ಕಂಪ್ಯೂಟರ್ ಸೈನ್ಸ್‌ನಲ್ಲಿ ಮುಖ್ಯ ಕಾನ್ಸೆಪ್ಟ್ ಎಂದರೆ ಹೊಸ ಕಮಾಂಡ್ ವ್ಯಾಖ್ಯಾನಿಸುವುದು ಕಂಪ್ಯೂಟರ್ ಲ್ಯಾಂಗ್ವೇಜ್‌ಗೆ ನಿಮ್ಮದೇ ಶಬ್ದ ಸೇರಿಸುವುದು. ಬಹುತೇಕ ಕಂಪ್ಯೂಟರ್ ಲ್ಯಾಂಗ್ವೇಜ್‌ಗಳು ನೂರು ಶಬ್ದ ಅಥವಾ ಕಮಾಂಡ್‌ಗಳನ್ನು ಹೊಂದಿವೆ. ನಿಮ್ಮ ಹೊಸ ಶಬ್ದಗಳನ್ನು ಈ ಹೊಸ ಬಿಲ್ಡಿಂಗ್ ಬ್ಲಾಕ್‌ನಲ್ಲಿ ವ್ಯಾಖ್ಯಾನಿಸುವುದೇ ಮುಖ್ಯ. ಕ್ರೀಡೆಯಲ್ಲಿ ಇದನ್ನು ನಾವು ಮಾಡುತ್ತೇವೆ. ಉದಾ., ಬಾಸ್ಕೆಟ್‌ಬಾಲ್‌ನಲ್ಲಿ ಡ್ರಿಬಲ್ ಆರಂಭ, ಲೇಪ್ ಮಾಡುವುದು, ರಿಬೌಂಡ್ ಕಲಿಯುತ್ತೀರಿ. ಈ ಮೂಲ ಮೂವ್‌ಗಳನ್ನು ಕಲಿತ ನಂತರ, ಹೊಸ ಮೂವ್ ಕಲಿಯುತ್ತೀರಿ ಮತ್ತು ಈ ಬಿಲ್ಡಿಂಗ್ ಬ್ಲಾಕ್ ಅನ್ನು ನೀವು ಹಾಕುತ್ತೀರಿ ಪಿಕ್, ರೋಲ್, ಗಿವ್, ಗೋ ರೀತಿ. ಅಲ್ಲಿಂದ ನೀವು ಸಂಕೀರ್ಣ ಪ್ಲೇಗೆ ಹೋಗಬಹುದು. ನೀವು ಒಮ್ಮೆ ಕಲಿತ ನಂತರ ಅದಕ್ಕೆ ಹೆಸರು ಕೊಡಿ. ಇದನ್ನು ಮಾಡೋದು ಹೇಗೆ ಎಂದು ಎಲ್ಲರಿಗೂ ತಿಳಿಯುತ್ತದೆ. ಇದೇ ರೀತಿ ಕಮಾಂಡ್‌ಗಳನ್ನು ಬಳಸಿ ಆಕ್ಷನ್ ಮಾಡುವುದನ್ನು ಕಂಪ್ಯೂಟರ್‌ಗೆ ಕಲಿಸಿದ ನಂತರ, ನಿಮ್ಮದೇ ಆಕ್ಷನ್ ಅನ್ನು ನೀವು ಮಾಡಬಹುದು. ಅದು ನಂತರ ರಿಪೀಟ್ ಮಾಡುತ್ತದೆ. ನಿಮ್ಮದೇ ಕಮಾಂಡ್ ಅನ್ನು ವ್ಯಾಖ್ಯಾನಿಸಿದ ನಂತರ, ಅದಕ್ಕೆ ಹೆಸರು ಕೊಡಿ. ಅದನ್ನು ಫಂಕ್ಷನ್ ಎನ್ನಲಾಗುತ್ತದೆ. ಈಗ ನಾವು ಜೇನ್ನೊಣಕ್ಕೆ ಸಹಾಯ ಮಾಡುವ ಫಂಕ್ಷನ್ ಮಾಡೋಣ. ಈ ಉದಾಹರಣೆಯಲ್ಲಿ, ನಮ್ಮ ಫಂಕ್ಷನ್‌ಗೆ 2 ನೆಕ್ಟರ್ ಎಂದು ಹೆಸರು. ಇಲ್ಲಿ ಈ ಹಸಿರು ಬ್ಲಾಕ್ ಇದೆಯಲ್ಲ. ಈ ಬೂದು ಬ್ಲಾಕ್ ನೋಡಿ ಆ 2 ನೆಕ್ಟರ್‌ಗೆ ಏನು ಸಿಗುತ್ತದೆ ಎಂದು ನಮಗೆ ತಿಳಿದಿದೆ. ಇದು ಫಂಕ್ಷನ್ ಡಿಫಿನಿಶನ್. ಅಲ್ಲಿ ಒಳಗೆ ನೋಡಿದರೆ, 2 ನೆಕ್ಟರ್‌ಗೆ ನೆಕ್ಟರ್ ಸಿಗುತ್ತದೆ ಮತ್ತು ಪುನಃ ನೆಕ್ಟರ್ ಸಿಗುತ್ತದೆ. ಎಂದಿಗೂ ಬೂದು ಬಾಕ್ಸ್‌ನಲ್ಲಿ ಏನಿದೆ ಎಂದು ನೋಡಿ. ಆಗ ಈ ಹಸಿರು ಫಂಕ್ಷನ್ ಬ್ಲಾಕ್‌ಗಳ ಕೆಲಸ ನಿಮಗೆ ತಿಳಿಯುತ್ತದೆ.