ಈಗ ನೀವು ಫಂಕ್ಷನ್ ಬ್ಲಾಕ್‌ಗಳನ್ನು ಎಡಿಟ್ ಮಾಡಿದ್ದೀರಿ. ಹೊಸ ಫಂಕ್ಷನ್ ಬ್ಲಾಕ್ ರಚನೆ ಸಮಯ. ತುಂಬಾ ಸರಳ. ಟೂಲ್‌ಬಾಕ್ಸ್‌ನಲ್ಲಿ ಫಂಕ್ಷನ್‌ಗಳು ಎಂಬ ವಿಭಾಗ ಇದೆ. ಇದರ ಮೇಲೆ ನೀವು ಕ್ಲಿಕ್ ಮಾಡಿದರೆ, ಫಂಕ್ಷನ್ ರಚಿಸಿ ಎಂಬ ಕಿತ್ತಳೆ ಬಣ್ಣದ ಬಟನ್ ಕಾಣುತ್ತದೆ. ಇದರ ಮೇಲೆ ಕ್ಲಿಕ್ ಮಾಡಿದರೆ ಎಡಿಟರ್ ಕಾಣಿಸುತ್ತದೆ. ಈಗಿರುವ ಫಂಕ್ಷನ್ ಎಡಿಟ್ ಮಾಡಲು ಇದನ್ನು ನೀವು ಬಳಸಿದ್ದೀರಿ. ಹಿಂದಿನ ಹಾಗೆ ನಿಮ್ಮ ಫಂಕ್ಷನ್‌ಗೆ ಹೆಸರು ಕೊಡಿ. ಫಂಕ್ಷನ್ ಮಾಡುವ ಕೆಲಸದ ಅಧಾರದಲ್ಲಿ ವಿವರಣೆ ಬರೆಯಿರಿ. ಉದಾಹರಣೆಗೆ, ಆಯತ ಅಥವಾ ತ್ರಿಕೋನ ರಚಿಸುವುದಾದರೆ ಕೆಳಗಿನ ಬಿಳಿ ವರ್ಕ್‌ಸ್ಪೇಸ್‌ಗೆ ಟೂಲ್‌ಬಾಕ್ಸ್‌ನಿಂದ ಬ್ಲಾಕ್‌ ಎಳೆದುಬಿಡಿ. ಫಂಕ್ಷನ್‌ಗಾಗಿ ಹಸಿರು ಸುತ್ತಿದ ಬ್ಲಾಕ್‌ ಒಳಗೆ ಈ ಬ್ಲಾಕ್‌ ಎಳೆದುಬಿಡಿ. ಮುಗಿದ ನಂತರ, ಉಳಿಸಿ, ನಿರ್ಗಮಿಸಿ ಮೇಲೆ ಕ್ಲಿಕ್ ಮಾಡಿ. ಇದು ನಿಮ್ಮನ್ನು ಮುಖ್ಯ ವರ್ಕ್‌ಸ್ಪೇಸ್‌ಗೆ ಕರೆದೊಯ್ಯುತ್ತದೆ. ನೀವು ರಚಿಸಿದ ಹೊಸ ಫಂಕ್ಷನ್ ನಿಮ್ಮ ಟೂಲ್‌ಬಾಕ್ಸ್‌ನ ಫಂಕ್ಷನ್ ಕೆಟಗರಿಯಲ್ಲಿ ಹಸಿರು ಬ್ಲಾಕ್ ಆಗಿ ಕಾಣುತ್ತದೆ. ಇದನ್ನು ಮುಖ್ಯ ವರ್ಕ್‌ಸ್ಪೇಸ್‌ಗೆ ಎಳೆದು ಬಿಡಿ. ಪಝಲ್ ಸಾಲ್ವ್ ಮಾಡಲು ಸಾಮಾನ್ಯ ಬ್ಲಾಕ್‌ನಂತೆ ಬಳಸಿ.