗ, 83 00:05:16,000 --> 00:05:19,000 ವಿಶ್ವದ ಮತ್ತೊಂದು ಭಾಗದಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆಯೂ ಮಾತಾಡೋಣ -- 84 00:05:19,000 --> 00:05:23,000 ಹಣ ಎಲ್ಲಿಗೆ ಹೋಗುತ್ತಿದೆ ಹಾಗೂ ಅದನ್ನು ಹೇಗೆ ತಡೆಯಬಹುದು. 85 00:05:23,000 --> 00:05:26,000 ನಾನು ಒಂದು ಪ್ರಸ್ತಾಪದ ಬಗ್ಗೆ ಕೆಲಸಮಾಡುತ್ತಿದ್ದೇನೆ, ವಿಶ್ವ ಬ್ಯಾಂಕ್ ಸಹಯೋಗದೊಡನೆ, 86 00:05:26,000 --> 00:05:29,000 ಆಸ್ತಿ ವಸೂಲಾತಿ ಬಗ್ಗೆ, ನಾವೇನು ಮಾಡಬಹುದು 87 00:05:29,000 --> 00:05:32,000 ಹೊರದೇಶಗಳಿಗೆ ಕೊಂಡೊಯ್ದಿರುವ ಹಣಗಳ ಬಗ್ಗೆ -- 88 00:05:32,000 --> 00:05:35,000 ಪ್ರಗತಿಶೀಲ ರಾಷ್ಟ್ರಗಳ ಹಣ – ಅದನ್ನು ಹಿಂದಕ್ಕೆ ರವಾನಿಸಲು. 89 00:05:35,000 --> 00:05:38,000 ಏಕೆಂದರೆ, ಅಲ್ಲಿರುವ ಕುಳಿತುಕೊಂಡಿರುವ ಬಿಲಿಯನ್ ಹಿಂದಕ್ಕೆ ಪಡೆದರೆ 90 00:05:38,000 --> 00:05:41,000 ಇಲ್ಲಿನ ಕೆಲವು ದೇಶಗಳಿಗೆ ದೊರೆಯುತ್ತಿರುವ 91 00:05:41,000 --> 00:05:44,000 ಒಟ್ಟು ಸಹಾಯಧನಕ್ಕಿಂತ ಹೆಚ್ಚು ಪಡೆದಂತೆ. 92 00:05:44,000 --> 00:05:51,000 (ಚಪ್ಪಾಳೆ). 93 00:05:51,000 --> 00:05:55,000 ನಾನು ಮಾತಾಡಬೇಕೆಂದಿರುವ ಎರಡನೆ ವಿಷಯವೆಂದರೆ ಸುಧಾರಣೆ ಮಾಡುವ ಮನಸ್ಸು. 94 00:05:55,000 --> 00:05:59,000 ಆಫ್ರಿಕನ್ನರು, ಅವರು ಸುಸ್ತಾದ ನಂತರ – ನಾವು ಸುಸ್ತಾಗುತ್ತೇವೆ 95 00:05:59,000 --> 00:06:04,000 ಪ್ರತಿಯೊಬ್ಬರ ದಾನ ಮತ್ತು ಧರ್ಮದ ವಿಷಯವಾಗಿ. 96 00:06:04,000 --> 00:06:08,000 ನಾವು ಅದಕ್ಕೆ ಚಿರಋಣಿಗಳು, ಆದರೆ ನಮಗೆ ಗೊತ್ತಿದೆ 97 00:06:08,000 --> 00:06:12,000 ನಾವು ಮನಸ್ಸು ಮಾಡಿದರೆ ನಮ್ಮ ಭವಿಷ್ಯವನ್ನು ನಾವೇ ರೂಪಿಸಿಕೊಳ್ಳಬಲ್ಲೆವು ಎಂದು. 98 00:06:13,000 --> 00:06:17,000 ಹಾಗೂ ಹಲವು ಆಫ್ರಿಕಾ ದೇಶಗಳಲ್ಲಿ ಈಗ ಏನಾಗುತ್ತಿದೆ ಎಂದರೆ 99 00:06:17,000 --> 00:06:21,000 ನಮ್ಮನ್ನು ಬೇರಾರೂ ಇದನ್ನು ಮಾಡಲಾರರು ಎಂಬ ಅರಿವು ಮೂಡುತ್ತಿದೆ. ನಾವು ಇದನ್ನು ಮಾಡಲೇ ಬೇಕು. 100 00:06:21,000 --> 00:06:25,000 ನಾವು ಸಹಭಾಗಿಗಳನ್ನು ನಮ್ಮ ಬೆಂಬಲಕ್ಕೆ ಕರೆಯಬಹುದು, ಆದರೆ ಪ್ರಾರಂಭ ನಾವೇ ಮಾಡಬೇಕು. 101 00:06:25,000 --> 00:06:28,000 ನಾವು ನಮ್ಮ ಆರ್ಥಿಕ ವ್ಯವಸ್ಥೆಗಳನ್ನು ಸುಧಾರಿಸಬೇಕು, ನಮ್ಮ ನಾಯಕತ್ವ ಬದಲಾಯಿಸಬೇಕು, 102 00:06:28,000 --> 00:06:34,000 ಹೆಚ್ಚು ಪ್ರಜಾಪ್ರಭುತ್ವವಾದಿಗಳಾಗಬೇಕು, ಬದಲಾವಣೆ ಮತ್ತು ಮಾಹಿತಿಗೆ ಹೆಚ್ಚು ಮುಕ್ತ ಮನಸ್ಸು ಬೇಕು. 103 00:06:34,000 --> 00:06:36,000 ಹಾಗೂ ನಾವು ಇದನ್ನೇ ಮಾಡ ಹೊರಟಿದ್ದು 104 00:06:36,000 --> 00:06:39,000 ಈ ಖಂಡದ ಬಹು ದೊಡ್ಡ ದೇಶಗಳಲ್ಲಿ ಒಂದಾದ, ನೈಜೀರಿಯದಲ್ಲಿ. 105 00:06:39,000 --> 00:06:42,000 ಒಂದು ವಿಷಯವೆಂದರೆ, ನೀವು ನೈಜೀರಿಯದಲ್ಲಿಲ್ಲದಿದ್ದರೆ ನೀವು ಆಫ್ರಿಕಾದಲ್ಲಿದ್ದಂತಲ್ಲ. 106 00:06:42,000 --> 00:06:43,000 ನಿಮಗೆ ಅದನ್ನು ನಾನು ಹೇಳಬೇಕು. 107 00:06:43,000 --> 00:06:44,000 (ನಗು) 108 00:06:44,000 --> 00:06:46,000 ನಾಲ್ಕು ಜನ ಸಬ್-ಸಹಾರಾ ಆಫ್ರಿಕನ್ ರಲ್ಲಿ ಒಬ್ಬ ನೈಜೀರಿಯನ್ ಆಗಿರುತ್ತಾನೆ, 109 00:06:48,000 --> 00:06:53,000 ಹಾಗೂ ಇಲ್ಲಿ 140 ಮಿಲಿಯನ್ ಚುರುಕಾದ ಜನರಿದ್ದಾರೆ – ಅರಾಜಕ ಜನ -- 110 00:06:54,000 --> 00:06:58,000 ಆದರೆ ಬಹಳ ಸ್ವಾರಸ್ಯಕರ ಜನ. ನಿಮಗೆ ಖಂಡಿತವಾಗಿಯೂ ಬೇಸರವಾಗುವುದಿಲ್ಲ. 111 00:06:58,000 --> 00:06:59,000 (ನಗು). 112 00:06:59,000 --> 00:07:01,000 ನಾವು ಮಾಡಲು ಪ್ರಾರಂಭಿಸಿದ್ದೇನೆಂದರೆ ನಾವೇ 113 00:07:01,000 --> 00:07:03,000 ಮುನ್ನುಗ್ಗಬೇಕು ಮತ್ತು ಸುಧಾರಣೆ ತರಬೇಕು ಎಂಬ ತಿಳಿವಳಿಕೆ ತಂದುಕೊಂಡದ್ದು. 114 00:07:04,000 --> 00:07:06,000 ಹಾಗೂ ಒಬ್ಬ ನಾಯಕನ ಬೆಂಬಲದೊಂದಿಗೆ 115 00:07:06,000 --> 00:07:09,000 ಈ ಸಮಯದಲ್ಲಿ ಸುಧಾರಣೆ ತರುವ ಇಚ್ಛೆಯುಳ್ಳವನು ದೊರೆತರೆ 116 00:07:09,000 --> 00:07:11,000 ನಾವು ಒಂದು ಸಮಗ್ರ ಸುಧಾರಣೆ ಯೋಜನೆಯನ್ನು ಮುಂದಿಡುತ್ತೇವೆ 117 00:07:11,000 --> 00:07:13,000 ಇದನ್ನು ನಾವೇ ಅಭಿವೃದ್ಧಿಪಡಿಸಿದ್ದೇವೆ. 118 00:07:13,000 --> 00:07:16,000 ಇಂಟರ್ ನ್ಯಾಶನಲ್ ಮಾನೀಟರಿ ಫಂಡ್ ಅಲ್ಲ. ವಿಶ್ವ ಬ್ಯಾಂಕ್ ಅಲ್ಲ, 119 00:07:16,000 --> 00:07:19,000 ಇಲ್ಲಿ ನಾನು 21 ವರ್ಷ ಕೆಲಸ ಮಾಡಿದೆ ಹಾಗೂ ಅದರ ಉಪಾಧ್ಯಕ್ಷ ಸ್ಥಾನಕ್ಕೆ ಬೆಳೆದೆ. 120 00:07:20,000 --> 00:07:22,000 ನಿಮಗಾಗಿ ಯಾರೂ ಏನನ್ನೂ ಮಾಡಲಾರರು. ನಿಮಗೆ ನೀವೆ ಮಾಡಿಕೊಳ್ಳಬೇಕು. 121 00:07:22,000 --> 00:07:26,000 ನಾವು ಒಂದು ಯೋಜನೆ ಸಿದ್ಧಪಡಿಸಿದ್ದೇವೆ, ಅದರಲ್ಲಿ, ಒಂದು: 122 00:07:26,000 --> 00:07:30,000 ರಾಜ್ಯವನ್ನು ವ್ಯಾಪಾರದಿಂದ ಕಿತ್ತುಹಾಕಿ – ವ್ಯಾಪಾರದಲ್ಲಿ ಅದು ಇರಬೇಕಿಲ್ಲ. 123 00:07:30,000 --> 00:07:32,000 ರಾಜ್ಯ ವ್ಯಾಪಾರದಲ್ಲಿ ವಸ್ತು ಮತ್ತು 124 00:07:32,000 --> 00:07:33,000 ಸೇವೆಗಳನ್ನು ಉತ್ಪಾದನೆ ಮಾಡುವ ಕೆಲಸದಲ್ಲಿರಕೂಡದು 125 00:07:33,000 --> 00:07:36,000 ಏಕೆಂದರೆ, ಅದು ಅಸಮರ್ಥ ಮತ್ತು ಅನರ್ಹ. 126 00:07:36,000 --> 00:07:40,000 ಹಾಗಾಗಿ ನಾವು ನಮ್ಮ ಬಹಳಷ್ಟು ಘಟಕಗಳನ್ನು ಖಾಸಗೀಕರಣ ಮಾಡಲು ನಿರ್ಧರಿಸಿದೆವು. 127 00:07:40,000 --> 00:07:44,000 (ಚಪ್ಪಾಳೆ). 128 00:07:45,000 --> 00:07:49,000 ನಾವು – ಇದರ ಫಲವಾಗಿ, ನಮ್ಮ ಹಲವಾರು ಮಾರುಕಟ್ಟೆಗಳನ್ನು ಮುಕ್ತ ಮಾಡಲು ನಿರ್ಧರಿಸಿದೆವು. 129 00:07:49,000 --> 00:07:52,000 ನೀವು ನಂಬುತ್ತೀರಾ, ಈ ಸುಧಾರಣೆಗೆ ಮೊದಲು -- 130 00:07:52,000 --> 00:07:56,000 2003 ಅಂತ್ಯದಲ್ಲಿ ಪ್ರಾರಂಭವಾದದ್ದು, ನಾನು ವಾಷಿಂಗ್ ಟನ್ ಬಿಟ್ಟು 131 00:07:56,000 --> 00:07:58,000 ವಿತ್ತ ಮಂತ್ರಿ ಪದವಿ ಸ್ವೀಕರಿಸಿದಾಗ -- 132 00:08:00,000 --> 00:08:04,000 ನಮ್ಮಲ್ಲಿ ಒಂದು ಟೆಲಿಕಮ್ಯೂನಿಕೇಶನ್ ಕಂಪನಿ ಇತ್ತು ಹಾಗೂ ಅದು 133 00:08:04,000 --> 00:08:09,000 ತನ್ನ 30-ವರ್ಷದ ಚರಿತ್ರೆಯಲ್ಲಿ ಕೇವಲ 4,500 ಲ್ಯಾಂಡ್ ಲೈನ್ ಗಳನ್ನು ಅಭಿವೃದ್ಧಿಪಡಿಸಿತ್ತು. 134 00:08:09,000 --> 00:08:11,000 (ನಗು). 135 00:08:11,000 --> 00:08:14,000 ನನ್ನ ದೇಶದಲ್ಲಿ ಒಂದು ದೂರವಾಣಿ ಹೊಂದುವುದೇ ಒಂದು ದುಬಾರಿ ಕೆಲಸ. 136 00:08:14,000 --> 00:08:16,000 ನಿಮಗೆ ಸಿಗುತ್ತಿರಲಿಲ್ಲ. ನೀವು ಲಂಚ ಕೊಡಬೇಕಿತ್ತು. 137 00:08:16,000 --> 00:08:18,000 ನೀವು ಒಂದು ಟೆಲಿಫೋನ್ ಹೊಂದಲು ಏನೆಲ್ಲಾ ಮಾಡಬೇಕಿತ್ತು. 138 00:08:18,000 --> 00:08:21,000 ಅಧ್ಯಕ್ಷರಾದ ಒಬೇಸೇನಿಯೊ ಬೆಂಬಲನೀಡಿ ಮತ್ತು ಪ್ರಾರಂಭಿಸಿದ 139 00:08:21,000 --> 00:08:25,000 ಟೆಲಿಕಮ್ಯೂನಿಕೇಶನ್ ವಲಯವನ್ನು ಮುಕ್ತಗೊಳಿಸಿದ ನಂತರ♪ 140 00:08:26,000 --> 00:08:34,000 ನಾವು 4,500 ಲ್ಯಾಂಡ್ ಲೈನ್ ಗಳಿಂದ 32 ಮಿಲಿಯನ್ GSM ಲೈನ್ ಗಳಿಗೆ ತಲುಪಿದ್ದೇವೆ ಮತ್ತು ಇದು ಇನ್ನೂ ಹೆಚ್ಚುತ್ತಲೇ ಇದೆ. 141 00:08:34,000 --> 00:08:39,000 ನೈಜೀರಿಯ ಟೆಲಿಕಾಂ ಮಾರುಕಟ್ಟೆ ವಿಶ್ವದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಎರಡನೆಯದು, 142 00:08:39,000 --> 00:08:44,000 ಚೀನಾ ನಂತರ. ನಾವು ವರ್ಷಕ್ಕೆ ಸುಮಾರು $1 ಬಿಲಿಯನ್ ಹೂಡಿಕೆಯನ್ನು 143 00:08:44,000 --> 00:08:50,000 ಟೆಲಿಕಾಂ ಕ್ಷೇತ್ರದಲ್ಲಿ ಪಡೆಯುತ್ತಿದ್ದೇವೆ. ಹಾಗೂ, ಇದು ಕೆಲವು ಚುರುಕು ವ್ಯಕ್ತಿಗಳನ್ನು ಬಿಟ್ಟರೆ ಬೇರಾರಿಗೂ ಗೊತ್ತಿಲ್ಲ. 144 00:08:50,000 --> 00:08:53,000 (ನಗು) 145 00:08:53,000 --> 00:08:57,000 ಮೊದಲು ಕಾಲಿಟ್ಟ ಬುದ್ಧಿವಂತ 146 00:08:57,000 --> 00:08:59,000 ಕಂಪನಿ ಎಂದರೆ ದಕ್ಷಿಣ ಆಫ್ರಿಕಾದ MTN ಕಂಪನಿ. 147 00:08:59,000 --> 00:09:03,000 ನಾನು ಹಣಕಾಸು ಮಂತ್ರಿಯಾಗಿದ್ದ ಮೂರು ವರ್ಷಗಳಲ್ಲಿ 148 00:09:03,000 --> 00:09:06,000 ಅವರು ವರ್ಷಕ್ಕೆ ಸರಾಸರಿ $360 ಮಿಲಿಯನ್ ಲಾಭ ಮಾಡಿದರು. 149 00:09:08,000 --> 00:09:14,000 $360 ಮಿಲಿಯನ್ ಒಂದು ಮಾರುಕಟ್ಟೆಯಲ್ಲಿ – ಒಂದು ದೇಶದಲ್ಲಿ,ಅದೂ ಒಂದು ಬಡ ದೇಶದಲ್ಲಿ, 150 00:09:14,000 --> 00:09:18,000 ಸರಾಸರಿ ತಲಾಆದಾಯ $500 ಕ್ಕೂ ಕಡಿಮೆ ಇರುವ ದೇಶದಲ್ಲಿ. 151 00:09:19,000 --> 00:09:21,000 ಹಾಗಾಗಿ ಇಲ್ಲಿ ಮಾರುಕಟ್ಟೆ ಇದೆ. 152 00:09:21,000 --> 00:09:24,000 ಈ ವಿಷಯವನ್ನು ಅವರು ಮುಚ್ಚಿಟ್ಟರು, ಆದರೆ ಇತರರಿಗೆ ಬೇಗನೇ ತಿಳಿಯಿತು. 153 00:09:25,000 --> 00:09:28,000 ನೈಜೀರಿಯನ್ನರೇ 154 00:09:28,000 --> 00:09:30,000 ಕೆಲವು ವೈರ್ ಲೆಸ್ ಟೆಲಿಕಮ್ಯೂನಿಕೇಶನ್ ಕಂಪನಿಗಳನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಿದರು♪ 155 00:09:30,000 --> 00:09:32,000 ಹಾಗೂ ಮೂರು ಅಥವಾ ನಾಲ್ಕು ಇತರ ಕಂಪನಿಗಳು ಬಂದುವು. 156 00:09:32,000 --> 00:09:35,000 ಆದರೆ, ಇಲ್ಲಿ ಬಹುದೊಡ್ಡ ಮಾರುಕಟ್ಟೆಯಿದೆ, 157 00:09:35,000 --> 00:09:38,000 ಹಾಗೂ ಜನಗಳಿಗೆ ಇದರ ಬಗ್ಗೆ ಗೊತ್ತಿಲ್ಲ, ಅಥವಾ ಅವರಿಗೆ ತಿಳಿದುಕೊಳ್ಳುವುದು ಬೇಕಿಲ್ಲ. 158 00:09:40,000 --> 00:09:42,000 ಹಾಗಾಗಿ ನಾವು ಮಾಡಿದ ಒಂದು ಕೆಲಸವೆಂದರೆ ಖಾಸಗೀಕರಣ. 159 00:09:43,000 --> 00:09:49,000 ನಾವು ಮಾಡಿದ ಇನ್ನೊಂದು ಕೆಲಸವೆಂದರೆ ನಮ್ಮ ಹಣಕಾಸು ನಿರ್ವಹಣೆಯನ್ನು ಉತ್ತಮವಾಗಿ ಮಾಡಿದ್ದು. 160 00:09:50,000 --> 00:09:52,000 ಏಕೆಂದರೆ ಯಾರೋ ನಿಮಗೆ ಸಹಾಯಮಾಡಲಾರರು ಮತ್ತು ಬೆಂಬಲಿಸಲಾರರು 161 00:09:53,000 --> 00:09:56,000 ನಿಮ್ಮ ಹಣಕಾಸು ಪರಿಸ್ಥಿತಿಯನ್ನು ನೀವು ಚೆನ್ನಾಗಿ ನಿಭಾಯಿಸದಿದ್ದರೆ. 162 00:09:56,000 --> 00:10:00,000 ಹಾಗೂ, ನೈಜೀರಿಯ, ತೈಲ ವಲಯದೊಂದಿಗೆ, ಪ್ರಸಿದ್ಧಿ ಪಡೆದಿದೆ, 163 00:10:00,000 --> 00:10:05,000 ಲಂಚಕೋರವೆಂತಲೂ ಮತ್ತು ತಮ್ಮ ಹಣಕಾಸನ್ನು ಸರಿಯಾಗಿ ನಿರ್ವಹಿಸುವುದಿಲ್ಲವೆಂದು. 164 00:10:05,000 --> 00:10:09,000 ಹಾಗಾಗಿ, ನಾವೇನು ಮಾಡಲು ಪ್ರಯತ್ನಿಸಿದೆವು? ನಾವು ಒಂದು ಹಣಕಾಸು ನಿಯಮವನ್ನು ಪ್ರವೇಶಪಡಿಸಿದೆವು 165 00:10:10,000 --> 00:10:12,000 ಅದು ನಮ್ಮ ಆಯವ್ಯಯವನ್ನು ತೈಲ-ಬೆಲೆಯಿಂದ ಬೇರ್ಪಡಿಸಿತು. 166 00:10:12,000 --> 00:10:16,000 ಇದಕ್ಕೆ ಮೊದಲು ನಮ್ಮ ಆಯವ್ಯಯ ಲೆಕ್ಕಾಚಾರ ನಾವು ತರುವ ತೈಲದ ಮೇಲೆ ಮಾಡುತ್ತಿದ್ದೆವು, 167 00:10:16,000 --> 00:10:21,000 ಏಕೆಂದರೆ ತೈಲ ಬಹು ದೊಡ್ಡ, ಹೆಚ್ಚು ಹಣ-ಸಂಪಾದಿಸುವ ವಲಯ 168 00:10:21,000 --> 00:10:24,000 ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿ: ನಮ್ಮ ಹುಟ್ಟುವಳಿಯಲ್ಲಿ 70% ತೈಲದಿಂದ ಬರುತ್ತಿತ್ತು. 169 00:10:24,000 --> 00:10:28,000 ಅದನ್ನು ನಾವು ಬೇರೆ ಮಾಡಿದೆವು, ಒಂದು ಸಾರಿ ಇದನ್ನು ಮಾಡಿದ ನಂತರ ನಮ್ಮ ಆಯವ್ಯಯವನ್ನು 170 00:10:28,000 --> 00:10:31,000 ತೈಲ ಬೆಲೆಗಿಂತ ಸ್ವಲ್ಪ ಕಡಿಮೆ ಬೆಲೆಯಲ್ಲಿ ಲೆಕ್ಕಾಚಾರ ಮಾಡಲು ಪ್ರಾರಂಭಿಸಿದೆವು 171 00:10:31,000 --> 00:10:35,000 ಹಾಗೂ ಆ ಬೆಲೆಗಿಂತ ಮೇಲ್ಪಟ್ಟದ್ದನ್ನು ಉಳಿತಾಯ ಮಾಡಿದೆವು. 172 00:10:36,000 --> 00:10:39,000 ಅದು ಯಶಸ್ವಿಯಾಗುತ್ತದೆಂದು ನಮಗೆ ತಿಳಿದಿರಲಿಲ್ಲ, ಅದು ಬಹಳ ವಿವಾದಾತ್ಮಕವಾಗಿತ್ತು. 173 00:10:39,000 --> 00:10:42,000 ಆದರೆ ಅದು ತತ್ ಕ್ಷಣ ಏನು ಮಾಡಿತೆಂದರೆ ನಮ್ಮ 174 00:10:42,000 --> 00:10:45,000 ಆರ್ಥಿಕ ಅಭಿವೃದ್ದಿ ಲೆಕ್ಕಾಚಾರದಲ್ಲಿದ್ದ ಚಂಚಲತೆ -- 175 00:10:45,000 --> 00:10:49,000 ಅದರಲ್ಲಿ, ತೈಲ ಬೆಲೆಗಳಲ್ಲಿ ಬಹಳ ಹೆಚ್ಚಾಗಿದ್ದರೂ ನಾವು ತ್ವರಿತಗತಿಯಲ್ಲಿ ಬೆಳೆಯುತ್ತಿದ್ದೆವು. 176 00:10:49,000 --> 00:10:51,000 ಅವು ಕೆಳಗೆ ಬಿದ್ದರೆ, ನಾವೂ ಕೆಳಕ್ಕೆ ಬೀಳುತ್ತಿದ್ದೆವು. 177 00:10:51,000 --> 00:10:55,000 ಹಾಗೂ, ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿ ನಾವು ಏನನ್ನೂ ಪಾವತಿಸಲಾರದಾಗಿದ್ದೆವು, ವೇತನಗಳನ್ನು ಕೂಡ. 178 00:10:56,000 --> 00:11:00,000 ಅದು ನವಿರಾಯಿತು.ನಾವು ಉಳಿತಾಯ ಮಾಡುವಂತಾಯಿತು, ನಾನು ಬಿಡುವ ಮೊದಲು, 179 00:11:00,000 --> 00:11:06,000 $27 ಬಿಲಿಯನ್. ಆದರೆ -- ಇದು ನಮ್ಮ ಆಪದ್ಧನಕ್ಕೆ ಹೋಗುತ್ತಿತ್ತು -- 180 00:11:06,000 --> 00:11:10,000 ನಾನು 2003ರಲ್ಲಿ ಬಂದಾಗ, ನಾವು $7 ಬಿಲಿಯನ್ ಆಪದ್ಧನ ಹೊಂದಿದ್ದೆವು. 181 00:11:11,000 --> 00:11:14,000 ನಾನು ಬಿಡುವ ಸಮಯಕ್ಕೆ, ನಾವು ಇದನ್ನು ಹೆಚ್ಚು ಕಡಿಮೆ $30 ಬಿಲಿಯನ್ ಗೆ ಏರಿಸಿದ್ದೆವು. ಹಾಗೂ 182 00:11:14,000 --> 00:11:17,000 ಈಗ ನಾವು ಮಾತಾಡುತ್ತಿರುವ ಸಮಯದಲ್ಲಿಅದು ಸುಮಾರು $40 ಬಿಲಿಯನ್ ನಷ್ಟಾಗಿದೆ. 183 00:11:18,000 --> 00:11:22,000 ಅದು ಹಣಕಾಸು ನಿರ್ವಹಣೆ ಸರಿಯಾಗಿ ನಿರ್ವಹಿಸಿರುವುದರಿಂದ. 184 00:11:23,000 --> 00:11:26,000 ಅದು ನಮ್ಮ ಆರ್ಥಿಕ ವ್ಯವಸ್ಥೆಯನ್ನು ಹಿಡಿದಿಡುತ್ತದೆ, ಅದನ್ನು ಸದೃಢವಾಗಿ ಮಾಡುತ್ತದೆ. 185 00:11:26,000 --> 00:11:29,000 ನಮ್ಮ ವಿನಿಮಯ ದರ ಯಾವಾಗಲೂ ಏರುಪೇರಾಗುತ್ತಿತ್ತು 186 00:11:29,000 --> 00:11:33,000 ಈಗ ಸುಮಾರಾಗಿ ದೃಢವಾಗಿದೆ ಮತ್ತು ಸರಿಯಾಗಿ ನಿರ್ವಹಿಸಲಾಗುತ್ತಿದೆ, ಹಾಗಾಗಿ ವ್ಯಾಪಾರಸ್ಥರು 187 00:11:33,000 --> 00:11:38,000 ಅರ್ಥ ವ್ಯವಸ್ಥೆಯಲ್ಲಿ ಬೆಲೆಗಳನ್ನು ಊಹಿಸಿಕೊಳ್ಳಬಹುದಾಗಿದೆ. 188 00:11:40,000 --> 00:11:44,000 ನಾವು ಹಣದುಬ್ಬರವನ್ನು ಶೇಕಡ 28 ರಿಂದ ಸುಮಾರು ಶೇಕಡ 11 ಕ್ಕೆ ಇಳಿಸಿದೆವು. 189 00:11:46,000 --> 00:11:52,000 ಹಾಗೂ ಹಿಂದಿನ ದಶಕದಲ್ಲಿ ಸರಾಸರಿ ಶೇಕಡ 2.3 ಇದ್ದ GDP ಏರಿಕೆಯಾಗುವಂತೆ ಮಾಡಿ 190 00:11:52,000 --> 00:11:55,000 ಅದು ಈಗ ಶೆಕಡ 6.5 ಆಗಿದೆ. 191 00:11:56,000 --> 00:11:59,000 ಹಾಗಾಗಿ, ನಾವು ಮಾಡಲು ಸಾಧ್ಯವಾದ ಎಲ್ಲ ಬದಲಾವಣೆಗಳು ಮತ್ತು ಸುಧಾರಣೆಗಳು 192 00:11:59,000 --> 00:12:02,000 ಆರ್ಥಿಕ ವ್ಯವಸ್ಥೆಯಲ್ಲಿ ಅಳತೆಮಾಡಬಹುದಾದಂಥ ಫಲಿತಾಂಶ ತೋರಿಸಿವೆ. 193 00:12:02,000 --> 00:12:06,000 ಹಾಗೂ ಇನ್ನೂ ಮುಖ್ಯ ಅಂಶವೆಂದರೆ, ನಾವು ತೈಲದಿಂದ ದೂರ ಉಳಿಯಬೇಕೆಂದಿರುವುದರಿಂದ 194 00:12:06,000 --> 00:12:08,000 ಹಾಗೂ ಬೇರೆ ಮಾರ್ಗ ಆಯ್ಕೆಮಾಡಲಿರುವುದರಿಂದ -- ಹಾಗೂ ಸಾಕಷ್ಟು ಅವಕಾಶಗಳಿವೆ 195 00:12:08,000 --> 00:12:11,000 ಇಂಥ ಒಂದು ದೊಡ್ಡ ದೇಶದಲ್ಲಿ ,ಆಫ್ರಿಕಾದ 196 00:12:13,000 --> 00:12:16,000 ಹಲವು ದೇಶಗಳಲ್ಲಿರುವಂತೆ-ಗಮನಾರ್ಹ ಬೆಳವಣಿಗೆಯಾಯಿತು. 197 00:12:16,000 --> 00:12:19,000 ತೈಲ ವಲಯದಿಂದ ಉಂಟಾದದ್ದಲ್ಲ, ತೈಲೇತರ ವಲಯದಿಂದ. 198 00:12:19,000 --> 00:12:22,000 ಕೃಷಿ ಶೇಕಡ 8 ಕ್ಕೂ ಮಿಗಿಲಾಗಿ ಬೆಳೆಯಿತು. 199 00:12:22,000 --> 00:12:26,000 ಟೆಲಿಕಾಂ ವಲಯ ಬೆಳೆದಂತೆ, ಗೃಹ ನಿರ್ಮಾಣ ಮತ್ತು ಕಟ್ಟಡ ನಿರ್ಮಾಣ, 200 00:12:26,000 --> 00:12:31,000 ಹಾಗೆಯೇ ನಾನು ಹೇಳುತ್ತಲೇ ಇರಬಹುದು. ಹಾಗೂ ಇದನ್ನು ನಿಮಗೆ ನಿರೂಪಿಸಲು 201 00:12:31,000 --> 00:12:33,000 ಒಂದು ಸಾರಿ ನೀವು ವಿಸ್ತೃತ ಆರ್ಥಿಕ ವ್ಯವಸ್ಥೆಯನ್ನು ಹಿಡಿತಕ್ಕೆ ತೆಗೆದುಕೊಂಡರೆ, 202 00:12:33,000 --> 00:12:37,000 ವಿವಿಧ ವಲಯಗಳಲ್ಲಿರುವ ಅವಕಾಶಗಳು ಹೇರಳ. 203 00:12:38,000 --> 00:12:41,000 ನಾನು ಹೇಳಿದಂತೆ, ನಮಗೆ ಕೃಷಿ ವಲಯದಲ್ಲಿ ಅವಕಾಶಗಳಿವೆ. 204 00:12:41,000 --> 00:12:45,000 ನಮಗೆ ಘನ ಖನಿಜಗಳಲ್ಲಿ ಅವಕಾಶಗಳಿವೆ. ನಮ್ಮಲ್ಲಿ ಸಾಕಷ್ಟು ಖನಿಜಗಳಿವೆ 205 00:12:45,000 --> 00:12:48,000 ಅವನ್ನು ಯಾರೊಬ್ಬರೂ ಪರಿಶೋಧಿಸಿಲ್ಲ ಅಥವಾ ಹೂಡಿಕೆ ಮಾಡಿಲ್ಲ. ನಮ್ಮ ತಿಳಿವಳಿಕೆಗೆ ಬಂದದ್ದು 206 00:12:48,000 --> 00:12:51,000 ಇದನ್ನು ಸಾಧ್ಯವಾಗಿಸಲು ಸೂಕ್ತ ಕಾನೂನುಗಳು ಇಲ್ಲದೆ, 207 00:12:51,000 --> 00:12:54,000 ಅದು ಸಂಭವಿಸದು. ಹಾಗಾಗಿ ನಮ್ಮಲ್ಲಿ ಗಣಿ ನಿಯಮ ಇದೆ 208 00:12:54,000 --> 00:12:57,000 ಅದನ್ನು ವಿಶ್ವದ ಅತ್ಯುತ್ತಮ ನಿಯಮಗಳೊಂದಿಗೆ ಹೋಲಿಸಬಹುದಾಗಿದೆ. 209 00:12:58,000 --> 00:13:00,000 ಗೃಹನಿರ್ಮಾಣ ಮತ್ತು ರೀಯಲ್ ಎಸ್ಟೇಟ್ ಅವಕಾಶಗಳು ನಮ್ಮಲ್ಲಿವೆ. 210 00:13:00,000 --> 00:13:03,000 140 ಮಿಲಿಯನ್ ಜನಸಂಖ್ಯೆಯಿರುವ ಒಂದು ರಾಷ್ಟ್ರದಲ್ಲಿ ಏನೂ ಇರಲಿಲ್ಲ-- 211 00:13:04,000 --> 00:13:09,000 ನಿಮಗೆ ತಿಳಿದಿರುವಂತೆ ಶಾಪಿಂಗ್ ಮಾಲ್ ಕೂಡ ಇರಲಿಲ್ಲ. 212 00:13:10,000 --> 00:13:13,000 ಇದು ಯಾರಿಗೋ ದೊರಕಿದ ಹೂಡಿಕೆ ಅವಕಾಶ 213 00:13:13,000 --> 00:13:15,000 ಅದು ಜನರ ಕಲ್ಪನೆಯನ್ನು ರೋಮಾಂಚನಗೊಳಿಸಿತು. 214 00:13:16,000 --> 00:13:19,000 ಈಗ, ನಾವು ಯಾವ ಸ್ಥಿತಿಯಲ್ಲಿದ್ದೇವೆಂದರೆ ಈ ಮಾಲ್ ಗಳಲ್ಲಿ ವ್ಯಾಪಾರ 215 00:13:19,000 --> 00:13:22,000 ಅವರು ಅಂದಾಜು ಮಾಡಿದ್ದಕ್ಕಿಂತ ನಾಲ್ಕು ಪಟ್ಟು ಹೆಚ್ಚಾಗಿದೆ. 216 00:13:23,000 --> 00:13:26,000 ಹಾಗೆಯೇ, ದೊಡ್ಡ ಎತ್ತಿನಲ್ಲಿ ನಿರ್ಮಾಣ, ರೀಯಲ್ ಎಸ್ಟೇಟ್ 217 00:13:26,000 --> 00:13:28,000 ಮಾರ್ಟ್ ಗೇಜ್ ಮಾರುಕಟ್ಟೆಗಳಲ್ಲಿ ಅವಕಾಶಗಳು. ಹಣಕಾಸು ಸೇವೆಗಳು: 218 00:13:29,000 --> 00:13:33,000 ನಾವು 89 ಬ್ಯಾಂಕ್ ಗಳನ್ನು ಹೊಂದಿದ್ದೆವು. ತುಂಬಾ ದೊಡ್ಡ ಸಂಖ್ಯೆ, ನಡೆಸಬೇಕಾದ ವ್ಯವಹಾರ ನಡೆಯುತ್ತಿರಲಿಲ್ಲ. 219 00:13:33,000 --> 00:13:37,000 ಅವುಗಳನ್ನು ಒಂದುಗೂಡಿಸಿ 89 ರಿಂದ 25 ಮಾಡಿದೆವು 220 00:13:37,000 --> 00:13:42,000 ಅವು ತಮ್ಮ ಬಂಡವಾಳ ಹೆಚ್ಚಿಸಿಕೊಳ್ಳಲು ಹೇಳಿದೆವು – ಷೇರು ಬಂಡವಾಳ. 221 00:13:42,000 --> 00:13:47,000 ಹಾಗೂ ಅದು ಸುಮಾರು $25 ಮಿಲಿಯನ್ ನಿಂದ $150 ಮಿಲಿಯನ್ ಗೆ ಏರಿಕೆಯಾಯಿತು. 222 00:13:47,000 --> 00:13:51,000 ಬ್ಯಾಂಕುಗಳು – ಈ ಬ್ಯಾಂಕುಗಳು ಈಗ ಕ್ರೋಢೀಕರಿಸಿವೆ, ಹಾಗೂ ಬ್ಯಾಂಕಿಂಗ್ 223 00:13:51,000 --> 00:13:55,000 ವ್ಯವಸ್ಥೆಯನ್ನು ಬಲಪಡಿಸಿದ್ದರಿಂದ ಹೊರಗಿನಿಂದ ಸಾಕಷ್ಟು ಹೂಡಿಕೆಗೆ ಆಕರ್ಶಣೆ ದೊರಕಿತು. 224 00:13:55,000 --> 00:13:59,000 U.K. ಯ ಬಾರ್ ಕ್ಲೇಯ್ಸ್ ಬ್ಯಾಂಕ್ 500 ಮಿಲಿಯನ್ ತರುತ್ತಿದೆ. 225 00:13:59,000 --> 00:14:03,000 ಸ್ಟಾಂಡರ್ಡ್ ಚಾರ್ಟರ್ಡ್ 140 ಮಿಲಿಯನ್ ತಂದಿದೆ. 226 00:14:03,000 --> 00:14:06,000 ಹಾಗೂ ನಾನು ಹೀಗೆ ಹೇಳುತ್ತಲೇ ಇರಬಹುದು. ಡಾಲರ್ ಗಳು, ವ್ಯವಸ್ಥೆಯೊಳಕ್ಕೆ ಬರುತ್ತಲೇ ಇದೆ. 227 00:14:06,000 --> 00:14:08,000 ನಾವು ಇದೇ ಕೆಲಸವನ್ನು ವಿಮೆ ವಲಯದಲ್ಲೂ ಮಾಡುತ್ತಿದ್ದೇವೆ. 228 00:14:08,000 --> 00:14:11,000 ಹಾಗಾಗಿ, ಹಣಕಾಸು ಸೇವೆಗಳಲ್ಲಿ ವಿಪುಲ ಅವಕಾಶಗಳಿವೆ. 229 00:14:11,000 --> 00:14:17,000 ಪ್ರವಾಸೋದ್ಯಮ ಕ್ಷೇತ್ರದಲ್ಲಿ, ಹಲವು ಆಫ್ರಿಕನ್ ರಾಷ್ಟ್ರಗಳಲ್ಲಿ ಹೇರಳ ಅವಕಾಶಗಳಿವೆ. 230 00:14:17,000 --> 00:14:20,000 ಬಹಳ ಜನಕ್ಕೆ ಪಶ್ಚಿಮ ಆಫ್ರಿಕಾ ಗೊತ್ತಿರುವುದೇ ಅದರಿಂದ: 231 00:14:21,000 --> 00:14:24,000 ವನ್ಯಮೃಗಗಳು, ಆನೆಗಳು ಹಾಗೂ ಇನ್ನೂ ಮುಂತಾದುವು. 232 00:14:24,000 --> 00:14:26,000 ಆದರೆ ಪ್ರವಾಸೋದ್ಯಮವನ್ನು ಯಾವ ರೀತಿ ನಿರ್ವಹಿಸಬೇಕೆಂದರೆ 233 00:14:26,000 --> 00:14:29,000 ಅದು ನಿಜವಾಗಿಯೂ ಜನರಿಗೆ ಸಹಾಯವಾಗುವಂತಿರುವುದು ಮುಖ್ಯ. 234 00:14:30,000 --> 00:14:33,000 ಹಾಗಾಗಿ, ನಾನೇನು ಹೇಳಬೇಕೆಂದಿದ್ದೇನೆ? ನಾನು ಹೇಳಲು ಪ್ರಯತ್ನಿಸುತ್ತಿರುವುದು 235 00:14:33,000 --> 00:14:36,000 ಈ ಖಂಡದಲ್ಲಿ ಒಂದು ಹೊಸ ಅಲೆ ಎದ್ದಿದೆ. 236 00:14:36,000 --> 00:14:41,000 ಒಂದು ಮುಕ್ತ ಮತ್ತು ಪ್ರಜಾಪ್ರಭುತ್ವವಾದದ ಹೊಸ ಅಲೆ, 2000 ದಿಂದ, 237 00:14:41,000 --> 00:14:43,000 ಮೂರನೇ ಎರಡರಷ್ಟು ಆಫ್ರಿಕನ್ ದೇಶಗಳು 238 00:14:43,000 --> 00:14:45,000 ಬಹು-ಪಕ್ಷೀಯ ಪ್ರಜಾಪ್ರಭುತ್ವ ಚುನಾವಣೆಗಳನ್ನು ಹೊಂದಿದ್ದವು. 239 00:14:46,000 --> 00:14:49,000 ಅವುಗಳಲ್ಲಿ ಎಲ್ಲವೂ ದೋಷರಹಿತವಾಗಿರಲಿಲ್ಲ, ಇರುವುದೂ ಇಲ್ಲ, 240 00:14:49,000 --> 00:14:51,000 ಆದರೆ ಪ್ರವೃತ್ತಿ ಸ್ಪಷ್ಟವಾಗಿತ್ತು. 241 00:14:51,000 --> 00:14:55,000 ನಾನು ಹೇಳಲು ಪ್ರಯತ್ನಿಸುತ್ತಿರುವುದೇನೆಂದರೆ ಮೂರು ವರ್ಷಗಳಿಂದ, 242 00:14:55,000 --> 00:14:58,000 ಈ ಖಂಡದ ಸರಾಸರಿ ಬೆಳವಣಿಗೆ ಉತ್ತಮಗೊಂಡು 243 00:14:58,000 --> 00:15:02,000 ವರ್ಷಕ್ಕೆ ಸುಮಾರು ಶೇಕಡ 2.5 ರಿಂದ ಸುಮಾರು ಶೇಕಡ 5 ಕ್ಕೆ ಏರಿದೆ. 244 00:15:02,000 --> 00:15:06,000 ಇದು ಹಲವು OECD ದೇಶಗಳ ಪ್ರದರ್ಶನಕ್ಕಿಂತ ಉತ್ತಮವಾಗಿದೆ. 245 00:15:07,000 --> 00:15:11,000 ಆದ್ದರಿಂದ ಬದಲಾವಣೆ ಸಂಭವಿಸುತ್ತಿದೆ ಎನ್ನುವುದು ಸ್ಪಷ್ಟವಾಗಿದೆ. 246 00:15:11,000 --> 00:15:13,000 ಖಂಡದಲ್ಲಿ ವಿವಾದಗಳು ಕಡಿಮೆಯಾಗಿವೆ; 247 00:15:14,000 --> 00:15:16,000 ಒಂದು ದಶಕದ ಹಿಂದೆ ಸುಮಾರು 12 ವಿವಾದಗಳಿಂದ, 248 00:15:16,000 --> 00:15:18,000 ಈಗ ನಾವು ಮೂರು ಅಥವಾ ನಾಲ್ಕು ವಿವಾದಗಳಿಗೆ ಇಳಿದಿದ್ದೇವೆ. 249 00:15:18,000 --> 00:15:21,000 ಇವುಗಳಲ್ಲಿ ಭಯಂಕರವಾದವುಗಳಲ್ಲಿ ಒಂದು, ನಿಮಗೆ ತಿಳಿದಂತೆ, ದರ್ಫುರ್. 250 00:15:21,000 --> 00:15:24,000 ಹಾಗೂ, ನಿಮಗೆ ತಿಳಿದೇ ಇದೆ, ನೆರೆಹೊರೆ ಪ್ರಭಾವ, ಅಂದರೆ 251 00:15:24,000 --> 00:15:26,000 ಖಂಡದ ಒಂದು ಭಾಗದಲ್ಲಿ ಏನಾದರೂ ಸಂಭವಿಸಿದರೆ, 252 00:15:26,000 --> 00:15:29,000 ಅದು ಇಡೀ ಖಂಡಕ್ಕೇ ವ್ಯಾಪಿಸಿದಂತೆ ಕಾಣುತ್ತದೆ. 253 00:15:29,000 --> 00:15:32,000 ನೀವು ಒಂದು ವಿಷಯ ತಿಳಿದುಕೊಳ್ಳಬೇಕು, ಈ ಖಂಡ -- 254 00:15:32,000 --> 00:15:38,000 ಹಲವು ರಾಷ್ಟ್ರಗಳನ್ನು ಒಳಗೊಂಡಿರುವ ಖಂಡ, ಒಂದು ರಾಷ್ಟ್ರವಲ್ಲ. 255 00:15:38,000 --> 00:15:40,000 ಹಾಗೂ ನಾವು ಮೂರು ಅಥವಾ ನಾಲ್ಕು ವಿವಾದಗಳಿಗೆ ಇಳಿದಿದ್ದರೆ, 256 00:15:40,000 --> 00:15:43,000 ಇದರ ಅರ್ಥ ಹೂಡಿಕೆ ಮಾಡಲು ಹೇರಳವಾದ ಅವಕಾಶಗಳಿವೆ 257 00:15:43,000 --> 00:15:50,000 ಸದೃಢ, ಬೆಳೆಯುತ್ತಿರುವ, ರೋಮಾಂಚಕಾರಿ ಅರ್ಥವ್ಯವಸ್ಥೆಗಳಲ್ಲಿ 258 00:15:50,000 --> 00:15:53,000 ವಿಫುಲ ಅವಕಾಶಗಳು ದೊರಕುವಲ್ಲಿ. 259 00:15:54,000 --> 00:15:58,000 ಹಾಗೂ ಈ ಹೂಡಿಕೆ ಬಗ್ಗೆ ಒಂದು ವಿಚಾರ ಹೇಳಲು ಇಷ್ಟಪಡುತ್ತೇನೆ. 260 00:15:59,000 --> 00:16:01,000 ಆಫ್ರಿಕನ್ನರಿಗೆ ಸಹಾಯಮಾಡುವ ಉತ್ತಮ ವಿಧಾನವೆಂದರೆ 261 00:16:02,000 --> 00:16:05,000 ಅವರು ತಮ್ಮ ಕಾಲಮೇಲೆ ತಾವು ನಿಲ್ಲಲು ಸಹಾಯಮಾಡುವುದು. 262 00:16:05,000 --> 00:16:09,000 ಹಾಗೂ ಇದನ್ನು ಉತ್ತಮ ವಿಧಾನದಲ್ಲಿ ಮಾಡುವುದೆಂದರೆ ಉದ್ಯೋಗಗಳನ್ನು ಸೃಷ್ಟಿಮಾಡಲು ಸಹಾಯಮಾಡುವುದು. 263 00:16:10,000 --> 00:16:14,000 ಈ ವಿಚಾರದಲ್ಲಿ ಯಾವ ವಿವಾದವೂ ಇಲ್ಲ, ಮಲೇರಿಯಾ ವಿರುದ್ಧ ಹೋರಾಡುವುದು, ಅದರಲ್ಲಿ ಹಣ ಹಾಕುವುದು 264 00:16:14,000 --> 00:16:18,000 ಮತ್ತು ಮಕ್ಕಳ ಜೀವ ಉಳಿಸುವುದು. ನಾನು ಹೇಳುತ್ತಿರುವುದು ಆ ವಿಷವಲ್ಲ. ಅದು ಒಳ್ಳೆಯದೇ. 265 00:16:19,000 --> 00:16:23,000 ಆದರೆ, ಒಂದು ಕುಟುಂಬದ ಮೇಲೆ ಉಂಟಾಗುವ ಪ್ರಭಾವವನ್ನು ಕಲ್ಪಿಸಿಕೊಳ್ಳಿ, ತಂದೆತಾಯಿಗಳು ಉದ್ಯೋಗಸ್ಥರಾಗಿದ್ದರೆ 266 00:16:23,000 --> 00:16:25,000 ಹಾಗೂ ತಮ್ಮ ಮಕ್ಕಳು ಶಾಲೆಗೆ ಹೋಗುವುದನ್ನು ಖಚಿತಪಡಿಸಿಕೊಂಡರೆ, 267 00:16:25,000 --> 00:16:28,000 ಈ ಖಾಯಿಲೆಯ ವಿರುದ್ಧ ಹೋರಾಡಲು ಬೇಕಾದ ಔಷದಗಳನ್ನು ತಾವೇ ಕೊಂಡುಕೊಂಡರೆ. 268 00:16:28,000 --> 00:16:32,000 ನೀವೇ ಲಾಭ ಮಾಡುವಂತಹ ಸ್ಥಳಗಳಲ್ಲಿ ನೀವು ಹೂಡಿಕೆ ಮಾಡುವಂತಿದ್ದರೆ 269 00:16:32,000 --> 00:16:37,000 ಉದ್ಯೋಗಗಳನ್ನು ಸೃಷ್ಟಿಸಿ, ಜನರು ತಮ್ಮ ಕಾಲ ಮೇಲೆ ತಾವು ನಿಲ್ಲಲು ಸಹಾಯಮಾಡಿದರೆ 270 00:16:37,000 --> 00:16:42,000 ಅದು ಒಂದು ಅತ್ಯುತ್ತಮ ಅವಕಾಶವಲ್ಲವೆ? ಅನುಸರಿಸಬೇಕಾದ ದಾರಿ ಅದೇ ಅಲ್ಲವೆ? 271 00:16:42,000 --> 00:16:45,000 ಹಾಗೂ ನಾನು ಇನ್ನೊಂದು ವಿಷಯ ಹೇಳುತ್ತೇನೆ, ಈ ಖಂಡದಲ್ಲಿ ಹೂಡಿಕೆ ಮಾಡಿರುವ ಅತಿ 272 00:16:45,000 --> 00:16:47,000 ಉತ್ತಮ ವ್ಯಕ್ತಿಗಳು ಯಾರು ಗೊತ್ತೆ, ಮಹಿಳೆಯರು. 273 00:16:48,000 --> 00:16:55,000 (ಚಪ್ಪಾಳೆ). 274 00:16:55,000 --> 00:17:00,000 ನನ್ನಲ್ಲಿ ಒಂದು CD ಇದೆ. ಕ್ಷಮಿಸಿ, ನಾನು ಇದನ್ನು ಸಕಾಲದಲ್ಲಿ ಹೇಳಲಿಲ್ಲ. 275 00:17:00,000 --> 00:17:02,000 ಅಥವಾ, ನೀವು ಇದನ್ನು ನೋಡಬೇಕೆಂದು ನನ್ನ ಇಚ್ಛೆಯಿತ್ತು. 276 00:17:02,000 --> 00:17:05,000 ಅದರ ಹೆಸರು, “ಆಫ್ರಿಕಾ: ವ್ಯಾಪಾರಕ್ಕೆ ತೆರೆದಿದೆ.” 277 00:17:06,000 --> 00:17:09,000 ಇದು ಒಂದು ವಿಡಿಯೊ, ವಾಸ್ತವದಲ್ಲಿ ಪಾರಿತೋಷಕ ಪಡೆದಿದೆ, 278 00:17:09,000 --> 00:17:11,000 ವರ್ಷದ ಅತ್ಯುತ್ತಮ ಸಾಕ್ಷ್ಯಚಿತ್ರ ಎಂದು. 279 00:17:11,000 --> 00:17:13,000 ತಿಳಿಯಿರಿ, ಇದನ್ನು ಮಾಡಿದ ಮಹಿಳೆ 280 00:17:13,000 --> 00:17:18,000 ಟಾನ್ ಜೇನಿಯಾದಲ್ಲಿರುತ್ತಾರೆ, ಅಲ್ಲಿ ಜೂನ್ ನಲ್ಲಿ ಅಧಿವೇಶನ ಇದೆ. 281 00:17:19,000 --> 00:17:24,000 ಇದು ತೋರಿಸುತ್ತದೆ ನೀವು ಆಫ್ರಿಕನ್ನರು, ಅದರಲ್ಲೂ ಆಫ್ರಿಕನ್ ಮಹಿಳೆಯರು, 282 00:17:24,000 --> 00:17:29,000 ಎಲ್ಲ ತೊಂದರೆಗಳ ನಡುವೆಯೂ ವ್ಯಾಪಾರಗಳನ್ನು ಅಭಿವೃದ್ಧಿಪಡಿಸಿದ್ದೀರಿ, ಅದರಲ್ಲಿ ಕೆಲವು ವಿಶ್ವ-ಶ್ರೇಣಿಯವು. 283 00:17:29,000 --> 00:17:32,000 ಈ ವಿಡಿಯೊದಲ್ಲಿರುವ ಒಬ್ಬ ಮಹಿಳೆ, ಅಡೆನಿಕೆ ಒಕುಂಟೇಸಿ, 284 00:17:32,000 --> 00:17:34,000 ಮಕ್ಕಳ ಉಡುಪುಗಳನ್ನು ತಯಾರಿಸುತ್ತಾಳೆ -- 285 00:17:34,000 --> 00:17:39,000 ಇದನ್ನು ಅವಳು ಒಂದು ಹವ್ಯಾಸವೆಂದು ಪ್ರಾರಂಭಿಸಿದಳು, ಅದು ಒಂದು ವ್ಯಾಪಾರವಾಗಿ ಬೆಳೆಯಿತು. 286 00:17:39,000 --> 00:17:42,000 ಆಫ್ರಿಕನ್ ವಸ್ತುಗಳನ್ನು ಮಿಶ್ರಮಾಡಿ, ನಾವು ಹೊಂದಿರುವಂತೆ, 287 00:17:43,000 --> 00:17:44,000 ಬೇರೆ ಪ್ರದೇಶದ ವಸ್ತುಗಳ ಜೊತೆ. 288 00:17:44,000 --> 00:17:49,000 ಅಂದರೆ, ಅವಳು ಕಾರ್ಡುರೋಯ್ ನೊಂದಿಗೆ ಡುಂಗರೀಗಳನ್ನು 289 00:17:49,000 --> 00:17:53,000 ಆಫ್ರಿಕನ್ ವಸ್ತುಗಳನ್ನು ಮಿಶ್ರಮಾಡಿ ತಯಾರಿಸುತ್ತಾಳೆ. 290 00:17:55,000 --> 00:17:58,000 ಇದು ಯಾವ ಮಟ್ಟಕ್ಕೆ ಬೆಳೆದಿದೆಯೆಂದರೆ ಆಕೆಗೆ ವಾಲ್-ಮಾರ್ಟ್ ನಿಂದ ಒಂದು ಬೇಡಿಕೆ ಬಂದಿದೆ. 291 00:17:59,000 --> 00:18:00,000 (ನಗು). 292 00:18:01,000 --> 00:18:03,000 10:00 ಉಡುಪುಗಳಿಗೆ. 293 00:18:04,000 --> 00:18:08,000 ಇದು, ನಮ್ಮಲ್ಲಿ ಮಾಡಿತೋರಿಸುವ ಸಾಮರ್ಥ್ಯ ಉಳ್ಳವರಿದ್ದಾರೆ ಎಂಬುದನ್ನು ತೋರಿಸುತ್ತದೆ. 294 00:18:08,000 --> 00:18:13,000 ಹಾಗೂ ಈ ಮಹಿಳೆಯರು ಶ್ರಮಶೀಲರು ಮತ್ತು ಹಟವಂತರು; ಅವರು ಕಷ್ಟಪಟ್ಟು ಕೆಲಸಮಾಡುವರು. 295 00:18:13,000 --> 00:18:15,000 ನಾನು ಈ ರೀತಿ ಉದಾಹರಣೆಗಳನ್ನು ಕೊಡಬಲ್ಲೆ: 296 00:18:15,000 --> 00:18:19,000 ರವಾಂಡದ ಬಿಯಾಟ್ರೈಸ್ ಗಕೂಬ, ಒಂದು ಹೂವು ವ್ಯಾಪಾರ ಪ್ರಾರಂಭಿಸಿದರು 297 00:18:19,000 --> 00:18:24,000 ಹಾಗೂ ಪ್ರತಿದಿನ ಬೆಳಿಗ್ಗೆ ಅದು ಅಮ್ಸ್ಟರ್ ಡಾಮ್ ನಲ್ಲಿ ಡಚ್ ಹರಾಜಿಗೆ ರಫ್ತಾಗುತ್ತದೆ, 298 00:18:24,000 --> 00:18:28,000 ಹಾಗೂ ತನ್ನೊಂದಿಗೆ ಕೆಲಸಮಾಡಲು 200 ಜನ ಪುರುಷರು ಮತ್ತು ಮಹಿಳೆಯರನ್ನು ನೇಮಕ ಮಾಡಿಕೊಂಡಿದ್ದಾಳೆ. 299 00:18:29,000 --> 00:18:33,000 ಆದರೆ, ಇವುಗಳಲ್ಲಿ ಹೆಚ್ಚುಪಾಲು ಬಂಡವಾಳದ ಕೊರತೆಯಿಂದ ವಿಸ್ತರಿಸಿಲ್ಲ, 300 00:18:34,000 --> 00:18:37,000 ಏಕೆಂದರೆ ನಮ್ಮ ದೇಶದಿಂದ ಹೊರಗೆ ಯಾರೂ ನಂಬುವುದಿಲ್ಲ 301 00:18:37,000 --> 00:18:42,000 ನಾವು ಅಗತ್ಯವಿರುವ ಕೆಲಸ ಮಾಡುತ್ತೇವೆಂದು. ಯಾರೂ ಮಾರುಕಟ್ಟೆ ದೃಷ್ಟಿಯಿಂದ ಯೋಚಿಸುವುದಿಲ್ಲ. 302 00:18:42,000 --> 00:18:45,000 ಅವಕಾಶಗಳಿವೆ ಎಂದು ಯಾರೂ ಯೋಚಿಸುವುದಿಲ್ಲ. 303 00:18:45,000 --> 00:18:48,000 ಆದರೆ, ನಾನಿಲ್ಲಿ ನಿಂತು ಹೇಳುತ್ತೇನೆ, ಯಾರು ದೋಣಿಯನ್ನು ತಪ್ಪಿಸುತ್ತಾರೊ 304 00:18:48,000 --> 00:18:50,000 ಅದನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತಾರೆ. 305 00:18:50,000 --> 00:18:56,000 ಹಾಗಾಗಿ, ನೀವು ಆಫ್ರಿಕಾದಲ್ಲಿ ಇರಬೇಕೆಂದಿದ್ದರೆ ಹೂಡಿಕೆ ಬಗ್ಗೆ ಆಲೋಚಿಸಿ. 306 00:18:57,000 --> 00:19:03,000 ಈ ಪ್ರಪಂಚದ ಬಿಯಾಟ್ರೈಸ್ ಬಗ್ಗೆ ಯೋಚಿಸಿ, ಅಡೆನಿಕೇಸ್ ಬಗ್ಗೆ ಯೋಚಿಸಿ, 307 00:19:03,000 --> 00:19:06,000 ಇವರು ಅಸಾಧಾರಣ ಕೆಲಸ ಮಾಡುತ್ತಿದ್ದಾರೆ ಹಾಗೂ ಅವು ಅವರನ್ನು 308 00:19:06,000 --> 00:19:09,000 ಜಾಗತಿಕ ಆರ್ಥಿಕ ವ್ಯವಸ್ಥೆಗೆ ಕೊಂಡೊಯ್ಯುತ್ತಿದೆ, ಅದೇ ಸಮಯದಲ್ಲಿ ಅವರು 309 00:19:09,000 --> 00:19:12,000 ತಮ್ಮ ಜೊತೆಯೆ ಪುರುಷರು ಮತ್ತು ಮಹಿಳೆಯರಿಗೆ ಉದ್ಯೋಗ ನೀಡುತ್ತಿದ್ದಾರೆ, 310 00:19:12,000 --> 00:19:14,000 ಹಾಗೂ ಆ ಕುಟುಂಬಗಳಲ್ಲಿನ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ 311 00:19:14,000 --> 00:19:17,000 ಏಕೆಂದರೆ, ಅವರ ತಂದೆತಾಯಿಗಳು ಅಗತ್ಯವಿರುವಷ್ಟು ಸಂಪಾದಿಸುತ್ತಿದ್ದಾರೆ. 312 00:19:18,000 --> 00:19:22,000 ಆದ್ದರಿಂದ, ನಾನು ನಿಮ್ಮನ್ನು ಅವಕಾಶಗಳನ್ನು ಉಪಯೋಗಿಸಿಕೊಳ್ಳಿ ಎಂದು ಆಹ್ವಾನಿಸುತ್ತಿದ್ದೇನೆ. 313 00:19:23,000 --> 00:19:27,000 ನೀವು ಟಾನ್ ಜೇನಿಯಾಗೆ ಹೋದರೆ ಎಚ್ಚರಿಕೆಯಿಂದ ಆಲಿಸಿ, 314 00:19:27,000 --> 00:19:31,000 ಏಕೆಂದರೆ ನನಗೆ ಖಚಿತವಿದೆ ನೀವು ವಿಪುಲ ಅವಕಾಶಗಳ ಬಗ್ಗೆ ಆಲಿಸುತ್ತೀರ 315 00:19:31,000 --> 00:19:36,000 ನೀವು ಈ ಖಂಡಕ್ಕೆ ಒಳ್ಳೆಯದು ಸಂಭವಿಸುವಂತೆ ತೊಡಗಿಸಿಕೊಳ್ಳಿ 316 00:19:36,000 --> 00:19:41,000 ನಿಮಗೂ ಜನರಿಗೂ ಒಳ್ಳೆಯದಾಗುವಂತೆ. 317 00:19:41,000 --> 00:19:42,000 ತುಂಬಾ ಧನ್ಯವಾದಗಳು. 318 00:19:42,000 --> 00:19:50,000 (ಚಪ್ಪಾಳೆ)