ಹಾಯ್! ನನ್ನ ಹೆಸರು ಚರಿಟ ಕಾರ್ಟರ್. ನಾನು ಇಲ್ಲಿ ವಾಲ್ಟ್ ಡಿಸ್ನಿ ಇಮಾಜಿನಿಯರಿಂಗ್ ನಲ್ಲಿ ಸೀನಿಯರ್ ಕ್ರಿಯೇಟಿವ್ ನಿರ್ಮಾಪಕಿ ಆಗಿದ್ದೀನಿ. ನಾನು ನಮ್ಮ ಅತಿಥಿಗಳು ಅನುಭವಿಸುವ ಆಕರ್ಷಣೆಗಳನ್ನು ಉಂಟುಮಾಡುವ ಪ್ರಧಾನ ತಂಡವನ್ನು ನೋಡಿಕೊಳ್ಳುತ್ತೇನೆ. ನಾವು ಯಾವಾಗಲೂ ನಮ್ಮ ಅತಿಥಿಗಳಿಗೆ ಅತ್ಯುತ್ತಮ ಅನುಭವವನ್ನು ಕೊಡಲು ಯಾವೆಲ್ಲ ವಿಧದಲ್ಲಿ ಪ್ರಗತಿ ಮಾಡಬೇಕು ಅಂತ ನೋಡುತ್ತಿರುತ್ತವೆ. ತಂತ್ರಜ್ಞಾನವೇ ಇದರ ಮುಖ್ಯ ಸ್ತಂಭ. ಶುಭಾಷಯಗಳು! ನೀವು ಸಾಧನೆ ಮಾಡಿದ್ದೀರಿ. ನೀವು ಬಿಬಿ-8 ಅನ್ನು ಪ್ರೋಗ್ರಾಮ್ ಮಾಡಿದ್ದೀರಿ. ಈಗ ನಾವು ಸ್ವಲ್ಪ ಕಠೀಣವಾದ ವಿಷಯಕ್ಕೆ ತಯಾರಾಗಿದ್ದೀವಿ ಅಂತ ನೆನಸುತ್ತೀನಿ. ಅದಕ್ಕೆ ಹೋಗೋಣ! ಈಗಾಗಲೇ ನೀವು ಪ್ರೋಗ್ರಾಮಿಂಗ್ ನ ಮೂಲಭೂತ ವಿಷಯಗಳನ್ನು ಕಲಿತಿರುವುದರಿಂದ ಈಗ ನಿಮ್ಮದೇ ಆದ ಗೇಮ್ ಅನ್ನು ಸೃಷ್ಟಿಸಲು ಆರಂಭಿಸೋಣ. ಇದರಲ್ಲಿ ಪಾತ್ರಧಾರಿಗಳು ಆ2-ಡಿ2 ಮತ್ತು ಸಿ-3ಪಿಓ ಗೇಮ್ ಅನ್ನು ಸೃಷ್ಟಿಸಲು ಪ್ರತಿದಿನ ಗೇಮ್ ಪ್ರೋಗ್ರಾಮರ್ ಗಳು ಉಪಯೋಗಿಸುವ ಒಂದು ವಿಷಯದ ಬಗ್ಗೆ ನಾವು ಕಲಿಯಬೇಕು ಅವನ್ನು ಇವೆಂಟ್ ಗಳು ಅಂತ ಕರೆಯಲಾಗುತ್ತದೆ. ಏನಾದರೂ ಸಂಭವಿಸಿದರೆ ಕೇಳಿಸಿಕೊಳ್ಳುವಂತೆ ಮತ್ತು ಕಾಯುವಂತೆ ಇವೆಂಟ್ ಗಳು ನಿಮ್ಮ ಪ್ರೋಗ್ರಾಮ್ ಗೆ ಹೇಳುತ್ತವೆ ಹಾಗೇ ಮಾಡುವಾಗ ಅದು ಕ್ರಿಯೆಗೈಯುತ್ತದೆ. ಇವೆಂಟ್ ಗಳಿಗೆ ಕೆಲವು ಉದಾಹರಣೆಗಳೆಂದರೆ, ಮೌಸ್ ಕ್ಲಿಕ್ಕಿಸುವ ಶಬ್ದ, ಏರೋ ಬಟನ್ ಅಥವಾ ಪರದೆ ಮೇಲೆ ಟ್ಯಾಪ್ ಮಾಡುವ ಶಬ್ದವನ್ನು ಕೇಳಿಸಿಕೊಳ್ಳುವುದು ಇಲ್ಲಿ ದಂಗೆಕೋರ್ ಪೈಲೆಟ್ ಗೆ ಆರ್-2ಡಿ-2 ಒಂದು ಸಂದೇಶವನ್ನು ತಿಳಿಸಲು ಮೇಲೆ ಚಲಿಸುವಂತೆ ಮಾಡುತ್ತೇವೆ ಮತ್ತು ಅಲ್ಲಿಂದ ಕೆಲಗೆ ಚಲಿಸುತ್ತಾ ಮತ್ತೊಂದು ದಂಗೆಕೋರ ಪೈಲೆಟ್ ಹತ್ತಿರ ಬರುತ್ತದೆ. ಅವನು ಚಲಿಸುವಂತೆ ಮಾಡಲು ನಾವು ಇವೆಂಟ್ ಗಳನ್ನು ಉಪಯೋಗಿಸುತ್ತೇವೆ. ಆಟಗಾರ ಅಪ್ ಮತ್ತು ಡೌನ್ ಆರೋ ಕೀ ಅಥವಾ ಅಪ್/ಡೌನ್ ಬಟನ್ ಅನ್ನು ಉಪಯೋಗಿಸುವಾಗ ಚಲಿಸುವಂತೆ ಮಾಡಬೇಕು. ನಾವು ವೆನ್ ಅಪ್ ಇವೆಂಟ್ ಅನ್ನು ತೆಗೆದು ಗೋ ಅಪ್ ಬ್ಲಾಕ್ ಗೆ ಅದನ್ನು ಸೇರಿಸುತ್ತೇವೆ. ಆಟಗಾರ ಅಪ್ ಆರೋ ಕೀ ಅನ್ನು ಒತ್ತಿದಾಗ, ವೆನ್ ಅಪ್ ಬ್ಲಾಕ್ ಗೆ ಹಾಕಿದ ಕೋಡ್ ರನ್ ಆಗುತ್ತದೆ. ಆರ್2-ಡಿ-2 ಕೆಳಗೆ ಚಿಲಸಲು ಅದೇ ರೀತಿ ಮಾಡುತ್ತೇವೆ. ನಮ್ಮ ರೊಬೋಟಿನ ಪ್ರತಿಯೊಂದು ಚಲನವಲನವನ್ನು ಮುಂಚಿತವಾಗಿಯೇ ನಿಯಂತ್ರಿಸುವ ಪ್ರತಿಯೊಂದು ಕೋಡ್ ಗಳನ್ನು ಬರೆಯುವ ಬದಲು ನಾವು ಆರ್2-ಡಿ2 ಬಟನ್ ಅನ್ನು ಕ್ಲಿಕ್ಕಿಸುವ ಇವೆಂಟ್ ಗಳಿಗೆ ಪ್ರತಿಕ್ರಿಯಿಸುವಂತೆ ಮಾಡುತ್ತಾ ಪರದೆಯಲ್ಲಿ ಚಲಿಸುವಂತೆ ಮಾಡಬಹುದು. ಹಂತಹಂತವಾಗಿ ನಿಮ್ಮ ಗೇಮ್ ಪರಸ್ಪರ ಕಾರ್ಯ ನಡೆಸಲಾರಂಭಿಸುತ್ತಿದೆ.