ನಾಲ್ಕು ವರ್ಷಗಳ ಮೊದಲು ನಾನು ಇಲ್ಲಿದ್ದೆ
ನನಗೆ ನೆನಪಿದೆ , ಆಗ
ಈ ಭಾಷಣಗಳನ್ನು ಅಂತರ್ಜಾಲದಲ್ಲಿ ಹಾಕುತ್ತಿರಲಿಲ್ಲ
TED ಉತ್ಸಾಹಿಗಳಿಗೆ ಅವನ್ನು ಒಂದು ಪೆಟ್ಟಿಗೆಯಲ್ಲಿ ಹಾಕಿ ಕೊಡುತ್ತಿದ್ದರು .
ಡಿ ವಿ ಡಿಗಳ ಒಂದು ಪೆಟ್ಟಿಗೆ .
ಅವನ್ನು ತಮ್ಮ ಕಪಾಟುಗಳಲ್ಲಿ ಇಡುತ್ತಿದ್ದರು.ಅವು ಈಗಲೂ ಅಲ್ಲೇ ಇವೆ .
(ನಗು)
ನನ್ನ ಭಾಷಣವಾದ ಒಂದು ವಾರದ
ನಂತರ ಕ್ರಿಸ್ ನನಗೆ ಫೋನ್ ಮಾಡಿದ್ದರು .
ಟೆಡ್ ಭಾಷಣಗಳನ್ನು ಈಗ ಅಂತರ್ಜಾಲದಲ್ಲಿ ಹಾಕುತ್ತಿದ್ದೇವೆ
"ನಿಮ್ಮ ಭಾಷಣವನ್ನೂ ಹಾಕಬಹುದೇ?" "ಖಂಡಿತ" ಎಂದೆ
ನಾಲ್ಕು ವರ್ಷಗಳ ಬಳಿಕ
ಅದನ್ನು ನೋಡಿದವರು ನಾಲ್ಕು
ಅಲ್ಲಲ್ಲ, ಅದನ್ನು ನಲವತ್ತು ಲಕ್ಷ ಬಾರಿ ಇಳಿಸಿಕೊಂಡಿದ್ದಾರೆ .
ಅಂದರೆ ಸುಮಾರು, ಅದರ ಇಪ್ಪತ್ತರಷ್ಟು ಮಂದಿ
ಆ ವಿಡಿಯೋವನ್ನು ನೋಡಿರಬಹುದೆಂದು ತೋರುತ್ತದೆ.
ಕ್ರಿಸ್ ಹೇಳುವಂತೆ ನಾನಿರುವ ವಿಡಿಯೋಗಳಿಗೆ
ಸಿಕ್ಕಾಪಟ್ಟೆ ಹಸಿವು (ಬೇಡಿಕೆ) ಇದೆ .
(ನಗು)
(ಚಪ್ಪಾಳೆ )
... ನಿಮಗೂ ಹಸಿವಾಗುತ್ತಿಲ್ಲವೇ?
(ನಗು)
ಅಂದರೆ ನಾನು ಇನ್ನೊಂದು ಭಾಷಣ ಮಾಡಲೀ ಎನ್ನುವ
ಉದ್ದೇಶದಿಂದಲೇ ಇದನ್ನು ಬೆಳೆಸಿದ್ದಾರೆ ಎಂದು ಕಾಣುತ್ತದೆ. ಆಗಲಿ.
(ನಗು)
ಅಲ್ ಗೋರ್ ರವರು ನಾಲ್ಕು ವರ್ಷಗಳ ಹಿಂದೆ
ನಾನು ಮಾತನಾಡಿದ ಟೆಡ್ ಸಮಾವೇಶದಲ್ಲೇ ಮಾತನಾಡಿದ್ದರು.
ಅದರಲ್ಲಿ ಹವಾಮಾನ ವಿಪತ್ತಿನ ಬಗ್ಗೆ ಪ್ರಸ್ತಾಪಿಸಿದ್ದರು.
ಅದನ್ನು ನಾನು ನನ್ನ
ಹಿಂದಿನ ಭಾಷಣದ ಕೊನೆಯಲ್ಲಿ ಪ್ರಸ್ತಾಪಿಸಿದ್ದೆ.
ಹಾಗಾಗಿ ಅಲ್ಲಿಂದಲೇ ಪ್ರಾರಂಭಿಸುತ್ತೇನೆ.
ಯಾಕೆಂದರೇ... ನೋಡಿ. ನನಗೆ ಇದ್ದದ್ದು ಕೇವಲ ೧೮ ನಿಮಿಷಗಳು, ನಿಜಾ.
ನಾನು ಹೇಳುತ್ತಿದ್ದ ಹಾಗೆ
(ನಗು)
ನೋಡಿ, ಅವರು ಹೇಳಿದ್ದು ಸರಿಯಿದೆ.
ಅಂದರೆ, ದೊಡ್ಡ ಹವಾಮಾನ ವಿಪತ್ತು ಇದೆ. ಸ್ಪಷ್ಟವಾಗಿದೆ.
ನಂಬದಿರುವವರು ಯಾರಾದರೂ ಇದ್ದರೆ ಅವರು ತಿಳಿದುಕೊಳ್ಳುವುದು ಬಹಳಷ್ಟು ಇದೆ.
(ನಗು)
ಆದರೆ ನನಗನ್ನಿಸುವುದೇನೆಂದರೆ ಇನ್ನೂ ಒಂದು ಹವಾಮಾನ ವಿಪತ್ತು ಇದೆ.
ಅದೂ ಅಷ್ಟೇ ತೀವ್ರವಾಗಿದೆ,
ಎರಡರ ಮೂಲಗಳೂ ಒಂದೇ ಆಗಿವೆ,
ಅದನ್ನೂ ಅಷ್ಟೇ ತುರ್ತಾಗಿ ಬಗೆಹರಿಸಬೇಕಾಗಿದೆ.
ನಿಜಕ್ಕೂ ಇದನ್ನು ಹೇಳುತ್ತಿದ್ದೇನೆ...
ನೀವೆನ್ನಬಹುದು " ನೋಡಿ, ಇರುವ ಒಂದು
ಹವಾಮಾನ ವಿಪತ್ತೇ ಸಾಕು.
ಎರಡನೆಯದು ನನಗೆ ಬೇಕಾಗಿಲ್ಲ."
ಆದರೆ ಈ ವಿಪತ್ತು, ನೈಸರ್ಗಿಕ ಸಂಪನ್ಮೂಲಗಳದ್ದಲ್ಲ --
ನನಗೆ ಅದೇ ನಿಜವೆನಿಸಿದರೂ --
ಇದು ಮಾನವ ಸಂಪನ್ಮೂಲಗಳ ಕೊರತೆಗೆ ಸಂಬಂಧಿಸಿದ್ದು.
ನನ್ನ ಅನಿಸಿಕೆಯಂತೆ , ಮೂಲಭೂತವಾಗಿ
ಈಗಾಗಲೇ ಅನೇಕ ಭಾಷಣಕಾರರು ಹೇಳಿರುವಂತೆ
ನಾವೆಲ್ಲಾ ನಮ್ಮ ಪ್ರತಿಭೆ ಸಾಮರ್ಥ್ಯಗಳನ್ನು
ಸರಿಯಾಗಿ ಬಳಸುತ್ತಿಲ್ಲ.
ಅಸಂಖ್ಯಾತ ಮಂದಿ ತಮ್ಮ ಇಡೀ ಜೀವಮಾನವನ್ನು
ತಮಗೆ ಯಾವ ಪ್ರತಿಭೆ ಇದೆಯೆಂಬುದನ್ನೇ ತಿಳಿಯದೆ
ಅಥವಾ ಇದೆಯೋ ಇಲ್ಲವೋ ಎಂದು ತಿಳಿಯದೆ ಇದ್ದುಬಿಡುತ್ತಾರೆ.
ನಾನು ನಾನಾ ರೀತಿಯ ಜನರನ್ನು ಭೇಟಿಯಾಗುತ್ತಿರುತ್ತೇನೆ.
ತಮಗೆ ಯಾವುದರಲ್ಲಿ ಸಾಮರ್ಥ್ಯವಿದೆಯೆಂದು ಅವರಿಗೇ ತಿಳಿದಿರುವುದಿಲ್ಲ
ನಾನು ಸಾಧಾರಣವಾಗಿ ಜನರನ್ನು ಎರಡು ಗುಂಪುಗಳನ್ನಾಗಿ ವರ್ಗೀಕರಿಸುತ್ತೇನೆ.
ಉಪಯೋಗಿತಾವಾದಿ ತತ್ವಶಾಸ್ತ್ರಜ್ಞ ನಾದ ಜೆರೆಮಿ ಬೆಂಥಮ್
ಒಮ್ಮೆ ಇಂಥದೊಂದು ತರ್ಕವನ್ನು ಮುಂದಿಟ್ಟಿದ್ದ.
"ಈ ಜಗತ್ತಿನಲ್ಲಿ ಎರಡು ರೀತಿಯ ಜನರಿದ್ದಾರೆ
ಜಗತ್ತನ್ನು ಎರಡು ಗುಂಪುಗಳನ್ನಾಗಿ ವಿಭಜಿಸುವವರು
ಮತ್ತು ಹಾಗೆ ಮಾಡದೇ ಇರುವವರು"
(ನಗು)
ನಾನಂತೂ ಹಾಗೆ ಮಾಡುತ್ತೇನೆ.
(ನಗು)
ನಾನು ಅನೇಕ ಬಗೆಯ ಜನರನ್ನು ಭೇಟಿಯಾಗುತ್ತಿರುತ್ತೇನೆ.
ಅವರಿಗೆ ತಮ್ಮ ಕೆಲಸದಲ್ಲಿ ಖುಷಿಯೇ ಇರುವುದಿಲ್ಲ.
ಅವರು ಸುಮ್ಮನೇ ಗೊತ್ತುಗುರಿಯಿಲ್ಲದೆ
ಬದುಕುತ್ತಿರುತ್ತಾರೆ.
ತಾವು ಮಾಡುತ್ತಿರುವ ಕೆಲಸ ಅವರಿಗೆ ಸಂತಸ ಕೊಡುತ್ತಿರುವುದಿಲ್ಲ.
ಖುಷಿ ಯಾಗಿರುವುದರ ಬದಲಾಗಿ ಅವರು ಬದುಕನ್ನು ಹೇಗೋ ಸಹಿಸಿಕೊಂಡು ಹೋಗುತ್ತಿರುತ್ತಾರೆ.
ಹಾಗೂ ವಾರಾಂತ್ಯಕ್ಕಾಗಿ ಕಾಯುತ್ತಾ ಇರುತ್ತಾರೆ.
ಆದರೆ ತಮ್ಮ ಕೆಲಸವನ್ನು ಪ್ರೀತಿಸುವವರನ್ನೂ
ನಾನು ಭೇಟಿಯಾಗುತ್ತಿರುತ್ತೇನೆ.
ಅದನ್ನು ಬಿಟ್ಟು ತಾವು ಬೇರೇನನ್ನು ಮಾಡುವುದನ್ನೂ ಅವರು ಊಹಿಸಿಕೊಳ್ಳಲಾರರು.
"ನೋಡಿ, ಇನ್ನು ಮುಂದೆ ಇದನ್ನ್ನು ಮಾಡಬೇಡಿ" ಎಂದರೆ, ನೀವು ಹೇಳಿದ್ದು ಅವರಿಗೆ ಅರ್ಥವಾಗುವುದೇ ಇಲ್ಲ
ಏಕೆಂದರೆ ಅವರು ಆ ಕೆಲಸವನ್ನು ಮಾಡುತ್ತಿರುವುದೇ ಇಲ್ಲ. ಅವರೇ ಅದಾಗಿಬಿಟ್ಟಿರುತ್ತಾರೆ.
" ನೋಡಿ, ಇದೇ ನಾನು.
ಇದನ್ನು ಬಿಟ್ಟುಬಿಡುವುದು ಮೂರ್ಖತನದ ವಿಚಾರ.
ನನ್ನ ಅಂತರಾಳದ ಜತೆ ನನ್ನ ಕೆಲಸ ಮಾತನಾಡುತ್ತಿರುತ್ತದೆ."
ಆದರೆ ಬಹಳಷ್ಟು ಜನರ ಬಗ್ಗೆ ಈ ಮಾತು ಹೇಳುವಂತಿಲ್ಲ.
ಇದಕ್ಕೆ ವಿರುದ್ಧವಾಗಿ ನಾನು ಯೋಚಿಸುವುದಾದರೆ
ಕೆಲವರ ಬಗ್ಗೆಯಾದರೂ ಈ ಮಾತನ್ನು ಹೇಳಬಹುದು.
ನನಗೆ ತಿಳಿದಂತೆ ಈ ವಿಷಯವನ್ನು
ಅನೇಕ ವಿಧಗಳಲ್ಲಿ ವಿವರಿಸಬಹುದು.
ಅದರಲ್ಲಿ ತುಂಬ ಮುಖ್ಯವಾದುದು
ಶಿಕ್ಷಣ.
ಏಕೆಂದರೆ ಶಿಕ್ಷಣವು ಒಂದು ರೀತಿಯಲ್ಲಿ
ಜನರನ್ನು ತಮ್ಮ ಸಹಜ ಪ್ರತಿಭೆಯಿಂದ
ದೂರಸರಿಸುತ್ತದೆ.
ಮಾನವ ಸಂಪನ್ಮೂಲಗಳೂ ಪ್ರಾಕೃತಿಕ ಸಂಪನ್ಮೂಲಗಳಂತೆಯೇ
ಹೆಚ್ಚಿನ ವೇಳೆ ತುಂಬ ಆಳದಲ್ಲಿ ಹುದುಗಿರುತ್ತವೆ.
ನೀವು ಅವುಗಳನ್ನು ಹುಡುಕಿಕೊಂಡು ಹೋಗಬೇಕಾಗುತ್ತದೆ.
ಅವು ಕಣ್ಣಿಗೆ ಕಾಣುವಂತೆ ಮೇಲ್ಪದರದಲ್ಲಿ ಸಿಕ್ಕುವುದಿಲ್ಲ. ಅವು ತಾನೇತಾನಾಗಿ
ಮೇಲೆ ಬಂದು ಕಾಣಿಸಿಕೊ ಳ್ಳು ವಂಥ ಸನ್ನಿವೇಶವನ್ನು ನೀವು ನಿರ್ಮಿಸಬೇಕು.
ನೀವು ಊಹಿಸುತ್ತಿರಬಹುದು
ಶಿಕ್ಷಣ ಮಾರ್ಗದಿಂದ ಇದಾಗುವುದೆಂದು.
ಆದರೆ ತುಂಬಾ ಸಾರಿ ಹಾಗಾಗಿರುವುದಿಲ್ಲ.
ಜಗತ್ತಿನ ಪ್ರತಿಯೊಂದು ಶೈಕ್ಷಣಿಕ ವ್ಯವಸ್ಥೆಯನ್ನೂ
ಇಂದು ಪರಿವರ್ತನೆಗೊಳಿಸಲಾಗುತ್ತಿದೆ.
ಆದರೆ ಅದು ಸಾಲದು.
ಸುಧಾರಣೆಯೆಂಬುದು ಇನ್ನು ಉಪಯೋಗವಿಲ್ಲ.
ಏಕೆಂದರೆ ಅದು ಕೇವಲ ಬಿರುಕು ಬಿದ್ದ ವ್ಯವಸ್ಧೆಯೊಂದಕ್ಕೆ ರಿಪೇರಿ ಮಾಡಿದಂತಿರುತ್ತದೆ.
ನಮಗೆ ನಿಜಕ್ಕೂ ಬೇಕಿರುವುದು --
ಕಳೆದ ಕೆಲ ದಿನಗಳಲ್ಲಿ ಈ ಪದಗಳನ್ನು ತುಂಬ ಸಾರಿ ಬಳಸಲಾಗಿದೆ --
ವಿಕಾಸ ವಲ್ಲ
ಶಿಕ್ಷಣದಲ್ಲಿ ಕ್ರಾಂತಿ.
ಇದನ್ನು ಮಾರ್ಪಡಿಸಬೇಕಿದೆ
ಬೇರೊಂದನ್ನಾಗಿ.
(ಚಪ್ಪಾಳೆ)
ನೈಜವಾದ ಸವಾಲೆಂದರೆ
ಮೂಲಭೂತವಾಗಿ ಹೊಸತನ ತರಬೇಕಿದೆ
ಶಿಕ್ಷಣ ವ್ಯವಸ್ಥೆಯಲ್ಲಿ.
ಹೊಸತನ ತುಂಬ ಕಷ್ಟ
ಏಕೆಂದರೆ ಅದರರ್ಥ ಜನರಿಗೆ ಸುಲಭವಲ್ಲದ (ಹೆಚ್ಚಿನಂಶ)
ಕೆಲಸಗಳನ್ನು ಮಾಡಬೇಕಾಗುತ್ತದೆ.
ಅಂದರೆ ನಾವು ಸರ್ವೇಸಾಮಾನ್ಯವಾಗಿ ಒಪ್ಪಿಕೊಳ್ಳು ವ
ನಿಸ್ಸಂಶಯವೆನ್ನುವಂಥ ವಿಚಾರಗಳನ್ನು ಪ್ರಶ್ನಿಸಬೇಕಾಗುತ್ತದೆ.
ಸುಧಾರಣೆಯ ದೊಡ್ಡ
ಸಮಸ್ಯೆಯೆಂದರೆ
ಲೋಕ ಜ್ಞಾನದ ಕಾಟ ;
ಉದಾಹರಣೆಗೆ ಜನರು ಹೇಳುವಂತೆ
"ಇದನ್ನು ಯಾವಾಗಲೂ ಹೀಗೆಯೇ ಮಾಡಬೇಕು. ಏಕೆಂದರೆ ಬೇರಾವ ರೀತಿಯಲ್ಲೂ ಇದನ್ನು ಮಾಡಲಾಗದು."
ಅಬ್ರಾಹಂ ಲಿಂಕನ್ ರವರ ಈ ಉಕ್ತಿ ಇತ್ತೀಚೆಗೆ ನನ್ನ ಕಣ್ಣಿಗೆ ಬಿದ್ದಿತು.
ಅದನ್ನು ಹೇಳುವುದರಿಂದ ನಿಮಗೆ ಸಂತೋಷವಾಗಬಹುದೆಂದುಕೊಂಡಿದ್ದೇನೆ.
(ನಗು)
೧೮೬೨ರ ಡಿಸೆಂಬರ್ ನಲ್ಲಿ ಇದನ್ನು ಹೇಳಿದ.
ಕಾಂಗ್ರೆಸ್ ನ ಎರಡನೇ ವಾರ್ಷಿಕ ಸಭೆಯಲ್ಲಿ.
ನಾನಿದನ್ನು ನಿಮಗೆ ಹೇಳಲೇಬೇಕು - ಆ ಸಂದರ್ಭದಲ್ಲಿ ಏನಾಗುತ್ತಿತ್ತೆಂದು ನನಗೆ ಗೊತ್ತಿಲ್ಲ.
ಬ್ರಿಟನ್ ನಲ್ಲಿ ನಾವು ಅಮೆರಿಕಾದ ಇತಿಹಾಸವನ್ನು ಕಲಿಸುವುದಿಲ್ಲ.
(ನಗು)
ನಾವದನ್ನು ಹತ್ತಿಕ್ಕಿದ್ದೇವೆ. ಇದು ನಮ್ಮ ಖಚಿತ ಧೋರಣೆ.
(ನಗು)
ಹಾಗಾಗಿ, ೧೮೬೨ರಲ್ಲಿ ಏನೋ ಒಂದು ಮಹತ್ತರವಾದದ್ದು ನಡೆದಿರಬೇಕು.
ನಮ್ಮಲ್ಲಿ ಅಮೇರಿಕನ್ನರು ಇದ್ದರೆ
ಅವರಿಗದು ಗೊತ್ತಿರುತ್ತದೆ.
ಆದರೆ ಅವನು ಹೀಗೆ ಹೇಳಿದ.
ಹಿಂದಿನ ಪ್ರಶಾಂತ ಕಾಲದಲ್ಲಿ ಪ್ರಚಲಿತವಾಗಿದ್ದ
ಗಡಸು ಸಿದ್ಧಾಂತಗಳು
ಇಂದಿನ ಅಬ್ಬರದ ಕಾಲಕ್ಕೆ ಸೂಕ್ತವಾಗಲಾರವು.
ಈ ಸಂದರ್ಭವು
ತುಂಬ ಕಷ್ಟಗಳಿಂದ ಕೂಡಿದೆ. ಹಾಗಾಗಿ
ನಾವು ಈ ಸಂದರ್ಭದೊಂದಿಗೆ ಮೇಲೇರಬೇಕಾಗಿದೆ.
ನನಗಿದು ತುಂಬ ಇಷ್ಟವಾಯ್ತು.
ಸಂದರ್ಭದ ಅನುಗುಣವಾಗಿ ಅಲ್ಲ. ಅದರ ಜತೆಗೆ.
ನಮ್ಮ ಸನ್ನಿವೇಶ ಹೊಸದಾಗಿರುವುದರಿಂದ
ನಾವು ವಿನೂತನವಾಗಿ ಯೋಚಿಸಬೇಕಾಗಿದೆ
ಹಾಗೂ ವಿನೂತನವಾಗಿ ಕೆಲಸ ಮಾಡಬೇಕಾಗಿದೆ.
ಮೋಹದಿಂದ ಹೊರಬಂದರೆ
ಆಗ ನಾವು ನಮ್ಮ ದೇಶವನ್ನು ರಕ್ಷಿಸಬಹುದು.
"ಮೋಹದಿಂದ ಹೊರಬರುವುದು" ಶಬ್ದ ನನಗೆ ಮೆಚ್ಚಿಗೆಯಾಯ್ತು.
ಇದರರ್ಥ ಏನೆಂದು ಗೊತ್ತಾಯಿತೇ?
ಕೆಲವು ವಿಚಾರಗಳು ನಮ್ಮನ್ನು ಮೋಹಪರವಶಗೊಳಿಸುತ್ತವೆ
ಅವುಗಳನ್ನು ನಾವು ಸುಖಾಸುಮ್ಮನೇ ಒಪ್ಪಿಕೊಂಡುಬಿಡುತ್ತೇವೆ.
ಅವು ಸಹಜ , ಅವು ಇರುವುದು ಹೀಗೇನೇ ಎಂದು.
ನಮ್ಮ ಅನೇಕ ವಿಚಾರಗಳು
ರೂಪುಗೊಂಡಿದ್ದು ಈ ಶತಮಾನದ ಸನ್ನಿವೇಶವನ್ನು ಎದುರಿಸುವ ಉದ್ದೇಶದಿಂದ ಅಲ್ಲ.
ಬದಲಾಗಿ ಹಿಂದಿನ ಶತಮಾನದ ಸನ್ನಿವೇಶಗಳಿಗೆ ಸೂಕ್ತ ಪ್ರತಿಕ್ರಿಯೆಯಾಗಿ.
ಆದರೆ ನಮ್ಮ ಮನಸ್ಸು ಇನ್ನೂ ಸಮ್ಮೋಹನಕ್ಕೆ ಒಳಪಟ್ಟಿರುವುದರಿಂದ
ಅದರಲ್ಲಿ ಒಂದಷ್ಟರಿಂದ ನಮ್ಮನ್ನು ನಾವು ಬಿಡಿಸಿಕೊಳ್ಳಬೇಕಾಗಿದೆ.
ಆದರೆ ಇದನ್ನು ಹೇಳುವುದು ಸುಲಭ. ಮಾಡುವುದು ಕಷ್ಟ.
ನಾವುಗಳು ಏನೆಲ್ಲವನ್ನು ಪ್ರಶ್ನಿಸದೆ ಒಪ್ಪಿಕೊಂಡುಬಿಟ್ಟಿದ್ದೇವೆ ಎಂಬುದನ್ನು ತಿಳಿಯುವುದು ಕಷ್ಟ. (ನಗು)
ಕಾರಣವೇನೆಂದರೆ ಅದನ್ನು ಪ್ರಶ್ನಿಸದೆ ಒಪ್ಪಿಕೊಂಡುಬಿಟ್ಟಿರುತ್ತೇವೆ.
ಸರಿ. ನೀವು ಸುಮ್ಮನೇ ಒಪ್ಪಿಕೊಂಡುಬಿಟ್ಟಿರುವ ಕೆಲ ವಿಷಯಗಳ ಬಗ್ಗೆ ಕೇಳಲೇ?
ನಿಮ್ಮಲ್ಲಿ ಎಷ್ಟು ಮಂದಿ ಗೆ ೨೫ಕ್ಕಿಂತ ಹೆಚ್ಚು ವಯಸ್ಸಾಗಿದೆ?
ಅಲ್ಲ. ನೀವು ಸುಮ್ಮನೇ ಒಪ್ಪಿಕೊಂಡ ವಿಷಯಗಳಲ್ಲಿ ಇದೊಂದಲ್ಲ.
ನಿಮಗೆ ಅದು ಗೊತ್ತಿದೆಯೆಂದು ನನಗೆ ಗೊತ್ತು.
೨೫ ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಇಲ್ಲಿ ಇದ್ದಾರೆಯೇ?
ಸಂತೋಷ. ಈಗ, ೨೫ ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರುವವರು
ನೀವು ಕೈ ಗಡಿಯಾರವನ್ನು ಕಟ್ಟಿಕೊಂಡಿದ್ದರೆ ಕೈ ಎತ್ತಿ.
ನೋಡಿ. ಅಂಥವರು ತುಂಬ ಮಂದಿ ಇದ್ದಾರೆ. ಅಲ್ಲವೇ?
ಬರೀ ಹದಿಹರಯದವರೇ ತುಂಬಿರುವ ಕೋಣೆಯಲ್ಲಿ ಈ ಪ್ರಶ್ನೆಯನ್ನು ಕೇಳಿದಿರಿ ಎಂದು ಇಟ್ಟುಕೊಳ್ಳಿ.
ಹದಿಹರಯದವರು ಕೈ ಗಡಿಯಾರಗಳನ್ನು ಕಟ್ಟುವುದಿಲ್ಲ.
ಕಟ್ಟಲು ಆಗುವುದಿಲ್ಲ ಎಂದಲ್ಲ ಅಥವಾ ಅವರಿಗೆ ಅನುಮತಿ ಇಲ್ಲ ಎಂದೂ ಅಲ್ಲ.
ಸಾಧಾರಣವಾಗಿ ಅವರು ಕಟ್ಟುವುದಿಲ್ಲ.
ಕಾರಣವೇನೆಂದರೆ ನಾವೆಲ್ಲಾ ಡಿಜಿಟಲ್ ಯುಗಕ್ಕಿಂತ
ಹಿಂದಿನ ಕಾಲದಲ್ಲಿ ಹುಟ್ಟಿ ಬೆಳೆದವರು.
ಹಾಗಾಗಿ ನಮಗೆ ಸಮಯ ತಿಳಿಯಬೇಕೆಂದರೆ
ಏನನ್ನಾದರೂ ಕಟ್ಟಿಕೊಂಡಿರಬೇಕು.
ಮಕ್ಕಳು ಈಗ ಡಿಜಿಟಲ್ ಯುಗದಲ್ಲಿದ್ದಾರೆ.
ಮತ್ತು ಅವರಿಗೆ ಸಮಯವು ಎಲ್ಲಾ ಕಡೆ ಕಾಣಸಿಗುತ್ತದೆ.
ನಿಜವಾಗಿ ನೋಡಿದರೆ, ಅದು ನಿಮಗೆ ಬೇಕೆಂದೇನೂ ಇಲ್ಲ.
ಹಾಗಾಗಿ ಇದು ಬೇಕಾಗಿಲ್ಲ.
ಆದರೆ ನೀವು ಯಾವಾಗಲೂ ಹಾಗೆಯೇ ಮಾಡಿದ್ದರಿಂದ ಅದೇ ವರ್ತನೆಯನ್ನು ಮುಂದುವರಿಸುತ್ತಿದ್ದೀರಿ.
ನನ್ನ ಮಗಳು ಕೈಗಡಿಯಾರವನ್ನು ಕಟ್ಟಿಕೊ ಳ್ಳುವುದೇ ಇಲ್ಲ. ಅವಳ ಹೆಸರು ಕೇಟ್ , ಅವಳಿಗೆ ೨೦ ವರ್ಷ.
ಅವಳಿಗೆ ಅರ್ಥವಾಗುವುದಿಲ್ಲ.
ಅವಳೇ ಹೇಳುವಂತೆ " ಅದು ಒಂದೇ ಕೆಲಸ ಮಾಡುವ ಸಾಧನ"
(ನಗು)
ಅಂದರೆ "ಇದೆಂಥ ಪೆಚ್ಚು ಸಾಧನ!"
ಅದಕ್ಕೆ ನಾನು ಹೇಳಿದೆ " ಇಲ್ಲ. ಅದು ತಾರೀಖನ್ನೂ ತೋರಿಸುತ್ತೆ."
(ನಗು)
"ಅದು ಅನೇಕ ಕೆಲಸಗಳನ್ನು ಮಾಡುತ್ತದೆ."
ನೋಡಿ. ಶಿಕ್ಷಣದಲ್ಲಿ ನಾವು ಮೋಹಪರವಶವಾಗಿರುವ ಕೆಲವು ವಿಷಯಗಳಿವೆ.
ಒಂದೆರಡು ಉದಾಹರಣೆಗಳನ್ನು ಕೊಡಲೇ?
ಅದರಲ್ಲಿ ಒಂದು ರೇಖಾತ್ಮ ಕ ಚಿಂತನೆ.
ಇಲ್ಲಿಂದ ಹೊರಟು ಈ ಮಾರ್ಗದಲ್ಲಿ ಹೋದರೆ
ಮತ್ತು ಹೀಗೆ ಪ್ರತಿಯೊಂದನ್ನೂ ಸರಿಯಾಗಿ ಮಾಡಿಬಿಟ್ಟರೆ
ಜೀವನದುದ್ದಕ್ಕೂ ಎಲ್ಲವೂ ಸರಾಗವಾಗುತ್ತದೆ.
ಆದರೆ ಟೆಡ್ ಸಮಾವೇಶದಲ್ಲಿ ಮಾತನಾಡಿದ ಪ್ರತಿಯೊಬ್ಬರೂ
ಸೂಚ್ಯವಾಗಿ ಕೆಲವೊಮ್ಮೆ ವಾಚ್ಯವಾಗಿ ಹೇಳಿರುವುದೇನೆಂದರೆ
ಬದುಕು ರೇಖಾತ್ಮಕವಲ್ಲ. ಬದಲಾಗಿ ಅದು ಸಾವಯವ.
ಪರಸ್ಪರ ಅವಲಂಬನೆಯಿಂದ ನಮ್ಮ ಬದುಕನ್ನು ರೂಪಿಸಿಕೊಳ್ಳು ತ್ತೇವೆ.
ಹಾಗೆ ಮಾಡುವಾಗ ಸನ್ನಿವೇಶಗಳು ನಮಗೆ ಸಹಾಯ ನೀಡಲು ಅನುವಾಗುವಂತೆ
ನಮ್ಮ ಪ್ರತಿಭೆಗಳನ್ನು ಅನ್ವೇಷಿಸುತ್ತೇವೆ.
ಆದರೆ ನಾವೆಲ್ಲಾ ಈ ರೇಖಾತ್ಮಕ
ವಿವರಣೆಯನ್ನು ಒಪ್ಪಿಕೊಂಡಿಬಿಟ್ಟಿದ್ದೇವೆ.
ಶಿಕ್ಷಣದ ಉತ್ತುಂಗ ಸಾಧನೆ ಎಂದರೆ
ಕಾಲೇಜಿಗೆ ಸೇರುವುದು.
ಜನರನ್ನು ಕಾಲೇಜಿಗೆ ಸೇರಿಸುವುದರ ಬಗ್ಗೆ ನಮಗೆ ಅತೀವ ಉತ್ಸಾಹ
ಅದರಲ್ಲೂ ಕೆಲವು ತರಹದ ಕಾಲೇಜುಗಳು.
ನೀವು ಕಾಲೇಜಿಗೆ ಹೋಗಬಾರದು ಎಂದು ನಾನು ಹೇಳುತ್ತಿಲ್ಲ. ಆದರೆ ಎಲ್ಲರೂ ಹೋಗಬೇಕೆಂದಿಲ್ಲ.
ಎಲ್ಲರೂ ಕಾಲೇಜಿಗೆ ಈಗಲೇ ಹೋಗಬೇಕಾಗಿಲ್ಲ.
ಮುಂದೆ ಹೋಗಬಹುದು. ಈಗಲ್ಲ.
ನಾನು ಸ್ವಲ್ಪ ದಿನಗಳ ಮೊದಲು ಸ್ಯಾನ್ ಫ್ರಾನ್ಸಿಸ್ಕೋನಲ್ಲಿದ್ದೆ.
ಪುಸ್ತಕಕ್ಕೆ ಸಹಿ ಹಾಕಲು.
೩೦ ವರ್ಷದ ಒಬ್ಬ ವ್ಯಕ್ತಿ ಒಂದು ಪುಸ್ತಕವನ್ನು ಕೊಳ್ಳುತ್ತಿದ್ದ
ನಾನವನನ್ನು ಕೇಳಿದೆ. " ನೀವೇನು ಉದ್ಯೋಗ ಮಾಡುತ್ತಿದ್ದೀರಿ?"
ಆತ ಹೇಳಿದ " ಅಗ್ನಿಶಾಮಕದಳದಲ್ಲಿ"
ನಾನು ಕೇಳಿದೆ" ಎಷ್ಟು ದಿನದಿಂದ?"
"ಯಾವಾಗಲೂ . ನಾನು ಮೊದಲಿನಿಂದಲೂ ಅಗ್ನಿಶಾಮಕದಳದಲ್ಲಿದ್ದೇನೆ."
"ಸರಿ. ಯಾವಾಗ ಈ ನಿರ್ಧಾರ ಮಾಡಿದಿರಿ?"
ಆತ ಹೇಳಿದ "ಬಾಲ್ಯದಲ್ಲೇ. ನಿಜಕ್ಕೂ ಅದು ಶಾಲೆಯಲ್ಲಿ ನನಗೆ ಸಮಸ್ಯೆಯಾಗಿತ್ತು.
ಏಕೆಂದರೆ ಶಾಲೆಯಲ್ಲಿ ಪ್ರತಿಯೊಬ್ಬರೂ ಅಗ್ನಿಶಾಮಕದಳಕ್ಕೆ ಸೇರಲು ಬಯಸಿದ್ದರು.
ಆದರೆ ನಾನು ನಿಜಕ್ಕೂ ಅಗ್ನಿಶಾಮಕ ದಳಕ್ಕೆ ಸೇರಬಯಸಿದ್ದೆ."
ಆತ ಹೇಳಿದ " ನಾನು ಶಾಲೆಯ ಕೊನೆಯ ವರ್ಷಕ್ಕೆ ಬರುವ ಹೊತ್ತಿಗೆ
ನನ್ನ ಶಿಕ್ಷಕರು ನನ್ನ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದರು.
ಅದರಲ್ಲೂ ಒಬ್ಬ ಶಿಕ್ಷಕರು
ಹೀಗೆ ಮಾಡಿದರೆ
ನಾನು ನನ್ನ ಜೀವನವನ್ನು ನಿರರ್ಥಕಗೊಳಿಸುತ್ತಿದ್ದೇನೆಂದೇ ಹೇಳಿದ್ದರು."
"ನಾನು ಕಾಲೇಜಿಗೆ ಸೇರಬೇಕು, ವೃತ್ತಿ ಶಿಕ್ಷಣವನ್ನು ಪಡೆಯಬೇಕು
ಏಕೆಂದರೆ ನನಗೆ ತುಂಬ ಸಾಮರ್ಥ್ಯವಿದೆ ಎಂದೂ
ಇಲ್ಲದಿದ್ದರೆ ನಾನು ನನ್ನ ಪ್ರತಿಭೆಯನ್ನು ಪೋಲು ಮಾಡುತ್ತಿದ್ದೇನೆಂದೂ ಭಾವಿಸಿದ್ದರು."
ಆತ ಹೇಳಿದ " ನನಗೆ ತುಂಬ ಅವಮಾನವಾಗಿತ್ತು.
ಇದನ್ನೆಲ್ಲಾ ಇಡೀ ತರಗತಿಯ ಮುಂದೆ ಹೇಳಿ ಮುಜುಗರ ಉಂಟುಮಾಡಿದ್ದರು."
"ಆದರೆ ನನ್ನ ನಿರ್ಧಾರ ಖಚಿತವಿತ್ತು. ಶಾಲೆ ಮುಗಿಸಿದ ನಂತರ ನಾನು
ಅಗ್ನಿಶಾಮಕ ದಳಕ್ಕೆ ಅರ್ಜಿ ಹಾಕಿದೆ. ಅಲ್ಲಿ ಕೆಲಸ ಸಿಕ್ಕಿತು."
" ನಿಮಗೆ ಗೊತ್ತೇ? . ಕೆಲ ನಿಮಿಷಗಳ ಹಿಂದೆ
ನಾನು ಆ ವ್ಯಕ್ತಿಯ ಬಗ್ಗೆಯೇ ಯೋಚಿಸುತ್ತಿದ್ದೆ - ನನ್ನ ಶಿಕ್ಷಕರ ಬಗ್ಗೆ."
ಏಕೆಂದರೆ ಆರು ತಿಂಗಳ ಕೆಳಗೆ
ನಾನವರ ಪ್ರಾಣ ಉಳಿಸಿದೆ."
(ನಗು)
"ಕಾರ್ ಅಪಘಾತದಲ್ಲಿ ಅವರು ಸಿಕ್ಕಿಹಾಕಿಕೊಂಡಿದ್ದರು.
ಆಗ ಅವರನ್ನು ನಾನು ಹೊರಗೆಳೆದು ಸಿ ಪಿ ಆರ್ ಚಿಕಿತ್ಸೆ ಕೂಡ ನೀಡಿದೆ.
ಜತೆಗೆ ಅವರ ಪತ್ನಿಯ ಜೀವವನ್ನೂ ಉಳಿಸಿದೆ."
"ಈಗ ಅವರು ನನ್ನ ಬಗ್ಗೆ ಸ್ವಲ್ಪ ಉತ್ತಮ ಅಭಿಪ್ರಾಯ ಹೊಂದಿದ್ದಾರೆ."
(ನಗು)
(ಚಪ್ಪಾಳೆ)
ನೋಡಿ,ನನ್ನ ಪ್ರಕಾರ
ಮಾನವ ಸಮುದಾಯಗಳು ಪ್ರತಿಭಾ ವೈವಿಧ್ಯದ
ಮೇಲೆ ಅವಲಂಬಿತವಾಗಿರುತ್ತವೆ ಹೊರತು
ಒಂದೇ ಸಾಮರ್ಥ್ಯದ ಮೇಲೆ ಅಲ್ಲ.
ಅಲ್ಲದೆ ನಮ್ಮ ಸವಾಲುಗಳ ಕೇಂದ್ರದಲ್ಲಿರುವುದು
(ಚಪ್ಪಾಳೆ)
ನಮ್ಮ ಸವಾಲುಗಳ ಕೇಂದ್ರದಲ್ಲಿರುವುದು
ನಮ್ಮ ಸಾಮರ್ಥ್ಯ ಮತ್ತು ಜಾಣತನಗಳನ್ನು
ಪುನರ್ನಿರ್ಮಾಣ ಮಾಡುವುದಾಗಿದೆ.
ಈ ರೇಖಾತ್ಮಕ ಚಿಂತನೆ ದೊಡ್ಡ ತಲೆನೋವಾಗಿದೆ.
ನಾನು ಒಂಬತ್ತು ವರ್ಷಗಳ ಹಿಂದೆ
ಲಾಸ್ ಏಂಜಲೀಸ್ ಗೆ ಬಂದಾಗ
ಒಂದು ನೀತಿ ಕಡತವನ್ನು ನೋಡಿದೆ.
ಅದು ಒಳ್ಳೆಯ ಉದ್ದೇಶವನ್ನೇ ಹೊಂದಿತ್ತು.
ಅದರಲ್ಲಿ ಹೇಳಿದ್ದು " ಕಾಲೇಜುಗಳು ಕಿಂಡರ್ ಗಾರ್ಟನ್ ನಲ್ಲಿ ಪ್ರಾರಂಭವಾಗುತ್ತವೆ"
ಇಲ್ಲ. ಖಂಡಿತಾ ಇಲ್ಲ
(ನಗು)
ಪ್ರಾರಂಭವಾಗುವುದಿಲ್ಲ.
ನಮಗೆ ಸಮಯವಿಲ್ಲ. ಇದ್ದಿದ್ದರೆ ಇದನ್ನು ವಿವರಿಸಿ ಹೇಳುತ್ತಿದ್ದೆ.
(ನಗು)
ಕಿಂಡರ್ ಗಾರ್ಟನ್ ಕಿಂಡರ್ ಗಾರ್ಟನ್ ನಲ್ಲಿ ಪ್ರಾರಂಭವಾಗುತ್ತದೆ.
(ನಗು)
ನನ್ನ ಸ್ನೇಹಿತನೊಬ್ಬ ಒಮ್ಮೆ ಹೇಳಿದ್ದ
"ನೋಡು, ಮೂರು ವರ್ಷದ ಮಗು ಆರು ವರ್ಷ ಮಗುವಿನ ಅರ್ಧ ಅಲ್ಲ."
(ನಗು)
(ಚಪ್ಪಾಳೆ)
ಅವರು ಮೂರು ವರ್ಷದವರು.
ಆದರೆ ನಾವು ಹಿಂದಿನ ಸಭೆಯಲ್ಲಿ ನೋಡಿದಂತೆ
ಕಿಂಡರ್ ಗಾರ್ಟನ್ ಗೆ (ಮಕ್ಕಳನ್ನು) ಸೇರಿಸಲು ಎಷ್ಟು ಸ್ಪರ್ಧೆ ಇದೆಯೆಂದರೆ
ಅದರಲ್ಲೂ ಸೂಕ್ತ ಕಿಂಡರ್ ಗಾರ್ಟನ್ ಗೆ....
ಮೂರು ವರ್ಷದ ಮಕ್ಕಳನ್ನೂ ಇಂಟರ್ ವ್ಯೂ ಮಾಡಲಾಗುತ್ತಿದೆ.
ಪುಟ್ಟ ಪುಟ್ಟ ಮಕ್ಕಳು ಆಯ್ಕೆ ಸಮಿತಿಯ ಎದುರು ಕುಳಿತು
ತಮ್ಮ ಸಾಧನೆಗಳ ಪಟ್ಟಿಯೊಂದಿಗೆ
(ನಗು)
ಅದನ್ನು ನೋಡುತ್ತಿರುವ ಸದಸ್ಯರು "ಇಷ್ಟೇನಾ? ನಿನ್ನ ಸಾಧನೆ?"
(ನಗು)
(ಚಪ್ಪಾಳೆ)
"೩೬ ತಿಂಗಳಿಂದ ಇದ್ದುಕೊಂಡು ಇಷ್ಟೇನಾ?"
(ನಗು)
"ಏನೇನೂ ಸಾಧಿಸಿಲ್ಲ..."
ಮೊದಲ ಆರು ತಿಂಗಳು ಬರೀ ಎದೆಹಾಲು ಕುಡಿದಿದ್ದು. ".
(ನಗು)
ನೋಡಿ, ಈ ಪರಿಕಲ್ಪನೆಯೇ ಭಯಾನಕವಾಗಿದೆ.
ಇನ್ನೋದು ಮುಖ್ಯ ವಿಷಯವೆಂದರೆ ರೂಢಿಯಂತೆ ಯೇ ನಡೆಯುವುದು.
ನಮ್ಮ ಶಿಕ್ಷಣ ಪದ್ಧತಿಯನ್ನು ನಾವು
ಫಾಸ್ಟ್ ಫುಡ್ ಮಾದರಿಯಿಂದ ಅಳವಡಿಸಿಕೊಂಡಿದ್ದೇವೆ.
ಜೇಮಿ ಆಲಿವರ್ ಮೊನ್ನೆ ಅದನ್ನೇ ಹೇಳಿದರು.
ಆಹಾರದ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಎರಡು ಮಾದರಿಗಳಿವೆ.
ಒಂದು , ಎಲ್ಲವೂ ಏಕರೂಪವಾಗಿರುವ
ಫಾಸ್ಟ್ ಫುಡ್ ಮಾದರಿ .
ಇನ್ನೊಂದು ಏಕರೂಪವಾಗಿಲ್ಲದ
ಝಗಾಟ್ ಮತ್ತು ಮಿಶೆಲಿನ್ ಉಪಾಹಾರಗೃಹಗಳ ಮಾದರಿ.
ಅವುಗಳನ್ನು ಸ್ಥಳೀಯ ಸನ್ನಿವೇಶಗಳಿಗೆ ಹೊಂದಿಸಿಕೊಂಡು ಮಾಡಲಾಗಿದೆ.
ನಮ್ಮನ್ನು ನಾವು ಫಾಸ್ಟ್ ಫುಡ್ ಮಾದರಿಯ ಶಿಕ್ಷಣಕ್ಕೆ ಮಾರಿಕೊಂಡುಬಿಟ್ಟಿದ್ದೇವೆ
ಅವು ನಮ್ಮ ದೇಹವನ್ನು ನಿರ್ಬಲರನ್ನಾಗಿ ಮಾಡುವ ಫಾಸ್ಟ್ ಫುಡ್ ನಂತೆಯೇ
ನಮ್ಮ ಚೇತನ ಮತ್ತು ಶಕ್ತಿಗಳನ್ನು ಕುಗ್ಗಿಸಿಬಿಡುತ್ತವೆ.
(ಚಪ್ಪಾಳೆ)
ಇಲ್ಲಿ ನಾವು ಕೆಲ ವು ವಿಷಯಗಳನ್ನು ಗುರುತಿಸಬೇಕಾಗಿದೆ.
ಒಂದು, ಮಾನವ ಪ್ರತಿಭೆಯು ಅತ್ಯಂತ ವೈವಿಧ್ಯತೆಯಿಂದ ಕೂಡಿದೆ.
ಜನರಿಗೆ ವಿವಿಧ ಆಸಕ್ತಿ ಹಾಗೂ ಸಾಮರ್ಥ್ಯಗಳಿವೆ.
ಇತ್ತೀಚೆಗೆ ನಾನು ಯೋಚಿಸುತ್ತಿದ್ದೆ.
ನನ್ನ ಕೈಗೆ ಮೊದಲ ಬಾರಿ ಗಿಟಾರ್ ಸಿಕ್ಕಿದ್ದು
ಸುಮಾರಾಗಿ ಎರಿಕ್ ಕ್ಲಾಪ್ಟನ್ ಕೈಗೆ ಅದು ಮೊದಲ ಬಾರಿ ಸಿಕ್ಕಾಗಲೇ.
ನೋಡಿ. ಅವನಿಗೆ ಅದರಲ್ಲಿ ಸಫಲತೆ ಸಿಕ್ತು. ಅಷ್ಟೇ , ನಾನು ಹೇಳ್ತಿರೋದು.
(ನಗು)
ನನಗೆ , ಒಂದು ರೀತಿಯಲ್ಲಿ ಸಿಗಲಿಲ್ಲ.
ನಾನೆಷ್ಟೇ ಬಾರಿ ಅಥವಾ ಎಷ್ಟೇ ಜೋರಾಗಿ ಊದಿದರೂ
ಅದು ಕೆಲಸ ಮಾಡುವಂತೆ ಮಾಡಲು
ನನಗೆ ಸಾಧ್ಯವೇ ಆಗಲಿಲ್ಲ.
ಆದರೆ ಅಷ್ಟೇ ಅಲ್ಲ.
ಅದು ನಮ್ಮ ಆಸ್ಥೆಗೆ ಸಂಬಂಧಿಸಿದ್ದು.
ಕೆಲವೊಮ್ಮೆ , ಜನರಿಗೆ ಕೆಲಸ ಮಾಡುವ ಸಾಮರ್ಥ್ಯವಿದ್ದರೂ ಅದನ್ನು ಮಾಡಲು ಆಸಕ್ತಿಯಿರುವುದಿಲ್ಲ.
ಅದು ಆಸ್ಥೆಗೆ ಸಂಬಂಧಿಸಿದ್ದು
ಹಾಗೂ ನಮ್ಮ ಚೇತನ ಮತ್ತು ಶಕ್ತಿಗಳಿಗೆ ಯಾವುದು ಪ್ರಚೋದನೆ ಕೊಡುವುದೋ ಅದು
ನೀವು ಮಾಡುವ ಕೆಲಸ ನಿಮಗೆ ಸಂತೋಷ ಕೊಟ್ಟರೆ ಹಾಗೂ ನಿಮಗೆ ಅದರಲ್ಲಿ ದಕ್ಷತೆ ಇದ್ದರೆ
ಸಮಯ ಸರಿದದ್ದೇ ಗೊತ್ತಾಗುವುದಿಲ್ಲ.
ನನ್ನ ಹೆಂಡತಿ ಈಗತಾನೇ ಒಂದು ಕಾದಂಬರಿ ಬರೆದು ಮುಗಿಸಿದ್ದಾಳೆ.
ಹಾ! ಅದು ಅದ್ಭುತವಾಗಿದೆ.
ಆದರೆ ಅವಳು ಗಂಟೆಗಟ್ಟಲೆ ಕಣ್ಮರೆಯಾಗಿಬಿಡುತ್ತಾಳೆ.
ನಿಮಗೆ ಗೊತ್ತಿರಬೇಕು. ನಿಮಗೆ ಇಷ್ಟವಾದುದನ್ನು ಮಾಡುತ್ತಾ ಕುಳಿತರೆ
ಗಂಟೆಗಳು ನಿಮಿಷಗಳಂತೆ ತೋರುತ್ತವೆ.
ಆದರೆ ನಿಮ್ಮ ಅಂತಃಚೇತನದ ಜತೆ ಅನುರಣನಗೊಳ್ಳದ ಕೆಲಸ ಮಾಡುತ್ತಿದ್ದರೆ
ಐದು ನಿಮಿಷವು ಒಂದು ಗಂಟೆಯಂತೆ ಭಾಸವಾಗುತ್ತದೆ.
ಶಿಕ್ಷಣದಿಂದ ಅನೇಕ ಜನರು ಏಕೆ ಹೊರಹೋಗುತ್ತಿದ್ದಾರೆಂದರೆ
ಅದು ಅವರ ಅಂತಃಚೇತನಕ್ಕೆ ಅಥವಾ ಅವರ ಶಕ್ತಿ ಅಥವಾ ಆಸಕ್ತಿಗೆ
ಜೀವದ್ರವ್ಯ ಒದಗಿಸುತ್ತಿಲ್ಲ.
ಹಾಗಾಗಿ ನಾವು ರೂಪಕಗಳನ್ನು ಬದಲಿಸಬೇಕೆಂದು ಅನಿಸುತ್ತದೆ.
ನಾವೀಗ ಪ್ರಮುಖವಾಗಿ ಔದ್ಯಮಿಕ ಮಾದರಿಯ ಶಿಕ್ಷಣದಿಂದ
ರೇಖಾತ್ಮಕತೆ ಆಧಾರದ ಮೇಲಿನ
ಉತ್ಪಾದನೆಯ ಮಾದರಿಯಿಂದ
ಜತೆಗೆ ಸಿದ್ಧಮಾದರಿ ಹಾಗೂ ಜನರನ್ನು ಗುಂಪುಗಳನ್ನಾಗಿ ಮಾಡಿ ನೋಡುವುದರಿಂದ
ಮಾದರಿಯ ದಿಕ್ಕಿನಲ್ಲಿ ಮುನ್ನಡೆಯಬೇಕಾಗಿದೆ.
ನಾವು ಕೃಷಿಯ ತತ್ವಗಳ ಮೇಲೆ ಆಧರಿಸಿದ
ಮಾನವರು ವಿಕಾಸ ಹೊಂದುವುದು
ಯಾಂತ್ರಿಕ ಪ್ರಕ್ರಿಯೆಯಲ್ಲ.
ಅದೊಂದು ಸಾವಯವ ಪ್ರಕ್ರಿಯೆ.
ಮಾನವ ಅಭಿವೃದ್ಧಿಯ ಫಲಿತಾಂಶವನ್ನು ನಾವು ನಿಖರವಾಗಿ ಊಹಿಸಲಾರೆವು.
ನಾವು ಇಷ್ಟನ್ನು ಮಾತ್ರ ಮಾಡಬಹುದು. ಒಬ್ಬ ರೈತನಂತೆ
ಉತ್ತಮ ಬೆಳವಣಿಗೆಗೆ ಬೇಕಾದ ಪರಿಸ್ಥಿತಿಗಳನ್ನು
ಮಾತ್ರ ನಿರ್ಮಿಸಬಹುದು
ಆದ್ದರಿಂದ ನಾವು ಶಿಕ್ಷಣದಲ್ಲಿ ಬದಲಾವಣೆ ತಂದು ಅದನ್ನು ಪರಿವರ್ತನೆಗೊಳಿಸಬೇಕೆಂದರೆ
ಅದು ವ್ಯವಸ್ಥೆಯನ್ನು ನಕಲು ಪ್ರತಿ ಮಾಡಿದಂತೆ ಅಲ್ಲ.
ಕೆಲವು ಅದ್ಭುತ ಪದ್ಧತಿಗಳಿವೆ. ಉದಾಹರಣೆಗೆ KIPP's ; ಅದು ನಿಜಕ್ಕೂ ಚೆನ್ನಾಗಿದೆ.
ಅನೇಕ ಉತ್ತಮ ಮಾದರಿಗಳಿವೆ.
ನೀವು ಯಾರಿಗೆ ಶಿಕ್ಷಣ ಕೊಡುತ್ತಿದ್ದೀರೋ ಅವರ
ಪರಿಸ್ಥಿತಿಗಳಿಗೆ ಅನುಗುಣವಾಗಿ
ಮತ್ತು ನಿಮ್ಮ ವಿಶೇಷ ಸಂದರ್ಭಗಳಿಗೆ ಹೊಂದಿಕೊಳ್ಳುವಂತೆ ಮಾಡುವುದು.
ಹಾಗೆ ಮಾಡುವುದೇ ಭವಿಷ್ಯಕ್ಕೆ
ಉತ್ತರವೆಂದು ನನಗನಿಸುತ್ತದೆ. ಏಕೆಂದರೆ
ಅದು ಒಂದು ಪರಿಹಾರವನ್ನು ದೊಡ್ಡ ಪ್ರಮಾಣದಲ್ಲಿ ಅನುಷ್ಟಾನಗೊಳಿಸುವುದಲ್ಲ.
ಅದು ಜನರು ತಮ್ಮ ತಮ್ಮ ಪರಿಹಾರಗಳನ್ನು
ಹೊರಗಿನ ಬೆಂಬಲವನ್ನು ಪಡೆದುಕೊಂಡು ತಾವೇ ರೂಪಿಸಿಕೊಳ್ಳುವಂತೆ
ಶಿಕ್ಷಣದಲ್ಲಿ ಹೊಸ ಚಳುವಳಿಯನ್ನು ರೂಪಿಸುವುದು.
ಈಗ ಈ ಕೋಣೆಯಲ್ಲೇ
ವ್ಯಾಪಾರ, ಬಹುಮಾಧ್ಯಮ , ಅಂತರ್ಜಾಲದ
ಅತ್ಯುತ್ತಮ ಸಂಪನ್ಮೂಲಗಳನ್ನು
ಪ್ರತಿನಿಧಿಸುವ ಜನರಿದ್ದಾರೆ.
ಈ ತಂತ್ರ ಜ್ಞಾನದ ಜತೆ
ಶಿಕ್ಷಕರ ಅಸಾಧಾರಣ ಪ್ರತಿಭೆಯೂ ಸೇರಿದರೆ
ಶಿಕ್ಷಣದಲ್ಲಿ ಕ್ರಾಂತಿ ಮಾಡಬಹುದು.
ನೀವೆಲ್ಲಾ ಅದರಲ್ಲಿ ಭಾಗಿಯಾಗಬೇಕೆಂದು ನಾನು ಒತ್ತಾಯಿಸುತ್ತೇನೆ.
ಏಕೆಂದರೆ ಅದು ನಮಗೆ ಮಾತ್ರ ಮುಖ್ಯವಲ್ಲ.
ನಮ್ಮ ಮಕ್ಕಳ ಭವಿಷ್ಯಕ್ಕೂ ಮುಖ್ಯವಾಗಿದೆ.
ಆದರೆ ನಾವು ಔದ್ಯೋಗಿಕ ಮಾದರಿಯಿಂದ
ಕೃಷಿ ಮಾದರಿಗೆ ಬದಲಾಗಬೇಕಾಗಿದೆ.
ಪ್ರತಿ ಶಾಲೆಯೂ ಸುಂದರವಾಗಿ ಅರಳಬಲ್ಲ
ಅಲ್ಲಿಯೇ ಮಕ್ಕಳು ಜೀವನವನ್ನು ಅನುಭವಿಸುತ್ತಾರೆ.
ಅಥವಾ ಅದು ಮನೆಯಲ್ಲಿರಬಹುದು - ಅವರ
ಕುಟುಂಬದವರು ಅಥವಾ ಗೆಳೆಯರ ಜತೆ - ಅವರು ಅಲ್ಲಿ ಕಲಿಯಲು ಇಷ್ಟಪಟ್ಟರೆ.
ಈ ಕೆಲ ದಿನಗಳಲ್ಲಿ ಕನಸುಗಳ ಬಗ್ಗೆ
ಅನೇಕ ಮಾತುಕಥೆಗಳಾಗಿವೆ.
ನಾನು ಶೀಘ್ರವಾಗಿ ...
ನಟಾಲಿ ಮರ್ಚಂಟ್ ಳ ನಿನ್ನೆ ರಾತ್ರಿಯ ಹಾಡು ನನ್ನ ಮೇಲೆ ತುಂಬ ಪರಿಣಾಮ ಬೀರಿತು.
ಹಳೇ ಕವನಗಳನ್ನು ಮೆಲುಕು ಹಾಕುತ್ತಾ.
W.B. ಯೇಟ್ಸ್ - ನಿಮ್ಮಲ್ಲನೇಕರಿಗೆ ಗೊತ್ತಿರಬಹುದು
- ನನಗೆ ಅವರ ಪುಟ್ಟ ಕವನವೊಂದನ್ನು ಓದಬೇಕೆನಿಸುತ್ತಿದೆ.
ಆತ ತನ್ನ ಪ್ರೇಯಸಿ ಮೋಡ್ ಗಾನ್ ಗೆ ಬರೆದಿದ್ದ.
ಬರೆದಿದ್ದ.
ತನ್ನಿಂದ ಏನನ್ನು ಬಯಸಿದ್ದಳೋ ಅದನ್ನು ಕೊಡಲು
ತನಗೆ ಸಾಧ್ಯವಾಗದಿದ್ದುದಕ್ಕಾಗಿ ದುಃಖಿಸಿದ್ದ.
ಆತ ಹೇಳಿದ " ನನ್ನಲ್ಲಿ ಏನೋಇದೆ. ಆದರೆ ಅದು ನಿನಗಾಗಿ ಅಲ್ಲದಿರಬಹುದು.
ಇದನ್ನು ಹೇಳುತ್ತಾನೆ.
ನನ್ನ ಬಳಿ ಸ್ವರ್ಗದ ಬಟ್ಟೆಗಳಲ್ಲಿ
ಬಂಗಾರದ ಕುಸುರಿ ಕೆಲಸದ
ಬೆಳ್ಳಿಯ ಬೆಳಕಿನ
ನೀಲಿ ಮತ್ತು ಮಸುಕಿನ
ಕಡುಬಣ್ಣದ ಬಟ್ಟೆಗಳು
ಇರುಳು ಮತ್ತು ಬೆಳಕು ಜತೆಗೆ ಅರ್ಧ ಬೆಳಕು ಇದ್ದಿದ್ದರೆ
ಆ ಬಟ್ಟೆಗಳನ್ನು ನಿನ್ನ ಪಾದದಡಿಯಲ್ಲಿ ಹಾಕುತ್ತಿದ್ದೆ.
ಆದರೆ ನಾನು - ಬಡವನಾದ ನನ್ನ
ಬಳಿ ಇರುವುದು ಬರೀ ಕನಸು.
ಹರಡಿದ್ದೇನೆ ನನ್ನೆಲ್ಲ ಕನಸುಗಳನ್ನು.
ಹಗುರಾಗಿ ನಡೆ
ಏಕೆಂದರೆ ನೀನು ನಡೆಯುತ್ತಿರುವುದು ನನ್ನ ಕನಸುಗಳ ಮೇಲೆ .
ಮತ್ತು ಪ್ರತಿ ದಿನ,ಎಲ್ಲೆಡೆ
ನಮ್ಮ ಮಕ್ಕಳು ತಮ್ಮ ಕನಸುಗಳನ್ನು ನಮ್ಮ ಪಾದಗಳಡಿ ಹರಡುತ್ತಾರೆ.
ನಾವು ಹಗುರಾಗಿ ಹೆಜ್ಜೆಯಿಡೋಣ.
ಧನ್ಯವಾದಗಳು.
(ಚಪ್ಪಾಳೆ)
ತುಂಬ ಧನ್ಯವಾದಗಳು.