ಬ್ಲಾಕ್‌ಚೈನ್‌ ಹಣಕಾಸೇತರ ಬಳಕೆ ಪ್ರಕರಣ ಈಗ ಬೆಳೆಯುತ್ತಿದೆ. ಅಂತಹ ಮಹತ್ವದ ಬಳಕೆ ಎನ್‌ಎಫ್‌ಟಿ. ಇದು ವಿಶಿಷ್ಟ ಅಸೆಟ್‌ಗಳ ಪ್ರತಿನಿಧಿ. ಮುಖ್ಯವಾಗಿ ಕಲೆಕ್ಟಿಬಲ್‌ಗಳು. ಆದರೆ, ಇತರ ಅಸೆಟ್‌ಗಳೂ ವ್ಯಾಪಕವಾಗಿ ಕಾಣಿಸುತ್ತಿವೆ. ಕಾರ್ಬನ್‌ ಕ್ರೆಡಿಟ್‌, ರಿಯಲ್ ಎಸ್ಟೇಟ್ ಸೆಕ್ಯುರಿಟಿ, ಇತರೆ ಮೂಲದಲ್ಲಿ, ಬ್ಲಾಕ್‌ಚೈನ್‌ ಹೆಚ್ಚು ದಕ್ಷ ಬಳಕೆ ಅಥವಾ ಎಕ್ಸ್‌ಚೇಂಜ್‌ಗೆ ಅವಕಾಶ ಕಲ್ಪಿಸುತ್ತಿದೆ ಎಂದು ನೀವು ಭಾವಿಸಬಹುದು. ಬ್ಲಾಕ್‌ಚೈನ್ ಬಳಕೆಯ ಒಂದು ವಿಧಾನವೆಂದರೆ ಎನರ್ಜಿ ಟ್ರ್ಯಾಕ್ ಮಾಡುವುದು ಗ್ರಿಡ್‌ನಲ್ಲಿ ಅದನ್ನು ಹೇಗೆ ಬಳಸಲಾಗಿದೆ ಮತ್ತು ಅದನ್ನು ಹೆಚ್ಚು ದಕ್ಷವಾಗಿ ಹೇಗೆ ಬಳಸಬಹುದು ಎಂದು ತಿಳಿಯುವುದಾಗಿದೆ. ಒಪ್ಪಂದ ಮಾಡಿಕೊಂಡಾಗಲೆಲ್ಲ, ಭಾಗೀದಾರರಿಗೆ ಒಂದು ವಿಶ್ವಾಸ ಬೇಕಲ್ಲ? ಅದಕ್ಕಾಗಿ ನಾವು ವಕೀಲರನ್ನು ನೇಮಿಸುತ್ತೇವೆ. ವಕೀಲರು ಅದಕ್ಕೆ ಉತ್ತಮ ಪರಿಹಾರ. ಆದರೆ, ಅವರು ವೆಚ್ಚದಾಯಕವೂ ಹೌದು. ಬ್ಲಾಕ್‌ಚೈನ್‌ಗಳು ಸನ್ನಿವೇಶಗಳನ್ನು ರಚಿಸಬಹುದು ಸಮಸ್ಯೆ ಪರಿಹಾರ ಮಾಡದು. ಆದರೆ, ಸನ್ನಿವೇಶ ರಚಿಸಬಹುದು. ಇದರಲ್ಲಿ ನಮಗೆ ವಕೀಲರು ಬೇಕಿರುವುದಿಲ್ಲ ವಕೀಲರು ಮಾಡುವ ಕೆಲಸವನ್ನು ಬ್ಲಾಕ್‌ಚೈನ್ ಮಾಡಬಹುದು ಎಲ್ಲರೂ ವಿಶ್ವಾಸವಿಡುವ ರೀತಿಯಲ್ಲಿ. ಸದ್ಯ, ಫೊಟೋ, ವೀಡಿಯೋ ಅಪ್ಲೋಡ್ ಮಾಡಿದಾಗ ಆ ಡೇಟಾ ಮಾಲೀಕತ್ವ ನಮ್ಮ ಬಳಿ ಇರುವುದಿಲ್ಲ. ನಮ್ಮ ಪ್ರೀತಿಯ ಜನರ ಜೊತೆಗೆ ನಮ್ಮ ಸಂವಹನ ಬದಲಿಸಲು ಭಾರಿ ಅವಕಾಶ ಇದೆ. ನಾವು ಆನ್‌ಲೈನ್‌ನಲ್ಲಿ ಹೇಗೆ ರಚಿಸುತ್ತೇವೆ? ನನ್ನ ಕುತೂಹಲವೆಂದರೆ ಬ್ಲಾಕ್‌ಚೈನ್‌ ಬಗ್ಗೆ ಅವಕಾಶವೆಂದರೆ, ಸಂಪತ್ತಿನ ಕೊರತೆಯನ್ನು ನಿರ್ವಹಿಸುವುದು. ಬ್ಲಾಕ್‌ಚೈನ್‌ಗೆ ಅವಕಾಶ ಇದೆ. ಏಕೆಂದರೆ, ಈ ಸ್ಥಳದಲ್ಲಿ ನಾವು ಗುರುತು ತೆಗೆದುಹಾಕಿಕೊಳ್ಳಬಹುದು ಜನರ ಜೊತೆಗೆ ನಾನು ಅನಾಮಿಕವಾಗಿ ಸಂವಹನ ನಡೆಸಬಹುದು. ಒಂದು ಸಂಖ್ಯೆಗಳ ಸರಣಿ ರೀತಿ. ನನ್ನ ಪಬ್ಲಿಕ್ ಕೀ ಬಳಸಿ ನಾನು ಯಾವುದೇ ರೀತಿಯಲ್ಲೂ ಸಂವಹನ ನಡೆಸಬಹುದು. ಇದಕ್ಕೆ ನನ್ನನ್ನು ನಿರ್ಬಂಧಿಸುವ ಯಾವುದೇ ನಿಯಂತ್ರಣ ಇರುವದಿಲ್ಲ. ಏಕೆಂದರೆ, ನಾನು ನಿರ್ದಿಷ್ಟ ಡೆಮಾಗ್ರಾಫಿಕ್ ಅಥವಾ ನಿರ್ದಿಷ್ಟ ಲಿಂಗದವನು. ಬ್ಲಾಕ್‌ಚೈನ್ ಭವಿಷ್ಯದ ಬಗ್ಗೆ ನನ್ನ ಆಶಯವೇನೆಂದರೆ ಈ ವರೆಗೆ ಸಾಧ್ಯವಾಗದ ಸಮಸ್ಯೆಗಳ ಪರಿಹಾರಕ್ಕೆ ಉತ್ತಮವಾದ ವಿಧಾನಗಳನ್ನು ಹುಡುಕುವುದು ಹಣಕಾಸು ಸೇರ್ಪಡೆಯು ಬ್ಲಾಕ್‌ಚೈನ್‌ ತಂತ್ರಜ್ಞಾನದ ಉತ್ತಮ ವಿಧಾನವಾಗಿದೆ ಇದು ಸಮಸ್ಯೆಯನ್ನು ಪರಿಹರಿಸುತ್ತದೆ ಅಥವಾ ಹೆಚ್ಚು ಅರ್ಥವತ್ತಾದ ನಿಯಂತ್ರಣ ತರಲು ಸರ್ಕಾರಕ್ಕೆ ಪ್ರೋತ್ಸಾಹಿಸುತ್ತದೆ ಹೆಚ್ಚು ಅರ್ಥವತ್ತಾದ ನೀತಿಗಳು ಸಮಸ್ಯೆಯನ್ನು ಪರಿಹಾರ ಮಾಡುತ್ತವೆ. ನನಗೆ ನಿದ್ದೆ ಕೊಡದೇ ನನ್ನನ್ನು ಕಾಡುವ ಸಂಗತಿ, ನಾವು ಉದ್ದೇಶಪೂರ್ವಕವಾಗಿ ಅಥವಾ ಆಕಸ್ಮಿಕವಾಗಿ ಒಂದಷ್ಟು ಪೂರ್ವಗ್ರಹಗಳನ್ನು ಹುಟ್ಟಿಸಿಕೊಳ್ಳುತ್ತೇವೆ, ಅದು ನಮ್ಮ ವ್ಯವಸ್ಥೆಯಲ್ಲೇ ಇರುತ್ತದೆ. ಅದು ನಿಜಕ್ಕೂ ಪರಿಸರದ ಮೇಲೆ ಪರಿಣಾಮ ಬೀರುತ್ತದೆ ಬ್ಲಾಕ್‌ಚೈನ್‌ ಟೆಕ್ನಾಲಜಿ ವಿಚಾರಕ್ಕೆ ಬಂದರೆ. ಬಿಟ್‌ಕಾಯ್ನ್‌ನಲ್ಲಿ ಅದು ಕೆಲಸಕ್ಕೆ ಸಾಕ್ಷಿ ಅದಕ್ಕೆ ಇಂಧನ ಬಳಕೆ ಆಗುತ್ತದೆ. ಆದರೆ, ಬಿಟ್‌ಕಾಯ್ನ್ ಕೊಡುವ ಮೌಲ್ಯ ಇದೆಯಲ್ಲ ಅದು ಇಂಧನ ಬಳಕೆಗಿಂತ ಹೆಚ್ಚಿರುತ್ತದೆ. ಪರಿಸರದ ಮೇಲಿನ ಪರಿಣಾಮ ಅತ್ಯಂತ ಅಪಾಯಕಾರಿ. ಕೆಲಸದ ಸಾಕ್ಷಿ ತಂತ್ರಜ್ಞಾನದಲ್ಲಿ, ಉದಾಹರಣೆಗೆ ಬಿಟ್‌ಕಾಯ್ನ್‌ನಲ್ಲಿ ಪಾಲಿನ ಸಾಕ್ಷಿಯೂ ಇನ್ನೊಂದು ಸಮ್ಮತವಾದ ವ್ಯವಸ್ಥೆ. ನಮ್ಮ ಬಳಿ ಸ್ಟೇಕ್ ಹೋಲ್ಡರ್ ಇದ್ದಾರೆ ಈ ಬ್ಲಾಕ್ ಮಾನ್ಯ ಎಂದು ಅವರು ಬ್ಲಾಕ್‌ಚೈನ್‌ನಲ್ಲಿ ಹೇಳುತ್ತಾರೆ. ಪಾಲಿನ ಸಾಕ್ಷ್ಯ ಬಳಸುವಾಗ, ನಾವು ವಿದ್ಯುತ್ ಬಳಕೆ ವಿಸ್ತರಣೆ ಮಾಡುತ್ತಿರುವುದಿಲ್ಲ. ಇದು ಹೆಚ್ಚು ವಿಕೇಂದ್ರೀಕೃತ ಎಂದು ತುಂಬಾ ಜನ ಭಾವಿಸಿದ್ದಾರೆ. ಬ್ಲಾಕ್‌ಚೈನ್‌ ತನ್ನದೇ ಕಾರ್ಬನ್‌ ಹೆಜ್ಜೆಗುರುತು ಕಡಿಮೆ ಮಾಡುವುದರಲ್ಲಿದೆ. ಈ ಮಧ್ಯೆ, ತಂತ್ರಜ್ಞಾನಗಳನ್ನು ಒದಗಿಸುವುದು ಮತ್ತು ಬ್ಲಾಕ್‌ಚೈನ್‌ ವಲಯದ ಹೊರಗೆ ಸಂಗತಿಗಳ ನಿರ್ವಹಣೆ ಸಾಮರ್ಥ್ಯ. ಕ್ರಿಪ್ಟೋಕರೆನ್ಸಿ ಮತ್ತು ಬ್ಲಾಕ್‌ಚೈನ್ ಬೆಳೆಯುತ್ತಲೇ ಇರುತ್ತದೆ ಮತ್ತು ವ್ಯಾಪಕವಾಗಿ ಬಳಕೆಯಾಗುತ್ತದೆ. ಇದು ಹಲವು ಹಂತದಲ್ಲಿ ನಡೆಯುತ್ತದೆ. ಕೆಲವು ಬಾರಿ, ವೇಗವಾಗಿ ಹೋಗುತ್ತದೆ. ಸರಿಪಡಿಸಿಕೊಳ್ಳುತ್ತದೆ. ಆದರೆ, ಒಂದು ಸೈಕಲ್‌ನಿಂದ ಇನ್ನೊಂದಕ್ಕೆ ಹೋಗುವುದನ್ನು ದೂರದಿಂದ ನೋಡಿದರೆ, ತುಂಬಾ ವೇಗವಾಗಿ ಓಡುತ್ತಿರುತ್ತದೆ. ಬ್ಲಾಕ್‌ಚೈನ್‌ ತಂತ್ರಜ್ಞಾನದ ಬಗ್ಗೆ ನನ್ನ ದೊಡ್ಡ ಕಳವಳವೇನೆಂದರೆ, ಇದು ವೇಗವಾಗಿ ಬೆಳೆಯುತ್ತದೆ. ಆದರೆ, ನಿಯಂತ್ರಕರು, ಸರ್ಕಾರಕ್ಕೆ ಇದು ಅರ್ಥವಾಗಿಲ್ಲ. ಹೇಗೆ ನಿಯಂತ್ರಿಸುವುದು ಎಂದು ಅವರಿಗೆ ಗೊತ್ತಿಲ್ಲ. ನಂತರ ನಿಯಂತ್ರಿಸುತ್ತಾರೆ. ಆದರೆ, ಈಗ ಅವರಿಂದ ಸಾಧ್ಯವಿಲ್ಲ. ಇದು ಹಲವು ದೇಶಗಳಲ್ಲಿ ಆಗುತ್ತಿದೆ. ಬರಿ ಒಂದು ದೇಶದಲ್ಲಲ್ಲ. ಇದು ಈಗಾಗಲೇ ಹಲವು ಸಿಸ್ಟಮ್‌ಗಳಿಗೆ, ಅಪ್ಲಿಕೇಶನ್‌ಗಳಿಗೆ ಒಂದು ಪದರವಾಗಿ ಕೆಲಸ ಮಾಡುತ್ತಿದೆ. ಅಷ್ಟೇ ಅಲ್ಲ, ಈ ಸಮಯದಲ್ಲಿ ಬ್ಲಾಕ್‌ಚೈನ್ ಬಳಕೆ ನಿಲ್ಲಿಸುವುದೂ ತುಂಬಾ ಕಷ್ಟ. ವಿಕೇಂದ್ರೀಕೃತ, ಅನುಮತಿ ರಹಿತ ಮುಕ್ತ ನೆಟ್‌ವರ್ಕ್‌ಗಳು ಮುಂದುವರಿಯುತ್ತವೆಯೇ? ಹೌದು ಅನಿಸುತ್ತದೆ. ನನಗೆ ಅನಿಸುತ್ತದೆ, ಬಿಟ್‌ಕಾಯ್ನ್‌ ಸುಮಾರು ಒಂದು ದಶಕದಿಂದಲೂ ಅಸ್ತಿತ್ವದಲ್ಲಿದೆ ಎಂದು ಅನಿಸುತ್ತದೆ. ಹೊಸದು ಬದುಕುಳಿಯುತ್ತದೆಯೇ? ಇದು ಎಲ್ಲರ ಕುತೂಹಲ. ಇದನ್ನು ತಿಳಿಯೋದು ಅಸಾಧ್ಯ. ಯಾವುದೇ ಹೊಸ ಸಂಗತಿ ಮಹತ್ವದ ಬದಲಾವಣೆ ಮಾಡುತ್ತದೆ ಎಂದು ನಂಬೋದಕ್ಕೆ ನಮಗೆ ತುಂಬಾ ಸಾಕ್ಷಿ ಬೇಕು. ಬ್ಲಾಕ್‌ಚೈನ್ ವಿಷಯದಲ್ಲಿ, ಆ ಸಾಕ್ಷಿ ನಮ್ಮ ಬಳಿ ಇಲ್ಲ. ಬ್ಲಾಕ್‌ಚೈನ್‌ ತಂತ್ರಜ್ಞಾನಕ್ಕೆ ವೇಗ ನೀಡುತ್ತಿದೆ. ಇದು ಪರಿಕಲ್ಪನೆ, ಸ್ಪರ್ಧೆಯನ್ನು ಪ್ರೋತ್ಸಾಹಿಸುತ್ತಿದೆ. ಆದರೆ, ಮೊದಲು ಹೋಗುವವರೇ ಗೆಲ್ಲುತ್ತಾರೆ ಎನ್ನಲಾಗದು.