ಪ್ರಾಕ್ಟೀಸ್ ಮಾಡಿದರೆ ಪರಿಣಿತಿ ಸಾಧಿಸಬಹುದು ಎಂದು ಅಥ್ಲೀಟ್‌ಗೆ ಗೊತ್ತು. ಪರಿಣಿತಿ ಸಾಧಿಸುವವರೆಗೆ ಅದೇ ಕೆಲಸ ಮಾಡಿದರೆ, ಅಥವಾ ಗುರಿ ಸಾಧಿಸುವವರೆಗೆ. ನಾನು ಹೈಸ್ಕೂಲ್‌ನಲ್ಲಿದ್ದಾಗ ಸತತ 10 ಫ್ರೀ ಥ್ರೋ ಮಾಡುವವರೆಗೆ ಬಿಡುತ್ತಿರಲಿಲ್ಲ. ಇದೇ ರೀತಿ, ಕಂಪ್ಯೂಟರ್ ಪ್ರೋಗ್ರಾಮ್‌ನಲ್ಲಿ ಕಮಾಂಡ್ ರಿಪೀಟ್ ಮಾಡಿದರೆ ರಿಪೀಟ್ ಮಾಡಲು ನಿಖರ ಸಂಖ್ಯೆಯನ್ನು ನೀಡಬಹುದು ಅಥವಾ ಗುರಿಯನ್ನು ನಿಗದಿಸಬಹುದು. ಗುರಿ ತಲುಪುವವರೆಗೆ ಕಮಾಂಡ್ ರಿಪೀಟ್ ಮಾಡುವಂತೆ ಹೇಳಬಹುದು. ಮುಂದಿನ ಉದಾಹರಣೆಯಲ್ಲಿ, "ರಿಪೀಟ್" ಬ್ಲಾಕ್ ಬದಲಿಸಲಾಗಿದೆ. ಎಷ್ಟು ಐಟಂ ರಿಪೀಟ್ ಮಾಡಬೇಕು ಎಂದು ನಿರ್ಧರಿಸುವ ಬದಲಿಗೆ ಅದನ್ನೇ ಮಾಡುವಂತೆ ಆಂಗ್ರಿ ಬರ್ಡ್‌ಗೆ ಹೇಳಲು "ಈವರೆಗೆ ರಿಪೀಟ್" ಬ್ಲಾಕ್ ಬಳಸಬಹುದು ಹಂದಿ ಸಿಗುವವರೆಗೆ ಅಥವಾ ಗೋಡೆಗೆ ಬಡಿಯುವವರೆಗೆ. ಪುನಃ, ಲೂಪ್ ಒಳಗೆ ಹಲವು ಬ್ಲಾಕ್ ಹಾಕಬಹುದು ಆಕ್ಷನ್‌ಗಳ ಸರಣಿ ರಿಪೀಟ್ ಮಾಡಬಹುದು.