ನಾನು ಲಿಡಿಯಾ ವಿಂಟರ್ಸ್‌, ಮೊಜಾಂಗ್‌ನ ಬ್ರ್ಯಾಂಡ್ ಡೈರೆಕ್ಟರ್. ನಾವು ಮೈನ್‌ಕ್ರಾಫ್ಟ್ ಎಂಬ ಗೇಮ್ ಮಾಡಿದ್ದೇವೆ ಮೈನ್‌ಕ್ರಾಫ್ಟ್‌ನಲ್ಲಿ ನನಗೆ ಎಕ್ಸ್‌ಪ್ಲೋರ್ ಇಷ್ಟ ಗುಹೆಗಳಲ್ಲಿ ಸಾಹಸ ಮಾಡುವುದು ಮತ್ತು ಹುಡುಕೋದು ಇಷ್ಟ. ಪ್ರೋಗ್ರಾಮರ್ ಅಲ್ಲದವರಿಗೆ ಮೈನ್‌ಕ್ರಾಫ್ಟ್ ಲೆಸನ್‌ಗಳನ್ನು ಮಾಡುವುದು ನಿಜಕ್ಕೂ ಆಸಕ್ತಿಕರ ಮತ್ತು ನಾನು ಸ್ವಲ್ಪ ಕೋಡಿಂಗ್‌ ಕಲಿಯಬಹುದು. ಕೊನೆಯ ಹಂತಕ್ಕೆ ತುಂಬಾ ಮೂವ್‌ ಫಾರ್ವರ್ಡ್‌ ಬ್ಲಾಕ್ ಬೇಕು. 4-5 ಬಾರಿ ಮೂವ್ ಫಾರ್ವರ್ಡ್ ಕಮಾಂಡ್ ಹೇಳಿದರೆ ಅನುಕೂಲ. ಕಮಾಂಡ್‌ಗಳನ್ನು ರಿಪೀಟ್ ಲೂಪ್‌ನಲ್ಲಿ ರಿಪೀಟ್ ಮಾಡುವಲ್ಲಿ ಕಂಪ್ಯೂಟರ್ ಉತ್ತಮವಾಗಿದೆ. ಮೈನ್‌ಕ್ರಾಫ್ಟ್ ನಿರ್ಮಿಸುವಾಗ ಹೊಸ ಜಗತ್ತನ್ನು ನಿರ್ಮಿಸಲು ಆರಂಭಿಕ ಸಾಮಗ್ರಿ ಇಡಲು ರಿಪೀಟ್ ಲೂಪ್‌ಗಳನ್ನು ಬಳಸಬಹುದು. ಅಂದರೆ ಸಾವಿರ, ಸಾವಿರ ಬ್ಲಾಕ್‌ಗಳು. ನಾವು ಲೂಪ್‌ಗಳನ್ನು ಸಣ್ಣ ವಿಧಾನದಲ್ಲಿ ಬಳಸುತ್ತವೆ. ಅಲೆಕ್ಸ್ ಕಾಲನ್ನು ಹಿಂದೆ ಮುಂದೆ ಮಾಡುವುದಕ್ಕೆ. ರಿಪೀಟ್ ಲೂಪ್‌ಗಳು ಪ್ರೋಗ್ರಾಮಿಂಗ್‌ನ ಶಕ್ತಿಯುತ ಭಾಗ. ರಾತ್ರಿಯಾಗುತ್ತಿದೆ. ಮುಂದಿನ ಹಂತದಲ್ಲಿ ನಾವು ಮನೆ ನಿರ್ಮಿಸುತ್ತೇವೆ. ಇದನ್ನು ಸುಲಭವಾಗಿ ಮಾಡಲು ನಾವು ರಿಪೀಟ್ ಬ್ಲಾಕ್‌ಗಳನ್ನು ಬಳಸುತ್ತೇವೆ. ನಮ್ಮ ಮನೆಯ ಗೋಡೆ ನಿರ್ಮಿಸಲು, ಮುಂದಕ್ಕೆ ಸಾಗಲು ಮತ್ತು ಪ್ಲಾಂಕ್‌ಗಳನ್ನು ನಾಲ್ಕು ಬಾರಿ ಇಡಬಹುದು. ಮುಂದಕ್ಕೆ ಹೋಗಿ ಒಂದು ಪ್ಲಾಂಕ್ ಇಡಲು ನಾವು ಅವರಿಗೆ ಹೇಳಬಹುದು. ನಂತರ, ಈ ಕಮಾಂಡ್ ತೆಗೆದುಕೊಂಡು, ಹಲವು ಬಾರಿ ಆಕ್ಷನ್ ಮಾಡಲು ರಿಪೀಟ್ ಬ್ಲಾಕ್ ಬಳಕೆ ಮಾಡಬಹುದು. ಈಗ ನಾವು ರಿಪೀಟ್ ಬ್ಲಾಕ್ ಮೇಲೆ ಕ್ಲಿಕ್ ಮಾಡೋಣ ಈ ಆಕ್ಷನ್ ಎಷ್ಟು ಬಾರಿ ಮಾಡಬೇಕು ಎಂದು ಅವರಿಗೆ ಹೇಳೋಣ. ರಾತ್ರಿಗೂ ಮುನ್ನ ಮನೆ ಕಟ್ಟೋಣ! ಆನಂದಿಸಿ.