ಇದು ಪ್ಯಾರಾಮೀಟರ್‌ ಜೊತೆಗೆ ಹಾಡು ಬರೆಯುವ ಅಧ್ಯಾಯ. ಇಲ್ಲಿ ಕೆಲವು ಹಾಡುಗಳನ್ನು ನಾವು ಬರೆಯುತ್ತೇವೆ. ಕೆಲವು ಬಾರಿ ನೀವು ಹಾಡುವಾಗ ಕೋರಸ್ ಸ್ವಲ್ಪ ಬೇರೆ ರೀತಿ ಇರುತ್ತದೆ. ಓಲ್ಡ್‌ ಮೆಕ್‌ಡೊನಾಲ್ಡ್ ಹ್ಯಾಡ್ ಎ ಫಾರ್ಮ್‌ ನೆನಪಿದೆಯೇ? ಪ್ರತಿ ಪ್ರಾಣಿಗೂ ಕೋರಸ್ ಸ್ವಲ್ಪ ಬೇರೆ ಇದೆ ಆನ್ ದಟ್ ಫಾರಂ ಹಿ ಹ್ಯಾಡ್ ಎ ಕೌ.. ಈಯಾಯಿಯಾಓ ಕೋರಸ್‌ನಲ್ಲಿನ ಸಣ್ಣ ಬದಲಾವಣೆಯನ್ನು ನಾವು ಪ್ಯಾರಾಮೀಟರ್ ಬಳಸಿ ತೋರಿಸಬಹುದು. ಕೆಲವು ಬಾರಿ ಫಂಕ್ಷನ್‌ಗಳಿಗೆ ಪ್ಯಾರಾಮೀಟರ್ ಅಗತ್ಯವಿರುತ್ತದೆ ಪ್ಯಾರಾಮೀಟರ್ ಎಂಬುದು ಹೆಚ್ಚುವರಿ ಮಾಹಿತಿಯ ತುಣುಕು ಅಗತ್ಯಕ್ಕೆ ತಕ್ಕಂತೆ ಕಸ್ಟಮೈಸ್ ಮಾಡಲು ನೀವು ಇದನ್ನು ಪಾಸ್ ಮಾಡಬಹುದು. ಸ್ನೇಹಿತರ ಜೊತೆಗೆ ಐಸ್‌ಕ್ರೀಮ್ ಸಂಡೇಸ್ ಮಾಡುವಾಗ ಕಂಪ್ಯೂಟರ್ ಪ್ರೋಗ್ರಾಮ್‌ನಲ್ಲಿ ಪ್ಯಾರಾಮೀಟರ್ ರೀತಿ ಪ್ರಕ್ರಿಯೆಯನ್ನು ನೀವು ಬಳಸುತ್ತಿರುತ್ತೀರಿ. ಪ್ರತಿ ಸಂಡೆಗೆ ವೆನಿಲ್ಲಾ ಐಸ್ ಕ್ರೀಮ್‌ನ ಡಿಸ್ಕ್ ಒಂದೇ ರೀತಿ ಇರುತ್ತದೆ. ಆದರೆ, ಎರಡರಲ್ಲಿ ಯಾವ ಟಾಪಿಂಗ್ಸ್ ಇಷ್ಟ ಎಂದು ಸ್ನೇಹಿತರನ್ನು ಕೇಳಿದರೆ ಬೇರೆ ಬೇರೆ ಕಾಂಬಿನೇಶನ್ ಸಿಗುತ್ತದೆ. ಟಾಪಿಂಗ್ ಎಂಬುದು ಫಂಕ್ಷನ್ ಹೆಸರು. ಆದರೆ, ಪ್ರತಿ ವಿಧದ ಟಾಪಿಂಗ್‌ ಒಂದು ಪ್ಯಾರಾಮೀಟರ್. ಫಂಕ್ಷನ್, ಪ್ಯಾರಾಮೀಟರ್ ಒಟ್ಟಾಗಿ ಕೆಲಸ ಮಾಡಿ ಉತ್ತಮ ಕಂಪ್ಯೂಟರ್ ಪ್ರೋಗ್ರಾಮ್ ಆಗುತ್ತವೆ. ಉತ್ತಮ ಸಂಡೆ ಕೂಡ ಆಗುತ್ತವೆ.