ನಮಸ್ಕಾರ, ನನ್ನ ಹೆಸರು ಟೋನಿ ಮತ್ತು ಇದು 'ಎವೆರಿ ಫ್ರೇಮ್ ಎ ಪೇಂಟಿಂಗ್' ಕೆಲವು ಚಿತ್ರನಿರ್ಮಾಪಕರು ಎಷ್ಟು ಪ್ರಭಾವಿಗಳೆಂದರೆ, ನೀವೆಲ್ಲಿ ನೋಡಿದರೂ ಅವರ ಛಾಯೆಯನ್ನು ನೋಡುವಿರಿ. ನಾನು ಈ ಚಿತ್ರನಿರ್ಮಾಪಕನ ಫ್ರೇಮ್ ಗಳನ್ನು ವೆಸ್ ಆಂಡರ್ಸನ್ ನ ಚಿತ್ರಗಳಲ್ಲಿ ನೋಡುತ್ತೇನೆ. ಆತನ ಸಾಹಸಗಳನ್ನು ಜಾಕಿ ಚಾನ್ ಚಿತ್ರಗಳಲ್ಲಿ, ಮತ್ತು ಆತನ ನಿರ್ಭಾವುಕ ಮುಖವನ್ನ ಬಿಲ್ ಮರ್ರೆ ಚಿತ್ರಗಳಲ್ಲಿ ನೋಡುತ್ತೇನೆ. ಅದು ಮತ್ಯಾರೂ ಅಲ್ಲ, ಬಸ್ಟರ್ ಕೀಟನ್, ಮೂಕಿ ಹಾಸ್ಯಚಿತ್ರ ದಿಗ್ಗಜ ಮೂವರಲ್ಲಿ ಒಬ್ಬ.