ಅನ್‌ಪ್ಲಗ್ಡ್ ಚಟುವಟಿಕೆ | ನೈಜ ಸಮಯದ ಅಲ್ಗೊರಿಥಂ ಪೇಪರ್ ಏರ್‌ಪ್ಲೇನ್‌ಗಳು ಈ ಅಧ್ಯಾಯವನ್ನು ರಿಯಲ್ ಲೈಫ್ ಅಲ್ಗೊರಿಥಂ ಎಂದು ಕರೆಯಲಾಗುತ್ತದೆ. ಜನರು ನಿತ್ಯ ಮಾಡುವ ಕೆಲಸವನ್ನು ಅಲ್ಗೊರಿಥಂ ಮಾಡುತ್ತದೆ. ಕುಕೀ ರೆಸಿಪಿ ಮತ್ತು ಬರ್ಡ್‌ಹೌಸ್ ಮಾಡಲು ದಿಕ್ಕುಗಳು ಸಾಮಾನ್ಯ ಅಲ್ಗೊರಿಥಂಗಳು. ಇಂದು ನಾವು ಪೇಪರ್ ಏರ್‌ಪ್ಲೇನ್ ಅಲ್ಗೊರಿಥಂ ಮಾಡಿ, ರಚಿಸಿ, ಟೆಸ್ಟ್ ಮಾಡೋಣ. ಆದರೆ ಅದಕ್ಕೂ ಮೊದಲು ನಾವು ಈ ದೊಡ್ಡ ಪ್ರಾಜೆಕ್ಟ್ ಅನ್ನು ಸಣ್ಣ ಸುಲಭ ಹಂತವನ್ನಾಗಿ ವಿಭಜಿಸಬೇಕು. ಪೇಪರ್ ಏರ್‌ಪ್ಲೇನ್ ಮಾಡಲು, ಯಾವ ಕ್ರಮ ತೆಗೆದುಕೊಳ್ಳಬೇಕು ಎಂದು ನಿರ್ಧರಿಸಬೇಕು, ಯಾವ ಅನುಕ್ರಮದಲ್ಲಿ ಎಂದು ನೋಡಬೇಕು. ಚಿತ್ರಗಳನ್ನು ಕತ್ತರಿಸಿ ಅಲ್ಗೊರಿಥಂ ಬರೆಯುತ್ತೀರಿ. ನಂತರ, ನೀವು 6 ಚಿತ್ರ ಆಯ್ದು ಪೇಪರ್ ಏರ್‌ಪ್ಲೇನ್ ಮಾಡಿ ಅಗತ್ಯ ಹಂತವನ್ನು ತೋರಿಸುತ್ತೀರಿ. ಅವುಗಳನ್ನು ಸರಿಯಾಗಿ ಜೋಡಿಸುತ್ತೀರಿ. ಎಲ್ಲವನ್ನೂ ಸರಿಯಾಗಿ ಮಾಡಿದ ನಂತರ ಟೆಸ್ಟ್‌ ಮಾಡಲು ಇನ್ನೊಂದು ಟೀಮ್ ಜೊತೆಗೆ ಅಲ್ಗೊರಿದಂ ಅನ್ನು ಹಂಚಿಕೊಂಡು ಕೆಲಸ ಮಾಡುತ್ತಿದೆಯೇ ಎಂದು ನೋಡುತ್ತೀರಿ. ಉತ್ತಮ ವಿನ್ಯಾಸದ ಅಲ್ಗೊರಿಥಂ ಅತ್ಯಂತ ಮುಖ್ಯ ಉತ್ತಮ ಪೇಪರ್ ಏರ್‌ಪ್ಲೇನ್ ಮಾಡಲು. ನಾವು ಚಾಕೊಲೇಟ್ ಮಾಡುವಾಗ, ಆ ಪ್ರಕ್ರಿಯೆಗೆ ಹಲವು ಹಂತಗಳಿರುತ್ತವೆ. ಪ್ರತಿ ಹಂತವೂ ತನ್ನದೇ ಸಣ್ಣ ಹಂತಗಳನ್ನು ಹೊಂದಿದೆ. ವಿಭಿನ್ನ ರೆಸಿಪಿಗಳು ಅಥವಾ ಅಲ್ಗೊರಿಥಂಗಳಿವೆ. ಚಾಕೊಲೇಟ್ ರುಚಿಯನ್ನು ಇದು ಅವಲಂಬಿಸಿವೆ. ಪ್ರತಿ ಹಂತವೂ ಮುಖ್ಯ. ಸಣ್ಣದೂ ಕೂಡ. ಒಂದು ಸ್ಟೆಪ್‌ ಇಲ್ಲದೇ ಉಳಿದವನ್ನು ಪೂರ್ಣಗೊಳಿಸಲಾಗದು. ಇತರರಿಗೆ ಅರ್ಥವಾಗುವ ಅಲ್ಗೊರಿಥಂ ರಚಿಸುವುದು ನಿಜಕ್ಕೂ ಪ್ರಮುಖ ಹೀಗಾಗಿ ಪ್ರತಿ ಹಂತವನ್ನೂ ಬರೆಯಬೇಕು. ಯಾರೇ ಮಾಡಿದರೂ ಫಲಿತಾಂಶ ಒಂದೇ ಆಗಿರುತ್ತದೆ.