ಜನರು ಪ್ರತಿದಿನ ನಿರ್ಣಯಗಳನ್ನು ಮಾಡುತ್ತಾರೆ.
ಉದಾಹರಣೆಗೆ, ನೀವು ಹೊರಗೆ ಹೋಗುವ ಮುಂಚೆ
"ಒಂದುವೇಳೆ" ಅನ್ನೋ ವಾಕ್ಯಗಳನ್ನು ಕೇಳಬಹುದು.
ಒಂದುವೇಳೆ ಮಳೆ ಬಂದರೆ ನಾನು ನನ್ನ
ರೈನ್ ಕೋಟ್ ಅನ್ನು ತೆಗೆದುಕೊಳ್ಳಬೇಕು.
ಕಂಪ್ಯೂಟರ್ ಗಳು ತುಂಬಾ ಅದ್ಭುತ. ನೀವು ಅಂಥ
ಹೇಳಿಕೆಗಳನ್ನು ನಿರ್ಣಯಿಸಿದ ಕೂಡಲೇ ಅವನ್ನು
ನಂಬಲಾಗದ ವೇಗದಲ್ಲಿ ಅಚ್ಚರಿಮೂಡಿಸುವ
ವಿಧಗಳಲ್ಲಿ ಕಾರ್ಯರೂಪಕ್ಕೆ ಹಾಕುತ್ತದೆ.
ಹಾಗಾಗಿ, ಕಂಪ್ಯೂಟರ್ ಪ್ರೋಗ್ರಾಮ್ ನಲ್ಲಿ ಒಂದ್ಚೂರು
ಗಣಿತ ಇರುತ್ತದೆ
ಮತ್ತು ನಿರ್ಣಗಳನ್ನು ಮಾಡುವ
ಕೆಲವು "ಒಂದುವೇಳೆ" ಹೇಳಿಕೆಗಳಿರುತ್ತದೆ.
ಹಾಗಾಗಿ ಈ ಪಜಲ್ ನಲ್ಲಿ,
ಝಾಂಬಿಗೆ "ಒಂದುವೇಳೆ" ಬ್ಲಾಕ್
ಸರಿಯಾದ ನಿರ್ಣಯ ತೆಗೆದುಕೊಳ್ಳಲು
ನೆರವಾಗುತ್ತದೆ. ಅದು ಒಂದನ್ನು ಪರಿಶೀಲಿಸುತ್ತದೆ.
ಉದಾಹರಣೆಗೆ, ಒಂದುವೇಳೆ ಎಡಗೆಡೆ ದಾರಿ
ಇರಬಹುದಾ ಅನ್ನೋ ಬ್ಲಾಕ್ ಅನ್ನು ಉಪಯೋಗಿಸೋಣ.
ಮತ್ತು ಎಡಕ್ಕೆ ತಿರುಗಿ ಅನ್ನೋ
ಅದೇಶವನ್ನು ಅದರೊಳಗೆ ಹಾಕೋಣ.
ಹಾಗಾಗಿ, ನಾನು ಝಾಂಬಿಗೆ ಅದರ
ಸುತ್ತಮುತ್ತಲು ಪರಿಶೀಲಿಸುವಂತೆ
ಮತ್ತು ಎಡಕ್ಕೆ ದಾರಿ ಇದೆಯಾ ಅಂತ ಪರಿಶೀಲಿಸುವಂತೆ
ಹೇಳುತ್ತಿದ್ದೇವೆ.
ಒಂದುವೇಳೆ ದಾರಿ ಇದ್ದರೆ ಅಲ್ಲಿ
ತಿರುಗುವಂತೆ ಹೇಳುತ್ತಿದ್ದೇವೆ.
ನಂತರ ನಾವು "ಮೂವ್ ಫಾರ್ವರ್ಡ್" ಬ್ಲಾಕ್
ಅನ್ನು ಈ "ರಿಪೀಟ್" ಬಾಕ್ಸ್ ಲ್ಲಿ ಹಾಕುತ್ತೇವೆ.
ಹೀಗೆ, ಅದು ನೇರವಾಗಿ ಚಲಿಸುವ ವರೆಗೆ
ಪುನರಾವರ್ತಿಸುವಂತೆ ಹೇಳುತ್ತಿದ್ದೇವೆ.
ಮತ್ತು ಎಲ್ಲಾದರೂ ಟರ್ನ್ ಸಿಕ್ಕಿದರೆ ಈ "ಒಂದುವೇಳೆ"
ಬಾಕ್ಸ್ ಅಲ್ಲಿ ಎಡಕ್ಕೆ ತಿರುಗುವಂತೆ ಹೇಳುತ್ತದೆ.
ನೀವು ನೋಡುವ ಹಾಗೆ, ನಾವು ಅದನ್ನು ಮಾಡುವಾಗ ಎಡಕ್ಕೆ
ತಿರುಗಲು ಜಾಗವಿದ್ದರೆ ತಿರುಗುತ್ತಾ ಇಲ್ಲದಿದ್ದರೆ
ನೇರವಾಗಿ ಚಲಿಸುತ್ತಾ ಇರುವಾಗ
ನಾವು ನಮ್ಮ ಗುರಿಯನ್ನು ಮುಟ್ಟುತ್ತೇವೆ.
ಇದು, "ಒಂದುವೇಳೆ" ಅನ್ನೋ ಹೇಳಿಕೆಯನ್ನು
ಉಪಯೋಗಿಸುವುದಕ್ಕೆ ಒಂದು ಉದಾಹರಣೆ ಅಷ್ಟೆ
ಇದು ಕಂಪ್ಯುಟರ್ ಪ್ರೋಗ್ರಾಮಿಂಗ್
ನಲ್ಲಿ ಒಂದು ಮೂಲಭೂತ ಪರಿಕಲ್ಪನೆ.
ನಾನು ಕಲಿತಂತ ಮೊದಲ ಕೆಲವು ವಿಷಯಗಳಲ್ಲಿ ಒಂದು
ಟಿಕ್-ಟಾಕ್-ಟೋ ಆದಲು ಪ್ರೋಗ್ರಾಮ್ ಅನ್ನು ಬರೆಯೋದು.
ನಿಮಗೆ ಗೊತ್ತಿದೆ "ಒಂದುವೇಳೆ"
ಹೇಳಿಕೆ ಮಾಡುವುದಾದರೆ,
ಒಂದುವೇಳೆ ನನ್ನ ಜೊತೆ ಆಡುತ್ತಿರುವ
ವ್ಯಕ್ತಿ ಗೆಲ್ಲುವ ಹಂತದಲ್ಲಿದ್ದರೆ,
ಮುಂದಕ್ಕೆ ಹೋಗಿ ಆ ಜಾಗವನ್ನು ಬ್ಲಾಕ್ ಮಾಡು.
ಹಾಗಾದರೆ, "ಒಂದುವೇಳೆ" ಹೇಳಿಕೆಗಳು ಬಹು
ಮುಖ್ಯ ಪರಿಕಲ್ಪನೆ. ಅದನ್ನು ಕಲಿಯುತ್ತಾ ಆನಂದಿಸಿ!