WEBVTT 00:00:00.000 --> 00:00:04.000 10 ವರ್ಷಗಳ ಹಿಂದೆ, ನಾನು ಪ್ರಪಂಚದ ಅಭಿವೃದ್ಧಿ ಬೋಧನೆಯನ್ನು 00:00:04.000 --> 00:00:08.000 ಸ್ವೀಡಿಶ್ ಪದವಿಪೂರ್ವ ವಿದ್ಯಾರ್ಥಿಗಳಿಗೆ ಮಾಡುವ ಕೆಲಸ ಒಪ್ಪಿಕೊಂಡೆ. ಅದು 00:00:08.000 --> 00:00:12.000 20 ವರ್ಷಗಳ ಕಾಲ ಆಫ್ರಿಕಾದಲ್ಲಿ ಹಸಿವಿನ ಬಗ್ಗೆ ಆಫ್ರಿಕನ್ ಸಂಸ್ಥೆಗಳಲ್ಲಿ ಅಧ್ಯಯನ 00:00:12.000 --> 00:00:16.000 ನಡೆಸುತ್ತಿದ್ದಾಗ, ಹಾಗಾಗಿ ನಾನು ಪ್ರಪಂಚದ ಬಗ್ಗೆ ಅಷ್ಟಿಷ್ಟು ತಿಳಿದುಕೊಂಡಿರಬೇಕಾದ ಅಗತ್ಯವಿತ್ತು. 00:00:16.000 --> 00:00:21.000 ಹಾಗೂ ನಮ್ಮ ವೈದ್ಯಕೀಯ ವಿಶ್ವವಿದ್ಯಾಲಯ, ಕರೋಲಿನ್ಸ್ಕಾ ಇನ್ಸ್ಟಿಟ್ಯೂಟ್ ನಲ್ಲಿ 00:00:21.000 --> 00:00:25.000 ಗ್ಲೋಬಲ್ ಹೆಲ್ತ್ ಎಂಬ ಪದವಿಪೂರ್ವ ಕೋರ್ಸ್ ಪ್ರಾರಂಭಿಸಿದೆ. ಆದರೆ ನಿಮಗೆ 00:00:25.000 --> 00:00:28.000 ಅಂತಹ ಅವಕಾಶ ದೊರಕಿದರೆ, ನೀವು ಸ್ವಲ್ಪ ಧೈರ್ಯಹೀನರಾಗುತ್ತೀರ. ನಾನಂದುಕೊಂಡೆ, ಈ ವಿದ್ಯಾರ್ಥಿಗಳು 00:00:28.000 --> 00:00:31.000 ನಮ್ಮಲ್ಲಿಗೆ ಬರುವ ಮೊದಲು ಸ್ವೀಡಿಶ್ ಕಾಲೇಜು ವ್ಯವಸ್ಥೆಗಳಲ್ಲಿ ಅತಿ ಹೆಚ್ಚು 00:00:31.000 --> 00:00:34.000 ಗ್ರೇಡ್ ಗಳಿಸಿರಬಹುದೆಂದು -- ಅವರಿಗೆ ಎಲ್ಲವೂ ತಿಳಿದಿರಬಹುದು 00:00:34.000 --> 00:00:38.000 ನಾನೇನು ಅವರಿಗೆ ಬೋಧಿಸುತ್ತೇನೆಂದು. ಆದ್ದರಿಂದ ಅವರು ಬಂದಾಗ ನಾನೊಂದು ಪೂರ್ವ ಪರೀಕ್ಷೆ ನಡೆಸಿದೆ. 00:00:38.000 --> 00:00:41.000 ಹಾಗೂ ನಾನು ಸಾಕಷ್ಟು ಅರಿತುಕೊಂಡ ಒಂದು ಪ್ರಶ್ನೆ ಇದು. 00:00:41.000 --> 00:00:45.000 "ಈ ಐದು ಜೊತೆಗಳಲ್ಲಿ ಯಾವ ದೇಶದಲ್ಲಿ ಶಿಶುಮರಣ ದರ ಅತಿ ಹೆಚ್ಚು?" NOTE Paragraph 00:00:45.000 --> 00:00:49.000 ಅದನ್ನು ನಾನು ಹೀಗೆ ಹೇಳುತ್ತೇನೆ, ಪ್ರತಿ ಜೊತೆ ದೇಶಗಳಲ್ಲಿ 00:00:49.000 --> 00:00:54.000 ಒಂದರಲ್ಲಿ ಶಿಶುಮರಣ ದರ ಇನ್ನೊಂದಕ್ಕಿಂತ ಎರಡರಷ್ಟಿದೆ. ಹಾಗೆಂದರೆ 00:00:54.000 --> 00:00:59.000 ಈ ವ್ಯತ್ಯಾಸ ನಿಶ್ಚಯವಿಲ್ಲದ ಮಾಹಿತಿಗಿಂತ ಹೆಚ್ಚು. 00:00:59.000 --> 00:01:01.000 ಇಲ್ಲಿ ನಾನು ನಿಮಗೆ ಪರೀಕ್ಷೆ ಇಡುವುದಿಲ್ಲ, ಆದರೆ ಅದು ಟರ್ಕಿ, 00:01:01.000 --> 00:01:06.000 ಅಲ್ಲಿ ಎಲ್ಲಕಿಂತ ಹೆಚ್ಚು, ಪೋಲೆಂಡ್, ರಷ್ಯಾ, ಪಾಕಿಸ್ತಾನ್ ಮತ್ತು ದಕ್ಷಿಣ ಆಫ್ರಿಕಾ. 00:01:06.000 --> 00:01:09.000 ಸ್ವೀಡಿಶ್ ವಿದ್ಯಾರ್ಥಿಗಳ ಫಲಿತಾಂಶಗಳು ಹೀಗಿದ್ದವು. ನಾನು ಮಾಡಿದೆ 00:01:09.000 --> 00:01:12.000 ಅದರಿಂದ ನನಗೆ ತುಂಬಾ ಸಂಕುಚಿತವಾಗಿರುವ ಭರವಸೆ ಅಂತರ ದೊರಕಿತು, ನನಗೆ ಸಂತಸವಾಯಿತು: 00:01:12.000 --> 00:01:16.000 ಐದು ಸಾಧ್ಯತೆಗಳಲ್ಲಿ 1.8 ಸರಿಯಾದ ಉತ್ತರ. ಅಂದರೆ ಇದರ ಅರ್ಥ 00:01:16.000 --> 00:01:19.000 ಅಂತಾರಾಷ್ಟ್ರೀಯ ಆರೋಗ್ಯ ಪ್ರೊಫೆಸರ್ ಗೆ ಇಲ್ಲಿ ಅವಕಾಶವಿದೆ -- 00:01:19.000 --> 00:01:21.000 (ನಗು) ಅದೂ ನನ್ನ ಕೂರ್ಸ್ ಗೆ. NOTE Paragraph 00:01:21.000 --> 00:01:25.000 ಆದರೆ, ಒಂದು ದಿನ ತಡರಾತ್ರಿಯಲ್ಲಿ, ನಾನು ವರದಿಯನ್ನು ತಯಾರಿಸುತ್ತಿದ್ದಾಗ 00:01:25.000 --> 00:01:29.000 ನನ್ನ ಅವಿಷ್ಕಾರದ ಬಗ್ಗೆ ನನಗೆ ಅರಿವಾಯಿತು 00:01:29.000 --> 00:01:34.000 ಸ್ವೀಡಿಶ್ ಬುದ್ಧಿವಂತ ವಿದ್ಯಾರ್ತಿಗಳಿಗೆ ಸಂಖ್ಯಾನುಸಾರ ಪ್ರಪಂಚದ ಬಗ್ಗೆ 00:01:34.000 --> 00:01:36.000 ಚಿಂಪಾಂಜಿಗಳಿಗಿಂತ ಕಡಿಮೆ ಗೊತ್ತಿದೆ. 00:01:36.000 --> 00:01:38.000 (ನಗು) 00:01:38.000 --> 00:01:42.000 ಏಕೆಂದರೆ ಚಿಂಪಾಂಜಿಗಳಿಗೆ ನಾನು ಎರಡು ಬಾಳೆಹಣ್ಣು ಕೊಟ್ಟು ಶ್ರೀಲಂಕವೇ ಅಥವಾ 00:01:42.000 --> 00:01:45.000 ಟರ್ಕಿಯೇ ಎಂದು ಕೇಳಿದರೆ ಅರ್ಧ ಉತ್ತರ ಸರಿಯಾಗಿ ಹೇಳುತ್ತವೆ. ಅವುಗಳ ಅರ್ಧದಷ್ಟು ಉತ್ತರಗಳು ಸರಿಯಿರುತ್ತವೆ. NOTE Paragraph 00:01:45.000 --> 00:01:49.000 ಆದರೆ ವಿದ್ಯಾರ್ಥಿಗಳು ಆ ಮಟ್ಟದಲ್ಲಿಲ್ಲ. ನನ್ನ ಸಮಸ್ಯೆ ಬುದ್ಧಿಹೀನತೆ ಆಗಿರಲಿಲ್ಲ: 00:01:49.000 --> 00:01:52.000 ಅದು ಪೂರ್ವಭಾವನೆಗಳು. NOTE Paragraph 00:01:52.000 --> 00:01:56.000 ನಾನು ಕರೋಲಿನ್ಸ್ಕಾ ಇನ್ಸ್ಟಿಟ್ಯೂಟ್ ನ ಪ್ರೊಫೆಸರ್ ಗಳನ್ನು ಅನೀತಿಯುತವಾಗಿ ಅಭ್ಯಾಸಮಾಡಿದೆ. 00:01:56.000 --> 00:01:57.000 (ನಗು) 00:01:57.000 --> 00:01:59.000 -- ಈ ಸಂಸ್ಥೆ ವೈದ್ಯಶಾಸ್ತ್ರದಲ್ಲಿ ನೋಬೆಲ್ ಬಹುಮಾನ ಕೊಡುತ್ತದೆ, 00:01:59.000 --> 00:02:01.000 ಹಾಗೂ ಅವರು ಅಲ್ಲಿ ಚಿಂಪಾಂಜಿಗೆ ಸಮವಾಗಿದ್ದಾರೆ. 00:02:01.000 --> 00:02:04.000 (ನಗು) 00:02:04.000 --> 00:02:08.000 ಸಂಪರ್ಕದ ಅವಶ್ಯಕತೆಯಿದೆಯೆಂದು ನನಗೆ ಅರ್ಥವಾಗಿದ್ದು ಇಲ್ಲಿಯೇ, 00:02:08.000 --> 00:02:11.000 ಏಕೆಂದರೆ ಪ್ರಪಂಚದಲ್ಲಿ ಏನು ನಡೆಯುತ್ತಿದೆಯೆಂಬ ಮಾಹಿತಿ 00:02:11.000 --> 00:02:14.000 ಹಾಗೂ ಪ್ರತಿ ರಾಷ್ಟ್ರದ ಶಿಶು ಆರೋಗ್ಯ ಎಲ್ಲರಿಗೂ ತಿಳಿದದ್ದೆ. NOTE Paragraph 00:02:14.000 --> 00:02:19.000 ನಾವು ಈ ಸಾಫ್ಟ್ವೇರ್ ಸಿದ್ಧಪಡಿಸಿದೆವು, ಅದು ಹೀಗೆ ತೋರಿಸುತ್ತದೆ: ಇಲ್ಲಿ ಪ್ರತಿ ಗುಳ್ಳೆ ಒಂದು ದೇಶ. 00:02:19.000 --> 00:02:25.000 ಇಲ್ಲಿ ಕಾಣಿಸುವ ಇದು ಚೀನಾ. ಇದು ಇಂಡಿಯಾ.®® 00:02:25.000 --> 00:02:31.000 ಗುಳ್ಳೆಯ ಗಾತ್ರ ಜನಸಂಖ್ಯೆ ಸೂಚಿಸುತ್ತದೆ, ಮತ್ತು ಈ ಅಕ್ಷದ ಮೇಲೆ ನಾನು ಫಲವತ್ತತೆ ನಮೂದಿಸುತ್ತೇನೆ. 00:02:31.000 --> 00:02:34.000 ಏಕೆಂದರೆ ನನ್ನ ವಿದ್ಯಾರ್ಥಿಗಳು, ಪ್ರಪಂಚದ ಕಡೆ ನೋಡಿದಾಗ 00:02:34.000 --> 00:02:36.000 ಅವರೇನೆಂದರು, ಮತ್ತು ನಾನು ಅವರನ್ನು ಕೇಳಿದೆ, 00:02:36.000 --> 00:02:38.000 "ನೀವು ಈ ಪ್ರಪಂಚದ ಬಗ್ಗೆ ನಿಜವಾಗಿಯೂ ಏನೆಂದುಕೊಂಡಿದ್ದೀರ?" 00:02:38.000 --> 00:02:42.000 ಸರಿ, ನಾನು ಕಂಡುಹಿಡಿದದ್ದೆಂದರೆ, ಮುಖ್ಯವಾಗಿ ಪಠ್ಯಪುಸ್ತಕ ಟಿನ್ಟಿನ್. 00:02:42.000 --> 00:02:43.000 (ನಗು) 00:02:43.000 --> 00:02:46.000 ಅವರು ಹೇಳಿದರು, "ಪ್ರಪಂಚ ಇನ್ನೂ ಕೂಡ ’ನಾವು’ ಮತ್ತು ’ಅವರು’ 00:02:46.000 --> 00:02:49.000 ನಾವು ಎಂದರೆ ಪಾಶ್ಚಿಮಾತ್ಯ ವಿಶ್ವ ಹಾಗೂ ಅವರು ಎಂದರೆ ತೃತೀಯ ವಿಶ್ವ."©© 00:02:49.000 --> 00:02:52.000 "ಪಾಶ್ಚಿಮಾತ್ಯ ವಿಶ್ವ ಎಂದರೇನು?" ಎಂದು ನಾನು ಕೇಳಿದೆ.® 00:02:52.000 --> 00:02:57.000 "ಅದು, ದೀರ್ಘ ಜೀವನ ಮತ್ತು ಚಿಕ್ಕ ಕುಟುಂಬ, ಹಾಗೂ ತೃತೀಯ ವಿಶ್ವ ಚಿಕ್ಕ ಜೀವನ ಮತ್ತು ದೊಡ್ಡ ಕುಟುಂಬ." NOTE Paragraph 00:02:57.000 --> 00:03:03.000 ಆದ್ದರಿಂದ ನಾನು ಇಷ್ಟನ್ನು ಮಾತ್ರ ತೋರಿಸಲು ಸಾಧ್ಯ. ಇಲ್ಲಿ ನಾನು ಫಲವತ್ತತೆ ಬರೆಯುತ್ತೇನೆ:ಒಬ್ಬ ಮಹಿಳೆಗಿರುವ™ 00:03:03.000 --> 00:03:07.000 ಮಕ್ಕಳ ಸಂಖ್ಯೆ, ಒಂದು, ಎರಡು, ಮೂರು, ನಾಲ್ಕು, ಒಬ್ಬ ಮಹಿಳೆಗೆ ಎಂಟು ಮಕ್ಕಳವರೆಗೂ. 00:03:07.000 --> 00:03:13.000 1962 -- 1960 ರಿಂದ ನಮ್ಮಲ್ಲಿ ಒಳ್ಳೆಯ ಮಾಹಿತಿ ಇದೆ -- ಎಲ್ಲ ದೇಶಗಳ ಕುಟುಂಬಗಳ ಗಾತ್ರದ ಬಗ್ಗೆ. 00:03:13.000 --> 00:03:16.000 ತಪ್ಪಿನ ಸಂಭವ ಬಹಳ ಕಡಿಮೆ. ಇಲ್ಲಿ ನಾನು ಜನನದ ಸಮಯದಲ್ಲಿ ಆಯಸ್ಸಿನ ನಿರೀಕ್ಷೆ ಹಾಕುತ್ತೇನೆ, 00:03:16.000 --> 00:03:20.000 ಕೆಲವು ದೇಶಗಳಲ್ಲಿ 30 ವರ್ಷಗಳು, ಕೆಲವು 70 ವರ್ಷಗಳವರೆಗೆ. 00:03:20.000 --> 00:03:23.000 ಹಾಗೂ 1962 ರಲ್ಲಿ, ಇಲ್ಲಿ ಕೆಲವು ದೇಶಗಳ ಗುಂಪು ಇತ್ತು. 00:03:23.000 --> 00:03:28.000 ಅವು ಕೈಗಾರಿಕೀಕೃತ ರಾಷ್ಟ್ರಗಳಾಗಿದ್ದುವು, ಅಲ್ಲಿ ಚಿಕ್ಕ ಕುಟುಂಬಗಳು ಮತ್ತು ದೀರ್ಘ ಜೀವನ ಇತ್ತು. 00:03:28.000 --> 00:03:30.000 ಹಾಗೂ ಇವು ಅಭಿವೃದ್ಧಿಶೀಲ ರಾಷ್ಟ್ರಗಳಾಗಿದ್ದುವು: 00:03:30.000 --> 00:03:33.000 ಅವು ದೊಡ್ಡ ಕುಟುಂಬಗಳನ್ನು ಹೊಂದಿದ್ದವು ಹಾಗೂ ಹೋಲಿಕೆಯಿಂದ ಚಿಕ್ಕ ಜೀವನ ಹೊಂದಿದ್ದವು. 00:03:33.000 --> 00:03:37.000 ಈಗ, 1962 ರಿಂದೀಚೆಗೆ ಏನಾಗಿದೆ? ನಾವು ಬದಲಾವಣೆ ನೋಡಬಯಸುತ್ತೇವೆ. 00:03:37.000 --> 00:03:40.000 ಈ ವಿದ್ಯಾರ್ಥಿಗಳು ಸರಿಯೇ? ಈಗಲೂ ಎರಡು ವಿಧದ ರಾಷ್ಟ್ರಗಳಿವೆಯೆ? 00:03:41.000 --> 00:03:44.000 ಅಥವಾ ಈ ಅಭಿವೃದ್ಧಿಶೀಲ ರಾಷ್ಟ್ರಗಳು ಚಿಕ್ಕ ಕುಟುಂಬ ಹೊಂದಿದ್ದು ಇಲ್ಲಿ ವಾಸಿಸುತ್ತಿವೆಯೆ? 00:03:44.000 --> 00:03:46.000 ಅಥವಾ ಅವುಗಳು ದೀರ್ಘವಾದ ಜೀವನ ಹೊಂದಿದ್ದು ಅಲ್ಲಿ ವಾಸಿಸುತ್ತಿವೆಯೆ? NOTE Paragraph 00:03:46.000 --> 00:03:49.000 ನಾವು ಈಗ ನೋಡೋಣ. ಆಗ ನಾವು ಪ್ರಪಂಚ ಸ್ಥಗಿತಗೊಳಿಸಿದೆವು. ಇವೆಲ್ಲ ಯು.ಎನ್. ಅಂಕಿ ಅಂಶಗಳು 00:03:49.000 --> 00:03:52.000 ಅವು ದೊರೆಯುತ್ತವೆ. ಈಗ ಪ್ರಾರಂಭಿಸೋಣ. ಇಲ್ಲಿ ನೀವು ನೋಡಬಲ್ಲಿರಾ? 00:03:52.000 --> 00:03:55.000 ಅಲ್ಲಿ ಚೀನಾ ಇದೆ, ಉತ್ತಮ ಆರೋಗ್ಯದ ಕಡೆ ಸಾಗುತ್ತಿದೆ, ಅಲ್ಲಿ ಅಭಿವೃದ್ಧಿಯಾಗುತ್ತಿದೆ. 00:03:55.000 --> 00:03:58.000 ಎಲ್ಲ ಹಸಿರು ಲ್ಯಾಟಿನ್ ಅಮೆರಿಕನ್ ದೇಶಗಳು ಚಿಕ್ಕ ಕುಟುಂಬಗಳ ಕಡೆ ಸಾಗುತ್ತಿವೆ. 00:03:58.000 --> 00:04:01.000 ನಿಮ್ಮ ಈ ಹಳದಿ ಬಣ್ಣಗಳು ಅರೇಬಿಕ್ ರಾಷ್ಟ್ರಗಳು, 00:04:01.000 --> 00:04:05.000 ಹಾಗೂ ಅವರು ದೊಡ್ಡ ಕುಟುಂಬಗಳನ್ನು ಹೊಂದಿದ್ದಾರೆ, ಆದರೆ ಅವರು -- ದೀರ್ಘ ಜೀವನವಿಲ್ಲ, ದೊಡ್ಡ ಕುಟುಂಬಗಳಿಲ್ಲ 00:04:05.000 --> 00:04:08.000 ಆಫ್ರಿಕನ್ನರು ಇಲ್ಲಿ ಕೆಳಗೆ ಹಸುರು ಬಣ್ಣ ನೋಡಿ. ಅವರಿನ್ನೂ ಇಲ್ಲಿಯೇ ಇದ್ದಾರೆ. 00:04:08.000 --> 00:04:11.000 ಇದು ಇಂಡಿಯಾ. ಇಂಡೋನೇಶಿಯಾ ಬಹಳ ವೇಗವಾಗಿ ಸಾಗುತ್ತಿದೆ. 00:04:11.000 --> 00:04:12.000 (ನಗು) 00:04:12.000 --> 00:04:15.000 ಹಾಗೂ 80 ರ ದಶಕದಲ್ಲಿ, ಇಲ್ಲಿ ಆಫ್ರಿಕನ್ ದೇಶಗಳ ನಡುವೆ ಬಂಗ್ಲಾದೇಶ ಇದೆ. 00:04:15.000 --> 00:04:18.000 ಆದರೆ ಈಗ, ಬಂಗ್ಲಾದೇಶ -- 80 ರ ದಶಕದಲ್ಲಿ ಒಂದು ಆಶ್ಚರ್ಯ ಸಂಭವಿಸುತ್ತದೆ: 00:04:18.000 --> 00:04:21.000 ಇಮಾಮ್ ಗಳು ಕುಟುಂಬ ಯೋಜನೆ ಪ್ರಾರಂಭಿಸುತ್ತಾರೆ. 00:04:21.000 --> 00:04:26.000 ಅವರು ಆ ಮೂಲೆಗೆ ಏರುತ್ತಾರೆ. ಮತ್ತು 90 ರ ದಶಕದಲ್ಲಿ ಕ್ರೂರವಾದ ಎಚ್.ಐ.ವಿ. ರೋಗ ಕಾಲಿಟ್ಟಿತು 00:04:26.000 --> 00:04:29.000 ಅದು ಆಫ್ರಿಕನ್ ದೇಶಗಳ ಆಯುರ್ಮಾನವನ್ನು ಕಡಿಮೆಮಾಡುತ್ತದೆ 00:04:29.000 --> 00:04:33.000 ಹಾಗೂ ಉಳಿದವರೆಲ್ಲರೂ ಆ ಮೂಲೆಗೆ ಸರಿಯುತ್ತಾರೆ, 00:04:33.000 --> 00:04:37.000 ದೀರ್ಘ ಜೀವನ ಮತ್ತು ಚಿಕ್ಕ ಕುಟುಂಬ ಇರುವಲ್ಲಿ, ಹಾಗೂ ನಾವು ಒಂದು ಸಂಪೂರ್ಣ ಹೊಸ ಪ್ರಪಂಚ ಹೊಂದಿದ್ದೇವೆ. 00:04:37.000 --> 00:04:50.000 (ಚಪ್ಪಾಳೆ) NOTE Paragraph 00:04:50.000 --> 00:04:55.000 ನಾನು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಮತ್ತು ವಿಯೆಟ್ನಾಮ್ ಎರಡರ ಮಧ್ಯೆ ಹೋಲಿಕೆ ಮಾಡೋಣ. 00:04:55.000 --> 00:05:00.000 1964: ಅಮೆರಿಕಾ ಚಿಕ್ಕ ಕುಟುಂಬ ಹಾಗೂ ದೀರ್ಘ ಜೀವನ ಹೊಂದಿತ್ತು; 00:05:00.000 --> 00:05:04.000 ವಿಯೆಟ್ನಾಮ್ ದೊಡ್ಡ ಕುಟುಂಬ ಮತ್ತು ಚಿಕ್ಕ ಜೀವನ ಹೊಂದಿತ್ತು. ಮತ್ತು ಹೀಗಾಗುತ್ತದೆ: 00:05:04.000 --> 00:05:10.000 ಯುದ್ಧದ ಅಂಕಿಅಂಶಗಳ ಪ್ರಕಾರ ಎಲ್ಲ ಸಾವುಗಳನ್ನು ಪರಿಗಣಿಸಿದರೂ, 00:05:10.000 --> 00:05:13.000 ಆಯುಷ್ಯ ಉತ್ತಮಗೊಂಡಿತ್ತು. ವರ್ಷದ ಕೊನೆಯಲ್ಲಿ 00:05:13.000 --> 00:05:16.000 ವಿಯೆಟ್ನಾಮ್ ನಲ್ಲಿ ಕುಟುಂಬ ಯೋಜನೆ ಪ್ರಾರಂಭವಾಯಿತು ಹಾಗೂ ಅವರು ಚಿಕ್ಕ ಸಂಸಾರಗಳನ್ನು ಆಯ್ಕೆಮಾಡಿದರು. 00:05:16.000 --> 00:05:19.000 ಹಾಗೂ ಅಲ್ಲಿ ಯುನೈಟೆಡ್ ಸ್ಟೇಟ್ಸ್ ದೀರ್ಘ ಜೀವನಕ್ಕೆ ಪ್ರಯತ್ನಿಸುತ್ತಿದೆ, 00:05:19.000 --> 00:05:22.000 ಚಿಕ್ಕ ಕುಟುಂಬ ಹಾಗೆಯೇ ಉಳಿಸಿಕೊಂಡು. ಮತ್ತು ಈಗ 80 ರ ದಶಕದಲ್ಲಿ, 00:05:22.000 --> 00:05:25.000 ಅವರು ಕಮ್ಯುನಿಸ್ಟ್ ಯೋಜನೆ ಬಿಡುತ್ತಾರೆ ಹಾಗೂ ಮಾರುಕಟ್ಟೆ ವಹಿವಾಟಿಗೆ ಒಲವು ತೋರಿಸುತ್ತಾರೆ, 00:05:25.000 --> 00:05:29.000 ಹಾಗೂ ಅದು ಸಾಮಾಜಿಕ ಜೀವನಕ್ಕಿಂತ ವೇಗವಾಗಿ ಚಲಿಸುತ್ತದೆ. ಈ ದಿನ ನಾವು 00:05:29.000 --> 00:05:34.000 ಅದೇ ಆಯುರ್ಮಾನ ಮತ್ತು ಅದೇ ಕುಟುಂಬ ಗಾತ್ರ ಇರುವ ವಿಯೆಟ್ನಾಮ್ ನ್ನು ಹೊಂದಿದ್ದೇವೆ 00:05:34.000 --> 00:05:41.000 ಈ ವಿಯೆಟ್ನಾಮ್, 2003 ರಲ್ಲಿ ಯುನೈಟೆಡ್ ಸ್ಟೇಟ್ಸ್ 1974 ರಲ್ಲಿ ಯುದ್ಧದ ಅಂತ್ಯದಲ್ಲಿ ಇದ್ದಂತೆ. 00:05:41.000 --> 00:05:45.000 ನನಗನ್ನಿಸುತ್ತದೆ, ನಾವೆಲ್ಲ -- ನಾವು ಈ ಮಾಹಿತಿಯ ಕಡೆ ನೋಡದಿದ್ದರೆ -- 00:05:45.000 --> 00:05:49.000 ಏಷಿಯಾದಲ್ಲಿ ಆಗಿರುವ ಮಹತ್ತರ ಬದಲಾವಣೆಗೆ ಕಡಿಮೆ ಬೆಲೆ ಕೊಡುತ್ತೇವೆ, ಅದು 00:05:49.000 --> 00:05:53.000 ನಾವು ನೋಡಿದ ಆರ್ಥಿಕ ಬದಲಾವಣೆಗೆ ಮೊದಲು ಬಂದ ಸಾಮಾಜಿಕ ಬದಲಾವಣೆ. NOTE Paragraph 00:05:53.000 --> 00:05:58.000 ನಾವು ಇನ್ನೊಂದು ರೀತಿಯ ವಿಶ್ಲೇಷಣೆ ಮಾಡೋಣ, ಇಲ್ಲಿ ನಾವು ತೋರಿಸಬಹುದು 00:05:58.000 --> 00:06:05.000 ಆದಾಯದ ಹಂಚಿಕೆ ಕ್ಷೇತ್ರ. ಇದು ಜನರ ಆದಾಯದ ವಿಶ್ವದ ಹಂಚಿಕೆ. 00:06:05.000 --> 00:06:10.000 ಒಂದು ಡಾಲರ್, 10 ಡಾಲರ್ ಗಳು ಅಥವಾ 100 ಡಾಲರ್ ಗಳು ದಿನಕ್ಕೆ. 00:06:10.000 --> 00:06:14.000 ಬಡವ ಮತ್ತು ಶ್ರೀಮಂತ ಇವರ ಮಧ್ಯೆ ಈಗ ಅಂತರವಿಲ್ಲ. ಇದೊಂದು ಕಲ್ಪನೆ. 00:06:14.000 --> 00:06:18.000 ಇಲ್ಲೊಂದು ಚಿಕ್ಕ ಉಬ್ಬು ಇದೆ. ಆದರೆ ಉದ್ದಕ್ಕೂ ಜನರಿದ್ದಾರೆ. 00:06:19.000 --> 00:06:23.000 ಹಾಗೆಯೇ ನಾವು ಈ ಆದಾಯ ಎಲ್ಲಿ ಕೊನೆಗೊಳ್ಳುತ್ತದೆ ಎಂದು ನೋಡಿದರೆ -- ಈ ಆದಾಯ -- 00:06:23.000 --> 00:06:29.000 ಇದು ಶೇಕಡ 100 ಪ್ರಪಂಚದ ಆದಾಯ. ಹಾಗೆಯೇ, ಶೇಕಡ 20 ಅತಿ ಶ್ರೀಮಂತರು, 00:06:29.000 --> 00:06:36.000 ಇದರಲ್ಲಿ ಶೇಕಡ 74 ತೆಗೆದುಕೊಳ್ಳುತ್ತಾರೆ. ಮತ್ತು ಶೇಕಡ 20 ಅತಿ ಬಡವರು, 00:06:36.000 --> 00:06:41.000 ಸುಮಾರು ಶೇಕಡ ಎರಡು ತೆಗೆದುಕೊಳ್ಳುತ್ತಾರೆ. ಇದು ಏನು ತೋರಿಸುತ್ತದೆಂದರೆ 00:06:41.000 --> 00:06:45.000 ಅಭಿವೃದ್ಧಿಶೀಲ ರಾಷ್ಟ್ರಗಳ ಪರಿಕಲ್ಪನೆ ಅನುಮಾನಾಸ್ಪದ. ನಾವು ಸಹಾಯದ ಬಗ್ಗೆ ಆಲೋಚಿಸುತ್ತೇವೆ, 00:06:45.000 --> 00:06:50.000 ಈ ಜನಗಳು ಇಲ್ಲಿ ಈ ಜನಗಳಿಗೆ ಸಹಾಯ ಮಾಡುವಂತೆ. ಆದರೆ ಮಧ್ಯದಲ್ಲಿ, 00:06:50.000 --> 00:06:54.000 ನಾವು ವಿಶ್ವ ಜನಸಂಖ್ಯೆ ಹೊಂದಿದ್ದೇವೆ, ಹಾಗೂ ಅವರು ಶೇಕಡ 24 ಆದಾಯ ಹೊಂದಿದ್ದಾರೆ. NOTE Paragraph 00:06:54.000 --> 00:06:58.000 ನಾವು ಇದನ್ನು ಇತರ ರೂಪದಲ್ಲಿ ಕೇಳಿದ್ದೇವೆ. ಹಾಗೂ ಇವರು ಯಾರು? 00:06:58.000 --> 00:07:02.000 ಬೇರೆ ಬೇರೆ ದೇಶಗಳು ಎಲ್ಲಿವೆ? ನಾನು ಆಫ್ರಿಕಾ ತೋರಿಸಬಲ್ಲೆ. 00:07:02.000 --> 00:07:07.000 ಇದು ಆಫ್ರಿಕಾ. ವಿಶ್ವ ಜನಸಂಖ್ಯೆಯ ಶೇಕಡ 10, ಬಹುತೇಕ ಬಡವರು. 00:07:07.000 --> 00:07:12.000 ಇದು ಒ.ಇ.ಸಿ.ಡಿ. ಶ್ರೀಮಂತ ದೇಶ. ಯು.ಎನ್. ನ ಕಂಟ್ರಿ ಕ್ಲಬ್. 00:07:12.000 --> 00:07:17.000 ಹಾಗೂ ಅವರು ಈ ಬದಿಯಲ್ಲಿದ್ದಾರೆ. ಆಫ್ರಿಕಾ ಮತ್ತು ಒ.ಇ.ಸಿ.ಡಿ. ಒಂದರ ಮೇಲೊಂದಿದ್ದಂತೆ. 00:07:17.000 --> 00:07:20.000 ಹಾಗೂ ಇದು ಲ್ಯಾಟಿನ್ ಅಮೆರಿಕಾ. ಈ ಭೂಮಿಯ ಮೇಲಿರುವುದೆಲ್ಲವೂ ಇಲ್ಲಿದೆ, 00:07:20.000 --> 00:07:23.000 ಲ್ಯಾಟಿನ್ ಅಮೆರಿಕಾದಲ್ಲಿ ಅತಿ ಬಡವರಿಂದ ಅತಿ ಶ್ರೀಮಂತರವರೆಗೆ ಇದ್ದಾರೆ. 00:07:23.000 --> 00:07:28.000 ಮತ್ತು ಇದರ ಮೇಲೆ ನಾವು ಪೂರ್ವ ಯೂರೋಪ್ ನ್ನು ಇಡಬಹುದು, ನಾವು ಪೂರ್ವ ಏಷಿಯಾವನ್ನು ಇಡಬಹುದು 00:07:28.000 --> 00:07:33.000 ಮತ್ತು ನಾವು ದಕ್ಷಿಣ ಏಷಿಯಾ ಇಡುತ್ತೇವೆ. ಹಾಗೂ ನಾವು ಕಾಲದಲ್ಲಿ ಹಿಂದಕ್ಕೆ ಸರಿದರೆ ಇದು ಹೇಗೆ ಕಾಣುತ್ತದೆ,™ 00:07:33.000 --> 00:07:38.000 ಸುಮಾರು 1970 ಕ್ಕೆ? ಹಾಗೆಯೇ ಇದು ಉಬ್ಬಿಗಿಂತ ಬೇರೆ ರೀತಿ ಇದೆ. 00:07:38.000 --> 00:07:42.000 ಹಾಗೂ ಸಂಪೂರ್ಣ ಬಡತನದಲ್ಲಿ ಜೀವಿಸಿದ್ದ ಏಷಿಯನ್ನರಿದ್ದಾರೆ. 00:07:42.000 --> 00:07:49.000 ವಿಶ್ವದಲ್ಲಿದ್ದ ಸಮಸ್ಯೆ ಏಷಿಯಾದಲ್ಲಿದ್ದ ಬಡತನ. ಈಗ ನಾನು ವಿಶ್ವ ಮುಂದಕ್ಕೆ ಚಲಿಸಲು ಬಿಟ್ಟರೆ, 00:07:49.000 --> 00:07:52.000 ನೀವು ನೋಡುತ್ತೀರ, ಒಂದು ಕಡೆ ಜನಸಂಖ್ಯೆ ಹೆಚ್ಚಾದರೆ, 00:07:52.000 --> 00:07:55.000 ಏಷಿಯಾದಲ್ಲಿ ನೂರಾರು ಲಕ್ಷಾಂತರ ಜನ ಬಡತನದಿಂದ ಹೊರಕ್ಕೆ ಬರುತ್ತಾರೆ ಹಾಗೂ ಇತರರು 00:07:55.000 --> 00:07:58.000 ಬಡತನಕ್ಕೆ ತುತ್ತಾಗುತ್ತಾರೆ, ಹಾಗೂ ಇದೇ ಪರಿಸ್ಥಿತಿ ಈಗಲೂ ಇದೆ. 00:07:58.000 --> 00:08:02.000 ಹಾಗೂ ವರ್ಲ್ಡ್ ಬ್ಯಾಂಕ್ ನ ಅತ್ಯುತ್ತಮ ಕಲ್ಪನೆಯೆಂದರೆ, ಇದು ಸಂಭವಿಸುತ್ತದೆ, 00:08:02.000 --> 00:08:06.000 ಹಾಗೂ ವಿಭಾಗಿಸಿದ ವಿಶ್ವ ಇರುವುದಿಲ್ಲ. ಬಹಳಷ್ಟು ಜನ ಮಧ್ಯದಲ್ಲಿರುತ್ತಾರೆ. NOTE Paragraph 00:08:06.000 --> 00:08:08.000 ಆದರೆ, ಇದು ಲಾಗರಿತಿಮಿಕ್ ಸ್ಕೇಲ್, 00:08:08.000 --> 00:08:13.000 ಆದರೆ ನಮ್ಮ ಪರಿಕಲ್ಪನೆಯ ಆರ್ಥಿಕ ಸ್ಥಿತಿ ಶೇಕಡ ಅಭಿವೃದ್ಧಿ. ನಾವು ಅದನ್ನು 00:08:13.000 --> 00:08:19.000 ಶೇಕಡಾವಾರು ಹೆಚ್ಚಳದ ಸಂಭಾವ್ಯತೆ ದೃಷ್ಟಿಯುಂದ ನೋಡುತ್ತೇವೆ. ನಾನು ಇದನ್ನು ಬದಲಾಯಿಸಿ 00:08:19.000 --> 00:08:23.000 ಕುಟುಂಬ ಆದಾಯದ ಬದುಲಾಗಿ ತಲಾವಾರು ಜಿ.ಡಿ.ಪಿ. ತೆಗೆದುಕೊಂಡರೆ, ಈ ದತ್ತಾಂಶಗಳನ್ನು 00:08:23.000 --> 00:08:29.000 ಪ್ರಾಂತೀಯ ಆಂತರಿಕ ಉತ್ಪನ್ನ ದತ್ತಾಂಶಗಳಾಗಿ ಪರಿವರ್ತಿಸಿದರೆ, 00:08:29.000 --> 00:08:33.000 ಹಾಗೂ ನಾನು ಇಲ್ಲಿ ಕೆಳಗಿರುವ ಪ್ರಾಂತಗಳನ್ನು ತೆಗೆದುಕೊಂಡರೆ, ಗುಳ್ಳೆಯ ಗಾತ್ರ ಈಗಲೂ ಜನಸಂಖ್ಯೆಯೇ. 00:08:33.000 --> 00:08:36.000 ಮತ್ತು ನೀವು ಅಲ್ಲಿ ಒ.ಇ.ಸಿ.ಡಿ. ನೋಡುತ್ತೀರ, ಹಾಗೂ ಇಲ್ಲಿ ಉಪ-ಸಹಾರಾ ಆಫ್ರಿಕಾ ಇದೆ, 00:08:36.000 --> 00:08:39.000 ಹಾಗೂ ಅಲ್ಲಿ ಅರಬ್ ರಾಜ್ಯಗಳನ್ನು ತೆಗೆಯುತ್ತೇವೆ, 00:08:39.000 --> 00:08:43.000 ಆಫ್ರಿಕಾ ಮತ್ತು ಏಷಿಯಾದಿಂದ ಬರುವುದನ್ನು ಪ್ರತ್ಯೇಕವಾಗಿರಿಸಿ, 00:08:43.000 --> 00:08:48.000 ನಾವು ಈ ಅಕ್ಷವನ್ನು ವಿಸ್ತರಿಸಬಹುದು, ಹಾಗೂ ನಾನು ಅದಕ್ಕೆ ಇಲ್ಲಿ ಹೊಸ ಆಯಾಮ ಕೊಡಬಹುದು, 00:08:48.000 --> 00:08:51.000 ಸಾಮಾಜಿಕ ಮೌಲ್ಯಗಳು, ಶಿಶುಗಳು ಬದುಕುವ ದರ. 00:08:51.000 --> 00:08:56.000 ಈಗ ಆ ಅಕ್ಷದಲ್ಲಿ ಹಣ ಇದೆ, ಹಾಗೂ ಅಲ್ಲಿ ನಾನು ಮಕ್ಕಳು ಬದುಕುಳಿಯುವ ಸಂಭಾವ್ಯತೆ ಹೊಂದಿದ್ದೇನೆ. 00:08:56.000 --> 00:09:00.000 ಕೆಲವು ರಾಷ್ಟ್ರಗಳಲ್ಲಿ, ಶೇಕಡ 99.7 ಮಕ್ಕಳು ಐದು ವರ್ಷ ವಯಸ್ಸಿನವರೆಗೆ ಬದುಕಿರುತ್ತವೆ, 00:09:00.000 --> 00:09:04.000 ಇತರರು, ಕೇವಲ 70 .ಇಲ್ಲಿ ನಾವು ಅಂತರ ಕಾಣುತ್ತೇವೆ 00:09:04.000 --> 00:09:08.000 ಒ.ಇ.ಸಿ.ಡಿ., ಲ್ಯಾಟಿನ್ ಅಮೆರಿಕಾ, ಪೂರ್ವ ಯೂರೋಪ್, ಪೂರ್ವ ಏಷಿಯಾ, 00:09:08.000 --> 00:09:12.000 ಅರಬ್ ರಾಜ್ಯಗಳು, ದಕ್ಷಿಣ ಏಷಿಯಾ ಮತ್ತು ಉಪ-ಸಹಾರಾ ಆಫ್ರಿಕಾ, ಇವುಗಳ ನಡುವೆ. 00:09:12.000 --> 00:09:17.000 ಮಕ್ಕಳು ಬದುಕುವ ದರ ಮತ್ತು ಹಣ ಇವುಗಳಿಗೆ ನೇರ ಸಂಬಂಧ ತುಂಬಾ ಗಟ್ಟಿಯಾಗಿದೆ. NOTE Paragraph 00:09:17.000 --> 00:09:25.000 ಆದರೆ, ನಾನು ಉಪ-ಸಹಾರಾ ಆಫ್ರಿಕಾವನ್ನು ವಿಭಾಗ ಮಾಡುತ್ತೇನೆ. ಆರೋಗ್ಯ ಅಲ್ಲಿದೆ ಮತ್ತು ಉತ್ತಮ ಆರೋಗ್ಯ ಅಲ್ಲಿ ಇನ್ನೂ ಮೇಲಿದೆ. 00:09:25.000 --> 00:09:30.000 ನಾನಿಲ್ಲಿಗೆ ಹೋಗಿ ಉಪ-ಸಹಾರಾ ಆಫ್ರಿಕಾವನ್ನು ಅದರ ರಾಷ್ಟ್ರಗಳಾಗಿ ವಿಭಾಗಿಸಬಹುದು. 00:09:30.000 --> 00:09:35.000 ಮತ್ತು ಅದು ಒಡೆದಾಗ, ಆ ದೇಶದ ಗುಳ್ಳೆಯ ಗಾತ್ರವೇ ಅದರ ಜನಸಂಖ್ಯೆ. 00:09:35.000 --> 00:09:39.000 ಅಲ್ಲಿ ಕೆಳಗಡೆ ಸಿಯೇರಾ ಲಿಯೋನ್ ನೋಡಿ. ಅಲ್ಲಿ ಮಾರಿಶಸ್. ಮಾರಿಶಸ್ ಮೊದಲನೆ ದೇಶ 00:09:39.000 --> 00:09:42.000 ವ್ಯಾಪರ ನಿರ್ಬಂಧಗಳಿಂದ ತಪ್ಪಿಸಿಕೊಂಡದ್ದು, ಹಾಗೂ ಅವರು ತಮ್ಮ ಸಕ್ಕರೆಯನ್ನು ಮಾರಾಟಮಾಡಬಹುದಿತ್ತು. 00:09:43.000 --> 00:09:48.000 ಯೂರೋಪ್ ಮತ್ತು ಉತ್ತರ ಅಮೆರಕನ್ನರಂತೆ ಅವರು ತಮ್ಮ ಉಡುಪುಗಳನ್ನು ಅದೇ ನಿಬಂಧನೆಗಳ ಪ್ರಕಾರ ಮಾರಾಟ ಮಾಡಬಹುದಿತ್ತು. NOTE Paragraph 00:09:48.000 --> 00:09:52.000 ಆಫ್ರಿಕಾದ ನಡುವೆ ದೊಡ್ಡ ವ್ಯತ್ಯಾಸವಿದೆ. ಹಾಗೆಯೇ ಘಾನಾ ಇಲ್ಲಿ ಮಧ್ಯದಲ್ಲಿದೆ. 00:09:52.000 --> 00:09:55.000 ಸಿಯೇರಾ ಲಿಯೋನ್ ನಲ್ಲಿ, ಮಾನವೀಯ ಸಹಕಾರ. 00:09:55.000 --> 00:10:00.000 ಇಲ್ಲಿ, ಉಗಾಂಡದಲ್ಲಿ ಅಭಿವೃದ್ಧಿ ಸಹಕಾರ. ಇಲ್ಲಿ ಹೂಡಿಕೆಗೆ ಸಮಯ, ಅಲ್ಲಿ 00:10:00.000 --> 00:10:03.000 ನೀವು ರಜಾದಿನ ಕಳೆಯಲು ಹೋಗಬಹುದು. ಇದು ಅತಿದೊಡ್ಡ ವ್ಯತ್ಯಾಸ 00:10:03.000 --> 00:10:08.000 ಆಫ್ರಿಕಾದಲ್ಲಿ, ನಾವು ಹೋಗುವುದು ಅಪರೂಪ -- ಅಲ್ಲಿ ಎಲ್ಲವೂ ಸಮಾನವೇ. 00:10:08.000 --> 00:10:12.000 ನಾನಿಲ್ಲಿ ದಕ್ಷಿಣ ಏಷಿಯಾ ವಿಭಾಗಿಸುತ್ತೇನೆ. ಇಲ್ಲಿ ಮಧ್ಯದಲ್ಲಿರುವ ದೊಡ್ಡ ಗುಳ್ಳೆ ಇಂಡಿಯಾ. 00:10:12.000 --> 00:10:16.000 ಆದರೆ ಅಫಘಾನಿಸ್ತಾನ ಮತ್ತು ಶ್ರೀಲಂಕಾಗಳ ನಡುವೆ ದೊಡ್ಡ ವ್ಯತ್ಯಾಸವಿದೆ. 00:10:16.000 --> 00:10:20.000 ನಾನು ಅರಬ್ ರಾಷ್ಟ್ರಗಳನ್ನು ವಿಭಾಗಿಸಬಲ್ಲೆ. ಅವರು ಹೇಗಿದ್ದಾರೆ? ಒಂದೇ ವಾತಾವರಣ, ಒಂದೇ ಸಂಸ್ಕೃತಿ, 00:10:20.000 --> 00:10:24.000 ಒಂದೇ ಧರ್ಮ. ದೊಡ್ಡ ವ್ಯತ್ಯಾಸ. ಅಕ್ಕಪಕ್ಕದವರ ಜೊತೆ ಕೂಡ. 00:10:24.000 --> 00:10:29.000 ಯೇಮೆನ್, ಸಿವಿಲ್ ಯುದ್ಧ. ಯುನೈಟೆಡ್ ಅರಬ್ ಎಮಿರೇಟ್ಸ್, ಹಣ, ಸರಿಸಮವಾಗಿ ಮತ್ತು ಚೆನ್ನಾಗಿ ಬಳಸಲಾಗಿದೆ. 00:10:29.000 --> 00:10:36.000 ಕಲ್ಪನೆಯಂತೆ ಅಲ್ಲ. ಅದರಲ್ಲಿ ಆ ದೇಶದಲ್ಲಿರುವ ಇತರ ದೇಶಗಳ ಕೆಲಸಗಾರರ ಮಕ್ಕಳೂ ಸೇರಿವೆ. 00:10:36.000 --> 00:10:40.000 ಕೆಲವು ಸಾರಿ ಮಾಹಿತಿ ನಿಮ್ಮ ಆಲೋಚನೆಗಿಂತ ಉತ್ತಮವಿರುತ್ತದೆ. ಬಹಳ ಜನರ ಪ್ರಕಾರ ಮಾಹಿತಿ ಸರಿಯಿರುವುದಿಲ್ಲ. 00:10:41.000 --> 00:10:43.000 ಅಲ್ಲಿ ಒಂದು ಅನಿಶ್ಚಯ ಅಂಶವಿದೆ, ಆದರೆ ನಾವು ಇಲ್ಲೆ ವ್ಯತ್ಯಾಸ ನೋಡಬಹುದು: 00:10:43.000 --> 00:10:46.000 ಕಾಂಬೋಡಿಯಾ, ಸಿಂಗಪೂರ್. ಇಲ್ಲಿ ವ್ಯತ್ಯಾಸಗಳು ಬಹಳ ದೊಡ್ಡವು 00:10:46.000 --> 00:10:49.000 ಮಾಹಿತಿಯ ದುರ್ಬಲತೆಗಿಂತ. ಪಶ್ಚಿಮ ಯೂರೋಪ್: 00:10:49.000 --> 00:10:55.000 ದೀರ್ಘಕಾಲದ ಸೋವಿಯೆತ್ ಆರ್ಥಿಕ ಸ್ಥಿತಿ, ಆದರೆ ಅವರು ಹತ್ತು ವರ್ಷಗಳ ನಂತರ ಹೊರಬರುತ್ತಾರೆ 00:10:55.000 --> 00:10:58.000 ತುಂಬಾ, ತುಂಬಾ ಭಿನ್ನವಾಗಿ. ಮತ್ತು ಅಲ್ಲಿ ಲ್ಯಾಟಿನ್ ಅಮೆರಿಕಾ ಇದೆ. 00:10:58.000 --> 00:11:02.000 ಈ ದಿನ ನಾವು ಲ್ಯಾಟಿನ್ ಅಮೆರಿಕಾದಲ್ಲಿ ಆರೋಗ್ಯವಂತ ರಾಷ್ಟ್ರವನ್ನು ಹುಡುಕಿಕೊಂಡು ಕ್ಯೂಬಾ ಗೆ ಹೋಗಬೇಕಿಲ್ಲ. 00:11:02.000 --> 00:11:07.000 ಇಲ್ಲಿಂದ ಕೆಲವು ವರ್ಷಗಳ ನಂತರ ಚಿಲಿಯ ಶಿಶು ಆಯುರ್ಮಾನ ದರ ಕ್ಯೂಬಾ ಗಿಂತ ಕಡಿಮೆಯಿರುತ್ತದೆ. 00:11:07.000 --> 00:11:10.000 ಇಲ್ಲಿ ಹೆಚ್ಚು ವರಮಾನದ ಓ.ಇ.ಸಿ.ಡಿ. ರಾಷ್ಟ್ರಗಳಿವೆ. NOTE Paragraph 00:11:10.000 --> 00:11:14.000 ಹಾಗೂ ನಾವು ಇಲ್ಲಿ ವಿಶ್ವದ ಸಂಪೂರ್ಣ ವಿನ್ಯಾಸ ಪಡೆಯುತ್ತೇವೆ. 00:11:14.000 --> 00:11:19.000 ಅದು ಹೆಚ್ಚು ಕಡಿಮೆ ಹೀಗಿದೆ. ಮತ್ತು ನಾವು ಅದನ್ನು ನೋಡಿದರೆ, 00:11:19.000 --> 00:11:25.000 ಅದು ಹೇಗೆ ಕಾಣುತ್ತದೆ -- ವಿಶ್ವ, 1960 ರಲ್ಲಿ, ಅದು ಚಲಿಸಲು ಪ್ರಾರಂಭಿಸುತ್ತದೆ. 1960. 00:11:25.000 --> 00:11:28.000 ಇದು ಮಾವೋ ತ್ಸೆ ತುಂಗ್. ಇವನು ಚೀಣಾಕ್ಕೆ ಆರೋಗ್ಯ ತಂದುಕೊಟ್ಟನು. ಅನಂತರ ಅವನು ಸತ್ತನು. 00:11:28.000 --> 00:11:33.000 ಆಮೇಲೆ ಡೆಂಗ್ ಕ್ಸಿಯಾಪಿಂಗ್ ಬಂದ ಹಾಗೂ ಚೀಣಾಕ್ಕೆ ಹಣ ತಂದ, ಅವರನ್ನು ಮತ್ತೆ ಮುಖ್ಯವಾಹಿನಿಗೆ ತಂದ. 00:11:33.000 --> 00:11:37.000 ಹೀಗೆ ನಾವು ಹೇಗೆ ರಾಷ್ಟ್ರಗಳು ಬೇರೆ ಬೇರೆ ದಿಕ್ಕಿನಲ್ಲಿ ಸಾಗುತ್ತವೆ ಎಂಬುದನ್ನು ನೋಡಿದ್ದೇವೆ, 00:11:37.000 --> 00:11:41.000 ಹಾಗಾಗಿ ಒಂದು ವಿಶ್ವದ ವಿನ್ಯಾಸವನ್ನು ತೋರಿಸುವ 00:11:41.000 --> 00:11:46.000 ಒಂದು ಉದಾಹರಣೆ ರಾಷ್ಟ್ರವನ್ನು ತೋರಿಸುವುದು ಕಷ್ಟ. 00:11:46.000 --> 00:11:52.000 ನಾನು ನಿಮ್ಮನ್ನು ಇಲ್ಲೆ ಹಿಂದಕ್ಕೆ 1960 ರ ಸುಮಾರಿಗೆ ಕರೆತರುತ್ತೇನೆ. 00:11:52.000 --> 00:12:02.000 ನಾನು ದಕ್ಷಿಣ ಕೋರಿಯಾ ಜೊತೆ ಹೋಲಿಸುತ್ತೇನೆ, ಇದು ಯಾವುದು, ಬ್ರಝಿಲ್ದೊಂದಿಗೆ. 00:12:02.000 --> 00:12:07.000 ಅದು ಇಲ್ಲಿ. ಅದರ ಲೇಬಲ್ ಹೊರಟುಹೋಗಿದೆ. ಹಾಗೆಯೇ ನಾನು ಉಗಾಂಡವನ್ನು ಹೋಲಿಸಬಯಸುತ್ತೇನೆ, 00:12:07.000 --> 00:12:12.000 ಅದು ಇಲ್ಲಿದೆ. ನಾನು ಅದನ್ನು ಮುಂದಕ್ಕೆ ನೂಕುತ್ತೇನೆ, ಹೀಗೆ. 00:12:12.000 --> 00:12:21.000 ಹಾಗೆಯೇ ದಕ್ಷಿಣ ಕೋರಿಯಾ ಹೇಗೆ ವೇಗವಾಗಿ ಮುಂದುವರೆಯುತ್ತಿದೆ ಎಂದು ನೀವು ನೋಡಬಹುದು, 00:12:21.000 --> 00:12:24.000 ಆದರೆ, ಬ್ರಝಿಲ್ ಬಹಳ ನಿಧಾನವಾಗಿದೆ.™© NOTE Paragraph 00:12:24.000 --> 00:12:30.000 ಮತ್ತು ನಾವು ಮತ್ತೆ ಹಿಂದಕ್ಕೆ ಹೋದರೆ, ಅವುಗಳ ಮೇಲೆ ಹಾದಿ ಮಾಡಿದರೆ, ಈ ರೀತಿ, 00:12:30.000 --> 00:12:34.000 ನೀವು ಮತ್ತೆ ಅಭಿವೃದ್ಧಿಯ ವೇಗವನ್ನು ನೋಡಬಹುದು 00:12:34.000 --> 00:12:40.000 ಅದು ಬಹಳ ವಿಭಿನ್ನವಾಗಿದೆ, ಮತ್ತು ರಾಷ್ಟ್ರಗಳು ಹೆಚ್ಚು ಕಡಿಮೆ ಹಣ ಮತ್ತು ಆರೋಗ್ಯದ 00:12:40.000 --> 00:12:44.000 ಗತಿಯಲ್ಲಿಯೇ ಚಲಿಸುತ್ತಿವೆ, ಆದರೆ ನೀವು ಇನ್ನೂ ವೇಗವಾಗಿ ಚಲಿಸಬಹುದು 00:12:44.000 --> 00:12:48.000 ನೀವು ಶ್ರೀಮಂತರಾಗಿರುವುದಕ್ಕಿಂತ ಮೊದಲು ಆರೋಗ್ಯವಂತರಾಗಿದ್ದರೆ. 00:12:49.000 --> 00:12:53.000 ನೀವು ಯುನೈಟೆಡ್ ಅರಬ್ ಎಮಿರೇಟ್ಸ್ ಹಾದಿಯಲ್ಲಿ ನಡೆಯಬಹುದು. 00:12:53.000 --> 00:12:56.000 ಅವರು ಇಲ್ಲಿಂದ ಬಂದರು, ಒಂದು ಖನಿಜ ಸಮೃದ್ಧ ರಾಷ್ಟ್ರ. ಅವರು ಎಲ್ಲ ತೈಲವನ್ನೂ ಹಿಡಿದರು, 00:12:56.000 --> 00:13:00.000 ಎಲ್ಲ ಹಣವನ್ನು ಪಡೆದರು, ಆದರೆ ಆರೋಗ್ಯ ಯಾವುದೋ ಸೂಪರ್ ಮಾರ್ಕೆಟ್ನಲ್ಲಿ ಕೊಳ್ಳುವ ವಸ್ತುವಲ್ಲ. 00:13:00.000 --> 00:13:04.000 ನೀವು ಆರೋಗ್ಯದಲ್ಲಿ ಹೂಡಿಕೆ ಮಾಡಬೇಕು. ನೀವು ಮಕ್ಕಳನ್ನು ಸ್ಕೂಲಿಗೆ ಹಾಕಬೇಕು. 00:13:04.000 --> 00:13:07.000 ನೀವು ಆರೋಗ್ಯ ಸಿಬ್ಬಂದಿಗೆ ತರಬೇತಿ ಕೊಡಬೇಕು. ಜನರನ್ನು ಸುಶಿಕ್ಷಿತರನ್ನಾಗಿ ಮಾಡಬೇಕು. 00:13:07.000 --> 00:13:10.000 ಹಾಗೂ ಶೇಕ್ ಸೈಯದ್ ಅದನ್ನು ಸರಿಯಾದ ರೀತಿಯಲ್ಲೇ ಮಾಡಿದ. 00:13:10.000 --> 00:13:14.000 ತೈಲದ ದರಗಳು ಬೀಳುತ್ತಿದ್ದರೂ ರಾಷ್ಟ್ರವನ್ನು ಈ ಮಟ್ಟಕ್ಕೆ ತಂದ. 00:13:14.000 --> 00:13:18.000 ಆದ್ದರಿಂದ, ಇಲ್ಲಿ ನಮಗೆ ಇನ್ನೂ ಹೆಚ್ಚಿನ ವಿಶ್ವ ಮುಖ್ಯವಾಹಿನಿ ನೋಟವಿದೆ, 00:13:18.000 --> 00:13:20.000 ಎಲ್ಲಿ ಎಲ್ಲ ರಾಷ್ಟ್ರಗಳೂ ಹಣ ಉಪಯೋಗಿಸುತ್ತವೆ 00:13:20.000 --> 00:13:25.000 ಹಿಂದೆ ತಾವು ಉಪಯೋಗಿಸಿದ್ದಕ್ಕಿಂತ ಉತ್ತಮವಾಗಿ. ಈಗ, ಇದು, ಹೆಚ್ಚು-ಕಡಿಮ ವಾಸ್ತವ, 00:13:25.000 --> 00:13:32.000 ನೀವು ರಾಷ್ಟ್ರಗಳ ಸರಾಸರಿ ಅಂಕಿಅಂಶಗಳನ್ನು ನೋಡಿದರೆ. ಅವು ಹೀಗಿವೆ. NOTE Paragraph 00:13:32.000 --> 00:13:37.000 ಈಗ ಇದು ಅಪಾಯಕರ, ಸರಾಸರಿ ಅಂಶಗಳನ್ನು ಉಪಯೋಗಿಸುವುದು, ಏಕೆಂದರೆ ರಾಷ್ಟ್ರ ರಾಷ್ಟ್ರಗಳಲ್ಲಿ 00:13:37.000 --> 00:13:43.000 ಅಷ್ಟೊಂದು ವ್ಯತ್ಯಾಸಗಳಿವೆ. ಹಾಗಾಗಿ, ನಾನು ಇಲ್ಲಿ ನೋಡಿದರೆ, ದಕ್ಷಿಣ ಕೋರಿಯಾ 00:13:43.000 --> 00:13:49.000 1960 ರಲ್ಲಿ ಎಲ್ಲಿತ್ತೋ ಅಲ್ಲಿ ಇಂದು ಉಗಾಂಡಾ ಇದೆ. ನಾನು ಉಗಾಂಡಾವನ್ನು ವಿಭಾಗಿಸಿದರೆ, 00:13:49.000 --> 00:13:54.000 ಉಗಾಂಡಾದೊಳಗೆ ಸಾಕಷ್ಟು ವ್ಯತ್ಯಾಸಗಳಿವೆ.ಇವು ಉಗಾಂಡಾದ ಕ್ವಿಂಟೈಲ್ ಗಳು. 00:13:54.000 --> 00:13:57.000 ಉಗಾಂಡಾದ ಅತಿ ಶ್ರೀಮಂತ ಶೇಕಡ 20 ಜನಸಂಖ್ಯೆ ಇಲ್ಲಿದ್ದಾರೆ. 00:13:57.000 --> 00:14:01.000 ಕಡು ಬಡವರು ಇಲ್ಲಿದ್ದಾರೆ. ನಾನು ದಕ್ಷಿಣ ಆಫ್ರಿಕಾವನ್ನು ವಿಭಾಗಿಸಿದರೆ, ಅದು ಹೀಗಿದೆ. 00:14:01.000 --> 00:14:06.000 ನಾನು ಇನ್ನೂ ಕೆಳಗಿಳಿದು ನೈಜರ್ ಕಡೆ ನೋಡಿದರೆ, ಅಲ್ಲಿ ಅತ್ಯಂತ ಭೀಕರ ಬರಗಾಲ ಇತ್ತು, 00:14:06.000 --> 00:14:11.000 ಕೊನೆಯಲ್ಲಿ ಅದು ಹೀಗಿದೆ. ನೈಜರ್ ನ ಶೇಕಡ 20 ಬಡವರು ಇಲ್ಲಿದ್ದಾರೆ, 00:14:11.000 --> 00:14:14.000 ಹಾಗೂ ಆಫ್ರಿಕಾದ ಅತಿ ಶ್ರೀಮಂತ ಶೇಕಡ 20 ಜನಸಂಖ್ಯೆ ಅಲ್ಲಿದ್ದಾರೆ, 00:14:14.000 --> 00:14:19.000 ಆದರೂ ಆಫ್ರಿಕಾಕ್ಕೆ ಯಾವ ಪರಿಹಾರಗಳು ಬೇಕು ಎಂಬುದರ ಬಗ್ಗೆ ಚರ್ಚೆಮಾಡುವ ಒಲವು ನಾವು ತೋರುತ್ತೇವೆ. 00:14:19.000 --> 00:14:22.000 ಈ ವಿಶ್ವದಲ್ಲಿರುವುದೆಲ್ಲ ಆಫ್ರಿಕಾದಲ್ಲಿದೆ. ಹಾಗೆಯೇ ನೀವು 00:14:22.000 --> 00:14:26.000 ಅಲ್ಲಿರುವ ಕ್ವಿಂಟೈಲ್ ಗೆ ಎಚ್.ಐ.ವಿ. ಔಷಧವನ್ನು ಸರ್ವರೂ ಪಡೆಯುವ ಬಗ್ಗೆ ಚರ್ಚಿಸಲಾಗುವುದಿಲ್ಲ¥ 00:14:26.000 --> 00:14:30.000 ಇಲ್ಲಿ ಉಪಯೋಗಿಸುವ ಕಾರ್ಯತಂತ್ರದ ರೀತಿಯಲ್ಲಿಯೇ. ಪ್ರಪಂಚದ ಅಭಿವೃದ್ಧಿ 00:14:30.000 --> 00:14:35.000 ಮಹತ್ತರವಾಗಿ ಸಂದರ್ಭೋಚಿತವಾಗಬೇಕು, ಹಾಗೂ ಅದನ್ನು ಇಲ್ಲಿ ಹೊಂದುವುದು ಅಪ್ರಸ್ತುತ 00:14:35.000 --> 00:14:38.000 ಪ್ರಾಂತೀಯ ಮಟ್ಟದಲ್ಲಿ. ನಾವು ಇನ್ನೂ ವಿವರಣಾತ್ಮಕವಾಗಿರಬೇಕು. 00:14:38.000 --> 00:14:42.000 ಇವುಗಳನ್ನು ಉಪಯೋಗಿಸುವಂತಾದಾಗ ವಿದ್ಯಾರ್ಥಿಗಳು ಉತ್ತೇಜಿತರಾಗುದನ್ನು ನಾವು ನೋಡಿದ್ದೇವೆ. NOTE Paragraph 00:14:42.000 --> 00:14:47.000 ಹಾಗೂ ಇನ್ನೂ ಹೆಚ್ಚು ಹೆಚ್ಚು ನೀತಿ ಸ್ಥಾಪನೆ ಮಾಡುವವರು ಮತ್ತು ಕಾರ್ಪೊರೇಟ್ ವಲಯಗಳು 00:14:47.000 --> 00:14:51.000 ಈ ವಿಶ್ವ ಹೇಗೆ ಬದಲಾಗುತ್ತಿದೆ ಎಂಬುದನ್ನು ನೋಡಬಯಸುತ್ತಾರೆ. ಈಗ, ಇದು ಏಕೆ ಸಂಭವಿಸುವುದಿಲ್ಲ? 00:14:51.000 --> 00:14:55.000 ನಮ್ಮಲ್ಲಿರುವ ಮಾಹಿತಿಯನ್ನು ನಾವೇಕೆ ಉಪಯೋಗ ಮಾಡುತ್ತಿಲ್ಲ? ನಾವು ವಿಶ್ವಸಂಸ್ಥೆಯಲ್ಲಿ ಮಾಹಿತಿ ಹೊಂದಿದ್ದೇವೆ, 00:14:55.000 --> 00:14:57.000 ರಾಷ್ಟ್ರೀಯ ಅಂಕಿ ಅಂಶಗಳ ಏಜೆನ್ಸಿಗಳು 00:14:57.000 --> 00:15:01.000 ಮತ್ತು ವಿಶ್ವವಿದ್ಯಾಲಯಗಳಲ್ಲಿ ಮತ್ತು ಇತರ ಸರ್ಕಾರೇತರ ಸಂಸ್ಥೆಗಳಲ್ಲಿ. 00:15:01.000 --> 00:15:03.000 ಏಕೆಂದರೆ ಮಾಹಿತಿ ದತ್ತ ಸಂಚಯಗಳಲ್ಲಿ ಹುದುಗಿಕೊಂಡಿದೆ. 00:15:03.000 --> 00:15:08.000 ಹಾಗೂ ಸಾರ್ವಜನಿಕರು ಅಲ್ಲಿದ್ದಾರೆ, ಮತ್ತು ಇಂಟರ್ನೆಟ್ ಅಲ್ಲಿದೆ, ಆದರೆ ನಾವು ಅವುಗಳನ್ನು ಸಮರ್ಪಕವಾಗಿ ಉಪಯೋಗಿಸಿಲ್ಲ. NOTE Paragraph 00:15:08.000 --> 00:15:11.000 ನಾವು ನೋಡಿರುವ ವಿಶ್ವ ಬದಲಾಗುತ್ತಿರುವ ಎಲ್ಲ ಅಂಶಗಳೂ 00:15:11.000 --> 00:15:15.000 ಸಾರ್ವಜನಿಕ-ಹಣವಿನಿಯೋಗದಿಂದ ತಯಾರಿಸಿರುವ ಅಂಕಿ ಅಂಶಗಳಲ್ಲಿ ಸೇರುವುದಿಲ್ಲ. ಕೆಲವು ವೆಬ್ ಪೇಜುಗಳು ಇವೆ 00:15:15.000 --> 00:15:21.000 ಈ ರೀತಿ, ನಿಮಗೆ ಗೊತ್ತು, ಆದರೆ ಅವು ದತ್ತ ಸಂಚಯಗಳಿಂದ ಸ್ವಲ್ಪ ಆಹಾರ ಪಡೆಯುತ್ತವೆ, 00:15:21.000 --> 00:15:26.000 ಆದರೆ ಜನರು ಅದಕ್ಕೆ ಬೆಲೆ ಕಟ್ಟುತ್ತಾರೆ, ಮೂರ್ಖ ಪಾಸ್ವರ್ಡ್ಗಳು ಮತ್ತು ಬೇಸರದ ಅಂಕಿ ಅಂಶಗಳು. 00:15:26.000 --> 00:15:29.000 (ನಗು). (ಚಪ್ಪಾಳೆ) NOTE Paragraph 00:15:29.000 --> 00:15:33.000 ಇದು ಕೆಲಸ ಮಾಡುವುದಿಲ್ಲ. ಆದರೆ ಏನು ಅಗತ್ಯವಿದೆ? ನಮ್ಮಲ್ಲಿ ಮಾಹಿತಿಯಿದೆ. 00:15:33.000 --> 00:15:37.000 ನಿಮಗೆ ಬೇಕಾಗಿರುವುದು ಹೊಸ ಮಾಹಿತಿಯಲ್ಲ. ನಮ್ಮಲ್ಲಿ ಉತ್ಕೃಷ್ಟ ವಿನ್ಯಾಸ ಸಲಕರಣೆಗಳಿವೆ, 00:15:37.000 --> 00:15:40.000 ಜೊತೆಗೆ ಇನ್ನಷ್ಟು ಸೇರ್ಪಡಯಾಗುತ್ತಲೇ ಇರುತ್ತವೆ. ಹಾಗಾಗಿ ನಾವು ಒಂದು 00:15:40.000 --> 00:15:45.000 ಲಾಭರಹಿತ ಸಾಹಸ ಪ್ರಾರಂಭಿಸಿದೆವು, ಇದನ್ನು ನಾವು -- ಮಾಹಿತಿಗೆ ವಿನ್ಯಾಸ ಸಂಪರ್ಕ -- 00:15:45.000 --> 00:15:48.000 ನಾವು ಇದನ್ನು ಗ್ಯಾಪ್ ಮೈಂಡರ್ ಎನ್ನುತ್ತೇವೆ, ಲಂಡನ್ ನೆಲಮಾಳಿಗೆಯಿಂದ, ಅಲ್ಲಿ ನಿಮಗೆ ಎಚ್ಚರಿಕೆ ಕೊಡುತ್ತಾರೆ, 00:15:48.000 --> 00:15:51.000 "ಮೈಂಡ್ ದಿ ಗ್ಯಾಪ್." ಹಾಗಾಗಿ ನಾವು ಗ್ಯಾಪ್ ಮೈಂಡರ್ ಸೂಕ್ತ ಎಂದುಕೊಂಡೆವು. 00:15:51.000 --> 00:15:55.000 ಹಾಗೂ ಈ ರೀತಿ ಮಾಹಿತಿಗೆ ಸಂಪರ್ಕ ಕಲ್ಪಿಸುವ ತಂತ್ರಾಂಶ ಬರೆಯಲು ಪ್ರಾರಂಭಿಸಿದೆವು. 00:15:55.000 --> 00:16:01.000 ಅದು ಅಷ್ಟೊಂದು ಕಷ್ಟ ಎನಿಸಲಿಲ್ಲ. ಅದು ಒಬ್ಬ ವ್ಯಕ್ತಿಯ ಕೆಲವು ವರ್ಷಗಳು ಹಿಡಿಯಿತು, ನಾವು ಅನಿಮೇಶನ್ ಗಳನ್ನು ತಯಾರಿಸಿದೆವು. 00:16:01.000 --> 00:16:03.000 ನೀವು ಒಂದು ಮಾಹಿತಿ ಸೆಟ್ ತೆಗೆದುಕೊಂಡು ಅಲ್ಲಿ ಹಾಕಬಹುದು. 00:16:03.000 --> 00:16:08.000 ನಾವು ಯು.ಎನ್. ಮಾಹಿತಿಯನ್ನು ಬಿಡುಗಡೆ ಮಾಡುತ್ತಿದ್ದೇವೆ, ಕೆಲವು ಯು.ಎನ್. ಸಂಸ್ಥೆಗಳನ್ನು ಕೂಡ. NOTE Paragraph 00:16:08.000 --> 00:16:12.000 ಕೆಲವು ದೇಶಗಳು ತಮ್ಮಲ್ಲಿರುವ ಮಾಹಿತಿಯನ್ನು ವಿಶ್ವದ ಮೇಲೆ ಬಿಡುಗಡೆ ಮಾಡಬಹುದಾಗಿದೆಯೆಂದು ಒಪ್ಪಿಕೊಳ್ಳುತ್ತವೆ, 00:16:12.000 --> 00:16:15.000 ಆದರೆ, ನಮಗೆ ನಿಜವಾಗಿಯೂ ಬೇಕಾಗಿರುವುದು, ಒಂದು ಹುಡುಕುವ ಕ್ರಿಯೆ. 00:16:15.000 --> 00:16:20.000 ಒಂದು ಹುಡುಕುವ ಕ್ರಿಯೆ, ಅದರ ಮೂಲಕ ಹುಡುಕುವ ರೂಪದಲ್ಲಿ ಮಾಹಿತಿಯನ್ನು ನಕಲು ಮಾಡುವ ಸಾಧ್ಯತೆ 00:16:20.000 --> 00:16:23.000 ಹಾಗೂ ಅದನ್ನು ವಿಶ್ವಕ್ಕೆ ಬಿಡುಗಡೆ ಮಾಡುವುದು. ಹಾಗೂ ನಾವು ಹೊರ ಹೋದಾಗ ಏನು ಕೇಳುತ್ತೇವೆ? 00:16:23.000 --> 00:16:27.000 ನಾನು ಮುಖ್ಯ ಅಂಕಿ ಅಂಶಗಳ ವಿಷಯದಲ್ಲಿ ಮಾನವ ವಿಜ್ಞಾನ ಅನ್ವಯಿಸಿದ್ದೇನೆ. ಪ್ರತಿಯೊಬ್ಬರೂ ಹೇಳುತ್ತಾರೆ, 00:16:28.000 --> 00:16:32.000 "ಇದು ಸಾಧ್ಯವಿಲ್ಲ. ಇದು ಮಾಡಲಾಗದು. ನಮ್ಮ ಮಾಹಿತಿ ಎಷ್ಟು ವಿಚಿತ್ರ ವಿವರ ಹೊಂದಿದೆಯೆಂದರೆ 00:16:32.000 --> 00:16:35.000 ಇತರ ಮಾಹಿತಿ ಹುಡುಕಿದಂತೆ ಇದನ್ನು ಹುಡುಕಲಾಗದಷ್ಟು. 00:16:35.000 --> 00:16:40.000 ನಾವು ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ಕೊಡಲಾಗದು, ವಿಶ್ವದ ಉದ್ಯಮಿಗಳಿಗೆ ಉಚಿತವಾಗಿ ಆಗದು." 00:16:40.000 --> 00:16:43.000 ಆದರೆ ನಾವು ಮಾಡಬಯಸುತ್ತಿರುವುದು ಇದೇ ಅಲ್ಲವೇ? 00:16:43.000 --> 00:16:46.000 ಸಾರ್ವಜನಿಕ ಹಣಸಾಹಾಯದ ಮಾಹಿತಿ ಇಲ್ಲಿ ಕೆಳಗೆ ಇದೆ. 00:16:46.000 --> 00:16:49.000 ಮತ್ತು ನಾವು ನೆಟ್ ನಲ್ಲಿ ಹೂವುಗಳು ಬೆಳೆಯಲಿ ಎಂದು ಆಶಿಸುತ್ತೇವೆ. 00:16:49.000 --> 00:16:54.000 ಹಾಗೂ ಒಂದು ಮುಖ್ಯ ಅಂಶವೆಂದರೆ ಅವನ್ನು ಹುಡುಕಲು ಸುಲಭವಾಗುವಂತೆ ಮಾಡುವುದು, ಆಗ ಜನರು ಅದನ್ನು 00:16:54.000 --> 00:16:56.000 ಬೇರೆ ಬೇರೆ ವಿನ್ಯಾಸ ಸಲಕರಣೆ ಉಪಯೋಗಿಸಿ ಅಲ್ಲಿ ಅನಿಮೇಟ್ ಮಾಡಬಹುದು. 00:16:56.000 --> 00:17:01.000 ಮತ್ತು ನಿಮಗೆ ನಾನು ಒಳ್ಳೆಯ ಸುದ್ದಿ ನೀಡುತ್ತೇನೆ. ನಾನು ಕೊಡುವ ಒಳ್ಳೆಯ ಸುದ್ದಿಯೆಂದರೆ, ಈಗಿನ ನೂತನ 00:17:01.000 --> 00:17:05.000 ಯು.ಎನ್. ಅಂಕಿ ಅಂಶಗಳ ಮುಖ್ಯಸ್ಥ, ಅದು ಅಸಾಧ್ಯವೆಂದು ಹೇಳುವುದಿಲ್ಲ. 00:17:05.000 --> 00:17:07.000 ಅವರು ಇಷ್ಟು ಮಾತ್ರ ಹೇಳುತ್ತಾರೆ, "ಇದು ನಾವು ಮಾಡಬಹುದು." 00:17:07.000 --> 00:17:11.000 (ನಗು). 00:17:11.000 --> 00:17:13.000 ಮತ್ತು ಅವರು ಬಹಳ ಬುದ್ಧಿವಂತ ವ್ಯಕ್ತಿ, ಹೊ? 00:17:13.000 --> 00:17:15.000 (ನಗು). NOTE Paragraph 00:17:15.000 --> 00:17:19.000 ಆದ್ದರಿಂದ ಮುಂಬರುವ ವರ್ಷಗಳಲ್ಲಿ ಮಾಹಿತಿಯಲ್ಲಿ ಹಲವು ಸಂಗತಿಗಳು ಸಂಭವಿಸುವುದನ್ನು ನಾವು ನೋಡುತ್ತೇವೆ. 00:17:19.000 --> 00:17:23.000 ಆದಾಯ ವಿಭಾಗಗಳನ್ನು ಸಂಪೂರ್ಣವಾಗಿ ಹೊಸ ವಿಧಾನಗಳಲ್ಲಿ ನಾವು ನೋಡಬಹುದಾಗಿರುತ್ತದೆ. 00:17:23.000 --> 00:17:28.000 ಇದು ಚೀನಾದ ಆದಾಯ ವಿಂಗಡಣೆ, 1970.® 00:17:29.000 --> 00:17:34.000 ಇದು ಯುನೈಟೆಡ್ ಸ್ಟೇಟ್ಸ್ ನ ಆದಾಯ ವಿಂಗಡಣೆ, 1970. 00:17:34.000 --> 00:17:38.000 ಒಂದರಮೇಲೊಂದೇನಿಲ್ಲ. ಒಂದರಮೇಲೊಂದೇನಿಲ್ಲ. ಆದರೆ ಆದದ್ದೇನು? 00:17:38.000 --> 00:17:43.000 ಏನು ಆಯಿತೆಂದರೆ ಇದಾಯಿತು: ಚೀನಾ ಬೆಳೆಯುತ್ತಿದೆ, ಅದು ಇನ್ನು ಮುಂದೆ ಎಂದಿಗೂ ಅಷ್ಟು ಸಮಾನವಲ್ಲ, 00:17:43.000 --> 00:17:47.000 ಹಾಗೂ ಅದು ಇಲ್ಲಿ ಕಾಣಿಸುತ್ತಿದೆ, ಯುನೈಟೆಡ್ ಸ್ಟೇಟ್ಸ್ ಮೇಲೆ. 00:17:47.000 --> 00:17:49.000 ಹೆಚ್ಚೂಕಡಿಮೆ ಪಿಶಾಚಿಯಂತೆ, ಅಲ್ಲವೇ, ಹುಂ? 00:17:49.000 --> 00:17:51.000 (ನಗು). NOTE Paragraph 00:17:51.000 --> 00:18:01.000 ಇದು ಹೆದರಿಕೆ ಹುಟ್ಟಿಸುವಂಥದು. ಆದರೆ ಈ ಎಲ್ಲ ಮಾಹಿತಿ ಹೊಂದಿರುವುದು ಬಹಳ ಮುಖ್ಯ. 00:18:01.000 --> 00:18:07.000 ನಾವು ಇದನ್ನು ನಿಜವಾಗಿಯೂ ನೋಡಬೇಕಾಗಿದೆ. ಹಾಗೂ ಇದರ ಕಡೆ ನೋಡುವ ಬದುಲು, 00:18:07.000 --> 00:18:12.000 ನಾನು ಒಂದು 1,000 ಕ್ಕೆ ಎಷ್ಟು ಜನ ಇಂಟರ್ ನೆಟ್ ಉಪಯೋಗಿಸುತ್ತಾರೆ ಎಂಬುದನ್ನು ತೋರಿಸಿ ಮುಗಿಸುತ್ತೇನೆ. 00:18:12.000 --> 00:18:17.000 ಈ ಸಾಫ್ಟ್ವೇರಿನಲ್ಲಿ ಎಲ್ಲ ರಾಷ್ಟ್ರಗಳ ಸುಮಾರು 500 ಚರಾಕ್ಷರಗಳನ್ನು ಸುಲಭವಾಗಿ ಉಪಯೋಗಿಸಿಕೊಳ್ಳಬಹುದು. 00:18:17.000 --> 00:18:21.000 ಇದಕ್ಕೆ ಬದಲಾಯಿಸಿಕೊಳ್ಳಲು ಸ್ವಲ್ಪ ಸಮಯ ಹಿಡಿಯುತ್ತದೆ, 00:18:21.000 --> 00:18:26.000 ಆದರೆ ಅಕ್ಷಾಂಶಗಳ ಮೇಲೆ, ನಿಮಗೆ ಬೇಕಾದ ಚರಾಕ್ಷರವನ್ನು ಸುಲಭವಾಗಿ ಪಡೆಯಬಹುದು. 00:18:26.000 --> 00:18:31.000 ಹಾಗೂ ಮುಖ್ಯ ವಿಷಯವೆಂದರೆ ದತ್ತ ಸಂಚಯವನ್ನು ಉಚಿತವಾಗಿ ಪಡೆಯುವುದು, 00:18:31.000 --> 00:18:34.000 ಅವು ಹುಡುಕಲು ಅನುವಾಗುವಂತೆ ಮಾಡುವುದು, ಮತ್ತು ಎರಡನೆ ಕ್ಲಿಕ್ ವೊಂದಿಗೆ ಅವುಗಳನ್ನು ಪಡೆಯುವುದು 00:18:34.000 --> 00:18:39.000 ಗ್ರಾಫಿಕ್ ರೂಪದಲ್ಲಿ, ಅದರ ಮೂಲಕ ನೀವು ಅರ್ಥಮಾಡಿಕೊಳ್ಳಲು ಸುಲಭವಾಗುವಂತೆ. 00:18:39.000 --> 00:18:42.000 ಈಗ ಅಂಕಿಸಂಖ್ಯಾ ಶಾಸ್ತ್ರಜ್ಞರು ಇದನ್ನು ಇಷ್ಟಪಡುವುದಿಲ್ಲ, ಏಕೆಂದರೆ, ಅವರು ಹೇಳುತ್ತಾರೆ 00:18:42.000 --> 00:18:51.000 ಇವು ವಾಸ್ತವವನ್ನು ತೋರಿಸುವುದಿಲ್ಲ; ನಾವು ಸಂಖ್ಯಾಶಾಸ್ತ್ರದ, ವಿಶ್ಲೇಷಣೆ ವಿಧಾನ ಹೊಂದಿರಬೇಕು. 00:18:51.000 --> 00:18:54.000 ಆದರೆ ಇದು ಸಿದ್ಧಾಂತ-ರೂಪಣೆಯಾಗಿದೆ. NOTE Paragraph 00:18:54.000 --> 00:18:58.000 ನಾನೀಗ ವಿಶ್ವದ ವಿಚಾರದೊಂದಿಗೆ ಕೊನೆಗೊಳಿಸುತ್ತೇನೆ. ಅಲ್ಲಿ, ಇಂಟರ್ನೆಟ್ ಬರುತ್ತಿದೆ. 00:18:58.000 --> 00:19:02.000 ಇಂಟರ್ನೆಟ್ ಉಪಯೋಗಿಸುವವರ ಸಂಖ್ಯೆ ಹೀಗೆ ಏರುತ್ತಿದೆ. ಇದು ತಲಾದಾಯ ಜಿ.ಡಿ.ಪಿ. 00:19:02.000 --> 00:19:07.000 ಹಾಗೂ ಇದು ಬರುತ್ತಿರುವ ಹೊಸ ತಂತ್ರಜ್ಞಾನ, ಆದರೆ, ಅದು ಎಷ್ಟು ಆಶ್ಚರ್ಯಕರವಾಗಿ, 00:19:07.000 --> 00:19:12.000 ದೇಶಗಳ ಆರ್ಥಿಕ ಪರಿಸ್ಥಿತಿಗಳಿಗೆ ಹೊಂದುತ್ತಿವೆ. ಅದಕ್ಕೇ ಡಾಲರ್ 100 ನ 00:19:12.000 --> 00:19:15.000 ಒಂದು ಕಂಪ್ಯೂಟರ್ ಬಹಳ ಮುಖ್ಯವಾಗುತ್ತದೆ. ಆದರೆ ಇದು ಒಳ್ಳೆಯ ಪ್ರವೃತ್ತಿ. 00:19:15.000 --> 00:19:18.000 ಇದು ವಿಶ್ವವೇ ಚಪ್ಪಟೆಯಾದಂತೆ, ಹೌದಲ್ಲವೆ? ಈ ರಾಷ್ಟ್ರಗಳು 00:19:18.000 --> 00:19:21.000 ಆರ್ಥಿಕ ಸ್ಥಿತಿಗಿಂತ ಮೇಲೇರುತ್ತಿವೆ ಮತ್ತು ಬಹಳ ಆಸಕ್ತಿಕರವೆಂದರೆ 00:19:21.000 --> 00:19:25.000 ಇವುಗಳನ್ನು ವರ್ಷಪೂರ್ತಿ ಅನುಸರಿಸುವುದು, ನೀವು ಮಾಡಲು ಸಾಧ್ಯವಾಗುವುದು ನಾನು ಆಶಿಸುವಂತೆ 00:19:25.000 --> 00:19:27.000 ಎಲ್ಲ ಸಾರ್ವಜನಿಕ ಹಣದ ಸಹಾಯದಿಂದ ಪಡೆದ ಮಾಹಿತಿಯೊಂದಿಗೆ. ನಿಮಗೆ ತುಂಬಾ ಧನ್ಯವಾದಗಳು. 00:19:28.000 --> 00:19:31.000 (ಚಪ್ಪಾಳೆ).