WEBVTT 00:00:01.000 --> 00:00:03.000 ನಾಲ್ಕು ವರ್ಷಗಳ ಮೊದಲು ನಾನು ಇಲ್ಲಿದ್ದೆ 00:00:03.000 --> 00:00:05.000 ನನಗೆ ನೆನಪಿದೆ , ಆಗ 00:00:05.000 --> 00:00:08.000 ಈ ಭಾಷಣಗಳನ್ನು ಅಂತರ್ಜಾಲದಲ್ಲಿ ಹಾಕುತ್ತಿರಲಿಲ್ಲ 00:00:08.000 --> 00:00:12.000 TED ಉತ್ಸಾಹಿಗಳಿಗೆ ಅವನ್ನು ಒಂದು ಪೆಟ್ಟಿಗೆಯಲ್ಲಿ ಹಾಕಿ ಕೊಡುತ್ತಿದ್ದರು . 00:00:12.000 --> 00:00:14.000 ಡಿ ವಿ ಡಿಗಳ ಒಂದು ಪೆಟ್ಟಿಗೆ . 00:00:14.000 --> 00:00:17.000 ಅವನ್ನು ತಮ್ಮ ಕಪಾಟುಗಳಲ್ಲಿ ಇಡುತ್ತಿದ್ದರು.ಅವು ಈಗಲೂ ಅಲ್ಲೇ ಇವೆ . NOTE Paragraph 00:00:17.000 --> 00:00:19.000 (ನಗು) NOTE Paragraph 00:00:19.000 --> 00:00:21.000 ನನ್ನ ಭಾಷಣವಾದ ಒಂದು ವಾರದ 00:00:21.000 --> 00:00:23.000 ನಂತರ ಕ್ರಿಸ್ ನನಗೆ ಫೋನ್ ಮಾಡಿದ್ದರು . 00:00:23.000 --> 00:00:25.000 ಟೆಡ್ ಭಾಷಣಗಳನ್ನು ಈಗ ಅಂತರ್ಜಾಲದಲ್ಲಿ ಹಾಕುತ್ತಿದ್ದೇವೆ 00:00:25.000 --> 00:00:28.000 "ನಿಮ್ಮ ಭಾಷಣವನ್ನೂ ಹಾಕಬಹುದೇ?" "ಖಂಡಿತ" ಎಂದೆ NOTE Paragraph 00:00:28.000 --> 00:00:30.000 ನಾಲ್ಕು ವರ್ಷಗಳ ಬಳಿಕ 00:00:30.000 --> 00:00:32.000 ಅದನ್ನು ನೋಡಿದವರು ನಾಲ್ಕು 00:00:32.000 --> 00:00:35.000 ಅಲ್ಲಲ್ಲ, ಅದನ್ನು ನಲವತ್ತು ಲಕ್ಷ ಬಾರಿ ಇಳಿಸಿಕೊಂಡಿದ್ದಾರೆ . 00:00:35.000 --> 00:00:38.000 ಅಂದರೆ ಸುಮಾರು, ಅದರ ಇಪ್ಪತ್ತರಷ್ಟು ಮಂದಿ 00:00:38.000 --> 00:00:40.000 ಆ ವಿಡಿಯೋವನ್ನು ನೋಡಿರಬಹುದೆಂದು ತೋರುತ್ತದೆ. 00:00:40.000 --> 00:00:44.000 ಕ್ರಿಸ್ ಹೇಳುವಂತೆ ನಾನಿರುವ ವಿಡಿಯೋಗಳಿಗೆ 00:00:44.000 --> 00:00:46.000 ಸಿಕ್ಕಾಪಟ್ಟೆ ಹಸಿವು (ಬೇಡಿಕೆ) ಇದೆ . NOTE Paragraph 00:00:46.000 --> 00:00:49.000 (ನಗು) NOTE Paragraph 00:00:49.000 --> 00:00:52.000 (ಚಪ್ಪಾಳೆ ) NOTE Paragraph 00:00:54.000 --> 00:00:55.000 ... ನಿಮಗೂ ಹಸಿವಾಗುತ್ತಿಲ್ಲವೇ? NOTE Paragraph 00:00:55.000 --> 00:00:58.000 (ನಗು) NOTE Paragraph 00:01:00.000 --> 00:01:03.000 ಅಂದರೆ ನಾನು ಇನ್ನೊಂದು ಭಾಷಣ ಮಾಡಲೀ ಎನ್ನುವ 00:01:03.000 --> 00:01:07.000 ಉದ್ದೇಶದಿಂದಲೇ ಇದನ್ನು ಬೆಳೆಸಿದ್ದಾರೆ ಎಂದು ಕಾಣುತ್ತದೆ. ಆಗಲಿ. NOTE Paragraph 00:01:07.000 --> 00:01:08.000 (ನಗು) NOTE Paragraph 00:01:10.000 --> 00:01:12.000 ಅಲ್ ಗೋರ್ ರವರು ನಾಲ್ಕು ವರ್ಷಗಳ ಹಿಂದೆ 00:01:12.000 --> 00:01:15.000 ನಾನು ಮಾತನಾಡಿದ ಟೆಡ್ ಸಮಾವೇಶದಲ್ಲೇ ಮಾತನಾಡಿದ್ದರು. 00:01:15.000 --> 00:01:17.000 ಅದರಲ್ಲಿ ಹವಾಮಾನ ವಿಪತ್ತಿನ ಬಗ್ಗೆ ಪ್ರಸ್ತಾಪಿಸಿದ್ದರು. 00:01:17.000 --> 00:01:19.000 ಅದನ್ನು ನಾನು ನನ್ನ 00:01:19.000 --> 00:01:21.000 ಹಿಂದಿನ ಭಾಷಣದ ಕೊನೆಯಲ್ಲಿ ಪ್ರಸ್ತಾಪಿಸಿದ್ದೆ. 00:01:21.000 --> 00:01:23.000 ಹಾಗಾಗಿ ಅಲ್ಲಿಂದಲೇ ಪ್ರಾರಂಭಿಸುತ್ತೇನೆ. 00:01:23.000 --> 00:01:26.000 ಯಾಕೆಂದರೇ... ನೋಡಿ. ನನಗೆ ಇದ್ದದ್ದು ಕೇವಲ ೧೮ ನಿಮಿಷಗಳು, ನಿಜಾ. 00:01:26.000 --> 00:01:28.000 ನಾನು ಹೇಳುತ್ತಿದ್ದ ಹಾಗೆ NOTE Paragraph 00:01:28.000 --> 00:01:33.000 (ನಗು) NOTE Paragraph 00:01:36.000 --> 00:01:38.000 ನೋಡಿ, ಅವರು ಹೇಳಿದ್ದು ಸರಿಯಿದೆ. 00:01:38.000 --> 00:01:41.000 ಅಂದರೆ, ದೊಡ್ಡ ಹವಾಮಾನ ವಿಪತ್ತು ಇದೆ. ಸ್ಪಷ್ಟವಾಗಿದೆ. 00:01:41.000 --> 00:01:44.000 ನಂಬದಿರುವವರು ಯಾರಾದರೂ ಇದ್ದರೆ ಅವರು ತಿಳಿದುಕೊಳ್ಳುವುದು ಬಹಳಷ್ಟು ಇದೆ. 00:01:44.000 --> 00:01:47.000 (ನಗು) 00:01:47.000 --> 00:01:50.000 ಆದರೆ ನನಗನ್ನಿಸುವುದೇನೆಂದರೆ ಇನ್ನೂ ಒಂದು ಹವಾಮಾನ ವಿಪತ್ತು ಇದೆ. 00:01:51.000 --> 00:01:53.000 ಅದೂ ಅಷ್ಟೇ ತೀವ್ರವಾಗಿದೆ, 00:01:53.000 --> 00:01:56.000 ಎರಡರ ಮೂಲಗಳೂ ಒಂದೇ ಆಗಿವೆ, 00:01:56.000 --> 00:01:59.000 ಅದನ್ನೂ ಅಷ್ಟೇ ತುರ್ತಾಗಿ ಬಗೆಹರಿಸಬೇಕಾಗಿದೆ. 00:01:59.000 --> 00:02:01.000 ನಿಜಕ್ಕೂ ಇದನ್ನು ಹೇಳುತ್ತಿದ್ದೇನೆ... 00:02:01.000 --> 00:02:03.000 ನೀವೆನ್ನಬಹುದು " ನೋಡಿ, ಇರುವ ಒಂದು 00:02:03.000 --> 00:02:05.000 ಹವಾಮಾನ ವಿಪತ್ತೇ ಸಾಕು. 00:02:05.000 --> 00:02:08.000 ಎರಡನೆಯದು ನನಗೆ ಬೇಕಾಗಿಲ್ಲ." 00:02:08.000 --> 00:02:10.000 ಆದರೆ ಈ ವಿಪತ್ತು, ನೈಸರ್ಗಿಕ ಸಂಪನ್ಮೂಲಗಳದ್ದಲ್ಲ -- 00:02:10.000 --> 00:02:13.000 ನನಗೆ ಅದೇ ನಿಜವೆನಿಸಿದರೂ -- 00:02:13.000 --> 00:02:15.000 ಇದು ಮಾನವ ಸಂಪನ್ಮೂಲಗಳ ಕೊರತೆಗೆ ಸಂಬಂಧಿಸಿದ್ದು. NOTE Paragraph 00:02:15.000 --> 00:02:17.000 ನನ್ನ ಅನಿಸಿಕೆಯಂತೆ , ಮೂಲಭೂತವಾಗಿ 00:02:17.000 --> 00:02:19.000 ಈಗಾಗಲೇ ಅನೇಕ ಭಾಷಣಕಾರರು ಹೇಳಿರುವಂತೆ 00:02:19.000 --> 00:02:22.000 ನಾವೆಲ್ಲಾ ನಮ್ಮ ಪ್ರತಿಭೆ ಸಾಮರ್ಥ್ಯಗಳನ್ನು 00:02:22.000 --> 00:02:25.000 ಸರಿಯಾಗಿ ಬಳಸುತ್ತಿಲ್ಲ. 00:02:25.000 --> 00:02:27.000 ಅಸಂಖ್ಯಾತ ಮಂದಿ ತಮ್ಮ ಇಡೀ ಜೀವಮಾನವನ್ನು 00:02:27.000 --> 00:02:30.000 ತಮಗೆ ಯಾವ ಪ್ರತಿಭೆ ಇದೆಯೆಂಬುದನ್ನೇ ತಿಳಿಯದೆ 00:02:30.000 --> 00:02:32.000 ಅಥವಾ ಇದೆಯೋ ಇಲ್ಲವೋ ಎಂದು ತಿಳಿಯದೆ ಇದ್ದುಬಿಡುತ್ತಾರೆ. 00:02:32.000 --> 00:02:34.000 ನಾನು ನಾನಾ ರೀತಿಯ ಜನರನ್ನು ಭೇಟಿಯಾಗುತ್ತಿರುತ್ತೇನೆ. 00:02:34.000 --> 00:02:37.000 ತಮಗೆ ಯಾವುದರಲ್ಲಿ ಸಾಮರ್ಥ್ಯವಿದೆಯೆಂದು ಅವರಿಗೇ ತಿಳಿದಿರುವುದಿಲ್ಲ NOTE Paragraph 00:02:38.000 --> 00:02:41.000 ನಾನು ಸಾಧಾರಣವಾಗಿ ಜನರನ್ನು ಎರಡು ಗುಂಪುಗಳನ್ನಾಗಿ ವರ್ಗೀಕರಿಸುತ್ತೇನೆ. 00:02:41.000 --> 00:02:44.000 ಉಪಯೋಗಿತಾವಾದಿ ತತ್ವಶಾಸ್ತ್ರಜ್ಞ ನಾದ ಜೆರೆಮಿ ಬೆಂಥಮ್ 00:02:44.000 --> 00:02:46.000 ಒಮ್ಮೆ ಇಂಥದೊಂದು ತರ್ಕವನ್ನು ಮುಂದಿಟ್ಟಿದ್ದ. 00:02:46.000 --> 00:02:48.000 "ಈ ಜಗತ್ತಿನಲ್ಲಿ ಎರಡು ರೀತಿಯ ಜನರಿದ್ದಾರೆ 00:02:48.000 --> 00:02:50.000 ಜಗತ್ತನ್ನು ಎರಡು ಗುಂಪುಗಳನ್ನಾಗಿ ವಿಭಜಿಸುವವರು 00:02:50.000 --> 00:02:52.000 ಮತ್ತು ಹಾಗೆ ಮಾಡದೇ ಇರುವವರು" 00:02:52.000 --> 00:02:55.000 (ನಗು) 00:02:57.000 --> 00:02:59.000 ನಾನಂತೂ ಹಾಗೆ ಮಾಡುತ್ತೇನೆ. 00:02:59.000 --> 00:03:01.000 (ನಗು) NOTE Paragraph 00:03:04.000 --> 00:03:06.000 ನಾನು ಅನೇಕ ಬಗೆಯ ಜನರನ್ನು ಭೇಟಿಯಾಗುತ್ತಿರುತ್ತೇನೆ. 00:03:06.000 --> 00:03:09.000 ಅವರಿಗೆ ತಮ್ಮ ಕೆಲಸದಲ್ಲಿ ಖುಷಿಯೇ ಇರುವುದಿಲ್ಲ. 00:03:09.000 --> 00:03:11.000 ಅವರು ಸುಮ್ಮನೇ ಗೊತ್ತುಗುರಿಯಿಲ್ಲದೆ 00:03:11.000 --> 00:03:13.000 ಬದುಕುತ್ತಿರುತ್ತಾರೆ. 00:03:13.000 --> 00:03:15.000 ತಾವು ಮಾಡುತ್ತಿರುವ ಕೆಲಸ ಅವರಿಗೆ ಸಂತಸ ಕೊಡುತ್ತಿರುವುದಿಲ್ಲ. 00:03:15.000 --> 00:03:18.000 ಖುಷಿ ಯಾಗಿರುವುದರ ಬದಲಾಗಿ ಅವರು ಬದುಕನ್ನು ಹೇಗೋ ಸಹಿಸಿಕೊಂಡು ಹೋಗುತ್ತಿರುತ್ತಾರೆ. 00:03:18.000 --> 00:03:21.000 ಹಾಗೂ ವಾರಾಂತ್ಯಕ್ಕಾಗಿ ಕಾಯುತ್ತಾ ಇರುತ್ತಾರೆ. 00:03:21.000 --> 00:03:23.000 ಆದರೆ ತಮ್ಮ ಕೆಲಸವನ್ನು ಪ್ರೀತಿಸುವವರನ್ನೂ 00:03:23.000 --> 00:03:25.000 ನಾನು ಭೇಟಿಯಾಗುತ್ತಿರುತ್ತೇನೆ. 00:03:25.000 --> 00:03:27.000 ಅದನ್ನು ಬಿಟ್ಟು ತಾವು ಬೇರೇನನ್ನು ಮಾಡುವುದನ್ನೂ ಅವರು ಊಹಿಸಿಕೊಳ್ಳಲಾರರು. 00:03:27.000 --> 00:03:30.000 "ನೋಡಿ, ಇನ್ನು ಮುಂದೆ ಇದನ್ನ್ನು ಮಾಡಬೇಡಿ" ಎಂದರೆ, ನೀವು ಹೇಳಿದ್ದು ಅವರಿಗೆ ಅರ್ಥವಾಗುವುದೇ ಇಲ್ಲ 00:03:30.000 --> 00:03:33.000 ಏಕೆಂದರೆ ಅವರು ಆ ಕೆಲಸವನ್ನು ಮಾಡುತ್ತಿರುವುದೇ ಇಲ್ಲ. ಅವರೇ ಅದಾಗಿಬಿಟ್ಟಿರುತ್ತಾರೆ. 00:03:33.000 --> 00:03:35.000 " ನೋಡಿ, ಇದೇ ನಾನು. 00:03:35.000 --> 00:03:37.000 ಇದನ್ನು ಬಿಟ್ಟುಬಿಡುವುದು ಮೂರ್ಖತನದ ವಿಚಾರ. 00:03:37.000 --> 00:03:39.000 ನನ್ನ ಅಂತರಾಳದ ಜತೆ ನನ್ನ ಕೆಲಸ ಮಾತನಾಡುತ್ತಿರುತ್ತದೆ." 00:03:39.000 --> 00:03:42.000 ಆದರೆ ಬಹಳಷ್ಟು ಜನರ ಬಗ್ಗೆ ಈ ಮಾತು ಹೇಳುವಂತಿಲ್ಲ. 00:03:42.000 --> 00:03:44.000 ಇದಕ್ಕೆ ವಿರುದ್ಧವಾಗಿ ನಾನು ಯೋಚಿಸುವುದಾದರೆ 00:03:44.000 --> 00:03:46.000 ಕೆಲವರ ಬಗ್ಗೆಯಾದರೂ ಈ ಮಾತನ್ನು ಹೇಳಬಹುದು. 00:03:46.000 --> 00:03:48.000 ನನಗೆ ತಿಳಿದಂತೆ ಈ ವಿಷಯವನ್ನು NOTE Paragraph 00:03:48.000 --> 00:03:50.000 ಅನೇಕ ವಿಧಗಳಲ್ಲಿ ವಿವರಿಸಬಹುದು. 00:03:50.000 --> 00:03:52.000 ಅದರಲ್ಲಿ ತುಂಬ ಮುಖ್ಯವಾದುದು 00:03:52.000 --> 00:03:54.000 ಶಿಕ್ಷಣ. 00:03:54.000 --> 00:03:56.000 ಏಕೆಂದರೆ ಶಿಕ್ಷಣವು ಒಂದು ರೀತಿಯಲ್ಲಿ 00:03:56.000 --> 00:03:58.000 ಜನರನ್ನು ತಮ್ಮ ಸಹಜ ಪ್ರತಿಭೆಯಿಂದ 00:03:58.000 --> 00:04:00.000 ದೂರಸರಿಸುತ್ತದೆ. 00:04:00.000 --> 00:04:03.000 ಮಾನವ ಸಂಪನ್ಮೂಲಗಳೂ ಪ್ರಾಕೃತಿಕ ಸಂಪನ್ಮೂಲಗಳಂತೆಯೇ 00:04:03.000 --> 00:04:05.000 ಹೆಚ್ಚಿನ ವೇಳೆ ತುಂಬ ಆಳದಲ್ಲಿ ಹುದುಗಿರುತ್ತವೆ. 00:04:05.000 --> 00:04:07.000 ನೀವು ಅವುಗಳನ್ನು ಹುಡುಕಿಕೊಂಡು ಹೋಗಬೇಕಾಗುತ್ತದೆ. 00:04:07.000 --> 00:04:09.000 ಅವು ಕಣ್ಣಿಗೆ ಕಾಣುವಂತೆ ಮೇಲ್ಪದರದಲ್ಲಿ ಸಿಕ್ಕುವುದಿಲ್ಲ. ಅವು ತಾನೇತಾನಾಗಿ 00:04:09.000 --> 00:04:12.000 ಮೇಲೆ ಬಂದು ಕಾಣಿಸಿಕೊ ಳ್ಳು ವಂಥ ಸನ್ನಿವೇಶವನ್ನು ನೀವು ನಿರ್ಮಿಸಬೇಕು. 00:04:12.000 --> 00:04:14.000 ನೀವು ಊಹಿಸುತ್ತಿರಬಹುದು 00:04:14.000 --> 00:04:16.000 ಶಿಕ್ಷಣ ಮಾರ್ಗದಿಂದ ಇದಾಗುವುದೆಂದು. 00:04:16.000 --> 00:04:18.000 ಆದರೆ ತುಂಬಾ ಸಾರಿ ಹಾಗಾಗಿರುವುದಿಲ್ಲ. 00:04:18.000 --> 00:04:20.000 ಜಗತ್ತಿನ ಪ್ರತಿಯೊಂದು ಶೈಕ್ಷಣಿಕ ವ್ಯವಸ್ಥೆಯನ್ನೂ 00:04:20.000 --> 00:04:22.000 ಇಂದು ಪರಿವರ್ತನೆಗೊಳಿಸಲಾಗುತ್ತಿದೆ. 00:04:22.000 --> 00:04:24.000 ಆದರೆ ಅದು ಸಾಲದು. 00:04:24.000 --> 00:04:26.000 ಸುಧಾರಣೆಯೆಂಬುದು ಇನ್ನು ಉಪಯೋಗವಿಲ್ಲ. 00:04:26.000 --> 00:04:29.000 ಏಕೆಂದರೆ ಅದು ಕೇವಲ ಬಿರುಕು ಬಿದ್ದ ವ್ಯವಸ್ಧೆಯೊಂದಕ್ಕೆ ರಿಪೇರಿ ಮಾಡಿದಂತಿರುತ್ತದೆ. 00:04:29.000 --> 00:04:31.000 ನಮಗೆ ನಿಜಕ್ಕೂ ಬೇಕಿರುವುದು -- 00:04:31.000 --> 00:04:33.000 ಕಳೆದ ಕೆಲ ದಿನಗಳಲ್ಲಿ ಈ ಪದಗಳನ್ನು ತುಂಬ ಸಾರಿ ಬಳಸಲಾಗಿದೆ -- 00:04:33.000 --> 00:04:35.000 ವಿಕಾಸ ವಲ್ಲ 00:04:35.000 --> 00:04:38.000 ಶಿಕ್ಷಣದಲ್ಲಿ ಕ್ರಾಂತಿ. 00:04:38.000 --> 00:04:40.000 ಇದನ್ನು ಮಾರ್ಪಡಿಸಬೇಕಿದೆ 00:04:40.000 --> 00:04:42.000 ಬೇರೊಂದನ್ನಾಗಿ. NOTE Paragraph 00:04:42.000 --> 00:04:47.000 (ಚಪ್ಪಾಳೆ) NOTE Paragraph 00:04:48.000 --> 00:04:50.000 ನೈಜವಾದ ಸವಾಲೆಂದರೆ 00:04:50.000 --> 00:04:52.000 ಮೂಲಭೂತವಾಗಿ ಹೊಸತನ ತರಬೇಕಿದೆ 00:04:52.000 --> 00:04:54.000 ಶಿಕ್ಷಣ ವ್ಯವಸ್ಥೆಯಲ್ಲಿ. 00:04:54.000 --> 00:04:56.000 ಹೊಸತನ ತುಂಬ ಕಷ್ಟ 00:04:56.000 --> 00:04:58.000 ಏಕೆಂದರೆ ಅದರರ್ಥ ಜನರಿಗೆ ಸುಲಭವಲ್ಲದ (ಹೆಚ್ಚಿನಂಶ) 00:04:58.000 --> 00:05:00.000 ಕೆಲಸಗಳನ್ನು ಮಾಡಬೇಕಾಗುತ್ತದೆ. 00:05:00.000 --> 00:05:03.000 ಅಂದರೆ ನಾವು ಸರ್ವೇಸಾಮಾನ್ಯವಾಗಿ ಒಪ್ಪಿಕೊಳ್ಳು ವ 00:05:03.000 --> 00:05:06.000 ನಿಸ್ಸಂಶಯವೆನ್ನುವಂಥ ವಿಚಾರಗಳನ್ನು ಪ್ರಶ್ನಿಸಬೇಕಾಗುತ್ತದೆ. 00:05:06.000 --> 00:05:08.000 ಸುಧಾರಣೆಯ ದೊಡ್ಡ 00:05:08.000 --> 00:05:10.000 ಸಮಸ್ಯೆಯೆಂದರೆ 00:05:10.000 --> 00:05:12.000 ಲೋಕ ಜ್ಞಾನದ ಕಾಟ ; 00:05:12.000 --> 00:05:14.000 ಉದಾಹರಣೆಗೆ ಜನರು ಹೇಳುವಂತೆ 00:05:14.000 --> 00:05:16.000 "ಇದನ್ನು ಯಾವಾಗಲೂ ಹೀಗೆಯೇ ಮಾಡಬೇಕು. ಏಕೆಂದರೆ ಬೇರಾವ ರೀತಿಯಲ್ಲೂ ಇದನ್ನು ಮಾಡಲಾಗದು." NOTE Paragraph 00:05:16.000 --> 00:05:19.000 ಅಬ್ರಾಹಂ ಲಿಂಕನ್ ರವರ ಈ ಉಕ್ತಿ ಇತ್ತೀಚೆಗೆ ನನ್ನ ಕಣ್ಣಿಗೆ ಬಿದ್ದಿತು. 00:05:19.000 --> 00:05:22.000 ಅದನ್ನು ಹೇಳುವುದರಿಂದ ನಿಮಗೆ ಸಂತೋಷವಾಗಬಹುದೆಂದುಕೊಂಡಿದ್ದೇನೆ. 00:05:22.000 --> 00:05:24.000 (ನಗು) 00:05:24.000 --> 00:05:27.000 ೧೮೬೨ರ ಡಿಸೆಂಬರ್ ನಲ್ಲಿ ಇದನ್ನು ಹೇಳಿದ. 00:05:27.000 --> 00:05:30.000 ಕಾಂಗ್ರೆಸ್ ನ ಎರಡನೇ ವಾರ್ಷಿಕ ಸಭೆಯಲ್ಲಿ. 00:05:31.000 --> 00:05:34.000 ನಾನಿದನ್ನು ನಿಮಗೆ ಹೇಳಲೇಬೇಕು - ಆ ಸಂದರ್ಭದಲ್ಲಿ ಏನಾಗುತ್ತಿತ್ತೆಂದು ನನಗೆ ಗೊತ್ತಿಲ್ಲ. 00:05:36.000 --> 00:05:38.000 ಬ್ರಿಟನ್ ನಲ್ಲಿ ನಾವು ಅಮೆರಿಕಾದ ಇತಿಹಾಸವನ್ನು ಕಲಿಸುವುದಿಲ್ಲ. 00:05:38.000 --> 00:05:40.000 (ನಗು) 00:05:40.000 --> 00:05:43.000 ನಾವದನ್ನು ಹತ್ತಿಕ್ಕಿದ್ದೇವೆ. ಇದು ನಮ್ಮ ಖಚಿತ ಧೋರಣೆ. 00:05:43.000 --> 00:05:45.000 (ನಗು) 00:05:46.000 --> 00:05:48.000 ಹಾಗಾಗಿ, ೧೮೬೨ರಲ್ಲಿ ಏನೋ ಒಂದು ಮಹತ್ತರವಾದದ್ದು ನಡೆದಿರಬೇಕು. 00:05:48.000 --> 00:05:50.000 ನಮ್ಮಲ್ಲಿ ಅಮೇರಿಕನ್ನರು ಇದ್ದರೆ 00:05:50.000 --> 00:05:52.000 ಅವರಿಗದು ಗೊತ್ತಿರುತ್ತದೆ. NOTE Paragraph 00:05:53.000 --> 00:05:55.000 ಆದರೆ ಅವನು ಹೀಗೆ ಹೇಳಿದ. 00:05:55.000 --> 00:05:57.000 ಹಿಂದಿನ ಪ್ರಶಾಂತ ಕಾಲದಲ್ಲಿ ಪ್ರಚಲಿತವಾಗಿದ್ದ 00:05:57.000 --> 00:05:59.000 ಗಡಸು ಸಿದ್ಧಾಂತಗಳು 00:05:59.000 --> 00:06:02.000 ಇಂದಿನ ಅಬ್ಬರದ ಕಾಲಕ್ಕೆ ಸೂಕ್ತವಾಗಲಾರವು. 00:06:02.000 --> 00:06:04.000 ಈ ಸಂದರ್ಭವು 00:06:04.000 --> 00:06:06.000 ತುಂಬ ಕಷ್ಟಗಳಿಂದ ಕೂಡಿದೆ. ಹಾಗಾಗಿ 00:06:06.000 --> 00:06:09.000 ನಾವು ಈ ಸಂದರ್ಭದೊಂದಿಗೆ ಮೇಲೇರಬೇಕಾಗಿದೆ. 00:06:09.000 --> 00:06:11.000 ನನಗಿದು ತುಂಬ ಇಷ್ಟವಾಯ್ತು. 00:06:11.000 --> 00:06:14.000 ಸಂದರ್ಭದ ಅನುಗುಣವಾಗಿ ಅಲ್ಲ. ಅದರ ಜತೆಗೆ. 00:06:15.000 --> 00:06:17.000 ನಮ್ಮ ಸನ್ನಿವೇಶ ಹೊಸದಾಗಿರುವುದರಿಂದ 00:06:17.000 --> 00:06:20.000 ನಾವು ವಿನೂತನವಾಗಿ ಯೋಚಿಸಬೇಕಾಗಿದೆ 00:06:20.000 --> 00:06:23.000 ಹಾಗೂ ವಿನೂತನವಾಗಿ ಕೆಲಸ ಮಾಡಬೇಕಾಗಿದೆ. 00:06:23.000 --> 00:06:26.000 ಮೋಹದಿಂದ ಹೊರಬಂದರೆ 00:06:26.000 --> 00:06:29.000 ಆಗ ನಾವು ನಮ್ಮ ದೇಶವನ್ನು ರಕ್ಷಿಸಬಹುದು. NOTE Paragraph 00:06:29.000 --> 00:06:31.000 "ಮೋಹದಿಂದ ಹೊರಬರುವುದು" ಶಬ್ದ ನನಗೆ ಮೆಚ್ಚಿಗೆಯಾಯ್ತು. 00:06:31.000 --> 00:06:33.000 ಇದರರ್ಥ ಏನೆಂದು ಗೊತ್ತಾಯಿತೇ? 00:06:33.000 --> 00:06:36.000 ಕೆಲವು ವಿಚಾರಗಳು ನಮ್ಮನ್ನು ಮೋಹಪರವಶಗೊಳಿಸುತ್ತವೆ 00:06:36.000 --> 00:06:38.000 ಅವುಗಳನ್ನು ನಾವು ಸುಖಾಸುಮ್ಮನೇ ಒಪ್ಪಿಕೊಂಡುಬಿಡುತ್ತೇವೆ. 00:06:38.000 --> 00:06:40.000 ಅವು ಸಹಜ , ಅವು ಇರುವುದು ಹೀಗೇನೇ ಎಂದು. 00:06:40.000 --> 00:06:42.000 ನಮ್ಮ ಅನೇಕ ವಿಚಾರಗಳು 00:06:42.000 --> 00:06:45.000 ರೂಪುಗೊಂಡಿದ್ದು ಈ ಶತಮಾನದ ಸನ್ನಿವೇಶವನ್ನು ಎದುರಿಸುವ ಉದ್ದೇಶದಿಂದ ಅಲ್ಲ. 00:06:45.000 --> 00:06:48.000 ಬದಲಾಗಿ ಹಿಂದಿನ ಶತಮಾನದ ಸನ್ನಿವೇಶಗಳಿಗೆ ಸೂಕ್ತ ಪ್ರತಿಕ್ರಿಯೆಯಾಗಿ. 00:06:48.000 --> 00:06:50.000 ಆದರೆ ನಮ್ಮ ಮನಸ್ಸು ಇನ್ನೂ ಸಮ್ಮೋಹನಕ್ಕೆ ಒಳಪಟ್ಟಿರುವುದರಿಂದ 00:06:50.000 --> 00:06:53.000 ಅದರಲ್ಲಿ ಒಂದಷ್ಟರಿಂದ ನಮ್ಮನ್ನು ನಾವು ಬಿಡಿಸಿಕೊಳ್ಳಬೇಕಾಗಿದೆ. 00:06:53.000 --> 00:06:56.000 ಆದರೆ ಇದನ್ನು ಹೇಳುವುದು ಸುಲಭ. ಮಾಡುವುದು ಕಷ್ಟ. 00:06:56.000 --> 00:06:59.000 ನಾವುಗಳು ಏನೆಲ್ಲವನ್ನು ಪ್ರಶ್ನಿಸದೆ ಒಪ್ಪಿಕೊಂಡುಬಿಟ್ಟಿದ್ದೇವೆ ಎಂಬುದನ್ನು ತಿಳಿಯುವುದು ಕಷ್ಟ. (ನಗು) 00:06:59.000 --> 00:07:02.000 ಕಾರಣವೇನೆಂದರೆ ಅದನ್ನು ಪ್ರಶ್ನಿಸದೆ ಒಪ್ಪಿಕೊಂಡುಬಿಟ್ಟಿರುತ್ತೇವೆ. NOTE Paragraph 00:07:02.000 --> 00:07:05.000 ಸರಿ. ನೀವು ಸುಮ್ಮನೇ ಒಪ್ಪಿಕೊಂಡುಬಿಟ್ಟಿರುವ ಕೆಲ ವಿಷಯಗಳ ಬಗ್ಗೆ ಕೇಳಲೇ? 00:07:05.000 --> 00:07:08.000 ನಿಮ್ಮಲ್ಲಿ ಎಷ್ಟು ಮಂದಿ ಗೆ ೨೫ಕ್ಕಿಂತ ಹೆಚ್ಚು ವಯಸ್ಸಾಗಿದೆ? 00:07:08.000 --> 00:07:10.000 ಅಲ್ಲ. ನೀವು ಸುಮ್ಮನೇ ಒಪ್ಪಿಕೊಂಡ ವಿಷಯಗಳಲ್ಲಿ ಇದೊಂದಲ್ಲ. 00:07:10.000 --> 00:07:12.000 ನಿಮಗೆ ಅದು ಗೊತ್ತಿದೆಯೆಂದು ನನಗೆ ಗೊತ್ತು. 00:07:12.000 --> 00:07:15.000 ೨೫ ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಇಲ್ಲಿ ಇದ್ದಾರೆಯೇ? 00:07:15.000 --> 00:07:18.000 ಸಂತೋಷ. ಈಗ, ೨೫ ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರುವವರು 00:07:18.000 --> 00:07:21.000 ನೀವು ಕೈ ಗಡಿಯಾರವನ್ನು ಕಟ್ಟಿಕೊಂಡಿದ್ದರೆ ಕೈ ಎತ್ತಿ. 00:07:21.000 --> 00:07:24.000 ನೋಡಿ. ಅಂಥವರು ತುಂಬ ಮಂದಿ ಇದ್ದಾರೆ. ಅಲ್ಲವೇ? 00:07:24.000 --> 00:07:27.000 ಬರೀ ಹದಿಹರಯದವರೇ ತುಂಬಿರುವ ಕೋಣೆಯಲ್ಲಿ ಈ ಪ್ರಶ್ನೆಯನ್ನು ಕೇಳಿದಿರಿ ಎಂದು ಇಟ್ಟುಕೊಳ್ಳಿ. 00:07:27.000 --> 00:07:29.000 ಹದಿಹರಯದವರು ಕೈ ಗಡಿಯಾರಗಳನ್ನು ಕಟ್ಟುವುದಿಲ್ಲ. 00:07:29.000 --> 00:07:31.000 ಕಟ್ಟಲು ಆಗುವುದಿಲ್ಲ ಎಂದಲ್ಲ ಅಥವಾ ಅವರಿಗೆ ಅನುಮತಿ ಇಲ್ಲ ಎಂದೂ ಅಲ್ಲ. 00:07:31.000 --> 00:07:33.000 ಸಾಧಾರಣವಾಗಿ ಅವರು ಕಟ್ಟುವುದಿಲ್ಲ. 00:07:33.000 --> 00:07:35.000 ಕಾರಣವೇನೆಂದರೆ ನಾವೆಲ್ಲಾ ಡಿಜಿಟಲ್ ಯುಗಕ್ಕಿಂತ 00:07:35.000 --> 00:07:38.000 ಹಿಂದಿನ ಕಾಲದಲ್ಲಿ ಹುಟ್ಟಿ ಬೆಳೆದವರು. 00:07:38.000 --> 00:07:40.000 ಹಾಗಾಗಿ ನಮಗೆ ಸಮಯ ತಿಳಿಯಬೇಕೆಂದರೆ 00:07:40.000 --> 00:07:42.000 ಏನನ್ನಾದರೂ ಕಟ್ಟಿಕೊಂಡಿರಬೇಕು. 00:07:42.000 --> 00:07:45.000 ಮಕ್ಕಳು ಈಗ ಡಿಜಿಟಲ್ ಯುಗದಲ್ಲಿದ್ದಾರೆ. 00:07:45.000 --> 00:07:47.000 ಮತ್ತು ಅವರಿಗೆ ಸಮಯವು ಎಲ್ಲಾ ಕಡೆ ಕಾಣಸಿಗುತ್ತದೆ. 00:07:47.000 --> 00:07:49.000 ನಿಜವಾಗಿ ನೋಡಿದರೆ, ಅದು ನಿಮಗೆ ಬೇಕೆಂದೇನೂ ಇಲ್ಲ. 00:07:49.000 --> 00:07:51.000 ಹಾಗಾಗಿ ಇದು ಬೇಕಾಗಿಲ್ಲ. 00:07:51.000 --> 00:07:54.000 ಆದರೆ ನೀವು ಯಾವಾಗಲೂ ಹಾಗೆಯೇ ಮಾಡಿದ್ದರಿಂದ ಅದೇ ವರ್ತನೆಯನ್ನು ಮುಂದುವರಿಸುತ್ತಿದ್ದೀರಿ. 00:07:54.000 --> 00:07:57.000 ನನ್ನ ಮಗಳು ಕೈಗಡಿಯಾರವನ್ನು ಕಟ್ಟಿಕೊ ಳ್ಳುವುದೇ ಇಲ್ಲ. ಅವಳ ಹೆಸರು ಕೇಟ್ , ಅವಳಿಗೆ ೨೦ ವರ್ಷ. 00:07:57.000 --> 00:07:59.000 ಅವಳಿಗೆ ಅರ್ಥವಾಗುವುದಿಲ್ಲ. 00:07:59.000 --> 00:08:02.000 ಅವಳೇ ಹೇಳುವಂತೆ " ಅದು ಒಂದೇ ಕೆಲಸ ಮಾಡುವ ಸಾಧನ" 00:08:02.000 --> 00:08:07.000 (ನಗು) 00:08:07.000 --> 00:08:10.000 ಅಂದರೆ "ಇದೆಂಥ ಪೆಚ್ಚು ಸಾಧನ!" 00:08:10.000 --> 00:08:12.000 ಅದಕ್ಕೆ ನಾನು ಹೇಳಿದೆ " ಇಲ್ಲ. ಅದು ತಾರೀಖನ್ನೂ ತೋರಿಸುತ್ತೆ." 00:08:12.000 --> 00:08:16.000 (ನಗು) 00:08:17.000 --> 00:08:20.000 "ಅದು ಅನೇಕ ಕೆಲಸಗಳನ್ನು ಮಾಡುತ್ತದೆ." NOTE Paragraph 00:08:20.000 --> 00:08:23.000 ನೋಡಿ. ಶಿಕ್ಷಣದಲ್ಲಿ ನಾವು ಮೋಹಪರವಶವಾಗಿರುವ ಕೆಲವು ವಿಷಯಗಳಿವೆ. 00:08:23.000 --> 00:08:25.000 ಒಂದೆರಡು ಉದಾಹರಣೆಗಳನ್ನು ಕೊಡಲೇ? 00:08:25.000 --> 00:08:28.000 ಅದರಲ್ಲಿ ಒಂದು ರೇಖಾತ್ಮ ಕ ಚಿಂತನೆ. 00:08:28.000 --> 00:08:31.000 ಇಲ್ಲಿಂದ ಹೊರಟು ಈ ಮಾರ್ಗದಲ್ಲಿ ಹೋದರೆ 00:08:31.000 --> 00:08:33.000 ಮತ್ತು ಹೀಗೆ ಪ್ರತಿಯೊಂದನ್ನೂ ಸರಿಯಾಗಿ ಮಾಡಿಬಿಟ್ಟರೆ 00:08:33.000 --> 00:08:35.000 ಜೀವನದುದ್ದಕ್ಕೂ ಎಲ್ಲವೂ ಸರಾಗವಾಗುತ್ತದೆ. 00:08:37.000 --> 00:08:39.000 ಆದರೆ ಟೆಡ್ ಸಮಾವೇಶದಲ್ಲಿ ಮಾತನಾಡಿದ ಪ್ರತಿಯೊಬ್ಬರೂ 00:08:39.000 --> 00:08:42.000 ಸೂಚ್ಯವಾಗಿ ಕೆಲವೊಮ್ಮೆ ವಾಚ್ಯವಾಗಿ ಹೇಳಿರುವುದೇನೆಂದರೆ 00:08:42.000 --> 00:08:45.000 ಬದುಕು ರೇಖಾತ್ಮಕವಲ್ಲ. ಬದಲಾಗಿ ಅದು ಸಾವಯವ. 00:08:45.000 --> 00:08:47.000 ಪರಸ್ಪರ ಅವಲಂಬನೆಯಿಂದ ನಮ್ಮ ಬದುಕನ್ನು ರೂಪಿಸಿಕೊಳ್ಳು ತ್ತೇವೆ. 00:08:47.000 --> 00:08:49.000 ಹಾಗೆ ಮಾಡುವಾಗ ಸನ್ನಿವೇಶಗಳು ನಮಗೆ ಸಹಾಯ ನೀಡಲು ಅನುವಾಗುವಂತೆ 00:08:49.000 --> 00:08:52.000 ನಮ್ಮ ಪ್ರತಿಭೆಗಳನ್ನು ಅನ್ವೇಷಿಸುತ್ತೇವೆ. 00:08:52.000 --> 00:08:54.000 ಆದರೆ ನಾವೆಲ್ಲಾ ಈ ರೇಖಾತ್ಮಕ 00:08:54.000 --> 00:08:56.000 ವಿವರಣೆಯನ್ನು ಒಪ್ಪಿಕೊಂಡಿಬಿಟ್ಟಿದ್ದೇವೆ. 00:08:56.000 --> 00:08:58.000 ಶಿಕ್ಷಣದ ಉತ್ತುಂಗ ಸಾಧನೆ ಎಂದರೆ 00:08:58.000 --> 00:09:00.000 ಕಾಲೇಜಿಗೆ ಸೇರುವುದು. 00:09:00.000 --> 00:09:03.000 ಜನರನ್ನು ಕಾಲೇಜಿಗೆ ಸೇರಿಸುವುದರ ಬಗ್ಗೆ ನಮಗೆ ಅತೀವ ಉತ್ಸಾಹ 00:09:03.000 --> 00:09:05.000 ಅದರಲ್ಲೂ ಕೆಲವು ತರಹದ ಕಾಲೇಜುಗಳು. 00:09:05.000 --> 00:09:07.000 ನೀವು ಕಾಲೇಜಿಗೆ ಹೋಗಬಾರದು ಎಂದು ನಾನು ಹೇಳುತ್ತಿಲ್ಲ. ಆದರೆ ಎಲ್ಲರೂ ಹೋಗಬೇಕೆಂದಿಲ್ಲ. 00:09:07.000 --> 00:09:09.000 ಎಲ್ಲರೂ ಕಾಲೇಜಿಗೆ ಈಗಲೇ ಹೋಗಬೇಕಾಗಿಲ್ಲ. 00:09:09.000 --> 00:09:11.000 ಮುಂದೆ ಹೋಗಬಹುದು. ಈಗಲ್ಲ. NOTE Paragraph 00:09:11.000 --> 00:09:13.000 ನಾನು ಸ್ವಲ್ಪ ದಿನಗಳ ಮೊದಲು ಸ್ಯಾನ್ ಫ್ರಾನ್ಸಿಸ್ಕೋನಲ್ಲಿದ್ದೆ. 00:09:13.000 --> 00:09:15.000 ಪುಸ್ತಕಕ್ಕೆ ಸಹಿ ಹಾಕಲು. 00:09:15.000 --> 00:09:17.000 ೩೦ ವರ್ಷದ ಒಬ್ಬ ವ್ಯಕ್ತಿ ಒಂದು ಪುಸ್ತಕವನ್ನು ಕೊಳ್ಳುತ್ತಿದ್ದ 00:09:17.000 --> 00:09:19.000 ನಾನವನನ್ನು ಕೇಳಿದೆ. " ನೀವೇನು ಉದ್ಯೋಗ ಮಾಡುತ್ತಿದ್ದೀರಿ?" 00:09:19.000 --> 00:09:22.000 ಆತ ಹೇಳಿದ " ಅಗ್ನಿಶಾಮಕದಳದಲ್ಲಿ" 00:09:22.000 --> 00:09:24.000 ನಾನು ಕೇಳಿದೆ" ಎಷ್ಟು ದಿನದಿಂದ?" 00:09:24.000 --> 00:09:26.000 "ಯಾವಾಗಲೂ . ನಾನು ಮೊದಲಿನಿಂದಲೂ ಅಗ್ನಿಶಾಮಕದಳದಲ್ಲಿದ್ದೇನೆ." 00:09:26.000 --> 00:09:28.000 "ಸರಿ. ಯಾವಾಗ ಈ ನಿರ್ಧಾರ ಮಾಡಿದಿರಿ?" 00:09:28.000 --> 00:09:31.000 ಆತ ಹೇಳಿದ "ಬಾಲ್ಯದಲ್ಲೇ. ನಿಜಕ್ಕೂ ಅದು ಶಾಲೆಯಲ್ಲಿ ನನಗೆ ಸಮಸ್ಯೆಯಾಗಿತ್ತು. 00:09:31.000 --> 00:09:34.000 ಏಕೆಂದರೆ ಶಾಲೆಯಲ್ಲಿ ಪ್ರತಿಯೊಬ್ಬರೂ ಅಗ್ನಿಶಾಮಕದಳಕ್ಕೆ ಸೇರಲು ಬಯಸಿದ್ದರು. 00:09:34.000 --> 00:09:37.000 ಆದರೆ ನಾನು ನಿಜಕ್ಕೂ ಅಗ್ನಿಶಾಮಕ ದಳಕ್ಕೆ ಸೇರಬಯಸಿದ್ದೆ." 00:09:37.000 --> 00:09:40.000 ಆತ ಹೇಳಿದ " ನಾನು ಶಾಲೆಯ ಕೊನೆಯ ವರ್ಷಕ್ಕೆ ಬರುವ ಹೊತ್ತಿಗೆ 00:09:40.000 --> 00:09:43.000 ನನ್ನ ಶಿಕ್ಷಕರು ನನ್ನ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದರು. 00:09:43.000 --> 00:09:45.000 ಅದರಲ್ಲೂ ಒಬ್ಬ ಶಿಕ್ಷಕರು 00:09:45.000 --> 00:09:47.000 ಹೀಗೆ ಮಾಡಿದರೆ 00:09:47.000 --> 00:09:49.000 ನಾನು ನನ್ನ ಜೀವನವನ್ನು ನಿರರ್ಥಕಗೊಳಿಸುತ್ತಿದ್ದೇನೆಂದೇ ಹೇಳಿದ್ದರು." 00:09:49.000 --> 00:09:52.000 "ನಾನು ಕಾಲೇಜಿಗೆ ಸೇರಬೇಕು, ವೃತ್ತಿ ಶಿಕ್ಷಣವನ್ನು ಪಡೆಯಬೇಕು 00:09:52.000 --> 00:09:54.000 ಏಕೆಂದರೆ ನನಗೆ ತುಂಬ ಸಾಮರ್ಥ್ಯವಿದೆ ಎಂದೂ 00:09:54.000 --> 00:09:56.000 ಇಲ್ಲದಿದ್ದರೆ ನಾನು ನನ್ನ ಪ್ರತಿಭೆಯನ್ನು ಪೋಲು ಮಾಡುತ್ತಿದ್ದೇನೆಂದೂ ಭಾವಿಸಿದ್ದರು." 00:09:56.000 --> 00:09:58.000 ಆತ ಹೇಳಿದ " ನನಗೆ ತುಂಬ ಅವಮಾನವಾಗಿತ್ತು. 00:09:58.000 --> 00:10:00.000 ಇದನ್ನೆಲ್ಲಾ ಇಡೀ ತರಗತಿಯ ಮುಂದೆ ಹೇಳಿ ಮುಜುಗರ ಉಂಟುಮಾಡಿದ್ದರು." 00:10:00.000 --> 00:10:02.000 "ಆದರೆ ನನ್ನ ನಿರ್ಧಾರ ಖಚಿತವಿತ್ತು. ಶಾಲೆ ಮುಗಿಸಿದ ನಂತರ ನಾನು 00:10:02.000 --> 00:10:05.000 ಅಗ್ನಿಶಾಮಕ ದಳಕ್ಕೆ ಅರ್ಜಿ ಹಾಕಿದೆ. ಅಲ್ಲಿ ಕೆಲಸ ಸಿಕ್ಕಿತು." 00:10:05.000 --> 00:10:07.000 " ನಿಮಗೆ ಗೊತ್ತೇ? . ಕೆಲ ನಿಮಿಷಗಳ ಹಿಂದೆ 00:10:07.000 --> 00:10:10.000 ನಾನು ಆ ವ್ಯಕ್ತಿಯ ಬಗ್ಗೆಯೇ ಯೋಚಿಸುತ್ತಿದ್ದೆ - ನನ್ನ ಶಿಕ್ಷಕರ ಬಗ್ಗೆ." 00:10:10.000 --> 00:10:12.000 ಏಕೆಂದರೆ ಆರು ತಿಂಗಳ ಕೆಳಗೆ 00:10:12.000 --> 00:10:14.000 ನಾನವರ ಪ್ರಾಣ ಉಳಿಸಿದೆ." 00:10:14.000 --> 00:10:16.000 (ನಗು) 00:10:16.000 --> 00:10:18.000 "ಕಾರ್ ಅಪಘಾತದಲ್ಲಿ ಅವರು ಸಿಕ್ಕಿಹಾಕಿಕೊಂಡಿದ್ದರು. 00:10:18.000 --> 00:10:21.000 ಆಗ ಅವರನ್ನು ನಾನು ಹೊರಗೆಳೆದು ಸಿ ಪಿ ಆರ್ ಚಿಕಿತ್ಸೆ ಕೂಡ ನೀಡಿದೆ. 00:10:21.000 --> 00:10:24.000 ಜತೆಗೆ ಅವರ ಪತ್ನಿಯ ಜೀವವನ್ನೂ ಉಳಿಸಿದೆ." 00:10:24.000 --> 00:10:26.000 "ಈಗ ಅವರು ನನ್ನ ಬಗ್ಗೆ ಸ್ವಲ್ಪ ಉತ್ತಮ ಅಭಿಪ್ರಾಯ ಹೊಂದಿದ್ದಾರೆ." NOTE Paragraph 00:10:26.000 --> 00:10:28.000 (ನಗು) NOTE Paragraph 00:10:28.000 --> 00:10:33.000 (ಚಪ್ಪಾಳೆ) NOTE Paragraph 00:10:34.000 --> 00:10:36.000 ನೋಡಿ,ನನ್ನ ಪ್ರಕಾರ 00:10:36.000 --> 00:10:38.000 ಮಾನವ ಸಮುದಾಯಗಳು ಪ್ರತಿಭಾ ವೈವಿಧ್ಯದ 00:10:38.000 --> 00:10:40.000 ಮೇಲೆ ಅವಲಂಬಿತವಾಗಿರುತ್ತವೆ ಹೊರತು 00:10:40.000 --> 00:10:43.000 ಒಂದೇ ಸಾಮರ್ಥ್ಯದ ಮೇಲೆ ಅಲ್ಲ. 00:10:43.000 --> 00:10:45.000 ಅಲ್ಲದೆ ನಮ್ಮ ಸವಾಲುಗಳ ಕೇಂದ್ರದಲ್ಲಿರುವುದು 00:10:45.000 --> 00:10:47.000 (ಚಪ್ಪಾಳೆ) 00:10:47.000 --> 00:10:49.000 ನಮ್ಮ ಸವಾಲುಗಳ ಕೇಂದ್ರದಲ್ಲಿರುವುದು 00:10:49.000 --> 00:10:51.000 ನಮ್ಮ ಸಾಮರ್ಥ್ಯ ಮತ್ತು ಜಾಣತನಗಳನ್ನು 00:10:51.000 --> 00:10:53.000 ಪುನರ್ನಿರ್ಮಾಣ ಮಾಡುವುದಾಗಿದೆ. 00:10:53.000 --> 00:10:55.000 ಈ ರೇಖಾತ್ಮಕ ಚಿಂತನೆ ದೊಡ್ಡ ತಲೆನೋವಾಗಿದೆ. NOTE Paragraph 00:10:55.000 --> 00:10:57.000 ನಾನು ಒಂಬತ್ತು ವರ್ಷಗಳ ಹಿಂದೆ 00:10:57.000 --> 00:10:59.000 ಲಾಸ್ ಏಂಜಲೀಸ್ ಗೆ ಬಂದಾಗ 00:10:59.000 --> 00:11:02.000 ಒಂದು ನೀತಿ ಕಡತವನ್ನು ನೋಡಿದೆ. 00:11:02.000 --> 00:11:04.000 ಅದು ಒಳ್ಳೆಯ ಉದ್ದೇಶವನ್ನೇ ಹೊಂದಿತ್ತು. 00:11:04.000 --> 00:11:07.000 ಅದರಲ್ಲಿ ಹೇಳಿದ್ದು " ಕಾಲೇಜುಗಳು ಕಿಂಡರ್ ಗಾರ್ಟನ್ ನಲ್ಲಿ ಪ್ರಾರಂಭವಾಗುತ್ತವೆ" 00:11:09.000 --> 00:11:11.000 ಇಲ್ಲ. ಖಂಡಿತಾ ಇಲ್ಲ 00:11:11.000 --> 00:11:14.000 (ನಗು) 00:11:14.000 --> 00:11:16.000 ಪ್ರಾರಂಭವಾಗುವುದಿಲ್ಲ. 00:11:16.000 --> 00:11:19.000 ನಮಗೆ ಸಮಯವಿಲ್ಲ. ಇದ್ದಿದ್ದರೆ ಇದನ್ನು ವಿವರಿಸಿ ಹೇಳುತ್ತಿದ್ದೆ. 00:11:19.000 --> 00:11:21.000 (ನಗು) 00:11:21.000 --> 00:11:23.000 ಕಿಂಡರ್ ಗಾರ್ಟನ್ ಕಿಂಡರ್ ಗಾರ್ಟನ್ ನಲ್ಲಿ ಪ್ರಾರಂಭವಾಗುತ್ತದೆ. 00:11:23.000 --> 00:11:25.000 (ನಗು) 00:11:25.000 --> 00:11:27.000 ನನ್ನ ಸ್ನೇಹಿತನೊಬ್ಬ ಒಮ್ಮೆ ಹೇಳಿದ್ದ 00:11:27.000 --> 00:11:30.000 "ನೋಡು, ಮೂರು ವರ್ಷದ ಮಗು ಆರು ವರ್ಷ ಮಗುವಿನ ಅರ್ಧ ಅಲ್ಲ." 00:11:30.000 --> 00:11:32.000 (ನಗು) 00:11:32.000 --> 00:11:37.000 (ಚಪ್ಪಾಳೆ) 00:11:37.000 --> 00:11:39.000 ಅವರು ಮೂರು ವರ್ಷದವರು. NOTE Paragraph 00:11:39.000 --> 00:11:41.000 ಆದರೆ ನಾವು ಹಿಂದಿನ ಸಭೆಯಲ್ಲಿ ನೋಡಿದಂತೆ 00:11:41.000 --> 00:11:44.000 ಕಿಂಡರ್ ಗಾರ್ಟನ್ ಗೆ (ಮಕ್ಕಳನ್ನು) ಸೇರಿಸಲು ಎಷ್ಟು ಸ್ಪರ್ಧೆ ಇದೆಯೆಂದರೆ 00:11:44.000 --> 00:11:46.000 ಅದರಲ್ಲೂ ಸೂಕ್ತ ಕಿಂಡರ್ ಗಾರ್ಟನ್ ಗೆ.... 00:11:46.000 --> 00:11:49.000 ಮೂರು ವರ್ಷದ ಮಕ್ಕಳನ್ನೂ ಇಂಟರ್ ವ್ಯೂ ಮಾಡಲಾಗುತ್ತಿದೆ. 00:11:51.000 --> 00:11:53.000 ಪುಟ್ಟ ಪುಟ್ಟ ಮಕ್ಕಳು ಆಯ್ಕೆ ಸಮಿತಿಯ ಎದುರು ಕುಳಿತು 00:11:53.000 --> 00:11:55.000 ತಮ್ಮ ಸಾಧನೆಗಳ ಪಟ್ಟಿಯೊಂದಿಗೆ 00:11:55.000 --> 00:11:58.000 (ನಗು) 00:11:58.000 --> 00:12:00.000 ಅದನ್ನು ನೋಡುತ್ತಿರುವ ಸದಸ್ಯರು "ಇಷ್ಟೇನಾ? ನಿನ್ನ ಸಾಧನೆ?" 00:12:00.000 --> 00:12:02.000 (ನಗು) 00:12:02.000 --> 00:12:05.000 (ಚಪ್ಪಾಳೆ) 00:12:05.000 --> 00:12:08.000 "೩೬ ತಿಂಗಳಿಂದ ಇದ್ದುಕೊಂಡು ಇಷ್ಟೇನಾ?" 00:12:08.000 --> 00:12:15.000 (ನಗು) 00:12:15.000 --> 00:12:18.000 "ಏನೇನೂ ಸಾಧಿಸಿಲ್ಲ..." 00:12:18.000 --> 00:12:21.000 ಮೊದಲ ಆರು ತಿಂಗಳು ಬರೀ ಎದೆಹಾಲು ಕುಡಿದಿದ್ದು. ". 00:12:21.000 --> 00:12:24.000 (ನಗು) 00:12:26.000 --> 00:12:29.000 ನೋಡಿ, ಈ ಪರಿಕಲ್ಪನೆಯೇ ಭಯಾನಕವಾಗಿದೆ. NOTE Paragraph 00:12:29.000 --> 00:12:31.000 ಇನ್ನೋದು ಮುಖ್ಯ ವಿಷಯವೆಂದರೆ ರೂಢಿಯಂತೆ ಯೇ ನಡೆಯುವುದು. 00:12:31.000 --> 00:12:33.000 ನಮ್ಮ ಶಿಕ್ಷಣ ಪದ್ಧತಿಯನ್ನು ನಾವು 00:12:33.000 --> 00:12:35.000 ಫಾಸ್ಟ್ ಫುಡ್ ಮಾದರಿಯಿಂದ ಅಳವಡಿಸಿಕೊಂಡಿದ್ದೇವೆ. 00:12:35.000 --> 00:12:38.000 ಜೇಮಿ ಆಲಿವರ್ ಮೊನ್ನೆ ಅದನ್ನೇ ಹೇಳಿದರು. 00:12:38.000 --> 00:12:40.000 ಆಹಾರದ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಎರಡು ಮಾದರಿಗಳಿವೆ. 00:12:40.000 --> 00:12:42.000 ಒಂದು , ಎಲ್ಲವೂ ಏಕರೂಪವಾಗಿರುವ 00:12:42.000 --> 00:12:44.000 ಫಾಸ್ಟ್ ಫುಡ್ ಮಾದರಿ . 00:12:44.000 --> 00:12:46.000 ಇನ್ನೊಂದು ಏಕರೂಪವಾಗಿಲ್ಲದ 00:12:46.000 --> 00:12:48.000 ಝಗಾಟ್ ಮತ್ತು ಮಿಶೆಲಿನ್ ಉಪಾಹಾರಗೃಹಗಳ ಮಾದರಿ. 00:12:48.000 --> 00:12:50.000 ಅವುಗಳನ್ನು ಸ್ಥಳೀಯ ಸನ್ನಿವೇಶಗಳಿಗೆ ಹೊಂದಿಸಿಕೊಂಡು ಮಾಡಲಾಗಿದೆ. 00:12:50.000 --> 00:12:53.000 ನಮ್ಮನ್ನು ನಾವು ಫಾಸ್ಟ್ ಫುಡ್ ಮಾದರಿಯ ಶಿಕ್ಷಣಕ್ಕೆ ಮಾರಿಕೊಂಡುಬಿಟ್ಟಿದ್ದೇವೆ 00:12:53.000 --> 00:12:56.000 ಅವು ನಮ್ಮ ದೇಹವನ್ನು ನಿರ್ಬಲರನ್ನಾಗಿ ಮಾಡುವ ಫಾಸ್ಟ್ ಫುಡ್ ನಂತೆಯೇ 00:12:56.000 --> 00:12:59.000 ನಮ್ಮ ಚೇತನ ಮತ್ತು ಶಕ್ತಿಗಳನ್ನು ಕುಗ್ಗಿಸಿಬಿಡುತ್ತವೆ. NOTE Paragraph 00:12:59.000 --> 00:13:04.000 (ಚಪ್ಪಾಳೆ) NOTE Paragraph 00:13:05.000 --> 00:13:07.000 ಇಲ್ಲಿ ನಾವು ಕೆಲ ವು ವಿಷಯಗಳನ್ನು ಗುರುತಿಸಬೇಕಾಗಿದೆ. 00:13:07.000 --> 00:13:10.000 ಒಂದು, ಮಾನವ ಪ್ರತಿಭೆಯು ಅತ್ಯಂತ ವೈವಿಧ್ಯತೆಯಿಂದ ಕೂಡಿದೆ. 00:13:10.000 --> 00:13:12.000 ಜನರಿಗೆ ವಿವಿಧ ಆಸಕ್ತಿ ಹಾಗೂ ಸಾಮರ್ಥ್ಯಗಳಿವೆ. 00:13:12.000 --> 00:13:14.000 ಇತ್ತೀಚೆಗೆ ನಾನು ಯೋಚಿಸುತ್ತಿದ್ದೆ. 00:13:14.000 --> 00:13:16.000 ನನ್ನ ಕೈಗೆ ಮೊದಲ ಬಾರಿ ಗಿಟಾರ್ ಸಿಕ್ಕಿದ್ದು 00:13:16.000 --> 00:13:19.000 ಸುಮಾರಾಗಿ ಎರಿಕ್ ಕ್ಲಾಪ್ಟನ್ ಕೈಗೆ ಅದು ಮೊದಲ ಬಾರಿ ಸಿಕ್ಕಾಗಲೇ. 00:13:20.000 --> 00:13:23.000 ನೋಡಿ. ಅವನಿಗೆ ಅದರಲ್ಲಿ ಸಫಲತೆ ಸಿಕ್ತು. ಅಷ್ಟೇ , ನಾನು ಹೇಳ್ತಿರೋದು. 00:13:23.000 --> 00:13:25.000 (ನಗು) 00:13:25.000 --> 00:13:27.000 ನನಗೆ , ಒಂದು ರೀತಿಯಲ್ಲಿ ಸಿಗಲಿಲ್ಲ. 00:13:27.000 --> 00:13:30.000 ನಾನೆಷ್ಟೇ ಬಾರಿ ಅಥವಾ ಎಷ್ಟೇ ಜೋರಾಗಿ ಊದಿದರೂ 00:13:30.000 --> 00:13:32.000 ಅದು ಕೆಲಸ ಮಾಡುವಂತೆ ಮಾಡಲು 00:13:32.000 --> 00:13:34.000 ನನಗೆ ಸಾಧ್ಯವೇ ಆಗಲಿಲ್ಲ. NOTE Paragraph 00:13:37.000 --> 00:13:39.000 ಆದರೆ ಅಷ್ಟೇ ಅಲ್ಲ. 00:13:39.000 --> 00:13:41.000 ಅದು ನಮ್ಮ ಆಸ್ಥೆಗೆ ಸಂಬಂಧಿಸಿದ್ದು. 00:13:41.000 --> 00:13:43.000 ಕೆಲವೊಮ್ಮೆ , ಜನರಿಗೆ ಕೆಲಸ ಮಾಡುವ ಸಾಮರ್ಥ್ಯವಿದ್ದರೂ ಅದನ್ನು ಮಾಡಲು ಆಸಕ್ತಿಯಿರುವುದಿಲ್ಲ. 00:13:43.000 --> 00:13:45.000 ಅದು ಆಸ್ಥೆಗೆ ಸಂಬಂಧಿಸಿದ್ದು 00:13:45.000 --> 00:13:48.000 ಹಾಗೂ ನಮ್ಮ ಚೇತನ ಮತ್ತು ಶಕ್ತಿಗಳಿಗೆ ಯಾವುದು ಪ್ರಚೋದನೆ ಕೊಡುವುದೋ ಅದು 00:13:48.000 --> 00:13:51.000 ನೀವು ಮಾಡುವ ಕೆಲಸ ನಿಮಗೆ ಸಂತೋಷ ಕೊಟ್ಟರೆ ಹಾಗೂ ನಿಮಗೆ ಅದರಲ್ಲಿ ದಕ್ಷತೆ ಇದ್ದರೆ 00:13:51.000 --> 00:13:54.000 ಸಮಯ ಸರಿದದ್ದೇ ಗೊತ್ತಾಗುವುದಿಲ್ಲ. 00:13:54.000 --> 00:13:57.000 ನನ್ನ ಹೆಂಡತಿ ಈಗತಾನೇ ಒಂದು ಕಾದಂಬರಿ ಬರೆದು ಮುಗಿಸಿದ್ದಾಳೆ. 00:13:57.000 --> 00:13:59.000 ಹಾ! ಅದು ಅದ್ಭುತವಾಗಿದೆ. 00:13:59.000 --> 00:14:02.000 ಆದರೆ ಅವಳು ಗಂಟೆಗಟ್ಟಲೆ ಕಣ್ಮರೆಯಾಗಿಬಿಡುತ್ತಾಳೆ. 00:14:02.000 --> 00:14:04.000 ನಿಮಗೆ ಗೊತ್ತಿರಬೇಕು. ನಿಮಗೆ ಇಷ್ಟವಾದುದನ್ನು ಮಾಡುತ್ತಾ ಕುಳಿತರೆ 00:14:04.000 --> 00:14:07.000 ಗಂಟೆಗಳು ನಿಮಿಷಗಳಂತೆ ತೋರುತ್ತವೆ. 00:14:07.000 --> 00:14:09.000 ಆದರೆ ನಿಮ್ಮ ಅಂತಃಚೇತನದ ಜತೆ ಅನುರಣನಗೊಳ್ಳದ ಕೆಲಸ ಮಾಡುತ್ತಿದ್ದರೆ 00:14:09.000 --> 00:14:11.000 ಐದು ನಿಮಿಷವು ಒಂದು ಗಂಟೆಯಂತೆ ಭಾಸವಾಗುತ್ತದೆ. 00:14:11.000 --> 00:14:14.000 ಶಿಕ್ಷಣದಿಂದ ಅನೇಕ ಜನರು ಏಕೆ ಹೊರಹೋಗುತ್ತಿದ್ದಾರೆಂದರೆ 00:14:14.000 --> 00:14:16.000 ಅದು ಅವರ ಅಂತಃಚೇತನಕ್ಕೆ ಅಥವಾ ಅವರ ಶಕ್ತಿ ಅಥವಾ ಆಸಕ್ತಿಗೆ 00:14:16.000 --> 00:14:19.000 ಜೀವದ್ರವ್ಯ ಒದಗಿಸುತ್ತಿಲ್ಲ. NOTE Paragraph 00:14:19.000 --> 00:14:22.000 ಹಾಗಾಗಿ ನಾವು ರೂಪಕಗಳನ್ನು ಬದಲಿಸಬೇಕೆಂದು ಅನಿಸುತ್ತದೆ. 00:14:22.000 --> 00:14:25.000 ನಾವೀಗ ಪ್ರಮುಖವಾಗಿ ಔದ್ಯಮಿಕ ಮಾದರಿಯ ಶಿಕ್ಷಣದಿಂದ 00:14:25.000 --> 00:14:27.000 ರೇಖಾತ್ಮಕತೆ ಆಧಾರದ ಮೇಲಿನ 00:14:27.000 --> 00:14:29.000 ಉತ್ಪಾದನೆಯ ಮಾದರಿಯಿಂದ 00:14:29.000 --> 00:14:32.000 ಜತೆಗೆ ಸಿದ್ಧಮಾದರಿ ಹಾಗೂ ಜನರನ್ನು ಗುಂಪುಗಳನ್ನಾಗಿ ಮಾಡಿ ನೋಡುವುದರಿಂದ 00:14:32.000 --> 00:14:34.000 ಮಾದರಿಯ ದಿಕ್ಕಿನಲ್ಲಿ ಮುನ್ನಡೆಯಬೇಕಾಗಿದೆ. 00:14:34.000 --> 00:14:37.000 ನಾವು ಕೃಷಿಯ ತತ್ವಗಳ ಮೇಲೆ ಆಧರಿಸಿದ 00:14:37.000 --> 00:14:40.000 ಮಾನವರು ವಿಕಾಸ ಹೊಂದುವುದು 00:14:40.000 --> 00:14:42.000 ಯಾಂತ್ರಿಕ ಪ್ರಕ್ರಿಯೆಯಲ್ಲ. 00:14:42.000 --> 00:14:44.000 ಅದೊಂದು ಸಾವಯವ ಪ್ರಕ್ರಿಯೆ. 00:14:44.000 --> 00:14:47.000 ಮಾನವ ಅಭಿವೃದ್ಧಿಯ ಫಲಿತಾಂಶವನ್ನು ನಾವು ನಿಖರವಾಗಿ ಊಹಿಸಲಾರೆವು. 00:14:47.000 --> 00:14:49.000 ನಾವು ಇಷ್ಟನ್ನು ಮಾತ್ರ ಮಾಡಬಹುದು. ಒಬ್ಬ ರೈತನಂತೆ 00:14:49.000 --> 00:14:51.000 ಉತ್ತಮ ಬೆಳವಣಿಗೆಗೆ ಬೇಕಾದ ಪರಿಸ್ಥಿತಿಗಳನ್ನು 00:14:51.000 --> 00:14:53.000 ಮಾತ್ರ ನಿರ್ಮಿಸಬಹುದು NOTE Paragraph 00:14:53.000 --> 00:14:56.000 ಆದ್ದರಿಂದ ನಾವು ಶಿಕ್ಷಣದಲ್ಲಿ ಬದಲಾವಣೆ ತಂದು ಅದನ್ನು ಪರಿವರ್ತನೆಗೊಳಿಸಬೇಕೆಂದರೆ 00:14:56.000 --> 00:14:59.000 ಅದು ವ್ಯವಸ್ಥೆಯನ್ನು ನಕಲು ಪ್ರತಿ ಮಾಡಿದಂತೆ ಅಲ್ಲ. 00:14:59.000 --> 00:15:01.000 ಕೆಲವು ಅದ್ಭುತ ಪದ್ಧತಿಗಳಿವೆ. ಉದಾಹರಣೆಗೆ KIPP's ; ಅದು ನಿಜಕ್ಕೂ ಚೆನ್ನಾಗಿದೆ. 00:15:01.000 --> 00:15:03.000 ಅನೇಕ ಉತ್ತಮ ಮಾದರಿಗಳಿವೆ. 00:15:03.000 --> 00:15:06.000 ನೀವು ಯಾರಿಗೆ ಶಿಕ್ಷಣ ಕೊಡುತ್ತಿದ್ದೀರೋ ಅವರ 00:15:06.000 --> 00:15:08.000 ಪರಿಸ್ಥಿತಿಗಳಿಗೆ ಅನುಗುಣವಾಗಿ 00:15:08.000 --> 00:15:10.000 ಮತ್ತು ನಿಮ್ಮ ವಿಶೇಷ ಸಂದರ್ಭಗಳಿಗೆ ಹೊಂದಿಕೊಳ್ಳುವಂತೆ ಮಾಡುವುದು. 00:15:10.000 --> 00:15:12.000 ಹಾಗೆ ಮಾಡುವುದೇ ಭವಿಷ್ಯಕ್ಕೆ 00:15:12.000 --> 00:15:14.000 ಉತ್ತರವೆಂದು ನನಗನಿಸುತ್ತದೆ. ಏಕೆಂದರೆ 00:15:14.000 --> 00:15:17.000 ಅದು ಒಂದು ಪರಿಹಾರವನ್ನು ದೊಡ್ಡ ಪ್ರಮಾಣದಲ್ಲಿ ಅನುಷ್ಟಾನಗೊಳಿಸುವುದಲ್ಲ. 00:15:17.000 --> 00:15:19.000 ಅದು ಜನರು ತಮ್ಮ ತಮ್ಮ ಪರಿಹಾರಗಳನ್ನು 00:15:19.000 --> 00:15:22.000 ಹೊರಗಿನ ಬೆಂಬಲವನ್ನು ಪಡೆದುಕೊಂಡು ತಾವೇ ರೂಪಿಸಿಕೊಳ್ಳುವಂತೆ 00:15:22.000 --> 00:15:25.000 ಶಿಕ್ಷಣದಲ್ಲಿ ಹೊಸ ಚಳುವಳಿಯನ್ನು ರೂಪಿಸುವುದು. NOTE Paragraph 00:15:25.000 --> 00:15:27.000 ಈಗ ಈ ಕೋಣೆಯಲ್ಲೇ 00:15:27.000 --> 00:15:29.000 ವ್ಯಾಪಾರ, ಬಹುಮಾಧ್ಯಮ , ಅಂತರ್ಜಾಲದ 00:15:29.000 --> 00:15:31.000 ಅತ್ಯುತ್ತಮ ಸಂಪನ್ಮೂಲಗಳನ್ನು 00:15:31.000 --> 00:15:33.000 ಪ್ರತಿನಿಧಿಸುವ ಜನರಿದ್ದಾರೆ. 00:15:33.000 --> 00:15:35.000 ಈ ತಂತ್ರ ಜ್ಞಾನದ ಜತೆ 00:15:35.000 --> 00:15:38.000 ಶಿಕ್ಷಕರ ಅಸಾಧಾರಣ ಪ್ರತಿಭೆಯೂ ಸೇರಿದರೆ 00:15:38.000 --> 00:15:41.000 ಶಿಕ್ಷಣದಲ್ಲಿ ಕ್ರಾಂತಿ ಮಾಡಬಹುದು. 00:15:41.000 --> 00:15:43.000 ನೀವೆಲ್ಲಾ ಅದರಲ್ಲಿ ಭಾಗಿಯಾಗಬೇಕೆಂದು ನಾನು ಒತ್ತಾಯಿಸುತ್ತೇನೆ. 00:15:43.000 --> 00:15:45.000 ಏಕೆಂದರೆ ಅದು ನಮಗೆ ಮಾತ್ರ ಮುಖ್ಯವಲ್ಲ. 00:15:45.000 --> 00:15:47.000 ನಮ್ಮ ಮಕ್ಕಳ ಭವಿಷ್ಯಕ್ಕೂ ಮುಖ್ಯವಾಗಿದೆ. 00:15:47.000 --> 00:15:49.000 ಆದರೆ ನಾವು ಔದ್ಯೋಗಿಕ ಮಾದರಿಯಿಂದ 00:15:49.000 --> 00:15:51.000 ಕೃಷಿ ಮಾದರಿಗೆ ಬದಲಾಗಬೇಕಾಗಿದೆ. 00:15:51.000 --> 00:15:54.000 ಪ್ರತಿ ಶಾಲೆಯೂ ಸುಂದರವಾಗಿ ಅರಳಬಲ್ಲ 00:15:54.000 --> 00:15:56.000 ಅಲ್ಲಿಯೇ ಮಕ್ಕಳು ಜೀವನವನ್ನು ಅನುಭವಿಸುತ್ತಾರೆ. 00:15:56.000 --> 00:15:58.000 ಅಥವಾ ಅದು ಮನೆಯಲ್ಲಿರಬಹುದು - ಅವರ 00:15:58.000 --> 00:16:00.000 ಕುಟುಂಬದವರು ಅಥವಾ ಗೆಳೆಯರ ಜತೆ - ಅವರು ಅಲ್ಲಿ ಕಲಿಯಲು ಇಷ್ಟಪಟ್ಟರೆ. NOTE Paragraph 00:16:00.000 --> 00:16:02.000 ಈ ಕೆಲ ದಿನಗಳಲ್ಲಿ ಕನಸುಗಳ ಬಗ್ಗೆ 00:16:02.000 --> 00:16:05.000 ಅನೇಕ ಮಾತುಕಥೆಗಳಾಗಿವೆ. 00:16:05.000 --> 00:16:07.000 ನಾನು ಶೀಘ್ರವಾಗಿ ... 00:16:07.000 --> 00:16:10.000 ನಟಾಲಿ ಮರ್ಚಂಟ್ ಳ ನಿನ್ನೆ ರಾತ್ರಿಯ ಹಾಡು ನನ್ನ ಮೇಲೆ ತುಂಬ ಪರಿಣಾಮ ಬೀರಿತು. 00:16:10.000 --> 00:16:12.000 ಹಳೇ ಕವನಗಳನ್ನು ಮೆಲುಕು ಹಾಕುತ್ತಾ. 00:16:12.000 --> 00:16:14.000 W.B. ಯೇಟ್ಸ್ - ನಿಮ್ಮಲ್ಲನೇಕರಿಗೆ ಗೊತ್ತಿರಬಹುದು 00:16:14.000 --> 00:16:17.000 - ನನಗೆ ಅವರ ಪುಟ್ಟ ಕವನವೊಂದನ್ನು ಓದಬೇಕೆನಿಸುತ್ತಿದೆ. 00:16:17.000 --> 00:16:19.000 ಆತ ತನ್ನ ಪ್ರೇಯಸಿ ಮೋಡ್ ಗಾನ್ ಗೆ ಬರೆದಿದ್ದ. 00:16:19.000 --> 00:16:21.000 ಬರೆದಿದ್ದ. 00:16:21.000 --> 00:16:24.000 ತನ್ನಿಂದ ಏನನ್ನು ಬಯಸಿದ್ದಳೋ ಅದನ್ನು ಕೊಡಲು 00:16:24.000 --> 00:16:27.000 ತನಗೆ ಸಾಧ್ಯವಾಗದಿದ್ದುದಕ್ಕಾಗಿ ದುಃಖಿಸಿದ್ದ. 00:16:27.000 --> 00:16:30.000 ಆತ ಹೇಳಿದ " ನನ್ನಲ್ಲಿ ಏನೋಇದೆ. ಆದರೆ ಅದು ನಿನಗಾಗಿ ಅಲ್ಲದಿರಬಹುದು. NOTE Paragraph 00:16:30.000 --> 00:16:32.000 ಇದನ್ನು ಹೇಳುತ್ತಾನೆ. 00:16:32.000 --> 00:16:35.000 ನನ್ನ ಬಳಿ ಸ್ವರ್ಗದ ಬಟ್ಟೆಗಳಲ್ಲಿ 00:16:35.000 --> 00:16:37.000 ಬಂಗಾರದ ಕುಸುರಿ ಕೆಲಸದ 00:16:37.000 --> 00:16:39.000 ಬೆಳ್ಳಿಯ ಬೆಳಕಿನ 00:16:39.000 --> 00:16:41.000 ನೀಲಿ ಮತ್ತು ಮಸುಕಿನ 00:16:41.000 --> 00:16:43.000 ಕಡುಬಣ್ಣದ ಬಟ್ಟೆಗಳು 00:16:43.000 --> 00:16:46.000 ಇರುಳು ಮತ್ತು ಬೆಳಕು ಜತೆಗೆ ಅರ್ಧ ಬೆಳಕು ಇದ್ದಿದ್ದರೆ 00:16:46.000 --> 00:16:49.000 ಆ ಬಟ್ಟೆಗಳನ್ನು ನಿನ್ನ ಪಾದದಡಿಯಲ್ಲಿ ಹಾಕುತ್ತಿದ್ದೆ. 00:16:49.000 --> 00:16:52.000 ಆದರೆ ನಾನು - ಬಡವನಾದ ನನ್ನ 00:16:52.000 --> 00:16:55.000 ಬಳಿ ಇರುವುದು ಬರೀ ಕನಸು. 00:16:55.000 --> 00:16:58.000 ಹರಡಿದ್ದೇನೆ ನನ್ನೆಲ್ಲ ಕನಸುಗಳನ್ನು. 00:16:58.000 --> 00:17:00.000 ಹಗುರಾಗಿ ನಡೆ 00:17:00.000 --> 00:17:03.000 ಏಕೆಂದರೆ ನೀನು ನಡೆಯುತ್ತಿರುವುದು ನನ್ನ ಕನಸುಗಳ ಮೇಲೆ . 00:17:03.000 --> 00:17:06.000 ಮತ್ತು ಪ್ರತಿ ದಿನ,ಎಲ್ಲೆಡೆ 00:17:06.000 --> 00:17:09.000 ನಮ್ಮ ಮಕ್ಕಳು ತಮ್ಮ ಕನಸುಗಳನ್ನು ನಮ್ಮ ಪಾದಗಳಡಿ ಹರಡುತ್ತಾರೆ. 00:17:09.000 --> 00:17:12.000 ನಾವು ಹಗುರಾಗಿ ಹೆಜ್ಜೆಯಿಡೋಣ. NOTE Paragraph 00:17:12.000 --> 00:17:14.000 ಧನ್ಯವಾದಗಳು. NOTE Paragraph 00:17:14.000 --> 00:17:31.000 (ಚಪ್ಪಾಳೆ) NOTE Paragraph 00:17:31.000 --> 00:17:33.000 ತುಂಬ ಧನ್ಯವಾದಗಳು.