ದಕ್ಷ ಪ್ರೋಗ್ರಾಮ್ ಭಾಗವಾಗಿ ನೀವು ಫಂಕ್ಷನ್‌ಗಳ ಬಳಕೆ ಮತ್ತು ಎಡಿಟ್ ಮಾಡಲು ಕಲಿತಿದ್ದೀರಿ. ಈಗ, ಆರಂಭದಿಂದ ಫಂಕ್ಷನ್ ರಚನೆ ಮತ್ತು ಬಳಕೆ ಮಾಡುವುದು ಹೇಗೆಂದು ಕಲಿಯೋಣ. ಇದಕ್ಕೆ, ಟೂಲ್‌ಬಾಕ್ಸ್‌ನಲ್ಲಿ ಫಂಕ್ಷನ್‌ಗಳು ಎಂಬ ಕ್ಯಾಟಗರಿಯನ್ನು ನೋಡಿ. "ಡೂ ಸಮ್‌ಥಿಂಗ್" ಎಂಬ ಬ್ಲಾಕ್ ಇಲ್ಲಿದೆ. ಅದನ್ನು ನಿಮ್ಮ ವರ್ಕ್‌ಸ್ಪೇಸ್‌ಗೆ ಎಳೆಯಿರಿ. ಹೆಸರು ಬದಲಿಸಿ. ನಿಮ್ಮ ಫಂಕ್ಷನ್ ಕಾರ್ಯವನ್ನು ಇದು ಉತ್ತಮವಾಗಿ ವಿವರಿಸುವಂತಿರಲಿ. "ಸ್ಕ್ವೇರ್ ಮಾಡಿ" ಎಂದು ನಾನು ಹೆಸರಿಸುತ್ತೇನೆ. ಇಲ್ಲಿಂದ ಫಂಕ್ಷನ್‌ಗೆ ಬ್ಲಾಕ್ ಎಳೆದು ಫಂಕ್ಷನ್ ಬಳಸಿದಾಗ ಏನಾಗಬೇಕು ಎಂದು ನಿರ್ದಿಷ್ಟ ಮಾಡಬಹುದು. ನಮ್ಮ ಫಂಕ್ಷನ್ ರಚನೆ ಮಾಡಿದ್ದರಿಂದ ಟೂಲ್‌ಬಾಕ್ಸ್‌ನ ಫಂಕ್ಷನ್ ಲೇಬಲ್‌ನಲ್ಲಿ ಸ್ಕ್ವೇರ್ ತಯಾರಿ ಬ್ಲಾಕ್ ಕಾಣಿಸುತ್ತದೆ. ಹೀಗಾಗಿ ನಾವು ನಮ್ಮ ಪ್ರೋಗ್ರಾಮ್‌ನಿಂದ ಫಂಕ್ಷನ್ ಅನ್ನು ಬಳಸಬಹುದು ಅಥವಾ ಕಾಲ್ ಮಾಡಬಹುದು. ಇದು ಪ್ರಮುಖ ಹಂತವಾಗಿದೆ. ಮುಂದುವರಿಯಲು ಮತ್ತು ನಿಮ್ಮ ಎರಡು ಫಂಕ್ಷನ್‌ಗಳಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡುವ ಸಮಯ ಇದು!