ಹಾಯ್! ನಾನು ಕ್ಯಾತ್ಲೀನ್ ಕೆನಡಿ, ಸ್ಟಾರ್
ವಾರ್ ದ ಫೋರ್ಸ್ ಅವೇಕನ್ಸ್ ವಿನ ನಿರ್ಮಾಪಕಿ.
ಇವತ್ತು ನಮ್ಮ ಒಂದು ಸ್ಟಾರ್ ಜೊತೆ
ನೀವು ಕೆಲಸ ಮಾಡುತ್ತೀರ. ಅದರ ಹೆಸರು ಬಿಬಿ8.
ಬಿಬಿ8 ಅನ್ನೋದು ಗೋಳಾಕಾರದ ರೊಬೋಟ್.
ಅವನು ಮಾಡುವ ಪ್ರತಿಯೊಂದು,
ಅವನ ಪ್ರತಿಯೊಂದು ಚಲನವಲನಗಳು
ಕಂಪ್ಯೂಟರ್ ಸಾಫ್ಟ್ ವೇರ್
ನಿಂದ ನಿಯಂತ್ರಿಸಲ್ಪಡುತ್ತದೆ
ಗಣಕ ವಿಜ್ಞಾನ ಪ್ರತಿಯೊಂದು ಕ್ಷೇತ್ರದ ಮೇಲೆ
ಅಂದರೆ ಮಾರ್ಕೆಟಿಂಗ್ ನಿಂದ ಹಿಡಿದು ಆರೋಗ್ಯ ಆರೈಕೆ,
ಚಲನಚಿತ್ರ ಹೀಗೆ ಪ್ರತಿಯೊಂದು
ಕ್ಷೇತ್ರದ ಮೇಲೆ ಪ್ರಭಾವ ಬೀರುತ್ತದೆ
ನಿಜ ಏನೆಂದರೆ ಫೂರ್ಸ್ ಅವೇಕನ್ಸ್
ನಂತಹ ಚಲನಚಿತ್ರಗಳನ್ನು ಮಾಡಲು
ನೂರಾರು ಕಂಪ್ಯೂಟರ್
ಇಂಜಿನಿಯರ್ ಗಳು ಒಟ್ಟಿಗೆ ಕೆಲಸಮಾಡುತ್ತಾರೆ
ಹಾಯ್! ನನ್ನ ಹೆಸರು ರೇಚಲ್ ರೋಸ್, ನಾನು ಐಎಲ್
ಎಂನಲ್ಲಿ ಸೀನಿಯರ್ ಆರ್ ಡಿ ಇಂಜಿನೀಯರ್ ಆಗಿದ್ದೀನಿ.
ನಾನು ಆನಿಮೇಶನ್ ಮತ್ತು ಕ್ರಿಯೇಚರ್
ಅಭಿವೃದ್ಧಿ ತಂಡವನ್ನು ಮುಂದಾಳತ್ವ ವಹಿಸುತ್ತೀನಿ.
ಫೋರ್ಸ್ ಅವೇಕನ್ಸ್ ನಲ್ಲಿ
ಬರುವ ಪ್ರತಿಯೊಂದು ಪಾತ್ರಗಳು
ಆಕಾಶಗಂಗೆಯಲ್ಲಿ ನಿಜವಾಗ್ಲೂ ಇದೆ ಅನ್ನೋ ರೀತಿಯಲ್ಲಿ
ಬಿಂಬಿಸುವ ಹಾಗೆ ಅವುಗಳು ಚಲಿಸಲು ನೆರವಾಗುವ
ರಿಗ್ ಅನ್ನೋ ಭಾಗಗಳನ್ನು ಅಭಿವೃದ್ಧಿಪಡಿಸಲು
ಕಲಾಕಾರರಿಗೆ ಸಹಾಯಮಾಡುತ್ತೀನಿ
ಪ್ರೋಗ್ರಾಮಿಂಗ್ ನ ಮೂಲ
ಪರಿಕ್ಪನೆಯನ್ನು ತಿಳಿದುಕೊಳ್ಳಲು
ನಾವು ಮುಂದಿನ ಒಂದು ತಾಸು ನಮ್ಮ
ಸ್ವಂತ ಸ್ಟಾರ್ ವಾರ್ ಅನ್ನು ಬೆಳೆಸುತ್ತೇವೆ
ಸಾಧಾರಣವಾಗಿ ಪ್ರೋಗ್ರಾಮಿಂಗ್
ಬರಹ ರೂಪದಲ್ಲಿ ಇರುತ್ತದೆ
ಆದರೆ ನಾವು ಇಲ್ಲಿ ಬ್ಲಾಕ್
ಗಳನ್ನು ಉಪಯೋಗಿಸತ್ತೇವೆ.
ಆಗ ಅದನ್ನು ಎಳೆದು ಆ ಕಡೆ ಈಕಡೆ ಸರಿಸೋ
ಮೂಲಕ ನಾವು ಪ್ರೋಗ್ರಾಮ್ ಅನ್ನು ಬರೆಯಬಹುದು.
ಅದರ ಒಳಗೇ ನಾವು ಕೋಡ್
ಗಳನ್ನು ಅಭಿವೃದ್ಧಿಪಡಿಸುತ್ತಿರುತ್ತೇವೆ.
ನೀವು ಬ್ಲಾಕ್ ಗಳನ್ನು ಉಪಯೋಗಿಸಿ
ಮೂಲಭೂತ ವಿಷಯಗಳನ್ನು ಪ್ರಯತ್ನಿಸಿದ ನಂತರ
ವೆಬ್ ನಲ್ಲಿ ತುಂಬ ಹೆಸರುವಾಸಿಯಾದ ಪ್ರೋಗ್ರಾಮಿಂಗ್
ಭಾಷೆಯಾದ ಜಾವಾಗೆ ಬದಲಾಯಿಸುತ್ತೇವೆ.
ನಾವೀಗ ರೇ ಜೊತೆಗೆ ಸೇರಿ
ಬಿಬಿ8ವನ್ನು ಪ್ರೋಗ್ರಾಮ್ ಮಾಡೋಣ.
ಮೊದಲು ಬಿಬಿ8ರ ಎಲ್ಲಾ ಬಿಡಿ
ಭಾಗಗಳನ್ನು ಸಂಗ್ರಹಿಸೋಣ.
ನಿಮ್ಮ ಪರದೆಯನ್ನು ಮೂರು ಭಾಗಗಳಾಗಿ ವಿಂಗಡಿಸೋಣ.
ಎಡಭಾಗ ಸ್ಟಾರ್ ವಾರ್ ಗೇಮ್ ನ
ಜಾಗ ಇಲ್ಲಿ ಕೋಡ್ ರನ್ ಆಗುತ್ತದೆ.
ಅದರ ಕೆಳೆಗೆ ಪ್ರತಿ ಹಂತದ
ಆದೇಶಗಳನ್ನು ಬರೆಯಲಾಗುತ್ತದೆ.
ಮಧ್ಯದ ಭಾಗದಲ್ಲಿರೋದು ಟೂಲ್ ಬಾಕ್ಸ್.
ಇಲ್ಲಿರುವ ಪ್ರತಿಯೊಂದು ಬ್ಲಾಕ್ ಗಳು ಬಿಬಿ-8
ಅರ್ಥಮಾಡಿಕೊಳ್ಳಲು ಬೇಕಾದ ಕಮಾಂಡ್ ಆಗಿವೆ.
ಬಲಭಾಗದಲ್ಲಿರುವ ಖಾಲಿ ಜಾಗವನ್ನು
ವರ್ಕ್ ಸ್ಪೇಸ್ ಅಂತ ಕರೆಯುತ್ತೇವೆ
ಮತ್ತು ಇಲ್ಲಿ ನಾವು ಪ್ರೋಗ್ರಾಮ್
ಗಳನ್ನು ನಿರ್ಮಿಸುತ್ತೇವೆ.
ನಾನು ಎಡಭಾಗದಲ್ಲಿರುವ ಬ್ಲಾಕ್ ಅನ್ನು ಎಳೆದು
ವರ್ಕ್ ಸ್ಪೇಸ್ ಮೇಲೆ ತಂದು ರನ್
ಅಂತ ಕ್ಲಿಕ್ಕಿಸಿದರೆ ಏನಾಗುತ್ತದೆ?
ಗ್ರಿಡ್ ಮೇಲೆ ಬಿಬಿ-8 ಒಂದು
ಬ್ಲಾಕ್ ನಷ್ಟು ಎಡಗಡೆ ಚಿಲಸುತ್ತದೆ.
ಈಗ ಬಿಬಿ-8 ಎಡಗಡೆ ಚಿಲಿಸಿದ ನಂತರ ಅದು ಬೇರೆ
ಏನಾದರೂ ಒಂದು ಕ್ರಿಯೆ ಮಾಡಬೇಕು ಅಂತ ನಾನು ಬಯಸಿದರೆ
ನಾನು ನಮ್ಮ ಪ್ರೋಗ್ರಾಮ್ ಗೆ
ಮತ್ತೊಂದು ಬ್ಲಾಕ್ ಅನ್ನು ಸೇರಿಸಬಹುದು.
ಈಗ ನಾನು ಮೂವ್ ಅಪ್ ಅನ್ನು ಎಳೆದು
ಹೈಲೈಟರ್ ಕಾಣಿಸಿಕೊಳ್ಳುವಾಗ ಅದನ್ನು
ಮೂವ್ ಲೆಫ್ಟ್ ಅನ್ನೋ ಬ್ಲಾಕ್ ಕೆಳೆಗೆ ಬಿಡುವಾಗ
ಎರಡು ಬ್ಲಾಕ್ ಗಳು ಕಚ್ಕೊಳ್ಳುತ್ತವೆ.
ಮತ್ತೆ ನಾನು ರನ್ ಅನ್ನು ಕ್ಲಿಕ್ಕಿಸಿದರೆ
ವರ್ಕ ಸ್ಪೇಸ್ ನಾವು ಮೇಲಿಂದ ಕೆಳಗೆ ಜೋಡಿಸಿರುವ
ಕಮ್ಯಾಂಡ್ ಅನ್ನು ಬಿಬಿ-8 ಅನುಸರಿಸುತ್ತದೆ.
ನೀವು ಯಾವುದಾದರೂ ಬ್ಲಾಕ್
ಅನ್ನು ಡಿಲೀಟ್ ಮಾಡಬೇಕಿದ್ದರೆ
ಆ ಬ್ಲಾಕ್ ಅನ್ನು ನೀವು ಪುನಃ
ಟೂಲ್ ಬಾಕ್ಸ್ ಗೆ ಎಳೆದು ತರಬಹುದು.
ನೀವು ರನ್ ಅನ್ನು ಕ್ಲಿಕ್ಕಿಸಿದ ನಂತರ
ಯಾವಾಗ ಬೇಕಾದರೂ ರೀಸೆಟ್ ಬಟನ್ ಅನ್ನು ಕ್ಲಿಕ್ಕಿಸಿ
ಬಿಬಿ-8ಅನ್ನು ಅದರ ಆರಂಭದ ಜಾಗಕ್ಕೆ ತರಬಹುದು.
ಈಗ ಶುರುಮಾಡೋಣ!