ಗುರುತಿಸಿಲ್ಲದ ಬಗ್‌ಗಳು. ಬರೆದವರು ಕಿಕಿ ಪ್ರಾಟ್ಸ್‌ಮನ್‌. ಚಿತ್ರಿಸಿದವರು ಮೈಕ್ ಮೇಸರ್ ಮತ್ತು ಕಿಕಿ ಪ್ರಾಟ್ಸ್‌ಮನ್‌. ನಾನು ಜಾಸ್ಮಿನ್. ಕೋಡ್‌ವಿಲ್ಲೆಯಲ್ಲಿ ಅತಿದೊಡ್ಡ ಬಗ್ ಹಂಟಿಂಗ್ ಕಂಪನಿಯನ್ನು ಅವರು ನಡೆಸುತ್ತಿದ್ದಾರೆ. ಸಮುದಾಯವನ್ನು ಸುರಕ್ಷಿತವಾಗಿಡುವಲ್ಲಿ ಇದು ಜನಪ್ರಿಯವಾಗಿದೆ. ಇಂದು ಬೆಳಗ್ಗೆ ಏನೋ ಅನಿರೀಕ್ಷಿತವಾದ್ದು ನಡೆಯಿತು! ಬಗ್ ರೂಮ್ ಯಾರೋ ತೆರೆದಿದ್ದರು ನಗರಕ್ಕೆ ಬಗ್‌ಗಳು ಓಡಿಹೋಗಿವೆ ದೊಡ್ಡ ಟ್ಯಾಲೆಂಟ್ ಪ್ರೋಗ್ರಾಮ್‌ಗೂ ಮೊದಲು ಇದು ನಡೆದಿದೆ. "ಇದಕ್ಕೇ ನಾನು ನಿಮ್ಮನ್ನು ನೇಮಿಸಿಕೊಂಡಿದ್ದು" ಜೆ.ಡಿಗೆ ಜಾಸ್ಮಿನ್ ಹೇಳಿದರು. "ಎಲ್ಲ ಬಗ್‌ಗಳನ್ನು 3 ಗಂಟೆಯೊಳಗೆ ಹಿಡಿಯದಿದ್ದರೆ ಪ್ರೋಗ್ರಾಮ್ ಹಾಳಾಗುತ್ತದೆ!" "ಇದು ತುಂಬಾ ಸುಲಭ" ಜೆಡಿ ಹೇಳಿದರು. ಹುಡುಕಿ. "ಇಲ್ಲಿ ಕೆಲವು, ಅಲ್ಲಿ ಕೆಲವು ಕಾಣಿಸುತ್ತಿದೆ." "ಅವು ಮಾತ್ರ ಕಾಣಿಸುತ್ತವೆ" ಜಾಸ್ಮಿನ್ ಹೇಳಿದರು. "ಇವುಗಳನ್ನು ನಿಯಂತ್ರಿಸುವುದು ಸುಲಭ. ಆದರೆ ಸಿಗದ ಬಗ್‌ಗಳು ತೊಂದರೆ ಮಾಡುತ್ತಿವೆ." "ಸಿಗದ ಬಗ್‌ಗಳನ್ನು ಹುಡುಕುವುದು ಕಷ್ಟ. ಊಹಿಸಲಾಗದ ಕಡೆ ಅವು ಅಡಗಿರುತ್ತವೆ ಮತ್ತು ಎಲ್ಲ ಹಾಳಾಗುವವರೆಗೂ ಅವು ಕೆಲಸ ಮಾಡುತ್ತಲೇ ಇರುತ್ತವೆ." "ಓಹ್ ಇಲ್ಲ!" ಜೆ.ಡಿ ಕೂಗಿದರು. "ಪ್ರೋಗ್ರಾಮ್ ಉಳಿಸಲು ನಾವು ಅವುಗಳನ್ನು ಸರಿಯಾದ ಸಮಯಕ್ಕೆ ಹುಡುಕುವುದು ಹೇಗೆ?" "ಚಿಂತಿಸಬೇಡಿ, ಸಿಗದ ಬಗ್ ಹುಡುಕಲು ಒಂದು ಟ್ರಿಕ್ ನಿಮಗೆ ಹೇಳಿಕೊಡುತ್ತೇನೆ." "ಮೊದಲು, ಇವು ಎಲ್ಲಿ ಇಲ್ಲ ಎಂದು ತಿಳಿಯಬೇಕು." "ರಸ್ತೆಯಲ್ಲಿ ತಿರುಗಾಡಿ. ಮೊದಲ ಹಂತದಲ್ಲಿ ಎಲ್ಲವೂ ಕೆಲಸ ಮಾಡುತ್ತಿದೆಯೇ?" "ಎರಡನೇ ಹಂತದಲ್ಲಿ ಎಲ್ಲ ಸರಿಯಾಗಿದೆಯೇ? ಮೂರನೆಯದು ಸರಿಯಾಗಿದೆಯೇ?" "ಏನಾದರೂ ತಪ್ಪಾಗುವವರೆಗೆ ಟ್ರೇಸ್ ಮಾಡುತ್ತಲೇ ಇರಿ" "ಅಲ್ಲೇ ಬಗ್ ಅಡಗಿರುತ್ತದೆ!" "ಈಗ ನಿಮಗೆ ಎಲ್ಲಿದೆ ಎಂದು ಗೊತ್ತಾಗುತ್ತದೆ. ಬಗ್ ಹಿಡಿಯಿರಿ! ಹೆಸರು ಕೊಡಿ ಮತ್ತು ದೊಡ್ಡದಾಗಿ ಹೇಳಿ. ನೀವು ಅದನ್ನು ಮಾಡಿದಂತೆಯೇ, ಜಾದೂ ನಡೆಯುತ್ತದೆ." "ಬಗ್ ಸಿಕ್ಕಿದೆ! ಬಗ್ ಮಾಡಿದ ಸಮಸ್ಯೆಯನ್ನು ನಾವು ಅನ್‌ಡೂ ಮಾಡಬಹುದು." "ಬೇಗ, ಜಾಸ್ಮಿನ್! ಮೂರು ಗಂಟೆಯಾಗ್ತಿದೆ!" ಇನ್ನೂ ನಮಗೆ ಒಂದು ದೊಡ್ಡ ಬಗ್ ಸಿಕ್ಕಿಲ್ಲ" ಜಾಸ್ಮಿನ್ ಹೇಳಿದರು. "ಆದರೆ ನನ್ನ ಜಾರ್ ತುಂಬಿದೆ! ನೀವೇ ಹುಡುಕಬೇಕು." "ಜೆ.ಡಿ ಬೇಸರದಿಂದ ಬದಿಯಲ್ಲಿ ನಡೆಯುತ್ತಿದ್ದಾರೆ. "ಮೊದಲು, ಅದು ಎಲ್ಲಿರಲ್ಲ ಎಂದು ನೋಡಬೇಕು." ತನಗೆ ತಾನೇ ಹೇಳಿಕೊಂಡರು. "ಮೊದಲ ಹಂತದಲ್ಲಿ ಎಲ್ಲ ಸರಿ ಇದೆಯೇ? ಹೌದು." "ಎರಡನೇ ಹಂತದಲ್ಲಿ ಎಲ್ಲ ಸರಿ ಇದೆಯೇ? ಹೌದು." "ಮೂರನೆಯದು? ಇಲ್ಲ!" "ಈಗ ಬಗ್ ಎಲ್ಲಿದೆ ಎಂದು ನನಗೆ ತಿಳಿದಿದೆ. ಬಗ್ ಹುಡುಕಬೇಕು!" "ಹೆಸರು ಕೊಡಿ. ದೊಡ್ಡದಾಗಿ ಹೇಳಿ." "ಲೈಟ್ ಕೆಲಸ ಮಾಡದಂತೆ ಮಾಡಿದೆ ಬಗ್. ಇದನ್ನು ನಾನು ಸ್ಪಾರ್ಕಿ ಎಂದು ಕರೆಯುತ್ತೇನೆ." "ಕೆಲಸ ಮಾಡಿತು! ನಾನು ಬಗ್ ಹುಡುಕಿದೆ! ಈಗ ಬಗ್ ತೆಗದುಹಾಕಿ, ಸಮಸ್ಯೆ ಸರಿ ಮಾಡಬಹುದು. ಟ್ಯಾಲೆಂಟ್ ಪ್ರೋಗ್ರಾಮ್‌ಗೆ ಸಮಯಕ್ಕೆ ಸರಿಯಾಗಿ!" ಜಾಸ್ಮಿನ್‌ಗೆ ಜೆ.ಡಿ ಹೆಮ್ಮೆ ತಂದರು. ಈಗ ಇಡೀ ತಂಡಕ್ಕೆ ಯಾವಾಗ ಸಮಸ್ಯೆಯಾಗುತ್ತದೆ ಎಂದು ತಿಳಿದಿದೆ. ಡಿಬಗ್ಗರ್‌ಗಳಿಗೆ ಕೆಲಸ ಕೊಡುವ ಸಮಯ ಇದು! ಮುಕ್ತಾಯ!