ಕಂಪ್ಯೂಟರ್‌ಗಳು ಕಮಾಂಡ್ ರಿಪೀಟ್ ಮಾಡುವಲ್ಲಿ ಉತ್ತಮವಾಗಿವೆ. ವ್ಯಕ್ತಿಯಾಗಿ, ಒಂದೇ ಕೆಲಸವನ್ನು ತುಂಬಾ ಬಾರಿ ಮಾಡಿದರೆ ನಿಮಗೆ ಬೇಸರವಾಗುತ್ತದೆ. ಆದರೆ, ಕಂಪ್ಯೂಟರ್‌ಗಳು ಒಂದೇ ಕೆಲಸವನ್ನು ಲಕ್ಷಗಟ್ಟಲೆ ಬಾರಿ ಮಾಡಬಹುದು. ಅವುಗಳಿಗೆ ಬೇಸರವಾಗದು ಮತ್ತು ಅದನ್ನು ಚೆನ್ನಾಗಿ ಮಾಡಲು ಸಾಧ್ಯ ಉದಾ., ಫೇಸ್‌ಬುಕ್‌ನಲ್ಲಿರುವ ಎಲ್ಲರಿಗೂ ಹುಟ್ಟುಹಬ್ಬದ ಶುಭ ಕೋರಲು ಬಯಸಿದರೆ, ಇಮೇಲ್ ಕಳುಹಿಸಲು ನನಗೆ ಇಮೇಲ್ ವಿಳಾಸಗಳನ್ನೆಲ್ಲ ಬರೆದೇ ಒಂದು ಶತಮಾನವೇ ಬೇಕಾಗಬಹುದು. ಆದರೆ, ಕೆಲವೇ ಲೈನ್ ಕೋಡ್‌ನಿಂದ ನಾನು ಒಂದು ಸಿಸ್ಟಮ್ ಮಾಡಿಕೊಳ್ಳಬಹುದು. ಅದರಲ್ಲಿ ಫೇಸ್‌ಬುಕ್‌ನಲ್ಲಿನ ಎಲ್ಲರಿಗೂ ಇಮೇಲ್ ಕಳುಹಿಸಬಹುದು. ಲೂಪ್ ಅಂದರೆ ಇದೇ. ಅವು ಯಾಕೆ ಮೌಲ್ಯಯುತ ಎಂದರೆ ಕಂಪ್ಯೂಟರ್‌ಗಳು ಇದನ್ನು ಚೆನ್ನಾಘಿ ಮಾಡಿದ್ದಾರೆ. ಈ ಉದಾಹರಣೆಯಲ್ಲಿ ಹಂದಿಯನ್ನು ಪಡೆಯಲು ಹಕ್ಕಿ ಸಾಗುವುದು ನಿಮ್ಮ ಗುರಿಯಾಗಿದೆ. ಇದನ್ನು ಸುಲಭವಾಗಿ ಮಾಡಲು ನಾವು ರಿಪೀಟ್ ಬ್ಲಾಕ್ ಬಳಸುತ್ತೇವೆ. ಇದನ್ನು ನೀವು ಕಂಪ್ಯೂಟರ್‌ಗೆ ಐದು ಬಾರಿ "ಮೂವ್ ಫಾರ್ವರ್ಡ್‌" ಕಮಾಂಡ್ ಬಳಸಿ ಮಾಡಬಹುದು ಇದರಿಂದ ಹಂದಿ ಕಡೆಗೆ ಪ್ರತಿ ಬಾರಿ ಒಂದು ಹೆಜ್ಜೆ ಮುಂದೆ ಇಡಬಹುದು. ಅಥವಾ ಒಮ್ಮೆ "ಮೂವ್ ಫಾರ್ವರ್ಡ್" ಅನ್ನು ಬಳಸುವಂತೆ ಕಂಪ್ಯೂಟರ್‌ಗೆ ಹೇಳಬಹುದು. ನಂತರ ಅದನ್ನು 5 ಬಾರಿ "ರಿಪೀಟ್" ಮಾಡಿ ಎಂದು ಹೇಳಬಹುದು ಮತ್ತು ಅದು ಮಾಡುತ್ತದೆ. ಇದನ್ನು ಮಾಡಲು ನೀವು ನಿಮ್ಮ "ಮೂವ್ ಫಾರ್ವರ್ಡ್‌" ಕಮಾಂಡ್ ಅನ್ನು ಡ್ರ್ಯಾಗ್ ಮಾಡಿ ನಂತರ ಇದನ್ನು ನೀವು "ರಿಪೀಟ್" ಬ್ಲಾಕ್ ಅನ್ನು ಇಡಿ. ನಂತರ ನೀವು ಇದರ ಮೇಲೆ ಕ್ಲಿಕ್ ಮಾಡಬಹುದು ಮತ್ತು ಬ್ಲಾಕ್ ಎಷ್ಟು ಬಾರಿ ರಿಪೀಟ್ ಮಾಡಬೇಕು ಎಂದು ಹೇಳಿ ಎಷ್ಟು ಸ್ಟೆಪ್ ಮುಂದೆ ಹೋಗಬೇಕು ಎಂದು ಹೇಳಿ. ಇನ್ನೂ ಒಂದು ವಿಷಯವೇನೆಂದರೆ, ರಿಪೀಟ್ ಬ್ಲಾಕ್ ಒಳಗೆ ನೀವು ಬಯಸಿದಷ್ಟು ಕಮಾಂಡ್ ಅನ್ನು ನೀವು ಹಾಕಬಹುದು. ಈ ಉದಾಹರಣೆಯಲ್ಲಿ, ಮೂವ್ ಫಾರ್ವರ್ಡ್‌ ಮಾಡಲು ಎಡಕ್ಕೆ ತಿರುಗಲು ಹೇಳುತ್ತೀರಿ ಇದನ್ನು ಐದು ಬಾರಿ ಅನುಸರಿಸುತ್ತದೆ. ಒಳ್ಳೆಯ ಕೆಲಸ. ಆನಂದಿಸಿ :-)